Daniel (Kannada)
1
1:1b.DAN.001.001 ಯೆಹೂದದ ಅರಸನಾದ ಯೆಹೋಯಾ ಕೀಮನ ಆಳಿಕೆಯ ಮೂರನೆಯ ವರುಷ ದಲ್ಲಿ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಯೆರೂ ಸಲೇಮಿಗೆ ಬಂದು ಮುತ್ತಿಗೆ ಹಾಕಿದನು.
1:2b.DAN.001.002 ಕರ್ತನು ಯೆಹೂದದ ಅರಸನಾದ ಯೆಹೋಯಾಕೀಮನನ್ನು, ದೇವಾಲಯದ ಕೆಲವು ಪಾತ್ರೆಗಳನ್ನು ಅವನಿಗೆ ಒಪ್ಪಿಸಿದನು. ಅವನು ಅವುಗಳನ್ನು ಶಿನಾರ್ ದೇಶಕ್ಕೂ ತನ್ನ ದೇವರ ಆಲಯಕ್ಕೂ ತಂದು ಪಾತ್ರೆಗಳನ್ನು ತನ್ನ ದೇವರ ಬೊಕ್ಕಸದ ಮನೆಯಲ್ಲಿ ಇರಿಸಿದನು.
1:3b.DAN.001.003 ಅರಸನು ತನ್ನ ಕಂಚುಕಿಯರ ಯಜಮಾನನಾದ ಅಶ್ವೆವಜನ ಸಂಗಡ ಮಾತನಾಡಿ ಅವನು ಇಸ್ರಾಯೇಲಿನ ಮಕ್ಕಳೊಳಗೆ ಕೆಲವರನ್ನು ಅರಸನ ಸಂತಾನದೊಳ ಗಿಂದಲೂ ಮತ್ತು ಪ್ರಧಾನರಲ್ಲಿಯೂ
1:4b.DAN.001.004 ಕಳಂಕ ಇಲ್ಲ ದವರಾಗಿಯೂ ಸುಂದರರಾಗಿಯೂ ಸಕಲ ಜ್ಞಾನದಲ್ಲಿ ಪ್ರವೀಣರಾಗಿಯೂ ತಿಳುವಳಿಕೆಯಲ್ಲಿ ನಿಪುಣರಾ ಗಿಯೂ ಮತ್ತು ವಿಜ್ಞಾನದಲ್ಲಿ ತಿಳುವಳಿಕೆಯುಳ್ಳವ ರಾಗಿಯೂ ಅರಸನ ಅರಮನೆಯಲ್ಲಿ ಸೇವೆಮಾಡಲು ಸಾಮರ್ಥ್ಯವುಳ್ಳವರಾಗಿಯೂ ಇರುವ ಯೌವನಸ್ಥರನ್ನು ತಂದು ಕಸ್ದೀಯರ ವಿದ್ಯೆಯನ್ನೂ ಭಾಷೆಯನ್ನೂ ಅವರಿಗೆ ಬೋಧಿಸಬೇಕೆಂದು ಆಜ್ಞಾಪಿಸಿದನು.
1:5b.DAN.001.005 ಅರಸನು ರಾಜ ಭೋಜನದಲ್ಲಿಯೂ ತಾನು ಕುಡಿಯುವ ದ್ರಾಕ್ಷಾರಸ ದಲ್ಲಿಯೂ ಪ್ರತಿದಿನವೂ ಅವರಿಗೆ ಪಾಲನ್ನು ನೇಮಿ ಸಿದನು; ಹೀಗೆ ಅವರು ಮೂರು ವರುಷಗಳ ಕಾಲ ಪೋಷಿಸಲ್ಪಟ್ಟ ಮೇಲೆ ಅರಸನ ಮುಂದೆ ನಿಲ್ಲತಕ್ಕವರಾಗುವರು.
1:6b.DAN.001.006 ಇವರಲ್ಲಿ ಯೆಹೂದನ ಮಕ್ಕಳೊಳಗಿಂದ ದಾನಿಯೇಲ, ಹನನ್ಯ, ವಿಾಶಾಯೇಲ, ಅಜರ್ಯ ಎಂಬವರಿದ್ದರು.
1:7b.DAN.001.007 ಇವರಿಗೆ ಕಂಚುಕಿಯ ಯಜಮಾ ನನು ಹೆಸರುಗಳನ್ನಿಟ್ಟನು, ಹೇಗಂದರೆ ದಾನಿಯೇಲ ನನ್ನು ಬೇಲ್ತೆಶಚ್ಚರನೆಂದೂ ಹನನ್ಯನನ್ನು ಶದ್ರಕ್‌ನೆಂದೂ ವಿಾಶಾಯೇಲನನ್ನು ಮೇಶಕ್‌ನೆಂದೂ ಅಜರ್ಯನಿಗೆ ಅಬೆದ್ನೆಗೋ ಎಂದು ಕರೆದನು.
1:8b.DAN.001.008 ಆದರೆ ದಾನಿಯೇಲನು ತಾನು ಅರಸನ ಭೋಜನದ ಪಾಲಿನಿಂದಲಾದರೂ ಅವನು ಕುಡಿಯುವ ದ್ರಾಕ್ಷಾರಸದಿಂದಾದರೂ ತನ್ನನ್ನು ಅಶುದ್ಧಪಡಿಸಿಕೊಳ್ಳುವದಿಲ್ಲವೆಂದು ತನ್ನ ಹೃದಯದಲ್ಲಿ ನಿಶ್ಚಯಿಸಿಕೊಂಡನು; ಆದುದರಿಂದ ತಾನು ಅಶುದ್ಧ ವಾಗದ ಹಾಗೆ ಕಂಚುಕಿಯರ ಯಜಮಾನನ್ನು ಬೇಡಿ ಕೊಂಡನು.
1:9b.DAN.001.009 ಆಗ ದೇವರು ದಾನಿಯೇಲನನ್ನು ಕಂಚುಕಿಯರ ಯಜಮಾನನ ದಯೆಯಲ್ಲಿಯೂ ಕರುಣೆ ಯಲ್ಲಿಯೂ ಸೇರಿಸಿದನು.
1:10b.DAN.001.010 ಕಂಚುಕಿಯ ಯಜಮಾ ನನು ಹೇಳಿದ್ದೇನಂದರೆ--ನಿಮ್ಮ ಅನ್ನಪಾನಾದಿಗಳನ್ನು ನೇಮಿಸಿದ ನನ್ನ ಒಡೆಯನಾದ ಅರಸನಿಗೆ ನಾನು ಭಯಪಡುತ್ತೇನೆ; ಅವನು ಯಾಕೆ ನಿಮ್ಮ ಮುಖಗಳನ್ನು ನಿಮ್ಮ ಸ್ಥಿತಿಯಲ್ಲಿಯೇ ಇರುವ ಯೌವನಸ್ಥರಿಗಿಂತ ಕಳೆಗುಂದಿದವುಗಳನ್ನಾಗಿ ನೋಡಬೇಕು? ಈ ಪ್ರಕಾರ ನೀವು ಅರಸನ ಹತ್ತಿರ ನನ್ನ ತಲೆಗೆ ಅಪಾಯವನ್ನು ಬರಮಾಡುತ್ತೀರಿ ಅಂದನು.
1:11b.DAN.001.011 ಆ ಮೇಲೆ ಕಂಚುಕಿಯರ ಯಜಮಾನನು ದಾನಿಯೇಲ್, ಹನನ್ಯ, ವಿಾಶಾ ಯೇಲ, ಅಜರ್ಯ ಇವರನ್ನು ನೋಡಿಕೊಳ್ಳುವದಕ್ಕೆ ಇಟ್ಟಿದ್ದ ಮೇಲ್ಜಾರನಿಗೆ ದಾನಿಯೇಲನು ಹೇಳಿದ್ದೇ ನಂದರೆ--
1:12b.DAN.001.012 ನಿನ್ನ ಸೇವಕರನ್ನು ಹತ್ತು ದಿವಸಗಳ ವರೆಗೂ ಪರೀಕ್ಷಿಸಿ ನೋಡು, ಅವರು ನಮಗೆ ಆಹಾರಕ್ಕೆ ಕಾಯಿಪಲ್ಯಗಳನ್ನು ಕುಡಿಯುವದಕ್ಕೆ ನೀರನ್ನು ಕೊಡಲಿ.
1:13b.DAN.001.013 ಆಗ ನಮ್ಮ ಮುಖಗಳು ಅರಸನ ಭೋಜನದ ಪಾಲನ್ನು ತಿನ್ನುವ ಯೌವನಸ್ಥರ ಮುಖಗಳು ನಿಮ್ಮ ಮುಂದೆ ಕಾಣಬರಲಿ; ನಿನಗೆ ಕಾಣುವ ಪ್ರಕಾರ ನಿನ್ನ ಸೇವಕರಿಗೆ ನೋಡುವ ಹಾಗೆ ಮಾಡು ಎಂದು ಬೇಡಿ ಕೊಂಡನು.
1:14b.DAN.001.014 ಹಾಗೆಯೇ ಅವನು ಈ ಕಾರ್ಯದ ವಿಷಯವಾಗಿ ಒಪ್ಪಿ ಹತ್ತು ದಿವಸಗಳ ವರೆಗೂ ಅವರನ್ನು ಪರೀಕ್ಷಿಸಿದನು.
1:15b.DAN.001.015 ಹತ್ತು ದಿವಸಗಳ ಕೊನೆಯ ವರೆಗೂ ಅರಸನ ಭೋಜನದ ಪಾಲನ್ನು ತಿನ್ನುವ ಯೌವನಸ್ಥರೆ ಲ್ಲರಿಗಿಂತ ಇವರ ಮುಖಗಳು ನೋಡುವದಕ್ಕೆ ಸುಂದರ ವಾಗಿಯೂ ಶರೀರದಲ್ಲಿ ಪುಷ್ಟರಾಗಿಯೂ ಕಾಣಿಸಿದವು.
1:16b.DAN.001.016 ಮೇಲ್ವಿಚಾರಕನು ಅವರ ಭೋಜನದ ಪಾಲನ್ನು ಅವರು ಕುಡಿಯುವಂತ ದ್ರಾಕ್ಷಾರಸವನ್ನು ತೆಗೆದುಹಾಕಿ ಅವರಿಗೆ ಸಸ್ಯಾಹಾರವನ್ನು ಕೊಟ್ಟನು.
1:17b.DAN.001.017 ಈ ನಾಲ್ಕು ಯೌವನಸ್ಥರ ವಿಷಯವು: ದೇವರು ಅವರಿಗೆ ಎಲ್ಲಾ ವಿದ್ಯೆಯಲ್ಲಿಯೂ ಜ್ಞಾನದಲ್ಲಿಯೂ ತಿಳುವಳಿಕೆಯನ್ನೂ ವಿವೇಕವನ್ನೂ ಕೊಟ್ಟನು; ದಾನಿಯೇಲನು ಸಕಲ ದರ್ಶನಗಳಲ್ಲಿಯೂ ಕನಸುಗಳಲ್ಲಿಯೂ ತಿಳುವಳಿಕೆ ಯುಳ್ಳವನಾಗಿದ್ದನು.
1:18b.DAN.001.018 ಆಗ ಅರಸನು ಅವರನ್ನು ತರಬೇಕೆಂದು ಹೇಳಿದ್ದರಿಂದ ನೇಮಿಸಿದ ದಿವಸಗಳ ಕೊನೆಯಲ್ಲಿ ಕಂಚುಕಿಯರ ಯಜಮಾನನು ಅವರನ್ನು ನೆಬೂಕದ್ನೆಚ್ಚರನ ಮುಂದೆ ತಂದನು.
1:19b.DAN.001.019 ಅರಸನು ಅವರ ಸಂಗಡ ಮಾತನಾಡಿದನು; ಅವರೆಲ್ಲರಲ್ಲಿ ದಾನಿ ಯೇಲ, ಹನನ್ಯ, ವಿಾಶಾಯೇಲ ಮತ್ತು ಅಜರ್ಯ ಇವರ ಹಾಗೆ ಒಬ್ಬನೂ ಸಿಗಲಿಲ್ಲ. ಆದದರಿಂದಲೇ ಇವರು ಅರಸನ ಸನ್ನಿಧಾನದಲ್ಲಿ ನಿಂತರು.
1:20b.DAN.001.020 ಅರಸನು ಅವರ ಹತ್ತಿರ ವಿಚಾರಿಸಿದ ಸಮಸ್ತ ಜ್ಞಾನ ವಿವೇಕಗಳ ವಿಷಯದಲ್ಲಿ ತನ್ನ ರಾಜ್ಯದಲ್ಲಿರುವ ಎಲ್ಲಾ ಮಂತ್ರಗಾರ ರಿಗಿಂತಲೂ ಜೋತಿಷ್ಯರಿಗಿಂತಲೂ ಇವರೇ ಹತ್ತರಷ್ಟು ಉತ್ತಮರೆಂದು ಕಂಡರು.ದಾನಿಯೇಲನು ರಾಜ ನಾದ ಕೋರೆಷನ ಆಳಿಕೆಯ ಮೊದಲನೆಯ ವರುಷದ ತನಕ ಸನ್ನಿಧಿಸೇವಕನಾಗಿಯೇ ಇದ್ದನು.
1:21b.DAN.001.021 ದಾನಿಯೇಲನು ರಾಜ ನಾದ ಕೋರೆಷನ ಆಳಿಕೆಯ ಮೊದಲನೆಯ ವರುಷದ ತನಕ ಸನ್ನಿಧಿಸೇವಕನಾಗಿಯೇ ಇದ್ದನು.
2
2:1b.DAN.002.001 ನೆಬೂಕದ್ನೆಚ್ಚರನ ಆಳಿಕೆಯ ಎರಡನೆಯ ವರುಷದಲ್ಲಿ ನೆಬೂಕದ್ನೆಚ್ಚರನು ಕಂಡ ಕನಸುಗಳ ಪರಿಣಾಮದಿಂದ ಅವನ ಆತ್ಮವು ಕಳವಳ ಗೊಂಡು ನಿದ್ರೆಯು ಅವನನ್ನು ಬಿಟ್ಟು ಹೋಯಿತು.
2:2b.DAN.002.002 ಆಗ ಅರಸನಿಗೆ ತನ್ನ ಕನಸುಗಳನ್ನು ತಿಳಿಸುವ ಹಾಗೆ ಅರಸನು ಮಂತ್ರಗಾರರನ್ನೂ ಜೋತಿಷ್ಯರನ್ನೂ ಮಾಟ ಗಾರರನ್ನೂ ಕಸ್ದೀಯರನ್ನೂ ಕರೆಯಲು ಆಜ್ಞಾಪಿಸಿ ದನು; ಇವರೆಲ್ಲರೂ ಬಂದು ಅರಸನ ಮುಂದೆ ನಿಂತರು.
2:3b.DAN.002.003 ಆಗ ಅರಸನು ಅವರಿಗೆ--ನಾನು ಒಂದು ಕನಸ್ಸು ಕಂಡಿದ್ದೇನೆ; ಆ ಕನಸಿನ ಅರ್ಥವನ್ನು ತಿಳಿಯುವದಕ್ಕಾಗಿ ನನ್ನ ಆತ್ಮವು ಕಳವಳಗೊಂಡಿದೆ ಅಂದನು.
2:4b.DAN.002.004 ಆಗ ಕಸ್ದೀಯರು ಅರಸನಿಗೆ ಅರಮಾಯ ಭಾಷೆಯಲ್ಲಿ ಹೇಳಿ ದ್ದೇನಂದರೆ--ಓ ಅರಸನೇ, ನಿರಂತರವಾಗಿ ಬಾಳು, ಕನಸನ್ನು ನಿನ್ನ ಸೇವಕರಿಗೆ ಹೇಳು; ಆಗ ನಾವು ಅದರ ಅರ್ಥಗಳನ್ನು ತಿಳಿಸುವೆವು ಅಂದರು.
2:5b.DAN.002.005 ಅರಸನು ಕಸ್ದೀ ಯರಿಗೆ ಪ್ರತ್ಯುತ್ತರವಾಗಿ--ಆ ಕನಸಿನ ಸಂಗತಿಯು ನನ್ನನ್ನು ಬಿಟ್ಟು ಹೋಯಿತು; ನೀವು ಕನಸನ್ನು ಅದರ ಅರ್ಥದೊಂದಿಗೆ ನನಗೆ ತಿಳಿಸದಿದ್ದರೆ ನೀವು ತುಂಡು ತುಂಡಾಗಿ ಕತ್ತರಿಸಲ್ಪಡುವಿರಿ; ನಿಮ್ಮ ಮನೆಗಳು ತಿಪ್ಪೆ ಗುಂಡಿಗಳನ್ನಾಗಿ ಮಾಡಿಸುವೆನು.
2:6b.DAN.002.006 ಆದರೆ ನೀವು ಕನ ಸನ್ನೂ ಅದರ ಅರ್ಥಗಳನ್ನೂ ತಿಳಿಸಿದರೆ, ದಾನಗಳನ್ನೂ ಬಹುಮಾನಗಳನ್ನೂ ಬಹಳ ಘನವನ್ನೂ ನನ್ನಿಂದ ಪಡೆಯುವಿರಿ; ಹೀಗಿರಲಾಗಿ ಕನಸನ್ನೂ ಅದರ ಅಭಿ ಪ್ರಾಯವನ್ನೂ ನನಗೆ ತಿಳಿಸಿರಿ ಎಂದು ಹೇಳಿದನು.
2:7b.DAN.002.007 ಅವರು ಮತ್ತೆ ಉತ್ತರವಾಗಿ--ಅರಸನು ತನ್ನ ಸೇವಕರಿಗೆ ಕನಸನ್ನು ಮೊದಲು ಹೇಳಲಿ, ಆಗ ಅದರ ಅರ್ಥವನ್ನು ನಾವು ತಿಳಿಸುವೆವು ಅಂದರು.
2:8b.DAN.002.008 ಆಗ ಅರಸನು ಪ್ರತ್ಯುತ್ತರವಾಗಿ--ಅದು ಗತಿಸಿದ ವಿಷಯವೆಂದು ನೀವು ತಿಳಿದಿದ್ದರಿಂದಲೇ ಕಾಲಹರಣ ಮಾಡುತ್ತಿರುವಿರೆಂದು ನಾನು ನಿಶ್ಚಯವಾಗಿ ಬಲ್ಲೆನು.
2:9b.DAN.002.009 ಆದರೆ ನೀವು ಕನಸ್ಸನ್ನು ನನಗೆ ತಿಳಿಸದೆ ಹೋದರೆ ನಿಮಗೆ ಒಂದೇ ನಿರ್ಣಯ ಉಂಟು; ಕಾಲ ಬದಲಾಗುವ ವರೆಗೂ ನೀವು ನನ್ನ ಮುಂದೆ ಕೆಟ್ಟ ಸುಳ್ಳು ಮಾತುಗಳನ್ನು ಮಾತನಾಡಲು ಸಿದ್ಧಮಾಡಿಕೊಂಡಿರುವಿರಿ; ಆದದರಿಂದ ಕನಸನ್ನು ನನಗೆ ತಿಳಿಸಿ, ಅದರ ಅರ್ಥವನ್ನೂ ನನಗೆ ತಿಳಿಸಬಲ್ಲಿ ರೆಂದು ನಾನು ತಿಳಿದುಕೊಂಡಿರುತ್ತೇನೆ ಎಂದು ಹೇಳಿ ದನು.
2:10b.DAN.002.010 ಆಗ ಕಸ್ದೀಯರು ಅರಸನಿಗೆ ಉತ್ತರವಾಗಿ--ಅರಸನ ಸಂಗತಿಯನ್ನು ತಿಳಿಸಬಲ್ಲ ವ್ಯಕ್ತಿ ಭೂಲೋಕ ದಲ್ಲಿಲ್ಲ; ಆದದರಿಂದ ಯಾವ ಅರಸನಾದರೂ ಯಾವ ಪ್ರಭುವಾದರೂ ಯಾವ ಯಜಮಾನನಾದರೂ ಯಾವೊಬ್ಬ ಮಂತ್ರಗಾರನಲ್ಲೂ ಜೋತಿಷ್ಯನಲ್ಲೂ ಕಸ್ದೀಯನಲ್ಲೂ ಇಂಥ ಸಂಗತಿಗಳನ್ನು ಕೇಳಲಿಲ್ಲ.
2:11b.DAN.002.011 ಅರಸನು ಕೇಳುವ ಸಂಗತಿಯು ಅಪರೂಪವಾದದ್ದು ಮತ್ತು ಮಾನವರ ಸಂಗಡ ವಾಸಮಾಡದ ದೇವರುಗಳೇ ಹೊರತು ಇನ್ಯಾರೂ ಅದನ್ನು ಅರಸನ ಮುಂದೆ ತಿಳಿಸಲಾರರು ಅಂದರು.
2:12b.DAN.002.012 ಇದರಿಂದ ಅರಸನು ಕೋಪವುಳ್ಳವನಾಗಿ ಮಹಾರೌದ್ರದಿಂದ ಬಾಬೆಲಿನಲ್ಲಿ ರುವ ಎಲ್ಲಾ ಜ್ಞಾನಿಗಳನ್ನು ನಾಶಮಾಡಬೇಕೆಂದು ಆಜ್ಞಾ ಪಿಸಿದನು.
2:13b.DAN.002.013 ಹಾಗೆಯೇ, ಜ್ಞಾನಿಗಳನ್ನು ಕೊಲ್ಲಬೇಕೆಂಬ ನಿರ್ಣಯವು ಹೊರಟಿತು; ಆಗ ದಾನಿಯೇಲನನ್ನೂ ಅವನ ಜೊತೆಗಾರರನ್ನೂ ಕೊಲ್ಲಲು ಹುಡುಕಿದರು.
2:14b.DAN.002.014 ಆ ಮೇಲೆ ಬಾಬೆಲಿನ ಜ್ಞಾನಿಗಳನ್ನು ಕೊಲ್ಲಲ್ಲು ಹೊರಟಿದ್ದ ಅರಸನ ಕಾವಲುಗಾರರ ಅಧಿಪತಿಯಾದ ಅರ್ಯೋಕನಿಗೆ ದಾನಿಯೇಲನು ಆಲೋಚನೆ ಯಿಂದಲೂ ಜ್ಞಾನದಿಂದಲೂ ಉತ್ತರಕೊಟ್ಟನು;
2:15b.DAN.002.015 ಆಗ ದಾನಿಯೇಲನು ಅರಸನ ಅಧಿಪತಿಯಾದ ಅರ್ಯೋಕ ನಿಗೆ ಪ್ರತ್ಯುತ್ತರವಾಗಿ--ಅರಸನಿಂದ ಈ ನಿರ್ಣಯವು ಇಷ್ಟು ತೀಕ್ಷ್ಣವಾದದ್ದೇನು ಎಂದು ಕೇಳಲು ಅರ್ಯೋ ಕನು ದಾನಿಯೇಲನಿಗೆ ಆ ಸಂಗತಿಯ ವಿಷಯ ವಿವರಿ ಸಿದನು.
2:16b.DAN.002.016 ಆಗ ದಾನಿಯೇಲನು ಒಳಗೆ ಹೋಗಿ ತನಗೆ ಸಮಯ ಕೊಡಲು ಇಷ್ಟಪಟ್ಟರೆ ತಾನು ಅರಸನಿಗೆ ಅದರ ಅರ್ಥವನ್ನು ತಿಳಿಸುವೆನೆಂದು ಹೇಳಿದನು.
2:17b.DAN.002.017 ಆ ಮೇಲೆ ದಾನಿಯೇಲನು ತನ್ನ ಮನೆಗೆ ಹೋಗಿ ತನ್ನ ಜೊತೆಗಾರರಾದ ಹನನ್ಯ, ವಿಾಶಾಯೇಲ, ಅಜ ರ್ಯರಿಗೆ ಈ ಸಂಗತಿಯನ್ನು ತಿಳಿಸಿದನು.
2:18b.DAN.002.018 ದಾನಿಯೇ ಲನು ಅವನ ಜೊತೆಗಾರರೊಂದಿಗೆ ಉಳಿದ ಬಾಬೆಲಿನ ಜ್ಞಾನಿಗಳ ಸಂಗಡ ನಾಶವಾಗದೆ ಅವರು ಈ ರಹಸ್ಯದ ಸಂಗತಿಯನ್ನು ಕುರಿತು ಪರಲೋಕದ ದೇವರಿಂದ ಕರುಣೆಯನ್ನು ಬೇಡಿಕೊಳ್ಳಬೇಕೆಂದು ಹೇಳಿದನು.
2:19b.DAN.002.019 ಆಗ ಆ ರಹಸ್ಯವು ದಾನಿಯೇಲನಿಗೆ ರಾತ್ರಿ ದರ್ಶನ ದಲ್ಲಿ ಪ್ರಕಟವಾಯಿತು; ಆಗ ದಾನಿಯೇಲನು ಪರಲೋಕ ದೇವರನ್ನು ಸ್ತುತಿಸಿದನು.
2:20b.DAN.002.020 ದಾನಿಯೇ ಲನು--ದೇವರ ಹೆಸರು ಎಂದೆಂದಿಗೂ ಸ್ತುತಿಸಲ್ಪಡಲಿ; ಯಾಕಂದರೆ ಜ್ಞಾನವೂ ಬಲವೂ ಆತನದಾಗಿದೆ;
2:21b.DAN.002.021 ಆತನು ಕಾಲವನ್ನೂ ಸಮಯವನ್ನೂ ಬದಲಾಯಿ ಸುತ್ತಾ ಅರಸನನ್ನು ಮೇಲೆತ್ತುತ್ತಾನೆ; ಜ್ಞಾನಿಗಳಿಗೆ ಜ್ಞಾನ ವನ್ನೂ ಬುದ್ಧಿವಂತರಿಗೆ ತಿಳುವಳಿಕೆಯನ್ನೂ ಕೊಡು ತ್ತಾನೆ.
2:22b.DAN.002.022 ಅಗಾಧವಾದವುಗಳನ್ನು, ರಹಸ್ಯವಾದವು ಗಳನ್ನು ಪ್ರಕಟಮಾಡುತ್ತಾನೆ; ಕತ್ತಲೆಯಲ್ಲಿ ಇರುವಂತ ವುಗಳನ್ನು ತಿಳಿದಿರುವಂತವನಾಗಿದ್ದಾನೆ; ಬೆಳಕು ಆತ ನೊಳಗೆ ವಾಸಿಸುತ್ತದೆ.
2:23b.DAN.002.023 ಓ ನನ್ನ ಪಿತೃಗಳ ದೇವರೇ, ನಾನು ನಿನ್ನನ್ನು ಕೊಂಡಾಡಿ ನಿನಗೆ ಕೃತಜ್ಞತೆ ಸಲ್ಲಿಸುತ್ತೇನೆ. ಯಾಕಂದರೆ ನೀನು ನನಗೆ ಜ್ಞಾನವನ್ನೂ ಬಲವನ್ನೂ ಕೊಟ್ಟು ನಾವು ನಿನ್ನಿಂದ ಅಪೇಕ್ಷಿಸಿಕೊಂಡದ್ದನ್ನು ನಮಗೆ ತಿಳಿಯಮಾಡಿದ್ದೀ; ಹೌದು, ನೀನು ಈಗ ನಮಗೆ ಅರಸನ ಸಂಗತಿಯನ್ನು ತಿಳಿಯಪಡಿಸಿದ್ದೀ ಅಂದನು.
2:24b.DAN.002.024 ಆದದರಿಂದ ದಾನಿಯೇಲನು ಬಾಬೆಲಿನ ಜ್ಞಾನಿ ಗಳನ್ನು ನಾಶಮಾಡಲು ಅರಸನ ಆಜ್ಞೆಯನ್ನು ಹೊಂದಿದ ಅರ್ಯೋಕನ ಹತ್ತಿರ ಹೋಗಿ ಅವನಿಗೆ ಹೇಳಿದ್ದೇ ನಂದರೆ--ನೀನು ಬಾಬೆಲಿನ ಜ್ಞಾನಿಗಳನ್ನು ನಾಶಮಾಡ ಬೇಡ; ನನ್ನನ್ನು ಅರಸನ ಮುಂದೆ ಕರೆದುಕೊಂಡು ಹೋಗು ಆಗ ನಾನು ಅರಸನಿಗೆ ಅರ್ಥವನ್ನು ತಿಳಿಸು ತ್ತೇನೆ ಅಂದನು.
2:25b.DAN.002.025 ಆಗ ಅರ್ಯೋಕನು ದಾನಿಯೇಲನನ್ನು ತ್ವರೆ ಯಾಗಿ ಅರಸನ ಮುಂದೆ ಕರೆದುಕೊಂಡು ಹೋಗಿ --ಯೆಹೂದ್ಯರ ಸೆರೆಯವರಲ್ಲಿ ನನಗೆ ಒಬ್ಬ ಮನು ಷ್ಯನು ಸಿಕ್ಕಿದ್ದಾನೆ; ಅವನು ಅರಸನಿಗೆ ಅರ್ಥವನ್ನು ತಿಳಿಸುತ್ತಾನೆ ಅಂದನು.
2:26b.DAN.002.026 ಆಗ ಅರಸನು ಬೇಲ್ತೆಶಚ್ಚರ ನೆಂಬ ದಾನಿಯೇಲನನ್ನು ಕುರಿತು--ನಾನು ಕಂಡ ಕನಸನ್ನೂ ಅದರ ಅರ್ಥವನ್ನೂ ನನಗೆ ತಿಳಿಸುವ ಸಾಮರ್ಥ್ಯವು ನಿನಗಿದೆಯೋ ಅಂದನು.
2:27b.DAN.002.027 ಆಗ ದಾನಿ ಯೇಲನು ಅರಸನ ಸನ್ನಿಧಿಯಲ್ಲಿ ಪ್ರತ್ಯುತ್ತರವಾಗಿ--ಅರಸನು ನಿರ್ಭಂಧವಾಗಿ ಕೇಳುವ ರಹಸ್ಯವನ್ನು ಜ್ಞಾನಿಗಳೂ ಜೋತಿಷ್ಯರೂ ಮಂತ್ರಗಾರರೂ ಶಕುನ ಹೇಳುವವರೂ ಅರಸನಿಗೆ ತಿಳಿಸಲಾರರು.
2:28b.DAN.002.028 ಆದರೆ ಈ ರಹಸ್ಯಗಳನ್ನು ಪ್ರಕಟಪಡಿಸುವಂತ ದೇವರು ಪರಲೋಕದಲ್ಲಿದ್ದಾನೆ; ಆತನು ದಿವಸಗಳ ಅಂತ್ಯದಲ್ಲಿ ಸಂಭವಿಸುವಂತವುಗಳನ್ನು ಅರಸನಾದ ನೆಬೂಕದ್ನೆಚ್ಚ ರನಿಗೆ ತಿಳಿಯಪಡಿಸುತ್ತಾನೆ. ನಿನ್ನ ಕನಸಿನಲ್ಲಿ, ನಿನ್ನ ಹಾಸಿಗೆಯಲ್ಲಿ ಬಂದ ನಿನ್ನ ಮನಸ್ಸಿನ ದರ್ಶನಗಳು ಇವೇ ಆಗಿವೆ,
2:29b.DAN.002.029 ಓ ಅರಸನೇ, ನೀನು ಹಾಸಿಗೆಯ ಮೇಲೆ ಮಲಗಿರುವಾಗ ಇನ್ನು ಮುಂದೆ ಏನು ಸಂಭವಿ ಸುವದೋ ಎಂಬ ಯೋಚನೆಯು ನಿನ್ನಲ್ಲಿ ಹುಟ್ಟಿತಲ್ಲಾ! ಆ ರಹಸ್ಯಗಳನ್ನು ವ್ಯಕ್ತಪಡಿಸುವಾತನು ಮುಂದೆ ಸಂಭ ವಿಸುವದು ಏನೆಂಬದನ್ನು ನಿನಗೆ ಗೋಚರಪಡಿಸುತ್ತಾನೆ.
