Exodus (Kannada)

Exodus (Kannada)

1

1:1b.EXO.001.001 ಯಾಕೋಬನ ಜೊತೆಗೆ ಐಗುಪ್ತಕ್ಕೆ ತಮ್ಮ ತಮ್ಮ ಮನೆಯವರ ಸಂಗಡ ಬಂದ ಇಸ್ರಾಯೇಲ್‌ ಮಕ್ಕಳ ಹೆಸರುಗಳು ಇವೇ:

1:2b.EXO.001.002 ರೂಬೇನ್‌ ಸಿಮೆಯೋನ್‌ ಲೇವಿ ಯೆಹೂದ

1:3b.EXO.001.003 ಇಸ್ಸಾಕಾರ್‌ ಜೆಬುಲೂನ್‌ ಬೆನ್ಯಾವಿಾನ್‌

1:4b.EXO.001.004 ದಾನ್‌ ನಫ್ತಾಲಿ ಗಾದ್‌ ಆಶೇರ್‌.

1:5b.EXO.001.005 ಯಾಕೋಬನಿಂದ ಹುಟ್ಟಿದವರೆಲ್ಲಾ ಒಟ್ಟು ಎಪ್ಪತ್ತು ಮಂದಿ. ಯೋಸೇಫನು ಮೊದಲೇ ಐಗುಪ್ತ ದಲ್ಲಿ ಇದ್ದನು.

1:6b.EXO.001.006 ಯೋಸೇಫನೂ ಅವನ ಸಹೋದರ ರೆಲ್ಲರೂ ಆ ಸಂತತಿಯವರೆಲ್ಲರೂ ಸತ್ತರು.

1:7b.EXO.001.007 ಆದರೆ ಇಸ್ರಾಯೇಲನ ಮಕ್ಕಳು ಅತ್ಯಧಿಕವಾಗಿ ಅಭಿವೃದ್ಧಿ ಹೊಂದಿ ಹೆಚ್ಚಿ ಹರಡಿಕೊಂಡು ಬಲಗೊಂಡರು. ಆ ದೇಶವು ಅವರಿಂದ ತುಂಬಿತು.

1:8b.EXO.001.008 ಆಗ ಯೋಸೇಫನನ್ನು ಅರಿಯದ ಬೇರೊಬ್ಬನು ಐಗುಪ್ತಕ್ಕೆ ಅರಸನಾದನು.

1:9b.EXO.001.009 ಅವನು ತನ್ನ ಜನರಿಗೆ--ಇಗೋ, ಇಸ್ರಾಯೇಲ್‌ ಮಕ್ಕಳಾದ ಈ ಜನರು ನಮಗಿಂತ ಹೆಚ್ಚಿ ಬಲವುಳ್ಳವರಾಗಿದ್ದಾರೆ;

1:10b.EXO.001.010 ಬನ್ನಿ, ಅವರು ಹೆಚ್ಚಾಗದ ಹಾಗೆಯೂ ನಮಗೆ ಯುದ್ಧ ಸಂಭವಿಸಿದರೆ ಅವರು ನಮ್ಮ ಶತ್ರುಗಳ ಸಂಗಡ ಕೂಡಿಕೊಂಡು ನಮಗೆ ವಿರೋಧವಾಗಿ ಯುದ್ಧಮಾಡಿ ದೇಶವನ್ನು ಬಿಟ್ಟು ಹೋಗದ ಹಾಗೆಯೂ ಅವ ರೊಂದಿಗೆ ಬುದ್ಧಿವಂತಿಕೆಯಿಂದ ವರ್ತಿಸೋಣ ಎಂದು ಹೇಳಿದನು.

1:11b.EXO.001.011 ಆಗ ಅವರನ್ನು ತಮ್ಮ ಬಿಟ್ಟೀಕೆಲಸಗಳಿಂದ ಶ್ರಮೆಪಡಿಸುವ ಹಾಗೆ ಬಿಟ್ಟೀಕೆಲಸ ಮಾಡಿಸುವ ಅಧಿಕಾರಿಗಳನ್ನು ಅವರ ಮೇಲೆ ನೇಮಿಸಿದರು. ಅವರು ಫರೋಹನಿಗೆ ಪಿತೋಮ್‌ ರಾಮ್ಸೇಸ್‌ ಎಂಬ ಉಗ್ರಾಣ ಪಟ್ಟಣಗಳನ್ನು ಕಟ್ಟಿಸಿದರು.

1:12b.EXO.001.012 ಆದರೆ ಇವರು ಅವರನ್ನು ಎಷ್ಟು ಶ್ರಮೆಪಡಿಸಿದರೋ ಅಷ್ಟು ಅಧಿಕ ವಾಗಿ ಅವರು ಹೆಚ್ಚಿ ಹರಡಿಕೊಂಡರು. ಐಗುಪ್ತ್ಯರು ಇಸ್ರಾಯೇಲ್‌ ಮಕ್ಕಳಿಗಾಗಿ ಸಂತಾಪಪಟ್ಟರು.

1:13b.EXO.001.013 ಆದ ದರಿಂದ ಐಗುಪ್ತ್ಯರು ಇಸ್ರಾಯೇಲನ ಮಕ್ಕಳಿಂದ ಕ್ರೂರವಾಗಿ ಸೇವೆ ಮಾಡಿಸಿಕೊಂಡರು.

1:14b.EXO.001.014 ಮಣ್ಣಿನ ಕೆಲಸದಲ್ಲಿಯೂ ಇಟ್ಟಿಗೆಯನ್ನು ಮಾಡುವ ಕೆಲಸದ ಲ್ಲಿಯೂ ವ್ಯವಸಾಯದ ಎಲ್ಲಾ ವಿಧವಾದ ಕೆಲಸಗಳ ಲ್ಲಿಯೂ ಕಠಿಣವಾಗಿ ದುಡಿಸಿಕೊಂಡು ಅವರ ಜೀವನ ವನ್ನು ಬೇಸರಪಡಿಸಿದರು. ಅವರು ಅವರಿಂದ ಮಾಡಿ ಸಿದ ಎಲ್ಲಾ ಸೇವೆಯೂ ಕಠಿಣವಾಗಿತ್ತು.

1:15b.EXO.001.015 ಇದಲ್ಲದೆ ಐಗುಪ್ತದ ಅರಸನು ಶಿಪ್ರಾ ಮತ್ತು ಪೂಗಾ ಎಂದು ಹೆಸರಿದ್ದ ಇಬ್ರಿಯ ಸೂಲಗಿತ್ತಿಯರ ಸಂಗಡ ಮಾತನಾಡಿದನು.

1:16b.EXO.001.016 ಅವನು ಅವರಿಗೆ--ನೀವು ಇಬ್ರಿಯ ಸ್ತ್ರೀಯರಿಗೆ ಸೂಲಗಿತ್ತಿಯ ಕೆಲಸ ಮಾಡುವದಕ್ಕೆ ಹೆರಿಗೆಯ ಪೀಠದಲ್ಲಿ ಅವರನ್ನು ಪರಾಂಬ ರಿಸುವಾಗ ಗಂಡು ಮಗುವಾದರೆ ಅದನ್ನು ಕೊಂದು ಹಾಕಿರಿ, ಹೆಣ್ಣಾದರೆ ಬದುಕಲಿ ಎಂದು ಹೇಳಿದನು.

1:17b.EXO.001.017 ಆದರೆ ಸೂಲಗಿತ್ತಿಯರು ದೇವರಿಗೆ ಭಯಪಟ್ಟು ಐಗುಪ್ತದ ಅರಸನು ತಮಗೆ ಹೇಳಿದಂತೆ ಮಾಡದೆ ಗಂಡು ಮಕ್ಕಳನ್ನು ಬದುಕಿಸಿದರು.

1:18b.EXO.001.018 ಆಗ ಐಗು ಪ್ತದ ಅರಸನು ಸೂಲಗಿತ್ತಿಯರನ್ನು ಕರೆಯಿಸಿಯಾಕೆ ಇಂಥ ಕೆಲಸವನ್ನು ಮಾಡಿ ಗಂಡು ಮಕ್ಕಳನ್ನು ಬದುಕಿ ಸಿದ್ದೀರಿ ಅಂದನು.

1:19b.EXO.001.019 ಅದಕ್ಕೆ ಅವರು--ಇಬ್ರಿಯರ ಸ್ತ್ರೀಯರು ಐಗುಪ್ತದ ಸ್ತ್ರೀಯರಂತೆ ಅಲ್ಲ, ಅವರು ಚುರುಕಾಗಿದ್ದಾರೆ. ಸೂಲಗಿತ್ತಿಯು ಅವರ ಹತ್ತಿರ ಬರುವದಕ್ಕೆ ಮುಂಚೆಯೇ ಹೆರುತ್ತಾರೆ ಅಂದರು.

1:20b.EXO.001.020 ಆದದರಿಂದ ದೇವರು ಸೂಲಗಿತ್ತಿಯರಿಗೆ ಒಳ್ಳೇದನ್ನು ಮಾಡಿದನು. ಇದಲ್ಲದೆ ಜನರು ಹೆಚ್ಚಾಗಿ ಬಹು ಬಲಗೊಂಡರು.

1:21b.EXO.001.021 ಸೂಲಗಿತ್ತಿಯರು ದೇವರಿಗೆ ಭಯ ಪಟ್ಟದ್ದರಿಂದ ಆತನು ಅವರಿಗೆ ವಂಶಾಭಿವೃದ್ಧಿಯ ನ್ನುಂಟುಮಾಡಿದನು.ಆದರೆ ಫರೋಹನು ತನ್ನ ಜನರಿಗೆಲ್ಲಾ--(ಇಬ್ರಿಯರಿಗೆ) ಹುಟ್ಟುವ ಗಂಡು ಮಕ್ಕಳನ್ನೆಲ್ಲಾ ನದಿಯಲ್ಲಿ ಹಾಕಬೇಕು. ಹೆಣ್ಣು ಮಕ್ಕಳ ನ್ನೆಲ್ಲಾ ಜೀವದಿಂದ ಉಳಿಸಬೇಕು ಎಂದು ಅಪ್ಪಣೆ ಕೊಟ್ಟನು.

1:22b.EXO.001.022 ಆದರೆ ಫರೋಹನು ತನ್ನ ಜನರಿಗೆಲ್ಲಾ--(ಇಬ್ರಿಯರಿಗೆ) ಹುಟ್ಟುವ ಗಂಡು ಮಕ್ಕಳನ್ನೆಲ್ಲಾ ನದಿಯಲ್ಲಿ ಹಾಕಬೇಕು. ಹೆಣ್ಣು ಮಕ್ಕಳ ನ್ನೆಲ್ಲಾ ಜೀವದಿಂದ ಉಳಿಸಬೇಕು ಎಂದು ಅಪ್ಪಣೆ ಕೊಟ್ಟನು.

2

2:1b.EXO.002.001 ಆಗ ಲೇವಿಯ ಮನೆಯವನಾದ ಒಬ್ಬ ಮನುಷ್ಯನು ಲೇವಿಯ ಮಗಳನ್ನು ಹೆಂಡತಿ ಯಾಗಿ ತಕ್ಕೊಂಡನು.

2:2b.EXO.002.002 ಆ ಸ್ತ್ರೀಯು ಗರ್ಭಧರಿಸಿ ಮಗನನ್ನು ಹೆತ್ತು ಅವನು ಸುಂದರನಾಗಿದ್ದದರಿಂದ ಮೂರು ತಿಂಗಳು ಬಚ್ಚಿಟ್ಟಳು.

2:3b.EXO.002.003 ಅವನನ್ನು ಇನ್ನು ಬಚ್ಚಿಡುವದಕ್ಕಾಗದೆ ಇದ್ದಾಗ ಅವನಿಗಾಗಿ ಆಪಿನ ಪೆಟ್ಟಿಗೆ ಯನ್ನು ತಕ್ಕೊಂಡು ಜೇಡಿಮಣ್ಣನ್ನೂ ರಾಳವನ್ನೂ ಹಚ್ಚಿ ಕೂಸನ್ನು ಅದರಲ್ಲಿ ಇಟ್ಟು ನದಿಯ ಅಂಚಿನಲ್ಲಿ ಇದ್ದ ಹುಲ್ಲಿನಲ್ಲಿ ಇಟ್ಟರು.

2:4b.EXO.002.004 ಕೂಸಿಗೆ ಏನಾಗುವದೋ ಎಂದು ತಿಳಿದುಕೊಳ್ಳುವದಕ್ಕೆ ದೂರದಲ್ಲಿ ಅದರ ಅಕ್ಕ ನಿಂತುಕೊಂಡಳು.

2:5b.EXO.002.005 ಆಗ ಫರೋಹನ ಮಗಳು ನದಿಯಲ್ಲಿ ಸ್ನಾನ ಮಾಡುವದಕ್ಕೆ ಇಳಿದು ಬಂದಳು; ಆಕೆಯ ದಾಸಿಯರು ನದಿಯ ಅಂಚಿನಲ್ಲಿ ತಿರುಗಾಡುತ್ತಿದ್ದರು. ಫರೋಹನ ಮಗಳು ಹುಲ್ಲಿನಲ್ಲಿದ್ದ ಪೆಟ್ಟಿಗೆಯನ್ನು ನೋಡಿ ತನ್ನ ದಾಸಿಯನ್ನು ಕಳುಹಿಸಿ ಅದನ್ನು ತರಿಸಿದಳು.

2:6b.EXO.002.006 ಆ ಪೆಟ್ಟಿಗೆಯನ್ನು ತೆರೆದು ಕೂಸನ್ನು ನೋಡಿದಳು; ಇಗೋ, ಕೂಸು ಅಳುತ್ತಿತ್ತು. ಆಗ ಆಕೆಯು ಅದರ ಮೇಲೆ ಅಂತಃಕರುಣೆಪಟ್ಟು--ಇದು ಇಬ್ರಿಯರ ಮಕ್ಕಳಲ್ಲಿ ಒಂದಾಗಿದೆ ಅಂದಳು.

2:7b.EXO.002.007 ಆಗ ಅದರ ಅಕ್ಕ ಫರೋಹನ ಮಗಳಿಗೆ--ನಾನು ಹೋಗಿ ಈ ಕೂಸಿಗೆ ಮೊಲೆ ಕೊಡುವ ಹಾಗೆ ಇಬ್ರಿಯ ಸ್ತ್ರೀಯರಿಂದ ಒಬ್ಬ ದಾದಿ ಯನ್ನು ನಿನಗೋಸ್ಕರ ಕರಕೊಂಡು ಬರಲೋ ಅಂದಳು.

2:8b.EXO.002.008 ಫರೋಹನ ಮಗಳು ಅವಳಿಗೆ-ಹೋಗು ಅಂದಳು. ಆಗ ಆ ಹುಡುಗಿಯು ಹೋಗಿ ಕೂಸಿನ ತಾಯಿಯನ್ನು ಕರೆದಳು.

2:9b.EXO.002.009 ಫರೋಹನ ಮಗಳು ಆಕೆಗೆ--ಈ ಮಗು ವನ್ನು ತೆಗೆದುಕೊಂಡುಹೋಗಿ ನನಗೋಸ್ಕರ ಸಾಕು. ನಾನು ನಿನಗೆ ಸಂಬಳವನ್ನು ಕೊಡುವೆನು ಅಂದಳು. ಆಗ ಆ ಸ್ತ್ರೀಯು ಕೂಸನ್ನು ತಕ್ಕೊಂಡು ಹೋಗಿ ಸಾಕಿದಳು.

2:10b.EXO.002.010 ಈ ಮಗುವು ಬೆಳೆದಾಗ ಅವನನ್ನು ಫರೋಹನ ಮಗಳ ಬಳಿಗೆ ತಕ್ಕೊಂಡುಹೋದಳು. ಅವನು ಆಕೆಗೆ ಮಗನಾದನು. ಆಕೆಯು--ಇವನನ್ನು ನೀರಿನೊಳಗಿಂದ ಎಳೆದೆನೆಂದು ಹೇಳಿ ಅವನಿಗೆ ಮೋಶೆ ಎಂದು ಹೆಸರಿಟ್ಟಳು.

2:11b.EXO.002.011 ಆ ದಿನಗಳಲ್ಲಿ ಮೋಶೆಯು ದೊಡ್ಡವನಾದ ಮೇಲೆ ತನ್ನ ಸಹೋದರರ ಬಳಿಗೆ ಹೋಗಿ ಅವರ ಬಿಟ್ಟೀ ಕೆಲಸಗಳನ್ನು ನೋಡುತ್ತಿದ್ದನು. ಆಗ ತನ್ನ ಸಹೋದರರಲ್ಲಿ ಒಬ್ಬನಾದ ಇಬ್ರಿಯನನ್ನು ಒಬ್ಬ ಐಗುಪ್ತ್ಯನು ಹೊಡೆಯುವದನ್ನು ಕಂಡನು.

2:12b.EXO.002.012 ಅವನು ಅತ್ತಿತ್ತ ನೋಡಿ ಯಾರೂ ಇಲ್ಲವೆಂದು ತಿಳಿದು ಐಗುಪ್ತ್ಯ ನನ್ನು ಕೊಂದು ಮರಳಿನಲ್ಲಿ ಮುಚ್ಚಿಟ್ಟನು.

2:13b.EXO.002.013 ಎರಡನೇ ದಿನ ಅವನು ಮತ್ತೆ ಹೊರಗೆ ಹೋದಾಗ ಇಗೋ, ಇಬ್ರಿಯರಾದ ಇಬ್ಬರು ಮನುಷ್ಯರು ಜಗಳವಾಡು ತ್ತಿದ್ದರು. ತಪ್ಪು ಮಾಡಿದವನಿಗೆ ಅವನು--ಯಾಕೆ ನಿನ್ನ ಜೊತೆಯವನನ್ನು ಹೊಡೆಯುತ್ತೀ ಅಂದನು.

2:14b.EXO.002.014 ಅದಕ್ಕ ವನು--ಯಾರು ನಿನ್ನನ್ನು ನಮ್ಮ ಮೇಲೆ ಪ್ರಭುವ ನ್ನಾಗಿಯೂ ನ್ಯಾಯಾಧಿಪತಿಯನ್ನಾಗಿಯೂ ನೇಮಿಸಿ ದ್ದಾರೆ? ಆ ಐಗುಪ್ತ್ಯನನ್ನು ಕೊಂದುಹಾಕಿದಂತೆ ನನ್ನನ್ನೂ ಕೊಂದುಹಾಕಬೇಕೆಂದಿದ್ದೀಯೋ ಅಂದನು. ಆಗ ಮೋಶೆಯು ಭಯಪಟ್ಟು--ನಿಶ್ಚಯವಾಗಿ ಈ ಕಾರ್ಯವು ತಿಳಿದುಬಂತು ಎಂದು ಅಂದುಕೊಂಡನು.

2:15b.EXO.002.015 ಫರೋಹನು ಈ ಮಾತುಗಳನ್ನು ಕೇಳಿ ಮೋಶೆ ಯನ್ನು ಕೊಲ್ಲಲು ಹುಡುಕಿದನು. ಆದರೆ ಮೋಶೆಯು ಫರೋಹನ ಎದುರಿನಿಂದ ಓಡಿಹೋಗಿ ಮಿದ್ಯಾನ್‌ ದೇಶದಲ್ಲಿದ್ದು ಒಂದು ಬಾವಿಯ ಬಳಿಯಲ್ಲಿ ಕೂತು ಕೊಂಡನು.

2:16b.EXO.002.016 ಮಿದ್ಯಾನಿನ ವೈದಿಕನಿಗೆ ಏಳು ಮಂದಿ ಕುಮಾರ್ತೆಯರಿದ್ದರು. ಇವರು ಬಂದು ತಮ್ಮ ತಂದೆಯ ಮಂದೆಗಳಿಗೆ ನೀರು ಸೇದಿ ದೋಣಿಗಳನ್ನು ತುಂಬಿಸು ತ್ತಿದ್ದರು.

2:17b.EXO.002.017 ಕುರುಬರು ಬಂದು ಅವರನ್ನು ಓಡಿಸುತ್ತಿ ದ್ದಾಗ ಮೋಶೆಯು ಎದ್ದು ಅವರಿಗೆ ಸಹಾಯ ಮಾಡಿ ಅವರ ಕುರಿಗಳಿಗೆ ನೀರು ಕುಡಿಸಿದನು.

2:18b.EXO.002.018 ಅವರು ತಮ್ಮ ತಂದೆಯಾದ ರೆಗೂವೇಲನ ಬಳಿಗೆ ಬಂದಾಗ ಅವನು ಅವರಿಗೆ--ಯಾಕೆ ಈ ಹೊತ್ತು ಬೇಗ ಬಂದಿರಿ ಅಂದನು.

2:19b.EXO.002.019 ಅದಕ್ಕೆ ಅವರು--ಐಗುಪ್ತ್ಯನಾದ ಒಬ್ಬ ಮನುಷ್ಯನು ಕುರುಬರ ಕೈಗೆ ನಮ್ಮನ್ನು ತಪ್ಪಿಸಿ ನಮಗೋಸ್ಕರ ಸಾಕಾಗುವಷ್ಟು ನೀರು ಸೇದಿ ಮಂದೆಗೆ ಕುಡಿಸಿದನು ಅಂದರು.

2:20b.EXO.002.020 ಆಗ ಅವನು ತನ್ನ ಕುಮಾರ್ತೆಯರಿಗೆ--ಅವನು ಎಲ್ಲಿದ್ದಾನೆ? ಆ ಮನುಷ್ಯ ನನ್ನು ಯಾಕೆ ಬಿಟ್ಟು ಬಂದಿರಿ? ಅವನನ್ನು ಕರೆಯಿರಿ, ಅವನು ಊಟ ಮಾಡಲಿ ಅಂದನು.

2:21b.EXO.002.021 ಮೋಶೆಯು ಆ ಮನುಷ್ಯನ ಸಂಗಡ ವಾಸಮಾಡುವದಕ್ಕೆ ಸಮ್ಮತಿ ಸಿದನು. ಅವನು ಮೋಶೆಗೆ ತನ್ನ ಮಗಳಾದ ಚಿಪ್ಪೋರ ಳನ್ನು ಕೊಟ್ಟನು.

2:22b.EXO.002.022 ಆಕೆಯು ಮಗನನ್ನು ಹೆತ್ತಾಗ ಮೋಶೆಯು ಅವನಿಗೆ ಗೇರ್ಷೋಮ್‌ ಎಂದು ಹೆಸರಿ ಟ್ಟನು. ಯಾಕಂದರೆ ಅವನು--ನಾನು ಪರದೇಶದಲ್ಲಿ ಅನ್ಯನಾಗಿದ್ದೇನೆ ಅಂದನು.

2:23b.EXO.002.023 ಹೀಗಿರಲಾಗಿ ಬಹಳ ದಿನಗಳಾದ ಮೇಲೆ ಐಗುಪ್ತದ ಅರಸನು ಸತ್ತನು. ಇಸ್ರಾಯೇಲ್‌ ಮಕ್ಕಳು ದಾಸತ್ವದ ಕಾರಣದಿಂದ ನಿಟ್ಟುಸುರುಬಿಟ್ಟು ಕೂಗು ತ್ತಿದ್ದರು. ದಾಸತ್ವದ ನಿಮಿತ್ತವಾಗಿ ಅವರ ಕೂಗು ದೇವರ ಬಳಿಗೆ ಬಂತು.

2:24b.EXO.002.024 ದೇವರು ಅವರ ನರಳಾಟವನ್ನು ಕೇಳಿ ಅಬ್ರಹಾಮ ಇಸಾಕ ಯಾಕೋಬ ಇವರ ಸಂಗಡ ತಾನು ಮಾಡಿದ ಒಡಂಬಡಿಕೆಯನ್ನು ಜ್ಞಾಪಕಮಾಡಿ ಕೊಂಡನು.ಆಗ ದೇವರು ಇಸ್ರಾಯೇಲ್‌ ಮಕ್ಕಳನ್ನು ನೋಡಿ ಅವರಲ್ಲಿ ಲಕ್ಷ್ಯವಿಟ್ಟನು.

2:25b.EXO.002.025 ಆಗ ದೇವರು ಇಸ್ರಾಯೇಲ್‌ ಮಕ್ಕಳನ್ನು ನೋಡಿ ಅವರಲ್ಲಿ ಲಕ್ಷ್ಯವಿಟ್ಟನು.

3

3:1b.EXO.003.001 ಮೋಶೆಯು ತನ್ನ ಮಾವನಾಗಿರುವ ಮಿದ್ಯಾನಿನ ವೈದಿಕನಾದ ಇತ್ರೋವನ ಮಂದೆಯನ್ನು ಮೇಯಿಸುತ್ತಿರಲಾಗಿ ಅರಣ್ಯದ ಹಿಂಭಾ ಗಕ್ಕೆ ನಡಿಸಿಕೊಂಡುಹೋಗಿ ಹೋರೇಬ್‌ ಎಂಬ ದೇವರ ಬೆಟ್ಟಕ್ಕೆ ಬಂದನು.

3:2b.EXO.003.002 ಆಗ ಕರ್ತನ ದೂತನು ಪೊದೆಯೊಳಗಿಂದ ಅಗ್ನಿಜ್ವಾಲೆಯಲ್ಲಿ ಅವನಿಗೆ ಕಾಣಿಸಿ ಕೊಂಡನು. ಅವನು ನೋಡಿದಾಗ ಇಗೋ, ಪೊದೆಯು ಬೆಂಕಿಯಿಂದ ಉರಿಯುತ್ತಿತ್ತು. ಆದಾಗ್ಯೂ ಪೊದೆಯು ಸುಡಲಿಲ್ಲ.

3:3b.EXO.003.003 ಆಗ ಮೋಶೆಯು--ನಾನು ಹೋಗಿ ಆ ಪೊದೆಯು ಯಾಕೆ ಸುಡದೆ ಇರುವದೆಂಬ ಆಶ್ಚರ್ಯ ವನ್ನು ನೋಡುವೆನು ಅಂದನು.

3:4b.EXO.003.004 ಅವನು ನೋಡು ವದಕ್ಕೆ ಹತ್ತಿರ ಬರುವದನ್ನು ಕರ್ತನು ನೋಡಿದಾಗ ದೇವರು ಪೊದೆಯೊಳಗಿಂದ ಅವನಿಗೆ--ಮೋಶೆಯೇ, ಮೋಶೆಯೇ ಎಂದು ಕರೆದನು; ಆಗ ಅವನು--ನಾನು ಇಲ್ಲಿ ಇದ್ದೇನೆ ಅಂದನು.

3:5b.EXO.003.005 ಆಗ ಆತನು--ಇಲ್ಲಿ ಸವಿಾಪಕ್ಕೆ ಬರಬೇಡ, ನಿನ್ನ ಪಾದಗಳಿಂದ ಕೆರ ಗಳನ್ನು ತೆಗೆದುಹಾಕು; ನೀನು ನಿಂತಿರುವ ಸ್ಥಳವು ಪರಿಶುದ್ಧ ಭೂಮಿಯಾಗಿದೆ ಅಂದನು.

3:6b.EXO.003.006 ಇದಲ್ಲದೆ ಆತನು ಅವನಿಗೆ--ನಾನು ನಿನ್ನ ತಂದೆಯ ದೇವರು ಅಬ್ರಹಾಮನ ದೇವರು ಇಸಾಕನ ದೇವರು ಯಾಕೋಬನ ದೇವರು ಆಗಿದ್ದೇನೆ ಎಂದು ಹೇಳಿದನು. ಆಗ ಮೋಶೆಯು ದೇವರನ್ನು ನೋಡುವದಕ್ಕೆ ಭಯ ಪಟ್ಟು ತನ್ನ ಮುಖವನ್ನು ಮುಚ್ಚಿಕೊಂಡನು.

3:7b.EXO.003.007 ಆಗ ಕರ್ತನು--ಐಗುಪ್ತದಲ್ಲಿರುವ ನನ್ನ ಜನರ ವ್ಯಥೆಯನ್ನು ನಿಶ್ಚಯವಾಗಿಯೂ ಕಂಡಿದ್ದೇನೆ, ಬಿಟ್ಟೀ ಕೆಲಸಮಾಡಿಸುವವರ ವಿಷಯದಲ್ಲಿ ಅವರು ಇಟ್ಟ ಮೊರೆಯು ನನಗೆ ಕೇಳಿಸಿತು. ಅವರ ದುಃಖವನ್ನು ಬಲ್ಲೆನು.

