2 John (Kannada)

2 John (Kannada)

1

1:1b.2JO.001.001 ಆಯಲ್ಪಟ್ಟವಳಾದ ಅಮ್ಮನವರಿಗೂ ಆಕೆಯ ಮಕ್ಕಳಿಗೂ ಹಿರಿಯನಾದ--ಸತ್ಯದಲ್ಲಿ ನಿಮ್ಮನ್ನು ಪ್ರೀತಿಸುತ್ತೇನೆ; ನಾನು ಮಾತ್ರವಲ್ಲದೆ ಸತ್ಯವನ್ನು ತಿಳಿದಿರುವವರೆಲ್ಲರೂ ನಿಮ್ಮನ್ನು ಪ್ರೀತಿಸುತ್ತಾರೆ.

1:2b.2JO.001.002 ಯಾಕಂದರೆ ನಮ್ಮಲ್ಲಿ ನೆಲೆಗೊಂಡಿರುವಂಥ ಮತ್ತು ನಮ್ಮೊಂದಿಗೆ ಸದಾಕಾಲವೂ ಇರುವಂಥ ಸತ್ಯದ ನಿಮಿತ್ತವಾಗಿಯೇ ನಿಮ್ಮನ್ನು ಪ್ರೀತಿಸುತ್ತಾರೆ.

1:3b.2JO.001.003 ತಂದೆಯಾದ ದೇವರಿಂದಲೂ ಆ ತಂದೆಯ ಮಗನಾಗಿರುವ ಕರ್ತನಾದ ಯೇಸು ಕ್ರಿಸ್ತನಿಂದಲೂ ಕೃಪೆಯು ಕರುಣೆಯು ಮತ್ತು ಶಾಂತಿಯು ಸತ್ಯ ದಲ್ಲಿಯೂ ಪ್ರೀತಿಯಲ್ಲಿಯೂ ನಿಮ್ಮೊಂದಿಗಿರಲಿ.

1:4b.2JO.001.004 ನಿನ್ನ ಮಕ್ಕಳಲ್ಲಿ ಕೆಲವರು ತಂದೆಯಿಂದ ನಾವು ಹೊಂದಿದ ಆಜ್ಞಾನುಸಾರ ಸತ್ಯದಲ್ಲಿ ನಡೆಯುವದನ್ನು ಕಂಡು ನಾನು ಬಹಳ ಸಂತೋಷವುಳ್ಳವನಾದೆನು.

1:5b.2JO.001.005 ಅಮ್ಮನವರೇ, ನಾನು ಹೊಸ ಆಜ್ಞೆಯನ್ನು ನಿನಗೆ ಬರೆಯದೆ ಮೊದಲಿನಿಂದಲೂ ನಮಗೆ ಇದ್ದ ಆಜ್ಞೆ ಯನ್ನು ನಿನಗೆ ಬರೆಯುವವನಾಗಿ--ನಾವು ಒಬ್ಬರ ನ್ನೊಬ್ಬರು ಪ್ರೀತಿಸುವವರಾಗಿರಬೇಕೆಂದು ನಿನ್ನನ್ನು ಕೇಳಿಕೊಳ್ಳುತ್ತೇನೆ.

1:6b.2JO.001.006 ಆತನ ಆಜ್ಞೆಗಳನ್ನು ಅನುಸರಿಸಿ ನಡೆಯುವದೇ ಪ್ರೀತಿ; ಪ್ರೀತಿಯಲ್ಲಿ ನಡೆಯ ಬೇಕೆಂಬದೇ ನೀವು ಮೊದಲಿನಿಂದಲೂ ಕೇಳಿದ ಅಪ್ಪಣೆಯಾಗಿದೆ.

1:7b.2JO.001.007 ಶರೀರದಲ್ಲಿ ಬಂದಿರುವ ಯೇಸು ಕ್ರಿಸ್ತನ್ನು ಒಪ್ಪದೆ ಇರುವ ಮೋಸಗಾರರು ಅನೇಕ ಮಂದಿ ಹೊರಟು ಲೋಕದೊಳಗೆ ಹೋಗಿದ್ದಾರೆ. ಇಂಥವನೇ ಮೋಸಗಾರನೂ ಕ್ರಿಸ್ತ ವಿರೋಧಿಯೂ ಆಗಿದ್ದಾನೆ.