2:30b.DAN.002.030 ನಾನೇ ಎಲ್ಲಾ ಜೀವಂತರಿಗಿಂತ ಹೆಚ್ಚು ಬುದ್ದಿಯುಳ್ಳ ವನೆಂದಲ್ಲ, ಕನಸಿನ ಅರ್ಥವು ಅರಸನಿಗೆ ಗೋಚರ ವಾಗಿ ನಿನ್ನ ಹೃದಯದ ಯೋಚನೆಗಳು ನಿನಗೆ ತಿಳಿದು ಬರಲೆಂದು ನನಗೆ ಪ್ರಕಟಮಾಡಲ್ಪಟ್ಟಿದೆ.
2:31b.DAN.002.031 ಓ ರಾಜನೇ, ನೀನು ನೋಡಲಾಗಿ, ಇಗೋ, ಒಂದು ದೊಡ್ಡ ಪ್ರತಿಮೆಯು ಕಾಣಿಸಿತು. ಮಹಾ ಪ್ರಕಾಶಮಾನ ವಾದ ಈ ದೊಡ್ಡ ಪ್ರತಿಮೆಯು ನಿನ್ನ ಮುಂದೆ ನಿಂತಿತ್ತು; ಅದರ ಆಕಾರವು ಭಯಂಕರವಾಗಿತ್ತು.
2:32b.DAN.002.032 ಈ ಪ್ರತಿ ಮೆಯ ತಲೆಯು ಚೊಕ್ಕ ಬಂಗಾರದಿಂದಲೂ ಅದರ ಎದೆಯು ಮತ್ತು ತೋಳುಗಳು ಬೆಳ್ಳಿಯಿಂದಲೂ ಅದರ ಹೊಟ್ಟೆಯು ಮತ್ತು ತೊಡೆಗಳು ಹಿತ್ತಾಳೆಯಿಂದಲೂ
2:33b.DAN.002.033 ಅದರ ಕಾಲುಗಳು ಕಬ್ಬಿಣದಿಂದಲೂ ಅದರ ಪಾದಗಳು ಅರ್ಧ ಕಬ್ಬಿಣವೂ ಮತ್ತು ಅರ್ಧ ಮಣ್ಣು ಆಗಿತ್ತು.
2:34b.DAN.002.034 ನೀನು ನೋಡುತ್ತಿರಲಾಗಿ, ಒಂದು ಕಲ್ಲು ಕೈಗಳ ಸಹಾಯವಿಲ್ಲದೆ ಒಡೆಯಲ್ಪಟ್ಟು ಅರ್ಧ ಕಬ್ಬಿ ಣವೂ ಅರ್ಧ ಮಣ್ಣೂ ಆಗಿದ್ದ ಆ ವಿಗ್ರಹದ ಪಾದ ಗಳನ್ನು ಬಡಿದು ಅವುಗಳನ್ನು ಚೂರುಚೂರು ಮಾಡಿತು.
2:35b.DAN.002.035 ಆಮೇಲೆ ಕಬ್ಬಿಣವೂ ಮಣ್ಣೂ ಹಿತ್ತಾಳೆಯೂ ಬೆಳ್ಳಿಯೂ ಮತ್ತು ಬಂಗಾರವೂ ಕೂಡ ಒಡೆದು ಚೂರು ಚೂರಾಗಿ ಬೇಸಿಗೆ ಕಾಲದ ಧಾನ್ಯದ ಹೊಟ್ಟಿನ ಹಾಗಾ ದವು; ಅವುಗಳಿಗೆ ಎಡೆ ಸಿಗದ ಹಾಗೆ ಗಾಳಿಯು ಅವುಗಳನ್ನು ಹೊಡೆದುಕೊಂಡು ಹೋಯಿತು; ಪ್ರತಿಮೆಯನ್ನು ಬಡಿದ ಕಲ್ಲು ದೊಡ್ಡ ಬೆಟ್ಟವಾಗಿ ಸಮಸ್ತ ಭೂಮಿಯನ್ನು ತುಂಬಿಸಿತು.
2:36b.DAN.002.036 ಇದೇ ಕನಸು! ಮತ್ತು ಇದರ ಅರ್ಥವನ್ನು ನಾವು ಅರಸನ ಮುಂದೆ ಹೇಳು ತ್ತೇವೆ.
2:37b.DAN.002.037 ಓ ಅರಸನೇ, ನೀನು ಅರಸರಿಗೆ ಅರಸನಾಗಿ ರುವೆ; ಪರಲೋಕದ ದೇವರು ನಿನಗೆ ರಾಜ್ಯವನ್ನೂ ಬಲವನ್ನೂ ಅಧಿಕಾರವನ್ನೂ ಘನವನ್ನೂ ಕೊಟ್ಟಿದ್ದಾನೆ.
2:38b.DAN.002.038 ಮನುಷ್ಯರ ಮಕ್ಕಳು, ಭೂಮಿಯ ಮೃಗಗಳೂ ಆಕಾಶದ ಪಕ್ಷಿಗಳೂ ವಾಸಿಸುವಂತಾದ್ದೆಲ್ಲವನ್ನೂ ನಿನ್ನ ಕೈಯಲ್ಲಿ ಕೊಟ್ಟು ಅವೆಲ್ಲವುಗಳನ್ನು ಆಳುವಂತೆ ನಿನ್ನನ್ನು ಮಾಡಿದ್ದಾನೆ. ಆ ಬಂಗಾರದ ತಲೆಯು ನೀನೇ.
2:39b.DAN.002.039 ನಿನ್ನ ತರುವಾಯ ನಿನಗಿಂತ ಕನಿಷ್ಠವಾದ ಮತ್ತೊಂದು ರಾಜ್ಯ ಏಳುವದು; ಅನಂತರ ಮೂರನೇ ಹಿತ್ತಾಳೆಯ ರಾಜ್ಯ ಬರುವದು. ಅದು ಸಮಸ್ತ ಭೂಮಿಯ ಮೇಲೂ ದೊರೆತನ ನಡೆಸುವದು.
2:40b.DAN.002.040 ನಾಲ್ಕನೇ ರಾಜ್ಯವು ಕಬ್ಬಿ ಣದ ಹಾಗೆ ಬಲವಾಗಿ ಇರುವದು. ಕಬ್ಬಿಣವು ಸಮಸ್ತ ವಸ್ತುಗಳನ್ನು ವಶಮಾಡಿಕೊಂಡು ಚೂರು ಚೂರು ಮಾಡುತ್ತದೆ; ಕಬ್ಬಿಣವು ಹೇಗೆ ಎಲ್ಲವುಗಳನ್ನು ಚೂರು ಮಾಡುವದೋ ಹಾಗೆಯೇ ಆ ರಾಜ್ಯವು ಚೂರು ಚೂರಾಗಿ ಧ್ವಂಸ ಮಾಡುವದು.
2:41b.DAN.002.041 ನೀನು ಪಾದಗ ಳನ್ನೂ ಕಾಲಿನ ಬೆರಳುಗಳನ್ನೂ ಅರ್ಧ ಕುಂಬಾರನ ಮಣ್ಣಿನಿಂದಲೂ ಅರ್ಧ ಕಬ್ಬಿಣದಿಂದಲೂ ಉಂಟಾದ ವೆಂದು ನೀನು ನೋಡಿದೆಯಲ್ಲಾ? ಅದೇ ರೀತಿ ಆ ರಾಜ್ಯವು ವಿಭಾಗಿಸಲ್ಪಡುವದು; ಆದರೆ ನೀನು ಜೇಡಿ ಮಣ್ಣಿನ ಸಂಗಡ ಕಲಸಿದ ಕಬ್ಬಿಣವನ್ನು ನೋಡಿದ ಹಾಗೆ ಕಬ್ಬಿಣದ ಬಲವು ಅದರಲ್ಲಿರುವದು.
2:42b.DAN.002.042 ಪಾದದ ಬೆರಳುಗಳು ಅರ್ಧ ಕಬ್ಬಿಣದಿಂದಲೂ ಅರ್ಧ ಮಣ್ಣಿ ನಿಂದಲೂ ಮಾಡಿದ ಹಾಗೆ ರಾಜ್ಯವು ಅರ್ಧ ಮುರಿದದ್ದಾಗಿಯೂ ಅರ್ಧ ಬಲವಾಗಿಯೂ ಇರುವದು.
2:43b.DAN.002.043 ನೀನು ಕಬ್ಬಿಣವು ಜೇಡಿಮಣ್ಣಿನ ಸಂಗಡ ಕಲಸಿರು ವದನ್ನು ನೋಡಿದ ಹಾಗೆ ಅವರು ಮನುಷ್ಯನ ವಂಶಾ ವಳಿಯೊಂದಿಗೆ ಬೆರೆತುಕೊಳ್ಳುವರು; ಆದರೆ ಕಬ್ಬಿಣವು ಮಣ್ಣಿನ ಸಂಗಡ ಕೂಡಿಕೊಳ್ಳದ ಪ್ರಕಾರ ಅವರು ಒಬ್ಬರ ಸಂಗಡ ಒಬ್ಬರು ಕೂಡಿಕೊಳ್ಳುವದಿಲ್ಲ.
2:44b.DAN.002.044 ಅರ ಸರ ದಿವಸಗಳಲ್ಲಿ ಪರಲೋಕದ ದೇವರು ಎಂದಿಗೂ ನಾಶವಾಗದ ರಾಜ್ಯವನ್ನು ಸ್ಥಾಪಿಸುವನು. ಅದರ ರಾಜ್ಯ ವನ್ನು ಬೇರೆ ಜನರಿಗೆ ಕೊಡದೆ ಆ ರಾಜ್ಯಗಳನ್ನೆಲ್ಲಾ ಧ್ವಂಸ ಮಾಡಿ ಮುಗಿಸಿ ಎಂದೆಂದಿಗೂ ನಿಲ್ಲುವದು.
2:45b.DAN.002.045 ಆ, ಕಲ್ಲು ಕೈಗಳ ಸಹಾಯವಿಲ್ಲದೆ ಬೆಟ್ಟದೊಳಗಿಂದ ಒಡೆಯಲ್ಪಟ್ಟು ಕಬ್ಬಿಣವನ್ನೂ ಹಿತ್ತಾಳೆಯನ್ನೂ ಮಣ್ಣನ್ನೂ ಬೆಳ್ಳಿಯನ್ನೂ ಬಂಗಾರವನ್ನೂ ಧ್ವಂಸ ಮಾಡಿತೆಂದು ನೀನು ನೋಡಿದ್ದು ಇದೇ. ಮಹಾದೇವರು ಇನ್ನು ಮೇಲೆ ಸಂಭವಿಸುವಂಥದ್ದನ್ನು ಅರಸನಿಗೆ ತಿಳಿಯಪಡಿಸಿ ದ್ದಾನೆ; ಕನಸು ನಿಶ್ಚಯವಾಗಿದೆ; ಅದರ ಅರ್ಥಗಳೂ ಸತ್ಯವಾಗಿವೆ ಅಂದನು.
2:46b.DAN.002.046 ಆಗ ಅರಸನಾದ ನೆಬೂಕದ್ನೆ ಚ್ಚರನು ಅಡ್ಡಬಿದ್ದು ದಾನಿಯೇಲನಿಗೆ ನಮಸ್ಕರಿಸಿರಿ, ಅವನಿಗೆ ಕಾಣಿಕೆಗಳನ್ನೂ ಸುಗಂಧದ್ರವ್ಯ ಅರ್ಪಿಸಬೇ ಕೆಂದೂ ಆಜ್ಞಾಪಿಸಿದನು.
2:47b.DAN.002.047 ಅರಸನು ದಾನಿಯೇಲನಿಗೆ ಉತ್ತರವಾಗಿ--ನೀನು ಈ ರಹಸ್ಯವನ್ನು ಪ್ರಕಟ ಮಾಡಲು ಸಮರ್ಥನಾದದರಿಂದ ನಿಶ್ಚಯವಾಗಿ ನಿಮ್ಮ ದೇವರು ದೇವರುಗಳಿಗೆ ದೇವರಾಗಿಯೂ ಅರಸುಗಳ ಕರ್ತನಾಗಿಯೂ ರಹಸ್ಯಗಳನ್ನು ಪ್ರಕಟಮಾಡುವಾತ ನಾಗಿಯೂ ಆಗಿದ್ದಾನೆ ಅಂದನು.
2:48b.DAN.002.048 ಆಗ ಅರಸನು ದಾನಿಯೇಲನನ್ನು ಒಬ್ಬ ಮಹಾ ವ್ಯಕ್ತಿಯನ್ನಾಗಿ ಮಾಡಿ ಅವನಿಗೆ ಅನೇಕ ದೊಡ್ಡ ಬಹುಮಾನಗಳನ್ನು ಕೊಟ್ಟು ಸಮಸ್ತ ಬಾಬೆಲಿನ ಪ್ರಾಂತ್ಯಗಳಿಗೆ ಅಧಿಕಾರಿಯನ್ನಾ ಗಿಯೂ ಬಾಬೆಲಿನ ಸಮಸ್ತ ಜ್ಞಾನಿಗಳಿಗೆ ಮುಖ್ಯಾಧಿ ಪತಿಯನ್ನಾಗಿಯೂ ನೇಮಿಸಿದನು.ಆ ಮೇಲೆ ದಾನಿ ಯೇಲನು ಅರಸನನ್ನು ಬೇಡಿಕೊಂಡದ್ದರಿಂದ ಅರಸನು ಶದ್ರಕ್ ಮೇಷಕ್ ಮತ್ತು ಅಬೇದ್‌ನೆಗೋ ಎಂಬವರಿಗೆ ಬಾಬೆಲ್ ಸಂಸ್ಥಾನದ ಕಾರ್ಯಭಾರವನ್ನು ವಹಿಸಿದನು. ದಾನಿಯೇಲನಾದರೋ ಅರಸನ ಅರಮನೆಯಲ್ಲೇ ಇದ್ದನು.
2:49b.DAN.002.049 ಆ ಮೇಲೆ ದಾನಿ ಯೇಲನು ಅರಸನನ್ನು ಬೇಡಿಕೊಂಡದ್ದರಿಂದ ಅರಸನು ಶದ್ರಕ್ ಮೇಷಕ್ ಮತ್ತು ಅಬೇದ್‌ನೆಗೋ ಎಂಬವರಿಗೆ ಬಾಬೆಲ್ ಸಂಸ್ಥಾನದ ಕಾರ್ಯಭಾರವನ್ನು ವಹಿಸಿದನು. ದಾನಿಯೇಲನಾದರೋ ಅರಸನ ಅರಮನೆಯಲ್ಲೇ ಇದ್ದನು.
3
3:1b.DAN.003.001 ಅರಸನಾದ ನೆಬೂಕದ್ನೆಚ್ಚರನು ಅರವತ್ತು ಮೊಳ ಎತ್ತರವಾಗಿಯೂ ಆರು ಮೊಳ ಅಗಲವಾಗಿಯೂ ಇರುವ ಒಂದು ಬಂಗಾರದ ಪ್ರತಿ ಮೆಯನ್ನು ಮಾಡಿಸಿ, ಬಾಬೆಲ್ ಪ್ರಾಂತ್ಯದಲ್ಲಿರುವ ದೂರಾ ಎಂಬ ಬಯಲಿನಲ್ಲಿ ನಿಲ್ಲಿಸಿದನು.
3:2b.DAN.003.002 ಆ ಮೇಲೆ ಅರಸನಾದ ನೆಬೂಕದ್ನೆಚ್ಚರನು ಪ್ರಭುಗಳನ್ನೂ ರಾಜ್ಯ ಪಾಲರನ್ನೂ ಆಲೋಚನಾಕರ್ತರು ಅಧಿಕಾರಸ್ಥರನ್ನೂ ನ್ಯಾಯಾಧಿಪತಿಗಳನ್ನೂ ಬೊಕ್ಕಸದವರನ್ನೂ ಮತ್ತು ಸಲಹೆಗಾರರನ್ನೂ ಪಂಡಿತರನ್ನೂ ಎಲ್ಲಾ ಪ್ರಾಂತ್ಯಗಳ ಅಧಿಕಾರಿಗಳನ್ನೂ ತಾನು ನಿಲ್ಲಿಸಿದ್ದ ಪ್ರತಿಮೆಯ ಪ್ರತಿ ಷ್ಠೆಗೆ ಕರೆಯಿಸಿದನು.
3:3b.DAN.003.003 ಆಗ ಪ್ರಧಾನರು (ಆಲೋಚ ನಾಗಾರರು) ರಾಜ್ಯಪಾಲರು ಅಧಿಕಾರಸ್ಥರು, ನ್ಯಾಯಾ ಧಿಪತಿಗಳು, ಬೊಕ್ಕಸದವರು ಸಲಹೆಗಾರರು, ಪಂಡಿ ತರು, ಎಲ್ಲಾ ಪ್ರಾಂತ್ಯಗಳ ಅಧಿಕಾರಿಗಳು, ಅರಸನಾದ ನೆಬೂಕದ್ನೆಚ್ಚರನು ನಿಲ್ಲಿಸಿದ ಪ್ರತಿಮೆಯ ಪ್ರತಿಷ್ಠೆಗಾಗಿ ಕೂಡಿ ಬಂದು ನೆಬೂಕದ್ನೆಚ್ಚರನು ನಿಲ್ಲಿಸಿದ ಪ್ರತಿಮೆಯ ಮುಂದೆ ಬಂದು ನಿಂತರು.
3:4b.DAN.003.004 ಆಗ ಸಾರುವವನು ಗಟ್ಟಿ ಯಾಗಿ ಕೂಗಿ--ಓ ಪ್ರಜೆಗಳೇ, ಜನಾಂಗಗಳೇ ಮತ್ತು ನಾನಾ ಭಾಷೆಯವರೇ, ನಿಮಗೆ ಆಜ್ಞಾಪಿಸುವದೇ ನಂದರೆ--
3:5b.DAN.003.005 ನೀವು ಕೊಂಬು, ಪಿಳ್ಳಂಗೋವಿ, ತಂಬೂರಿ, ವೀಣೆ, ಕಿನ್ನರಿ, ನಾದಸ್ವರ ಮೊದಲಾದ ವಾದ್ಯಗಳ ಶಬ್ದವನ್ನು ಕೇಳುವಾಗ ಅರಸನಾದ ನೆಬೂಕ ದ್ನೆಚ್ಚರನು ನಿಲ್ಲಿಸಿದ್ದ ಬಂಗಾರದ ಪ್ರತಿಮೆಯ ಮುಂದೆ ಅಡ್ಡಬಿದ್ದು ಆರಾಧಿಸಬೇಕು.
3:6b.DAN.003.006 ಯಾವನು ಅಡ್ಡಬೀಳ ದೆಯೂ ನಮಸ್ಕರಿಸದೆಯೂ ಇರುವನೋ ಅವನು ಅದೇ ಗಳಿಗೆಯಲ್ಲಿ ಉರಿಯುವ ಬೆಂಕಿಯ ಆವಿಗೆಯ ಮಧ್ಯದಲ್ಲಿ ಹಾಕಲ್ಪಡುವನು ಅಂದನು.
3:7b.DAN.003.007 ಆದದರಿಂದ ಆ ಸಮಯದಲ್ಲಿ ಜನರೆಲ್ಲರು ಕೊಂಬು, ಕೊಳಲು, ತಂಬೂರಿ, ವೀಣೆ, ಕಿನ್ನರಿ ನಾದಸ್ವರ ಮೊದಲಾದವುಗಳ ಶಬ್ದವನ್ನು ಕೇಳುವಾಗ ಎಲ್ಲಾ ಪ್ರಜೆಗಳು ಜನಾಂಗಗಳು, ಭಾಷೆಯವರು ಅಡ್ಡಬಿದ್ದು ಅರಸನಾದ ನೆಬೂಕದ್ನೆ ಚ್ಚರನು ನಿಲ್ಲಿಸಿದ ಪ್ರತಿಮೆಯನ್ನು ಆರಾಧಿಸಿದರು.
3:8b.DAN.003.008 ಹೀಗಿರಲು ಆ ಸಮಯದಲ್ಲಿ ಕಸ್ದೀಯರು ಯೆಹೂದ್ಯರ ಮೇಲೆ ದೂರು ಹೊರಿಸಲು ಸನ್ನಿಧಿಗೆ ಬಂದು
3:9b.DAN.003.009 ಮಾತ ನಾಡಿ ಅರಸನಾದ ನೆಬೂಕದ್ನೆಚ್ಚರನಿಗೆ--ಓ ಅರಸನೇ, ನೀನು ನಿರಂತರವಾಗಿ ಬಾಳು.
3:10b.DAN.003.010 ಓ ಅರಸನೇ, ನೀನು ಪ್ರತಿಯೊಬ್ಬ ಮನುಷ್ಯನು ಕೊಂಬು, ಕೊಳಲು, ತಂಬೂರಿ, ವೀಣೆ, ಕಿನ್ನರಿ ಮತ್ತು ನಾದಸ್ವರ ಎಲ್ಲಾ ವಿಧವಾದ ವಾದ್ಯಗಳ ಶಬ್ದವನ್ನು ಕೇಳಿ ಅಡ್ಡಬಿದ್ದು ಬಂಗಾರದ ಪ್ರತಿಮೆಯನ್ನು ಆರಾಧಿಸಬೇಕೆಂದೂ
3:11b.DAN.003.011 ಅಡ್ಡಬೀಳದೆಯೂ ಆರಾಧಿಸದೆಯೂ ಇರುವವ ನನ್ನು ಉರಿಯುವ ಬೆಂಕಿಯ ಆವಿಗೆಯ ಮಧ್ಯದಲ್ಲಿ ಹಾಕಲ್ಪಡಬೇಕೆಂದೂ ಆಜ್ಞೆಕೊಟ್ಟಿರುವೆಯಲ್ಲಾ!
3:12b.DAN.003.012 ಈಗ ನೀನು ಬಾಬೆಲ್ ಪ್ರಾಂತ್ಯದ ಕೆಲಸಗಳ ಮೇಲೆ ಇಟ್ಟಿರುವ ಕೆಲವರು ಯೆಹೂದ್ಯರು ಇದ್ದಾರೆ, ಅಂದರೆ ಶದ್ರಕ್ ಮೇಷಕ್ ಅಬೇದ್‌ನೆಗೋ. ಓ ಅರಸನೇ, ಈ ಮನು ಷ್ಯರು ನಿನ್ನನ್ನು ಲಕ್ಷಿಸುವದಿಲ್ಲ. ಅವರು ನಿನ್ನ ದೇವರು ಗಳನ್ನೂ ನೀನು ನಿಲ್ಲಿಸಿರುವ ಬಂಗಾರದ ಪ್ರತಿಮೆಯ ನ್ನಾದರೂ ಸೇವಿಸಲಿಲ್ಲ ಎಂದು ಹೇಳಿದರು.
3:13b.DAN.003.013 ಆಗ ನೆಬೂಕದ್ನೆಚ್ಚರನು ಕೋಪವುಳ್ಳವನಾಗಿಯೂ ರೌದ್ರ ವುಳ್ಳವನಾಗಿಯೂ ಶದ್ರಕ್ ಮೇಷಕ್ ಅಬೇದ್ ನೆಗೋರನ್ನು ಹಿಡಿದು ತರಬೇಕೆಂದು ಆಜ್ಞಾಪಿಸಿದನು. ಹಾಗೆಯೇ ಆ ಮನುಷ್ಯರನ್ನು ಅರಸನ ಮುಂದೆ ಕರೆ ತಂದರು.
3:14b.DAN.003.014 ಆಗ ನೆಬೂಕದ್ನೆಚ್ಚರನು ಮಾತನಾಡಿ ಅವರಿಗೆ--ಶದ್ರಕ್ ಮೇಷಕ್ ಅಬೇದೆನೆಗೋ ಎಂಬ ವರೇ ನೀವು ಬೇಕೆಂದು ನನ್ನ ದೇವರನ್ನು ಸೇವಿಸದೆ ನಾನು ನಿಲ್ಲಿಸಿರುವ ಬಂಗಾರದ ಪ್ರತಿಮೆಯನ್ನು ಆರಾ ಧಿಸದೆ ಇರಬೇಕೆಂದಿರುವಿರೋ?
3:15b.DAN.003.015 ಈಗ ನೀವು ಸಿದ್ಧ ವಾಗಿದ್ದು ಕೊಂಬು, ಕೊಳಲು, ತಂಬೂರಿ, ವೀಣೆ, ಕಿನ್ನರಿ, ನಾದಸ್ವರ ಎಲ್ಲಾ ವಿಧವಾದ ವಾದ್ಯಗಳ ಶಬ್ದವನ್ನು ಕೇಳುವ ಸಮಯದಲ್ಲಿ ನಾನು ಮಾಡಿಸಿದ ಪ್ರತಿಮೆ ಯನ್ನು ಆರಾಧಿಸಿದರೆ ಸರಿ; ಆದರೆ ನೀವು ಆರಾಧಿಸ ದಿದ್ದರೆ ಅದೇ ಗಳಿಗೆಯಲ್ಲಿ ಉರಿಯುವ ಬೆಂಕಿಯ ಆವಿಗೆಯ ಮಧ್ಯದಲ್ಲಿ ಹಾಕಲ್ಪಡುವಿರಿ. ನನ್ನ ಕೈಯಿಂದ ನಿಮ್ಮನ್ನು ಬಿಡಿಸುವ ಆ ದೇವರು ಯಾರು ಎಂದು ಹೇಳಿದನು.
3:16b.DAN.003.016 ಆಗ ಶದ್ರಕ್ ಮೇಷಕ್ ಅಬೇದ್ ನೆಗೋ ಎಂಬವರು ಅರಸನಿಗೆ ಪ್ರತ್ಯುತ್ತರವಾಗಿ--ಓ ನೆಬೂಕದ್ನೆಚ್ಚರನೇ, ಈ ವಿಷಯದಲ್ಲಿ ನಾವು ನಿನಗೆ ಉತ್ತರಕೊಡುವ ಅವಶ್ಯಕತೆ ಇಲ್ಲ.
3:17b.DAN.003.017 ಒಂದು ವೇಳೆ ಹಾಗೆ ಇದ್ದರೆ ನಿಶ್ಚಯವಾಗಿ ನಾವು ಸೇವಿಸುವ ನಮ್ಮ ದೇವರು ಉರಿಯುವ ಬೆಂಕಿಯ ಆವಿಗೆಯೊಳಗಿಂದ ನಮ್ಮನ್ನು ತಪ್ಪಿಸಲು ಸಮರ್ಥನಾಗಿದ್ದಾನೆ. ಓ ಅರಸನೇ, ನಿನ್ನ ಕೈಯಿಂದಲೂ ನಮ್ಮನ್ನು ತಪ್ಪಿಸುವನು.
3:18b.DAN.003.018 ಆತನು ಒಂದು ವೇಳೆ ತಪ್ಪಿಸದಿದ್ದರೂ ಓ ಅರಸನೇ, ನಾವು ನಿನ್ನ ದೇವರುಗಳನ್ನು ಸೇವಿಸುವದಿಲ್ಲ ನೀನು ನಿಲ್ಲಿಸಿರುವ ಬಂಗಾರದ ಪ್ರತಿಮೆಯನ್ನು ಆರಾಧಿಸುವದಿಲ್ಲವೆಂದೂ ನಿನಗೆ ತಿಳಿದಿರಲಿ ಅಂದರು.
3:19b.DAN.003.019 ಆಗ ನೆಬೂಕದ್ನೆಚ್ಚರನು ಉಗ್ರದಿಂದ ತುಂಬಿದವನಾಗಿ ಅವನ ಮುಖದ ರೂಪವು ಶದ್ರಕ್ ಮೇಷಕ್‌ಅಬೇದ್ ನೇಗೋ ಎಂಬ ವರಿಗೆ ವಿರೋಧವಾಗಿ ಬೇರೆಯಾಯಿತು. ಆಗ ಅವನು ಮಾತನಾಡಿ ಆ ಆವಿಗೆಯನ್ನು ಸಾಧಾರಣವಾದ ಉರಿ ಗಿಂತ ಏಳರಷ್ಟು ಹೆಚ್ಚಾಗಿ ಉರಿಹಾಕಬೇಕೆಂದು ಆಜ್ಞಾಪಿ ಸಿದನು.
3:20b.DAN.003.020 ತನ್ನ ಸೈನ್ಯದಲ್ಲಿರುವ ಅತ್ಯಂತ ಬಲಿಷ್ಠರಾ ದವರು ಶದ್ರಕ್, ಮೇಷಕ್, ಅಬೇದ್ನೆಗೋ ಎಂಬವರನ್ನು ಕಟ್ಟಿ, ಉರಿಯುವ ಬೆಂಕಿಯ ಆವಿಗೆಯಲ್ಲಿ ಹಾಕಬೇಕೆಂದು ಆಜ್ಞಾಪಿಸಿದನು.
3:21b.DAN.003.021 ಅವರು ತಮ್ಮ ಶಲ್ಯ, ಇಜಾರು, ಮುಂಡಾಸ ಮೊದಲಾದವುಗಳನ್ನು ಧರಿಸಿಕೊಂಡವರಾಗಿರುವಾಗ ಅವರು ಧಗಧಗನೆ ಉರಿಯುವ ಬೆಂಕಿಯ ಆವಿಗೆಯಲ್ಲಿ ಹಾಕಲ್ಪಟ್ಟರು.
3:22b.DAN.003.022 ಅರಸನ ಆಜ್ಞೆಯು ತೀಕ್ಷ್ಣವಾಗಿಯೂ ಆವಿಗೆಯು ಧಗಧಗನೆ ಉರಿದದ್ದರಿಂದಲೂ ಬೆಂಕಿಯ ಜ್ವಾಲೆಯು ಶದ್ರಕ್ ಮೇಷಕ್ ಅಬೇದ್ನೆಗೋ ಎಂಬವರನ್ನು ಎತ್ತಿಹಾಕಿದ ಆ ಮನುಷ್ಯರನ್ನೇ ಸಂಹರಿಸಿತು.
3:23b.DAN.003.023 ಶದ್ರಕ್ ಮೇಷಕ್ ಅಬೇದ್‌ನೆಗೋ ಈ ಮೂವರು ಕಟ್ಟಲ್ಪಟ್ಟವ ರಾಗಿ ಧಗಧಗನೆ ಉರಿಯುವ ಬೆಂಕಿಯ ಆವಿಗೆಯ ಮಧ್ಯದಲ್ಲಿ ಬಿದ್ದರು.