3:8b.EXO.003.008 ಆದಕಾರಣ ಅವರನ್ನು ಐಗುಪ್ತ್ಯರ ಕೈಯೊ ಳಗಿಂದ ಬಿಡುಗಡೆ ಮಾಡುವದಕ್ಕೂ ಆ ದೇಶದಿಂದ ಬಿಡಿಸಿ ಹಾಲೂ ಜೇನೂ ಹರಿಯುವ ವಿಸ್ತಾರವಾದ ಒಳ್ಳೇ ದೇಶಕ್ಕೆ ಅಂದರೆ ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು, ಯೆಬೂಸಿಯರು ವಾಸವಾಗಿರುವ ದೇಶಕ್ಕೆ ನಡಿಸಿ ಕೊಂಡು ಹೋಗುವದಕ್ಕೂ ಇಳಿದು ಬಂದಿದ್ದೇನೆ.

3:9b.EXO.003.009 ಆದದರಿಂದ ಈಗ ಕೇಳು, ಇಸ್ರಾಯೇಲ್‌ ಮಕ್ಕಳ ಕೂಗು ನನ್ನ ಬಳಿಗೆ ಬಂದಿತು; ಐಗುಪ್ತ್ಯರು ಅವರನ್ನು ಬಾಧಿಸುವ ಬಾಧೆಯನ್ನು ನಾನು ನೋಡಿದ್ದೇನೆ.

3:10b.EXO.003.010 ಆದದರಿಂದ ಈಗ ಬಾ, ನಾನು ನಿನ್ನನ್ನು ಫರೋಹನ ಬಳಿಗೆ ಕಳುಹಿಸುತ್ತೇನೆ. ಇಸ್ರಾಯೇಲ್‌ ಮಕ್ಕಳಾದ ನನ್ನ ಜನರನ್ನು ನೀನು ಐಗುಪ್ತದೊಳಗಿಂದ ಹೊರಗೆ ಬರಮಾಡಬೇಕು ಅಂದನು.

3:11b.EXO.003.011 ಆಗ ಮೋಶೆಯು ದೇವರಿಗೆ--ಫರೋಹನ ಬಳಿಗೆ ಹೋಗುವ ಹಾಗೆಯೂ ಇಸ್ರಾಯೇಲ್‌ ಮಕ್ಕಳನ್ನು ಐಗುಪ್ತದೊಳಗಿಂದ ಹೊರಗೆ ಬರಮಾಡು ವಂತೆಯೂ ನಾನು ಎಷ್ಟರವನು ಅಂದನು.

3:12b.EXO.003.012 ಆಗ ಆತನು--ನಿಶ್ಚಯವಾಗಿ ನಾನು ನಿನ್ನ ಸಂಗಡ ಇರುವೆನು; ನಾನು ನಿನ್ನನ್ನು ಕಳುಹಿಸುತ್ತೇನೆಂಬದಕ್ಕೆ ಇದೇ ನಿನಗೆ ಗುರುತು. ನೀನು ಜನರನ್ನು ಐಗುಪ್ತದೊಳಗಿಂದ ಹೊರಗೆ ತಂದ ತರುವಾಯ ನೀವು ಈ ಬೆಟ್ಟದಮೇಲೆ ದೇವರನ್ನು ಆರಾಧಿಸುವಿರಿ ಅಂದನು.

3:13b.EXO.003.013 ಅದಕ್ಕೆ ಮೋಶೆಯು ದೇವರಿಗೆ--ಇಗೋ, ಇಸ್ರಾಯೇಲ್‌ ಮಕ್ಕಳ ಬಳಿಗೆ ಹೋಗಿ--ನಿಮ್ಮ ಪಿತೃಗಳ ದೇವರು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆಂದು ಹೇಳುವಾಗ ಅವರು ನನಗೆ--ಆತನ ಹೆಸರು ಏನು ಎಂದು ಕೇಳಿದರೆ ನಾನು ಅವರಿಗೆ ಏನು ಹೇಳಬೇಕು ಅಂದನು.

3:14b.EXO.003.014 ಆಗ ದೇವರು ಮೋಶೆಗೆ--ಇರುವಾತನೇ ಆಗಿದ್ದೇನೆ, ಆ ಇರುವಾತನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ ಎಂದು ಇಸ್ರಾಯೇಲ್‌ ಮಕ್ಕಳಿಗೆ ಹೇಳಬೇಕು ಅಂದನು.

3:15b.EXO.003.015 ದೇವರು ಮೋಶೆಗೆ--ನಿಮ್ಮ ಪಿತೃಗಳಾದ ಅಬ್ರಹಾಮ ಇಸಾಕ ಯಾಕೋಬರ ದೇವರು ಆಗಿರುವ ಕರ್ತನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿ ದ್ದಾನೆಂದು ಇಸ್ರಾಯೇಲ್‌ ಮಕ್ಕಳಿಗೆ ಹೇಳಬೇಕು; ಇದೇ ಯುಗ ಯುಗಕ್ಕೆ ನನ್ನ ಹೆಸರೂ ತಲತಲಾಂತರಕ್ಕೆ ನನ್ನ ಸ್ಮರಣೆಯೂ ಆಗಿದೆ ಎಂದು ಹೇಳಿದನು.

3:16b.EXO.003.016 ಆತನು--ನೀನು ಹೋಗಿ ಇಸ್ರಾಯೇಲ್‌ ಹಿರಿಯ ರನ್ನು ಕೂಡಿಸಿ ಅವರಿಗೆ--ನಿಮ್ಮ ಪಿತೃಗಳ ದೇವರೂ ಅಬ್ರಹಾಮನ ದೇವರೂ ಇಸಾಕನ ದೇವರೂ ಯಾಕೋಬನ ದೇವರೂ ಆಗಿರುವ ಕರ್ತನು ನನಗೆ ಕಾಣಿಸಿಕೊಂಡು--ನಿಮ್ಮನ್ನೂ ಐಗುಪ್ತದಲ್ಲಿ ನಿಮಗೆ ಮಾಡಿದ್ದನ್ನೂ ನಿಶ್ಚಯವಾಗಿ ನಾನು ನೋಡಿದ್ದೇನೆ.

3:17b.EXO.003.017 ಐಗುಪ್ತದಲ್ಲಿ ನಿಮಗುಂಟಾಗಿರುವ ಸಂಕಟದಿಂದ ಬಿಡಿಸಿ ನಿಮ್ಮನ್ನು ಕಾನಾನ್ಯರೂ ಹಿತ್ತಿಯರೂ ಅಮೋರಿಯರೂ ಪೆರಿಜೀಯರೂ ಹಿವ್ವಿಯರೂ ಯೆಬೂಸಿಯರೂ ಇರುವ ಹಾಲೂ ಜೇನೂ ಹರಿಯುವ ದೇಶಕ್ಕೆ ಬರಮಾಡುವೆನೆಂದು ಹೇಳಿದ್ದೇನೆ ಎಂದು ಅವರಿಗೆ ಹೇಳು.

3:18b.EXO.003.018 ಅವರು ನಿನ್ನ ಮಾತನ್ನು ಕೇಳುವರು. ಆಗ ನೀನು ಇಸ್ರಾಯೇಲ್‌ ಹಿರಿಯರ ಸಹಿತವಾಗಿ ಐಗುಪ್ತದ ಅರಸನ ಬಳಿಗೆ ಹೋಗಿ ಅವನಿಗೆ--ಇಬ್ರಿಯರ ದೇವರಾಗಿರುವ ಕರ್ತನು ನಮಗೆ ಪ್ರತ್ಯಕ್ಷ ನಾಗಿದ್ದಾನೆ. ಆದದರಿಂದ ನಾವು ಅರಣ್ಯದಲ್ಲಿ ಮೂರು ದಿವಸ ಪ್ರಯಾಣಮಾಡಿ ನಮ್ಮ ದೇವರಾದ ಕರ್ತನಿಗೆ ಬಲಿಯನ್ನರ್ಪಿಸುವ ಹಾಗೆ ನಮ್ಮನ್ನು ಬಿಡು ಎಂದು ಕೇಳಿಕೊಳ್ಳುತ್ತೇವೆ ಎಂದು ಹೇಳಬೇಕು.

3:19b.EXO.003.019 ಆದಾಗ್ಯೂ ನೀವೆಷ್ಟು ಬಲವಂತ ಮಾಡಿದರೂ ಐಗುಪ್ತದ ಅರಸನು ನಿಮ್ಮನ್ನು ಹೋಗಗೊಡಿಸುವದಿಲ್ಲವೆಂದು ನನಗೆ ನಿಶ್ಚಯವಾಗಿ ತಿಳಿದದೆ.

3:20b.EXO.003.020 ಹೀಗಿರುವದರಿಂದ ನನ್ನ ಕೈಯನ್ನು ಚಾಚಿ ನಾನು ಅದರೊಳಗೆ ಮಾಡುವ ಎಲ್ಲಾ ಅದ್ಭುತಗಳಿಂದ ಐಗುಪ್ತವನ್ನು ಹೊಡೆಯುವೆನು. ತರು ವಾಯ ಅವನು ನಿಮ್ಮನ್ನು ಕಳುಹಿಸಿಬಿಡುವನು.

3:21b.EXO.003.021 ಇದಲ್ಲದೆ ಈ ಜನರಿಗೆ ಐಗುಪ್ತ್ಯರ ಕಣ್ಣೆದುರಿನಲ್ಲಿ ದಯೆ ದೊರಕುವಂತೆ ಮಾಡುವೆನು. ನೀವು ಹೋಗುವಾಗ ಬರಿಗೈಯಲ್ಲಿ ಹೋಗುವದಿಲ್ಲ.ಮನೆಯಲ್ಲಿ ಇಳು ಕೊಂಡಿರುವವಳಿಂದಲೂ ಬೆಳ್ಳಿ ಬಂಗಾರದ ಒಡವೆಗಳನ್ನೂ ವಸ್ತ್ರಗಳನ್ನೂ ಕೇಳಿ ಕೊಳ್ಳಲಿ. ಅವುಗಳನ್ನು ನಿಮ್ಮ ಕುಮಾರ ಕುಮಾರ್ತೆ ಯರ ಮೇಲೆ ಹಾಕಿರಿ. ಹೀಗೆ ನೀವು ಐಗುಪ್ತ್ಯರನ್ನು ಸುಲುಕೊಳ್ಳುವಿರಿ ಅಂದನು.

3:22b.EXO.003.022 ಮನೆಯಲ್ಲಿ ಇಳು ಕೊಂಡಿರುವವಳಿಂದಲೂ ಬೆಳ್ಳಿ ಬಂಗಾರದ ಒಡವೆಗಳನ್ನೂ ವಸ್ತ್ರಗಳನ್ನೂ ಕೇಳಿ ಕೊಳ್ಳಲಿ. ಅವುಗಳನ್ನು ನಿಮ್ಮ ಕುಮಾರ ಕುಮಾರ್ತೆ ಯರ ಮೇಲೆ ಹಾಕಿರಿ. ಹೀಗೆ ನೀವು ಐಗುಪ್ತ್ಯರನ್ನು ಸುಲುಕೊಳ್ಳುವಿರಿ ಅಂದನು.

4

4:1b.EXO.004.001 ಮೋಶೆಯು ಪ್ರತ್ಯುತ್ತರವಾಗಿ--ಆದರೆ ಇಗೋ, ಅವರು ನನ್ನನ್ನು ನಂಬುವದಿಲ್ಲ, ನನ್ನ ಮಾತನ್ನು ಕೇಳುವದೂ ಇಲ್ಲ. ಅವರು--ಕರ್ತನು ನಿನಗೆ ಕಾಣಿಸಿಕೊಳ್ಳಲಿಲ್ಲ ಎಂದು ಹೇಳುವರು ಅಂದನು.

4:2b.EXO.004.002 ಕರ್ತನು ಅವನಿಗೆ--ನಿನ್ನ ಕೈಯಲ್ಲಿರುವದೇನು ಅಂದದ್ದಕ್ಕೆ ಅವನು--ಕೋಲು ಅಂದನು.

4:3b.EXO.004.003 ಕರ್ತನು ಅವನಿಗೆ--ಅದನ್ನು ನೆಲದ ಮೇಲೆ ಬಿಸಾಡು ಅಂದಾಗ ಅವನು ಅದನ್ನು ಬಿಸಾಡಿದನು; ಆಗ ಅದು ಸರ್ಪ ವಾಯಿತು. ಮೋಶೆಯು ಅಲ್ಲಿಂದ ಓಡಿಹೋದನು.

4:4b.EXO.004.004 ಕರ್ತನು ಮೋಶೆಗೆ--ನಿನ್ನ ಕೈಚಾಚಿ ಅದರ ಬಾಲ ವನ್ನು ಹಿಡಿ ಅಂದಾಗ ಅವನು ಕೈಚಾಚಿ ಅದನ್ನು ಹಿಡಿದ ಕೂಡಲೆ ಅದು ಅವನ ಕೈಯಲ್ಲಿ ಕೋಲಾಯಿತು.

4:5b.EXO.004.005 ಇದರಿಂದ ಅವರು ತಮ್ಮ ಪಿತೃಗಳಾದ ಅಬ್ರಹಾಮ್‌ ಇಸಾಕ್‌ ಯಾಕೋಬ್‌ ಇವರ ಕರ್ತನಾದ ದೇವರು ನಿನಗೆ ಕಾಣಿಸಿದ್ದನ್ನು ಅವರು ನಂಬುವರು ಅಂದನು.

4:6b.EXO.004.006 ಇದಲ್ಲದೆ ಕರ್ತನು ಅವನ ಸಂಗಡ ಇನ್ನೂ ಮಾತನಾಡಿ--ನಿನ್ನ ಕೈಯನ್ನು ಉಡಿಯಲ್ಲಿ ಹಾಕು ಅಂದಾಗ ಅವನು ತನ್ನ ಕೈಯನ್ನು ಉಡಿಯಲ್ಲಿ ಹಾಕಿ ಹೊರಗೆ ತೆಗೆಯಲು ಇಗೋ, ಅವನ ಕೈ ಕುಷ್ಠದಿಂದ ಹಿಮದಂತೆ ಆಗಿತ್ತು.

4:7b.EXO.004.007 ಆತನು ಅವನಿಗೆ--ನಿನ್ನ ಕೈಯನ್ನು ಉಡಿಯಲ್ಲಿ ಹಾಕು ಅಂದಾಗ ಅವನು ತನ್ನ ಕೈಯನ್ನು ಉಡಿಯಲ್ಲಿ ಹಾಕಿ ಉಡಿಯಿಂದ ಹೊರಗೆ ತೆಗೆಯಲು ಇಗೋ, ಅದು ಅವನ ಬೇರೆ ದೇಹದಂತಾಗಿತ್ತು.

4:8b.EXO.004.008 ಅವರು ನಿನ್ನನ್ನು ನಂಬದೆ ಮೊದಲನೆಯ ಮಹ ತ್ಕಾರ್ಯವನ್ನು ತಿರಸ್ಕರಿಸಿದರೂ ಎರಡನೆಯದನ್ನು ಲಕ್ಷ್ಯವಿಟ್ಟು ನಂಬುವರು.

4:9b.EXO.004.009 ಆ ಎರಡೂ ಮಹತ್ಕಾರ್ಯ ಗಳನ್ನು ಅವರು ನಂಬದೆಯೂ ನಿನ್ನ ಮಾತನ್ನು ಕೇಳ ದೆಯೂ ಹೋದರೆ ನದಿಯ ನೀರನ್ನು ತೆಗೆದು ಒಣಗಿದ ನೆಲದಮೇಲೆ ಸುರಿಯಬೇಕು. ಆಗ ನೀನು ನದಿಯಿಂದ ತೆಗೆದ ನೀರು ಒಣಗಿದ ನೆಲದ ಮೇಲೆ ರಕ್ತವಾಗುವದು ಅಂದನು.

4:10b.EXO.004.010 ಮೋಶೆಯು ಕರ್ತನಿಗೆ--ಓ ನನ್ನ ಕರ್ತನೇ, ನಾನು ಮೊದಲಿನಿಂದಲೂ ನೀನು ನಿನ್ನ ದಾಸನ ಸಂಗಡ ಮಾತನಾಡಿದಂದಿನಿಂದಲೂ ವಾಕ್ಚಾತುರ್ಯವಿ ಲ್ಲದವನು. ನನ್ನ ಮಾತೂ ನಾಲಿಗೆಯೂ ಮಂದವಾಗಿವೆ ಅಂದನು.

4:11b.EXO.004.011 ಅದಕ್ಕೆ ಕರ್ತನು ಅವನಿಗೆ--ಮನುಷ್ಯನಿಗೆ ಬಾಯಿ ಕೊಟ್ಟಾತನೂ ಮೂಕರನ್ನೂ ಕಿವುಡರನ್ನೂ ದೃಷ್ಟಿಯುಳ್ಳವರನ್ನೂ ಕುರುಡರನ್ನೂ ಉಂಟುಮಾಡಿ ದಾತನೂ ಯಾರು? ಕರ್ತನಾದ ನಾನೇ ಅಲ್ಲವೋ?

4:12b.EXO.004.012 ಹಾಗಾದರೆ ಈಗ ಹೋಗು, ನಾನೇ ನಿನ್ನ ಬಾಯಿ ಯಾಗಿದ್ದು ನೀನು ಮಾತನಾಡತಕ್ಕದ್ದನ್ನು ನಿನಗೆ ಬೋಧಿಸುವೆನು ಅಂದನು.

4:13b.EXO.004.013 ಅದಕ್ಕೆ ಮೋಶೆಯು--ಓ ನನ್ನ ಕರ್ತನೇ, ನೀನು ಕಳುಹಿಸಬೇಕೆಂದಿರುವವನನ್ನು ಕಳುಹಿಸು ಎಂದು ಬೇಡುತ್ತೇನೆ ಅಂದನು.

4:14b.EXO.004.014 ಕರ್ತನು ಮೋಶೆಯ ಮೇಲೆ ಕೋಪಗೊಂಡು--ಲೇವಿಯನಾದ ಆರೋನನು ನಿನ್ನ ಸಹೋದರನಲ್ಲವೇ? ಅವನು ಚೆನ್ನಾಗಿ ಮಾತನಾಡ ಬಲ್ಲನೆಂದು ನಾನು ಬಲ್ಲೆನು. ಇಗೋ, ಅವನು ನಿನ್ನನ್ನು ಎದುರು ಗೊಳ್ಳುವದಕ್ಕೆ ಬರುತ್ತಾನೆ. ಅವನು ನಿನ್ನನ್ನು ನೋಡಿ ತನ್ನ ಹೃದಯದಲ್ಲಿ ಆನಂದಿಸುವನು.

4:15b.EXO.004.015 ಅವನ ಸಂಗಡ ನೀನು ಮಾತನಾಡಿ ಹೇಳಬೇಕಾದ ಮಾತು ಗಳನ್ನು ಅವನಿಗೆ ತಿಳಿಸಬೇಕು. ನಿನ್ನ ಬಾಯಿಗೂ ಅವನ ಬಾಯಿಗೂ ಸಹಾಯವಾಗಿದ್ದು ನೀನು ಮಾಡತಕ್ಕದ್ದನ್ನು ಕಲಿಸುವೆನು.

4:16b.EXO.004.016 ಅವನು ನಿನಗಾಗಿ ಜನರ ಸಂಗಡ ಮಾತನಾಡುವನು. ಅವನು ನಿನಗೆ ಬಾಯಿಯಾಗಿ ರುವನು; ನೀನು ಅವನಿಗೆ ದೇವರಂತಿರುವಿ.

4:17b.EXO.004.017 ಈ ಕೋಲನ್ನು ನಿನ್ನ ಕೈಯಲ್ಲಿ ತಕ್ಕೊಳ್ಳಬೇಕು. ನೀನು ಇದರಿಂದಲೇ ಆ ಸೂಚಕಕಾರ್ಯಗಳನ್ನು ಮಾಡುವಿ ಅಂದನು.

4:18b.EXO.004.018 ಆಗ ಮೋಶೆಯು ಹೋಗಿ ತನ್ನ ಮಾವನಾದ ಇತ್ರೋನನ ಬಳಿಗೆ ಬಂದು ಅವನಿಗೆ--ಐಗುಪ್ತ ದಲ್ಲಿರುವ ನನ್ನ ಸಹೋದರರ ಬಳಿಗೆ ಹಿಂತಿರುಗಿ ಹೋಗಿ ಅವರು ಇನ್ನೂ ಜೀವದಿಂದಿರುವರೋ ಎಂದು ನೋಡುವೆನು ಅಂದನು. ಇತ್ರೋನನು ಮೋಶೆಗೆ--ಸಮಾಧಾನದಿಂದ ಹೋಗು ಅಂದನು.

4:19b.EXO.004.019 ಇದಲ್ಲದೆ ಕರ್ತನು ಮಿದ್ಯಾನಿನಲ್ಲಿ ಮೋಶೆಗೆ--ಐಗುಪ್ತಕ್ಕೆ ಹಿಂತಿರುಗಿ ಹೋಗು; ನಿನ್ನ ಪ್ರಾಣವನ್ನು ಹುಡುಕಿದ ಜನರೆಲ್ಲಾ ಸತ್ತಿದ್ದಾರೆ ಅಂದನು.

4:20b.EXO.004.020 ಆಗ ಮೋಶೆಯು ತನ್ನ ಹೆಂಡತಿಯನ್ನೂ ಮಕ್ಕಳನ್ನೂ ಕರ ಕೊಂಡು ಕತ್ತೆಯಮೇಲೆ ಹತ್ತಿಸಿ ಐಗುಪ್ತ ದೇಶಕ್ಕೆ ಹಿಂತಿರುಗಿ ಬಂದನು. ಇದಲ್ಲದೆ ಮೋಶೆಯು ದೇವರ ಕೋಲನ್ನು ಕೈಯಲ್ಲಿ ತಕ್ಕೊಂಡನು.

4:21b.EXO.004.021 ಆಗ ಕರ್ತನು ಮೋಶೆಗೆ--ನೀನು ಐಗುಪ್ತದೇಶಕ್ಕೆ ಹಿಂತಿರುಗಿ ಹೋಗು ವಾಗ ನಾನು ನಿನ್ನ ಕೈಯಿಂದ ಮಾಡಿಸಿದ ಎಲ್ಲಾ ಸೂಚಕ ಕಾರ್ಯಗಳನ್ನು ಫರೋಹನ ಮುಂದೆ ಮಾಡು. ಆದರೆ ನಾನು ಅವನ ಹೃದಯವನ್ನು ಕಠಿಣಪಡಿಸುವೆನು. ಅವನು ಜನರನ್ನು ಹೋಗಗೊಡಿಸುವದಿಲ್ಲ.

4:22b.EXO.004.022 ಆಗ ನೀನು ಫರೋಹನಿಗೆ--ಕರ್ತನು ಹೀಗೆ ಹೇಳುತ್ತಾನೆ; ಇಸ್ರಾಯೇಲು ನನ್ನ ಮಗನು. ಅವನು ನನ್ನ ಚೊಚ್ಚಲ ಮಗನೇ ಎಂದು ಹೇಳಬೇಕು.

4:23b.EXO.004.023 (ಫರೋಹನೇ) ನಾನು ನಿನಗೆ ಹೇಳುವದೇನಂದರೆ--ನನ್ನ ಸೇವೆಮಾಡು ವಂತೆ ನನ್ನ ಮಗನನ್ನು ಕಳುಹಿಸು. ನೀನು ಅವನನ್ನು ಕಳುಹಿಸುವದನ್ನು ನಿರಾಕರಿಸಿದರೆ ಇಗೋ, ನಾನು ನಿನ್ನ ಮಗನನ್ನು ಅಂದರೆ ನಿನ್ನ ಚೊಚ್ಚಲಮಗನನ್ನು ಕೊಲ್ಲುವೆನು ಅಂದನು.

4:24b.EXO.004.024 ಇದಲ್ಲದೆ ಅವನು ದಾರಿಯ ವಸತಿ ಗೃಹದಲ್ಲಿ ದ್ದಾಗ ಕರ್ತನು ಅವನೆದುರಿಗೆ ಬಂದು ಅವನ ಪ್ರಾಣ ತೆಗೆಯಬೇಕೆಂದಿದ್ದನು.

4:25b.EXO.004.025 ಆಗ ಚಿಪ್ಪೋರಳು ಹದವಾದ ಕಲ್ಲನ್ನು ತೆಗೆದುಕೊಂಡು ತನ್ನ ಮಗನಿಗೆ ಸುನ್ನತಿ ಮಾಡಿ ಅದನ್ನು ಅವನ ಕಾಲುಗಳ ಮುಂದೆ ಹಾಕಿ ಮೋಶೆಗೆ--ನಿಜವಾಗಿ ನೀನು ನನಗೆ ರಕ್ತದ ಗಂಡನು ಅಂದಳು.

4:26b.EXO.004.026 ಆಗ ಆತನು ಅವನನ್ನು ಬಿಟ್ಟನು. ಅವಳು--ಸುನ್ನತಿಯ ನಿಮಿತ್ತ ನೀನು ರಕ್ತದ ಗಂಡ ನಾಗಿದ್ದೀ ಅಂದಳು.

4:27b.EXO.004.027 ಇದಲ್ಲದೆ ಕರ್ತನು ಆರೋನನಿಗೆ--ಮೋಶೆ ಯನ್ನು ಎದುರುಗೊಳ್ಳುವದಕ್ಕೆ ಅರಣ್ಯಕ್ಕೆ ಹೋಗು ಅಂದನು. ಅವನು ಹೋಗಿ ದೇವರ ಬೆಟ್ಟದಲ್ಲಿ ಅವನನ್ನು ಎದುರುಗೊಂಡು ಮುದ್ದಿಟ್ಟನು.

4:28b.EXO.004.028 ಆಗ ಮೋಶೆಯು ಆರೋನನಿಗೆ ತನ್ನನ್ನು ಕಳುಹಿಸಿದ ಕರ್ತನ ಎಲ್ಲಾ ಮಾತುಗಳನ್ನೂ ತನಗೆ ಆಜ್ಞಾಪಿಸಿದ ಎಲ್ಲಾ ಸೂಚಕಕಾರ್ಯಗಳನ್ನೂ ತಿಳಿಸಿದನು.

4:29b.EXO.004.029 ತರುವಾಯ ಮೋಶೆಯೂ ಆರೋನನೂ ಹೋಗಿ ಇಸ್ರಾಯೇಲ್‌ ಮಕ್ಕಳ ಹಿರಿಯರನ್ನೆಲ್ಲಾ ಒಟ್ಟುಗೂಡಿಸಿದರು.

4:30b.EXO.004.030 ಕರ್ತನು ಮೋಶೆಗೆ ಹೇಳಿದ ಮಾತುಗಳನ್ನೆಲ್ಲಾ ಆರೋನನು ಹೇಳಿ ಜನರ ಕಣ್ಣುಗಳ ಮುಂದೆ ಸೂಚಕ ಕಾರ್ಯಗಳನ್ನು ಮಾಡಲು. ಜನರು ನಂಬಿದರು.ಕರ್ತನು ಇಸ್ರಾಯೇಲ್‌ ಮಕ್ಕಳನ್ನು ದರ್ಶಿಸಿ ಅವರ ಸಂಕಟವನ್ನು ನೋಡಿದ್ದಾನೆಂದು ಅವರು ಕೇಳಿದಾಗ ತಲೆಬಾಗಿಸಿ ಆರಾಧಿಸಿದರು.

4:31b.EXO.004.031 ಕರ್ತನು ಇಸ್ರಾಯೇಲ್‌ ಮಕ್ಕಳನ್ನು ದರ್ಶಿಸಿ ಅವರ ಸಂಕಟವನ್ನು ನೋಡಿದ್ದಾನೆಂದು ಅವರು ಕೇಳಿದಾಗ ತಲೆಬಾಗಿಸಿ ಆರಾಧಿಸಿದರು.

5

5:1b.EXO.005.001 ತರುವಾಯ ಮೋಶೆಯೂ ಆರೋನನೂ ಹೋಗಿ ಫರೋಹನಿಗೆ--ಇಸ್ರಾಯೇಲಿನ ದೇವರಾದ ಕರ್ತನು--ಅರಣ್ಯದಲ್ಲಿ ನನ್ನ ಜನರು ನನಗೆ ಹಬ್ಬವನ್ನಾಚರಿಸುವದಕ್ಕೆ ಅವರನ್ನು ಹೋಗಗೊಡಿಸು ಎಂದು ಹೇಳುತ್ತಾನೆ ಅಂದರು.

5:2b.EXO.005.002 ಫರೋಹನು--ನಾನು ಆತನ ಸ್ವರಕ್ಕೆ ವಿಧೇಯನಾಗಿ ಇಸ್ರಾಯೇಲ್ಯರನ್ನು ಕಳುಹಿಸಿ ಬಿಡುವಂತೆ ಆ ಕರ್ತನು ಯಾರು? ಆ ಕರ್ತನನ್ನು ನಾನರಿಯೆನು ಮತ್ತು ಇಸ್ರಾಯೇಲ್ಯರನ್ನು ಕಳುಹಿಸುವದಿಲ್ಲ ಅಂದನು.