1:8b.2JO.001.008 ನಾವು ಪ್ರಯಾಸಪಟ್ಟು ಮಾಡಿದವು ಗಳನ್ನು ಕಳಕೊಳ್ಳದೆ ಪ್ರತಿಫಲವನ್ನು ಹೊಂದುವಂತೆ ನಿಮ್ಮನ್ನು ನೀವೇ ನೋಡಿಕೊಳ್ಳಿರಿ.

1:9b.2JO.001.009 ಕ್ರಿಸ್ತನ ಬೋಧನೆಯಲ್ಲಿ ನೆಲೆಗೊಳ್ಳದೆ ಅದನ್ನು ಅತಿಕ್ರಮಿ ಸುವವನಿಗೆ ದೇವರಿಲ್ಲ; ಕ್ರಿಸ್ತನ ಬೋಧನೆಯಲ್ಲಿ ನೆಲೆ ಗೊಂಡಿರುವವನಿಗೆ ತಂದೆಯೂ ಮಗನೂ ಇದ್ದಾರೆ.

1:10b.2JO.001.010 ಈ ಬೋಧನೆಯನ್ನು ತಾರದಿರುವ ಯಾವನಾದರೂ ನಿಮ್ಮ ಬಳಿಗೆ ಬಂದರೆ ಅವನನ್ನು ಮನೆಯೊಳಗೆ ಸೇರಿಸಿ ಕೊಳ್ಳಬೇಡಿರಿ; ಅವನಿಗೆ ವಂದನೆ ಎಂದು ಹೇಳಬೇಡಿರಿ.

1:11b.2JO.001.011 ಅವನಿಗೆ ವಂದನೆ ಎಂದು ಹೇಳುವವನು ಅವನ ದುಷ್ಕೃತ್ಯಗಳಲ್ಲಿ ಪಾಲುಗಾರನಾಗುತ್ತಾನೆ.

1:12b.2JO.001.012 ನಿಮಗೆ ಬರೆಯುವದಕ್ಕೆ ನನಗೆ ಅನೇಕ ವಿಷಯಗಳಿದ್ದರೂ ಅವುಗಳನ್ನು ಮಸಿಯಿಂದ ಕಾಗದದ ಮೇಲೆ ಬರೆಯುವದಕ್ಕೆ ನನಗೆ ಮನಸ್ಸಿಲ್ಲ. ಆದರೆ ನಾನು ನಿಮ್ಮ ಬಳಿಗೆ ಬಂದು ನಿಮ್ಮ ಸಂಗಡ ಮುಖಾ ಮುಖಿಯಾಗಿ ಮಾತನಾಡುವೆನೆಂದು ನಂಬುತ್ತೇನೆ; ಆಗ ನಮ್ಮ ಸಂತೋಷವು ಪರಿಪೂರ್ಣವಾಗುವದು.ಆಯಲ್ಪಟ್ಟ ನಿನ್ನ ಸಹೋದರಿಯ ಮಕ್ಕಳು ನಿನಗೆ ವಂದನೆ ಹೇಳುತ್ತಾರೆ. ಆಮೆನ್‌.

1:13b.2JO.001.013 ಆಯಲ್ಪಟ್ಟ ನಿನ್ನ ಸಹೋದರಿಯ ಮಕ್ಕಳು ನಿನಗೆ ವಂದನೆ ಹೇಳುತ್ತಾರೆ. ಆಮೆನ್‌.


Holder of rights
Multilingual Bible Corpus

Citation Suggestion for this Object
TextGrid Repository (2025). Kannada Collection. 2 John (Kannada). 2 John (Kannada). Multilingual Parallel Bible Corpus. Multilingual Bible Corpus. https://hdl.handle.net/21.11113/0000-0016-A22B-1