3:24b.DAN.003.024 ಆಗ ಅರಸನಾದ ನೆಬೂಕದ್ನೆ ಚ್ಚರನು ವಿಸ್ಮಯಗೊಂಡವನಾಗಿ ತ್ವರೆಯಾಗಿ ಎದ್ದು ತನ್ನ ಆಲೋಚನಾಗಾರರ ಸಂಗಡ ಮಾತನಾಡಿ--ನಾವು ಮೂವರು ಮನುಷ್ಯರನ್ನು ಕಟ್ಟಿ ಬೆಂಕಿಯಲ್ಲಿ ಹಾಕಿದೆ ವಲ್ಲವೇ? ಅಂದನು. ಆಗ ಅವರು ಅರಸನಿಗೆ--ಓ ಅರಸನೇ, ಹೌದು, ಸತ್ಯ ಎಂದು ಉತ್ತರಿಸಿದರು.
3:25b.DAN.003.025 ಆಗ ಅರಸನು ಅವರಿಗೆ ಪ್ರತ್ಯುತ್ತರವಾಗಿ--ಇಗೋ, ಕಟ್ಟಲ್ಪಡದ ನಾಲ್ಕು ಮನುಷ್ಯರು ಬೆಂಕಿಯಲ್ಲಿ ನಡೆಯುತ್ತಿ ರುವದನ್ನು ನೋಡುತ್ತೇನೆ; ಅವರಿಗೆ ಯಾವ ಹಾನಿಯೂ ಇಲ್ಲ; ಅಲ್ಲದೆ ನಾಲ್ಕನೆಯವನ ರೂಪವು ದೇವ ಕುಮಾರನ ಹಾಗಿದೆ ಎಂದು ಹೇಳಿದನು.
3:26b.DAN.003.026 ಆ ಮೇಲೆ ನೆಬೂಕದ್ನೆಚ್ಚರನು ಧಗಧಗನೆ ಉರಿಯುತ್ತಿರುವ ಬೆಂಕಿಯ ಆವಿಗೆಯ ಬಾಯಿಯ ಸವಿಾಪಕ್ಕೆ ಬಂದು ಮಾತನಾಡಿ--ಓ ಶದ್ರಕ್ ಮೇಷಕ್ ಅಬೇದ್‌ನೆಗೋ ಎಂಬವರೇ, ಮಹೋನ್ನತ ದೇವರ ಸೇವಕರೇ, ಹೊರಗೆ ಬನ್ನಿರಿ ಎನ್ನಲು ಶದ್ರಕ್ ಮೇಷಕ್ ಅಬೇದ್‌ನೆಗೋ ಎಂಬವರು ಬೆಂಕಿಯೊಳಗಿಂದ ಹೊರಗೆ ಬಂದರು.
3:27b.DAN.003.027 ಆಗ ಪ್ರಧಾನರು ರಾಜ್ಯಪಾಲರು, ಅಧಿಪತಿಗಳು, ಅರಸನ ಆಲೋಚನಾಗಾರರು ಎಲ್ಲರೂ ಒಟ್ಟುಗೂಡಿ ಇವರ ಶರೀರದ ಮೇಲೆ ಬೆಂಕಿಯ ಅಧಿಕಾರವು ಇಲ್ಲದಿ ರುವದನ್ನೂ ಅವರ ತಲೇಕೂದಲುಗಳಲ್ಲಿ ಒಂದಾದರೂ ಸುಡದಿರುವದನ್ನೂ ಅವರ ಅಂಗಿಗಳು ಬದಲಾಗದಿರು ವದನ್ನೂ ಬೆಂಕಿಯ ವಾಸನೆಯೂ ಸಹ ಅವರನ್ನು ಮುಟ್ಟದಿರುವ ಆ ಮನುಷ್ಯರನ್ನು ಕಂಡರು.
3:28b.DAN.003.028 ಆಮೇಲೆ ನೆಬೂಕದ್ನೆಚ್ಚರನು ಮಾತನಾಡಿ--ಶದ್ರಕ್ ಮೇಷಕ್ ಅಬೇದ್‌ನೆಗೂ ಎಂಬವರ ದೇವರಿಗೆ ಸ್ತೋತ್ರ ವಾಗಲಿ. ಆತನು ತನ್ನ ದೂತನನ್ನು ಕಳುಹಿಸಿ ತನ್ನಲ್ಲಿ ನಂಬಿಕೆ ಯಿಟ್ಟಂತ ಅರಸನ ಆಜ್ಞೆಯನ್ನು ವಿಾರಿದಂತಹ ಸ್ವಂತ ದೇವರನ್ನೇ ಹೊರತು ಬೇರೆ ಯಾವ ದೇವರನ್ನೂ ಸೇವಿಸದೆ ಆರಾಧಿಸದೇ ಇರುವ ಹಾಗೆ ತಮ್ಮ ಶರೀರ ವನ್ನು ಒಪ್ಪಿಸಿದಂತೆ ಸೇವಕರುಗಳನ್ನು ರಕ್ಷಿಸಿದ್ದಾನೆ.
3:29b.DAN.003.029 ಆದದರಿಂದ ನಾನು ನಿರ್ಣಯಮಾಡುವದರಿಂದ ಸಕಲ ಪ್ರಜೆ, ಜನಾಂಗ ಮತ್ತು ಭಾಷೆಗಳಲ್ಲಿ ಯಾರು ಶದ್ರಕ್ ಮೇಷಕ್ ಅಬೇದ್‌ನೆಗೋ ಎಂಬವರ ದೇವ ರಿಗೆ ವಿರೋಧವಾಗಿ ದೂಷಣೆ ಮಾಡುವರೋ ಅವರು ತುಂಡುತುಂಡಾಗಿ ಕತ್ತರಿಸಲ್ಪಟ್ಟು ಅವರ ಮನೆಗಳು ತಿಪ್ಪೆಗುಂಡಿಗಳಾಗಿ ಮಾಡಲ್ಪಡುವದು. ಈ ವಿಧವಾಗಿ ರಕ್ಷಿಸುವ ದೇವರು ಇನ್ಯಾರು ಇರುವದಿಲ್ಲ.ಆಗ ಅರಸನು ಶದ್ರಕ್ ಮೇಷಕ್ ಅಬೇದ್‌ನೆಗೋ ಎಂಬ ವರನ್ನು ಬಾಬೆಲ್ ಪ್ರಾಂತ್ಯದಲ್ಲಿ ಉನ್ನತ ಪದವಿಗೆ ತಂದನು.
3:30b.DAN.003.030 ಆಗ ಅರಸನು ಶದ್ರಕ್ ಮೇಷಕ್ ಅಬೇದ್‌ನೆಗೋ ಎಂಬ ವರನ್ನು ಬಾಬೆಲ್ ಪ್ರಾಂತ್ಯದಲ್ಲಿ ಉನ್ನತ ಪದವಿಗೆ ತಂದನು.
4
4:1b.DAN.004.001 ಅರಸನಾದ ನೆಬೂಕದ್ನೆಚ್ಚರನು, ಭೂಲೋಕದಲ್ಲೆಲ್ಲಾ ವಾಸಮಾಡುವ ಎಲ್ಲಾ ಪ್ರಜೆಗಳಿಗೂ ಜನಾಂಗಗಳಿಗೂ ಭಾಷೆಯವರಿಗೂ--ನಿಮಗೆ ಶಾಂತಿಯು ಹೆಚ್ಚಾಗಲಿ.
4:2b.DAN.004.002 ದೇವರು ನನ್ನ ವಿಷಯದಲ್ಲಿ ನಡೆಸಿರುವ ಸೂಚಕ ಕಾರ್ಯಗಳನ್ನೂ ಅದ್ಭುತಗಳನ್ನೂ ಪ್ರಚುರಪಡಿಸಬೇಕೆಂಬದು ನನಗೆ ವಿಹಿತವಾಗಿ ತೋರಿ ಬಂದಿದೆ.
4:3b.DAN.004.003 ಆತನ ಸೂಚಕ ಕಾರ್ಯಗಳು ಎಷ್ಟೋ ದೊಡ್ಡವುಗಳು! ಆತನ ಅದ್ಭುತ ಗಳು ಪರಾಕ್ರಮವಾದವುಗಳು, ಆತನ ರಾಜ್ಯವು ನಿತ್ಯವಾದ ರಾಜ್ಯವು, ಆತನ ಆಡಳಿತವು ತಲತಲಾಂತರ ವಾಗಿರುವಂತದ್ದು.
4:4b.DAN.004.004 ನೆಬೂಕದ್ನೆಚ್ಚರನೆಂಬ ನಾನು ನನ್ನ ಮನೆಯಲ್ಲಿ ಕ್ಷೇಮವಾಗಿಯೂ ನನ್ನ ಅರಮನೆಯಲ್ಲಿ ಸುಖವಾ ಗಿಯೂ ಇರುವಾಗ;
4:5b.DAN.004.005 ನನ್ನನ್ನು ಭಯಪಡಿಸುವಂತೆ ನಾನು ಒಂದು ಕನಸನ್ನು ಕಂಡೆನು. ನನ್ನ ಹಾಸಿಗೆಯ ಮೇಲೆ ಆದ ಯೋಚನೆಗಳು ನನ್ನ ಮನಸ್ಸಿನ ದರ್ಶನ ಗಳು ನನ್ನನ್ನು ಕಳವಳಪಡಿಸಿದವು.
4:6b.DAN.004.006 ಆದದರಿಂದ ನನ್ನ ಕನಸಿನ ಅರ್ಥವನ್ನು ನನಗೆ ತಿಳಿಸುವದಕ್ಕೋಸ್ಕರ ಬಾಬೆಲಿನ ಸಕಲ ಜ್ಞಾನಿಗಳನ್ನು ನನ್ನ ಮುಂದೆ ತರಬೇಕೆಂದು ಆಜ್ಞಾಪಿಸಿದೆನು.
4:7b.DAN.004.007 ಆಗ ಮಂತ್ರಗಾರರು, ಜೋತಿಷ್ಯರು, ಕಸ್ದೀಯರು, ಶಕುನಗಾರರು ಒಳಗೆ ಬಂದರು; ನಾನು ಕನಸನ್ನು ಅವರಿಗೆ ತಿಳಿಸಿದೆನು; ಆದರೆ ಅವರು ಅದರ ಅರ್ಥವನ್ನು ನನಗೆ ತಿಳಿಸಲಿಲ್ಲ.
4:8b.DAN.004.008 ಕಡೆಯಲ್ಲಿ ನನ್ನ ದೇವರ ಹೆಸರಿನ ಹಾಗೆಯೂ ಬೇಲ್ತೆಶಚ್ಚರನೆಂಬ ಹೆಸರುಳ್ಳವನಾಗಿಯೂ ಪರಿಶುದ್ಧ ದೇವರ ಆತ್ಮವನ್ನು ಹೊಂದಿದವನಾಗಿಯೂ ಇರುವ ದಾನಿಯೇಲನು ನನ್ನ ಮುಂದೆ ಬಂದನು; ಅವನಿಗೆ ನಾನು ಕನಸನ್ನು ತಿಳಿಸಿ ಹೇಳಿದ್ದೇನಂದರೆ--
4:9b.DAN.004.009 ಓ ಮಂತ್ರ ಗಾರರ ಯಜಮಾನನಾದ ಬೇಲ್ತೆಶಚ್ಚರನೇ, ನಿನ್ನಲ್ಲಿ ಪರಿಶುದ್ಧ ದೇವರ ಆತ್ಮವಿರುವದೆಂದೂ ಯಾವ ರಹ ಸ್ಯವೂ ನಿನ್ನನ್ನು ಕಳವಳಪಡಿಸದೆಂದೂ ನಾನು ಬಲ್ಲೆನು; ನಾನು ಕಂಡ ಕನಸಿನ ದರ್ಶನವನ್ನೂ ಅದರ ಅರ್ಥ ವನ್ನೂ ನೀನು ನನಗೆ ಹೇಳು.
4:10b.DAN.004.010 ನನ್ನ ಹಾಸಿಗೆಯಲ್ಲಿ ಉಂಟಾದ ನನ್ನ ಮನಸ್ಸಿನ ದರ್ಶನಗಳು--ನಾನು ನೋಡಲಾಗಿ ಇಗೋ, ಭೂಮಧ್ಯದಲ್ಲಿ ಒಂದು ಬಹಳ ಎತ್ತರವಾದ ಮರವು ಇತ್ತು.
4:11b.DAN.004.011 ಆ ಮರವು ಬೆಳೆದು ಬಲವಾಯಿತು; ಅದರ ಎತ್ತರವು ಆಕಾಶಕ್ಕೂ ಅದು ಭೂಲೋಕದ ಕಟ್ಟಕಡೆಯವರೆಗೂ ಕಾಣಿಸುತ್ತಿತ್ತು.
4:12b.DAN.004.012 ಅದರ ಎಲೆಗಳು ಅಂದವಾಗಿದ್ದವು, ಅದರ ಫಲವು ಬಹಳವಾಗಿತ್ತು; ಅದರಲ್ಲಿ ಎಲ್ಲರಿಗೂ ಆಹಾರವಿತ್ತು; ಬಯಲು ಮೃಗಗಳಿಗೆ ಅದರ ಕೆಳಗೆ ನೆರಳಿತ್ತು; ಆಕಾಶದ ಪಕ್ಷಿಗಳು ಅದರ ಕೊಂಬೆಗಳಲ್ಲಿ ವಾಸಿಸುತ್ತಿದ್ದವು, ಎಲ್ಲಾ ಜೀವಿಗಳಿಗೂ ಅದರಿಂದಲೇ ಆಹಾರ ಇರುತ್ತಿತ್ತು.
4:13b.DAN.004.013 ನನ್ನ ಹಾಸಿಗೆಯ ಮೇಲೆ ನನ್ನ ಮನಸ್ಸಿನ ದರ್ಶನ ಗಳನ್ನು ನಾನು ನೋಡಲಾಗಿ; ಇಗೋ, ಒಬ್ಬ ಪಾಲಕನು ಮತ್ತು ಪರಿಶುದ್ಧನೊಬ್ಬನು ಪರಲೋಕದಿಂದ ಇಳಿದು ಬಂದನು.
4:14b.DAN.004.014 ಅವನು ಗಟ್ಟಿಯಾಗಿ ಕೂಗಿ--ಮರವನ್ನು ಕಡಿದು ಅದರ ಕೊಂಬೆಗಳನ್ನು ಕತ್ತರಿಸಿ ಅದರ ಎಲೆ ಗಳನ್ನು ಉದುರಿಸಿ ಅದರ ಫಲವನ್ನು ಚದರಿಸಿ ಮೃಗಗಳು ಅದರ ಕೆಳಗಿನಿಂದಲೂ ಪಕ್ಷಿಗಳು ಅದರ ಕೊಂಬೆ ಗಳಿಂದಲೂ ಹೋಗಿ ಬಿಡಲಿ.
4:15b.DAN.004.015 ಆದಾಗ್ಯೂ ಅದರ ಬೇರಿನ ಮೋಟನ್ನು ಕಬ್ಬಿಣ, ಹಿತ್ತಾಳೆಗಳ ಕಟ್ಟುಳ್ಳದ್ದ ನ್ನಾಗಿ ಮಾಡಿ ಭೂಮಿಯಲ್ಲಿಯೂ ಬಯಲಿನ ಎಳೆಯ ಹುಲ್ಲಿನಲ್ಲಿಯೂ ಬಿಡಿರಿ; ಅದು ಆಕಾಶದ ಮಂಜಿನಿಂದ ತೇವವಾಗಲಿ; ಅದರ ಪಾಲು ಮೃಗಗಳ ಸಂಗಡ ಭೂಮಿಯ ಹುಲ್ಲಿನಲ್ಲಿರಲಿ.
4:16b.DAN.004.016 ಅವನ ಹೃದಯವು ಮನುಷ್ಯನ ಹೃದಯದಂತೆ ಇರದೆ ಬದಲಾಗಲಿ; ಮೃಗದ ಹೃದಯವು ಅವನಿಗೆ ಕೊಡಲ್ಪಡಲಿ; ಏಳು ಕಾಲಗಳು ಅವನನ್ನು ದಾಟಿಹೋಗಲಿ ಎಂದು ಹೇಳಿದನು.
4:17b.DAN.004.017 ಈ ವಿಷಯವು ಪಾಲಕರ ಕಟ್ಟಡದಿಂದಲೂ ಈ ಸಂಗತಿಯು ಪರಿಶುದ್ಧರ ಮಾತಿನಿಂದಲೂ ಉಂಟಾಯಿತು; ಮಹೋ ನ್ನತನು ಮನುಷ್ಯರ ರಾಜ್ಯದಲ್ಲಿ ಆಳುತ್ತಾನೆಂದೂ ತನ್ನ ಮನಸ್ಸಿಗೆ ಸರಿಯಾದವರಿಗೆ ಅದನ್ನು ಕೊಡುತ್ತಾನೆಂದೂ ಮನುಷ್ಯರಲ್ಲಿ ನೀಚರಾದವರನ್ನು ಅದರ ಮೇಲೆ ನೇಮಿಸುತ್ತಾನೆಂದೂ ಜೀವಂತರಿಗೆ ತಿಳಿಯಬೇಕೆಂದೇ ಸಾರಿದನು.
4:18b.DAN.004.018 ಈ ಕನಸನ್ನು ನೆಬೂಕದ್ನೆಚ್ಚರನೆಂಬ ಅರಸನಾದ ನಾನು ಕಂಡಿದ್ದೇನೆ. ಈಗ ಬೆಲ್ತೆಶಚ್ಚರ ನೆಂಬ ನೀನು ಅದರ ಅರ್ಥವನ್ನು ಹೇಳು. ನನ್ನ ರಾಜ್ಯದಲ್ಲಿರುವ ಸಕಲ ಜ್ಞಾನಿಗಳು ಅದರ ಅರ್ಥವನ್ನು ನನಗೆ ಹೇಳಲು ಶಕ್ತರಾದವರಲ್ಲ. ಆದರೆ ನಿನ್ನಲ್ಲಿ ಪರಿ ಶುದ್ಧ ದೇವರುಗಳ ಆತ್ಮವು ಇರುವದರಿಂದ ನೀನು ಹೇಳಲು ಸಾಧ್ಯವಾಯಿತು.
4:19b.DAN.004.019 ಆಗ ಬೆಲ್ತೆಶಚ್ಚರನೆಂಬ ಹೆಸರುಳ್ಳ ದಾನಿಯೇಲನು ಒಂದು ಗಳಿಗೆ ವಿಸ್ಮಿತನಾಗಿ ತನ್ನ ಆಲೋಚನೆಗಳಲ್ಲಿ ಕಳವಳಗೊಂಡನು. ಆಗ ಅರಸನು ಮಾತನಾಡಿ-- ಬೆಲ್ತೆಶಚ್ಚರನೇ, ಕನಸಾಗಲಿ ಅದರ ಅರ್ಥವಾಗಲಿ ನಿನ್ನನ್ನು ಕಳವಳಪಡಿಸದಿರಲಿ ಅಂದನು. ಆಗ ಬೆಲ್ತೆಶ ಚ್ಚರನು ಪ್ರತ್ಯುತ್ತರವಾಗಿ--ನನ್ನ ಒಡೆಯನೇ, ಆ ಕನಸು ನಿನ್ನ ವೈರಿಗಳಿಗೂ ಅದರ ಅರ್ಥವು ನಿನ್ನ ಶತ್ರುಗಳಿಗೂ ಆಗಲಿ.
4:20b.DAN.004.020 ನೀನು ಕಂಡ ಮರವು ಬೆಳೆದು ಬಲವಾ ದದ್ದೂ ಅದರ ಎತ್ತರವು ಆಕಾಶಕ್ಕೂ ಅದರ ದೃಷ್ಟಿಯು ಭೂಮಿಯ ಎಲ್ಲಾ ಕಡೆಯವರೆಗೂ ಇವೆ;
4:21b.DAN.004.021 ಅದರ ಎಲೆಗಳು ಅಂದವಾಗಿದ್ದವು, ಫಲವು ಬಹಳವಾಗಿತ್ತು, ಅದರಲ್ಲಿ ಎಲ್ಲರಿಗೂ ಆಹಾರ ಇತ್ತು; ಅದರ ಕೆಳಗೆ ಬಯಲಿನ ಮೃಗಗಳು ವಾಸಮಾಡಿದ್ದವು; ಅದರ ಕೊಂಬೆಗಳಲ್ಲಿ ಆಕಾಶದ ಪಕ್ಷಿಗಳು ನಿವಾಸಮಾಡಿದ್ದವು.
4:22b.DAN.004.022 ಓ ಅರಸನೇ, ಆ ಮರವು ನೀನೇ ಆಗಿರುವಿ, ನೀನು ಬೆಳೆದು ಬಲವಾಗಿರುವಿ; ಹೌದು, ನಿನ್ನ ಮಹತ್ತು ಬೆಳೆದು ಆಕಾಶಕ್ಕೂ ನಿನ್ನ ಅಧಿಕಾರವು ಭೂಮಿಯ ಅಂತ್ಯದ ವರೆಗೂ ಮುಟ್ಟುವದು.
4:23b.DAN.004.023 ಆಗ ಪಾಲಕನು ಮತ್ತು ಪರಿಶುದ್ಧನಾದ ಒಬ್ಬನು ಪರಲೋಕದಿಂದ ಇಳಿದು ಬಂದು--ಮರವನ್ನು ಕಡಿದು ನಾಶಮಾಡಿರಿ; ಆದರೆ ಅದರ ಬೇರಿನ ಮೋಟನ್ನು ಕಬ್ಬಿಣ ಮತ್ತು ಕಂಚುಗಳ ಕಟ್ಟುಳ್ಳದ್ದಾಗಿ ಭೂಮಿಯಲ್ಲಿಯೂ ಬಯಲಿನ ಎಳೇ ಹುಲ್ಲಿನಲ್ಲಿಯೂ ಬಿಡಿರಿ. ಅದು ಆಕಾಶದ ಮಂಜಿನಿಂದ ತೇವವಾಗಲಿ; ಏಳು ಕಾಲಗಳು ಕಳೆಯುವ ತನಕ ಅದರ ಪಾಲು ಕಾಡು ಮೃಗಗಳ ಸಹವಾಸದ ಗತಿಯಂತೆ ಬರಲಿ ಎಂದು ಸಾರುವದನ್ನು ಅರಸನಾದ ನೀನು ನೋಡಿದೆಯಲ್ಲಾ.
4:24b.DAN.004.024 ಓ ಅರಸನೇ, ಇದರ ಅರ್ಥವು ಏನಂದರೆ, ನನ್ನ ಒಡೆಯನಾದ ಅರಸನ ಮೇಲೆ ಬಂದಂಥ ಮಹೋನ್ನತನ ನಿರ್ಣಯವು ಹೀಗಿದೆ.
4:25b.DAN.004.025 ಅವರು ನಿನ್ನನ್ನು ಮನುಷ್ಯರೊಳಗಿಂದ ತಳ್ಳಿ ಬಿಡುವರು; ನಿನ್ನ ನಿವಾಸವು ಕಾಡುಮೃಗಗಳ ಸಂಗಡ ಇರುವದು; ನಿನಗೆ ಎತ್ತುಗಳ ಸಂಗಡ ಹುಲ್ಲನ್ನು ಮೇಯಿಸುವರು. ಆಕಾಶದ ಮಂಜಿನಿಂದ ನಿನ್ನನ್ನು ತೇವ ಮಾಡುವರು. ಮಹೋನ್ನತನು ಮನುಷ್ಯರ ರಾಜ್ಯವನ್ನು ಆಳುವನೆಂದೂ ತನ್ನ ಮನಸ್ಸಿಗೆ ಸರಿಬಂದ ವರಿಗೆ ಅದನ್ನು ಕೊಡುತ್ತಾನೆಂದೂ ನೀನು ತಿಳಿಯುವ ವರೆಗೂ ಆ ಏಳು ಕಾಲಗಳು ಕಳೆದು ಹೋಗುವವು.
4:26b.DAN.004.026 ಆ ಮರದ ಬೇರಿನ ಮೋಟನ್ನು ಉಳಿಸಬೇಕೆಂದು ಅವರು ಆಜ್ಞೆ ಮಾಡಿದ್ದರಲ್ಲಿ ಅಂದರೆ ಪರಲೋಕವು ಆಳುತ್ತದೆಂದು ನೀನು ತಿಳಿದುಕೊಂಡ ಮೇಲೆ ನಿನ್ನ ರಾಜ್ಯವು ನಿನಗೆ ಸ್ಥಿರವಾಗುವದು.
4:27b.DAN.004.027 ಆದದರಿಂದ ಓ ಅರಸನೇ, ನನ್ನ ಆಲೋಚನೆಯು ನಿನಗೆ ಸಮ್ಮತಿ ಯಾಗಿ ನಿನ್ನ ಪಾಪಗಳನ್ನು ನೀತಿಯಿಂದ ಅಳಿಸಿ ನಿನ್ನ ಅನ್ಯಾಯಗಳನ್ನು ಬಡವರಿಗೆ ದಯೆ ತೋರಿಸುವದ ರಿಂದ ಬಿಟ್ಟುಬಿಡು. ಒಂದು ವೇಳೆ ಇದರಿಂದ ನಿನ್ನ ನೆಮ್ಮದಿಯು ಹೆಚ್ಚಾಗಬಹುದು.
4:28b.DAN.004.028 ಅರಸನಾದ ನೆಬೂಕದ್ನೆಚ್ಚರನಿಗೆ ಇದೆಲ್ಲವೂ ಸಂಭ ವಿಸಿತು.
4:29b.DAN.004.029 ಹನ್ನೆರಡು ತಿಂಗಳಾದ ಮೇಲೆ ಅವನು ಬಾಬೆಲಿನ ರಾಜ್ಯದ ಅರಮನೆಯಲ್ಲಿ ತಿರುಗಾಡಿದನು.
4:30b.DAN.004.030 ಆಗ ಅರಸನು ಮಾತನಾಡಿ ಹೇಳಿದ್ದೇನಂದರೆ--ನಾನು ನನ್ನ ಪರಾಕ್ರಮದ ಬಲದಿಂದ ನನ್ನ ಮಹಿ ಮೆಯ ಕೀರ್ತಿಗಾಗಿ ಕಟ್ಟಿಸಿದ ಮಹಾಬಾಬೆಲು ಇದ ಲ್ಲವೇ ಅಂದನು.
4:31b.DAN.004.031 ಈ ಮಾತು ಅರಸನ ಬಾಯಿಯಲ್ಲಿ ಇರುವಾಗಲೇ ಪರಲೋಕದಿಂದ ಒಂದು ಶಬ್ದವು ಉಂಟಾಯಿತು; ಏನಂದರೆ--ಓ ಅರಸನಾದ ನೆಬೂಕದ್ನೆ ಚ್ಚರನೇ, ನಿನಗೆ ಹೇಳುವದೇನಂದರೆ, ನಿನ್ನ ರಾಜ್ಯವು ನಿನ್ನನ್ನು ಬಿಟ್ಟು ಹೋಯಿತು.
4:32b.DAN.004.032 ಅವರು ನಿನ್ನನ್ನು ಮನುಷ್ಯರೊಳಗಿಂದ ತಳ್ಳಿಬಿಡುವರು. ನಿನ್ನ ನಿವಾಸವು ಕಾಡುಮೃಗಗಳ ಸಂಗಡ ಇರುವದು, ನಿನಗೆ ಎತ್ತುಗಳ ಹಾಗೆ ಹುಲ್ಲನ್ನು ಮೇಯಿಸುವರು. ಮಹೋ ನ್ನತನು ಮನುಷ್ಯರ ರಾಜ್ಯವನ್ನಾಳುವನೆಂದೂ ತನ್ನ ಮನಸ್ಸಿಗೆ ಸರಿಬಂದವರಿಗೆ ಅದನ್ನು ಕೊಡುವೆನೆಂದೂ ನೀನು ತಿಳಿಯುವಷ್ಟರಲ್ಲಿ ಏಳು ಕಾಲಗಳು ನಿನ್ನನ್ನು ದಾಟಿ ಹೋಗುವವು.
4:33b.DAN.004.033 ಅದೇ ಗಳಿಗೆಯಲ್ಲಿ ಈ ಸಂಗತಿಯು ನೆಬೂಕದ್ನೆಚ್ಚರನಲ್ಲಿ ನೆರವೇರಿತು. ಅವನು ಮನುಷ್ಯ ರಿಂದ ತಳ್ಳಲ್ಪಟ್ಟು ಎತ್ತುಗಳಂತೆ ಹುಲ್ಲು ಮೇಯುತ್ತಿದ್ದನು. ಕೊನೆಗೆ ಅವನ ಕೂದಲು ಹದ್ದಿನ ಗರಿಗಳಂತೆಯೂ ಅವನ ಉಗುರುಗಳು ಪಕ್ಷಿಗಳ ಉಗುರುಗಳ ಹಾಗೂ ಬೆಳೆಯುವ ವರೆಗೆ ಅವನ ಶರೀರವು ಆಕಾಶದ ಮಂಜಿ ನಿಂದ ತೇವವಾಯಿತು.
4:34b.DAN.004.034 ಆ ಕೊನೆಯ ದಿನಗಳಲ್ಲಿ ನೆಬೂಕದ್ನೆಚ್ಚರನಾದ ನಾನು ನನ್ನ ಕಣ್ಣುಗಳನ್ನು ಪರ ಲೋಕದ ಕಡೆಗೆ ಎತ್ತಿದೆನು; ನನ್ನ ತಿಳುವಳಿಕೆ ನನಗೆ ತಿರುಗಿ ಬಂತು; ಆಗ ನಾನು ಮಹೋನ್ನತನನ್ನು ಸ್ತುತಿಸಿ ನಿರಂತರವಾಗಿ ಜೀವಿಸುವಾತನೂ ನಿತ್ಯವಾದ ಆಳ್ವಿಕೆ ಯನ್ನು ಆಳುವಾತನನ್ನು ತಲತಲಾಂತರಗಳ ವರೆಗೂ ರಾಜ್ಯ ಉಳ್ಳಾತನನ್ನು ಹೊಗಳಿ ಘನಪಡಿಸಿದೆನು.
4:35b.DAN.004.035 ಭೂ ನಿವಾಸಿಗಳೆಲ್ಲರೂ ಏನೂ ಇಲ್ಲದ ಹಾಗೆ ಎಣಿಸಲ್ಪಟ್ಟಿ ದ್ದಾರೆ; ಆತನು ಪರಲೋಕದ ಸೈನ್ಯದಲ್ಲಿಯೂ ಭೂ ನಿವಾಸಿಗಳಲ್ಲಿಯೂ ತನ್ನ ಚಿತ್ತದ ಪ್ರಕಾರವೇ ಮಾಡು ತ್ತಾನೆ. ಯಾರೂ ಆತನ ಹಸ್ತವನ್ನು ಹಿಂತೆಗೆಯಲಾರರು; ನೀನು ಏನು ಮಾಡುತ್ತಿರುವಿ ಎಂದು ಆತನಿಗೆ ಯಾರೂ ಕೇಳಲಾರರು.