5:3b.EXO.005.003 ಆಗ ಅವರು ಫರೋಹ ನಿಗೆ--ಇಬ್ರಿಯರ ದೇವರು ನಮ್ಮನ್ನು ಎದುರುಗೊಂಡಿ ದ್ದಾನೆ; ಆದದರಿಂದ ನಾವು ಅರಣ್ಯದಲ್ಲಿ ಮೂರು ದಿನ ಪ್ರಯಾಣಮಾಡಿ ನಮ್ಮ ದೇವರಾದ ಕರ್ತನಿಗೆ ಬಲಿ ಅರ್ಪಿಸುವದಕ್ಕಾಗಿ ನಾವು ಹೋಗಬೇಕು; ಇಲ್ಲ ವಾದರೆ ಆತನು ವ್ಯಾಧಿಯಿಂದಲಾದರೂ ಕತ್ತಿಯಿಂದ ಲಾದರೂ ನಮ್ಮನ್ನು ಸಂಹಾರ ಮಾಡಾನು ಎಂದು ಅಂದರು.

5:4b.EXO.005.004 ಐಗುಪ್ತದ ಅರಸನು ಅವರಿಗೆ--ಮೋಶೆಯೇ, ಆರೋನನೇ, ಜನರು ತಮ್ಮ ಕೆಲಸ ಗಳನ್ನು ಮಾಡದಂತೆ ಯಾಕೆ ಮಾಡುತ್ತೀರಿ? ನಿಮ್ಮ ಬಿಟ್ಟೀಕೆಲಸಗಳಿಗೆ ಹೋಗಿರಿ ಅಂದನು.

5:5b.EXO.005.005 ಫರೋ ಹನು--ಇಗೋ, ಈಗ ದೇಶದ ಜನರು ಹೆಚ್ಚಿದ್ದಾರೆ; ನೀವು ಅವರನ್ನು ಅವರ ಬಿಟ್ಟೀಕೆಲಸಗಳಿಂದ ನಿಲ್ಲಿಸಿ ಬಿಡುತ್ತೀರಿ ಅಂದನು.

5:6b.EXO.005.006 ಅದೇ ದಿನದಲ್ಲಿ ಫರೋಹನು ಬಿಟ್ಟೀಕೆಲಸ ಮಾಡಿಸುವವರಿಗೂ ಅವರ ಅಧಿಕಾರಿ ಗಳಿಗೂ--

5:7b.EXO.005.007 ನೀವು ಇನ್ನು ಇಟ್ಟಿಗೆಗಳನ್ನು ಮಾಡುವದಕ್ಕೆ ಮೊದಲಿನ ಹಾಗೆ ಜನರಿಗೆ ಹುಲ್ಲನ್ನು ಕೊಡಬೇಡಿರಿ. ಅವರೇ ಹೋಗಿ ಹುಲ್ಲನ್ನು ಕೂಡಿಸಿಕೊಳ್ಳಲಿ.

5:8b.EXO.005.008 ಅವರು ಈ ವರೆಗೆ ಮಾಡಿದ ಇಟ್ಟಿಗೆಗಳ ಲೆಕ್ಕದಲ್ಲಿ ಏನೂ ಕಡಿಮೆ ಮಾಡಬಾರದೆಂದು ಅವರಿಗೆ ಹೇಳಬೇಕು. ಅವರು ಮೈಗಳ್ಳರೇ; ಆದದರಿಂದ ಅವರು--ನಾವು ಹೋಗಿ ನಮ್ಮ ದೇವರಿಗೆ ಬಲಿ ಅರ್ಪಿಸೋಣ ಎಂದು ಕೂಗುತ್ತಾರೆ.

5:9b.EXO.005.009 ಈ ಜನರು ವ್ಯರ್ಥವಾದ ಮಾತುಗಳಿಗೆ ಲಕ್ಷ್ಯಕೊಡದಂತೆ ಅವರ ಮೇಲೆ ಹೆಚ್ಚು ಕೆಲಸಗಳನ್ನು ಹೊರಿಸಿರಿ, ಅವರು ದುಡಿಯಲಿ ಎಂದು ಆಜ್ಞಾಪಿಸಿದನು.

5:10b.EXO.005.010 ಆಗ ಬಿಟ್ಟೀಕೆಲಸವನ್ನು ಮಾಡಿಸುವವರೂ ಅಧಿ ಕಾರಿಗಳೂ ಹೊರಗೆಹೋಗಿ ಜನರಿಗೆ--ಫರೋಹನು ಹೀಗೆ ಹೇಳುತ್ತಾನೆ--ನಾನು ನಿಮಗೆ ಹುಲ್ಲು ಕೊಡು ವದಿಲ್ಲ.

5:11b.EXO.005.011 ನಿಮಗೆ ಹುಲ್ಲು ಎಲ್ಲಿ ದೊರಕುವದೋ ಅಲ್ಲಿಗೆ ನೀವೇ ಹೋಗಿ ತಕ್ಕೊಳ್ಳಿರಿ; ಆದಾಗ್ಯೂ ನಿಮ್ಮ ಕೆಲಸವು ಏನೂ ಕಡಿಮೆಯಾಗಬಾರದು ಎಂದು ಹೇಳಿ ದ್ದಾನೆ ಅಂದನು.

5:12b.EXO.005.012 ಆಗ ಜನರು ಹುಲ್ಲಿಗೆ ಬದಲಾಗಿ ಕೂಳೆ ಕೂಡಿಸಿಕೊಳ್ಳುವದಕ್ಕೆ ಐಗುಪ್ತದೇಶದಲ್ಲೆಲ್ಲಾ ಚದರಿಹೋದರು.

5:13b.EXO.005.013 ಇದಲ್ಲದೆ ಬಿಟ್ಟೀಕೆಲಸ ಮಾಡಿಸು ವವರು--ಹುಲ್ಲು ಇದ್ದಾಗ ನಿಮ್ಮ ಕೆಲಸಗಳನ್ನು ಮಾಡಿ ದಂತೆಯೇ ಪ್ರತಿಯೊಂದು ದಿನದಲ್ಲಿ ಆ ದಿನದ ಕೆಲಸ ವನ್ನು ತೀರಿಸಿಬಿಡಬೇಕು ಎಂದು ಹೇಳಿ ಅವರನ್ನು ತ್ವರೆಪಡಿಸಿದರು.

5:14b.EXO.005.014 ಇಸ್ರಾಯೇಲ್ಯರು ಬಿಟ್ಟೀಕೆಲಸ ಮಾಡಿಸುವಂತೆ ಫರೋಹನ ಅಧಿಕಾರಿಗಳು ನೇಮಿಸಿ ದವರಿಗೆ--ನೀವು ಮೊದಲು ಇಟ್ಟಿಗೆಗಳ ಲೆಕ್ಕವನ್ನು ಒಪ್ಪಿಸಿದಂತೆ ನಿನ್ನೆ ಈ ಹೊತ್ತು ಯಾಕೆ ಒಪ್ಪಿಸಲಿಲ್ಲ ಎಂದು ಹೇಳಿ ಅವರನ್ನು ಹೊಡಿಸಿದರು.

5:15b.EXO.005.015 ಇಸ್ರಾಯೇಲ್‌ ಮಕ್ಕಳ ಅಧಿಕಾರಿಗಳು ಫರೋ ಹನ ಬಳಿಗೆ ಹೋಗಿ--ಯಾಕೆ ನಿನ್ನ ದಾಸರಿಗೆ ಹೀಗೆ ಮಾಡುತ್ತೀ?

5:16b.EXO.005.016 ನಿನ್ನ ದಾಸರಿಗೆ ಅವರು ಹುಲ್ಲು ಕೊಡದೆ--ಇಟ್ಟಿಗೆಗಳನ್ನು ಮಾಡಿರಿ ಎಂದು ನಮಗೆ ಹೇಳುತ್ತಾರೆ. ಇಗೋ, ನಿನ್ನ ದಾಸರನ್ನು ಹೊಡೆಯುತ್ತಾರೆ. ಆದರೆ ನಿನ್ನ ಸ್ವಂತ ಜನರಲ್ಲಿಯೇ ತಪ್ಪು ಇದೆ ಅಂದರು.

5:17b.EXO.005.017 ಅದಕ್ಕೆ ಅವನು--ನೀವು ಮೈಗಳ್ಳರು, ನೀವು ಮೈಗಳ್ಳರಾದ ಕಾರಣ--ನಾವು ಹೋಗಿ ಕರ್ತನಿಗೆ ಬಲಿಯರ್ಪಿಸುತ್ತೇವೆ ಎಂದು ಅನ್ನುತ್ತೀರಿ.

5:18b.EXO.005.018 ಆದದ ರಿಂದ ಈಗ ಹೋಗಿ ಕೆಲಸಮಾಡಿರಿ, ಹುಲ್ಲನ್ನು ನಿಮಗೆ ಕೊಡುವದಕ್ಕಾಗುವದಿಲ್ಲ. ಆದಾಗ್ಯೂ ನೇಮಿಸಿದ್ದ ಇಟ್ಟಿಗೆಗಳನ್ನು ನೀವು ಕೊಡಬೇಕು ಅಂದನು.

5:19b.EXO.005.019 ದಿನದಿನವೂ ಒಪ್ಪಿಸಬೇಕಾದ ಇಟ್ಟಿಗೆಗಳ ಲೆಕ್ಕ ಕಡಿಮೆಯಾಗಬಾರದೆಂದು ಅಪ್ಪಣೆಯಾದದ್ದರಿಂದ ಇಸ್ರಾಯೇಲ್‌ ಅಧಿಕಾರಿಗಳು ತಾವು ದುರವಸ್ಥೆಯಲ್ಲಿ ದ್ದೇವೆಂದು ತಿಳುಕೊಂಡರು.

5:20b.EXO.005.020 ಅವರು ಫರೋಹ ನಿಂದ ಹೊರಗೆ ಬಂದಾಗ ದಾರಿಯಲ್ಲಿ ನಿಂತಿದ್ದ ಮೋಶೆಯನ್ನೂ ಆರೋನನನ್ನೂ ಸಂಧಿಸಿ

5:21b.EXO.005.021 ಅವ ರಿಗೆ--ಕರ್ತನು ನಿಮ್ಮನ್ನು ನೋಡಿ ನ್ಯಾಯತೀರಿಸಲಿ; ನೀವೇ ಫರೋಹನ ಮುಂದೆಯೂ ಅವನ ದಾಸರ ಮುಂದೆಯೂ ನಮ್ಮನ್ನು ಅವರು ಹೇಸಿಕೊಳ್ಳುವಂತೆ ಮಾಡಿದಿರಿ, ನಮ್ಮನ್ನು ಸಂಹರಿಸುವದಕ್ಕೆ ನೀವು ಅವರ ಕೈಗೆ ಕತ್ತಿಯನ್ನು ಕೊಟ್ಟಿರಿ ಅಂದರು.

5:22b.EXO.005.022 ಆಗ ಮೋಶೆಯು ಕರ್ತನ ಬಳಿಗೆ ಬಂದು--ಕರ್ತನೇ, ಈ ಜನರಿಗೆ ಯಾಕೆ ಕೇಡನ್ನು ಮಾಡಿದಿ? ಯಾಕೆ ನನ್ನನ್ನು ಕಳುಹಿಸಿದಿ?ನಾನು ಫರೋಹನ ಬಳಿಗೆ ಬಂದು ನಿನ್ನ ಹೆಸರಿನಲ್ಲಿ ಮಾತನಾಡಿದಂದಿನಿಂದ ಈ ಜನರಿಗೆ ಅವನು ಕೇಡನ್ನೇ ಮಾಡುತ್ತಾನೆ. ನೀನು ನಿನ್ನ ಜನರನ್ನು ತಪ್ಪಿಸಲಿಲ್ಲವಲ್ಲಾ ಅಂದನು.

5:23b.EXO.005.023 ನಾನು ಫರೋಹನ ಬಳಿಗೆ ಬಂದು ನಿನ್ನ ಹೆಸರಿನಲ್ಲಿ ಮಾತನಾಡಿದಂದಿನಿಂದ ಈ ಜನರಿಗೆ ಅವನು ಕೇಡನ್ನೇ ಮಾಡುತ್ತಾನೆ. ನೀನು ನಿನ್ನ ಜನರನ್ನು ತಪ್ಪಿಸಲಿಲ್ಲವಲ್ಲಾ ಅಂದನು.

6

6:1b.EXO.006.001 ಕರ್ತನು ಮೋಶೆಗೆ--ನಾನು ಫರೋಹ ನಿಗೆ ಮಾಡುವದನ್ನು ಈಗ ನೀನು ನೋಡುವಿ. ಅವನು ಬಲವಾದ ಹಸ್ತದಿಂದ ಅವರನ್ನು ಹೋಗಗೊಡಿಸಿ ಬಲವಾದ ಹಸ್ತದಿಂದ ಅವನು ಅವ ರನ್ನು ತನ್ನ ದೇಶದೊಳಗಿಂದ ಓಡಿಸುವನು ಅಂದನು.

6:2b.EXO.006.002 ದೇವರು ಮೋಶೆಯ ಸಂಗಡ ಮಾತನಾಡಿ--ನಾನೇ ಕರ್ತನು;

6:3b.EXO.006.003 ನಾನೇ ಅಬ್ರಹಾಮನಿಗೂ ಇಸಾಕ ನಿಗೂ ಯಾಕೋಬನಿಗೂ ಸರ್ವಶಕ್ತನಾದ ದೇವರೆಂಬ ನಾಮದಲ್ಲಿ ಕಾಣಿಸಿಕೊಂಡೆನು. ಆದರೆ ಯೆಹೋವ ನೆಂಬ ನನ್ನ ಹೆಸರಿನಿಂದ ನಾನು ಅವರಿಗೆ ಗೋಚರ ವಾಗಲಿಲ್ಲ.

6:4b.EXO.006.004 ಕಾನಾನ್‌ ದೇಶವನ್ನು ಅಂದರೆ ಅವರು ವಾಸವಾಗಿದ್ದ ಅವರ ಪ್ರವಾಸದ ದೇಶವನ್ನು ನಾನು ಅವರಿಗೆ ಕೊಡುವೆನೆಂದು ಅವರ ಸಂಗಡ ನನ್ನ ಒಡಂಬ ಡಿಕೆಯನ್ನು ದೃಢಪಡಿಸಿದೆನು.

6:5b.EXO.006.005 ಐಗುಪ್ತ್ಯರು ದಾಸರ ನ್ನಾಗಿ ಇಟ್ಟುಕೊಂಡಿರುವ ಇಸ್ರಾಯೇಲ್‌ ಮಕ್ಕಳ ಮೂಲುಗುವಿಕೆಯನ್ನು ಕೇಳಿ ನನ್ನ ಒಡಂಬಡಿಕೆಯನ್ನು ನೆನಪಿಗೆ ತಂದುಕೊಂಡೆನು.

6:6b.EXO.006.006 ಆದದರಿಂದ ಇಸ್ರಾ ಯೇಲ್‌ ಮಕ್ಕಳಿಗೆ--ನಾನೇ ಕರ್ತನು, ನಾನು ನಿಮ್ಮನ್ನು ಐಗುಪ್ತದ ಬಿಟ್ಟೀಕೆಲಸಗಳಿಂದ ಹೊರಗೆ ಬರಮಾಡಿ ಅವರ ದಾಸತ್ವದಿಂದ ನಿಮ್ಮನ್ನು ಬಿಡಿಸಿ ನಾನು ಚಾಚಿದ ಬಾಹುವಿನಿಂದಲೂ ದೊಡ್ಡ ನ್ಯಾಯತೀರ್ಪುಗ ಳಿಂದಲೂ

6:7b.EXO.006.007 ನಿಮ್ಮನ್ನು ನನ್ನ ಜನರನ್ನಾಗಿ ತಕ್ಕೊಂಡು ನಿಮಗೆ ದೇವರಾಗಿರುವೆನು; ಐಗುಪ್ತದ ಬಿಟ್ಟೀಕೆಲಸ ಗಳಿಂದ ನಿಮ್ಮನ್ನು ಹೊರಗೆ ಬರಮಾಡಿದಾಗ ಕರ್ತ ನಾಗಿರುವ ನಾನೇ ನಿಮ್ಮ ದೇವರಾಗಿದ್ದೇನೆಂದು ನಿಮಗೆ ತಿಳಿಯುವದು.

6:8b.EXO.006.008 ನಾನು ಅಬ್ರಹಾಮನಿಗೂ ಇಸಾಕ ನಿಗೂ ಯಾಕೋಬನಿಗೂ ಕೊಡುವೆನೆಂದು ನನ್ನ ಕೈಯ ನ್ನೆತ್ತಿ ಪ್ರಮಾಣಮಾಡಿದ ದೇಶದಲ್ಲಿ ನಿಮ್ಮನ್ನು ಬರ ಮಾಡಿ ಅದನ್ನು ನಿಮಗೆ ಸ್ವಾಸ್ಥ್ಯವಾಗಿ ಕೊಡುವೆನೆಂದು ಹೇಳಿದ ಕರ್ತನು ನಾನೇ ಎಂದು ಹೇಳು ಅಂದನು.

6:9b.EXO.006.009 ಮೋಶೆಯು ಇಸ್ರಾಯೇಲ್‌ ಮಕ್ಕಳಿಗೆ ಹಾಗೆ ಹೇಳಿ ದಾಗ ಅವರು ಮನೋವೇದನೆಯ ದೆಸೆಯಿಂದಲೂ ಕ್ರೂರವಾದ ದಾಸತ್ವದ ದೆಸೆಯಿಂದಲೂ ಮೋಶೆಯ ಮಾತನ್ನು ಕೇಳಲಿಲ್ಲ.

6:10b.EXO.006.010 ಆಗ ಕರ್ತನು ಮೋಶೆಯ ಸಂಗಡ ಮಾತ ನಾಡಿ--

6:11b.EXO.006.011 ಐಗುಪ್ತದ ಅರಸನಾದ ಫರೋಹನ ಬಳಿಗೆ ಹೋಗಿ ಅವನು ಇಸ್ರಾಯೇಲ್‌ ಮಕ್ಕಳನ್ನು ತನ್ನ ದೇಶದಿಂದ ಕಳುಹಿಸುವ ಹಾಗೆ ನೀನು ಅವನ ಸಂಗಡ ಮಾತನಾಡು ಅಂದನು.

6:12b.EXO.006.012 ಆದರೆ ಮೋಶೆಯು ಕರ್ತನ ಸನ್ನಿಧಿಯಲ್ಲಿ--ಇಗೋ, ಇಸ್ರಾಯೇಲ್‌ ಮಕ್ಕಳೇ ನನ್ನ ಮಾತನ್ನು ಕೇಳದಿರುವಲ್ಲಿ ತೊದಲು ನಾಲಿಗೆಯವನಾದ ನನ್ನ ಮಾತನ್ನು ಫರೋಹನು ಕೇಳುವದು ಹೇಗೆ ಎಂದು ಹೇಳಿದನು.

6:13b.EXO.006.013 ಕರ್ತನು ಮೋಶೆ ಆರೋನರ ಸಂಗಡ ಮಾತನಾಡಿ ಇಸ್ರಾಯೇಲ್‌ ಮಕ್ಕಳನ್ನು ಐಗುಪ್ತ ದೇಶದೊಳಗಿಂದ ಹೊರಗೆ ಬರಮಾಡುವಂತೆ ಇಸ್ರಾ ಯೇಲ್ಯರ ಬಳಿಗೂ ಫರೋಹನ ಬಳಿಗೂ ಹೋಗ ಬೇಕೆಂದು ಹೇಳಿ ಅವರಿಗೆ ಆಜ್ಞಾಪಿಸಿದನು.

6:14b.EXO.006.014 ಅವರ ತಂದೆಗಳ ಮನೆಯ ಮುಖ್ಯಸ್ಥರು ಇವರೇ: ಇಸ್ರಾಯೇಲನ ಚೊಚ್ಚಲಮಗನಾದ ರೂಬೇನನ ಕುಮಾರರು: ಹನೋಕ್‌ ಫಲ್ಲು ಹೆಚ್ರೋನ್‌ ಕರ್ವಿಾ; ಇವರೇ ರೂಬೇನನ ಗೋತ್ರಗಳು.

6:15b.EXO.006.015 ಸಿಮೆಯೋನನ ಕುಮಾರರು: ಯೆಮೂಯೇಲ್‌, ಯಾವಿಾನ್‌ ಓಹದ್‌ ಯಾಕೀನ್‌ ಚೋಹರ್‌ ಮತ್ತು ಕಾನಾನ್ಯಳ ಮಗನಾದ ಸೌಲ: ಇವರೇ ಸಿಮೆಯೋನನ ಗೋತ್ರಗಳು.

6:16b.EXO.006.016 ತಮ್ಮ ತಮ್ಮ ವಂಶಾವಳಿಗಳ ಪ್ರಕಾರವಾಗಿರುವ ಲೇವಿಯ ಕುಮಾರರ ಹೆಸರುಗಳು ಇವೇ: ಗೇರ್ಷೋನ್‌ ಕೆಹಾತ್‌ ಮೆರಾರೀ. ಲೇವಿಯು ನೂರ ಮೂವತ್ತೇಳು ವರುಷ ಬದುಕಿದನು.

6:17b.EXO.006.017 ಗೇರ್ಷೋನನ ಕುಮಾರರು ಅವರ ಗೋತ್ರಗಳಿಗನುಸಾರವಾಗಿ: ಲಿಬ್ನೀ ಶಿವ್ಮೆಾಯರು.

6:18b.EXO.006.018 ಕೆಹಾತನ ಕುಮಾರರು: ಅಮ್ರಾಮ್‌ ಇಚ್ಹಾರ್‌ ಹೆಬ್ರೋನ್‌ ಉಜ್ಜೀಯೇಲ್‌. ಕೆಹಾತನು ಜೀವಿಸಿದ ವರುಷಗಳು ನೂರ ಮೂವತ್ತುಮೂರು.

6:19b.EXO.006.019 ಮೆರಾರೀಯ ಕುಮಾರರು: ಮಹ್ಲೀ ಮೂಷೀ. ವಂಶಾ ವಳಿಗಳ ಪ್ರಕಾರ ಇವರೇ ಲೇವಿಯ ಗೋತ್ರಗಳು.

6:20b.EXO.006.020 ಅಮ್ರಾಮನು ತನ್ನ ಸೋದರತ್ತೆಯಾದ ಯೋಕೆಬೆ ದಳನ್ನು ಹೆಂಡತಿಯಾಗಿ ತಕ್ಕೊಂಡನು. ಆಕೆಯು ಅವನಿಗೆ ಆರೋನನನ್ನೂ ಮೋಶೆಯನ್ನೂ ಹೆತ್ತಳು. ಅಮ್ರಾಮನು ಜೀವಿಸಿದ ಕಾಲ ನೂರ ಮೂವತ್ತೇಳು ವರುಷಗಳು.

6:21b.EXO.006.021 ಇಚ್ಹಾರನ ಕುಮಾರರು: ಕೋರಹ ನೆಫೆಗ್‌ ಜಿಕ್ರೀ.

6:22b.EXO.006.022 ಉಜ್ಜೀಯೇಲನ ಕುಮಾರರು: ವಿಾಷಾಯೇಲ್‌ ಎಲ್ಚಾಫಾನ್‌ ಸಿತ್ರೀ.

6:23b.EXO.006.023 ಆರೋನನು ಅವ್ಮೆಾನಾದಾಬನ ಮಗಳೂ ನಹಶೋನನ ಸಹೋದರಿಯೂ ಆದ ಎಲೀಶೇಬ ಳನ್ನು ತನ್ನ ಹೆಂಡತಿಯಾಗಿ ತಕ್ಕೊಂಡನು. ಆಕೆಯು ಅವನಿಗೆ--ನಾದಾಬ್‌ ಅಬೀಹೂ ಎಲ್ಲಾಜಾರ್‌ ಈತಾಮಾರ್‌ ಇವರನ್ನು ಹೆತ್ತಳು.

6:24b.EXO.006.024 ಕೋರಹನ ಕುಮಾರರು: ಅಸ್ಸೀರ್‌ ಎಲ್ಕಾನಾ ಅಬೀಯಾಸಾಫ್‌ ಎಂಬವರು. ಇವರೇ ಕೋರಹೀಯರ ಗೋತ್ರಗಳು.

6:25b.EXO.006.025 ಆರೋನನ ಮಗನಾದ ಎಲ್ಲಾಜಾರನು ಪೂಟಿಯೇಲನ ಮಕ್ಕಳಲ್ಲಿ ಒಬ್ಬಳನ್ನು ತನಗೆ ಹೆಂಡತಿ ಯಾಗಿ ತಕ್ಕೊಂಡನು. ಆಕೆಯು ಅವನಿಗೆ--ಫಿನೇಹಾಸ ನನ್ನು ಹೆತ್ತಳು. ಗೋತ್ರಗಳ ಪ್ರಕಾರ ಇವರು ಲೇವಿ ಯರ ತಂದೆಗಳ ಮುಖ್ಯಸ್ಥರು.

6:26b.EXO.006.026 ಇಸ್ರಾಯೇಲ್‌ ಮಕ್ಕಳನ್ನು ಅವರ ಸೈನ್ಯಗಳ ಪ್ರಕಾರ ಐಗುಪ್ತದೊಳಗಿಂದ ಹೊರಗೆ ಬರಮಾಡ ಬೇಕೆಂದು ಕರ್ತನು ಯಾರಿಗೆ ಹೇಳಿದನೋ ಆ ಆರೋನ ಮೋಶೆ ಇವರೇ.

6:27b.EXO.006.027 ಇಸ್ರಾಯೇಲ್‌ ಮಕ್ಕ ಳನ್ನು ಹೊರಗೆ ತರುವದಕ್ಕಾಗಿ ಐಗುಪ್ತದ ಅರಸನಾದ ಫರೋಹನ ಸಂಗಡ ಮಾತನಾಡಿದ ಮೋಶೆ ಆರೋನರೂ ಇವರೇ.

6:28b.EXO.006.028 ಕರ್ತನು ಐಗುಪ್ತದೇಶದಲ್ಲಿ ಮೋಶೆಯ ಸಂಗಡ ಮಾತನಾಡಿದ ದಿನದಲ್ಲಿ

6:29b.EXO.006.029 ಮೋಶೆಗೆ--ನಾನೇ ಕರ್ತನು, ನಾನು ನಿನಗೆ ಹೇಳುವದನ್ನೆಲ್ಲಾ ಐಗುಪ್ತದ ಅರಸನಾದ ಫರೋಹನಿಗೆ ತಿಳಿಸು ಅಂದನು.ಅದಕ್ಕೆ ಮೋಶೆಯು ಕರ್ತನ ಮುಂದೆ--ಇಗೋ, ನಾನು ತೊದಲು ನಾಲಿಗೆಯುಳ್ಳವನು. ಫರೋಹನು ನನ್ನ ಮಾತನ್ನು ಹೇಗೆ ಕೇಳಾನು ಅಂದನು.

6:30b.EXO.006.030 ಅದಕ್ಕೆ ಮೋಶೆಯು ಕರ್ತನ ಮುಂದೆ--ಇಗೋ, ನಾನು ತೊದಲು ನಾಲಿಗೆಯುಳ್ಳವನು. ಫರೋಹನು ನನ್ನ ಮಾತನ್ನು ಹೇಗೆ ಕೇಳಾನು ಅಂದನು.

7

7:1b.EXO.007.001 ಆಗ ಕರ್ತನು ಮೋಶೆಗೆ--ಇಗೋ, ನಿನ್ನನ್ನು ಫರೋಹನಿಗೆ ದೇವರಂತೆ ಮಾಡಿದ್ದೇನೆ; ನಿನ್ನ ಸಹೋದರನಾದ ಆರೋನನ್ನು ನಿನ್ನಗೋಸ್ಕರ ಪ್ರವಾದಿಯನ್ನಾಗಿ ಮಾಡಿದ್ದೇನೆ.

7:2b.EXO.007.002 ನಾನು ನಿನಗೆ ಆಜ್ಞಾಪಿಸುವದನ್ನೆಲ್ಲಾ ನೀನು ಮಾತನಾಡಬೇಕು; ಇಸ್ರಾಯೇಲ್‌ ಮಕ್ಕಳನ್ನು ತನ್ನ ದೇಶದೊಳಗಿಂದ ಕಳುಹಿಸಿ ಬಿಡುವ ಹಾಗೆ ನಿನ್ನ ಸಹೋದರನಾದ ಆರೋನನು ಫರೋಹನ ಸಂಗಡ ಮಾತನಾಡಬೇಕು.

7:3b.EXO.007.003 ಆದರೆ ನಾನು ಫರೋಹನ ಹೃದಯವನ್ನು ಕಠಿಣಪಡಿಸಿ ನನ್ನ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಐಗುಪ್ತದೇಶದಲ್ಲಿ ಹೆಚ್ಚಿಸುವೆನು.

7:4b.EXO.007.004 ಆದರೆ ಫರೋಹನು ನಿಮ್ಮ ಮಾತನ್ನು ಕೇಳುವದಿಲ್ಲ; ಆದಾಗ್ಯೂ ನನ್ನ ಕೈಯನ್ನು ಐಗುಪ್ತದ ಮೇಲೆ ಇಟ್ಟು ದೊಡ್ಡ ನ್ಯಾಯತೀರ್ಪು ಗಳಿಂದ ನನ್ನ ಜನರಾದ ಇಸ್ರಾಯೇಲ್‌ ಸೈನ್ಯವನ್ನೆಲ್ಲಾ ಐಗುಪ್ತದೇಶದೊಳಗಿಂದ ಹೊರಗೆ ಬರಮಾಡುವೆನು.

7:5b.EXO.007.005 ನಾನು ಐಗುಪ್ತದ ಮೇಲೆ ನನ್ನ ಕೈಯನ್ನಿಟ್ಟು ಅವರೊಳ ಗಿಂದ ಇಸ್ರಾಯೇಲ್‌ ಮಕ್ಕಳನ್ನು ಹೊರಗೆ ಬರಮಾಡಿ ದಾಗ ನಾನೇ ಕರ್ತನೆಂದು ಐಗುಪ್ತ್ಯರಿಗೆ ತಿಳಿದು ಬರುವದು ಎಂದು ಹೇಳಿದನು.

7:6b.EXO.007.006 ಕರ್ತನು ತಮಗೆ ಆಜ್ಞಾಪಿಸಿದ ಪ್ರಕಾರವೆ ಮೋಶೆ ಆರೋನರು ಮಾಡಿದರು, ಅಂತಯೇ ಅವರು ಮಾಡಿ ದರು.

7:7b.EXO.007.007 ಅವರು ಫರೋಹನ ಮುಂದೆ ಮಾತನಾಡು ವಾಗ ಮೋಶೆಯು ಎಂಭತ್ತು ವರುಷದವನಾಗಿದ್ದನು, ಆರೋನನು ಎಂಭತ್ತುಮೂರು ವರುಷದವನಾಗಿದ್ದನು.

7:8b.EXO.007.008 ಆಗ ಕರ್ತನು ಮೋಶೆ ಆರೋನರ ಸಂಗಡ ಮಾತನಾಡಿ--

7:9b.EXO.007.009 ಫರೋಹನು ನಿಮಗೆ--ನೀವು ಒಂದು ಅದ್ಭುತಕಾರ್ಯವನ್ನು ತೋರಿಸಿರೆಂದು ಹೇಳುವಾಗ ಮೋಶೆ ಆರೋನನಿಗೆ--ನಿನ್ನ ಕೋಲನ್ನು ತಕ್ಕೊಂಡು ಫರೋಹನ ಮುಂದೆ ಬಿಸಾಡು ಎಂದು ಹೇಳಬೇಕು; ಆಗ ಅದು ಸರ್ಪವಾಗುವದು ಎಂದು ಹೇಳಿದನು.

7:10b.EXO.007.010 ಮೋಶೆ ಆರೋನರೂ ಫರೋಹನ ಬಳಿಗೆ ಹೋಗಿ ಕರ್ತನು ತಮಗೆ ಆಜ್ಞಾಪಿಸಿದಂತೆಯೇ ಮಾಡಿದರು. ಆರೋನನು ತನ್ನ ಕೋಲನ್ನು ಫರೋಹನ ಮುಂದೆಯೂ ಅವನ ಸೇವಕರ ಮುಂದೆಯೂ ಬಿಸಾಡಿ ದಾಗ ಅದು ಸರ್ಪವಾಯಿತು.

7:11b.EXO.007.011 ಫರೋಹನು ಸಹ ಜ್ಞಾನಿಗಳನ್ನೂ ಮಂತ್ರವಾದಿಗಳನ್ನೂ ಕರಿಸಿದಾಗ ಐಗುಪ್ತದ ಮಂತ್ರಗಾರರು ಸಹ ತಮ್ಮ ಮಂತ್ರಗಳಿಂದ ಹಾಗೆಯೇ ಮಾಡಿದರು.

7:12b.EXO.007.012 ಅವರು ತಮ್ಮತಮ್ಮ ಕೋಲುಗಳನ್ನು ಬಿಸಾಡಿದಾಗ ಅವು ಸರ್ಪಗಳಾದವು. ಆದರೆ ಆರೋನನ ಕೋಲು ಅವರ ಕೋಲುಗಳನ್ನು ನುಂಗಿಬಿಟ್ಟಿತು.

7:13b.EXO.007.013 ಕರ್ತನು ಹೇಳಿದಂತೆಯೇ ಫರೋಹನ ಹೃದಯವು ಆಗ ಕಠಿಣವಾಯಿತು; ಅವನು ಅವರ ಮಾತನ್ನು ಕೇಳಲಿಲ್ಲ.

7:14b.EXO.007.014 ಆಗ ಕರ್ತನು ಮೋಶೆಗೆ--ಫರೋಹನ ಹೃದಯವು ಕಠಿಣವಾಯಿತು. ಅವನು ಜನರನ್ನು ಕಳುಹಿಸಿಬಿಡುವದಕ್ಕೆ ನಿರಾಕರಿಸಿದನು.

7:15b.EXO.007.015 ಬೆಳಿಗ್ಗೆ ಫರೋಹನ ಬಳಿಗೆ ಹೋಗು; ಇಗೋ, ಅವನು ಹೊರಗೆ ನೀರಿನ ಬಳಿಗೆ ಹೋಗುವನು. ನದೀತೀರದಲ್ಲಿ ಅವನೆದುರಿಗೆ ನಿಂತುಕೊಂಡು ಸರ್ಪವಾಗಿ ಮಾಡಲ್ಪಟ್ಟ ಕೋಲನ್ನು ನಿನ್ನ ಕೈಯಲ್ಲಿ ಹಿಡುಕೊಂಡು

7:16b.EXO.007.016 ಅವನಿಗೆ ನೀನು--ಇಬ್ರಿಯರ ದೇವರಾದ ಕರ್ತನು ನನ್ನನ್ನು ನಿನ್ನ ಬಳಿಗೆ ಕಳುಹಿಸಿ ಅರಣ್ಯದಲ್ಲಿ ನನ್ನನ್ನು ಸೇವಿಸುವ ಹಾಗೆ ನನ್ನ ಜನರನ್ನು ಕಳುಹಿಸು ಎಂದು ಹೇಳಿದ್ದಾನೆ. ಆದರೆ ಇಗೋ, ಇಂದಿನ ವರೆಗೂ ನೀನು ಕೇಳಲಿಲ್ಲ.

7:17b.EXO.007.017 ಕರ್ತನು ಹೀಗೆ ಹೇಳುತ್ತಾನೆ--ನಾನೇ ಕರ್ತನೆಂದು ಇದರಿಂದ ತಿಳುಕೊಳ್ಳುವಿ. ಇಗೋ, ನನ್ನ ಸೇವಕನ ಕೈಯಲ್ಲಿರುವ ಕೋಲಿನಿಂದ ನದಿಯ ನೀರನ್ನು ಹೊಡೆ ಯುವೆನು, ಆಗ ಅದು ರಕ್ತವಾಗುವದು.

7:18b.EXO.007.018 ನದಿಯ ಲ್ಲಿರುವ ವಿಾನುಗಳು ಸಾಯುವವು; ನದಿಯು ನಾರು ವದು. ಐಗುಪ್ತ್ಯರು ನದಿಯ ನೀರನ್ನು ಕುಡಿಯುವದಕ್ಕೆ ಅಸಹ್ಯಪಡುವರು ಎಂದು ಹೇಳು ಅಂದನು.

7:19b.EXO.007.019 ಕರ್ತನು ಮೋಶೆಗೆ--ನೀನು ಆರೋನನಿಗೆ--ನಿನ್ನ ಕೋಲನ್ನು ತಕ್ಕೊಂಡು ಐಗುಪ್ತದಲ್ಲಿರುವ ನೀರುಗಳ ಮೇಲೆಯೂ ನದಿ ಪ್ರವಾಹ ಕೆರೆ ಕೊಳ ಕುಂಟೆಗಳ ಮೇಲೆಯೂ ಕೈಚಾಚು ಎಂದು ಹೇಳು. ಆಗ ಅವು ರಕ್ತವಾಗುವವು; ಐಗುಪ್ತದೇಶದಲ್ಲೆಲ್ಲಾ ಮರದ ಪಾತ್ರೆ ಗಳಲ್ಲಾಗಲಿ ಕಲ್ಲಿನ ಪಾತ್ರೆಗಳಲ್ಲಾಗಲಿ ರಕ್ತವಿರುವದು ಎಂದು ಹೇಳಿದನು.

7:20b.EXO.007.020 ಮೋಶೆ ಆರೋನರು ಕರ್ತನು ತಮಗೆ ಆಜ್ಞಾಪಿಸಿದಂತೆಯೇ ಮಾಡಿದರು. ಅವನು ಕೋಲನ್ನು ಎತ್ತಿ ನದಿಯಲ್ಲಿರುವ ನೀರನ್ನು ಫರೋಹನ ಕಣ್ಣುಗಳ ಮುಂದೆಯೂ ಅವನ ಸೇವಕರ ಕಣ್ಣುಗಳ ಮುಂದೆಯೂ ಹೊಡೆದನು. ಆಗ ನದಿಯ ನೀರೆಲ್ಲಾ ರಕ್ತವಾಯಿತು.

7:21b.EXO.007.021 ನದಿಯಲ್ಲಿದ್ದ ವಿಾನುಗಳು ಸತ್ತವು; ನದಿಯು ದುರ್ವಾಸನೆಗೊಂಡಿತು. ಐಗುಪ್ತ್ಯರು ನದಿಯ ನೀರನ್ನು ಕುಡಿಯಲಾರದೆ ಹೋದರು. ಆಗ ಐಗುಪ್ತದೇಶದಲ್ಲೆಲ್ಲಾ ರಕ್ತವೇ ಆಗಿತ್ತು.

7:22b.EXO.007.022 ಐಗುಪ್ತದ ಮಂತ್ರಗಾರರು ತಮ್ಮ ಮಂತ್ರಗಳಿಂದ ಹಾಗೆಯೇ ಮಾಡಿದ್ದರಿಂದ ಫರೋಹನ ಹೃದಯವು ಕಠಿಣವಾಯಿತು. ಕರ್ತನು ಹೇಳಿದಂತೆಯೇ ಅವನು ಅವರ ಮಾತನ್ನು ಕೇಳಲಿಲ್ಲ.

7:23b.EXO.007.023 ಫರೋಹನು ತಿರುಗಿ ಕೊಂಡು ತನ್ನ ಮನೆಗೆ ಹೋದನು. ಅವನು ಇದಕ್ಕಾ ದರೂ ತನ್ನ ಮನಸ್ಸುಕೊಡಲಿಲ್ಲ.

7:24b.EXO.007.024 ಆದರೆ ಐಗುಪ್ತ್ಯ ರೆಲ್ಲರೂ ನದಿಯ ನೀರನ್ನು ಕುಡಿಯಲಾರದೆ ಇದ್ದದರಿಂದ ಕುಡಿಯುವ ನೀರಿಗಾಗಿ ನದಿಯ ಸುತ್ತಲೂ ಅಗೆದರು.ಕರ್ತನು ನದಿಯನ್ನು ಹೊಡೆದಮೇಲೆ ಏಳು ದಿನಗಳು ಪೂರ್ತಿಯಾದವು.

7:25b.EXO.007.025 ಕರ್ತನು ನದಿಯನ್ನು ಹೊಡೆದಮೇಲೆ ಏಳು ದಿನಗಳು ಪೂರ್ತಿಯಾದವು.

8

8:1b.EXO.008.001 ಅನಂತರ ಕರ್ತನು ಮೋಶೆಯ ಸಂಗಡ ಮಾತನಾಡಿ ಅವನಿಗೆ--ನೀನು ಫರೋ ಹನ ಬಳಿಗೆ ಹೋಗಿ ಅವನಿಗೆ--ಕರ್ತನು ಹೀಗೆ ಹೇಳುತ್ತಾನೆ--ನನ್ನನ್ನು ಸೇವಿಸುವಂತೆ ನನ್ನ ಜನರನ್ನು ಕಳುಹಿಸು.

8:2b.EXO.008.002 ಕಳುಹಿಸುವದಕ್ಕೆ ನಿರಾಕರಿಸಿದರೆ ಇಗೋ, ನಾನು ನಿನ್ನ ಮೇರೆಗಳನ್ನೆಲ್ಲಾ ಕಪ್ಪೆಗಳಿಂದ ಹೊಡೆಯು ವೆನು.

8:3b.EXO.008.003 ನದಿಯು ಕಪ್ಪೆಗಳನ್ನು ಅಧಿಕವಾಗಿ ಬರಮಾಡು ವದು; ಅವು ಏರಿ ನಿನ್ನ ಮನೆಯಲ್ಲಿಯೂ ನೀನು ಮಲಗುವ ಕೋಣೆಯಲ್ಲಿಯೂ ಹಾಸಿಗೆಯ ಮೇಲೂ ಸೇವಕರ ಮನೆಗಳಲ್ಲಿಯೂ ಜನರ ಮೇಲೆಯೂ ಒಲೆಗ ಳಲ್ಲಿಯೂ ಹಿಟ್ಟು ನಾದುವ ಕೊಣವಿಗೆಗಳಲ್ಲಿಯೂ ಬರುವವು.

8:4b.EXO.008.004 ನಿನ್ನ ಮೇಲೆಯೂ ನಿನ್ನ ಜನರ ಮೇಲೆಯೂ ನಿನ್ನ ಎಲ್ಲಾ ಸೇವಕರ ಮೇಲೆಯೂ ಕಪ್ಪೆಗಳು ಏರಿ ಬರುವವು ಎಂದು ಹೇಳು ಅಂದನು.

8:5b.EXO.008.005 ಕರ್ತನು ಮೋಶೆಯ ಸಂಗಡ ಮಾತನಾಡಿ--ನೀನು ಆರೋನನಿಗೆ--ನೀನು ಕೋಲನ್ನು ಹಿಡು ಕೊಂಡು ಕಾಲುವೆಗಳ ಮೇಲೆಯೂ ನದಿಗಳ ಮೇಲೆಯೂ ಕೆರೆಗಳ ಮೇಲೆಯೂ ನಿನ್ನ ಕೈಚಾಚು; ಆಗ ಐಗುಪ್ತದೇಶದ ಮೇಲೆಲ್ಲಾ ಕಪ್ಪೆಗಳು ಬರುವವು ಎಂದು ಹೇಳಬೇಕು ಅಂದನು.

8:6b.EXO.008.006 ಆರೋನನು ಐಗು ಪ್ತದ ನೀರುಗಳ ಮೇಲೆ ಕೈಚಾಚಿದಾಗ ಕಪ್ಪೆಗಳು ಏರಿಬಂದು ಐಗುಪ್ತದೇಶವನ್ನು ಮುಚ್ಚಿಕೊಂಡವು.

8:7b.EXO.008.007 ಆದರೆ ಮಂತ್ರಗಾರರು ತಮ್ಮ ಮಂತ್ರಗಳಿಂದ ಹಾಗೆಯೇ ಮಾಡಿ ಕಪ್ಪೆಗಳನ್ನು ಐಗುಪ್ತದೇಶದ ಮೇಲೆ ಬರಮಾಡಿದರು.

8:8b.EXO.008.008 ಆಗ ಫರೋಹನು ಮೋಶೆ ಆರೋನರನ್ನು ಕರೆ ಯಿಸಿ--ನೀವು ಕರ್ತನನ್ನು ಬೇಡಿಕೊಂಡು ಈ ಕಪ್ಪೆ ಗಳನ್ನು ನನ್ನ ಬಳಿಯಿಂದಲೂ ನನ್ನ ಪ್ರಜೆಗಳ ಬಳಿ ಯಿಂದಲೂ ತೊಲಗಿಸಬೇಕು. ಹಾಗೆ ಮಾಡಿದರೆ ನಿಮ್ಮ ಜನರು ಕರ್ತನಿಗೋಸ್ಕರ ಯಜ್ಞಮಾಡುವಂತೆ ಅವರಿಗೆ ನಾನು ಅಪ್ಪಣೆ ಕೊಡುವೆನು ಅಂದನು.

8:9b.EXO.008.009 ಮೋಶೆಯು ಫರೋಹನಿಗೆ--ಕಪ್ಪೆಗಳು ನಿನ್ನಿಂದಲೂ ನಿನ್ನ ಮನೆಗಳಿಂದಲೂ ತೆಗೆದು ಹಾಕಲ್ಪಟ್ಟು ನದಿಯಲ್ಲಿ ಮಾತ್ರ ಉಳಿಯುವ ಹಾಗೆ ನಾನು ನಿನಗೋಸ್ಕರವೂ ನಿನ್ನ ಸೇವಕರಿಗೋಸ್ಕರವೂ ಜನರಿಗೋಸ್ಕರವೂ ಬೇಡಿ ಕೊಳ್ಳುವ ಸಮಯವನ್ನು ನನಗೆ ನೇಮಿಸು ಅಂದನು.

8:10b.EXO.008.010 ಅವನು ಮೋಶೆಗೆ--ನಾಳೆ ಅಂದನು. ಆಗ ಮೋಶೆಯು--ನಮ್ಮ ದೇವರಾಗಿರುವ ಕರ್ತನ ಹಾಗೆ ಯಾರು ಇಲ್ಲವೆಂದು ನೀನು ತಿಳಿದುಕೊಳ್ಳುವ ಹಾಗೆ ನಿನ್ನ ಮಾತಿನ ಪ್ರಕಾರ ಆಗಲಿ.

8:11b.EXO.008.011 ಕಪ್ಪೆಗಳು ನಿನ್ನಿಂದಲೂ ನಿನ್ನ ಮನೆಗಳಿಂದಲೂ ನಿನ್ನ ಸೇವಕರಿಂದಲೂ ನಿನ್ನ ಜನರಿಂದಲೂ ಹೊರಟುಹೋಗಿ ನದಿಯಲ್ಲಿ ಮಾತ್ರ ಅವು ಉಳಿಯುವವು ಅಂದನು.

8:12b.EXO.008.012 ಮೋಶೆ ಆರೋನರು ಫರೋಹನನ್ನು ಬಿಟ್ಟು ಹೊರಗೆ ಹೋದಾಗ ಮೋಶೆ ಫರೋಹನ ಮೇಲೆ ಬರಮಾಡಿದ ಕಪ್ಪೆಗಳ ನಿಮಿತ್ತ ಕರ್ತನಿಗೆ ಮೊರೆಯಿಟ್ಟನು.

8:13b.EXO.008.013 ಮೋಶೆ ಹೇಳಿದ ಪ್ರಕಾರ ಕರ್ತನು ಮಾಡಿದನು. ಮನೆಗಳಲ್ಲಿಯೂ ಹಳ್ಳಿಗಳ ಲ್ಲಿಯೂ ಹೊಲಗಳಲ್ಲಿಯೂ ಇದ್ದ ಕಪ್ಪೆಗಳು ಸತ್ತವು.

8:14b.EXO.008.014 ಅವರು ಅವುಗಳನ್ನು ರಾಶಿಗಳಾಗಿ ಕೂಡಿಸಿಟ್ಟಿದ್ದರಿಂದ ದೇಶವು ದುರ್ವಾಸನೆಯಿಂದ ತುಂಬಿತು.

8:15b.EXO.008.015 ಆದರೆ ಫರೋಹನು ತನಗೆ ಉಪಶಮನವಾಯಿತೆಂದು ತಿಳಿ ದಾಗ ಕರ್ತನು ಹೇಳಿದಂತೆ ಅವನು ತನ್ನ ಹೃದಯವನ್ನು ಕಠಿಣಮಾಡಿಕೊಂಡು ಅವರ ಮಾತನ್ನು ಕೇಳಲಿಲ್ಲ.

8:16b.EXO.008.016 ಅನಂತರ ಕರ್ತನು ಮೋಶೆಯ ಸಂಗಡ ಮಾತ ನಾಡಿ--ನೀನು ಆರೋನನಿಗೆ--ನೀನು ಕೋಲನ್ನು ಚಾಚಿ ಭೂಮಿಯ ಧೂಳನ್ನು ಹೊಡೆ. ಆಗ ಐಗುಪ್ತ ದೇಶದಲ್ಲೆಲ್ಲಾ ಧೂಳು ಹೇನುಗಳಾಗುವವು ಎಂದು ಹೇಳು ಅಂದನು.

8:17b.EXO.008.017 ಅವರು ಹಾಗೆಯೇ ಮಾಡಿದರು. ಆರೋನನು ಕೋಲನ್ನು ಕೈಯಲ್ಲಿ ಹಿಡಿದು ಅದನ್ನು ಚಾಚಿ ಭೂಮಿಯ ಧೂಳನ್ನು ಹೊಡೆದನು. ಆಗ ಮನುಷ್ಯರಲ್ಲಿಯೂ ಪಶುಗಳಲ್ಲಿಯೂ ಹೇನುಗಳಾ ದವು. ಐಗುಪ್ತದೇಶದಲ್ಲೆಲ್ಲಾ ಭೂಮಿಯಲ್ಲಿದ್ದ ಧೂಳು ಹೇನುಗಳಾದವು.

8:18b.EXO.008.018 ಮಂತ್ರಗಾರರು ಹೇನುಗಳನ್ನು ಬರಮಾಡುವದಕ್ಕೆ ತಮ್ಮ ಮಂತ್ರಗಳಿಂದ ಪ್ರಯತ್ನಿಸಿ ದರು, ಆದರೆ ಆಗದೆ ಹೋಯಿತು. ಹೀಗೆ ಹೇನುಗಳು ಮನುಷ್ಯರ ಮೇಲೆಯೂ ಪಶುಗಳ ಮೇಲೆಯೂ ಹಾಗೆಯೇ ಇದ್ದವು.

8:19b.EXO.008.019 ಆಗ ಮಂತ್ರಗಾರರು ಫರೋಹ ನಿಗೆ--ಇದು ದೇವರ ಕೈಯಾಗಿದೆ ಅಂದರು. ಆದರೆ ಕರ್ತನು ಹೇಳಿದಂತೆ ಫರೋಹನ ಹೃದಯವು ಕಠಿಣ ವಾಯಿತು; ಆದದರಿಂದ ಅವನು ಅವರ ಮಾತನ್ನು ಕೇಳಲಿಲ್ಲ.

8:20b.EXO.008.020 ಆಗ ಕರ್ತನು ಮೋಶೆಗೆ--ನೀನು ಬೆಳಿಗ್ಗೆ ಎದ್ದು ಫರೋಹನ ಮುಂದೆ ನಿಂತುಕೋ. ಇಗೋ, ಅವನು ಹೊರಗೆ ನೀರಿನ ಬಳಿಗೆ ಬರುತ್ತಾನೆ. ನೀನು ಅವನಿಗೆ ಹೇಳಬೇಕಾದದ್ದೇನಂದರೆ--ಕರ್ತನು ಹೀಗೆ ಹೇಳು ತ್ತಾನೆ--ನನ್ನ ಜನರು ನನ್ನನ್ನು ಸೇವಿಸುವ ಹಾಗೆ ಅವರನ್ನು ಕಳುಹಿಸು.

8:21b.EXO.008.021 ನೀನು ನನ್ನ ಜನರನ್ನು ಕಳುಹಿಸದೆ ಹೋದರೆ ಇಗೋ, ನಾನು ನಿನ್ನ ಮೇಲೆಯೂ ನಿನ್ನ ಸೇವಕರ ಮೇಲೆಯೂ ನಿನ್ನ ಜನರ ಮೇಲೆಯೂ ನಿನ್ನ ಮನೆಗಳಲ್ಲಿಯೂ ನೊಣಗಳನ್ನು ಕಳುಹಿಸುವೆನು. ಐಗುಪ್ತ್ಯರ ಮನೆಗಳೂ ಅವರು ವಾಸವಾಗಿರುವ ಭೂಮಿಯೂ ನೊಣಗಳಿಂದ ತುಂಬಿರುವವು.

8:22b.EXO.008.022 ಆದರೆ ಆ ದಿವಸದಲ್ಲಿ ನಾನೇ ಭೂಲೋಕದಲ್ಲಿ ಕರ್ತನೆಂದು ನೀನು ತಿಳಿದುಕೊಳ್ಳುವಂತೆ ನನ್ನ ಜನರು ವಾಸಿಸುವ ಗೋಷೆನ್‌ ಸೀಮೆಯಲ್ಲಿ ನೊಣಗಳು ಇರದ ಹಾಗೆ ಅದನ್ನು ನಾನು ಪ್ರತ್ಯೇಕಿಸುವೆನು.

8:23b.EXO.008.023 ನನ್ನ ಜನರನ್ನೂ ನಿನ್ನ ಜನರನ್ನೂ ವಿಂಗಡಿಸುವೆನು. ನಾಳೆ ಈ ಗುರುತು ಇರುವದು ಎಂದು ಹೇಳು ಅಂದನು.

8:24b.EXO.008.024 ಕರ್ತನು ಹಾಗೆಯೇ ಮಾಡಿದನು; ಬಾಧಿಸುವ ನೊಣಗಳು ಫರೋಹನ ಮನೆಯಲ್ಲಿಯೂ ಅವನ ಸೇವಕರ ಮನೆಗಳಲ್ಲಿಯೂ ಸಮಸ್ತ ಐಗುಪ್ತದೇಶ ದಲ್ಲಿಯೂ ತುಂಬಿಕೊಂಡವು; ಅವುಗಳಿಂದ ದೇಶವು ಕೆಟ್ಟುಹೋಯಿತು.

8:25b.EXO.008.025 ಆಗ ಫರೋಹನು ಮೋಶೆ ಆರೋನರನ್ನು ಕರೆ ಯಿಸಿ ಅವರಿಗೆ--ನೀವು ಹೋಗಿ ದೇಶದಲ್ಲಿಯೇ ನಿಮ್ಮ ದೇವರಿಗೆ ಯಜ್ಞವನ್ನರ್ಪಿಸಿರಿ ಅಂದನು.

8:26b.EXO.008.026 ಆದರೆ ಮೋಶೆಯು ಫರೋಹನಿಗೆ--ಹಾಗೆ ಮಾಡುವದು ಯುಕ್ತವಲ್ಲ, ನಮ್ಮ ಕರ್ತನಾದ ದೇವರಿಗೆ ಯಜ್ಞವನ್ನ ರ್ಪಿಸುವದು ಐಗುಪ್ತ್ಯರಿಗೆ ಅಸಹ್ಯವಾಗಿದೆ; ಇಗೋ, ಐಗುಪ್ತ್ಯರಿಗೆ ಅಸಹ್ಯವಾಗಿರುವದನ್ನು ಅವರ ಕಣ್ಣೆ ದುರಿಗೆ ಅರ್ಪಿಸಿದರೆ ಅವರು ನಮಗೆ ಕಲ್ಲೆಸೆದಾರು.

8:27b.EXO.008.027 ಅರಣ್ಯದಲ್ಲಿ ಮೂರು ದಿನಗಳು ಪ್ರಯಾಣಮಾಡಿ ನಮ್ಮ ದೇವರಾದ ಕರ್ತನಿಗೆ ಆತನ ಅಪ್ಪಣೆಯಂತೆ ಯಜ್ಞಮಾಡುವೆವು ಎಂದು ಹೇಳಿದನು.

8:28b.EXO.008.028 ಅದಕ್ಕೆ ಫರೋಹನು ಅವರಿಗೆ--ನಿಮ್ಮ ದೇವರಾದ ಕರ್ತನಿಗೆ ಅರಣ್ಯದಲ್ಲಿ ಯಜ್ಞವನ್ನರ್ಪಿಸುವಂತೆ ನಿಮ್ಮನ್ನು ಕಳುಹಿ ಸುತ್ತೇನೆ; ಆದರೆ ದೂರ ಹೋಗಬೇಡಿರಿ; ನನಗೋಸ್ಕರ ಪ್ರಾರ್ಥನೆ ಮಾಡಿರಿ ಅಂದನು.