4:36b.DAN.004.036 ಇದೇ ಸಮಯದಲ್ಲಿ ನನ್ನ ಬುದ್ದಿಯು ನನಗೆ ತಿರುಗಿ ಬಂತು. ನನ್ನ ರಾಜ್ಯದ ಮಹಿಮೆಗಾಗಿ ನನ್ನ ಘನವೂ ನನ್ನ ತೇಜಸ್ಸೂ ತಿರಿಗಿ ಬಂದವು; ನನ್ನ ಆಲೋಚನೆ ಗಾರರೂ ನನ್ನ ಪ್ರಭುಗಳೂ ನನ್ನನ್ನು ಹುಡುಕಿದರು. ನಾನು ನನ್ನ ರಾಜ್ಯದಲ್ಲಿ ಸ್ಥಾಪಿಸಲ್ಪಟ್ಟು ನನಗೆ ವಿಶೇಷವಾದ ಮಹತ್ತು ಕೂಡಿಸಲ್ಪಟ್ಟಿತು.ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕದ ಅರಸನನ್ನು ಸ್ತುತಿಸಿ, ಹೆಚ್ಚಿಸಿ, ಘನಪಡಿಸುತ್ತೇನೆ; ಆತನ ಕ್ರಿಯೆಗಳೆಲ್ಲಾ ಸತ್ಯವೇ; ಆತನ ಮಾರ್ಗಗಳು ನ್ಯಾಯವೇ; ಗರ್ವದಲ್ಲಿ ನಡೆಯುವವರನ್ನು ಆತನೇ ತಗ್ಗಿಸಬಲ್ಲನು.
4:37b.DAN.004.037 ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕದ ಅರಸನನ್ನು ಸ್ತುತಿಸಿ, ಹೆಚ್ಚಿಸಿ, ಘನಪಡಿಸುತ್ತೇನೆ; ಆತನ ಕ್ರಿಯೆಗಳೆಲ್ಲಾ ಸತ್ಯವೇ; ಆತನ ಮಾರ್ಗಗಳು ನ್ಯಾಯವೇ; ಗರ್ವದಲ್ಲಿ ನಡೆಯುವವರನ್ನು ಆತನೇ ತಗ್ಗಿಸಬಲ್ಲನು.
5
5:1b.DAN.005.001 ಅರಸನಾದ ಬೆಲ್ಯಚ್ಚರನು ತನ್ನ ಪ್ರಭುಗಳಲ್ಲಿ ಸಾವಿರ ಮಂದಿಗೆ ದೊಡ್ಡ ಔತಣವನ್ನು ಮಾಡಿಸಿ, ಆ ಸಾವಿರ ಮಂದಿಯ ಮುಂದೆ ಅವನು ದ್ರಾಕ್ಷಾರಸವನ್ನು ಕುಡಿದನು.
5:2b.DAN.005.002 ಆ ದ್ರಾಕ್ಷಾರಸವನ್ನು ರುಚಿಸುತ್ತಿರುವಾಗ ಬೆಲ್ಯಚ್ಚರನು ತನ್ನ ತಂದೆಯಾದ ನೆಬೂಕದ್ನೆಚ್ಚರನು ಯೆರೂಸಲೇಮಿನ ದೇವಾಲಯ ದೊಳಗಿಂದ ತಂದ ಬೆಳ್ಳಿಬಂಗಾರಗಳ ಪಾತ್ರೆಗಳಲ್ಲಿ ಅರಸನೂ ಅವನ ಪ್ರಭುಗಳೂ ಅವನ ಪತ್ನಿ ಮತ್ತು ಉಪಪತ್ನಿಯರು ಅವುಗಳಲ್ಲಿ ಕುಡಿಯುವ ಹಾಗೆ ತರಲು ಆಜ್ಞಾಪಿಸಿದನು.
5:3b.DAN.005.003 ಆಗ ಅವರು ಯೆರೂಸಲೇಮಿನ ದೇವಾಲಯದೊಳಗಿಂದ ತೆಗೆದ ಬಂಗಾರದ ಪಾತ್ರೆ ಗಳನ್ನು ತಂದರು. ಅರಸನೂ ಅವನ ಪ್ರಭುಗಳೂ ಪತ್ನಿ ಮತ್ತು ಉಪಪತ್ನಿಯರೂ ಅವುಗಳಲ್ಲಿ ಕುಡಿದರು.
5:4b.DAN.005.004 ಅವರು ದ್ರಾಕ್ಷಾರಸವನ್ನು ಕುಡಿದು ಬಂಗಾರ, ಬೆಳ್ಳಿ, ಕಂಚು, ಕಬ್ಬಿಣ, ಮರ ಮತ್ತು ಕಲ್ಲಿನ ದೇವರುಗಳನ್ನು ಹೊಗಳತೊಡಗಿದರು.
5:5b.DAN.005.005 ಅದೇ ಸಮಯದಲ್ಲಿ ಒಬ್ಬ ಮನುಷ್ಯನ ಹಸ್ತವು ಬಂದು ದೀಪಸ್ತಂಭಕ್ಕೆ ಎದುರಾಗಿ ಅರಮನೆಯ ಗೋಡೆಯ ಮೇಲೆ ಸುಣ್ಣದಲ್ಲಿ ಬರೆದವು; ಅರಸನು ಆ ಬರೆಯುವ ಕೈಭಾಗವನ್ನು ನೋಡಿದನು.
5:6b.DAN.005.006 ಆಗ ಅರಸನ ಮುಖವು ಕಳೆಗುಂದಿತು, ಅವನ ಆಲೋಚನೆಗಳು ಅವನನ್ನು ಕಳವಳಪಡಿಸಿದವು. ಅವನ ನಡುವಿನ ಕೀಲುಗಳು ಸಡಿಲವಾದವು. ಅವನ ಮೊಣಕಾಲುಗಳು ಒಂದಕ್ಕೊಂದು ಬಡಿದುಕೊಂಡವು.
5:7b.DAN.005.007 ಆಗ ಅರಸನು ಗಟ್ಟಿಯಾಗಿ ಕಿರುಚಿ ಜ್ಯೋತಿಷ್ಯರನ್ನೂ ಕಸ್ದೀಯರನ್ನೂ ಶಕುನರನ್ನೂ ಕರೆಸಿ ಬಾಬೆಲಿನ ಜ್ಞಾನಿ ಗಳಿಗೆ ಹೇಳಿದ್ದೇನಂದರೆ--ಯಾವನೂ ಈ ಬರಹವನ್ನು ಓದಿ ಅದರ ಅರ್ಥವನ್ನು ನನಗೆ ತಿಳಿಸುವನೋ ಅವರಿಗೆ ಧೂಮ್ರವಸ್ತ್ರವನ್ನು ಹೊದಿಸಿ ಅವನ ಕೊರಳಿಗೆ ಚಿನ್ನದ ಹಾರವನ್ನು ಹಾಕಿ ರಾಜ್ಯದ ಮೂರನೆಯ ಅಧಿಕಾರಿ ಯಾಗಿ ಮಾಡುವೆನು ಅಂದನು.
5:8b.DAN.005.008 ಆಗ ಅರಸನ ಎಲ್ಲಾ ಜ್ಞಾನಿಗಳು ಒಳಗೆ ಬಂದರು. ಆದರೆ ಆ ಬರಹ ವನ್ನು ಓದಲೂ ಅದರ ಅರ್ಥವನ್ನು ಅರಸನಿಗೆ ತಿಳಿ ಸಲೂ ಅವರಿಗೆ ಆಗದೆಹೋಯಿತು.
5:9b.DAN.005.009 ಆಗ ಅರಸ ನಾದ ಬೇಲ್ಯಚ್ಚರನು ಬಹಳವಾಗಿ ಕಳವಳಪಟ್ಟನು, ಅವನ ಮುಖವು ಕಳೆಗುಂದಿತು. ಅವನ ಪ್ರಭುಗಳು ವಿಸ್ಮಯಗೊಂಡರು.
5:10b.DAN.005.010 ಆಗ ಅರಸನ ಮತ್ತು ಅವನ ಪ್ರಭುಗಳ ಮಾತುಗಳಿಗಾಗಿ ರಾಣಿಯು ಔತಣದ ಮನೆಗೆ ಬಂದು ಮಾತನಾಡಿ ಹೇಳಿದ್ದೇನಂದರೆ--ಓ ಅರಸನೇ, ನಿರಂತರವಾಗಿ ಬಾಳು. ನಿನ್ನ ಆಲೋ ಚನೆಗಳು ನಿನ್ನನ್ನು ಕಳವಳಪಡಿಸದಿರಲಿ; ನಿನ್ನ ಮುಖವು ಕಳೆಗುಂದದಿರಲಿ;
5:11b.DAN.005.011 ನಿನ್ನ ರಾಜ್ಯದಲ್ಲಿ ಪರಿಶುದ್ಧ ದೇವರುಗಳ ಆತ್ಮವುಳ್ಳ ಒಬ್ಬ ಮನುಷ್ಯನಿದ್ದಾನೆ; ದೇವ ರುಗಳ ಜ್ಞಾನಕ್ಕೆ ಸಮಾನವಾದ ಜ್ಞಾನವೂ ವಿವೇಕವೂ ಬುದ್ಧಿಯೂ ಪ್ರಕಾಶವೂ ನಿನ್ನ ತಂದೆಯ ಕಾಲದಲ್ಲಿ ಅವನೊಳಗೆ ಕಂಡುಬಂದವು. ನಿನ್ನ ತಂದೆಯಾದ ನೆಬೂಕದ್ನೆಚ್ಚರ ಅರಸನು ಅವನನ್ನು ಮಂತ್ರಗಾರರಿಗೂ ಜ್ಯೋತಿಷ್ಯರಿಗೂ ಕಸ್ದೀಯರಿಗೂ ಶಕುನಗಾರರಿಗೂ ಅಧಿಕಾರಿಯನ್ನಾಗಿ ನೇಮಿಸಿದನು.
5:12b.DAN.005.012 ಬೆಲ್ಶೆಚ್ಚರನೆಂಬ ಹೆಸರನ್ನು ಅರಸನಿಂದ ಪಡೆದ ಆ ದಾನಿಯೇಲನಲ್ಲಿ ಕನಸುಗಳ ಅರ್ಥವನ್ನು ಹೇಳುವದಕ್ಕೂ ಕಠಿಣವಾದ ಸಂಗತಿಗಳನ್ನು ತಿಳಿಸುವದಕ್ಕೂ ಮರ್ಮಗಳನ್ನು ಬಿಚ್ಚುವ ದಕ್ಕೂ ಉತ್ತಮ ಆತ್ಮವೂ ಜ್ಞಾನವೂ ವಿವೇಕವೂ ಸಿಕ್ಕಿ ದವು ಅಂದಳು. ಈಗ ಆ ದಾನಿಯೇಲನನ್ನು ಕರೆಯಿ ಸಿದರೆ ಅವನು ಈ ಬರಹದ ಅರ್ಥವನ್ನು ವಿವರಿಸುವನು ಅಂದಳು.
5:13b.DAN.005.013 ಆಗ ದಾನಿಯೇಲನು ಅರಸನ ಮುಂದೆ ತರಲ್ಪಟ್ಟನು. ಅರಸನು ದಾನಿಯೇಲನಿಗೆ--ಅರಸನಾದ ನನ್ನ ತಂದೆಯು ಯೆಹೂದದಿಂದ ತಂದ ಯೆಹೂದದ ಸೆರೆಯವರಲ್ಲಿ ಒಬ್ಬನಾದ ದಾನಿಯೇಲನು ನೀನೋ?
5:14b.DAN.005.014 ನಿನ್ನಲ್ಲಿ ದೇವರುಗಳ ಆತ್ಮ ಉಂಟೆಂದೂ ಬೆಳಕೂ ಬುದ್ಧಿಯೂ ಉತ್ತಮ ಜ್ಞಾನವೂ ನಿನ್ನಲ್ಲಿ ಇವೆ ಎಂದೂ ನಿನ್ನ ವಿಷಯವಾಗಿ ಕೇಳಿದ್ದೇನೆ.
5:15b.DAN.005.015 ಈಗ ಈ ಬರಹವನ್ನು ಓದುವದಕ್ಕೂ ಅದರ ಅಭಿಪ್ರಾಯವನ್ನು ನನಗೆ ತಿಳಿಸು ವದಕ್ಕೂ ಜ್ಯೋತಿಷ್ಯರಾದ ಜ್ಞಾನಿಗಳು ನನ್ನ ಮುಂದೆ ತರಲ್ಪಟ್ಟಿದ್ದಾರೆ, ಆದರೆ ಇದರ ಅರ್ಥವನ್ನು ಹೇಳಲಾರದೆ ಹೋದರು.
5:16b.DAN.005.016 ನೀನು ಅರ್ಥಗಳನ್ನು ವಿವರಿಸುವದ ರಲ್ಲಿಯೂ ಮರ್ಮಗಳನ್ನು ಬಿಚ್ಚುವದರಲ್ಲಿಯೂ ಸಮರ್ಥನೆಂದು ನಾನು ನಿನ್ನ ವಿಷಯವಾಗಿ ಕೇಳಿದ್ದೇನೆ; ಹೀಗಾದರೆ ಆ ಬರಹವನ್ನು ಓದುವದಕ್ಕೂ ಅದರ ಅರ್ಥವನ್ನು ತಿಳಿಸುವದಕ್ಕೂ ನಿನ್ನಿಂದ ಆದರೆ ನೀನು ಧೂಮ್ರವಸ್ತ್ರ ಧರಿಸಲ್ಪಟ್ಟು ಕೊರಳಿಗೆ ಚಿನ್ನದ ಹಾರ ಹಾಕಿಸಿಕೊಂಡವನಾಗಿ ರಾಜ್ಯದ ಮೂರನೆಯ ಅಧಿಕಾರಿ ಯಾಗುವಿ ಎಂದು ಹೇಳಿದನು.
5:17b.DAN.005.017 ಆಗ ದಾನಿಯೇಲನು ಅರಸನ ಮುಂದೆ--ನಿನ್ನ ದಾನಗಳು ನಿನಗಿರಲಿ, ನಿನ್ನ ಬಹುಮಾನಗಳನ್ನು ಮತ್ತೊಬ್ಬರಿಗೆ ಕೊಡು, ನಾನು ಬರಹವನ್ನು ಓದಿ ಅದರ ಅರ್ಥವನ್ನು ನಿನಗೆ ತಿಳಿಸು ವೆನು ಅಂದನು.
5:18b.DAN.005.018 ಓ ಅರಸನೇ, ಮಹೋನ್ನತನಾದ ದೇವರು ನಿನ್ನ ತಂದೆಯಾದ ನೆಬೂಕದ್ನೆಚ್ಚರನಿಗೆ ರಾಜ್ಯವನ್ನೂ ಮಹತ್ತನ್ನೂ ಕೀರ್ತಿಯನ್ನೂ ಘನ ವನ್ನೂ ಕೊಟ್ಟನು.
5:19b.DAN.005.019 ಆತನು ಅವನಿಗೆ ಕೊಟ್ಟ ಮಹ ತ್ತಿನ ನಿಮಿತ್ತ ಸಕಲ ಪ್ರಜೆಗಳೂ ಜನಾಂಗಗಳೂ ಭಾಷೆಯವರೂ ಅವನ ಮುಂದೆ ಹೆದರಿ ನಡುಗಿ ದರು; ತನಗೆ ಬೇಕಾದವರನ್ನು ಬದುಕಿಸಿ ಬೇಡವಾದ ವರನ್ನು ಕೊಂದನು, ಇಷ್ಟವಿದ್ದವರನ್ನು ಎತ್ತಿ ಇಷ್ಟವಿಲ್ಲ ದವರನ್ನು ಬಿಟ್ಟನು.
5:20b.DAN.005.020 ಆದರೆ ಯಾವಾಗ ಅವನ ಹೃದಯವು ಹೆಚ್ಚಿಸಲ್ಪಟ್ಟಿತೋ ಆಗ ಅವನ ಮನಸ್ಸು ಗರ್ವದಿಂದ ಕಠಿಣವಾಯಿತು. ಅವನು ತನ್ನ ರಾಜ್ಯದ ಸಿಂಹಾಸನದಿಂದ ಇಳಿಸಲ್ಪಟ್ಟನು. ಅವನ ಘನವನ್ನು ಅವನಿಂದ ತೆಗೆದುಹಾಕಿದರು;
5:21b.DAN.005.021 ಅವನು ಮನುಷ್ಯರ ಮಕ್ಕಳೊಳಗಿಂದ ತೆಗೆಯಲ್ಪಟ್ಟನು; ಮಹೋನ್ನತನಾದ ದೇವರು ಮನುಷ್ಯರ ರಾಜ್ಯವನ್ನು ಆಳುತ್ತಾನೆಂದೂ ಅವನು ತಿಳಿಯುವ ತನಕ ಬೇಕಾದವರನ್ನು ಅದಕ್ಕೆ ನೇಮಿಸುತ್ತಾನೆಂದೂ ಅವನು ತಿಳಿಯುವಷ್ಟರಲ್ಲಿ ಅವನ ಹೃದಯವು ಮೃಗಗಳ ಹೃದಯದಂತಾಯಿತು, ಅವನ ನಿವಾಸವು ಕಾಡುಕತ್ತೆಗಳ ಸಂಗಡ ಇತ್ತು; ಅವನಿಗೆ ಎತ್ತುಗಳ ಹಾಗೆ ಹುಲ್ಲನ್ನು ಮೇಯಿಸಿದರು; ಅವನ ಶರೀರವು ಆಕಾಶದ ಮಂಜಿನಿಂದ ತೇವವಾಯಿತು.
5:22b.DAN.005.022 ಅವನ ಮಗನಾದ ಓ ಬೇಲ್ಯಚ್ಚರನೇ--ನೀನು ಇದನ್ನೆಲ್ಲಾ ತಿಳಿದರೂ ನಿನ್ನ ಹೃದಯವನ್ನು ತಗ್ಗಿಸದೆ
5:23b.DAN.005.023 ಪರಲೋಕದ ಕರ್ತನಿಗೆ ವಿರೋಧವಾಗಿ ನಿನ್ನನ್ನು ಹೆಚ್ಚಿಸಿಕೊಂಡಿರುವಿ; ಆತನ ಆಲಯದ ಪಾತ್ರೆಗಳನ್ನು ನಿನ್ನ ಸನ್ನಿಧಿಗೆ ತಂದರು, ಆಗ ನೀನು, ನಿನ್ನ ಪ್ರಭುಗಳು ಮತ್ತು ಪತ್ನಿ ಉಪಪತ್ನಿಯರ ಸಂಗಡ ಅವುಗಳಲ್ಲಿ ದ್ರಾಕ್ಷಾರಸವನ್ನು ಕುಡಿದು ಬುದ್ಧಿ ಕಣ್ಣು ಕಿವಿಗಳಿಲ್ಲದ ಬೆಳ್ಳಿ ಬಂಗಾರ ಕಂಚು ಕಬ್ಬಿಣ ಮರ ಕಲ್ಲುಗಳ ದೇವರುಗಳನ್ನು ಸ್ತುತಿಸಿದಿ; ಆದರೆ ನಿನ್ನ ಪ್ರಾಣವು ಯಾರ ಕೈಯಲ್ಲಿದೆಯೋ ನಿನ್ನ ಸ್ಥಿತಿಗಳು ಯಾರ ಅಧೀನದಲ್ಲಿವೆಯೋ ಆ ದೇವರನ್ನು ಘನಪಡಿಸಲೇ ಇಲ್ಲ.
5:24b.DAN.005.024 ಅದಕ್ಕಾಗಿಯೇ ಆತನಿಂದ ಕಳುಹಿಸಲ್ಪಟ್ಟ ಕೈಯ ಭಾಗವು ಬಂದು ಆ ಬರಹವನ್ನು ಬರೆಯಿತು.
5:25b.DAN.005.025 ಆ ಬರಹವು ಏನಂದರೆ ಮೆನೇ ಮೆನೇ ತೇಕಲ್ ಉಫ ರ್ಸಿನ್,
5:26b.DAN.005.026 ಇದರ ಅರ್ಥವು ಹೀಗಿದೆ--ಮೆನೇ ಅಂದರೆ ದೇವರು ನಿನ್ನ ಆಳ್ವಿಕೆಯ ಕಾಲವನ್ನು ಲೆಕ್ಕಿಸಿ ಕೊನೆ ಗಾಣಿಸಿದ್ದಾನೆ;
5:27b.DAN.005.027 ತೇಕೆಲ್ ಅಂದರೆ ನೀನು ತಕ್ಕಡಿಯಲ್ಲಿ ತೂಗಲ್ಪಟ್ಟು ಕಡಿಮೆಯಾಗಿ ಕಂಡುಬಂದಿರುವಿ.
5:28b.DAN.005.028 ಪೆರೇಸ್ ಅಂದರೆ ನಿನ್ನ ರಾಜ್ಯವು ವಿಭಿನ್ನವಾಗಿ ಮೇದ್ಯಯರಿಗೂ ಪಾರಸೀಯರಿಗೂ ಕೊಡಲ್ಪಟ್ಟಿದೆ ಎಂಬದಾಗಿ ಅರಿಕೆಮಾಡಿದನು.
5:29b.DAN.005.029 ಆಗ ಬೇಲ್ಯಚ್ಚರನು ಆಜ್ಞಾಪಿಸಲು ದಾನಿಯೇಲನಿಗೆ ಧೂಮ್ರ ವಸ್ತ್ರವನ್ನು ಹೊದಿಸಿ, ಅವನ ಕೊರಳಿಗೆ ಹಾರವನ್ನು ಹಾಕಿ, ಇವನು ರಾಜ್ಯದ ಮೂವರು ಅಧಿಕಾರಿಗಳಲ್ಲಿ ಒಬ್ಬನೆಂದು ಸಾರಿ ದನು.
5:30b.DAN.005.030 ಅದೇ ರಾತ್ರಿಯಲ್ಲಿ ಕಸ್ದೀಯರ ಅರಸನಾದ ಬೇಲ್ಯಚ್ಚರನು ಕೊಲ್ಲಲ್ಪಟ್ಟನು.ಮೇದ್ಯಯನಾದ ದಾರ್ಯಾವೆಷನು ಅರವತ್ತೆರಡು ವರುಷದವನಾಗಿ ರಾಜ್ಯವನ್ನು ವಶಪಡಿಸಿಕೊಂಡನು.
5:31b.DAN.005.031 ಮೇದ್ಯಯನಾದ ದಾರ್ಯಾವೆಷನು ಅರವತ್ತೆರಡು ವರುಷದವನಾಗಿ ರಾಜ್ಯವನ್ನು ವಶಪಡಿಸಿಕೊಂಡನು.
6
6:1b.DAN.006.001 ದಾರ್ಯಾವೆಷನು ತನ್ನ ರಾಜ್ಯಭಾರವನ್ನು ನಿರ್ವಹಿಸುವದಕ್ಕೋಸ್ಕರ ನೂರಿಪ್ಪತ್ತು ಮಂದಿ ಪ್ರಧಾನರನ್ನು ಆಯಾ ರಾಜ್ಯದ ಆಯಾ ಭಾಗ ಗಳ ಮೇಲೆ ಅಧಿಕಾರಿಗಳನ್ನು ಇರಿಸಿದನು.
6:2b.DAN.006.002 ಇವರ ಮೇಲೆ ಮೂವರು ದೇಶಾಧಿಪತಿಗಳನ್ನು ನೇಮಿಸುವದು ದಾರ್ಯಾವೆಷನಿಗೆ ಹಿತವೆಂದು ತೋಚಿತು. ಇದರಿಂದ ರಾಜನಿಗೆ ಯಾವ ತೊಂದರೆಯೂ ಇಲ್ಲದೆ ಲೆಕ್ಕಗಳು ಸರಿಯಾಗಿ ಒಪ್ಪಿಸಲ್ಪಡುತ್ತಿದ್ದವು. ಇವರಲ್ಲಿ ದಾನಿಯೇ ಲನು ಮೊದಲನೆಯವನಾಗಿದ್ದನು.
6:3b.DAN.006.003 ಆಗ ಈ ದಾನಿ ಯೇಲನಲ್ಲಿ ಉತ್ತಮ ಆತ್ಮವು ಇರುವದರಿಂದ ಅವನು ಪ್ರಧಾನರಿಗಿಂತಲೂ ದೇಶಾಧಿಪತಿಗಿಂತಲೂ ಶ್ರೇಷ್ಠನಾ ಗಿದ್ದನು. ಅರಸನು ಅವನನ್ನು ಸಮಸ್ತ ರಾಜ್ಯದ ಮೇಲೆ ಅಧಿಕಾರಿಯನ್ನಾಗಿ ನೇಮಿಸಲು ಮನಸ್ಸುಳ್ಳವನಾಗಿದ್ದನು.
6:4b.DAN.006.004 ಹೀಗಿರಲು ಪ್ರಧಾನಿಗಳೂ ದೇಶಾಧಿಪತಿಗಳೂ ರಾಜ್ಯ ಭಾರದ ವಿಷಯವಾಗಿ ದಾನಿಯೇಲನ ವಿರೋಧವಾಗಿ ತಪ್ಪುಹೊರಿಸುವದಕ್ಕೆ ಸಂದರ್ಭ ಹುಡುಕುತ್ತಿದ್ದರು. ಆದರೆ ಅವನು ನಂಬಿಗಸ್ತನಾಗಿದ್ದು ಅವನಲ್ಲಿ ತಪ್ಪು ದೋಷವು ಇಲ್ಲದಿದ್ದದ್ದರಿಂದ ಅವರಿಗೆ ಯಾವ ತಪ್ಪೂ ಸಿಗಲಾರದೆ ಹೋಯಿತು.
6:5b.DAN.006.005 ಆಗ ಆ ಮನುಷ್ಯರು --ಈ ದಾನಿಯೇಲನಿಗೆ ವಿರೋಧವಾಗಿ ಅವನ ದೇವರ ನ್ಯಾಯಪ್ರಮಾಣದಲ್ಲಿ ತಪ್ಪು ಸಿಗುವದೇ ಹೊರತು ನಮಗೆ ಇನ್ನೆಲ್ಲೂ ಸಿಗುವದಿಲ್ಲ ಎಂದು ಅಂದು ಕೊಂಡರು.
6:6b.DAN.006.006 ಆಗ ಪ್ರಧಾನರೂ ದೇಶಾಧಿಪತಿಯೂ ಅರಸನ ಬಳಿ ಕೂಡಿಬಂದು ಹೀಗೆಂದರು--ಅರಸನಾದ ದಾರ್ಯಾವೆಷನೇ, ನಿರಂತರವಾಗಿ ಬಾಳು.
6:7b.DAN.006.007 ರಾಜ್ಯದ ಎಲ್ಲಾ ದೇಶಾಧಿಪತಿಗಳೂ ರಾಜ್ಯಪಾಲರೂ ನಾಯ ಕರೂ ಪ್ರಧಾನರೂ ಆಲೋಚನೆಗಾರರೂ ಒಟ್ಟುಗೂಡಿ ಆಲೋಚಿಸಿದ್ದೇನಂದರೆ--ಓ ಅರಸನೇ, ಯಾರಾದರೂ ಮೂವತ್ತು ದಿವಸಗಳವರೆಗೂ ನಿನ್ನನ್ನು ಬಿಟ್ಟು ಬೇರೆ ಯಾವ ದೇವರಿಗಾಗಲಿ ಮನುಷ್ಯರಿಗಾಗಲಿ ವಿಜ್ಞಾ ಪನೆ ಮಾಡಿದ್ದಾದರೆ ಅಂತವರು ಸಿಂಹದ ಗವಿಯಲ್ಲಿ ಹಾಕಲ್ಪಡುವರೆಂಬ ರಾಜಾಜ್ಞೆಯನ್ನು ವಿಧಿಸಿ, ಸ್ಥಿರ ಕಟ್ಟಳೆ ಯನ್ನು ಕೊಡತಕ್ಕದ್ದು.
6:8b.DAN.006.008 ಓ ರಾಜನೇ, ಈಗ ನೀನು ಈ ನಿಬಂಧನೆಯನ್ನು ವಿಧಿಸಿ ಇದು ಬದಲಾಗದಂತೆ ಮೇದ್ಯಯರ ಮತ್ತು ಪಾರಸೀಯರ ನ್ಯಾಯಪ್ರಮಾಣದ ಪ್ರಕಾರ ಇದು ಬೇರೆಯಾಗದಂತೆ ನಿರ್ಣಯವನ್ನು ರೂಪಿಸಿ ಬರಹಕ್ಕೆ ರುಜುಹಾಕು ಅಂದರು.
6:9b.DAN.006.009 ಆದಕಾರಣ ದಾರ್ಯಾವೆಷನು ಆ ಬರಹಕ್ಕೂ ನಿರ್ಣಯಕ್ಕೂ ರುಜು ಹಾಕಿದನು.
6:10b.DAN.006.010 ಯಾವಾಗ ಬರಹಕ್ಕೆ ರುಜುಹಾಕಿದ್ದಾ ಯಿತ್ತೆಂದು ದಾನಿಯೇಲನಿಗೆ ತಿಳಿಯಿತೋ ಆಗ ಅವನು ತನ್ನ ಮನೆಗೆ ಹೋದನು; ಅವನ ಕೋಣೆಯಲ್ಲಿ ಕಿಟಕಿಗಳು ಯೆರೂಸಲೇಮಿಗೆ ಎದುರಾಗಿ ತೆರೆಯಲ್ಪಟ್ಟಿದ್ದ ರಿಂದ ಅವನು ಮೊದಲು ಮಾಡುತ್ತಿದ್ದ ಪ್ರಕಾರವೇ ದಿನಕ್ಕೆ ಮೂರು ಸಾರಿ ಮೊಣಕಾಲೂರಿ ತನ್ನ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆಯನ್ನೂ ಸ್ತೋತ್ರವನ್ನೂ ಸಲ್ಲಿಸಿ ದನು.
6:11b.DAN.006.011 ಆ ಮೇಲೆ ಆ ಮನುಷ್ಯರೆಲ್ಲಾ ಕೂಡಿ ಬಂದು ದಾನಿಯೇಲನು ತನ್ನ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಮಾಡುತ್ತಿರುವ ದನ್ನು ಕಂಡರು.
6:12b.DAN.006.012 ಅನಂತರ ಅವರು ಹತ್ತಿರ ಬಂದು ಅರಸನ ಮುಂದೆ ರಾಜಾಜ್ಞೆಯ ವಿಷಯವಾಗಿ ಮಾತನಾಡಿ--ಓ ಅರಸನೇ, ಯಾರಾದರೂ ಮೂವತ್ತು ದಿವಸಗಳ ವರೆಗೂ ನಿನ್ನನ್ನು ಬಿಟ್ಟು ಬೇರೆ ಯಾವ ದೇವರಿಗಾಗಲಿ ಮನುಷ್ಯರಿಗಾಗಲಿ ವಿಜ್ಞಾಪನೆ ಮಾಡು ವರೋ ಅವರು ಸಿಂಹದ ಗವಿಯಲ್ಲಿ ಹಾಕಲ್ಪಡುವ ರೆಂಬ ನಿರ್ಣಯಕ್ಕೆ ನೀನು ರುಜುಹಾಕಲಿಲ್ಲವೇ ಅಂದರು. ಅದಕ್ಕೆ ಅರಸನು ಪ್ರತ್ಯುತ್ತರವಾಗಿ--ಮೇದ್ಯ ಯರ ಪಾರಸೀಯರ ಬದಲಾಗದಂತ ನ್ಯಾಯ ಪ್ರಮಾಣದ ಪ್ರಕಾರ ಅದು ಸತ್ಯವೇ ಅಂದನು.