8:29b.EXO.008.029 ಆಗ ಮೋಶೆಯು ಅವನಿಗೆ--ಇಗೋ, ನಾನು ನಿನ್ನನ್ನು ಬಿಟ್ಟುಹೋಗಿ ಕರ್ತನಿಗೆ ಪ್ರಾರ್ಥನೆ ಮಾಡುವೆನು. ನೊಣಗಳು ನಾಳೆ ಫರೋಹನನ್ನೂ ಅವನ ಸೇವಕರನ್ನೂ ಅವನ ಜನರನ್ನೂ ಬಿಟ್ಟುಹೋಗುವವು. ಆದರೆ ಕರ್ತನಿಗೆ ಯಜ್ಞವನ್ನರ್ಪಿಸುವದಕ್ಕೆ ಫರೋಹನು ಜನರನ್ನು ಕಳು ಹಿಸದೆ ಇನ್ನು ಮೇಲೆ ವಂಚಿಸಬಾರದು ಅಂದನು.

8:30b.EXO.008.030 ತರುವಾಯ ಮೋಶೆಯು ಫರೋಹನನ್ನು ಬಿಟ್ಟು ಹೋಗಿ ಕರ್ತನನ್ನು ಬೇಡಿಕೊಂಡನು.

8:31b.EXO.008.031 ಮೋಶೆಯು ಹೇಳಿದಂತೆಯೇ ಕರ್ತನು ಮಾಡಿದನು. ಹೇಗಂದರೆ, ಆತನು ಫರೋಹನಿಂದಲೂ ಅವನ ಸೇವಕರಿಂದಲೂ ಅವನ ಜನರಿಂದಲೂ ನೊಣಗಳನ್ನು ತೆಗೆದುಹಾಕಿ ದನು. ಅಲ್ಲಿ ಒಂದಾದರೂ ಉಳಿಯಲಿಲ್ಲ.ಆದರೆ ಫರೋಹನು ಆ ಸಮಯದಲ್ಲಿಯೂ ತನ್ನ ಹೃದಯವನ್ನು ಕಠಿಣಮಾಡಿಕೊಂಡದ್ದಲ್ಲದೆ ಜನರನ್ನು ಹೋಗ ಗೊಡಿಸಲಿಲ್ಲ.

8:32b.EXO.008.032 ಆದರೆ ಫರೋಹನು ಆ ಸಮಯದಲ್ಲಿಯೂ ತನ್ನ ಹೃದಯವನ್ನು ಕಠಿಣಮಾಡಿಕೊಂಡದ್ದಲ್ಲದೆ ಜನರನ್ನು ಹೋಗ ಗೊಡಿಸಲಿಲ್ಲ.

9

9:1b.EXO.009.001 ಕರ್ತನು ಮೋಶೆಗೆ--ಫರೋಹನ ಬಳಿಗೆ ಹೋಗಿ ಅವನಿಗೆ--ಇಬ್ರಿಯರ ದೇವ ರಾದ ಕರ್ತನು ಹೀಗೆ ಹೇಳುತ್ತಾನೆ--ನನ್ನನ್ನು ಸೇವಿ ಸುವಂತೆ ನನ್ನ ಜನರನ್ನು ಕಳುಹಿಸು.

9:2b.EXO.009.002 ಅವರನ್ನು ಕಳುಹಿಸುವದಕ್ಕೆ ನಿರಾಕರಿಸಿ ಇನ್ನೂ ತಡೆದರೆ

9:3b.EXO.009.003 ಇಗೋ, ಕರ್ತನ ಕೈ ಹೊಲದಲ್ಲಿರುವ ನಿನ್ನ ಪಶುಗಳ ಮೇಲೆ ಇರುವದು. ಕುದುರೆ ಕತ್ತೆ ಒಂಟೆ ಎತ್ತು ಕುರಿ ಇವುಗಳ ಮೇಲೆ ಮಹಾ ಕಠಿಣವಾದ ರೋಗವು ಬರುವದು.

9:4b.EXO.009.004 ಇದಲ್ಲದೆ ಕರ್ತನು ಇಸ್ರಾಯೇಲ್ಯರ ಪಶುಗಳನ್ನು ವಿಂಗಡಿಸುವನು; ಇಸ್ರಾಯೇಲ್‌ ಮಕ್ಕಳಿಗಿರುವವು ಗಳಲ್ಲಿ ಒಂದೂ ಸಾಯುವದಿಲ್ಲ.

9:5b.EXO.009.005 ಇದಲ್ಲದೆ ಕರ್ತನು ಒಂದು ನಿರ್ದಿಷ್ಟವಾದ ಸಮಯವನ್ನು ನೇಮಿಸಿ--ಕರ್ತನು ಈ ಕಾರ್ಯವನ್ನು ನಾಳೆ ದೇಶದಲ್ಲಿ ಮಾಡು ವನು ಎಂದು ಹೇಳು ಅಂದನು.

9:6b.EXO.009.006 ಮರುದಿನ ಕರ್ತನು ಆ ಕಾರ್ಯವನ್ನು ಮಾಡಿ ದನು; ಐಗುಪ್ತ್ಯರ ಪಶುಗಳೆಲ್ಲಾ ಸತ್ತುಹೋದವು. ಇಸ್ರಾಯೇಲ್‌ ಮಕ್ಕಳ ಪಶುಗಳಲ್ಲಿ ಒಂದೂ ಸಾಯ ಲಿಲ್ಲ.

9:7b.EXO.009.007 ಫರೋಹನು ಕಳುಹಿಸಿ ನೋಡಿದಾಗ ಇಗೋ, ಇಸ್ರಾಯೇಲ್ಯರ ಪಶುಗಳಲ್ಲಿ ಒಂದೂ ಸತ್ತಿರಲಿಲ್ಲ. ಆದರೆ ಫರೋಹನ ಹೃದಯವು ಕಠಿಣವಾಗಿದ್ದದರಿಂದ ಅವನು ಜನರನ್ನು ಕಳುಹಿಸಲಿಲ್ಲ.

9:8b.EXO.009.008 ಆಗ ಕರ್ತನು ಮೋಶೆ ಆರೋನರಿಗೆ--ಕೈ ತುಂಬಾ ಒಲೆಯ ಬೂದಿಯನ್ನು ತೆಗೆದುಕೊಳ್ಳಿರಿ; ಅದನ್ನು ಮೋಶೆಯು ಫರೋಹನ ಕಣ್ಣುಗಳ ಮುಂದೆ ಆಕಾಶದ ಕಡೆಗೆ ತೂರಲಿ.

9:9b.EXO.009.009 ಆಗ ಅದು ಐಗುಪ್ತದೇಶದಲ್ಲೆಲ್ಲಾ ಸಣ್ಣ ಧೂಳಾಗಿ ಅದು ಐಗುಪ್ತದೇಶದಲ್ಲೆಲ್ಲಾ ಮನುಷ್ಯರ ಮೇಲೆಯೂ ಮೃಗಗಳ ಮೇಲೆಯೂ ಹುಣ್ಣುಗಳಾಗುವ ಬೊಕ್ಕೆಗಳು ಏಳುವಂತೆ ಮಾಡುವದು ಎಂದು ಹೇಳಿ ದನು.

9:10b.EXO.009.010 ಆಗ ಅವರು ಒಲೆಯ ಬೂದಿಯನ್ನು ತೆಗೆದು ಕೊಂಡು ಫರೋಹನ ಮುಂದೆ ನಿಂತರು. ಮೋಶೆಯು ಅದನ್ನು ಆಕಾಶದ ಕಡೆಗೆ ತೂರಿದನು. ಅದು ಮನುಷ್ಯ ರಲ್ಲಿಯೂ ಪಶುಗಳಲ್ಲಿಯೂ ಹರಡಿ ಹುಣ್ಣುಗಳಾಗು ವಂಥ ಬೊಕ್ಕೆಗಳಾದವು.

9:11b.EXO.009.011 ಇದಲ್ಲದೆ ಮಂತ್ರಗಾರರು ಹುಣ್ಣಿನ ನಿಮಿತ್ತ ಮೋಶೆಯ ಮುಂದೆ ನಿಂತುಕೊಳ್ಳ ಲಾರದೆ ಹೋದರು. ಹುಣ್ಣುಗಳು ಮಂತ್ರಗಾರರ ಲ್ಲಿಯೂ ಐಗುಪ್ತ್ಯರ ಮೇಲೆಲ್ಲಾ ಇದ್ದವು.

9:12b.EXO.009.012 ಆದರೆ ಕರ್ತನು ಫರೋಹನ ಹೃದಯವನ್ನು ಕಠಿಣ ಮಾಡಿ ದನು. ಕರ್ತನು ಮೋಶೆಗೆ ಹೇಳಿದಂತೆಯೇ ಅವನು ಅವರ ಮಾತನ್ನು ಕೇಳಲಿಲ್ಲ.

9:13b.EXO.009.013 ಕರ್ತನು ಮೋಶೆಗೆ--ಬೆಳಿಗ್ಗೆ ಎದ್ದು ಫರೋಹನ ಮುಂದೆ ನಿಂತುಕೊಂಡು ಅವನಿಗೆ--ಇಬ್ರಿಯರ ದೇವ ರಾದ ಕರ್ತನು ಹೀಗೆ ಹೇಳುತ್ತಾನೆ--ನನ್ನನ್ನು ಸೇವಿಸುವ ಹಾಗೆ ನನ್ನ ಜನರನ್ನು ಕಳುಹಿಸು.

9:14b.EXO.009.014 ಭೂಲೋಕ ದಲ್ಲೆಲ್ಲಾ ನನ್ನ ಹಾಗೆ ಯಾರೂ ಇಲ್ಲವೆಂದು ನೀನು ತಿಳಿದುಕೊಳ್ಳುವ ಹಾಗೆ ಈ ಸಾರಿ ನಾನು ಎಲ್ಲಾ ಬಾಧೆಗಳನ್ನು ನಿನ್ನ ಮೇಲೆಯೂ ನಿನ್ನ ಸೇವಕರ ಮೇಲೆಯೂ ನಿನ್ನ ಜನರ ಮೇಲೆಯೂ ಬರಮಾಡು ವೆನು.

9:15b.EXO.009.015 ಈಗ ನನ್ನ ಕೈಚಾಚಿ ನಿನ್ನನ್ನೂ ನಿನ್ನ ಜನರನ್ನೂ ವ್ಯಾಧಿಯಿಂದ ಹೊಡೆಯುವೆನು; ನಿನ್ನನ್ನೂ ಭೂಮಿ ಯೊಳಗಿಂದ ನಿರ್ಮೂಲ ಮಾಡುವೆನು.

9:16b.EXO.009.016 ಆದರೆ ನಿಶ್ಚಯವಾಗಿ ನನ್ನ ಬಲವನ್ನು ನಿನಗೆ ತೋರಿಸುವ ಹಾಗೆಯೂ ನನ್ನ ಹೆಸರು ಭೂಲೋಕದಲ್ಲೆಲ್ಲಾ ತಿಳಿಸಲ್ಪಡುವಂತೆಯೂ ನಿನ್ನನ್ನು ಎಬ್ಬಿಸಿದ್ದೇನೆ.

9:17b.EXO.009.017 ನೀನು ಇನ್ನೂ ಅವರನ್ನು ಕಳುಹಿಸದೆ ನನ್ನ ಜನರಿಗೆ ವಿರೋಧ ವಾಗಿ ನಿನ್ನನ್ನು ನೀನೇ ಹೆಚ್ಚಿಸಿಕೊಳ್ಳುತ್ತೀಯೋ?

9:18b.EXO.009.018 ಇಗೋ, ನಾಳೆ ಇಷ್ಟು ಹೊತ್ತಿಗೆ ಮಹಾಕಠಿಣವಾದ ಆನೆಕಲ್ಲಿನ ಮಳೆಯನ್ನು ಬೀಳಮಾಡುತ್ತೇನೆ. ಇಂಥದ್ದು ಐಗುಪ್ತದಲ್ಲಿ ಅದಕ್ಕೆ ಅಸ್ತಿವಾರ ಹಾಕಿದಂದಿನಿಂದ ಇಲ್ಲಿಯವರೆಗೂ ಆಗಿರಲಿಲ್ಲ.

9:19b.EXO.009.019 ಹೀಗಿರುವದರಿಂದ (ಯಾವನನ್ನಾದರೂ) ಕಳುಹಿಸಿ ನಿನ್ನ ಪಶುಗಳನ್ನೂ ಹೊಲದಲ್ಲಿ ನಿನಗಿರುವವುಗಳನ್ನೂ ಕೂಡಿಸು. ಯಾಕಂ ದರೆ ಮನೆಗಳಿಗೆ ತಾರದೆ ಹೊಲದಲ್ಲಿ ಸಿಕ್ಕುವ ಮನುಷ್ಯರ ಮೇಲೂ ಪಶುಗಳಮೇಲೂ ಆನೆಕಲ್ಲಿನ ಮಳೆಯು ಸುರಿದು ಕೊಲ್ಲುವದು ಎಂದು ಹೇಳು ಅಂದನು.

9:20b.EXO.009.020 ಆಗ ಫರೋಹನ ಸೇವಕರಲ್ಲಿ ಕರ್ತನ ವಾಕ್ಯಕ್ಕೆ ಭಯಪಟ್ಟವರೆಲ್ಲರೂ ತಮ್ಮ ದಾಸರನ್ನೂ ಪಶುಗಳನ್ನೂ ಮನೆಗಳಿಗೆ ಓಡಿಬರುವಂತೆ ಮಾಡಿದರು.

9:21b.EXO.009.021 ಆದರೆ ಕರ್ತನ ವಾಕ್ಯಕ್ಕೆ ಮನಸ್ಸು ಕೊಡದವರು ತಮ್ಮ ದಾಸ ರನ್ನೂ ಪಶುಗಳನ್ನೂ ಹೊಲದಲ್ಲಿ ಬಿಟ್ಟರು.

9:22b.EXO.009.022 ಆಗ ಕರ್ತನು ಮೋಶೆಗೆ--ಆಕಾಶದ ಕಡೆಗೆ ನಿನ್ನ ಕೈ ಚಾಚು. ಆಗ ಐಗುಪ್ತದೇಶದಲ್ಲೆಲ್ಲಾ ಮನುಷ್ಯರ ಮೇಲೆಯೂ ಪಶುಗಳ ಮೇಲೆಯೂ ಮತ್ತು ಐಗುಪ್ತ ದೇಶದಲ್ಲಿ ಇರುವ ಎಲ್ಲಾ ಹೊಲ ಗಿಡಗಳ ಮೇಲೆಯೂ ಆನೆಕಲ್ಲಿನ ಮಳೆಯು ಸುರಿಯುವದು ಅಂದನು.

9:23b.EXO.009.023 ಮೋಶೆಯು ಆಕಾಶದ ಕಡೆಗೆ ಕೋಲನ್ನು ಚಾಚಿ ದನು. ಆಗ ಕರ್ತನು ಗುಡುಗುಗಳನ್ನು ಆನೆಕಲ್ಲಿನ ಮಳೆಯನ್ನು ಸುರಿಸಿದನು. ಅಗ್ನಿಯು ಭೂಮಿಗೆ ಇಳಿದು ಬಂತು. ಹೀಗೆ ಕರ್ತನು ಐಗುಪ್ತದೇಶದ ಮೇಲೆ ಆನೆಕಲ್ಲಿನ ಮಳೆಯನ್ನು ಸುರಿಸಿದನು.

9:24b.EXO.009.024 ಹೀಗೆ ಮಹಾ ಕಠಿಣವಾದ ಆನೆಕಲ್ಲಿನ ಮಳೆಯೂ ಅಗ್ನಿಯಿಂದೊಡ ಗೂಡಿದ ಆನೆಕಲ್ಲಿನ ಮಳೆಯೂ ಸುರಿಯಿತು. ಐಗುಪ್ತವು ಜನಾಂಗವಾದಂದಿನಿಂದ ಇಂಥದ್ದು ಆ ದೇಶದಲ್ಲಿ ಆಗಿರಲಿಲ್ಲ.

9:25b.EXO.009.025 ಆ ಆನೆಕಲ್ಲಿನ ಮಳೆಯು ಐಗುಪ್ತದೇಶದಲ್ಲೆಲ್ಲಾ ಮನುಷ್ಯರನ್ನೂ ಪಶುಗಳನ್ನೂ ಹೊಲದಲ್ಲಿದ್ದದ್ದನ್ನೆಲ್ಲಾ ಹಾಳುಮಾಡಿತು. ಹೊಲದ ಎಲ್ಲಾ ಸೊಪ್ಪನ್ನೂ ಹಾಳುಮಾಡಿ ಎಲ್ಲಾ ಮರಗಳನ್ನೂ ಮುರಿದು ಹಾಕಿತು.

9:26b.EXO.009.026 ಇಸ್ರಾಯೇಲ್‌ ಮಕ್ಕಳು ಇದ್ದ ಗೋಷೆನ್‌ ಸೀಮೆಯಲ್ಲಿ ಆನೆಕಲ್ಲಿನ ಮಳೆಯು ಬೀಳಲಿಲ್ಲ.

9:27b.EXO.009.027 ಆಗ ಫರೋಹನು ಮೋಶೆ ಆರೋನರನ್ನು ಕರೇ ಕಳುಹಿಸಿ ಅವರಿಗೆ--ಈ ಸಾರಿ ನಾನು ಪಾಪಮಾಡಿ ದ್ದೇನೆ. ಕರ್ತನು ನೀತಿವಂತನು, ನಾನೂ ನನ್ನ ಜನರೂ ದುಷ್ಟರಾಗಿದ್ದೇವೆ.

9:28b.EXO.009.028 ಆದದರಿಂದ (ಈಗ ಇದು ಸಾಕು.) ಇನ್ನು ಬಲವಾದ ಗುಡುಗುಗಳೂ ಆನೆಕಲ್ಲಿನ ಮಳೆಯೂ ನಿಂತುಹೋಗುವಂತೆ ಕರ್ತನನ್ನು ಬೇಡಿ ಕೊಳ್ಳಿರಿ, ನೀವು ಇಲ್ಲಿ ಇನ್ನು ಇರದಂತೆ ನಾನು ನಿಮ್ಮನ್ನು ಕಳುಹಿಸಿಬಿಡುವೆನು ಅಂದನು.

9:29b.EXO.009.029 ಆಗ ಮೋಶೆಯು ಅವನಿಗೆ--ನಾನು ಪಟ್ಟಣವನ್ನು ಬಿಟ್ಟುಹೋದ ಕೂಡಲೆ ಕರ್ತನ ಕಡೆಗೆ ನನ್ನ ಕೈಗಳನ್ನು ಚಾಚುವೆನು; ಭೂಮಿಯು ಕರ್ತನದೇ ಎಂದು ನೀನು ತಿಳುಕೊಳ್ಳು ವಂತೆ ಗುಡುಗುಗಳು ನಿಂತುಹೋಗುವವು. ಆನೆಕಲ್ಲಿನ ಮಳೆಯು ಇನ್ನು ಬಾರದು.

9:30b.EXO.009.030 ಆದಾಗ್ಯೂ ನೀನೂ ನಿನ್ನ ಸೇವಕರೂ ದೇವರಾದ ಕರ್ತನಿಗೆ ಭಯಪಡು ವದಿಲ್ಲವೆಂದು ನಾನು ಬಲ್ಲೆನು.

9:31b.EXO.009.031 ಈ ಮೇರೆಗೆ ಜವೆಗೋದಿಗೆ ತೆನೆಗಳೂ ಸೆಣಬಿಗೆ ಮೊಗ್ಗೆಗಳೂ ಇದ್ದದರಿಂದ ಸೆಣಬೂ ಜವೆಗೋದಿಯೂ ಹಾಳಾದವು.

9:32b.EXO.009.032 ಆದರೆ ಗೋದಿಯೂ ಸಾಮೆಯೂ ಬೆಳೆದಿರಲಿಲ್ಲವಾದದ್ದರಿಂದ ಹಾಳಾಗಲಿಲ್ಲ.

9:33b.EXO.009.033 ಮೋಶೆಯು ಫರೋಹನನ್ನು ಬಿಟ್ಟು ಪಟ್ಟಣದ ಹೊರಗೆ ಬಂದು ತನ್ನ ಕೈಗಳನ್ನು ಕರ್ತನ ಕಡೆಗೆ ಚಾಚಿದನು. ಆಗ ಗುಡುಗುಗಳೂ ಆನೆಕಲ್ಲಿನ ಮಳೆಯೂ ನಿಂತುಹೋದವು. ಇನ್ನು ಮಳೆಯು ಭೂಮಿಯ ಮೇಲೆ ಬೀಳಲಿಲ್ಲ.

9:34b.EXO.009.034 ಆನೆಕಲ್ಲಿನ ಮಳೆಯೂ ಗುಡುಗುಗಳೂ ನಿಂತುಹೋದದ್ದನ್ನು ಫರೋಹನು ನೋಡಿ ಅವನು ಇನ್ನೂ ಪಾಪಮಾಡಿ ತನ್ನ ಸೇವಕರ ಸಹಿತವಾಗಿ ತನ್ನ ಹೃದಯವನ್ನು ಕಠಿಣ ಮಾಡಿಕೊಂಡನು.ಫರೋಹನ ಹೃದಯವು ಕಠಿಣ ವಾಯಿತು; ಕರ್ತನು ಮೋಶೆಗೆ ಹೇಳಿದಂತೆ ಅವನು ಇಸ್ರಾಯೇಲ್‌ ಮಕ್ಕಳನ್ನು ಕಳುಹಿಸಲೇ ಇಲ್ಲ.

9:35b.EXO.009.035 ಫರೋಹನ ಹೃದಯವು ಕಠಿಣ ವಾಯಿತು; ಕರ್ತನು ಮೋಶೆಗೆ ಹೇಳಿದಂತೆ ಅವನು ಇಸ್ರಾಯೇಲ್‌ ಮಕ್ಕಳನ್ನು ಕಳುಹಿಸಲೇ ಇಲ್ಲ.

10

10:1b.EXO.010.001 ತರುವಾಯ ಕರ್ತನು ಮೋಶೆಗೆ-- ಫರೋಹನ ಬಳಿಗೆ ಹೋಗು. ನಾನು ನನ್ನ ಸೂಚಕಕಾರ್ಯಗಳನ್ನು ಅವನ ಮುಂದೆ ತೋರಿಸು ವದಕ್ಕಾಗಿ ಅವನ ಹೃದಯವನ್ನೂ ಅವನ ಸೇವಕರ ಹೃದಯಗಳನ್ನೂ ಕಠಿಣಮಾಡಿದ್ದೇನೆ.

10:2b.EXO.010.002 ಇದಲ್ಲದೆ ನೀನು ನಿನ್ನ ಮಕ್ಕಳಿಗೂ ನಿನ್ನ ಮಕ್ಕಳ ಮಕ್ಕಳಿಗೂ ನಾನು ಐಗುಪ್ತದಲ್ಲಿ ಏನು ಮಾಡಿದೆನೆಂದೂ ನಾನೇ ಕರ್ತನೆಂದೂ ನೀವು ತಿಳುಕೊಳ್ಳುವಂತೆ ನಾನು ಅವರ ಮಧ್ಯದಲ್ಲಿ ಮಾಡಿದ ಸೂಚಕಕಾರ್ಯಗಳನ್ನು ತಿಳಿಸ ಬೇಕು ಎಂದು ಹೇಳಿದನು.

10:3b.EXO.010.003 ಮೋಶೆ ಆರೋನರು ಫರೋಹನ ಬಳಿಗೆ ಬಂದು ಅವನಿಗೆ--ಇಬ್ರಿಯರ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನೀನು ನನ್ನ ಸನ್ನಿಧಿಯಲ್ಲಿ ತಗ್ಗಿಸಿಕೊಳ್ಳದೆ ಇರುವದು ಎಲ್ಲಿಯವರೆಗೇ? ನನ್ನನ್ನು ಸೇವಿಸುವಂತೆ ನನ್ನ ಜನರನ್ನು ಹೋಗಗೊಡಿಸು.

10:4b.EXO.010.004 ನೀನು ನನ್ನ ಜನರನ್ನು ಹೋಗಗೊಡಿಸದಿದ್ದರೆ ಇಗೋ, ನಾಳೆಯೇನಾನು ನಿನ್ನ ಮೇರೆಯಲ್ಲಿ ಮಿಡತೆಗಳನ್ನು ಬರಮಾಡು ವೆನು.

10:5b.EXO.010.005 ಒಬ್ಬನು ಭೂಮಿಯನ್ನು ಕಾಣುವದಕ್ಕಾಗದಷ್ಟು ಅವು ಭೂಮುಖವನ್ನೆಲ್ಲಾ ಮುಚ್ಚಿಕೊಳ್ಳುವವು; ಇದ ಲ್ಲದೆ ಅವು ಆನೆಕಲ್ಲಿನ ಮಳೆಯಿಂದ ಹಾಳಾಗದೆ ನಿಮಗಾಗಿ ಉಳಿದಿರುವದೆಲ್ಲವನ್ನೂ ಹೊಲಗಳಲ್ಲಿ ಚಿಗುರಿರುವ ಪ್ರತಿಯೊಂದು ಮರವನ್ನೂ ತಿಂದುಬಿಡು ವವು.

10:6b.EXO.010.006 ಇದಲ್ಲದೆ ಅವು ನಿನ್ನ ಮನೆಗಳಲ್ಲಿಯೂ ನಿನ್ನ ಸೇವಕರ ಮನೆಗಳಲ್ಲಿಯೂ ಐಗುಪ್ತ್ಯರೆಲ್ಲರ ಮನೆ ಗಳಲ್ಲಿಯೂ ತುಂಬಿಕೊಳ್ಳುವವು. ನಿನ್ನ ತಂದೆಗಳಾಗಲಿ ನಿನ್ನ ತಂದೆಗಳ ತಂದೆಗಳಾಗಲಿ ಅವರು ಭೂಮಿಯ ಮೇಲೆ ಇದ್ದಂದಿನಿಂದ ಇಂದಿನ ವರೆಗೂ ಅಂಥದ್ದನ್ನು ಎಂದೂ ನೋಡಿರಲಿಲ್ಲ ಅಂದನು. ಮೋಶೆಯು ಹಿಂತಿರುಗಿ ಫರೋಹನ ಬಳಿಯಿಂದ ಹೊರಟು ಹೋದನು.

10:7b.EXO.010.007 ಆಗ ಫರೋಹನ ಸೇವಕರು ಅವನಿಗೆ--ಇವನು ಎಷ್ಟು ಕಾಲ ನಮಗೆ ಉರುಲಾಗಿರಬೇಕು. ಆ ಜನರು ತಮ್ಮ ದೇವರಾದ ಕರ್ತನಿಗೆ ಸೇವೆಮಾಡುವಂತೆ ಅವರನ್ನು ಕಳುಹಿಸಿಬಿಡು. ಐಗುಪ್ತವು ನಾಶವಾಯಿ ತೆಂದು ನಿನಗೆ ಇನ್ನೂ ತಿಳಿಯಲಿಲ್ಲವೋ ಅಂದರು.

10:8b.EXO.010.008 ಮೋಶೆ ಆರೋನರು ಫರೋಹನ ಬಳಿಗೆ ಮತ್ತೆ ಕರೆಯಲ್ಪಟ್ಟರು. ಆಗ ಅವರಿಗೆ--ನೀವು ಹೋಗಿ ನಿಮ್ಮ ದೇವರಾದ ಕರ್ತನಿಗೆ ಸೇವೆಮಾಡಿರಿ; ಆದರೆ ಹೋಗು ವವರು ಯಾರಾರು ಅಂದನು.

10:9b.EXO.010.009 ಅದಕ್ಕೆ ಮೋಶೆಯು ಅವನಿಗೆ--ನಮ್ಮ ಚಿಕ್ಕವರನ್ನೂ ಮುದುಕರನ್ನೂ ಕರ ಕೊಂಡು ಹೋಗುವದಲ್ಲದೆ ನಮ್ಮ ಕುಮಾರರನ್ನೂ ಕುಮಾರ್ತೆಯರನ್ನೂ ನಮ್ಮ ಕುರಿಗಳನ್ನೂ ದನಗಳನ್ನೂ ತಕ್ಕೊಂಡು ಹೋಗುತ್ತೇವೆ. ಯಾಕಂದರೆ ನಾವು ಕರ್ತ ನಿಗಾಗಿ ಹಬ್ಬವನ್ನು ಮಾಡಬೇಕು ಅಂದನು.