6:13b.DAN.006.013 ಆಗ ಅವರು ಪ್ರತ್ಯುತ್ತರವಾಗಿ ಅರಸನ ಮುಂದೆ--ಯೆಹೂದದ ಸೆರೆಯ ಮಕ್ಕಳಲ್ಲಿ ಒಬ್ಬನಾದ ಆ ದಾನಿಯೇಲನು ಅರಸನಾದ ನಿನ್ನನ್ನಾದರೂ ನೀನು ರುಜುಹಾಕಿದ ನಿರ್ಣಯವನ್ನಾದರೂ ಲಕ್ಷಿಸದೆ ದಿನಕ್ಕೆ ಮೂರು ಸಾರಿ ತನ್ನ ಪ್ರಾರ್ಥನೆಯನ್ನು ಮಾಡುತ್ತಾನೆ ಅಂದರು.
6:14b.DAN.006.014 ಅರಸನು ಯಾವಾಗ ಈ ಮಾತುಗಳನ್ನು ಕೇಳಿದನೋ ಆಗ ತನ್ನಲ್ಲಿಯೇ ಬಹಳವಾಗಿ ಬೇಸರ ಗೊಂಡನು ಮತ್ತು ಅವನನ್ನು ಅದರಿಂದ ತಪ್ಪಿಸ ಬೇಕೆಂದು ತನ್ನ ಹೃದಯದಲ್ಲಿ ತಿಳಿದು ಸೂರ್ಯಾಸ್ತ ಮಾನದ ವರೆಗೂ ಪ್ರಯತ್ನಪಟ್ಟನು.
6:15b.DAN.006.015 ಆಗ ಆ ಮನುಷ್ಯರು ಅರಸನ ಬಳಿಗೆ ಕೂಡಿ ಬಂದು ಅರಸ ನಿಗೆ--ಓ ಅರಸನೇ, ನೀನು ಜಾರಿಗೆ ತಂದಿರುವ ಯಾವ ನಿರ್ಣಯವಾದರೂ ಆಜ್ಞೆಯಾದರೂ ಬದಲಾಯಿಸ ಬಾರದೆಂದು ಮೇದ್ಯಯರ ಮತ್ತು ಪಾರಸೀಯರ ನ್ಯಾಯ ಪ್ರಮಾಣದಲ್ಲಿದೆ ಎಂದು ನಿನಗೆ ತಿಳಿದರಲಿ ಅಂದನು.
6:16b.DAN.006.016 ಆಗ ರಾಜನು ಆಜ್ಞಾಪಿಸಲು ಅವರು ದಾನಿಯೇಲ ನನ್ನು ತಂದು ಸಿಂಹದ ಗವಿಯಲ್ಲಿ ಹಾಕಿದರು. ಅರಸನು ದಾನಿಯೇಲನಿಗೆ--ನೀನು ಯಾವಾಗಲೂ ಪ್ರಾರ್ಥಿ ಸುವ ನಿನ್ನ ದೇವರು ನಿನ್ನನ್ನು ಬಿಡಿಸುವನು ಎಂದು ಹೇಳಿದನು.
6:17b.DAN.006.017 ಬಂಡೆ ತರಿಸಲ್ಪಟ್ಟು ಗುಹೆಯ ಬಾಯಿಯು ಮುಚ್ಚಲ್ಪಟ್ಟಿತು. ಇದಲ್ಲದೆ ದಾನಿಯೇಲನ ವಿಷಯದಲ್ಲಿ ತನ್ನ ಆಲೋಚನೆಯು ಬದಲಾಗದ ಹಾಗೆ ಅರಸನು ತನ್ನ ಮುದ್ರೆಯನ್ನು ಮತ್ತು ತನ್ನ ಪ್ರಭುಗಳ ಮುದ್ರೆಯನ್ನೂ ಅದಕ್ಕೆ ಹಾಕಿದನು.
6:18b.DAN.006.018 ಆ ಮೇಲೆ ಅರಸನು ತನ್ನ ಅರಮನೆಗೆ ಹಿಂತಿರುಗಿ ಉಪವಾಸ ದಿಂದಲೇ ರಾತ್ರಿಯನ್ನು ಕಳೆದನು. ಗಾನ, ವಾದ್ಯಗಳು ಅವನ ಮುಂದೆ ತರಲ್ಪಡಲಿಲ್ಲ; ನಿದ್ರೆಯು ಅವನನ್ನು ಬಿಟ್ಟು ಹೋಯಿತು.
6:19b.DAN.006.019 ಮುಂಜಾನೆಗೆ ಮೊದಲೇ ಅರಸನು ಎದ್ದು ತ್ವರೆಯಾಗಿ ಸಿಂಹಗಳ ಗವಿಯ ಬಳಿಗೆ ಹೋದನು.
6:20b.DAN.006.020 ಗವಿಯ ಹತ್ತಿರ ಬಂದಾಗ ದುಃಖದ ಧ್ವನಿಯಲ್ಲಿ ದಾನಿಯೇಲನ ಕಡೆಗೆ ಕೂಗಿದನು; ಅರಸನು ಮಾತನಾಡಿ ದಾನಿಯೇಲನಿಗೆ--ಜೀವವುಳ್ಳ ದೇವರ ಸೇವಕನಾದ ಓ ದಾನಿಯೇಲನೇ, ನೀನು ಯಾವಾ ಗಲೂ ಸೇವಿಸುವ ಆ ನಿನ್ನ ದೇವರು ನಿನ್ನನ್ನು ಸಿಂಹಗಳಿಂದ ಬಿಡಿಸಲು ಸಮರ್ಥನಾಗಿದ್ದಾನೆಯೇ? ಎಂದು ಕೇಳಿದನು.
6:21b.DAN.006.021 ಆಗ ದಾನಿಯೇಲನು ಅರಸನಿಗೆ--ಓ ಅರಸನೇ, ನೀನು ನಿರಂತರವಾಗಿ ಬಾಳು.
6:22b.DAN.006.022 ನನ್ನ ದೇವರು ತನ್ನ ದೂತನನ್ನು ಕಳುಹಿಸಿ ನನಗೆ ಕೇಡು ಮಾಡದ ಹಾಗೆ ಸಿಂಹಗಳ ಬಾಯಿಗಳನ್ನು ಮುಚ್ಚಿ ಹಾಕಿದ್ದಾನೆ; ಆತನ ಮುಂದೆ ನಾನು ಯಥಾರ್ಥನೆಂದು ತಿಳಿದುಬಂದಿದ್ದೇನೆ. ಓ ಅರಸನೇ, ನಿನ್ನ ಮುಂದೆಯೂ ಸಹ ನಾನು ಯಾರಿಗೂ ಕೇಡುಮಾಡಲಿಲ್ಲ ಎಂದು ಹೇಳಿದನು.
6:23b.DAN.006.023 ಆಗ ಅರಸನು ಅವನ ವಿಷಯದಲ್ಲಿ ಬಹಳ ಸಂತೋಷಪಟ್ಟು ದಾನಿಯೇಲನನ್ನು ಗವಿಯೊಳ ಗಿಂದ ಮೇಲಕ್ಕೆತ್ತಬೇಕೆಂದು ಆಜ್ಞೆ ಮಾಡಿದನು; ಹೀಗೆ ದಾನಿಯೇಲನನ್ನು ಗವಿಯೊಳಗಿಂದ ಮೇಲಕೆತ್ತಿದರು ಮತ್ತು ಅವನು ತನ್ನ ದೇವರಲ್ಲಿ ನಂಬಿಕೆಯಿಟ್ಟದ್ದರಿಂದ ಯಾವ ತರಹ ಹಾನಿಯೂ ಅವನಲ್ಲಿ ಕಾಣಲಿಲ್ಲ.
6:24b.DAN.006.024 ಆಗ ಅರಸನು ಆಜ್ಞಾಪಿಸಲಾಗಿ ದಾನಿಯೇಲನ ಮೇಲೆ ತಪ್ಪುಹೊರಿಸಿದ ಮನುಷ್ಯರನ್ನು ತಂದು ಅವ ರನ್ನೂ ಅವರ ಹೆಂಡತಿ ಮಕ್ಕಳನ್ನೂ ಸಿಂಹಗಳ ಗವಿಯಲ್ಲಿ ಹಾಕಿದರು. ಅವರು ಗವಿಯ ತಳವನ್ನು ಮುಟ್ಟುವದಕ್ಕೆ ಮೊದಲೇ ಸಿಂಹಗಳು ಹಾರಿಬಂದು ಅವರ ಎಲುಬುಗ ಳನ್ನೆಲ್ಲಾ ತುಂಡು ತುಂಡಾಗಿ ಮುರಿದು ಹಾಕಿದವು.
6:25b.DAN.006.025 ಆಗ ಅರಸನಾದ ದಾರ್ಯಾವೆಷನು ಭೂಲೋ ಕದ ಎಲ್ಲಾ ಕಡೆಯಲ್ಲೂ ವಾಸವಾಗಿರುವ ಸಕಲ ಪ್ರಜೆ, ಜನಾಂಗ ಭಾಷೆಗಳವರಿಗೆ ಬರೆದದ್ದೇನಂದರೆ--ನಿಮಗೆ ಸಮಾಧಾನವು ಹೆಚ್ಚಾಗಲಿ.
6:26b.DAN.006.026 ನಾನು ಮಾಡುವ ತೀರ್ಮಾನವೇನಂದರೆ, ನನ್ನ ರಾಜ್ಯದ ಪ್ರತಿಯೊಬ್ಬ ಮನುಷ್ಯರು ದಾನಿಯೇಲನ ದೇವರಿಗೆ ಭಯಭಕ್ತಿ ಯಿಂದ ನಡೆದುಕೊಳ್ಳಬೇಕು. ಯಾಕಂದರೆ ಜೀವವುಳ್ಳ ದೇವರಾಗಿದ್ದು ಎಂದೆಂದಿಗೂ ಸ್ಥಿರವಾದವನು ಆತನೇ. ಆತನ ರಾಜ್ಯವು ನಾಶವಾಗದೆ ಆತನ ಆಳಿಕೆಯು ಶಾಶ್ವತವಾಗಿ ಕೊನೆಯವರೆಗೂ ನಿಲ್ಲುವದು.
6:27b.DAN.006.027 ಆತನೇ ಉದ್ಧರಿಸುವವನೂ ರಕ್ಷಿಸುವವನೂ ಆಗಿದ್ದು ಪರ ಲೋಕದಲ್ಲಿಯೂ ಭೂಲೋಕದಲ್ಲಿಯೂ ಅದ್ಭುತ ಮಹತ್ವಗಳನ್ನು ನಡೆಸುತ್ತಾನೆ; ದಾನಿಯೇಲನನ್ನು ಸಿಂಹ ಗಳ ಸಾಮರ್ಥ್ಯದಿಂದ ಬಿಡಿಸಿದಾತನು ಆತನೇ.ಹೀಗೆ ಈ ದಾನಿಯೇಲನು ದಾರ್ಯಾವೆಷನ ಆಳಿಕೆಯಲ್ಲಿಯೂ ಪಾರಸೀಯನಾದ ಕೋರೇಷನ ಆಳಿಕೆಯಲ್ಲಿಯೂ ಅಭಿವೃದ್ಧಿಯಾಗಿ ಬಾಳಿದನು.
6:28b.DAN.006.028 ಹೀಗೆ ಈ ದಾನಿಯೇಲನು ದಾರ್ಯಾವೆಷನ ಆಳಿಕೆಯಲ್ಲಿಯೂ ಪಾರಸೀಯನಾದ ಕೋರೇಷನ ಆಳಿಕೆಯಲ್ಲಿಯೂ ಅಭಿವೃದ್ಧಿಯಾಗಿ ಬಾಳಿದನು.
7
7:1b.DAN.007.001 ಬಾಬೆಲಿನ ಅರಸನಾದ ಬೇಲ್ಯಚ್ಚರನ ಮೊದಲನೆಯ ವರುಷದಲ್ಲಿ ದಾನಿಯೇಲನು ಹಾಸಿಗೆಯ ಮೇಲೆ ತನ್ನ ಮನಸ್ಸಿನ ಕನಸನ್ನೂ ದರ್ಶನವನ್ನೂ ಕಂಡು; ಆ ಮೇಲೆ ಅವುಗಳನ್ನು ಬರೆದು ಅದರ ತಾತ್ಪರ್ಯವನ್ನು ತಿಳಿಸಿದನು.
7:2b.DAN.007.002 ದಾನಿಯೇಲನು ಮಾತನಾಡಿ--ಇಗೋ, ನಾನು ರಾತ್ರಿ ಕಂಡ ಕನಸಿನಲ್ಲಿ ಚತುರ್ದಿಕ್ಕಿನ ಗಾಳಿಗಳು ಮಹಾ ಸಾಗರದ ಮೇಲೆ ರಭಸವಾಗಿ ಬೀಸುತ್ತಿದ್ದವು.
7:3b.DAN.007.003 ಒಂದಕ್ಕೊಂದು ಬೇರೆ ಬೇರೆಯ ರೂಪದ ನಾಲ್ಕು ದೊಡ್ಡ ಮೃಗಗಳು ಸಮು ದ್ರದೊಳಗಿಂದ ಮೇಲೆ ಬಂದವು.
7:4b.DAN.007.004 ಮೊದಲನೆಯದು ಸಿಂಹದ ಹಾಗಿದ್ದು ಹದ್ದಿನ ರೆಕ್ಕೆಗಳುಳ್ಳದ್ದಾಗಿತ್ತು. ಅದರ ರೆಕ್ಕೆಗಳು ಕೀಳಲ್ಪಟ್ಟು ಅದು ಭೂಮಿಯಿಂದ ಎತ್ತಲ್ಪಟ್ಟು ಮನುಷ್ಯನಂತೆ ಕಾಲೂರಿ ನಿಲ್ಲಿಸಲ್ಪಟ್ಟಿತ್ತು. ಅದಕ್ಕೆ ಮನುಷ್ಯನ ಹೃದಯವು ಕೊಡಲ್ಪಟ್ಟದ್ದನ್ನು ನಾನು ನೋಡಿದೆನು.
7:5b.DAN.007.005 ಇದಲ್ಲದೆ ಇಗೋ, ಇನ್ನೊಂದು ಎರಡ ನೆಯ ಮೃಗವು ಕರಡಿಯ ಹಾಗಿರುವಂಥದ್ದು. ಇದಕ್ಕೆ ಒಂದು ಪಕ್ಕದಲ್ಲಿ ಒಂದು ಹೆಗಲನ್ನು ಮೇಲಕ್ಕೆ ಎತ್ತಿ ಕೊಂಡಿತ್ತು. ಇದರ ಬಾಯಿಯ ಹಲ್ಲುಗಳ ಮಧ್ಯದಲ್ಲಿ ಮೂರು ಪಕ್ಕೆಲುಬುಗಳು ಇದ್ದವು. ಅದಕ್ಕೆ ಅವರು --ಎದ್ದೇಳು ಹೆಚ್ಚು ಮಾಂಸವನ್ನು ತಿನ್ನು ಎಂದು ಹೇಳಿ ದರು.
7:6b.DAN.007.006 ಇದಾದ ಮೇಲೆ ನಾನು ನೋಡಲಾಗಿ ಇಗೋ, ಚಿರತೆಯ ಹಾಗಿರುವ ಇನ್ನೊಂದು (ಮೃಗ); ಇದರ ಬೆನ್ನಿನ ಮೇಲೆ ಪಕ್ಷಿಯ ನಾಲ್ಕು ರೆಕ್ಕೆಗಳು ಇದ್ದವು; ಈ ಮೃಗಕ್ಕೆ ನಾಲ್ಕು ತಲೆಗಳು ಸಹ ಇದ್ದವು. ಇದಕ್ಕೆ ಅಧಿಕಾರವು ಕೊಡಲ್ಪಟ್ಟಿತು.
7:7b.DAN.007.007 ತರುವಾಯ ರಾತ್ರಿಯ ದರ್ಶನದಲ್ಲಿ ನಾನು ನೋಡಲಾಗಿ ಇಗೋ, ನಾಲ್ಕ ನೆಯ ಮೃಗವು ಭಯಂಕರವಾದದ್ದೂ ಘೋರವಾ ದದ್ದೂ ಬಹಳ ಬಲವುಳ್ಳದ್ದೂ ಆಗಿತ್ತು; ಅದಕ್ಕೆ ಕಬ್ಬಿಣದ ದೊಡ್ಡ ಹಲ್ಲುಗಳಿದ್ದವು. ಅದು ತಿಂದು ತುಂಡು ತುಂಡು ಮಾಡಿ ಮಿಕ್ಕಿದ್ದನ್ನು ತನ್ನ ಕಾಲುಗಳ ಕೆಳಗೆ ಹಾಕಿ ತುಳಿಯಿತು. ಅದು ಮೊದಲಿನ ಎಲ್ಲಾ ಮೃಗಗಳಿಗಿಂತ ವ್ಯತ್ಯಾಸವುಳ್ಳದ್ದು ಮತ್ತು ಹತ್ತು ಕೊಂಬುಗಳುಳ್ಳದ್ದು ಆಗಿತ್ತು.
7:8b.DAN.007.008 ಆ ಕೊಂಬುಗಳ ಬಗ್ಗೆ ನಾನು ಆಲೋಚಿಸು ತ್ತಿರುವಾಗ ಇಗೋ, ಮತ್ತೊಂದು ಚಿಕ್ಕ ಕೊಂಬು ಅವುಗಳಲ್ಲಿ ಎದ್ದು ಕಾಣುತ್ತಿತ್ತು. ಇದರ ಮುಂದೆ ಮೊದ ಲಿನ ಕೊಂಬುಗಳಲ್ಲಿ ಮೂರು ಬೇರುಸಹಿತ ಕೀಳಲ್ಪ ಟ್ಟಿವೆ ಮತ್ತು ಇಗೋ, ಈ ಕೊಂಬಿನಲ್ಲಿ ಮನುಷ್ಯರ ಕಣ್ಣುಗಳ ಹಾಗೆ ಕಣ್ಣುಗಳೂ ಬಡಾಯಿಕೊಚ್ಚುವ ಬಾಯಿಯೂ ಇದ್ದವು.
7:9b.DAN.007.009 ನಾನು ನೋಡುತ್ತಿದ್ದ ಹಾಗೆಯೇ ಸಿಂಹಾಸನಗಳು ಹಾಕಲ್ಪಟ್ಟು ಅದರ ಮೇಲೆ ಪೂರ್ವಿಕನೊಬ್ಬನು ಕುಳಿತುಕೊಂಡನು. ಆತನ ವಸ್ತ್ರವು ಹಿಮದಂತೆ ಬಿಳುಪಾಗಿಯೂ ಆತನ ತಲೆಕೂದಲು ಶುದ್ಧ ಉಣ್ಣೆಯಂತೆಯೂ ಆತನ ಸಿಂಹಾಸನವು ಅಗ್ನಿಜ್ವಾಲೆಯಂತೆಯೂ ಆತನ ಚಕ್ರಗಳು ಉರಿಯುವ ಬೆಂಕಿಯಂತೆಯೂ ಇದ್ದವು.
7:10b.DAN.007.010 ಆತನ ಸನ್ನಿಧಾನದಿಂದ ಅಗ್ನಿಪ್ರವಾಹವು ಹೊರಟು ಬಂದಿತು; ಸಹಸ್ರ ಸಹಸ್ರ ವಾಗಿ ಆತನಿಗೆ ಸೇವೆಮಾಡಿದರು. ಲಕ್ಷೋಪಲಕ್ಷ ಆತನ ಮುಂದೆ ನಿಂತಿದ್ದರು. ನ್ಯಾಯಸಭೆಯವರು ಕೂತು ಕೊಂಡರು. ಮತ್ತು ಪುಸ್ತಕಗಳು ತೆರೆಯಲ್ಪಟ್ಟವು.
7:11b.DAN.007.011 ಆ ಕೊಂಬು ಮಾತನಾಡಿದ ದೊಡ್ಡ ಮಾತುಗಳ ಶಬ್ದದ ವಿಷಯ ನಾನು ನೋಡುತ್ತಿರುವಾಗಲೇ ಮೃಗವು ಕೊಲ್ಲ ಲ್ಪಟ್ಟು ಅದರ ಶರೀರವನ್ನು ನಾಶಪಡಿಸಿ; ಅದು ಬೆಂಕಿಯ ಉರಿಗೆ ಹಾಕಲ್ಪಟ್ಟಿತು.
7:12b.DAN.007.012 ಮಿಕ್ಕ ಮೃಗಗಳ ವಿಷಯ ವಾದರೊ! ಅವುಗಳ ಅಧಿಕಾರವು ತೆಗೆದುಹಾಕಲ್ಪಟ್ಟಿತು. ಆದರೆ ಕೆಲವು ಕಾಲದ ಮೇಲೆ ತಕ್ಕ ಸಮಯ ಬರುವ ವರೆಗೂ ಅವುಗಳ ಜೀವವನ್ನು ಉಳಿಸಿದರು.
7:13b.DAN.007.013 ನಾನು ಕಂಡ ರಾತ್ರಿಯ ದರ್ಶನದಲ್ಲಿ ಇಗೋ, ಮನುಷ್ಯ ಕುಮಾರನಂತಿರುವ ಒಬ್ಬನು ಆಕಾಶದ ಮೇಘಗಳ ಸಂಗಡ ಪೂರ್ವಿಕನ ಬಳಿಗೆ ಸವಿಾಪಿಸಿದನು. ಅವನನ್ನು ಆತನ ಬಳಿಗೆ ಕರೆತಂದರು.
7:14b.DAN.007.014 ಆತನನ್ನು ಸಕಲ ಪ್ರಜೆ, ಜನಾಂಗ, ಭಾಷೆಗಳವರು ಸೇವಿಸುವ ಹಾಗೆ ಆತನಿಗೆ ಅಧಿಕಾರವು ಮಹತ್ವವು ರಾಜ್ಯವು ಕೊಡಲ್ಪಟ್ಟವು. ಈತನ ಅಧಿಕಾರವು ಎಂದಿಗೂ ಮುಗಿಯದ ನಿತ್ಯ ಅಧಿಕಾರವುಳ್ಳದ್ದು. ಈತನ ರಾಜ್ಯವು ನಾಶವಾಗದಂತ ರಾಜ್ಯವಾಗಿದೆ.
7:15b.DAN.007.015 ದಾನಿಯೇಲನೆಂಬ ನಾನು ನನ್ನ ಶರೀರದೊಳ ಗಿರುವ ಆತ್ಮದಲ್ಲಿ ನೊಂದು ನನ್ನ ಮನಸ್ಸಿನ ದರ್ಶನಗಳ ನಿಮಿತ್ತ ಕಳವಳಗೊಂಡೆನು.
7:16b.DAN.007.016 ನಾನು ಹತ್ತಿರ ನಿಂತವ ರಲ್ಲಿ ಒಬ್ಬನ ಬಳಿಗೆ ಬಂದು ಇವೆಲ್ಲವುಗಳ ಸತ್ಯಾರ್ಥ್ಯ ವನ್ನು ಕೇಳಿದೆನು. ಆಗ ಅವನು ಅದನ್ನು ನನಗೆ ಹೇಳಿ ಇವುಗಳ ಅರ್ಥವನ್ನು ನನಗೆ ತಿಳಿಸಿದನು.
7:17b.DAN.007.017 ಈ ದೊಡ್ಡಮೃಗಗಳು ಭೂಮಿಯಿಂದ ಹುಟ್ಟುವ ನಾಲ್ಕು ಅರಸುಗಳಾಗಿವೆ.
7:18b.DAN.007.018 ಆದರೆ ಆ ಮಹೋನ್ನತನ ಪರಿಶುದ್ಧರು ರಾಜ್ಯವನ್ನು ವಶಪಡಿಸಿಕೊಂಡು ಅದನ್ನು ಎಂದಿಗೂ ಹೌದು, ಎಂದೆಂದಿಗೂ ವಶಪಡಿಸಿಕೊಳ್ಳು ವರು.
7:19b.DAN.007.019 ಆ ಮೇಲೆ ನಾಲ್ಕನೆಯ ಮೃಗವು ಉಳಿದವು ಗಳಿಗಿಂತ ವ್ಯತ್ಯಾಸವಾಗಿಯೂ ಅತಿ ಭಯಂಕರವಾ ಗಿಯೂ ಕಬ್ಬಿಣದ ಹಲ್ಲುಗಳುಳ್ಳದ್ದಾಗಿಯೂ ಹಿತ್ತಾಳೆಯ ಉಗುರುಗಳುಳ್ಳದ್ದಾಗಿಯೂ ತುಂಡು ತುಂಡು ಮಾಡಿ ತಿಂದು ಮಿಕ್ಕಿದ್ದನ್ನು ಕಾಲಿನ ಕೆಳಗೆ ಹಾಕಿ ತುಳಿಯುವಂಥಾದ್ದೂ ಆಗಿದೆ.
7:20b.DAN.007.020 ಅದರ ತಲೆಯಲ್ಲಿದ್ದ ಹತ್ತು ಕೊಂಬುಗಳ ವಿಷಯವಾಗಿಯೂ ನಾನು ನೋಡುತ್ತಿದ್ದ ಹಾಗೆಯೇ ಯಾವ ಕೊಂಬು ಮೊಳೆತು ಮೂರು ಕೊಂಬುಗಳನ್ನು ಬೀಳಿಸಿ ಆ ಎದ್ದು ಬಂದ ಬೇರೊಂದರ ಕೊಂಬಿನ ವಿಷಯವಾಗಿಯೂ ಹೌದು, ಕಣ್ಣುಗಳು ಳ್ಳಂತ, ಬಹು ದೊಡ್ಡ ಮಾತುಗಳನ್ನು ಮಾತನಾಡಿದ ಬಾಯಿಯಂತ, ತನ್ನ ಜೊತೆಯವರಿಗಿಂತ ಬಲವಾದ ನೋಟವುಳ್ಳಂತ, ಆ ಕೊಂಬಿನ ವಿಷಯವಾಗಿ ಸತ್ಯಾರ್ಥ ವನ್ನು ತಿಳಿಯಬೇಕೆಂದಿದ್ದೆನು.
7:21b.DAN.007.021 ನಾನು ನೋಡಲಾಗಿ ಆ ಕೊಂಬು ಪರಿಶುದ್ಧರ ಸಂಗಡ ಯುದ್ಧಮಾಡಿತು ಮತ್ತು ಅವರಿಗೆ ವಿರೋಧವಾಗಿ ಜಯಗಳಿಸಿತು;
7:22b.DAN.007.022 ಪೂರ್ವಿಕನ ಕಾಲ ಬಂದು ಮಹೋನ್ನತನ ಪರಿ ಶುದ್ಧರಿಗೆ ನ್ಯಾಯತೀರ್ಪು ಕೊಡುವ ವರೆಗೂ ಪರಿ ಶುದ್ಧರು ರಾಜ್ಯವನ್ನು ವಶಪಡಿಸಿಕೊಳ್ಳುವ ಕಾಲದ ವರೆಗೂ ಅವರ ಮೇಲೆ ಜಯವನ್ನು ಹೊಂದಿತು.
7:23b.DAN.007.023 ಹೀಗೆ ಅವನು--ಆ ನಾಲ್ಕನೆಯ ಮೃಗವು ಭೂಮಿಯ ಮೇಲಿರುವ ನಾಲ್ಕನೆಯ ರಾಜ್ಯವಾಗು ವದು. ಅದು ಎಲ್ಲಾ ರಾಜ್ಯಗಳಿಗಿಂತ ವ್ಯತ್ಯಾಸವಾಗಿಯೂ ಭೂಮಿಯನ್ನೆಲ್ಲಾ ತುಳಿದು, ತುಂಡುತುಂಡು ಮಾಡು ವಂಥದ್ದಾಗಿಯೂ ಇರುವದು.
7:24b.DAN.007.024 ಆ ಹತ್ತು ಕೊಂಬು ಗಳು ಆ ರಾಜ್ಯದೊಳಗೆ ಹುಟ್ಟುವ ಹತ್ತು ಅರಸುಗಳಾ ಗಿವೆ; ಅನಂತರ ಇನ್ನೊಬ್ಬನು ಹುಟ್ಟುವನು ಅವನು ಮೊದಲಿನವರಿಗಿಂತ ವಿಲಕ್ಷಣವಾಗಿ ಮೂರು ಅರಸರನ್ನು ಅದುಮಿ ಬಿಡುವನು.
7:25b.DAN.007.025 ಅವನು ಮಹೋನ್ನತನಿಗೆ ವಿರೋಧವಾಗಿ ಕೊಚ್ಚಿಕೊಂಡು ಮಾತುಗಳನ್ನಾಡಿ ಪರಿ ಶುದ್ಧರನ್ನು ಬಾಧಿಸಿ, ಕಾಲನಿಯಮಗಳನ್ನು ಬದಲಾಯಿ ಸುವದಕ್ಕೆ ಯೋಚಿಸುವನು; ಕಾಲವು ಕಾಲನಿಯಮವು ವಿಭಾಗಿಸುವ ತನಕ ಅವರು ಅವನ ಕೈಯಲ್ಲಿ ಒಪ್ಪಿಸ ಲ್ಪಡುವರು.
7:26b.DAN.007.026 ಆದರೆ ನ್ಯಾಯ ಸಭೆಯು ಕುಳಿತು ಅವನ ಅಧಿಕಾರವನ್ನು ತೆಗೆದುಹಾಕಿ, ಕೊನೆಯ ವರೆಗೂ ಅದನ್ನು ಸಂಹರಿಸಿ ನಾಶಪಡಿಸುವದು.
7:27b.DAN.007.027 ರಾಜ್ಯವೂ ದೊರೆತನವೂ ಆಕಾಶದ ಕೆಳಗಿರುವ ಪೂರ್ತಿ ರಾಜ್ಯಗಳ ಮಹತ್ತು ಮಹೋನ್ನತನ ಪರಿಶುದ್ಧವಾದ ಜನರಿಗೆ ಕೊಡಲ್ಪಡುವದು; ಆತನ ರಾಜ್ಯವು ನಿತ್ಯವಾದ ರಾಜ್ಯ ಮತ್ತು ಎಲ್ಲಾ ದೊರೆತನಗಳೂ ಆತನನ್ನು ಸೇವಿಸುವವು ಮತ್ತು ವಿಧೇಯವಾಗಿರುವವು.ಇಷ್ಟರಲ್ಲಿ ಇದರ ಪ್ರಸ್ತಾಪವು ಮುಗಿಯಿತು, ದಾನಿಯೇಲನೆಂಬ ನನಗೆ ನನ್ನ ಆಲೋಚನೆಗಳು ಬಹಳವಾಗಿ ಕಳವಳಪಡಿಸಿ ದವು; ನನ್ನ ಮುಖವು ಕಳೆಗುಂದಿತು, ಆದರೂ ಈ ಸಂಗತಿಯನ್ನು ನನ್ನ ಹೃದಯದಲ್ಲಿ ಇಟ್ಟುಕೊಂಡೆನು.
7:28b.DAN.007.028 ಇಷ್ಟರಲ್ಲಿ ಇದರ ಪ್ರಸ್ತಾಪವು ಮುಗಿಯಿತು, ದಾನಿಯೇಲನೆಂಬ ನನಗೆ ನನ್ನ ಆಲೋಚನೆಗಳು ಬಹಳವಾಗಿ ಕಳವಳಪಡಿಸಿ ದವು; ನನ್ನ ಮುಖವು ಕಳೆಗುಂದಿತು, ಆದರೂ ಈ ಸಂಗತಿಯನ್ನು ನನ್ನ ಹೃದಯದಲ್ಲಿ ಇಟ್ಟುಕೊಂಡೆನು.
8
8:1b.DAN.008.001 ಮೊದಲು ನನಗೆ ಕಾಣಿಸಿದ ದರ್ಶನವಲ್ಲದೆ ಅರಸನಾದ ಬೇಲ್ಯಚ್ಚರನ ಆಳಿಕೆಯ ಮೂರನೆಯ ವರುಷದಲ್ಲಿಯೂ ಇನ್ನೊಂದು ದರ್ಶನವು ದಾನಿಯೇಲನಾದ ನನಗೆ ಕಾಣಿಸಿತು.
8:2b.DAN.008.002 ಈ ದರ್ಶನದಲ್ಲಿ ನಾನು ನೋಡಿದ್ದೇನಂದರೆ--ನಾನು ಏಲಾಮ್ ಸೀಮೆ ಯಲ್ಲಿರುವ ಶೂಷನ್‌ನ ಅರಮನೆಯಲ್ಲಿದ್ದೆನು. ಆ ದರ್ಶನದಲ್ಲಿ ಊಲಾ ನದಿಯ ದಡದ ಮೇಲೆ ನಿಂತಿ ರುವ ಹಾಗೆ ನನಗೆ ತೋರಿತು.
8:3b.DAN.008.003 ಆಗ ನಾನು ಕಣ್ಣೆತ್ತಿ ನೋಡಿದಾಗ ಇಗೋ, ಆ ನದಿಯ ಮುಂದೆ ಎರಡು ಕೊಂಬುಗಳುಳ್ಳ ಒಂದು ಟಗರು ನಿಂತಿತ್ತು. ಅದರ ಎರಡು ಕೊಂಬುಗಳು ಉದ್ದವಾಗಿದ್ದರೂ ಒಂದಕ್ಕಿಂತ ಒಂದು ಉದ್ದವಾಗಿತ್ತು. ಆ ದೊಡ್ಡ ಕೊಂಬು, ಚಿಕ್ಕ ಕೊಂಬು ಮೊಳೆತ ಮೇಲೆ ಮೊಳೆತದ್ದು.
8:4b.DAN.008.004 ಆ ಟಗರು ಪಶ್ಚಿಮಕ್ಕೂ ಉತ್ತರಕ್ಕೂ ದಕ್ಷಿಣಕ್ಕೂ ಹಾದಾಡುತ್ತಿರು ವದನ್ನು ನಾನು ನೋಡಿದೆನು. ಮೃಗಗಳಲ್ಲಿ ಯಾವದೂ ಅದರೆದುರಿಗೆ ನಿಲ್ಲಲಾರದೇ ಹೋಯಿತು. ಅದರ ಕೈಯಿಂದ ತಪ್ಪಿಸಿಕೊಳ್ಳಲು ಯಾವದಕ್ಕೂ ಸಾಧ್ಯವಾಗು ವಂತಿರಲಿಲ್ಲ. ಆದರೆ ಅದು ತನ್ನ ಮನಸ್ಸಿಗೆ ಬಂದಂತೆ ಮಾಡಿ ತನ್ನನ್ನು ಹೆಚ್ಚಿಸಿಕೊಂಡಿತು.
8:5b.DAN.008.005 ನಾನು ಆಲೋಚಿ ಸಲಾಗಿ ಇಗೋ, ಪಶ್ಚಿಮದಿಂದ ಒಂದು ಹೋತವು ನೆಲವನ್ನು ಸೋಕದಂತೆ ಭೂಮಂಡಲವನ್ನೆಲ್ಲಾ ದಾಟಿ ಕೊಂಡು ಬಂತು. ಆ ಹೋತದ ಕಣ್ಣುಗಳ ಮಧ್ಯೆ ಗಮನಿಸತಕ್ಕ ಒಂದು ಕೊಂಬು ಇತ್ತು.
8:6b.DAN.008.006 ನಾನು ನೋಡಿದ ನದಿಯ ಹತ್ತಿರವಿದ್ದ ಎರಡು ಕೊಂಬಿನ ಟಗರಿನ ಬಳಿಗೆ ಅದು ಬಂದು ಪರಾಕ್ರಮದಿಂದ ರೋಷಗೊಂಡು ಅದರ ಬಳಿಗೆ ಓಡಿತು.
8:7b.DAN.008.007 ಅದು ಟಗರಿನ ಹತ್ತಿರ ಬರುವದನ್ನು ನಾನು ನೋಡಿದೆನು. ಅದರ ಮೇಲಿನ ಕ್ರೋಧದಿಂದ ಅದನ್ನು ಹಾದು ಅದರ ಎರಡು ಕೊಂಬುಗಳನ್ನು ಮುರಿದುಬಿಟ್ಟಿತು. ಅದರ ಮುಂದೆ ನಿಲ್ಲುವದಕ್ಕೆ ಟಗರಿಗೆ ಏನೂ ಶಕ್ತಿಯಿ ರಲಿಲ್ಲ, ಆದರೆ ಅದು ಟಗರನ್ನು ನೆಲಕ್ಕೆ ಉರುಳಿಸಿ ತುಳಿಯಿತು. ಟಗರನ್ನು ಅದರ ಕೈಯಿಂದ ಬಿಡಿಸುವವನು ಯಾರೂ ಇರಲಿಲ್ಲ.
8:8b.DAN.008.008 ಆದದರಿಂದ ಆ ಹೋತವು ಬಹಳವಾಗಿ ಹೆಚ್ಚಿಕೊಂಡಿತು. ಆದರೆ ಅದು ಪ್ರಾಬಲ್ಯಕ್ಕೆ ಬಂದ ಮೇಲೆ ಅದರ ದೊಡ್ಡ ಕೊಂಬು ಮುರಿದು ಹೋಯಿತು. ಅದರ ಸ್ಥಾನದಲ್ಲಿ ನಾಲ್ಕು ಅದ್ಭುತವಾದ ಕೊಂಬುಗಳು ಮೊಳೆತು ಆಕಾಶದ ಚತುರ್ದಿಕ್ಕಿಗೆ ಚಾಚಿಕೊಂಡವು.
8:9b.DAN.008.009 ಅವುಗಳಲ್ಲಿ ಒಂದರೊಳಗಿಂದ ಚಿಕ್ಕ ಕೊಂಬು ಮೊಳೆತು, ಬಹಳ ದೊಡ್ಡದಾಗಿ ಬೆಳೆದು, ದಕ್ಷಿಣದ ಕಡೆಗೂ ಪೂರ್ವದ ಕಡೆಗೂ ರಮ್ಯ ದೇಶದ ಕಡೆಗೂ ಪ್ರಬಲವಾಯಿತು.
8:10b.DAN.008.010 ಅದು ಆಕಾಶ ಸೈನ್ಯದ ಎತ್ತರಕ್ಕೆ ಬೆಳೆದು ಆ ಸೈನ್ಯದಲ್ಲಿಯೂ ನಕ್ಷತ್ರಗಳಲ್ಲಿಯೂ ಕೆಲವನ್ನು ನೆಲಕ್ಕೆ ತಳ್ಳಿ ಅವುಗಳನ್ನು ತುಳಿದುಹಾಕಿತು.
8:11b.DAN.008.011 ಹೌದು, ಸೈನ್ಯದ ಅಧಿಪತಿಗೆ ವಿರೋಧವಾಗಿ ತನ್ನನ್ನು ಹೆಚ್ಚಿಸಿಕೊಂಡು ನಿತ್ಯ ಯಜ್ಞವನ್ನು ಆತನಿಗೆ ಸಲ್ಲದಂತೆ ಮಾಡಿ ಆತನ ಪವಿತ್ರ ಸ್ಥಾನವನ್ನು ಕೆಡವಿಹಾಕಿತು;
8:12b.DAN.008.012 ಪ್ರತಿದಿನ ಯಜ್ಞದ ಸಂಗಡ ಸೈನ್ಯವೂ ಸಹ ಅಪ ರಾಧದ ನಿಮಿತ್ತವಾಗಿ ಅದಕ್ಕೆ ಕೊಡಲ್ಪಟ್ಟಿತು. ಅದು ಸತ್ಯವನ್ನು ನೆಲಕ್ಕೆ ಕೆಡವಿ ತನ್ನ ಇಷ್ಟಾರ್ಥವನ್ನು ಪೂರೈಸಿ ಕೊಂಡು ಅನುಕೂಲ ಪಡೆದು ವೃದ್ಧಿಗೆ ಬಂದಿತು.
8:13b.DAN.008.013 ಆ ಮೇಲೆ ಒಬ್ಬ ಪರಿಶುದ್ಧನು ಮಾತನಾಡುವದನ್ನು ಕೇಳಿದೆನು; ಮಾತನಾಡಿದಾತನಿಗೆ ಮತ್ತೊಬ್ಬ ಪರಿ ಶುದ್ಧನು ಹೇಳಿದ್ದೇನಂದರೆ--ನಿತ್ಯ ಯಜ್ಞವನ್ನು ನಿಲ್ಲಿಸು ವದೂ ಹಾಳು ಮಾಡುವ ಅಪರಾಧವನ್ನು ತಡೆಯು ವದೂ ಪರಿಶುದ್ಧ ಸ್ಥಳವನ್ನೂ ಸೈನ್ಯವನ್ನೂ ಕಾಲಡಿಯಲ್ಲಿ ತುಳಿಯುವದೂ ಆಗುವಂತೆ ಕನಸು ಎಷ್ಟು ಕಾಲ ನಿಲ್ಲುವದು ಅಂದಾಗ
8:14b.DAN.008.014 ಅವನು ನನಗೆ--ಎರಡು ಸಾವಿರದ ಮುನ್ನೂರು ದಿನಗಳ ವರೆಗೂ ನಡೆಯುವವು; ಅನಂತರ ಪರಿಶುದ್ಧ ಸ್ಥಳವು ಶುದ್ಧೀಕರಿಸಲ್ಪಡುವದು ಎಂದು ಹೇಳಿದನು.
8:15b.DAN.008.015 ನಾನು, ಹೌದು, ದಾನಿಯೇಲನೆಂಬ ನಾನು ಆ ದರ್ಶನವನ್ನು ನೋಡಿ ಅದರ ಅರ್ಥವನ್ನು ಶೋಧಿಸಿ ದಾಗ, ಇಗೋ, ಮನುಷ್ಯನ ರೂಪದಂತೆ ಇದ್ದದ್ದು ನನ್ನ ಮುಂದೆ ನಿಂತಿತು;
8:16b.DAN.008.016 ನಾನು ಊಲಾ ನದಿಯ ಮಧ್ಯದಲ್ಲಿದ್ದಾಗ--ಗಬ್ರಿಯೇಲನೇ, ಈ ಮನುಷ್ಯನು ದರ್ಶನವನ್ನು ಅರ್ಥಮಾಡಿಕೊಳ್ಳುವಂತೆ ಮಾಡು ಎಂದು ಹೇಳುವ ಮನುಷ್ಯನ ಧ್ವನಿಯನ್ನು ಕೇಳಿದೆನು.
8:17b.DAN.008.017 ಅದರಂತೆ ಅವನು ನನ್ನ ಬಳಿಗೆ ಬಂದನು; ಅವನು ಬಂದಾಗ ನಾನು ಭಯಪಟ್ಟು ಮುಖ ಕೆಳಗಾಗಿಬಿದ್ದೆನು; ಆದರೆ ಅವನು ನನಗೆ--ಓ ಮನುಷ್ಯ ಪುತ್ರನೇ, ಇದು ಮಂದಟ್ಟಾಗಿರಲಿ; ಅಂತ್ಯಕಾಲದಲ್ಲಿ ಈ ದರ್ಶನವು ನೆರವೇರುವದು ಅಂದನು.
8:18b.DAN.008.018 ಈಗ ಅವನು ನನ್ನ ಸಂಗಡ ಮಾತನಾಡುತ್ತಿರುವಾಗ ನಾನು ಮುಖ ಕೆಳಗಾಗಿ ನೆಲದ ಮೇಲೆ ಗಾಢ ನಿದ್ರೆಯಲ್ಲಿ ಬಿದ್ದಿದ್ದೆನು; ಆದರೆ ಅವನು ನನ್ನನ್ನು ಮುಟ್ಟಿ ನಾನು ನಿಂತುಕೊಳ್ಳುವಂತೆ ಮಾಡಿದನು.
8:19b.DAN.008.019 ಅವನು ಹೇಳಿದ್ದೇನಂದರೆ--ಇಗೋ, ಕ್ರೋಧದ ಕಟ್ಟಕಡೆಯಲ್ಲಿ ಆಗುವದನ್ನು ನಿನಗೆ ತಿಳಿಸು ತ್ತೇನೆ. ನಿಯಮಿತ ಕಾಲದಲ್ಲಿ ಅದು ಅಂತ್ಯವಾಗುವದು.
8:20b.DAN.008.020 ನೀನು ಕಂಡ ಆ ಎರಡು ಕೊಂಬುಗಳುಳ್ಳ ಟಗರು ಏನಂದರೆ ಮೇದ್ಯಯದ ಮತ್ತು ಪಾರಸಿಯರ ಅರಸರು ಗಳು.
8:21b.DAN.008.021 ಆ ಒರಟು ಹೋತವು ಗ್ರೀಕ್‌ನ ಅರಸನು ಮತ್ತು ಕಣ್ಣುಗಳ ಮಧ್ಯೆ ಇದ್ದ ಆ ದೊಡ್ಡ ಕೊಂಬು ಮೊದಲನೆಯ ಅರಸನು.
8:22b.DAN.008.022 ಈಗ ಅದು ಮುರಿಯ ಲ್ಪಟ್ಟು, ಅದಕ್ಕೆ ಬದಲಾಗಿ ನಾಲ್ಕು ಕೊಂಬುಗಳು ಎದ್ದ ವಿಷಯವೇನಂದರೆ--ಆ ಜನಾಂಗದಿಂದ ನಾಲ್ಕು ರಾಜ್ಯ ಗಳು ಉದಯಿಸುವವು; ಆದರೆ ಅವನ (ಮೊದಲ ನೆಯ ಅರಸನ) ಅಧಿಕಾರದಲ್ಲಿ ಇರುವದಿಲ್ಲ;
8:23b.DAN.008.023 ಅವರ ರಾಜ್ಯದ ಕಡೆಯ ಕಾಲದಲ್ಲಿ, ಯಾವಾಗ ಅಪರಾಧಿಗಳು ತುಂಬಿ ಬರುವರೋ, ಆಗ ಕ್ರೂರ ಮುಖವುಳ್ಳವನೂ ತಂತ್ರವುಳ್ಳವನೂ ಆದ ಒಬ್ಬ ಅರಸನು ಏಳುವನು.
8:24b.DAN.008.024 ಅವನ ಶಕ್ತಿಯು ಬಲವಾಗಿರುವದು, ಆದರೆ ಅದು ಸ್ವಂತ ಶಕ್ತಿಯಿಂದಲ್ಲ; ಅವನು ಆಶ್ಚರ್ಯದ ರೀತಿಯಲ್ಲಿ ನಾಶಮಾಡಿ ವೃದ್ಧಿಗೊಂಡು ಅಭ್ಯಾಸಮಾಡಿ, ಬಲವಾದ ಮತ್ತು ಪರಿಶುದ್ಧ ಜನರನ್ನು ನಾಶಮಾಡುವನು.
8:25b.DAN.008.025 ಅವನು ತನ್ನ ಯುಕ್ತಿಯಿಂದಲೇ ತಂತ್ರವನ್ನು ತನ್ನ ಕೈಯಲ್ಲಿಯೇ ಸಿದ್ಧಮಾಡಿಕೊಳ್ಳುವನು; ಅವನು ಹೃದಯ ದಲ್ಲಿ ತನ್ನನ್ನು ತಾನೇ ಹೆಚ್ಚಿಸಿಕೊಂಡು ಶಾಂತಿಯಿಂದಲೇ ಅನೇಕರನ್ನು ನಾಶಮಾಡುವನು; ಅಲ್ಲದೆ ಅವನು ಪ್ರಭುಗಳ ಪ್ರಭುವಿಗೆ ವಿರುದ್ಧವಾಗಿ ಹೇಳುವನು; ಆದರೆ ಅವನು ಯಾರ ಕೈಸೋಕದೆ ಮುರಿಯಲ್ಪಡು ವನು.
8:26b.DAN.008.026 ದರ್ಶನದಲ್ಲಿ ಹೇಳಿದ ಆ ಉದಯಾಸ್ತಮಾನ ಗಳ ವಿಷಯವು ಸತ್ಯವೇ; ಆದಕಾರಣ ಆ ದರ್ಶನವನ್ನು ನೀನು ಮುಚ್ಚಿಡು, ಅದು ಬಹಳ ದಿವಸಗಳ ವರೆಗೆ ಇರುವದು.ದಾನಿಯೇಲನಾದ ನಾನು ಮೂರ್ಛೆ ಹೋಗಿ ಕೆಲವು ದಿನಗಳ ವರೆಗೂ ಅಸ್ವಸ್ಥನಾದೆನು; ಅನಂತರ ನಾನು ಎದ್ದು ಅರಸನ ಕೆಲಸ ಕಾರ್ಯಗಳನ್ನು ಮಾಡಿದೆನು; ನಾನು ಆ ದರ್ಶನದ ವಿಷಯ ಆಶ್ಚರ್ಯ ಪಟ್ಟೆನು, ಆದರೆ ಅದನ್ನು ಅರ್ಥಮಾಡಿಕೊಂಡವರು ಯಾರೂ ಇಲ್ಲ.
8:27b.DAN.008.027 ದಾನಿಯೇಲನಾದ ನಾನು ಮೂರ್ಛೆ ಹೋಗಿ ಕೆಲವು ದಿನಗಳ ವರೆಗೂ ಅಸ್ವಸ್ಥನಾದೆನು; ಅನಂತರ ನಾನು ಎದ್ದು ಅರಸನ ಕೆಲಸ ಕಾರ್ಯಗಳನ್ನು ಮಾಡಿದೆನು; ನಾನು ಆ ದರ್ಶನದ ವಿಷಯ ಆಶ್ಚರ್ಯ ಪಟ್ಟೆನು, ಆದರೆ ಅದನ್ನು ಅರ್ಥಮಾಡಿಕೊಂಡವರು ಯಾರೂ ಇಲ್ಲ.
9
9:1b.DAN.009.001 ಅಹಷ್ವೇರೋಷನ ಮಗನೂ ಮೇದ್ಯಯ ವಂಶದವನೂ ಕಸ್ದೀಯ ರಾಜ್ಯದ ಅರ ಸನೂ ಆದ ದಾರ್ಯಾವೆಷನ ಮೊದಲನೆಯ ವರುಷದಲ್ಲಿ
9:2b.DAN.009.002 ಅವನ ಆಳಿಕೆಯ ಮೊದಲನೆಯ ವರುಷದಲ್ಲಿ ದಾನಿಯೇಲನಾದ ನಾನು ಕರ್ತನು ತನ್ನ ವಾಕ್ಯವನ್ನು ಪ್ರವಾದಿಯಾದ ಯೆರೆವಿಾಯನಿಗೆ ದಯಪಾಲಿಸಿದ ಹಾಗೆ ತಾನು ಯೆರೂಸಲೇಮಿಗೆ ಹಾಳು ಬೀಳುವಿಕೆಗಳಲ್ಲಿ ಎಪ್ಪತ್ತು ವರುಷಗಳನ್ನು ಸಂಪೂರ್ಣಮಾಡುವ ಹಾಗೆ ವರುಷಗಳ ಲೆಕ್ಕವನ್ನು ಪುಸ್ತಕದಿಂದ ತಿಳಿದುಕೊಂಡೆನು.
9:3b.DAN.009.003 ಉಪವಾಸದಿಂದ ಗೋಣಿತಟ್ಟನ್ನು ಸುತ್ತಿಕೊಂಡು, ಬೂದಿಯನ್ನು ಬಳಿದು ಕೊಂಡು, ದೇವರಾದ ಕರ್ತನನ್ನು ಹುಡುಕುವದಕ್ಕಾಗಿ ಪ್ರಾರ್ಥನೆಗಳಿಂದಲೂ ವಿಜ್ಞಾಪನೆ ಗಳಿಂದಲೂ ಆತನ ಕಡೆಗೆ ನನ್ನ ಮುಖವನ್ನು ತಿರುಗಿ ಸಿದೆನು.
9:4b.DAN.009.004 ನಾನು ಕರ್ತನಾದ ನನ್ನ ದೇವರಿಗೆ ಪ್ರಾರ್ಥಿಸಿ ಮತ್ತು ಅರಿಕೆಮಾಡಿ--ಓ ಕರ್ತನೇ, ಅತಿ ಭಯಂಕರ ವಾದ ಮಹಾ ದೇವರೇ, ನನ್ನನ್ನು ಪ್ರೀತಿಮಾಡಿ ನನ್ನ ಆಜ್ಞೆಗಳನ್ನು ಕೈಕೊಂಡು ನಡೆಯುವವರಿಗೆ ಒಡಂಬಡಿಕೆ ಯನ್ನೂ ಕೃಪೆಯನ್ನೂ ತೋರಿಸಿ ಕಾಪಾಡುವಾತನೇ,
9:5b.DAN.009.005 ನಾವು ಪಾಪ ಅಕ್ರಮವನ್ನು ಮಾಡಿದ್ದೇವೆ; ಇದಲ್ಲದೆ ಕೆಟ್ಟವರಾಗಿ ನಡೆದು ತಿರುಗಿಬಿದ್ದಿದ್ದೇವೆ; ಅಂದರೆ ನಿನ್ನ ಕಟ್ಟಳೆಗಳನ್ನೂ ನ್ಯಾಯಗಳನ್ನೂ ಬಿಟ್ಟುಹೋಗಿದ್ದೇವೆ.
9:6b.DAN.009.006 ಇಲ್ಲವೆ ನಿನ್ನ ಹೆಸರಿನಲ್ಲಿ ನಮ್ಮ ಅರಸರಿಗೂ ಪ್ರಧಾನ ರಿಗೂ ತಂದೆಗಳಿಗೂ ದೇಶದ ಎಲ್ಲಾ ಜನರಿಗೂ ಮಾತ ನಾಡಿದ ನಿನ್ನ ಸೇವಕರಾದ ಪ್ರವಾದಿಗಳಿಗೆ ಕಿವಿಗೊಡ ಲಿಲ್ಲ.
9:7b.DAN.009.007 ಓ ಕರ್ತನೇ, ನೀನು ನೀತಿವಂತನು; ಆದರೆ ನಾವು ಈ ದಿನದ ಪ್ರಕಾರ ನಾಚಿಕೆಗೀಡಾದವರು; ಯೆಹೂದದ ಮನುಷ್ಯರನ್ನೂ ಯೆರೂಸಲೇಮಿನ ನಿವಾ ಸಿಗಳನ್ನೂ ಸಮಸ್ತ ಇಸ್ರಾಯೇಲ್ಯರನ್ನೂ ಹತ್ತಿರದಲ್ಲಿ ರುವವರನ್ನೂ ಮತ್ತು ದೂರದಲ್ಲಿರುವವರನ್ನೂ ಅವರು ನಿನಗೆ ವಿರುದ್ಧವಾಗಿ ಮಾಡಿರುವ ಅವರ ಅಪರಾಧದ ನಿಮಿತ್ತ ನೀನು ಅವರನ್ನು ಎಲ್ಲಾ ದೇಶಗಳಲ್ಲಿಯೂ ಓಡಿಸಿ ಬಿಟ್ಟಿದ್ದೀ.
9:8b.DAN.009.008 ಓ ಕರ್ತನೇ, ನಿನಗೆ ವಿರುದ್ಧವಾಗಿ ನಾವು ಪಾಪಮಾಡಿದ್ದರಿಂದ ನಮ್ಮ ಅರಸರಿಗೂ ಪ್ರಧಾ ನರಿಗೂ ಮತ್ತು ನಮ್ಮ ತಂದೆಗಳಿಗೂ ನಮಗೂ ನಾಚಿಕೆಯ ಮುಖಗಳಿವೆ.
9:9b.DAN.009.009 ನಾವು ಆತನಿಗೆ ವಿರುದ್ಧ ವಾಗಿ ತಿರುಗಿಬಿದ್ದಿದ್ದರೂ ಕರ್ತನಾದ ನಮ್ಮ ದೇವರ ಕರುಣೆಯೂ ಮತ್ತು ಕ್ಷಮೆಯೂ ನಮಗಿದೆ.
9:10b.DAN.009.010 ನಾವು ನಮ್ಮ ದೇವರಾದ ಕರ್ತನ ಸ್ವರಕ್ಕೆ ಕಿವಿಗೊಡದೆ ಆತನು ನಮ್ಮ ಮುಂದೆ ಇಟ್ಟ ಆತನ ಸೇವಕರಾದ ಪ್ರವಾದಿಗಳ ನ್ಯಾಯಪ್ರಮಾಣದಂತೆ ನಡೆಯಲಿಲ್ಲ.
9:11b.DAN.009.011 ಹೌದು, ಎಲ್ಲಾ ಇಸ್ರಾಯೇಲ್ಯರು ನಿನ್ನ ನ್ಯಾಯ ಪ್ರಮಾಣವನ್ನು ವಿಾರಿ ನಿನ್ನ ಸ್ವರಕ್ಕೆ ಕಿವಿಗೊಡದೆ ತೊಲಗಿದ್ದದರಿಂದ ಶಾಪವು ದೇವರ ಸೇವಕನಾದ ಮೋಶೆಯು ನ್ಯಾಯ ಪ್ರಮಾಣದಲ್ಲಿ ಬರೆದ ಆಣೆಯು, ಆತನಿಗೆ ವಿರುದ್ಧವಾಗಿ ನಾವು ಮಾಡಿದ ಪಾಪದ ನಿಮಿತ್ತ ನಮ್ಮ ಮೇಲೆ ಹೊಯ್ಯಲ್ಪಟ್ಟಿದೆ.
9:12b.DAN.009.012 ಆತನು ನಮಗೂ ನಮಗೆ ನ್ಯಾಯ ತೀರಿಸಿದ ನ್ಯಾಯಾಧಿಪತಿಗಳಿಗೂ ವಿರೋಧವಾಗಿ ತಾನು ಹೇಳಿದ ಮಾತುಗಳನ್ನು ನೆರವೇರಿಸಿ; ನಮ್ಮ ಮೇಲೆ ದೊಡ್ಡ ಕೇಡು ಬರುವ ಹಾಗೆ ಮಾಡಿದ್ದಾನೆ; ಯೆರೂಸಲೇಮಿನಲ್ಲಿ ನಡೆದ ಹಾಗೆ ಪೂರ್ಣ ಆಕಾಶದ ಕೆಳಗೆಲ್ಲಾ (ಭೂಮಂಡಲದ ಮೇಲೆ) ಎಲ್ಲಿಯೂ ನಡೆಯಲಿಲ್ಲ.
9:13b.DAN.009.013 ಮೋಶೆಯ ನ್ಯಾಯಪ್ರಮಾಣದಲ್ಲಿ ಬರೆದಿರುವ ಪ್ರಕಾರ ಈ ಕೇಡು ನಮ್ಮ ಮೇಲೆ ಬಂತು, ಆದಾಗ್ಯೂ ನಾವು ನಮ್ಮ ಅಕ್ರಮಗಳನ್ನು ಬಿಟ್ಟು, ತಿರುಗಿಕೊಂಡು ನಿನ್ನ ಸತ್ಯವನ್ನು ತಿಳಿದುಕೊಳ್ಳುವ ಹಾಗೆ, ನಮ್ಮ ದೇವರಾದ ಕರ್ತನ ಮುಂದೆ ನಾವು ಪ್ರಾರ್ಥನೆ ಗಳನ್ನು ಮಾಡಲಿಲ್ಲ.
9:14b.DAN.009.014 ಆದದರಿಂದ ಕರ್ತನು ಕೇಡಿ ಗಾಗಿ ಕಾದುಕೊಂಡು ಅದನ್ನು ನಮ್ಮ ಮೇಲೆ ತಂದಿ ದ್ದಾನೆ. ನಮ್ಮ ದೇವರಾದ ಕರ್ತನು ತಾನು ಮಾಡುವ ಎಲ್ಲಾ ಕೆಲಸಗಳಲ್ಲೂ ನೀತಿವಂತನೇ; ನಾವಾದರೋ ಆತನ ಸ್ವರಕ್ಕೆ ವಿಧೇಯರಾಗಲಿಲ್ಲ.
9:15b.DAN.009.015 ಆದರೆ ಈಗ, ಓ ನಮ್ಮ ದೇವರಾದ ಕರ್ತನೇ, ನಿನ್ನ ಭುಜಬಲವನ್ನು ತೋರಿಸಿ ನಿನ್ನ ಜನರನ್ನು ಐಗುಪ್ತದೇಶದೊಳಗಿಂದ ಪಾರುಮಾಡಿ, ಈವರೆಗೂ ಪ್ರಸಿದ್ಧವಾದ ಹೆಸರನ್ನು ಪಡೆದುಕೊಂಡಾತನೇ, ನಾವು ಪಾಪಮಾಡಿ ಕೆಟ್ಟವರಾಗಿ ನಡೆದುಕೊಂಡಿದ್ದೇವೆ.
9:16b.DAN.009.016 ಓ ಕರ್ತನೇ, ನಿನ್ನ ಎಲ್ಲಾ ನೀತಿಗಳ ಪ್ರಕಾರ ನಾನು ನಿನ್ನನ್ನು ಬೇಡುತ್ತೇನೆ. ನಿನ್ನ ಕೋಪವು ನಿನ್ನ ಉಗ್ರತೆಯೂ ನಿನ್ನ ಪಟ್ಟಣವಾದ ಯೆರೂಸಲೇಮಿನಿಂದಲೂ ನಿನ್ನ ಪರಿಶುದ್ಧ ಪರ್ವತ ದಿಂದಲೂ ತಿರುಗಿಸಲ್ಪಡಲಿ. ಯಾಕಂದರೆ ನಮ್ಮ ಪಾಪ ಗಳ ನಿಮಿತ್ತದಿಂದಲೂ ನಮ್ಮ ಪಿತೃಗಳ ಅಕ್ರಮಗಳ ನಿಮಿತ್ತದಿಂದಲೂ ಯೆರೂಸಲೇಮೂ ಮತ್ತು ನಿನ್ನ ಜನರೂ ನೆರೆಹೊರೆಯವರೆಲ್ಲರ ನಿಂದೆಗೆ ಗುರಿಯಾಗಿರು ವೆವಲ್ಲಾ.
9:17b.DAN.009.017 ಆದದರಿಂದ ಈಗ, ಓ ನಮ್ಮ ದೇವರೇ, ಈ ನಿನ್ನ ಸೇವಕನ ಪ್ರಾರ್ಥನೆಯನ್ನೂ ಮತ್ತು ವಿಜ್ಞಾಪನೆ ಯನ್ನೂ ಕೇಳಿ ಹಾಳಾದ ನಿನ್ನ ಪರಿಶುದ್ಧ ಸ್ಥಳದ ಮೇಲೆ ಕರ್ತನಿಗೋಸ್ಕರ ನಿನ್ನ ಮುಖವನ್ನು ಪ್ರಕಾಶಪಡಿಸು.