10:10b.EXO.010.010 ಫರೋ ಹನು ಅವರಿಗೆ--ನಾನು ನಿಮ್ಮನ್ನೂ ನಿಮ್ಮ ಮಕ್ಕಳನ್ನೂ ಹೇಗೆ ಕಳುಹಿಸುವೆನೋ ಹಾಗೆಯೇ ಕರ್ತನು ನಿಮ್ಮ ಸಂಗಡ ಇರಲಿ. ನೋಡಿರಿ, ನಿಮ್ಮ ಮುಂದೆ ಕೇಡು ಇದೆ.

10:11b.EXO.010.011 ಹಾಗೆ ಮಾಡದೆ ಈಗ ಗಂಡಸರಾದ ನೀವು ಹೋಗಿ ಕರ್ತನಿಗೆ ಸೇವೆಮಾಡಿರಿ; ಇದನ್ನೇ ನೀವು ಬಯಸಿದಿರಿ ಅಂದನು. ತರುವಾಯ ಅವರು ಫರೋಹನ ಎದುರಿನಿಂದ ಹೊರದೂಡಲ್ಪಟ್ಟರು.

10:12b.EXO.010.012 ಆಗ ಕರ್ತನು ಮೋಶೆಗೆ--ಮಿಡತೆಗಳಿಗಾಗಿ ನಿನ್ನ ಕೈಯನ್ನು ಐಗುಪ್ತದ ಮೇಲೆ ಚಾಚು. ಅವು ಐಗುಪ್ತದ ಮೇಲೆ ಬಂದು ಆ ದೇಶದಲ್ಲಿರುವ ಹಸುರಾದದ್ದನ್ನೆಲ್ಲಾ ಅಂದರೆ ಆನೆಕಲ್ಲಿನ ಮಳೆಯು ಉಳಿಸಿದ್ದದನ್ನೆಲ್ಲಾ ತಿಂದು ಬಿಡಲಿ ಅಂದನು.

10:13b.EXO.010.013 ಮೋಶೆಯು ತನ್ನ ಕೋಲನ್ನು ಐಗುಪ್ತದೇಶದ ಮೇಲೆ ಚಾಚಿದಾಗ ಕರ್ತನು ಹಗಲಿರುಳೂ ಮೂಡಣಗಾಳಿಯನ್ನು ಬರಮಾಡಿದನು. ಉದ ಯವಾದಾಗ ಆ ಮೂಡಣ ಗಾಳಿಯು ಮಿಡತೆಗಳನ್ನು ಅಟ್ಟಿಕೊಂಡು ಬಂದಿತು.

10:14b.EXO.010.014 ಹೀಗೆ ಮಿಡತೆಗಳು ಐಗುಪ್ತ ದೇಶದಲ್ಲೆಲ್ಲಾ ಬಂದು ಐಗುಪ್ತದ ಎಲ್ಲಾ ಮೇರೆಗಳಲ್ಲಿ ದೊಡ್ಡ ಸಮೂಹವಾಗಿ ಸೇರಿಕೊಂಡವು. ಅವು ಕ್ರೂರ ವಾದವುಗಳಾಗಿದ್ದವು. ಅವುಗಳಂತೆ ಹಿಂದೆ ಎಂದಿಗೂ ಇರಲಿಲ್ಲ, ಅನಂತರವೂ ಇರಲಾರವು.

10:15b.EXO.010.015 ಅವು ಭೂ ಮುಖವನ್ನೆಲ್ಲಾ ಮುತ್ತಿಕೊಂಡದ್ದರಿಂದ ಆ ದೇಶವು ಕತ್ತಲಾಯಿತು. ಅವು ಭೂಮಿಯ ಎಲ್ಲಾ ಸೊಪ್ಪನ್ನೂ ಆನೆಕಲ್ಲಿನ ಮಳೆಯು ಉಳಿಸಿದ ಮರಗಳ ಎಲ್ಲಾ ಫಲವನ್ನೂ ತಿಂದುಬಿಟ್ಟವು. ಮರಗಳಲ್ಲಾದರೂ ಹೊಲದ ಗಿಡಗಳಲ್ಲಾದರೂ ಹಸುರಾದದ್ದು ಐಗುಪ್ತ ದೇಶದಲ್ಲೆಲ್ಲಿಯೂ ಉಳಿಯಲಿಲ್ಲ.

10:16b.EXO.010.016 ಆಗ ಫರೋಹನು ಮೋಶೆ ಆರೋನರನ್ನು ತ್ವರೆಯಾಗಿ ಕರೆಯಿಸಿ ಅವರಿಗೆ--ನಾನು ನಿಮ್ಮ ದೇವ ರಾದ ಕರ್ತನಿಗೂ ನಿಮಗೂ ವಿರೋಧವಾಗಿ ಪಾಪ ಮಾಡಿದ್ದೇನೆ.

10:17b.EXO.010.017 ಹೀಗಿರುವದರಿಂದ ಈಗ ಈ ಒಂದೇ ಸಾರಿ ನನ್ನ ಪಾಪವನ್ನು ಕ್ಷಮಿಸಬೇಕೆಂದು ನಾನು ನಿಮ್ಮನ್ನು ಬೇಡುತ್ತೇನೆ. ಈ ಮರಣವನ್ನು ಮಾತ್ರ ನನ್ನಿಂದ ತೊಲಗಿಸುವಂತೆ ನಿಮ್ಮ ದೇವರಾದ ಕರ್ತನನ್ನು ಬೇಡಿ ಕೊಳ್ಳಿರಿ ಅಂದನು.

10:18b.EXO.010.018 ಆಗ ಅವನು ಫರೋಹನನ್ನು ಬಿಟ್ಟುಹೋಗಿ ಕರ್ತನನ್ನು ಬೇಡಿಕೊಂಡನು.

10:19b.EXO.010.019 ಕರ್ತನು ಮಹಾಬಲವಾದ ಪಶ್ಚಿಮಗಾಳಿಯನ್ನು ಬೀಸಮಾಡಿದನು. ಅದು ಮಿಡತೆಗಳನ್ನು ಎತ್ತಿಕೊಂಡು ಹೋಗಿ ಕೆಂಪುಸಮುದ್ರದಲ್ಲಿ ಹಾಕಿತು. ಐಗುಪ್ತದ ಮೇರೆಗಳಲ್ಲೆಲ್ಲಾ ಒಂದು ಮಿಡತೆಯಾದರೂ ಉಳಿಯ ಲಿಲ್ಲ.

10:20b.EXO.010.020 ಆದರೆ ಕರ್ತನು ಫರೋಹನ ಹೃದಯವನ್ನು ಕಠಿಣಮಾಡಿದ್ದರಿಂದ ಅವನು ಇಸ್ರಾಯೇಲ್‌ ಮಕ್ಕಳನ್ನು ಕಳುಹಿಸದೆ ಹೋದನು.

10:21b.EXO.010.021 ಆಗ ಕರ್ತನು ಮೋಶೆಗೆ--ಐಗುಪ್ತದೇಶದಲ್ಲಿ ಕತ್ತಲೆ ಕವಿದು ಗಾಡಾಂಧಕಾರವಾಗುವಂತೆ ನಿನ್ನ ಕೈಯನ್ನು ಆಕಾಶದ ಕಡೆಗೆ ಚಾಚು ಅಂದನು.

10:22b.EXO.010.022 ಮೋಶೆಯು ಆಕಾಶದ ಕಡೆಗೆ ಕೈಚಾಚಿದಾಗ ಐಗುಪ್ತದೇಶದಲ್ಲೆಲ್ಲಾ ಮೂರು ದಿನಗಳ ವರೆಗೆ ಘೋರವಾದ ಕತ್ತಲು ಕವಿಯಿತು.

10:23b.EXO.010.023 ಮೂರು ದಿನಗಳ ವರೆಗೆ ಅವರು ಒಬ್ಬರನ್ನೊಬ್ಬರು ನೋಡಲಿಲ್ಲ, ಯಾರೂ ತಮ್ಮ ಸ್ಥಳ ವನ್ನು ಬಿಟ್ಟು ಏಳಲೂ ಇಲ್ಲ. ಆದರೆ ಇಸ್ರಾಯೇಲ್‌ ಮಕ್ಕಳಿಗೆಲ್ಲಾ ಅವರು ವಾಸಿಸುವ ಸ್ಥಳದಲ್ಲಿ ಅವರಿಗೆ ಬೆಳಕಿತ್ತು.

10:24b.EXO.010.024 ಆಗ ಫರೋಹನು ಮೋಶೆಯನ್ನು ಕರೆ ಯಿಸಿ ಅವನಿಗೆ--ನೀವು ಹೋಗಿ ಕರ್ತನಿಗೆ ಸೇವೆ ಮಾಡಿರಿ, ನಿಮ್ಮ ಕುರಿದನಗಳು ಮಾತ್ರ ಇಲ್ಲಿರಲಿ. ನಿಮ್ಮ ಮಕ್ಕಳೂ ನಿಮ್ಮ ಸಂಗಡ ಹೋಗಲಿ ಅಂದನು.

10:25b.EXO.010.025 ಅದಕ್ಕೆ ಮೋಶೆಯು ಅವನಿಗೆ--ನಮ್ಮ ದೇವರಾದ ಕರ್ತನಿಗೆ ಅರ್ಪಿಸುವದಕ್ಕೆ ನೀನು ನಮ್ಮ ಕೈಯಲ್ಲಿ ಬಲಿಗಳನ್ನೂ ದಹನಬಲಿಗಳನ್ನೂ ಕೊಡಬೇಕು.

10:26b.EXO.010.026 ನಮ್ಮ ಪಶುಗಳನ್ನೂ ನಾವು ನಮ್ಮ ಸಂಗಡ ತೆಗೆದು ಕೊಂಡು ಹೋಗುವೆವು. ಒಂದು ಗೊರಸೆಯಾದರೂ ಬಿಡುವದಿಲ್ಲ. ಯಾಕಂದರೆ ನಮ್ಮ ದೇವರಾದ ಕರ್ತನಿಗೆ ಆರಾಧನೆ ಮಾಡುವದಕ್ಕೆ ಅವುಗಳಿಂದಲೇ ಆರಿಸ ಬೇಕು. ಕರ್ತನಿಗೆ ಯಾವ ಸೇವೆಮಾಡಬೇಕೆಂಬದು ಅಲ್ಲಿಗೆ ಹೋಗುವವರೆಗೂ ನಮಗೆ ತಿಳಿಯುವದಿಲ್ಲ ಅಂದನು.

10:27b.EXO.010.027 ಆದರೆ ಕರ್ತನು ಫರೋಹನ ಹೃದಯ ವನ್ನು ಕಠಿಣ ಮಾಡಿದ್ದರಿಂದ ಅವನು ಅವರನ್ನು ಕಳುಹಿಸಲಾರದೆ ಹೋದನು.

10:28b.EXO.010.028 ಆಗ ಫರೋಹನು ಅವನಿಗೆ--ನನ್ನನ್ನು ಬಿಟ್ಟು ಹೋಗು, ಇನ್ನು ನನ್ನ ಮುಖವನ್ನು ನೋಡದಂತೆ ಎಚ್ಚರಿಕೆಯಾಗಿರು; ಯಾಕಂದರೆ ನೀನು ನನ್ನ ಮುಖವನ್ನು ನೋಡಿದ ದಿನದಲ್ಲಿ ನೀನು ಸಾಯುವಿ ಅಂದನು.ಮೋಶೆಯು ಅವನಿಗೆ--ನೀನು ಸರಿಯಾಗಿ ಹೇಳಿದ್ದೀ. ಇನ್ನು ಮೇಲೆ ನಾನು ನಿನ್ನ ಮುಖವನ್ನು ನೋಡುವದಿಲ್ಲ ಅಂದನು.

10:29b.EXO.010.029 ಮೋಶೆಯು ಅವನಿಗೆ--ನೀನು ಸರಿಯಾಗಿ ಹೇಳಿದ್ದೀ. ಇನ್ನು ಮೇಲೆ ನಾನು ನಿನ್ನ ಮುಖವನ್ನು ನೋಡುವದಿಲ್ಲ ಅಂದನು.

11

11:1b.EXO.011.001 ಆದರೆ ಕರ್ತನು ಮೋಶೆಗೆ--ಇನ್ನೊಂದು ಬಾಧೆಯನ್ನು ಫರೋಹನ ಮೇಲೆಯೂ ಐಗುಪ್ತದ ಮೇಲೆಯೂ ಬರಮಾಡುವೆನು. ಅದಾದ ಮೇಲೆ ಅವನು ನಿಮ್ಮನ್ನು ಕಳುಹಿಸುವನು; ಇಲ್ಲಿಂದ ನಿಮ್ಮನ್ನು ನಿಶ್ಚಯವಾಗಿ ಬಲವಂತದಿಂದ ಎಲ್ಲವನ್ನೂ ಕಳುಹಿಸಿಬಿಡುವನು.

11:2b.EXO.011.002 ಪ್ರತಿಯೊಬ್ಬನು ತನ್ನ ನೆರೆಯವ ನಿಂದಲೂ ಪ್ರತಿ ಸ್ತ್ರೀಯು ತನ್ನ ನೆರೆಯವಳಿಂದಲೂ ಬೆಳ್ಳಿ ಬಂಗಾರದ ಒಡವೆಗಳನ್ನು ಕೊಡುವ ಹಾಗೆ ಕೇಳಿಕೊಳ್ಳಬೇಕು.

11:3b.EXO.011.003 ಇದಲ್ಲದೆ ಕರ್ತನು ಐಗುಪ್ತ್ಯರ ದೃಷ್ಟಿಯಲ್ಲಿ ಜನರಿಗೆ ದಯೆದೊರಕುವಂತೆ ಮಾಡಿದನು. ಆ ಮನುಷ್ಯನಾದ ಮೋಶೆಯು ಐಗುಪ್ತದೇಶದಲ್ಲಿಯೂ ಫರೋಹನ ಸೇವಕರ ದೃಷ್ಟಿಯಲ್ಲಿಯೂ ಜನರ ದೃಷ್ಟಿಯಲ್ಲಿಯೂ ಬಹು ದೊಡ್ಡವನಾಗಿದ್ದನು.

11:4b.EXO.011.004 ಆಗ ಮೋಶೆಯು ಫರೋಹನಿಗೆ--ಕರ್ತನು ಹೀಗೆ ಹೇಳುತ್ತಾನೆ--ಸುಮಾರು ಮಧ್ಯರಾತ್ರಿಯಲ್ಲಿ ನಾನು ಐಗುಪ್ತದ ಮಧ್ಯದಲ್ಲಿ ಹಾದು ಹೋಗುವೆನು.

11:5b.EXO.011.005 ಆಗ ಐಗುಪ್ತದೇಶದ ಚೊಚ್ಚಲ ಮಕ್ಕಳು ಅಂದರೆ ಸಿಂಹಾ ಸನದ ಮೇಲೆ ಕೂತಿರುವ ಫರೋಹನ ಚೊಚ್ಚಲ ಮಗನು ಮೊದಲುಗೊಂಡು ಬೀಸುವ ಕಲ್ಲಿನ ಹಿಂದೆ ಇರುವ ದಾಸಿಯ ಚೊಚ್ಚಲ ಮಗನ ವರೆಗೆ ಮತ್ತು ಪಶುಗಳಲ್ಲಿ ಚೊಚ್ಚಲಾದವುಗಳೆಲ್ಲವು ಸಾಯುವವು.

11:6b.EXO.011.006 ಐಗುಪ್ತದೇಶದಲ್ಲೆಲ್ಲಾ ದೊಡ್ಡ ಗೋಳಾಟವಿರುವದು. ಇಂಥದ್ದು ಹಿಂದೆಯೂ ಇರಲಿಲ್ಲ, ಇನ್ನು ಮುಂದೆಯೂ ಇರುವದಿಲ್ಲ.

11:7b.EXO.011.007 ಆದರೆ ಕರ್ತನು ಐಗುಪ್ತ್ಯರಿಗೂ ಇಸ್ರಾಯೇಲ್ಯರಿಗೂ ಮಧ್ಯದಲ್ಲಿಟ್ಟಿರುವ ವ್ಯತ್ಯಾಸವನ್ನು ನೀವು ತಿಳಿದುಕೊಳ್ಳುವಂತೆ ಇಸ್ರಾಯೇಲ್‌ ಮಕ್ಕಳೆಲ್ಲರ ಮೇಲೆ ಮನುಷ್ಯರು ಮೊದಲುಗೊಂಡು ಪಶುಗಳ ವರೆಗೆ ಒಂದು ನಾಯಿಯಾದರೂ ತನ್ನ ನಾಲಿಗೆಯನ್ನು ಅಲ್ಲಾಡಿಸುವದಿಲ್ಲ.

11:8b.EXO.011.008 ಆಗ ನಿನ್ನ ದಾಸರಾದ ಇವರೆಲ್ಲರೂ ನನ್ನ ಬಳಿಗೆ ಬಂದು ನನಗೆ ಅಡ್ಡಬಿದ್ದು ನನಗೆ--ನೀನೂ ನಿನ್ನನ್ನು ಹಿಂಬಾಲಿಸುವ ಜನರೆಲ್ಲರೂ ಹೊರಗೆ ಹೋಗಿರಿ ಎಂದು ಹೇಳುವರು. ತರುವಾಯ ನಾನು ಹೊರಗೆ ಹೋಗುವೆನು ಎಂದು ಹೇಳಿ ಮೋಶೆಯು ಕೋಪಾವೇಶವುಳ್ಳವನಾಗಿ ಫರೋಹನ ಬಳಿಯಿಂದ ಹೊರಟುಹೋದನು.

11:9b.EXO.011.009 ಆದರೆ ಕರ್ತನು ಮೋಶೆಗೆ--ನನ್ನ ಅದ್ಭುತಗಳು ಐಗುಪ್ತದೇಶದಲ್ಲಿ ಹೆಚ್ಚಾಗುವಂತೆ ಫರೋಹನು ನಿಮ್ಮ ಮಾತನ್ನು ಕೇಳುವದಿಲ್ಲ ಅಂದನು.ಈ ಅದ್ಭುತ ಗಳನ್ನೆಲ್ಲಾ ಮೋಶೆ ಆರೋನರು ಫರೋಹನ ಮುಂದೆ ಮಾಡಿದರು. ಆದರೆ ಕರ್ತನು ಫರೋಹನ ಹೃದಯ ವನ್ನು ಕಠಿಣಮಾಡಿದ್ದರಿಂದ ಅವನು ಇಸ್ರಾಯೇಲ್‌ ಮಕ್ಕಳನ್ನು ತನ್ನ ದೇಶದೊಳಗಿಂದ ಕಳುಹಿಸಲಿಲ್ಲ.

11:10b.EXO.011.010 ಈ ಅದ್ಭುತ ಗಳನ್ನೆಲ್ಲಾ ಮೋಶೆ ಆರೋನರು ಫರೋಹನ ಮುಂದೆ ಮಾಡಿದರು. ಆದರೆ ಕರ್ತನು ಫರೋಹನ ಹೃದಯ ವನ್ನು ಕಠಿಣಮಾಡಿದ್ದರಿಂದ ಅವನು ಇಸ್ರಾಯೇಲ್‌ ಮಕ್ಕಳನ್ನು ತನ್ನ ದೇಶದೊಳಗಿಂದ ಕಳುಹಿಸಲಿಲ್ಲ.

12

12:1b.EXO.012.001 ಕರ್ತನು ಐಗುಪ್ತದಲ್ಲಿ ಮೋಶೆ ಆರೋನರ ಸಂಗಡ ಮಾತನಾಡಿ ಹೇಳಿದ್ದೇನಂದರೆ--

12:2b.EXO.012.002 ಈ ತಿಂಗಳೇ ನಿಮಗೆ ಆದಿಮಾಸವಾಗಿರಬೇಕು. ಇದು ನಿಮಗೆ ವರುಷದ ಮೊದಲನೆಯ ತಿಂಗಳಾಗಿರುವದು.

12:3b.EXO.012.003 ಇಸ್ರಾಯೇಲ್‌ ಸಭೆಗೆಲ್ಲಾ ನೀವು ಹೇಳಬೇಕಾದದ್ದೇ ನಂದರೆ--ಈ ತಿಂಗಳಿನ ಹತ್ತನೆಯ ದಿನದಲ್ಲಿ ಅವರು ತಮಗೆ ಒಂದೊಂದು ಕುರಿಮರಿಯನ್ನು ಅವರ ತಂದೆಗಳ ಮನೆಯ ಪ್ರಕಾರ ಮನೆಗೆ ಒಂದು ಕುರಿಮರಿಯನ್ನು ತಕ್ಕೊಳ್ಳಬೇಕು.

12:4b.EXO.012.004 ಒಂದು ಕುರಿಮರಿಯನ್ನು ತಿನ್ನುವದಕ್ಕೆ ಕುಟುಂಬವು ಚಿಕ್ಕದಾಗಿದ್ದರೆ ಅವನೂ ತನ್ನ ಮನೆಗೆ ಸವಿಾಪವಾಗಿರುವ ತನ್ನ ನೆರೆಯವನೂ ವ್ಯಕ್ತಿಗಳ ಲೆಕ್ಕದ ಪ್ರಕಾರ ಒಂದನ್ನು ತಕ್ಕೊಳ್ಳಲಿ; ಒಬ್ಬೊಬ್ಬನು ತಾನು ತಿನ್ನುವ ಅಳತೆಯ ಪ್ರಕಾರ ಕುರಿಮರಿಯನ್ನು ತಕ್ಕೊಳ್ಳಲಿ.

12:5b.EXO.012.005 ನಿಮ್ಮ ಕುರಿಮರಿಯು ನಿರ್ದೋಷವಾಗಿರುವ ಒಂದು ವರುಷದ ಗಂಡುಮರಿಯಾಗಿರಬೇಕು. ನೀವು ಕುರಿಗಳಿಂದಾಗಲಿ ಮೇಕೆಗಳಿಂದಾಗಲಿ ಅದನ್ನು ತಕ್ಕೊ ಳ್ಳಬೇಕು.

12:6b.EXO.012.006 ಅದನ್ನು ಈ ತಿಂಗಳಿನ ಹದಿನಾಲ್ಕನೆಯ ದಿನದ ವರೆಗೆ ಇಟ್ಟುಕೊಳ್ಳಬೇಕು. ತರುವಾಯ ಸಾಯಂ ಕಾಲದಲ್ಲಿ ಇಸ್ರಾಯೇಲಿನ ಕೂಟದ ಇಡೀ ಸಭೆಯು ಅದನ್ನು ಕೊಲ್ಲಬೇಕು.

12:7b.EXO.012.007 ರಕ್ತದಲ್ಲಿ ಸ್ವಲ್ಪ ತೆಗೆದು ಅವರು ಊಟ ಮಾಡುವ ಮನೆಗಳ ಎರಡು ನಿಲುವು ಗಂಬಗ ಳಿಗೂ ಬಾಗಿಲ ಮೇಲಿನ ಅಡ್ಡಗಂಬಕ್ಕೂ ಹಚ್ಚಬೇಕು.

12:8b.EXO.012.008 ಆ ರಾತ್ರಿಯಲ್ಲಿಯೇ ಆ ಮಾಂಸವನ್ನು ತಿನ್ನಬೇಕು. ಬೆಂಕಿಯಲ್ಲಿ ಸುಟ್ಟು ಅದನ್ನೂ ಹುಳಿಯಿಲ್ಲದ ರೊಟ್ಟಿಗ ಳನ್ನೂ ಕಹಿಯಾದ ಪಲ್ಯಗಳ ಸಂಗಡ ತಿನ್ನಬೇಕು.

12:9b.EXO.012.009 ಅದರಲ್ಲಿ ಯಾವದನ್ನೂ ಹಸಿಯಾದದ್ದಾಗಲಿ ನೀರಿ ನಲ್ಲಿ ಬೇಯಿಸಿದ್ದಾಗಲಿ ತಿನ್ನದೆ ಅದರ ತಲೆ ತೊಡೆ ಒಳಗಿನವುಗಳ ಸಹಿತವಾಗಿ ಬೆಂಕಿಯಲ್ಲಿ ಸುಟ್ಟೇ ಅದನ್ನು ತಿನ್ನಬೇಕು.

12:10b.EXO.012.010 ಅದರಲ್ಲಿ ಬೆಳಗಿನ ವರೆಗೆ ಏನನ್ನೂ ಉಳಿಸಬಾರದು. ಬೆಳಗಿನ ವರೆಗೆ ಅದರಲ್ಲಿ ಉಳಿದದ್ದನ್ನು ಬೆಂಕಿಯಿಂದ ಸುಟ್ಟುಬಿಡಬೇಕು.

12:11b.EXO.012.011 ನೀವು ಅದನ್ನು ತಿನ್ನತಕ್ಕ ರೀತಿ ಇದೇ: ನೀವು ನಿಮ್ಮ ನಡುಕಟ್ಟಿಕೊಂಡು, ಕೆರ ಮೆಟ್ಟಿಕೊಂಡು, ಕೋಲನ್ನು ಹಿಡಿದುಕೊಂಡು, ತ್ವರೆಯಾಗಿ ಅದನ್ನು ತಿನ್ನಬೇಕು. ಅದು ಕರ್ತನ ಪಸ್ಕವಾಗಿದೆ.

12:12b.EXO.012.012 ನಾನು ಈ ರಾತ್ರಿ ಐಗುಪ್ತದೇಶದಲ್ಲಿ ಹಾದುಹೋಗುತ್ತೇನೆ. ಐಗುಪ್ತದೇಶದಲ್ಲಿರುವ ಎಲ್ಲಾ ಮನುಷ್ಯರಲ್ಲಿಯೂ ಪಶುಗಳಲ್ಲಿಯೂ ಇರುವ ಚೊಚ್ಚ ಲಾದವುಗಳನ್ನು ಸಂಹರಿಸುವೆನು. ಐಗುಪ್ತದ ದೇವರುಗ ಳಿಗೆಲ್ಲಾ ನಾನು ನ್ಯಾಯತೀರಿಸುವೆನು; ನಾನೇ ಕರ್ತನು.

12:13b.EXO.012.013 ಆದರೆ ನೀವು ಇರುವ ಎಲ್ಲಾ ಮನೆಗಳ ಮೇಲೆ ರಕ್ತವು ನಿಮಗೆ ಗುರುತಾಗಿರುವದು. ಆ ರಕ್ತವನ್ನು ನಾನು ನೋಡುವಾಗ ನಿಮ್ಮನ್ನು ದಾಟಿಹೋಗುವೆನು. ಐಗುಪ್ತದೇಶವನ್ನು ನಾನು ಹೊಡೆಯುವ ಸಮಯದಲ್ಲಿ ನಿಮ್ಮನ್ನು ನಾಶಮಾಡುವ ಯಾವ ಬಾಧೆಯೂ ನಿಮ್ಮ ಮೇಲೆ ಬರುವದಿಲ್ಲ.

12:14b.EXO.012.014 ಈ ದಿನವು ನಿಮಗೆ ಜ್ಞಾಪಕಾರ್ಥವಾಗಿರುವದು; ನೀವು ಇದನ್ನು ಕರ್ತನಿಗೆ ಹಬ್ಬವಾಗಿ ತಲತಲಾಂತರ ಗಳಲ್ಲಿ ಆಚರಿಸಬೇಕು; ಇದನ್ನು ನಿತ್ಯ ಶಾಸನದಂತೆ ಎಂದೆಂದಿಗೂ ಆಚರಿಸಬೇಕು.

12:15b.EXO.012.015 ಏಳು ದಿನಗಳ ವರೆಗೆ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಮೊದಲನೆಯ ದಿನದಲ್ಲಿಯೇ ಹುಳಿಹಿಟ್ಟನ್ನು ನಿಮ್ಮ ಮನೆಯೊಳಗಿಂದ ತೆಗೆದುಹಾಕಬೇಕು; ಮೊದಲನೆಯ ದಿನದಿಂದ ಏಳ ನೆಯ ದಿನದ ವರೆಗೆ ಹುಳಿರೊಟ್ಟಿಯನ್ನು ತಿನ್ನುವವರು ಇಸ್ರಾಯೇಲಿನೊಳಗಿಂದ ತೆಗೆದು ಹಾಕಲ್ಪಡಬೇಕು.

12:16b.EXO.012.016 ಇದಲ್ಲದೆ ಮೊದಲನೆಯ ದಿನದಲ್ಲಿ ಪರಿಶುದ್ಧ ಸಭೆಯೂ ಏಳನೆಯ ದಿನದಲ್ಲಿ ಪರಿಶುದ್ಧ ಸಭೆಯೂ ನಿಮಗೆ ಇರಬೇಕು. ಊಟಮಾಡುವದನ್ನು ಬಿಟ್ಟು ಆ ದಿನಗಳಲ್ಲಿ ಯಾವ ತರವಾದ ಕೆಲಸವನ್ನೂ ಮಾಡ ಬಾರದು.

12:17b.EXO.012.017 ನೀವು ಹುಳಿಯಿಲ್ಲದ ರೊಟ್ಟಿಯ ಹಬ್ಬ ವನ್ನು ಆಚರಿಸಬೇಕು. ಆ ದಿನದಲ್ಲಿಯೇ ನಾನು ನಿಮ್ಮ ಸೈನ್ಯಗಳನ್ನು ಐಗುಪ್ತದೇಶದೊಳಗಿಂದ ಹೊರಗೆ ಬರ ಮಾಡಿದ್ದೇನೆ; ಆದಕಾರಣ ನಿಮ್ಮ ಸಂತತಿಗಳಲ್ಲಿ ಸದಾ ಕಾಲಕ್ಕೂ ಒಂದು ಶಾಸನವಾಗಿ ಈ ದಿನವನ್ನು ನೀವು ಆಚರಿಸಬೇಕು.

12:18b.EXO.012.018 ಮೊದಲನೆಯ ತಿಂಗಳಿನಲ್ಲಿ ಅದೇ ತಿಂಗಳಿನ ಹದಿನಾಲ್ಕನೆಯ ದಿನದ ಸಾಯಂಕಾಲದಿಂದ ಆ ತಿಂಗಳಿನ ಇಪ್ಪತ್ತೊಂದನೆಯ ದಿನದ ಸಾಯಂಕಾಲದ ವರೆಗೆ ನೀವು ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು.

12:19b.EXO.012.019 ಏಳು ದಿನಗಳ ವರೆಗೆ ಹುಳಿಹಿಟ್ಟು ನಿಮ್ಮ ಮನೆಗಳಲ್ಲಿ ಇರಬಾರದು; ಹುಳಿಕಲಸಿದ್ದನ್ನು ಯಾರು ತಿನ್ನುವರೋ ಆ ವ್ಯಕ್ತಿಯು ಪರದೇಶದವನಾಗಲಿ ಸ್ವದೇಶದವ ನಾಗಲಿ ಅವನನ್ನು ಇಸ್ರಾಯೇಲ್‌ ಸಭೆಯೊಳಗಿಂದ ತೆಗೆದು ಹಾಕಬೇಕು.

12:20b.EXO.012.020 ಹುಳಿಕಲಸಿದ್ದು ಯಾವದೇ ಆಗಿರಲಿ ನೀವು ತಿನ್ನಬಾರದು; ನಿಮ್ಮ ಎಲ್ಲಾ ನಿವಾಸ ಗಳಲ್ಲಿ ಹುಳಿಯಿಲ್ಲದ ರೊಟ್ಟಿಗಳನ್ನೇ ತಿನ್ನಬೇಕು ಎಂದು ಹೇಳಿದನು.

12:21b.EXO.012.021 ಆಗ ಮೋಶೆಯು ಇಸ್ರಾಯೇಲಿನ ಎಲ್ಲಾ ಹಿರಿಯ ರನ್ನು ಕರೆದು ಅವರಿಗೆ--ನಿಮ್ಮ ಗೋತ್ರಗಳ ಪ್ರಕಾರ ಕುರಿಗಳನ್ನು ತೆಗೆದುಕೊಂಡು ಪಸ್ಕವನ್ನು (ಕುರಿಯನ್ನು) ಕೊಯ್ಯಿರಿ.

12:22b.EXO.012.022 ಹಿಸ್ಸೋಪಿನ ಕಟ್ಟನ್ನು ತೆಗೆದುಕೊಂಡು ಬೋಗುಣಿಯಲ್ಲಿರುವ ರಕ್ತದಲ್ಲಿ ಅದನ್ನು ಅದ್ದಿ ಬಾಗಿ ಲಿನ ಮೇಲಿನ ಅಡ್ಡಗಂಬಕ್ಕೂ ಪಕ್ಕದಲ್ಲಿರುವ ಎರಡು ನಿಲುವುಗಂಬಗಳಿಗೂ ಹಚ್ಚಿರಿ. ನಿಮ್ಮಲ್ಲಿ ಯಾರೂ ಬೆಳಗಾಗುವ ವರೆಗೆ ಮನೆಯ ಬಾಗಿಲನ್ನು ಬಿಟ್ಟು ಹೋಗಬಾರದು.

12:23b.EXO.012.023 ಕರ್ತನು ಐಗುಪ್ತ್ಯರನ್ನು ಸಂಹರಿ ಸುವದಕ್ಕಾಗಿ ಹಾದುಹೋಗುವನು; ಆತನು ಮೇಲಿನ ಅಡ್ಡಗಂಬದ ಮೇಲೂ ಪಕ್ಕದ ಎರಡು ನಿಲುವು ಕಂಬಗಳ ಮೇಲೂ ರಕ್ತವನ್ನು ನೋಡಿದಾಗ ಸಂಹಾರಕನು ನಿಮ್ಮ ಮನೆಗಳೊಳಗೆ ಬಂದು ನಿಮ್ಮನ್ನು ಸಂಹಾರಮಾಡ ದಂತೆ ನಿಮ್ಮ ಬಾಗಿಲುಗಳನ್ನು ದಾಟಿ ಹೋಗುವನು.

12:24b.EXO.012.024 ಇದನ್ನು ಒಂದು ಶಾಸನವಾಗಿ ನೀವೂ ನಿಮ್ಮ ಕುಮಾರರೂ ಸದಾಕಾಲಕ್ಕೂ ಇದನ್ನು ಆಚರಿಸತಕ್ಕದ್ದು.

12:25b.EXO.012.025 ಕರ್ತನು ಕೊಡುವೆನೆಂದು ಪ್ರಮಾಣಮಾಡಿದ ದೇಶಕ್ಕೆ ನೀವು ಬಂದಾಗ ಈ ಆಚರಣೆಯನ್ನು ನೀವು ಕೈಕೊಳ್ಳಬೇಕು.

12:26b.EXO.012.026 ನಿಮ್ಮ ಮಕ್ಕಳು ಈ ಆಚಾರದ ಅರ್ಥವೇನು ಎಂದು ಕೇಳಿದಾಗ

12:27b.EXO.012.027 ನೀವು ಅವ ರಿಗೆ--ಕರ್ತನು ಐಗುಪ್ತದೇಶದಲ್ಲಿ ಐಗುಪ್ತ್ಯರನ್ನು ಸಂಹರಿಸಿ ನಮ್ಮ ಮನೆಗಳನ್ನು ಕಾಪಾಡುವದಕ್ಕಾಗಿ ಇಸ್ರಾಯೇಲ್‌ ಮಕ್ಕಳ ಮನೆಗಳನ್ನು ದಾಟಿಹೋದ ಕರ್ತನ ಪಸ್ಕವೇ ಇದು ಎಂದು ನೀವು ಹೇಳಬೇಕು ಅಂದನು. ಆಗ ಜನರು ತಲೆಬಾಗಿಸಿ ಆರಾಧಿಸಿದರು.

12:28b.EXO.012.028 ಇಸ್ರಾಯೇಲ್‌ ಮಕ್ಕಳು ಹೊರಟುಹೋಗಿ ಕರ್ತನು ಮೋಶೆ ಆರೋನರಿಗೆ ಆಜ್ಞಾಪಿಸಿದ ಮೇರೆಗೆ ಅವರು ಮಾಡಿದರು.

12:29b.EXO.012.029 ಮಧ್ಯರಾತ್ರಿಯಲ್ಲಿ ನಡೆದದ್ದೇನಂದರೆ, ಸಿಂಹಾ ಸನದ ಮೇಲೆ ಕೂತುಕೊಂಡ ಫರೋಹನ ಚೊಚ್ಚಲು ಮಗನು ಮೊದಲುಗೊಂಡು ಸೆರೆಯಲ್ಲಿದ್ದ ಸೆರೆಯವನ ಚೊಚ್ಚಲು ಮಗನ ವರೆಗೂ ಅಂದರೆ ಐಗುಪ್ತದೇಶ ದಲ್ಲಿದ್ದ ಎಲ್ಲಾ ಚೊಚ್ಚಲು ಮಕ್ಕಳನ್ನೂ ಪಶುಗಳಲ್ಲಿ ಚೊಚ್ಚಲಾದವುಗಳೆಲ್ಲವನ್ನೂ ಕರ್ತನು ಸಂಹರಿಸಿದನು.

12:30b.EXO.012.030 ಆಗ ಫರೋಹನೂ ಅವನ ಎಲ್ಲಾ ಸೇವಕರೂ ಎಲ್ಲಾ ಐಗುಪ್ತ್ಯರೂ ರಾತ್ರಿಯಲ್ಲಿ ಎದ್ದರು. ಆಗ ಐಗುಪ್ತದಲ್ಲಿ ದೊಡ್ಡ ಗೋಳಾಟವಾಯಿತು. ಅಲ್ಲಿ ಸತ್ತವರಿಲ್ಲದ ಒಂದು ಮನೆಯಾದರೂ ಇರಲಿಲ್ಲ.

12:31b.EXO.012.031 ಫರೋಹನು ರಾತ್ರಿಯಲ್ಲಿ ಮೋಶೆ ಆರೋನರನ್ನು ಕರೆಯಿಸಿ ಅವರಿಗೆ--ನೀವು ಎದ್ದು ನನ್ನ ಜನರೊ ಳಗಿಂದ ಹೊರಟು ಹೋಗಿರಿ; ನೀವು ಹೇಳಿದ ಹಾಗೆಯೇ ಕರ್ತನನ್ನು ಸೇವಿಸುವದಕ್ಕೆ ನೀವೂ ಇಸ್ರಾಯೇಲ್‌ ಮಕ್ಕಳೂ ಹೋಗಿಬಿಡಿರಿ.

12:32b.EXO.012.032 ನೀವು ಹೇಳಿದಂತೆ ನಿಮ್ಮ ಕುರಿದನಗಳನ್ನು ತೆಗೆದುಕೊಳ್ಳಿರಿ. ನನ್ನನ್ನು ಸಹ ಆಶೀರ್ವದಿಸಿರಿ ಅಂದನು.

12:33b.EXO.012.033 ಇದಲ್ಲದೆ ಐಗುಪ್ತ್ಯರು--ನಾವೆಲ್ಲರೂ ಸಾಯುತ್ತೇವೆಂದು ಹೇಳಿ ಅವರನ್ನು ತ್ವರೆಯಾಗಿ ದೇಶದೊಳಗಿಂದ ಕಳುಹಿಸಿ ಬಿಡುವ ಹಾಗೆ ಜನರನ್ನು ಒತ್ತಾಯ ಮಾಡಿದರು.

12:34b.EXO.012.034 ಆದದರಿಂದ ಜನರು ಹಿಟ್ಟಿಗೆ ಹುಳಿ ಹಾಕುವದಕ್ಕಿಂತ ಮುಂಚೆ ಅದನ್ನು ಅಡಿಗೆ ಮಾಡುವ ಪಾತ್ರೆಗಳ ಸಂಗಡ ಬಟ್ಟೆಗಳಲ್ಲಿ ಕಟ್ಟಿ ಹೆಗಲಿನ ಮೇಲೆ ಹೊತ್ತುಕೊಂಡು ಹೋದರು.

12:35b.EXO.012.035 ಮೋಶೆಯು ಹೇಳಿದಂತೆ ಇಸ್ರಾ ಯೇಲ್‌ ಮಕ್ಕಳು ಮಾಡಿ ಬೆಳ್ಳಿ ಬಂಗಾರದ ಒಡವೆಗಳನ್ನೂ ವಸ್ತ್ರಗಳನ್ನೂ ಐಗುಪ್ತ್ಯರಿಂದ ಕೇಳಿ ಪಡೆದರು.

12:36b.EXO.012.036 ಕರ್ತನು ಐಗುಪ್ತ್ಯರ ಎದುರಿನಲ್ಲಿ ಜನರ ಮೇಲೆ ಕೃಪೆ ತೋರಿಸಿದ್ದರಿಂದ ಅವರು ಕೇಳಿದ್ದನ್ನು ಕೊಟ್ಟರು. ಹೀಗೆ ಅವರು ಐಗುಪ್ತ್ಯರನ್ನು ಸುಲು ಕೊಂಡರು.

12:37b.EXO.012.037 ಆಗ ಇಸ್ರಾಯೇಲ್ಯರಲ್ಲಿ ಮಕ್ಕಳಲ್ಲದೆ ಗಂಡಸರು ಮಾತ್ರ ಆರು ಲಕ್ಷ ಕಾಲು ನಡಿಗೆಯಾಗಿ ರಮ್ಸೇಸನ್ನು ಬಿಟ್ಟು ಸುಕ್ಕೋತಿಗೆ ಪ್ರಯಾಣ ಮಾಡಿದರು.

12:38b.EXO.012.038 ಬೆರೆತಿದ್ದ ಜನಸಮೂಹವೂ ಕುರಿದನಗಳ ಬಹು ದೊಡ್ಡ ಹಿಂಡೂ ಅವರ ಸಂಗಡ ಹೋದವು.

12:39b.EXO.012.039 ಆಗ ಅವರು ಐಗುಪ್ತದಿಂದ ತಂದಿದ್ದ ನಾದಿದ ಹಿಟ್ಟು ಇನ್ನೂ ಹುಳಿ ಯಾಗದ ಕಾರಣ ಹಿಟ್ಟಿನಿಂದ ಹುಳಿಯಿಲ್ಲದ ರೊಟ್ಟಿ ಗಳನ್ನು ಮಾಡಿದರು; ಯಾಕಂದರೆ ಅವರನ್ನು ಅಲ್ಲಿ ನಿಲ್ಲಗೊಡದೆ ಐಗುಪ್ತದಿಂದ ಓಡಿಸಿಬಿಟ್ಟಿದ್ದರು. ಅವರು ತಮಗಾಗಿ ಯಾವ ಆಹಾರವನ್ನು ಸಿದ್ಧಪಡಿಸಿಕೊಂಡಿ ರಲಿಲ್ಲ.

12:40b.EXO.012.040 ಇಸ್ರಾಯೇಲ್‌ ಮಕ್ಕಳು ಐಗುಪ್ತದಲ್ಲಿ ಪ್ರವಾ ಸವಾಗಿ ವಾಸಮಾಡಿದ್ದ ಕಾಲವು ನಾನೂರ ಮೂವತ್ತು ವರುಷಗಳಾಗಿದ್ದವು.

12:41b.EXO.012.041 ನಾನೂರ ಮೂವತ್ತು ವರುಷ ಗಳು ತೀರಿದ ತರುವಾಯ ಅದೇ ದಿನದಲ್ಲಿ ಕರ್ತನ ಸೈನ್ಯಗಳೆಲ್ಲಾ ಐಗುಪ್ತದೇಶವನ್ನು ಬಿಟ್ಟು ಹೊರಗೆ ಹೋದವು.

12:42b.EXO.012.042 ಆತನು ಐಗುಪ್ತದೇಶದಿಂದ ಅವರನ್ನು ಹೊರಗೆ ತಂದ ಕಾರಣ ಇದು ಕರ್ತನಿಗೆ ಆಚರಿಸ ಬೇಕಾದ ರಾತ್ರಿಯಾಗಿತ್ತು. ಇಸ್ರಾಯೇಲ್‌ ಮಕ್ಕಳೆ ಲ್ಲರೂ ತಮ್ಮ ಸಂತತಿಗಳಲ್ಲಿ ಕರ್ತನಿಗೆ ಆಚರಿಸ ಬೇಕಾದ ರಾತ್ರಿಯು ಇದೇ.

12:43b.EXO.012.043 ಕರ್ತನು ಮೋಶೆ ಆರೋನರಿಗೆ--ಪಸ್ಕದ ಶಾಸನವು ಇದೇ: ಅನ್ಯರಲ್ಲಿ ಯಾರೂ ಅದನ್ನು ತಿನ್ನ ಬಾರದು.

12:44b.EXO.012.044 ಆದರೆ ಹಣಕ್ಕೆ ತೆಗೆದುಕೊಂಡ ಪ್ರತಿ ಯೊಬ್ಬನ ಸೇವಕನನ್ನು ನೀನು ಸುನ್ನತಿಮಾಡಿಸಿದ ತರುವಾಯ ಅವನು ಅದನ್ನು ತಿನ್ನಬಹುದು.

12:45b.EXO.012.045 ಪರ ದೇಶದವರೂ ಕೂಲಿಯವರೂ ಅದನ್ನು ತಿನ್ನಬಾರದು.

12:46b.EXO.012.046 ಒಂದೇ ಮನೆಯಲ್ಲಿ ಅದನ್ನು ತಿನ್ನಬೇಕು. ಆ ಮಾಂಸ ದಲ್ಲಿ ಸ್ವಲ್ಪ ಅಂಶವನ್ನಾದರೂ ಮನೆಯ ಹೊರಗೆ ತೆಗೆದುಕೊಂಡು ಹೋಗಬಾರದು. ಪಶುವಿನ ಒಂದು ಎಲುಬಾದರೂ ಮುರಿಯಬಾರದು.

12:47b.EXO.012.047 ಇಸ್ರಾಯೇಲಿನ ಸಭೆಯೆಲ್ಲಾ ಇದನ್ನು ಆಚರಿಸಬೇಕು.

12:48b.EXO.012.048 ನಿನ್ನ ಜೊತೆ ಯಲ್ಲಿ ಪ್ರವಾಸಮಾಡಿದ ಅನ್ಯನು ಕರ್ತನಿಗೆ ಪಸ್ಕವನ್ನು ಆಚರಿಸಬೇಕೆಂದಿದ್ದರೆ ಅವನ ಗಂಡಸರೆಲ್ಲಾ ಸುನ್ನತಿ ಮಾಡಿಸಿಕೊಳ್ಳಲಿ; ತರುವಾಯ ಅವನು ಅದನ್ನು ಆಚರಿಸುವದಕ್ಕೆ ಸವಿಾಪ ಬರಲಿ; ಅಂಥವನು ಸ್ವದೇಶ ದಲ್ಲಿ ಹುಟ್ಟಿದವನಂತೆ ಇರುವನು. ಆದರೆ ಸುನ್ನತಿ ಮಾಡಿಸಿಕೊಳ್ಳದ ಒಬ್ಬನಾದರೂ ಅದನ್ನು ತಿನ್ನಬಾರದು.

12:49b.EXO.012.049 ಮನೆಯಲ್ಲಿ ಹುಟ್ಟಿದವನಿಗೂ ನಿಮ್ಮಲ್ಲಿ ಪ್ರವಾಸಿ ಯಾಗಿರುವ ಅನ್ಯನಿಗೂ ಒಂದೇ ನ್ಯಾಯಪ್ರಮಾಣ ವಿರಬೇಕು ಎಂದು ಹೇಳಿದನು.

12:50b.EXO.012.050 ಕರ್ತನು ಮೋಶೆ ಆರೋನರಿಗೆ ಆಜ್ಞಾಪಿಸಿದಂತೆಯೇ ಇಸ್ರಾಯೇಲ್‌ ಮಕ್ಕಳೆಲ್ಲಾ ಮಾಡಿದರು.ಅದೇ ದಿನದಲ್ಲಿ ಕರ್ತನು ಇಸ್ರಾಯೇಲ್‌ ಮಕ್ಕಳನ್ನು ಅವರ ಸೈನ್ಯಗಳ ಪ್ರಕಾರ ಐಗುಪ್ತದೇಶದೊಳಗಿಂದ ಹೊರಗೆ ತಂದನು.

12:51b.EXO.012.051 ಅದೇ ದಿನದಲ್ಲಿ ಕರ್ತನು ಇಸ್ರಾಯೇಲ್‌ ಮಕ್ಕಳನ್ನು ಅವರ ಸೈನ್ಯಗಳ ಪ್ರಕಾರ ಐಗುಪ್ತದೇಶದೊಳಗಿಂದ ಹೊರಗೆ ತಂದನು.

13

13:1b.EXO.013.001 ಕರ್ತನು ಮೋಶೆಯ ಸಂಗಡ ಮಾತನಾಡಿಹೇಳಿದ್ದೇನಂದರೆ--

13:2b.EXO.013.002 ಇಸ್ರಾಯೇಲ್‌ ಮಕ್ಕಳಲ್ಲಿ ಗಂಡಸರಲ್ಲಿಯೂ ಪಶುಗಳಲ್ಲಿಯೂ ಗರ್ಭ ತೆರೆಯುವ ಚೊಚ್ಚಲಾದದ್ದನ್ನೆಲ್ಲಾ ನನಗಾಗಿ ಪರಿಶುದ್ಧ ಮಾಡು; ಅದು ನನ್ನದೇ ಅಂದನು.

13:3b.EXO.013.003 ಆಗ ಮೋಶೆಯು ಜನರಿಗೆ--ನೀವು ಐಗುಪ್ತದ ದಾಸತ್ವದ ಮನೆಯಿಂದ ಹೊರಬಂದ ಈ ದಿನವನ್ನು ಜ್ಞಾಪಕಮಾಡಿಕೊಳ್ಳಿರಿ. ಯಾಕಂದರೆ ಕರ್ತನು ತನ್ನ ಬಲವಾದ ಕೈಯಿಂದ ನಿಮ್ಮನ್ನು ಅಲ್ಲಿಂದ ಹೊರಗೆ ಬರಮಾಡಿದ್ದಾನೆ. ಹೀಗಿರುವದರಿಂದ ಅಂದು ನೀವು ಹುಳಿ ರೊಟ್ಟಿಯನ್ನು ತಿನ್ನಬಾರದು.

13:4b.EXO.013.004 ಅಬೀಬ್‌ ತಿಂಗಳಿನ ಈ ದಿನದಲ್ಲಿ ನೀವು ಹೊರಗೆ ಬಂದಿದ್ದೀರಿ.

13:5b.EXO.013.005 ಆದದ ರಿಂದ ನಿನಗೆ ಕೊಡುತ್ತೇನೆಂದು ನಿನ್ನ ಪಿತೃಗಳಿಗೆ ಪ್ರಮಾಣಮಾಡಿದ ದೇಶಕ್ಕೆ ಅಂದರೆ ಕಾನಾನ್ಯರ ಹಿತ್ತಿಯರ ಅಮೋರಿಯರ ಹಿವ್ವಿಯರ ಯೆಬೂಸಿಯರ ಹಾಲೂ ಜೇನೂ ಹರಿಯುವ ದೇಶಕ್ಕೆ ನಿನ್ನನ್ನು ಕರೆ ತಂದಾಗ ಈ ಆಚರಣೆಯನ್ನು ಈ ತಿಂಗಳಲ್ಲಿ ಆಚರಿಸ ಬೇಕು.

13:6b.EXO.013.006 ಹುಳಿಯಿಲ್ಲದ ರೊಟ್ಟಿಯನ್ನು ಏಳು ದಿವಸ ತಿನ್ನಬೇಕು. ಏಳನೆಯ ದಿನದಲ್ಲಿ ಕರ್ತನಿಗೆ ಹಬ್ಬವನ್ನಾಚ ರಿಸಬೇಕು.

13:7b.EXO.013.007 ಹುಳಿಯಿಲ್ಲದ ರೊಟ್ಟಿಯನ್ನು ಆ ಏಳು ದಿನಗಳಲ್ಲಿ ತಿನ್ನಬೇಕು, ನಿನ್ನ ಬಳಿಯಲ್ಲಿ ಹುಳಿ ರೊಟ್ಟಿಯು ಕಾಣಿಸಬಾರದು. ಇಲ್ಲವೆ ಹುಳಿ ಹಿಟ್ಟು ನಿನ್ನ ಯಾವ ಮೇರೆಯಲ್ಲೂ ಕಾಣಬಾರದು.

13:8b.EXO.013.008 ಆ ದಿನದಲ್ಲಿ ನಿನ್ನ ಮಗನಿಗೆ ತಿಳಿಸಿ ಹೇಳಬೇಕಾದದ್ದೇನಂದರೆ--ನಾನು ಐಗುಪ್ತದಿಂದ ಹೊರಗೆ ಬಂದಾಗ ಕರ್ತನು ನನಗೆ ಮಾಡಿದ್ದಕ್ಕಾಗಿ ಇದು ಆಚರಿಸಲ್ಪಡುತ್ತದೆ.

13:9b.EXO.013.009 ಕರ್ತನ ನ್ಯಾಯಪ್ರಮಾಣವು ನಿನ್ನ ಬಾಯಲ್ಲಿ ಇರುವಂತೆ ಅದು (ಆಚರಣೆಯು) ನಿನ್ನ ಕೈ ಮೇಲೆ ಗುರುತಾಗಿಯೂ ನಿನ್ನ ಕಣ್ಣುಗಳ ಮಧ್ಯೆ ಜ್ಞಾಪಕಾರ್ಥವಾಗಿಯೂ ಇರ ಬೇಕು. ಕರ್ತನು ನಿನ್ನನ್ನು ತನ್ನ ಬಲವಾದ ಕೈಯಿಂದ ಐಗುಪ್ತದಿಂದ ಹೊರಗೆ ಬರಮಾಡಿದ್ದಾನೆ.

13:10b.EXO.013.010 ಹೀಗಿರು ವದರಿಂದ ನೀನು ವರುಷ ವರುಷಕ್ಕೆ ನೇಮಿತವಾದ ಕಾಲದಲ್ಲಿ ಈ ಶಾಸನವನ್ನು ಕೈಕೊಳ್ಳಬೇಕು.

13:11b.EXO.013.011 ಕರ್ತನು ನಿನಗೂ ನಿನ್ನ ಪಿತೃಗಳಿಗೂ ಪ್ರಮಾಣಮಾಡಿದ ಪ್ರಕಾರ ನಿನ್ನನ್ನು ಕಾನಾನ್ಯರ ದೇಶಕ್ಕೆ ಬರಮಾಡಿ ಅದನ್ನು ನಿನಗೆ ಕೊಡುವನು.

13:12b.EXO.013.012 ಗರ್ಭ ತೆರೆಯುವದೆಲ್ಲಾ ಅಂದರೆ ನಿನಗಿರುವ ಪಶುಗಳಲ್ಲಿ ಮೊದಲು ಹುಟ್ಟಿದ್ದನ್ನೆಲ್ಲಾ ಪ್ರತ್ಯೇಕಿಸಬೇಕು. ಗಂಡಾದವುಗಳು ಕರ್ತನವುಗಳೇ.

13:13b.EXO.013.013 ಮೊದಲು ಹುಟ್ಟಿದ ಕತ್ತೆಗಳನ್ನೆಲ್ಲಾ ಕುರಿಮರಿ ಯಿಂದ ವಿಮೋಚಿಸಬೇಕು. ಹಾಗೆ ವಿಮೋಚನೆ ಮಾಡದೆಹೋದರೆ ಅದರ ಕುತ್ತಿಗೆ ಮುರಿಯಬೇಕು. ಮನುಷ್ಯರ ಚೊಚ್ಚಲ ಗಂಡುಮಕ್ಕಳನ್ನು ನೀನು ವಿಮೋಚಿಸಬೇಕು.

13:14b.EXO.013.014 ಇದಲ್ಲದೆ ಮುಂದೆ ಬರುವ ಕಾಲದಲ್ಲಿ ನಿನ್ನ ಮಗನು ನಿನಗೆ--ಇದೇನು ಎಂದು ಕೇಳುವಾಗ ನೀನು ಅವನಿಗೆಕರ್ತನು ತನ್ನ ಬಲವಾದ ಕೈಯಿಂದ ನಮ್ಮನ್ನು ಐಗುಪ್ತದ ದಾಸತ್ವದ ಮನೆಯಿಂದ ಹೊರಗೆ ಬರಮಾಡಿದ್ದಾನೆ.

13:15b.EXO.013.015 ಫರೋಹನು ನಮ್ಮನ್ನು ಕಳುಹಿಸದೆ ಕಠಿಣವಾಗಿದ್ದದರಿಂದ ಕರ್ತನು ಐಗುಪ್ತದೇಶದಲ್ಲಿ ಚೊಚ್ಚಲಾದದ್ದನ್ನೆಲ್ಲಾ ಅಂದರೆ ಮನುಷ್ಯರಲ್ಲಿ ಚೊಚ್ಚಲಾ ದದ್ದು ಮೊದಲುಗೊಂಡು ಪಶುಗಳ ಚೊಚ್ಚಲಾದ ವುಗಳ ವರೆಗೆ ಕೊಂದುಹಾಕಿದನು. ಆದ್ದರಿಂದ ನಾನು ಚೊಚ್ಚಲಾದ ಗಂಡಾದವುಗಳನ್ನೆಲ್ಲಾ ಕರ್ತನಿಗೆ ಅರ್ಪಿ ಸುತ್ತೇನೆ. ನನ್ನ ಮಕ್ಕಳಲ್ಲಿ ಚೊಚ್ಚಲಾದವರೆಲ್ಲರನ್ನು ವಿಮೋಚಿಸುತ್ತೇನೆ ಎಂದು ಹೇಳಬೇಕು ಅಂದನು.