9:18b.DAN.009.018 ಓ ನನ್ನ ದೇವರೇ, ನೀನು ಕಿವಿಗೊಟ್ಟು ಕೇಳು; ಇಗೋ, ನಿನ್ನ ಕಣ್ಣುಗಳನ್ನು ತೆರೆದು ನಾವು ಹಾಳಾದ ದ್ದನ್ನೂ ನಿನ್ನ ಹೆಸರಿನಿಂದ ಕರೆಯಲ್ಪಡುವ ಪಟ್ಟಣವನ್ನೂ ನೋಡು ಯಾಕಂದರೆ ನಾವು ನಮ್ಮ ನೀತಿಗೋಸ್ಕರವಲ್ಲ, ನಿನ್ನ ಮಹಾ ಕೃಪೆಗೋಸ್ಕರವೇ ನಮ್ಮ ವಿಜ್ಞಾಪನೆಗಳನ್ನು ನಿನ್ನ ಮುಂದೆ ಅರ್ಪಿಸುತ್ತೇವೆ.
9:19b.DAN.009.019 ಓ ದೇವರೇ, ನಿನ್ನ ಪಟ್ಟಣವೂ ನಿನ್ನ ಜನರೂ ನಿನ್ನ ಹೆಸರಿನಿಂದ ಕರೆಯಲ್ಪಟ್ಟ ಕಾರಣ ಓ ಕರ್ತನೇ, ತಡಮಾಡದೆ ಕಿವಿಗೊಡು, ಓ ಕರ್ತನೇ, ಕ್ಷಮಿಸು; ಓ ಕರ್ತನೇ ಲಾಲಿಸು.
9:20b.DAN.009.020 ನಾನು ಮಾತನಾಡುತ್ತಾ ಪ್ರಾರ್ಥನೆ ಮಾಡುತ್ತಾ ನನ್ನ ಪಾಪವನ್ನೂ ನನ್ನ ಜನರಾದ ಇಸ್ರಾಯೇಲ್ಯರ ಪಾಪವನ್ನೂ ಅರಿಕೆಮಾಡುತ್ತಾ ನನ್ನ ದೇವರ ಪರಿಶುದ್ಧ ಪರ್ವತಕ್ಕೋಸ್ಕರ ನನ್ನ ವಿಜ್ಞಾಪನೆಯನ್ನು ನನ್ನ ದೇವರಾದ ಕರ್ತನ ಮುಂದೆ ಅರ್ಪಿಸುತ್ತಾ ಇದ್ದೆನು.
9:21b.DAN.009.021 ಹೌದು, ನಾನು ಪ್ರಾರ್ಥನೆಯಲ್ಲಿ ಮಾತನಾಡುತ್ತಿ ರುವಾಗ ನಾನು ಮೊದಲಿನ ದರ್ಶನದಲ್ಲಿ ಕಂಡ ಗಬ್ರಿಯೇಲನೆಂಬ ಮನುಷ್ಯನು ಬೇಗನೆ ಹಾರಿಬಂದು ಸುಮಾರು ಸಾಯಂಕಾಲದ ಕಾಣಿಕೆಯನ್ನು ಅರ್ಪಿಸುವ ಹೊತ್ತಿನಲ್ಲಿ ನನ್ನನ್ನು ಮುಟ್ಟಿದನು.
9:22b.DAN.009.022 ಅವನು ನನಗೆ ತಿಳಿಸಿ ನನ್ನೊಡನೆ ಮಾತಾಡಿ ಹೇಳಿದ್ದೇನಂದರೆ--ಓ ದಾನಿಯೇಲನೇ, ನಿನಗೆ ವಿವೇಕವನ್ನೂ ಬುದ್ಧಿಯನ್ನೂ ಕೊಡುವದಕ್ಕೆ ಈಗ ನಾನು ಬಂದಿದ್ದೇನೆ.
9:23b.DAN.009.023 ನಿನ್ನ ವಿಜ್ಞಾಪನೆಯ ಆರಂಭದಲ್ಲಿಯೇ ಆಜ್ಞೆಯು ಬಂದಿತು. ಅದನ್ನು ನಿನಗೆ ತಿಳಿಸುವದಕ್ಕೆ ನಾನು ಬಂದಿದ್ದೇನೆ; ನೀನು ಅತಿಪ್ರಿಯನಾಗಿರುವಿ. ಆದದರಿಂದ ವಿಷಯ ವನ್ನು ಗ್ರಹಿಸಿಕೊಂಡು ದರ್ಶನವನ್ನು ಆಲೋಚಿಸು.
9:24b.DAN.009.024 ಅಕ್ರಮಗಳನ್ನು ಮುಗಿಸುವದಕ್ಕೂ ಪಾಪಗಳನ್ನು ಮುಚ್ಚುವದಕ್ಕೂ ಅಪರಾಧಗಳಿಗೆ ಪ್ರಾಯಶ್ಚಿತ್ತ ಮಾಡು ವದಕ್ಕೂ ನಿತ್ಯವಾದ ನೀತಿಯನ್ನು ಬರಮಾಡುವದಕ್ಕೂ ಆ ದರ್ಶನಕ್ಕೂ ಪ್ರವಾದಿಗೂ ಮುದ್ರೆಹಾಕುವದಕ್ಕೂ ಅತಿಪರಿಶುದ್ಧನನ್ನು ಅಭಿಷೇಕ ಮಾಡುವದಕ್ಕೂ ನಿನ್ನ ಜನರ ಮೇಲೆಯೂ ನಿನ್ನ ಪರಿಶುದ್ಧ ಪಟ್ಟಣದ ಮೇಲೆಯೂ ಎಪ್ಪತ್ತು ವಾರಗಳು ನೇಮಿಸಲ್ಪಟ್ಟಿವೆ.
9:25b.DAN.009.025 ಆದದರಿಂದ ನೀನು ತಿಳಿಯಬೇಕಾದದ್ದು ಏನಂದರೆ --ಯೆರೂಸಲೇಮನ್ನು ತಿರಿಗಿ ಸ್ಥಾಪಿಸಿ ಕಟ್ಟಲು ಆಜ್ಞೆ ಹೊರಡುವದು ಮೊದಲುಗೊಂಡು ಅಭಿಷಿಕ್ತನಾದ (ಮೆಸ್ಸೀಯನ) ಪ್ರಭುವಿನ ವರೆಗೂ ಏಳು ವಾರಗಳು ಕಳೆಯಬೇಕು. ಅದು ಪುನಃ ಸ್ಥಾಪಿಸಲ್ಪಟ್ಟು ಅರವತ್ತೆರಡು ವಾರಗಳು ಇರುವದು. ಅದಕ್ಕೆ ಬೀದಿಯೂ ಗೋಡೆ ಗಳೂ ಕಷ್ಟಕಾಲದಲ್ಲಿ ಕಟ್ಟಲ್ಪಡುವದು.
9:26b.DAN.009.026 ಅರವತ್ತೆರಡು ವಾರಗಳಾದ ಮೇಲೆ ಮೆಸ್ಸೀಯನು ಛೇದಿಸಲ್ಪಡುವನು. ಆದರೆ ತನಗೆ ಅಲ್ಲ; ನುಗ್ಗುವ ಪ್ರಭುವಿನ ಜನರು ಪಟ್ಟಣವನ್ನೂ ಪರಿಶುದ್ಧ ಸ್ಥಳವನ್ನೂ ನಾಶಮಾಡುವರು. ಪ್ರಳಯದಿಂದ ಅದು ಅಂತ್ಯವಾಗುವದು. ಅಂತ್ಯದ ವರೆಗೂ ಯುದ್ಧವಾಗಿ ನಾಶನಗಳು ಸಂಭವಿಸುವವು.ಅವನು ಒಂದು ವಾರಕ್ಕಾಗಿ ಬಹಳ ಜನರೊಂದಿಗೆ ದೃಢವಾದ ಒಡಂಬಡಿಕೆಯನ್ನು ಮಾಡಿಕೊಳ್ಳುವನು. ವಾರದ ಮಧ್ಯದಲ್ಲಿ ಯಜ್ಞವನ್ನೂ ಅರ್ಪಣೆಯನ್ನೂ ನಿಲ್ಲಿಸುವನು. ಅಸಹ್ಯಗಳನ್ನು ವಾಹನಮಾಡಿಕೊಂಡು ಒಬ್ಬ ಘಾತಕನು ಹಾರಿಬರುವನು, ನಿಶ್ಚಿತ ಪ್ರಳಯವು ಅವನನ್ನು ಮುಳುಗಿಸುವ ತನಕ ಹಾಳು ಮಾಡುವನು.
9:27b.DAN.009.027 ಅವನು ಒಂದು ವಾರಕ್ಕಾಗಿ ಬಹಳ ಜನರೊಂದಿಗೆ ದೃಢವಾದ ಒಡಂಬಡಿಕೆಯನ್ನು ಮಾಡಿಕೊಳ್ಳುವನು. ವಾರದ ಮಧ್ಯದಲ್ಲಿ ಯಜ್ಞವನ್ನೂ ಅರ್ಪಣೆಯನ್ನೂ ನಿಲ್ಲಿಸುವನು. ಅಸಹ್ಯಗಳನ್ನು ವಾಹನಮಾಡಿಕೊಂಡು ಒಬ್ಬ ಘಾತಕನು ಹಾರಿಬರುವನು, ನಿಶ್ಚಿತ ಪ್ರಳಯವು ಅವನನ್ನು ಮುಳುಗಿಸುವ ತನಕ ಹಾಳು ಮಾಡುವನು.
10
10:1b.DAN.010.001 ಪಾರಸಿಯ ಅರಸನಾದ ಕೋರೇಷನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ಬೇಲ್ತೆ ಶಚ್ಚರನೆಂಬ ದಾನಿಯೇಲನಿಗೆ ಒಂದು ಸಂಗತಿಯು ಪ್ರಕಟವಾಯಿತು. ಬಹಳ ಕಷ್ಟದ ಆ ಸಂಗತಿಯು ಸತ್ಯವಾಗಿದೆ. ಅವನು ಕಂಡ ದರ್ಶನವನ್ನು ಗ್ರಹಿಸಿ ಆ ಸಂಗತಿಯನ್ನು ಮಂದಟ್ಟು ಮಾಡಿಕೊಂಡನು.
10:2b.DAN.010.002 ಆ ದಿನಗಳಲ್ಲಿ ದಾನಿಯೇಲನೆಂಬ ನಾನು ಮೂರು ಪೂರ್ಣ ವಾರಗಳ ವರೆಗೂ ದುಃಖಪಡುತ್ತಿದ್ದೆನು.
10:3b.DAN.010.003 ಆ ಮೂರು ಪೂರ್ಣವಾರಗಳು ಕಳೆಯುವವರೆಗೂ ನಾನು ರುಚಿಕರವಾದ ರೊಟ್ಟಿಯನ್ನು ತಿನ್ನಲಿಲ್ಲ. ಮಾಂಸ ವನ್ನಾದರೂ ದ್ರಾಕ್ಷಾರಸವನ್ನಾದರೂ ನನ್ನ ಬಾಯಿಯ ಮುಂದೆ ತರಲಿಲ್ಲ. ನಾನು ಎಣ್ಣೆಯನ್ನು ಹಚ್ಚಿಕೊಳ್ಳಲೇ ಇಲ್ಲ.
10:4b.DAN.010.004 ಮೊದಲನೆಯ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ನಾನು ಹಿದ್ದೆಕೆಲ್ ಎಂಬ ಮಹಾನದಿಯ ದಡದ ಮೇಲೆ ಇರುವಾಗ,
10:5b.DAN.010.005 ನಾನು ನನ್ನ ಕಣ್ಣುಗಳನ್ನೆತ್ತಿ ಮೇಲಕ್ಕೆ ನೋಡಿದೆನು, ಆಗ ಇಗೋ, ನಾರುಮಡಿ ಯನ್ನು ಧರಿಸಿದ್ದ ಒಬ್ಬ ಮನುಷ್ಯನಿಗೆ ಆತನು ನಡುವು ಊಫಜಿನ ಉತ್ತಮ ಬಂಗಾರದಿಂದ ಕಟ್ಟಲ್ಪಟ್ಟಿತ್ತು.
10:6b.DAN.010.006 ಆತನ ದೇಹವು ತಾರ್ಷೀಷ್ ಕಲ್ಲಿನ ಹಾಗೆಯೂ ಆತನ ಮುಖವು ಮಿಂಚಿನಂತೆಯೂ ಹೊಳೆಯುತ್ತಿತ್ತು. ಪೀತರತ್ನದ ಹಾಗೆ ಅವನ ಕಣ್ಣುಗಳು ಉರಿಯುವ ಬೆಂಕಿಯ ದೀಪದಂತೆ ಇದ್ದವು. ಅವನ ತೋಳುಗಳೂ ಕಾಲುಗಳೂ ಬೆಳಗಿನ ಕಂಚಿನ ಕಾಂತಿಯಾಗಿಯೂ ಆತನ ಮಾತುಗಳ ಶಬ್ದವು ಜನಸಮೂಹದ ಹಾಗೆಯೂ ಇದ್ದವು.
10:7b.DAN.010.007 ದಾನಿಯೇಲನೆಂಬ ನಾನು ಒಬ್ಬನೇ ಆ ದರ್ಶನವನ್ನು ನೋಡಿದೆನು. ನನ್ನ ಸಂಗಡವಿದ್ದ ಆ ಮನುಷ್ಯರು ಆ ದರ್ಶನವನ್ನು ನೋಡಲಿಲ್ಲ; ಆದರೆ ಒಂದು ಮಹಾ ಅದುರುವಿಕೆಯು ಅವರ ಮೇಲೆ ಬಿತ್ತು. ಆದದರಿಂದ ಅವರು ಓಡಿ ಹೋಗಿ ಅಡಗಿ ಕೊಂಡರು.
10:8b.DAN.010.008 ನಾನು ಒಬ್ಬನೇ ಉಳಿದು ಈ ದೊಡ್ಡ ದರ್ಶನವನ್ನು ನೋಡಿದೆನು; ನನ್ನಲ್ಲಿ ತ್ರಾಣವು ಇರ ಲಿಲ್ಲ. ನನ್ನ ಸೌಂದರ್ಯವು ನನ್ನಲ್ಲಿ ಕುಂದಿಹೋಯಿತು. ನನಗೆ ತ್ರಾಣವು ಇಲ್ಲದೆ ಹೋಯಿತು.
10:9b.DAN.010.009 ಆದಾಗ್ಯೂ ನಾನು ಆತನ ಮಾತುಗಳ ಧ್ವನಿಯನ್ನು ಕೇಳಿದೆನು, ಮತ್ತು ಆತನ ಮಾತುಗಳ ಧ್ವನಿಯನ್ನು ಕೇಳಿದಾಗ ಮುಖ ಕೆಳಗೆ ಮಾಡಿ ಗಾಢನಿದ್ರೆಯಲ್ಲಿದ್ದೆನು. ನನ್ನ ಮುಖ ನೆಲದ ಕಡೆಗೆ ಇತ್ತು.
10:10b.DAN.010.010 ಇಗೋ, ಒಂದು ಕೈ ನನ್ನನ್ನು ಮುಟ್ಟಿ ನನ್ನ ಮೊಣಕಾಲುಗಳ ಮೇಲೆಯೂ ನನ್ನ ಅಂಗೈಗಳ ಮೇಲೆಯೂ ನಿಲ್ಲುವಂತೆ ಮಾಡಿತು.
10:11b.DAN.010.011 ಆಗ ಆತನು ನನಗೆ ಹೇಳಿದ್ದೇನಂದರೆ--ಓ ದಾನಿ ಯೇಲನೇ, ಅತಿಪ್ರಿಯನಾದ ಮನುಷ್ಯನೇ, ನಾನು ನಿನಗೆ ಹೇಳುವ ಮಾತುಗಳನ್ನು ತಿಳಿದುಕೊಂಡು ಸ್ಥಿರವಾಗಿ ನಿಲ್ಲು. ನಾನು ಈಗ ನಿನ್ನ ಬಳಿಗೆ ಕಳುಹಿಸ ಲ್ಪಟ್ಟಿದ್ದೇನೆ. ಅವನು ಈ ಮಾತುಗಳನ್ನು ಹೇಳಿದ ಮೇಲೆ ನಾನು ನಡುಗುತ್ತಲೇ ನಿಂತೆನು.
10:12b.DAN.010.012 ಆಗ ಅವನು ನನಗೆ ಹೇಳಿದ್ದೇನಂದರೆ--ದಾನಿಯೇಲನೇ, ನೀನು ಭಯಪಡಬೇಡ, ಯಾಕಂದರೆ ನೀನು ತಿಳಿದುಕೊಳ್ಳು ವದಕ್ಕೂ ನಿನ್ನ ದೇವರ ಮುಂದೆ ನಿನ್ನನ್ನು ತಗ್ಗಿಸಿಕೊಳ್ಳು ವದಕ್ಕೂ ಮನಸ್ಸಿಟ್ಟ ಮೊದಲನೆಯ ದಿನದಲ್ಲಿಯೇ ನಿನ್ನ ಮಾತುಗಳು ಕೇಳಲ್ಪಟ್ಟವು. ಆ ನಿನ್ನ ಮಾತುಗಳ ನಿಮಿತ್ತವಾಗಿಯೇ ನಾನು ಬಂದಿದ್ದೇನೆ;
10:13b.DAN.010.013 ಆದರೆ ಪಾರಸಿಯ ರಾಜ್ಯದ ಪ್ರಭುವು ಇಪ್ಪತ್ತೊಂದು ದಿವಸಗಳು ನನಗೆ ಎದುರು ನಿಂತನು; ಆದರೆ ಇಗೋ,ಮುಖ್ಯ ಪ್ರಭುಗಳಲ್ಲಿ ಒಬ್ಬನಾದ ವಿಾಕಾಯೇಲನು ನನ್ನ ಸಹಾ ಯಕ್ಕೆ ಬಂದನು; ನಾನು ಆ ಪಾರಸೀಯ ಅರಸರ ಬಳಿಯಲ್ಲಿ ಉಳಿದುಕೊಂಡು
10:14b.DAN.010.014 ಈ ಅಂತ್ಯದಿನಗಳಲ್ಲಿ ನಿನ್ನ ಜನರಿಗಾದ ಗತಿಯನ್ನು ನಿನಗೆ ತಿಳಿಸುವದಕ್ಕೋಸ್ಕರ ನಾನು ಬಂದೆನು. ಆ ಕಾಲದ ಸಂಗತಿಯನ್ನು ವ್ಯಕ್ತಪಡಿ ಸುವ ಹಾಗೆ ದರ್ಶನವು ಇನ್ನೂ ಅನೇಕ ದಿವಸಗಳ ವರೆಗೂ ಇದೆ.
10:15b.DAN.010.015 ಅವನು ಯಾವಾಗ ನನಗೆ ಇಂಥ ಮಾತುಗಳನ್ನು ಹೇಳಿದನೋ ಆಗ ನಾನು ನನ್ನ ಮುಖ ವನ್ನು ನೆಲದ ಕಡೆಗೆ ತಿರುಗಿಸಿ ಸುಮ್ಮನಿದ್ದೆನು.
10:16b.DAN.010.016 ಆಗ ಇಗೋ, ಮನುಷ್ಯಕುಮಾರನ ಹೋಲಿಕೆಯ ಹಾಗಿ ರುವ ಒಬ್ಬನು ನನ್ನ ತುಟಿಗಳನ್ನು ಮುಟ್ಟಿದನು. ಆಗ ನಾನು ಬಾಯಿತೆರೆದು ಮಾತನಾಡಿ ನನ್ನ ಮುಂದೆ ನಿಂತಿದ್ದವನಿಗೆ ಹೇಳಿದ್ದೇನಂದರೆ--ಓ ನನ್ನ ಒಡೆಯನೇ, ಆ ದರ್ಶನದ ನಿಮಿತ್ತ ನನ್ನ ಸಂಕಟಗಳು ನನ್ನ ಮೇಲೆ ತಿರುಗಿಕೊಂಡಿವೆ; ನಾನು ತ್ರಾಣವನ್ನು ಉಳಿಸಿಕೊಳ್ಳ ಲಿಲ್ಲ.
10:17b.DAN.010.017 ಈ ನಿನ್ನ ಒಡೆಯನ ಸೇವಕನು ನನ್ನ ಒಡೆಯನ ಸಂಗಡ ಹೇಗೆ ಮಾತನಾಡುವನು? ನನ್ನ ವಿಷಯ ವಾದರೋ ಆಗಿನಿಂದಲೂ ನನ್ನ ತ್ರಾಣವು ನನ್ನಲ್ಲಿ ಉಳಿಯಲಿಲ್ಲ; ಉಸಿರು ಸಹ ನನ್ನಲ್ಲಿ ಉಳಿಯಲಿಲ್ಲ.
10:18b.DAN.010.018 ಆಮೇಲೆ ಮತ್ತೆ ಅದೇ ಆಕಾರದ ಹಾಗೆ ಇದ್ದ ಒಬ್ಬ ಮನುಷ್ಯನು ನನ್ನನ್ನು ಬಲಪಡಿಸಿ
10:19b.DAN.010.019 ಹೇಳಿದ್ದೇ ನಂದರೆ--ಓ ಅತಿಪ್ರಿಯನಾದ ಮನುಷ್ಯನೇ, ಭಯಪಡ ಬೇಡ; ನಿನಗೆ ಸಮಾಧಾನವಾಗಲಿ; ಬಲವಾಗಿರು; ಹೌದು ಬಲವಾಗಿರು; ಯಾವಾಗ ಅವನು ನನ್ನ ಸಂಗಡ ಹೀಗೆ ಮಾತನಾಡಿದನೋ ನಾನು ನನ್ನ ಬಲವನ್ನು ಹೊಂದಿ--ನನ್ನ ಒಡೆಯನೇ ಮಾತನಾಡು, ನೀನು ನನ್ನನ್ನು ಬಲಪಡಿಸಿದ್ದೀ ಎಂದು ಹೇಳಿದೆನು.
10:20b.DAN.010.020 ಅವನು ಹೇಳಿದ್ದೇನಂದರೆ--ನಾನು ನಿನ್ನ ಹತ್ತಿರ ಬಂದ ಕಾರಣವು ನಿನಗೆ ತಿಳಿಯಿತೇ? ಈಗ ನಾನು ಪಾರಸಿಯ ಪ್ರಭುವಿನ ಸಂಗಡ (ಕಾದಾಡಲು) ತಿರುಗಿ ಹೋಗುತ್ತೇನೆ; ನಾನು ಹೋದ ಮೇಲೆ ಇಗೋ, ಗ್ರೀಕ್ ಪ್ರಭುವು ಬರುವನು.ಆದರೆ ಸತ್ಯದ ಬರಹದಲ್ಲಿ ಸೂಚಿಸಲ್ಪಟ್ಟದ್ದನ್ನು ನಿನಗೆ ತಿಳಿಸುತ್ತೇನೆ; ನಿಮ್ಮ ಪ್ರಭುವಾದ ವಿಾಕಾಯೇಲನೇ ಹೊರತು ಮತ್ತೆ ಯಾರೂ ನನ್ನ ಸಂಗಡ ಈ ಸಂಗತಿಗಳಲ್ಲಿ ಬಲಗೊಳ್ಳಲಿಲ್ಲ.
10:21b.DAN.010.021 ಆದರೆ ಸತ್ಯದ ಬರಹದಲ್ಲಿ ಸೂಚಿಸಲ್ಪಟ್ಟದ್ದನ್ನು ನಿನಗೆ ತಿಳಿಸುತ್ತೇನೆ; ನಿಮ್ಮ ಪ್ರಭುವಾದ ವಿಾಕಾಯೇಲನೇ ಹೊರತು ಮತ್ತೆ ಯಾರೂ ನನ್ನ ಸಂಗಡ ಈ ಸಂಗತಿಗಳಲ್ಲಿ ಬಲಗೊಳ್ಳಲಿಲ್ಲ.
11
11:1b.DAN.011.001 ನಾನು ಸಹ ಮೇದ್ಯನಾದ ದಾರ್ಯಾವೆಷನ ಮೊದಲನೆಯ ವರುಷದಲ್ಲಿ ಅವ ನನ್ನು ಸ್ಥಿರಪಡಿಸುವದಕ್ಕೂ ಬಲಪಡಿಸುವದಕ್ಕೂ ನಿಂತಿ ದ್ದೇನೆ.
11:2b.DAN.011.002 ನಾನು ಈಗ ನಿನಗೆ ಸತ್ಯವನ್ನು ತಿಳಿಸುತ್ತೇನೆ; ಇಗೋ, ಪಾರಸಿಯರಲ್ಲಿ ಇನ್ನು ಮೂರು ಅರಸರು ನಿಲ್ಲುವರು; ನಾಲ್ಕನೆಯವನು ಅವರೆಲ್ಲರಿಗಿಂತಲೂ ಬಹಳ ಐಶ್ವರ್ಯವಂತನಾಗಿರುವನು; ಅವನು ತನ್ನ ಐಶ್ವರ್ಯದಿಂದಾಗುವ ಸಾಮರ್ಥ್ಯದಿಂದ ಗ್ರೀಕ್ ರಾಜ್ಯಕ್ಕೆ ವಿರೋಧವಾಗಿ ಎಲ್ಲರನ್ನೂ ಹುರಿದುಂಬಿಸು ವನು.
11:3b.DAN.011.003 ಆಗ, ಬಲವುಳ್ಳ ಒಬ್ಬ ಅರಸನು ಎದ್ದು ಮಹಾಅಧಿಕಾರದಿಂದ ಆಳಿ ತನ್ನ ಚಿತ್ತದ ಪ್ರಕಾರ ಮಾಡುವನು.
11:4b.DAN.011.004 ಅವನು ತಲೆ ಎತ್ತಿದ ಮೇಲೆ ಅವನ ರಾಜ್ಯವು ಮುರಿಯಲ್ಪಟ್ಟು ಆಕಾಶದ ನಾಲ್ಕು ದಿಕ್ಕುಗಳ ಕಡೆಗೆ ವಿಭಾಗಿಸಲ್ಪಡುವದು; ಅವನ ಸಂತತಿಗಾಗಿ ಅಲ್ಲ, ಅಥವಾ ಅವನು ಆಳಿದ ಅಧಿಕಾರದ ಹಾಗಲ್ಲ ಅವನ ರಾಜ್ಯವು ಕೀಳಲ್ಪಟ್ಟು ಅವರಿಗಲ್ಲ, ಮತ್ತೊಬ್ಬರಿಗೆ ಹಂಚಲ್ಪಡುವದು.
11:5b.DAN.011.005 ದಕ್ಷಿಣದ ಅರಸನು ಬಲಿಷ್ಠನಾಗಿ ರುವನು. ಆದರೆ ಅವನ ಪ್ರಧಾನರಲ್ಲಿ ಒಬ್ಬನು ಇವನಿ ಗಿಂತ ಬಲಿಷ್ಠನಾಗಿದ್ದು ಅವನ ಆಳ್ವಿಕೆಯು ಮಹಾ ಆಳ್ವಿಕೆಯಾಗುವದು.
11:6b.DAN.011.006 ವರುಷಗಳ ಅಂತ್ಯದಲ್ಲಿ ಅವರು ಒಬ್ಬರಿಗೊಬ್ಬರು ಒಂದಾಗುವರು; ಹೇಗಂದರೆ ದಕ್ಷಿಣದ ಅರಸನ ಮಗಳು ಉತ್ತರದ ಅರಸನ ಬಳಿಗೆ ಬಂದು ಒಪ್ಪಂದ ಮಾಡಿಕೊಳ್ಳುವಳು; ಆದರೆ ಅವಳು ಭುಜ ಬಲವನ್ನು ಉಳಿಸಿಕೊಳ್ಳುವದಿಲ್ಲ; ಅವನೂ ಅವನ ತೋಳುಗಳೂ ನಿಲ್ಲುವದಿಲ್ಲ; ಅವಳೂ ಅವಳನ್ನು ಕರೆ ತಂದವರೂ ಅವಳನ್ನು ಪಡೆದವನೂ ಆ ಕಾಲದಲ್ಲಿ ಅವಳನ್ನು ಬಲಪಡಿಸಿದವನೂ ಉಳಿಯುವದಿಲ್ಲ.
11:7b.DAN.011.007 ಆದರೆ ಅವಳ ಬೇರುಗಳ ಚಿಗುರಿನಿಂದ ಒಬ್ಬನು ಎದ್ದು ಆ ಸ್ಥಾನದಲ್ಲಿ ನಿಂತು ಸೈನ್ಯದೊಂದಿಗೆ ಬಂದು ಉತ್ತರದ ಅರಸನ ಕೋಟೆಯೊಳಗೆ ನುಗ್ಗಿ ಅವರನ್ನು ವಿರೋಧಿಸಿ ಪ್ರಬಲವಾಗುವನು.
11:8b.DAN.011.008 ಅವರ ದೇವರು ಗಳನ್ನೂ ಅವರ ಪ್ರಧಾನರನ್ನೂ ಬೆಳ್ಳಿಬಂಗಾರಗಳ ಪಾತ್ರೆಗಳನ್ನೂ ಸೂರೆಮಾಡಿ ಐಗುಪ್ತದೇಶಕ್ಕೆ ಬಂದು ಉತ್ತರದ ಅರಸನಿಗಿಂತ ಹೆಚ್ಚು ವರುಷಗಳು ಆಳುವನು.
11:9b.DAN.011.009 ಹೀಗೆ ದಕ್ಷಿಣದ ಅರಸನು ಅವನ ರಾಜ್ಯಕ್ಕೆ ಬಂದು ಮತ್ತೆ ಸ್ವಂತ ದೇಶಕ್ಕೆ ಹಿಂತಿರುಗಿ ಹೋಗುವನು.
11:10b.DAN.011.010 ಆಮೇಲೆ ಅವನ ಮಕ್ಕಳು ಸನ್ನದ್ಧರಾಗಿ ದೊಡ್ಡ ಸೈನ್ಯಗಳ ಸಮೂಹವನ್ನು ಕೂಡಿಸುವರು; ಅವರಲ್ಲಿ ಒಬ್ಬನು ನಿಶ್ಚಯವಾಗಿ ಬಂದು ಅದರಲ್ಲಿ ಪ್ರಳಯದಂತೆ ಹಾದುಹೋಗುವನು. ಅವನು ಮತ್ತೆ ಸನ್ನದ್ಧನಾಗಿ ಕೋಟೆಯನ್ನು ಮುತ್ತುವನು.
11:11b.DAN.011.011 ಆಗ ದಕ್ಷಿಣದ ಅರಸನು ಕೋಪಿಸಿಕೊಂಡು ಹೊರಟು ಅವನ ಸಂಗಡ ಅಂದರೆ ಉತ್ತರದ ಅರಸನ ಸಂಗಡ ಯುದ್ಧಮಾಡುವನು; ಅವನು ಮಹಾ ಸೈನ್ಯವನ್ನು ನಿಲ್ಲಿಸುವನು; ಆದರೆ ಆ ಮಹಾ ಸಮೂಹವು ಇವನ ಕೈಗೆ ಕೊಡಲ್ಪಡುವದು.
11:12b.DAN.011.012 ಆ ಸಮೂಹವನ್ನು ಅವನು ತೆಗೆದು ಹಾಕಿದ ಮೇಲೆ ಅವನ ಹೃದಯವು ಹೆಚ್ಚಳಪಡುವದು; ಹೌದು, ಸಹಸ್ರಾರು ಸೈನಿಕರನ್ನು ಬೀಳಿಸಿದ್ದರೂ ಪ್ರಬಲವಾಗ ಲಾರನು.
11:13b.DAN.011.013 ಉತ್ತರದ ಅರಸನು ಮತ್ತೆ ತಿರುಗಿಕೊಂಡು ಮೊದಲನೇ ಸಾರಿಗಿಂತಲೂ ದೊಡ್ಡ ಸಮೂಹವನ್ನು ನಿಲ್ಲಿಸಿ ಕೆಲವು ವರುಷಗಳಾದ ಮೇಲೆ ದೊಡ್ಡ ಸೈನ್ಯದ ಸಂಗಡವೂ ಬಹಳ ಸಂಪತ್ತಿನ ಸಂಗಡವೂ ನಿಶ್ಚಯವಾಗಿ ಬರುವನು.
11:14b.DAN.011.014 ಅದೇ ಕಾಲದಲ್ಲಿ ದಕ್ಷಿಣದ ಅರಸನಿಗೆ ವಿರೋಧವಾಗಿ ಅನೇಕರು ಎದುರು ನಿಲ್ಲುವರು; ಅಲ್ಲದೆ ನಿನ್ನ ಜನರಲ್ಲಿ ದರೋಡೆಕೋರರು ಆ ದರ್ಶನವನ್ನು ಸ್ಥಾಪಿಸಬೇಕೆಂದು ತಮ್ಮನ್ನು ತಾವು ಹೆಚ್ಚಿಸಿಕೊಳ್ಳುವರು; ಆದರೆ ಅವರು ಬಿದ್ದು ಹೋಗುವರು.
11:15b.DAN.011.015 ಆದರೆ ಉತ್ತರದ ಅರಸನು ಬಂದು ಮುತ್ತಿಗೆ ಹಾಕಿ ದಿಬ್ಬವನ್ನು ಕೆಡವಿ ಕೋಟೆಯುಳ್ಳ ಪಟ್ಟಣಗಳನ್ನು ವಶಪಡಿಸಿಕೊಳ್ಳು ವನು; ದಕ್ಷಿಣದ ಭುಜಬಲವಾದರೂ ಅವನು ಆದು ಕೊಂಡ ಜನರಾದರೂ ನಿಲ್ಲುವದಕ್ಕೆ ಬಲವಿರುವದಿಲ್ಲ.
11:16b.DAN.011.016 ಆದರೆ ಅವನಿಗೆ ಎದುರಾಗಿ ಬರುವವನು ತನ್ನ ಇಷ್ಟದ ಪ್ರಕಾರ ಮಾಡುವನು; ಯಾರೂ ಅವನ ಮುಂದೆ ನಿಲ್ಲಲಾರರು; ಅವನು ರಮ್ಯವಾದ ದೇಶದಲ್ಲಿ ನಿಲ್ಲುವನು. ಅದು ಅವನ ಕೈಯಿಂದ ನಾಶವಾಗುವದು.
11:17b.DAN.011.017 ಅವನು ತನ್ನ ರಾಜ್ಯದ ಸಮಸ್ತ ಬಲ ಸಮೇತನಾಗಿ ಹೊರಟು ಅವನನ್ನು ಎದುರುಗೊಳ್ಳುವನು. ಪ್ರಮಾಣಿ ಕರು ಅವನೊಂದಿಗಿರುವರು; ಹೀಗೆ ಅವನು ಮಾಡು ವನು. ಮತ್ತು ಹೆಣ್ಣು ಮಗಳನ್ನು ಕೆಡಿಸುವದಕ್ಕೆ ಅವನಿಗೆ ಕೊಡುವನು. ಆದರೆ ಅವಳು ಅವನ ಕಡೆಗೆ ನಿಲ್ಲುವ ದಿಲ್ಲ, ಅವನಿಗಾಗಿ ಇರುವದಿಲ್ಲ.
11:18b.DAN.011.018 ಇದಾದ ಮೇಲೆ ಅವನು ತನ್ನ ಮುಖವನ್ನು ದ್ವೀಪಗಳ ಕಡೆಗೆ ತಿರುಗಿಸಿ ಆನೇಕರನ್ನು ವಶಪಡಿಸಿಕೊಳ್ಳುವನು; ಆದರೆ ಒಬ್ಬ ಅಧಿಪತಿಯು ತನಗಾಗಿ ಅವನ ನಿಂದೆಯನ್ನು ಅಡಗಿಸಿ ಬಿಡುವನು; ಆ ನಿಂದೆಯನ್ನು ತನ್ನ ಮೇಲೆ ಹಾಕಿಕೊಳ್ಳದೆ ಅವನ ಮೇಲೆ ತಿರುಗಿಸಿಬಿಡುವನು.
11:19b.DAN.011.019 ಆಗ ಅವನು ತನ್ನ ಸ್ವದೇಶದ ಕೋಟೆಗೆ ಮುಖವನ್ನು ತಿರುಗಿಸುವನು; ಆದರೆ ಅವನು ಎಡವಿಬಿದ್ದು ಕಾಣದೆ ಹೋಗುವನು.
11:20b.DAN.011.020 ಆಗ ಅವನಿಗೆ ಬದಲಾಗಿ ರಮ್ಯವಾದ ರಾಜ್ಯದಲ್ಲಿ ಗುತ್ತಿಗೆಯನ್ನು ಹೆಚ್ಚಿಸುವನು, ತನ್ನ ಸ್ಥಾನದಲ್ಲಿ ನಿಲ್ಲು ವನು ಮತ್ತು ಅವನು ಕೆಲವು ದಿನಗಳೊಳಗೆ ನಾಶ ವಾಗುವನು; ಆದರೆ ಕೋಪದ ಪೆಟ್ಟಿನಿಂದಲ್ಲ, ಯುದ್ಧ ದಿಂದಲೂ ಅಲ್ಲ.
11:21b.DAN.011.021 ಅವನ ಸ್ಥಾನದಲ್ಲಿ ಒಬ್ಬ ನೀಚನು ನಿಲ್ಲುವನು; ಅವನಿಗೆ ರಾಜ್ಯದ ಮರ್ಯಾದೆಯನ್ನು ಕೊಡುವದಿಲ್ಲ, ಆದರೆ ಅವನು ಸಮಾಧಾನವಾಗಿ ನಯನುಡಿಗಳಿಂದ ರಾಜ್ಯವನ್ನು ಪಡಕೊಳ್ಳುವನು.
11:22b.DAN.011.022 ಪ್ರವಾಹದಂತಿರುವ ಆ ವ್ಯೂಹಗಳೂ ಒಡಂಬಡಿಕೆಯ ಪ್ರಧಾನನೂ ಅವನ ರಭಸಕ್ಕೆ ಸಿಕ್ಕಿ ಒಡೆದುಕೊಂಡು ಹೋಗಿ ಮುರಿದು ಹೋಗುವರು.
11:23b.DAN.011.023 ಅವನ ಸಂಗಡ ಸಮಾಧಾನ ಮಾಡಿ ಕೊಂಡ ಮೇಲೆ ಕಪಟವಾಗಿ ನಡೆಯುವನು. ಕೊಂಚ ಜನರ ಸಹಾಯದಿಂದ ಏಳಿಗೆಯಾಗಿ ಬಲಗೊಳ್ಳುವನು.
11:24b.DAN.011.024 ನೆಮ್ಮದಿಯಿಂದ ಸಂಸ್ಥಾನದ ಫಲವತ್ತಾದ ಪ್ರದೇಶ ಗಳಲ್ಲಿ ನುಗ್ಗಿ ತಂದೆ ತಾತಂದಿರು ಮಾಡದ ಕಾರ್ಯ ಗಳನ್ನು ಮಾಡುವನು; ಸೂರೆ, ಸುಲಿಗೆ, ಕೊಳ್ಳೆಹೊಡೆ ದವುಗಳನ್ನು ಅವರಲ್ಲಿ ಚೆಲ್ಲಿಬಿಡುವನು. ಹೌದು, ಕೋಟೆಗಳನ್ನು ಹಿಡಿಯುವ ಕುತಂತ್ರಗಳನ್ನು ಕ್ಲುಪ್ತ ಕಾಲದ ತನಕ ಕಲ್ಪಿಸುತ್ತಿರುವನು.
11:25b.DAN.011.025 ಅವನು ದಕ್ಷಿಣದ ಅರಸನಿಗೆ ವಿರೋಧವಾಗಿ ತನ್ನ ಶಕ್ತಿಯಿಂದಲೂ ಧೈರ್ಯದಿಂದಲೂ ದೊಡ್ಡ ಸೈನ್ಯದ ಸಂಗಡ ದಂಡೆತ್ತಿ ಬರುವನು; ದಕ್ಷಿಣದ ಅರಸನೂ ಅಧಿಕ ಬಲವುಳ್ಳ ದೊಡ್ಡ ಸೈನ್ಯದ ಸಂಗಡ ಯುದ್ಧಕ್ಕೆ ಸನ್ನದ್ಧನಾಗುವನು. ಆದರೆ ನಿಲ್ಲಲಾರದೆ ಹೋಗುವನು. ಯಾಕಂದರೆ ಅವನಿಗೆ ವಿರೋಧವಾಗಿ ಕುಯುಕ್ತಿಗಳನ್ನು ಕಲ್ಪಿಸುವರು.
11:26b.DAN.011.026 ಹೌದು, ಅವನ ರಾಜಭೋಜನದಲ್ಲಿ ಅರ್ಧಭಾಗ ವನ್ನು ತಿಂದವರೇ ಅವನನ್ನು ನಾಶಮಾಡುವರು; ಅವನ ಸೈನ್ಯವು ತುಂಬಿ ತುಳುಕುವದು ಮತ್ತು ಅನೇಕರು ಹತವಾಗುವರು.
11:27b.DAN.011.027 ಈ ಇಬ್ಬರು ಅರಸರ ಹೃದಯ ಗಳನ್ನು ಕೇಡನ್ನು ಮಾಡುವಂತವುಗಳಾಗಿರುವವು; ಒಂದೇ ಮೇಜಿನಲ್ಲಿ ಕುಳಿತು ಸುಳ್ಳು ಹೇಳುವರು; ಆದರೆ ಅದು ಅನುಕೂಲವಾಗದು; ಅದು ಹೇಗಾದರೂ ನಿಯಮಿಸಲ್ಪಟ್ಟ ಕಾಲದಲ್ಲಿ ಅಂತ್ಯವಾಗುವದು.
11:28b.DAN.011.028 ಆಗ ಅವನು ಮಹಾ ಐಶ್ವರ್ಯದೊಂದಿಗೆ ಸ್ವದೇಶಕ್ಕೆ ಹಿಂತಿರುಗವನು; ಅವನ ಹೃದಯವು ಪರಿಶುದ್ಧ ಒಡಂಬಡಿಕೆಗೆ ವಿರೋಧವಾಗಿರುವದು; ಅವನು ಹೀಗೆ ಕಾರ್ಯ ಸಾಧಿಸಿ ಸ್ವಂತ ದೇಶಕ್ಕೆ ಹಿಂತಿರುಗುವನು.
11:29b.DAN.011.029 ನಿಯಮಿತ ಕಾಲದಲ್ಲಿಯೇ ಅವನು ಹಿಂತಿರುಗಿ ದಕ್ಷಿಣಕ್ಕೆ ಬರುವನು; ಆದರೆ ಮೊದಲು ಆದಂತೆ ಎರಡನೆಯ ಸಾರಿ ಆಗುವದಿಲ್ಲ.
11:30b.DAN.011.030 ಕಿತ್ತೀಮಿನ ಹಡಗು ಗಳು ಅವನಿಗೆ ವಿರೋಧವಾಗಿ ಬರುವವು. ಆದದರಿಂದ ಅವನು ಎದೆಗುಂದಿ ಪರಿಶುದ್ಧ ಒಡಂಬಡಿಕೆಗೆ ವಿರೋಧ ವಾಗಿ ಅವನು ಕೋಪಿಸಿ ಹೀಗೆ ಮಾಡುವನು. ಹಿಂತಿರುಗಿ ಸೇರಿ ಪರಿಶುದ್ಧ ಒಡಂಬಡಿಕೆಯನ್ನು ತೊರೆದವನ ಸಂಗಡ ಜ್ಞಾನಿಯಾಗುವನು.
11:31b.DAN.011.031 ಅವನು ಕೂಡಿಸುವ ಸೈನ್ಯವು ಆಶ್ರಯ ದುರ್ಗವಾದ ಪವಿತ್ರಾಲಯವನ್ನು ಹೊಲೆಗೆಡಿಸಿ, ನಿತ್ಯ ಯಜ್ಞವನ್ನು ನೀಗಿಸಿ, ಹಾಳು ಮಾಡುವ ಅಸಹ್ಯವಾದವುಗಳನ್ನು ಪ್ರತಿಷ್ಠಿಸುವದು.
11:32b.DAN.011.032 ಒಡಂಬಡಿಕೆಗೆ ವಿರೋಧವಾಗಿ ಕೆಟ್ಟವರಾಗಿ ನಡೆ ಯುವವರನ್ನು ವ್ಯರ್ಥವಾದ ಮಾತುಗಳಿಂದ ಕೆಡಿ ಸುವನು; ಆದರೆ ತಮ್ಮ ದೇವರನ್ನು ಅರಿಯುವ ಜನರು ದೃಢಚಿತ್ತರಾಗಿ ಕೃತಾರ್ಥರಾಗುವರು.
11:33b.DAN.011.033 ಜನರಲ್ಲಿ ಬುದ್ಧಿವಂತರಾದವರು ಅನೇಕರಿಗೆ ಬೋಧಿಸುವರು, ಆದಾಗ್ಯೂ ಕತ್ತಿಯಿಂದಲೂ ಬೆಂಕಿಯಿಂದಲೂ ಸೆರೆ ಯಿಂದಲೂ ಕೊಳ್ಳೆಯಿಂದಲೂ ಅನೇಕ ದಿನಗಳು ಸಿಕ್ಕಿಬೀಳುವರು.
11:34b.DAN.011.034 ಅವರು ಬೀಳುವಾಗ ಅವರಿಗೆ ಸ್ವಲ್ಪ ಸಹಾಯ ದೊರೆಯುವದು; ಆದರೆ ಅನೇಕರು ವಂಚನೆಯ ನುಡಿಗಳಿಂದ ಅವರನ್ನು ಅಂಟಿಕೊಳ್ಳು ವರು.
11:35b.DAN.011.035 ಇದಲ್ಲದೆ ಅಂತ್ಯಕಾಲದ ವರೆಗೆ ಅವರನ್ನು ಶೋಧಿಸುವದಕ್ಕೂ ಶುದ್ಧಮಾಡುವದಕ್ಕೂ ಶುಭ್ರ ಪಡಿಸುವದಕ್ಕೂ ವಿವೇಕಿಗಳಲ್ಲಿ ಕೆಲವರು ಬೀಳುವರು; ಇದು (ಅಂತ್ಯವು) ನಿಯಮಿತ ಕಾಲಕ್ಕೆ ಇರುವದು;
11:36b.DAN.011.036 ಅರಸನು ತನ್ನ ಇಷ್ಟದ ಪ್ರಕಾರ ಮಾಡುವನು; ತನ್ನನ್ನು ತಾನೇ ಹೆಚ್ಚಿಸಿಕೊಂಡು ತನ್ನನ್ನು ಎಲ್ಲಾ ದೇವರುಗಳಿಗೂ ದೊಡ್ಡವನನ್ನಾಗಿ ಮಾಡಿ ಕೊಂಡು ದೇವರುಗಳ ದೇವರಿಗೆ ವಿರೋಧವಾಗಿ ಆಶ್ಚರ್ಯವಾದ ಸಂಗತಿಗಳನ್ನು ಮಾತನಾಡಿ ರೋಷವು ತೀರುವ ವರೆಗೂ ವೃದ್ಧಿಯಾಗಿರುವನು; ಯಾಕಂದರೆ ನಿಶ್ಚಯಿ ಸಲ್ಪಟ್ಟದ್ದು ಮಾಡಲ್ಪಡಲೇ ಬೇಕಾಗುವದು.
11:37b.DAN.011.037 ಅವನು ತನ್ನ ಪಿತೃಗಳ ದೇವರನ್ನಾಗಲೀ ಸ್ತ್ರೀಯರ ಅಪೇಕ್ಷೆ ಯನ್ನಾಗಲೀ ಲಕ್ಷಿಸುವದಿಲ್ಲ, ಯಾವ ದೇವರನ್ನೂ ಲಕ್ಷಿಸುವದಿಲ್ಲ; ಅವನು ಎಲ್ಲವುಗಳಿಗಿಂತ ತನ್ನನ್ನು ತಾನೇ ಹೆಚ್ಚಿಸಿಕೊಂಡಿದ್ದಾನೆ.
11:38b.DAN.011.038 ಆದರೆ ಅವನು ತನ್ನ ಸ್ಥಾನದಲ್ಲಿ ದೇವರ ಶಕ್ತಿಗಳನ್ನು ಮತ್ತು ತನ್ನ ಪಿತೃಗಳು ಅರಿಯದ ದೇವರುಗಳನ್ನು ಗೌರವಿಸುವನು; ಬಂಗಾರ ದಿಂದಲೂ ಬೆಳ್ಳಿಯಿಂದಲೂ ಅಮೂಲ್ಯ ಕಲ್ಲುಗಳಿಂ ದಲೂ ರಮ್ಯವಾದವುಗಳಿಂದಲೂ ಗೌರವಿಸುವನು.
11:39b.DAN.011.039 ಹೀಗೆ ಅನ್ಯದೇವರ ಸಹಾಯದಿಂದ ಬಲವಾದ ಕೋಟೆಗಳನ್ನು ಆಕ್ರಮಿಸುವನು. ಯಾರನ್ನು ಕಟಾಕ್ಷಿಸು ವನೋ ಅವರಿಗೆ ಘನತೆ ಹೆಚ್ಚುವದು. ಬಹುಜನರ ಮೇಲೆ ಆಳಿಕೆಯನ್ನು ಕೊಡುವನು; ದೇಶವನ್ನು ಲಾಭಕ್ಕೆ ಹಂಚುವನು.
11:40b.DAN.011.040 ಅಂತ್ಯಕಾಲದಲ್ಲಿ ದಕ್ಷಿಣದ ಅರಸನು ಅವನ ಮೇಲೆ ಬೀಳುವನು; ಉತ್ತರದ ಅರಸನು ರಥಗಳೊಂ ದಿಗೂ ಸವಾರರೊಂದಿಗೂ ಅನೇಕ ಹಡಗುಗಳೊಂ ದಿಗೂ ಸುಳಿಗಾಳಿಯಂತೆ ಅವನಿಗೆ ವಿರೋಧವಾಗಿ ದೇಶಗಳನ್ನು ಪ್ರವೇಶಿಸಿ ಪ್ರಳಯದಂತೆ ಹಾದು ಹೋಗುವನು.
11:41b.DAN.011.041 ಇದಲ್ಲದೆ ಅವನು ರಮ್ಯವಾದ ದೇಶದೊಳಕ್ಕೂ ನುಗ್ಗುವನು; ಅನೇಕ ದೇಶಗಳು ಕೆಡವಲ್ಪಡುವವು; ಆದರೆ ಎದೋಮು, ಮೋವಾಬು ಅಮ್ಮೋನನ ಮಕ್ಕಳಲ್ಲಿ ಮುಖ್ಯಸ್ಥರು ಆತನ ಕೈಯಿಂದ ತಪ್ಪಿಸಿಕೊಳ್ಳುವರು.
11:42b.DAN.011.042 ಅವನು ದೇಶಗಳ ಮೇಲೂ ತನ್ನ ಕೈಯನ್ನು ಚಾಚುವನು; ಐಗುಪ್ತ ದೇಶವು ತಪ್ಪಿಸಿ ಕೊಳ್ಳದು.
11:43b.DAN.011.043 ಬಂಗಾರ ಬೆಳ್ಳಿ ಬೊಕ್ಕಸಗಳ ಮೇಲೆಯೂ ಐಗುಪ್ತದ ಎಲ್ಲಾ ಅಮೂಲ್ಯವಸ್ತುಗಳ ಮೇಲೆಯೂ ಅವನಿಗೆ ಅಧಿಕಾರವಿರುವದು. ಲೂಬ್ಯರೂ ಐಥೋ ಪ್ಯರೂ ಅವನನ್ನು ಹಿಂಬಾಲಿಸುವರು.
11:44b.DAN.011.044 ಮೂಡಣ ದಿಂದಲೂ ಉತ್ತರದಿಂದಲೂ ಬರುವ ಸುದ್ದಿಗಳು ಅವನನ್ನು ಹೆದರಿಸುವವು. ಆದದರಿಂದ ಅವನು ಮಹಾ ಉಗ್ರನಾಗಿ ಅನೇಕರನ್ನು ಸಂಹರಿಸುವದಕ್ಕೂ ನಿರ್ಮೂಲ ಮಾಡುವದಕ್ಕೂ ಹೊರಡುವನು.ಅವನು ತನ್ನ ಅರಮನೆಯ ಗುಡಾರಗಳನ್ನು ಸಮು ದ್ರದ ನಡುವೆ ರಮ್ಯವಾದ ಪರಿಶುದ್ಧ ಪರ್ವತದಲ್ಲಿ ಹಾಕುವನು; ಆದರೂ ಅವನು ಕೊನೆಗಾಣುವನು. ಯಾರೂ ಅವನಿಗೆ ಸಹಾಯ ಮಾಡರು.
11:45b.DAN.011.045 ಅವನು ತನ್ನ ಅರಮನೆಯ ಗುಡಾರಗಳನ್ನು ಸಮು ದ್ರದ ನಡುವೆ ರಮ್ಯವಾದ ಪರಿಶುದ್ಧ ಪರ್ವತದಲ್ಲಿ ಹಾಕುವನು; ಆದರೂ ಅವನು ಕೊನೆಗಾಣುವನು. ಯಾರೂ ಅವನಿಗೆ ಸಹಾಯ ಮಾಡರು.
12
12:1b.DAN.012.001 ಆ ಕಾಲದಲ್ಲಿ ನಿನ್ನ ಜನರ ಮಕ್ಕಳಿಗೋಸ್ಕರ ನಿಲ್ಲುವ ಮಹಾಪ್ರಧಾನನಾದ ವಿಾಕಾ ಯೇಲನು ಏಳುವನು; ಮೊಟ್ಟಮೊದಲು ಜನಾಂಗ ಉಂಟಾದಂದಿನಿಂದ ಇಂದಿನ ವರೆಗೂ ಸಂಭವಿಸದಂತ ಸಂಕಟವು ಸಂಭವಿಸುವದು. ಆಗ ನಿನ್ನ ಜನರೊಳಗೆ ಅಂದರೆ ಜೀವಬಾಧ್ಯರ ಪಟ್ಟಿಯಲ್ಲಿ ಯಾರ ಹೆಸರು ಬರೆಯಲ್ಪಟ್ಟಿದೆಯೋ ಅವರೆಲ್ಲರೂ ಬಿಡುಗಡೆಯಾಗು ವರು.
12:2b.DAN.012.002 ಭೂಮಿಯ ಧೂಳಿನೊಳಗೆ ನಿದ್ರೆಮಾಡುವವ ರಲ್ಲಿ ಅನೇಕರು ಎಚ್ಚತ್ತು ಕೆಲವರು ನಿತ್ಯಜೀವವನ್ನೂ ಕೆಲವರು ನಿತ್ಯ ನಾಚಿಕೆಗಳನ್ನೂ ಅನುಭವಿಸುವರು.
12:3b.DAN.012.003 ಬುದ್ಧಿವಂತರಾದವರು ಆಕಾಶದ ಕಾಂತಿಯ ಹಾಗೆ ಯೂ ಅನೇಕರನ್ನು ನೀತಿಯ ಕಡೆಗೆ ತಿರುಗಿಸಿದ ವರು ನಕ್ಷತ್ರಗಳ ಹಾಗೆಯೂ ಎಂದೆಂದಿಗೂ ಪ್ರಕಾಶಿಸು ವರು;
12:4b.DAN.012.004 ಆದರೆ ಓ ದಾನಿಯೇಲನೇ, ನೀನು ಅಂತ್ಯ ಕಾಲದ ವರೆಗೂ ಈ ಮಾತುಗಳನ್ನು ಮುಚ್ಚಿಡು; ಅವುಗಳನ್ನು ಬರೆಯುವ ಆ ಗ್ರಂಥಕ್ಕೆ ಮುದ್ರೆಹಾಕು; ಅನೇಕರು ಅತ್ತಿತ್ತ ಓಡಾಡುವರು ಮತ್ತು ಜ್ಞಾನವು ಹೆಚ್ಚಾಗುವದು ಎಂದು ಹೇಳಿದನು.
12:5b.DAN.012.005 ಆಗ ದಾನಿಯೇಲನೆಂಬ ನಾನು ನೋಡಿದೆನು; ಇಗೋ, ಬೇರೆ ಇಬ್ಬರಲ್ಲಿ ಒಬ್ಬನು ನದಿಯ ತೀರದ ಈ ಕೊನೆಗೂ ಮತ್ತೊಬ್ಬನು ನದಿಯ ತೀರದ ಆ ಕೊನೆಗೂ ನಿಂತಿದ್ದರು.
12:6b.DAN.012.006 ಅವರು ನದಿಯ ನೀರಿನ ಮೇಲೆ ನಿಂತು ನಾರು ಬಟ್ಟೆಯನ್ನು ಧರಿಸಿದ್ದ ಒಬ್ಬನಿಗೆ ಇನ್ನೊಬ್ಬನು ಹೇಳಿದ್ದೇನಂದರೆ--ಈ ಆಶ್ಚರ್ಯದ ಅಂತ್ಯವು ಎಷ್ಟರ ವರೆಗೆ ಇರುವದು ಎಂದು ಅಂದಾಗ
12:7b.DAN.012.007 ನದಿಯ ನೀರಿನ ಮೇಲೆ ನಿಂತು ನಾರು ಬಟ್ಟೆಯನ್ನು ಧರಿಸಿ ನಿಂತಿದ್ದ ಮನುಷ್ಯನು ತನ್ನ ಎಡಗೈಯನ್ನೂ ಬಲಗೈಯನ್ನೂ ಆಕಾಶದ ಕಡೆಗೆ ಎತ್ತಿ ಸದಾಕಾಲ ಜೀವಂತವಾಗಿರುವಾತನ ಮೇಲೆ ಆಣೆ ಇಟ್ಟು--ಅದು ಕಾಲ, ಕಾಲಗಳು, ಅರ್ಧಕಾಲ ಇರುವದೆಂದೂ ಆತನು ಪರಿಶುದ್ಧ ಜನರ ಬಲವನ್ನು ಚದರಿಸಿದ ಮೇಲೆ ಇವೆಲ್ಲವುಗಳು ಈಡೇರುವವೆಂದೂ ಅಂದದ್ದನ್ನು ನಾನು ಕೇಳಿದೆನು.
12:8b.DAN.012.008 ಆದರೆ ಗ್ರಹಿಸಲಿಲ್ಲ; ಆಗ ನಾನು--ಓ ನನ್ನ ಕರ್ತನೇ, ಈ ಸಂಗತಿಗಳ ಅಂತ್ಯವೇನು ಎಂದು ಕೇಳಿದೆನು.
12:9b.DAN.012.009 ದಾನಿಯೇಲನೇ, ನಿನ್ನ ದಾರಿಯಲ್ಲಿ ಹೋಗು; ಈ ಮಾತುಗಳು ಅಂತ್ಯಕಾಲದ ವರೆಗೂ ಮುಚ್ಚಲ್ಪಟ್ಟು ಮುದ್ರೆ ಹಾಕಲ್ಪ ಟ್ಟಿವೆ.
12:10b.DAN.012.010 ಅನೇಕರು ಇನ್ನು ಶುದ್ಧಮಾಡಲ್ಪಟ್ಟು, ಶುಭ್ರ ಮಾಡಲ್ಪಟ್ಟು, ಶೋಧಿಸಲ್ಪಟ್ಟಿರುವರು; ಆದರೆ ಕೆಟ್ಟವರು ಕೆಟ್ಟದ್ದನ್ನೇ ಮಾಡುವರು; ಕೆಟ್ಟವರಲ್ಲಿ ಅದನ್ನು ಒಬ್ಬನೂ ಅರ್ಥ ಮಾಡಿಕೊಳ್ಳುವದಿಲ್ಲ; ಆದರೆ ಬುದ್ಧಿವಂತರು ಅರ್ಥ ಮಾಡಿಕೊಳ್ಳುವರು.
12:11b.DAN.012.011 ಪ್ರತಿದಿನದ ಯಜ್ಞವು ಸಕಾಲಕ್ಕೆ ತೆಗೆದುಹಾಕಲ್ಪಟ್ಟು ಹಾಳುಮಾಡುವಂಥ ಅಸಹ್ಯವು ಇರಿಸಲ್ಪಡುವ ವರೆಗೂ ಸಾವಿರದ ಇನ್ನೂರ ತೊಂಭತ್ತೊಂಭತ್ತು ದಿನಗಳು ಇರುವವು.
12:12b.DAN.012.012 ಸಾವಿರದ ಮುನ್ನೂರ ಮೂವತ್ತೈದು ದಿನಗಳು ಬರುವ ವರೆಗೆ ಕಾದಿರುವವನೇ ಭಾಗ್ಯವಂತನು.ಆದರೆ ನೀನು ಅಂತ್ಯದ ವರೆಗೂ ಹೋಗು; ಯಾಕಂದರೆ ನೀನು ವಿಶ್ರಮಿಸಿಕೊಳ್ಳುವಿ ಮತ್ತು ದಿನಗಳ ಅಂತ್ಯದಲ್ಲಿ ನಿನ್ನ ಭಾಗದಲ್ಲಿ ನಿಲ್ಲುವಿ (ಎಂದು ಹೇಳಿದನು.)
12:13b.DAN.012.013 ಆದರೆ ನೀನು ಅಂತ್ಯದ ವರೆಗೂ ಹೋಗು; ಯಾಕಂದರೆ ನೀನು ವಿಶ್ರಮಿಸಿಕೊಳ್ಳುವಿ ಮತ್ತು ದಿನಗಳ ಅಂತ್ಯದಲ್ಲಿ ನಿನ್ನ ಭಾಗದಲ್ಲಿ ನಿಲ್ಲುವಿ (ಎಂದು ಹೇಳಿದನು.)
- Holder of rights
- Multilingual Bible Corpus
- Citation Suggestion for this Object
- TextGrid Repository (2025). Kannada Collection. Daniel (Kannada). Daniel (Kannada). Multilingual Parallel Bible Corpus. Multilingual Bible Corpus. https://hdl.handle.net/21.11113/0000-0016-A1BF-B