13:16b.EXO.013.016 ಇದು ನಿನ್ನ ಕೈಮೇಲೆ ಗುರುತಾಗಿಯೂ ನಿನ್ನ ಕಣ್ಣುಗಳ ನಡುವೆ ಹಣೆಯ ಕಟ್ಟಾಗಿಯೂ ಇರಲಿ. ಯಾಕಂದರೆ ಕರ್ತನು ತನ್ನ ಬಲವಾದ ಕೈಯಿಂದ ನಮ್ಮನ್ನು ಐಗುಪ್ತದೊಳಗಿನಿಂದ ಹೊರಗೆ ಬರಮಾಡಿದ್ದಾನೆ.

13:17b.EXO.013.017 ಫರೋಹನು ಜನರನ್ನು ಕಳುಹಿಸಿಬಿಟ್ಟಾಗ ಫಿಲಿಷ್ಟಿಯರ ದೇಶದ ದಾರಿಯು ಸವಿಾಪವಿದ್ದರೂ ದೇವರು ಅವರನ್ನು ಅದರಲ್ಲಿ ನಡಿಸಲಿಲ್ಲ; ಯಾಕಂದರೆ ದೇವರು--ಜನರು ಯುದ್ಧವನ್ನು ನೋಡಿ ಮನಸ್ಸನ್ನು ಬೇರೆ ಮಾಡಿಕೊಂಡು ಅವರು ಐಗುಪ್ತಕ್ಕೆ ಹಿಂದಿರುಗಾರು ಎಂದು ಅಂದುಕೊಂಡನು.

13:18b.EXO.013.018 ಹೀಗಿರುವದರಿಂದ ಕರ್ತನು ಜನರನ್ನು ಕೆಂಪು ಸಮುದ್ರದ ಅರಣ್ಯ ಮಾರ್ಗ ದಲ್ಲಿ ಸುತ್ತಿಕೊಂಡು ಹೋಗುವಂತೆ ಮಾಡಿದನು. ಆದಾಗ್ಯೂ ಇಸ್ರಾಯೇಲ್‌ ಮಕ್ಕಳು ಯುದ್ಧಸನ್ನದ್ಧರಾಗಿ ಐಗುಪ್ತದೇಶದೊಳಗಿಂದ ಹೋದರು.

13:19b.EXO.013.019 ಆಗ ಮೋಶೆಯು ತನ್ನೊಂದಿಗೆ ಯೋಸೇಫನ ಎಲುಬು ಗಳನ್ನು ತಕ್ಕೊಂಡು ಹೋದನು. ಅವನು ಇಸ್ರಾಯೇಲ್‌ ಮಕ್ಕಳಿಗೆ--ದೇವರು ನಿಶ್ಚಯವಾಗಿಯೂ ನಿಮ್ಮನ್ನು ದರ್ಶಿಸುವನು. ಆಗ ನೀವು ನನ್ನ ಎಲುಬುಗಳನ್ನು ಇಲ್ಲಿಂದ ನಿಮ್ಮ ಕೂಡ ತೆಗೆದುಕೊಂಡು ಹೋಗಬೇಕು ಎಂದು ಹೇಳಿ ಖಂಡಿತವಾಗಿ ಪ್ರಮಾಣಮಾಡಿಸಿದ್ದನು.

13:20b.EXO.013.020 ಹೀಗೆ ಅವರು ಸುಕ್ಕೋತಿನಿಂದ ಪ್ರಯಾಣಮಾಡಿ ಏತಾಮಿನ ಅರಣ್ಯದ ಅಂಚಿನಲ್ಲಿ ಇಳುಕೊಂಡರು.

13:21b.EXO.013.021 ಇದಲ್ಲದೆ ಅವರು ಹಗಲಿರುಳು ಪ್ರಯಾಣ ಮಾಡುವ ಹಾಗೆ ಕರ್ತನು ಹಗಲಲ್ಲಿ ಅವರಿಗೆ ದಾರಿ ತೋರಿಸುವದಕ್ಕೆ ಮೇಘಸ್ತಂಭದಲ್ಲಿಯೂ ರಾತ್ರಿಯಲ್ಲಿ ಅವರಿಗೆ ಬೆಳಕು ಕೊಡುವದಕ್ಕೆ ಅಗ್ನಿಸ್ತಂಭದಲ್ಲಿಯೂ ಅವರ ಮುಂದೆ ಹೋದನು.ಆತನು ಹಗಲಲ್ಲಿ ಮೇಘಸ್ತಂಭವನ್ನೂ ರಾತ್ರಿಯಲ್ಲಿ ಅಗ್ನಿಸ್ತಂಭವನ್ನೂ ಜನರ ಎದುರಿನಿಂದ ತೆಗೆದು ಬಿಡಲಿಲ್ಲ.

13:22b.EXO.013.022 ಆತನು ಹಗಲಲ್ಲಿ ಮೇಘಸ್ತಂಭವನ್ನೂ ರಾತ್ರಿಯಲ್ಲಿ ಅಗ್ನಿಸ್ತಂಭವನ್ನೂ ಜನರ ಎದುರಿನಿಂದ ತೆಗೆದು ಬಿಡಲಿಲ್ಲ.

14

14:1b.EXO.014.001 ಕರ್ತನು ಮಾತನಾಡಿ ಮೋಶೆಗೆ--

14:2b.EXO.014.002 ಇಸ್ರಾಯೇಲ್‌ ಮಕ್ಕಳು ತಿರುಗಿಕೊಂಡು ಪೀಹಹೀರೋತಿಗೆ ಎದುರಾಗಿ ಮಿಗ್ದೋಲಿಗೂ ಸಮುದ್ರಕ್ಕೂ ಮಧ್ಯದಲ್ಲಿ ಬಾಳ್ಚೆಫೋನಿಗೆ ಎದುರಾಗಿ ಇಳುಕೊಳ್ಳಬೇಕೆಂದು ಅವರಿಗೆ ಹೇಳು. ಅದಕ್ಕೆ ಎದುರಾಗಿ ನೀವು ಸಮುದ್ರದ ತೀರದಲ್ಲಿ ಇಳುಕೊಳ್ಳ ಬೇಕು.

14:3b.EXO.014.003 ಫರೋಹನು ಇಸ್ರಾಯೇಲ್‌ ಮಕ್ಕಳ ವಿಷಯದಲ್ಲಿ--ಅವರು ದೇಶದಲ್ಲಿ ಸಿಕ್ಕಿಕೊಂಡರು. ಅರಣ್ಯವು ಅವರನ್ನು ಒಳಗೆ ಮುಚ್ಚಿಬಿಟ್ಟಿತು ಎಂದು ಹೇಳುವನು.

14:4b.EXO.014.004 ಇದಲ್ಲದೆ ಫರೋಹನು ಅವರನ್ನು ಹಿಂದಟ್ಟುವಂತೆ ನಾನು ಅವನ ಹೃದಯವನ್ನು ಕಠಿಣ ಮಾಡುವೆನು; ಫರೋಹನಲ್ಲಿಯೂ ಅವನ ಎಲ್ಲಾ ಸೈನ್ಯದಲ್ಲಿಯೂ ನನ್ನನ್ನು ಘನಪಡಿಸಿಕೊಳ್ಳುವೆನು; ಆಗ ನಾನೇ ಕರ್ತನೆಂದು ಐಗುಪ್ತ್ಯರು ತಿಳಿಯುವರು ಎಂದು ಹೇಳಿದನು. ಅವರು ಹಾಗೆಯೇ ಮಾಡಿದರು.

14:5b.EXO.014.005 ಜನರು ಓಡಿಹೋದರೆಂದು ಐಗುಪ್ತದ ಅರಸನಿಗೆ ತಿಳಿಸಲ್ಪಟ್ಟಿತು; ಆಗ ಫರೋಹನ ಮತ್ತು ಅವನ ಸೇವಕರ ಹೃದಯವು ಜನರಿಗೆ ವಿರೋಧವಾಗಿ ತಿರುಗಿಕೊಂಡಿತು; ಅವರು--ಇಸ್ರಾಯೇಲ್ಯರು ನಮ್ಮ ಸೇವೆಮಾಡುವದನ್ನು ಬಿಟ್ಟುಹೋಗಿಬಿಡುವಂತೆ ನಾವು ಯಾಕೆ ಮಾಡಿದೆವು ಅಂದರು.

14:6b.EXO.014.006 ಆಗ ಅವನು ತನ್ನ ರಥವನ್ನು ಸಿದ್ಧಮಾಡಿ ಕೊಂಡು ತನ್ನ ಜನರೊಂದಿಗೆ ಹೊರಟನು.

14:7b.EXO.014.007 ಇದಲ್ಲದೆ ಅವನು ಆರಿಸಿಕೊಂಡ ಆರು ನೂರು ರಥಗಳನ್ನೂ ಐಗುಪ್ತದ ಎಲ್ಲಾ ರಥಗಳನ್ನೂ ಅವುಗಳ ಮೇಲೆ ಅಧಿ ಪತಿಗಳನ್ನೂ ತೆಗೆದುಕೊಂಡು ಹೋದನು.

14:8b.EXO.014.008 ಐಗುಪ್ತದ ಅರಸನಾದ ಫರೋಹನ ಹೃದಯವನ್ನು ಕರ್ತನು ಕಠಿಣ ಮಾಡಿದ್ದರಿಂದ ಅವನು ಇಸ್ರಾಯೇಲ್‌ ಮಕ್ಕಳನ್ನು ಹಿಂದಟ್ಟಿದನು. ಆದರೆ ಇಸ್ರಾಯೇಲ್‌ ಮಕ್ಕಳು ಧೈರ್ಯ ದಿಂದ ಹೊರಗೆ ಹೋದರು.

14:9b.EXO.014.009 ಐಗುಪ್ತ್ಯರು ಅವರನ್ನು ಹಿಂದಟ್ಟಿದ್ದರು; ಅವರು ಸಮುದ್ರ ತೀರದಲ್ಲಿ ಇಳು ಕೊಂಡಿರುವಾಗ ಫರೋಹನ ಎಲ್ಲಾ ಕುದುರೆಗಳೂ ರಥಗಳೂ ಕುದುರೆ ಸವಾರರೂ ಅವನ ಸೈನ್ಯವೂ ಪೀಹಹೀರೋತಿನ ಸವಿಾಪದಲ್ಲಿ ಬಾಳ್ಚೆಫೋನಿನ ಎದುರಾಗಿ ಸವಿಾಪಿಸಿದರು.

14:10b.EXO.014.010 ಫರೋಹನು ಸವಿಾಪಕ್ಕೆ ಬರುತ್ತಿರಲು ಇಗೋ, ಇಸ್ರಾಯೇಲ್‌ ಮಕ್ಕಳು ತಮ್ಮ ಕಣ್ಣುಗಳನ್ನೆತ್ತಿ ಹಿಂದೆ ಬರುತ್ತಿರುವ ಐಗುಪ್ತ್ಯರನ್ನು ಕಂಡು ಇಸ್ರಾಯೇಲ್‌ ಮಕ್ಕಳು ಬಹಳವಾಗಿ ಭಯಪಟ್ಟು ಕರ್ತನಿಗೆ ಮೊರೆಯಿ ಟ್ಟರು.

14:11b.EXO.014.011 ಅವರು ಮೋಶೆಗೆ--ಐಗುಪ್ತದಲ್ಲಿ ಸಮಾಧಿ ಗಳು ಇಲ್ಲದ ಕಾರಣ ನಾವು ಅರಣ್ಯದಲ್ಲಿ ಸಾಯುವ ಹಾಗೆ ನಮ್ಮನ್ನು ಕರಕೊಂಡು ಬಂದಿಯೋ? ಯಾಕೆ ನೀನು ಈ ಪ್ರಕಾರ ನಮಗೆ ಮಾಡಿ ನಮ್ಮನ್ನು ಐಗುಪ್ತ ದಿಂದ ಕರಕೊಂಡು ಬಂದಿ?

14:12b.EXO.014.012 ನಾವು ಐಗುಪ್ತದೇಶ ದಲ್ಲಿದ್ದಾಗಲೇ--ನೀನು ನಮ್ಮ ಗೊಡವೆಗೆ ಬರಬೇಡ; ನಾವು ಐಗುಪ್ತ್ಯರಿಗೆ ಸೇವೆಮಾಡುವೆವು. ನಾವು ಅರಣ್ಯ ದಲ್ಲಿ ಸಾಯುವದಕ್ಕಿಂತ ಐಗುಪ್ತ್ಯರಿಗೆ ಸೇವೆ ಮಾಡು ವದು ಒಳ್ಳೇದಾಗಿತ್ತಲ್ಲವೇ ಎಂದು ಹೇಳಿದರು.

14:13b.EXO.014.013 ಅದಕ್ಕೆ ಮೋಶೆಯು ಜನರಿಗೆ--ನೀವು ಭಯಪಡ ಬೇಡಿರಿ; ಕದಲದೆ ನಿಲ್ಲಿರಿ; ಕರ್ತನು ನಿಮಗೆ ಈ ಹೊತ್ತು ತೋರಿಸುವ ರಕ್ಷಣೆಯನ್ನು ನೋಡಿರಿ. ನೀವು ಈ ಹೊತ್ತು ನೋಡುವ ಐಗುಪ್ತ್ಯರನ್ನು ಇನ್ನು ಮುಂದೆ ಎಂದೆಂದಿಗೂ ನೋಡುವದಿಲ್ಲ.

14:14b.EXO.014.014 ಕರ್ತನು ನಿಮ ಗೋಸ್ಕರ ಯುದ್ಧಮಾಡುವನು; ಆದರೆ ನೀವು ಸಮಾಧಾನವಾಗಿರ್ರಿ ಅಂದನು.

14:15b.EXO.014.015 ಆಗ ಕರ್ತನು ಮೋಶೆಗೆ--ನೀನು ನನಗೆ ಯಾಕೆ ಮೊರೆಯಿಡುತ್ತೀ? ಇಸ್ರಾಯೇಲ್‌ ಮಕ್ಕಳು ಮುಂದಕ್ಕೆ ಹೋಗಬೇಕೆಂದು ಹೇಳು.

14:16b.EXO.014.016 ನೀನು ನಿನ್ನ ಕೋಲನ್ನು ಎತ್ತಿ ಸಮುದ್ರದ ಮೇಲೆ ಕೈಚಾಚಿ ಅದನ್ನು ವಿಭಾಗಿಸು. ಆಗ ಇಸ್ರಾಯೇಲ್‌ ಮಕ್ಕಳು ಸಮುದ್ರದ ಮಧ್ಯದಲ್ಲಿ ಒಣಗಿದ ನೆಲದ ಮೇಲೆ ಹೋಗುವರು.

14:17b.EXO.014.017 ಇಗೋ, ನಾನು ಐಗುಪ್ತ್ಯರ ಹೃದಯವನ್ನು ಕಠಿಣಮಾಡುತ್ತೇನೆ; ಅವರು ಇವರನ್ನು ಹಿಂದಟ್ಟುವರು. ಇದಲ್ಲದೆ ಫರೋಹನ ಮೇಲೆಯೂ ಅವನ ಎಲ್ಲಾ ಸೈನ್ಯದ ಮೇಲೆಯೂ ಅವನ ರಥಗಳ ಮೇಲೆಯೂ ಕುದುರೆಯ ಸವಾರರ ಮೇಲೆಯೂ ನನ್ನನ್ನು ಘನಪಡಿಸಿಕೊಳ್ಳುವೆನು.

14:18b.EXO.014.018 ನಾನು ಫರೋ ಹನ ಮೇಲೆಯೂ ಅವನ ರಥಗಳ ಮೇಲೆಯೂ ಕುದುರೆಯ ಸವಾರರ ಮೇಲೆಯೂ ನನ್ನನ್ನು ಘನಪಡಿಸಿ ಕೊಂಡಾಗ ನಾನೇ ಕರ್ತನೆಂದು ಐಗುಪ್ತ್ಯರು ತಿಳಿದು ಕೊಳ್ಳುವರು ಅಂದನು.

14:19b.EXO.014.019 ಆಗ ಇಸ್ರಾಯೇಲ್‌ ದಂಡಿನ ಮುಂದೆ ಹೋಗುತ್ತಿದ್ದ ದೇವದೂತನು ತನ್ನ ಸ್ಥಳವನ್ನು ಬಿಟ್ಟು ಅವರ ಹಿಂದೆ ಬಂದನು. ಅವರ ಮುಂದೆ ಇದ್ದ ಮೇಘಸ್ತಂಭವು ಅಲ್ಲಿಂದ ಬಂದು ಅವರ ಹಿಂದೆ ನಿಂತುಕೊಂಡಿತು.

14:20b.EXO.014.020 ಅದು ಐಗುಪ್ತ್ಯರ ದಂಡಿಗೂ ಇಸ್ರಾಯೇಲ್ಯರ ದಂಡಿಗೂ ನಡುವೆ ಬಂದಿತು. ಅದು ಅವರಿಗೆ ಮೇಘವೂ ಕತ್ತಲೂ ಆಗಿದ್ದು ಇಸ್ರಾಯೇಲ್ಯರಿಗೆ ರಾತ್ರಿ ಯಲ್ಲಿ ಬೆಳಕು ಕೊಡುವಂಥದ್ದಾಗಿದ್ದದರಿಂದ ಆ ರಾತ್ರಿಯೆಲ್ಲಾ ಒಬ್ಬರ ಹತ್ತಿರ ಒಬ್ಬರು ಬರಲಿಲ್ಲ.

14:21b.EXO.014.021 ಆಗ ಮೋಶೆಯು ಸಮುದ್ರದ ಮೇಲೆ ತನ್ನ ಕೈಚಾಚಲಾಗಿ ಕರ್ತನು ರಾತ್ರಿಯೆಲ್ಲಾ ಬಲವಾದ ಮೂಡಣ ಗಾಳಿಯಿಂದ ಸಮುದ್ರವು ಹಿಂದಕ್ಕೆ ಹೋಗುವಂತೆ ಮಾಡಿ ಸಮುದ್ರವನ್ನು ಒಣನೆಲವನ್ನಾಗಿ ಮಾಡಿದನು; ಆಗ ನೀರುಗಳು ವಿಭಾಗವಾದವು.

14:22b.EXO.014.022 ಹೀಗೆ ಇಸ್ರಾಯೇಲ್‌ ಮಕ್ಕಳು ಸಮುದ್ರದ ಮಧ್ಯ ದಲ್ಲಿ ಒಣ ನೆಲದಲ್ಲೇ ಹೊರಟು ಹೋದರು. ನೀರು ಅವರಿಗೆ ಎಡಬಲದಲ್ಲಿ ಗೋಡೆಯಾಗಿತ್ತು.

14:23b.EXO.014.023 ಐಗು ಪ್ತ್ಯರೂ ಫರೋಹನ ಎಲ್ಲಾ ಕುದುರೆಗಳೂ ಅವನ ರಥಗಳೂ ಕುದುರೆಯ ಸವಾರರೂ ಅವರನ್ನು ಹಿಂದಟ್ಟಿ ಅವರ ಹಿಂದೆ ಸಮುದ್ರದ ಮಧ್ಯದಲ್ಲಿ ಸೇರಿದರು.

14:24b.EXO.014.024 ಬೆಳಗಿನ ಜಾವದಲ್ಲಿ ಕರ್ತನು ಅಗ್ನಿ ಮೇಘಗಳ ಸ್ತಂಭದೊಳಗಿಂದ ಐಗುಪ್ತ್ಯರ ದಂಡಿನ ಕಡೆಗೆ ನೋಡಿ ಅದನ್ನು ತೊಂದರೆಪಡಿಸಿ

14:25b.EXO.014.025 ಅವರ ರಥಗಳ ಚಕ್ರಗಳನ್ನು ತೆಗೆದುಬಿಟ್ಟದ್ದರಿಂದ ಐಗುಪ್ತ್ಯರು ಕಷ್ಟದಿಂದ ಹೋಗು ವಂತೆ ಮಾಡಿದನು. ಆಗ--ಇಸ್ರಾಯೇಲಿನ ಎದುರಿ ನಿಂದ ಓಡಿಹೋಗೋಣ. ಯಾಕಂದರೆ ಕರ್ತನು ಐಗುಪ್ತ್ಯರಿಗೆ ವಿರೋಧವಾಗಿ ಅವರಿಗೋಸ್ಕರ ಯುದ್ಧ ಮಾಡುತ್ತಾನೆಂದು ಹೇಳಿಕೊಂಡರು.

14:26b.EXO.014.026 ಆಗ ಕರ್ತನು ಮೋಶೆಗೆ--ಐಗುಪ್ತ್ಯರ ಮೇಲೆಯೂ ಅವರ ರಥಗಳ ಮೇಲೆಯೂ ಕುದುರೆಯ ಸವಾರರ ಮೇಲೆಯೂ ನೀರು ತಿರಿಗಿ ಬರುವಹಾಗೆ ಸಮುದ್ರದ ಮೇಲೆ ಕೈಚಾಚು ಅಂದನು.

14:27b.EXO.014.027 ಆಗ ಮೋಶೆಯು ಸಮುದ್ರದ ಮೇಲೆ ಕೈಚಾಚಲಾಗಿ ಸಮುದ್ರವು ಬೆಳಗಾಗುವಾಗಲೇ ತನ್ನ ಶಕ್ತಿಗೆ ತಿರುಗಿಕೊಂಡಿತು. ಐಗುಪ್ತ್ಯರು ಅದಕ್ಕೆದುರಾಗಿ ಓಡಿಹೋದರು. ಕರ್ತನು ಐಗುಪ್ತ್ಯರನ್ನು ಸಮುದ್ರದ ಮಧ್ಯದಲ್ಲಿ ಸಂಹರಿಸಿದನು.

14:28b.EXO.014.028 ನೀರು ತಿರಿಗಿ ಬಂದು ರಥಗಳೂ ಕುದುರೆಗಳೂ ಸವಾರರೂ ಅವರ ಹಿಂದೆ ಸಮುದ್ರದಲ್ಲಿ ಬರುತ್ತಿದ್ದ ಫರೋಹನ ಎಲ್ಲಾ ಸೈನ್ಯವೂ ಒಬ್ಬರೂ ಉಳಿಯದಂತೆ ಮುಚ್ಚಿಕೊಂಡಿತು.

14:29b.EXO.014.029 ಆದರೆ ಇಸ್ರಾಯೇಲ್‌ ಮಕ್ಕಳು ಸಮುದ್ರದ ಮಧ್ಯದಲ್ಲಿ ಒಣ ಗಿದ ನೆಲದಮೇಲೆ ನಡೆದುಹೋದರು. ನೀರು ಅವರಿಗೆ ಎಡಬಲಗಳಲ್ಲಿ ಗೋಡೆಯಾಗಿತ್ತು.

14:30b.EXO.014.030 ಆ ದಿನದಲ್ಲಿ ಕರ್ತನು ಈ ಪ್ರಕಾರ ಇಸ್ರಾಯೇಲ್ಯ ರನ್ನು ಐಗುಪ್ತ್ಯರ ಕೈಯಿಂದ ರಕ್ಷಿಸಿದನು. ಇಸ್ರಾಯೇ ಲ್ಯರು ಸಮುದ್ರತೀರದಲ್ಲಿ ಸತ್ತ ಐಗುಪ್ತ್ಯರನ್ನು ನೋಡಿ ದರು.ಐಗುಪ್ತ್ಯರ ಮೇಲೆ ಕರ್ತನು ಮಾಡಿದ ದೊಡ್ಡ ಕಾರ್ಯವನ್ನು ಇಸ್ರಾಯೇಲ್ಯರು ನೋಡಿ ಕರ್ತ ನಿಗೆ ಭಯಪಟ್ಟು ಕರ್ತನಲ್ಲಿಯೂ ಆತನ ಸೇವಕನಾದ ಮೋಶೆಯಲ್ಲಿಯೂ ನಂಬಿಕೆಯಿಟ್ಟರು.

14:31b.EXO.014.031 ಐಗುಪ್ತ್ಯರ ಮೇಲೆ ಕರ್ತನು ಮಾಡಿದ ದೊಡ್ಡ ಕಾರ್ಯವನ್ನು ಇಸ್ರಾಯೇಲ್ಯರು ನೋಡಿ ಕರ್ತ ನಿಗೆ ಭಯಪಟ್ಟು ಕರ್ತನಲ್ಲಿಯೂ ಆತನ ಸೇವಕನಾದ ಮೋಶೆಯಲ್ಲಿಯೂ ನಂಬಿಕೆಯಿಟ್ಟರು.

15

15:1b.EXO.015.001 ಆಗ ಮೋಶೆಯೂ ಇಸ್ರಾಯೇಲ್‌ ಮಕ್ಕಳೂ ಕರ್ತನಿಗೆ ಈ ಹಾಡನ್ನು ಹಾಡಿ ಹೇಳಿದ್ದೇನಂದರೆ--ನಾನು ಕರ್ತನಿಗೆ ಹಾಡುತ್ತೇನೆ; ಆತನು ಪ್ರಭಾವದಿಂದ ಜಯಶಾಲಿಯಾದನು; ಕುದುರೆ ಯನ್ನೂ (ಕುದುರೆಯ) ಸವಾರನನ್ನೂ ಸಮುದ್ರದಲ್ಲಿ ದೊಬ್ಬಿದ್ದಾನೆ.

15:2b.EXO.015.002 ಕರ್ತನು ನನ್ನ ಬಲವೂ ಕೀರ್ತನೆಯೂ ಆಗಿದ್ದಾನೆ, ಆತನು ನನ್ನ ರಕ್ಷಣೆಯಾದನು, ಆತನು ನನ್ನ ದೇವರು, ಆತನಿಗಾಗಿ ನಾನು ಒಂದು ನಿವಾಸವನ್ನು ಸಿದ್ಧಮಾಡುವೆನು. ಆತನು ನನ್ನ ತಂದೆಯ ದೇವರು, ನಾನು ಆತನನ್ನು ಘನಪಡಿಸುವೆನು.

15:3b.EXO.015.003 ಕರ್ತನು ಯುದ್ಧ ಶೂರನು; ಕರ್ತನು ಎಂಬದೇ ಆತನ ಹೆಸರು.

15:4b.EXO.015.004 ಆತನು ಫರೋಹನ ರಥಗಳನ್ನೂ ಅವನ ಸೈನ್ಯವನ್ನೂ ಸಮುದ್ರ ದಲ್ಲಿ ನೂಕಿದ್ದಾನೆ; ಆಯಲ್ಪಟ್ಟ ಅವನ ಅಧಿಪತಿಗಳು ಸಹ ಕೆಂಪು ಸಮುದ್ರದಲ್ಲಿ ಮುಳುಗಿಹೋದರು.

15:5b.EXO.015.005 ಅಗಾಧಗಳು ಅವರನ್ನು ಮುಚ್ಚಿಕೊಂಡವು. ಅವರು ಕಲ್ಲಿನಂತೆ (ಸಮುದ್ರದ) ತಳಕ್ಕೆ ಮುಳುಗಿದರು.

15:6b.EXO.015.006 ಓ ಕರ್ತನೇ, ನಿನ್ನ ಬಲಗೈ ಶಕ್ತಿಯಲ್ಲಿ ಮಹಿಮೆಯುಳ್ಳ ದ್ದಾಗಿದೆ. ಓ ಕರ್ತನೇ, ನಿನ್ನ ಬಲಗೈ ಶತ್ರುವನ್ನು ಜಜ್ಜಿ ಪುಡಿಮಾಡಿತು.

15:7b.EXO.015.007 ನಿನ್ನ ಮಹತ್ತಾದ ಘನತೆಯಲ್ಲಿ ನಿನಗೆ ವಿರೋಧವಾಗಿ ಎದ್ದವರನ್ನು ಕೆಡವಿ ಬಿಟ್ಟಿರುವಿ. ನಿನ್ನ ರೌದ್ರವು ಹೊರಟು ಅವರನ್ನು ಹುಲ್ಲಿನಂತೆ ದಹಿಸಿಬಿಟ್ಟಿತು.

15:8b.EXO.015.008 ನಿನ್ನ ಮೂಗಿನ ಬಿರುಸಾದ ಗಾಳಿ ಯಿಂದ ನೀರುಗಳು ಒಟ್ಟುಗೂಡಿದವು. ಪ್ರವಾಹಗಳು ರಾಶಿಯಂತೆ ನಿಂತವು; ಸಮುದ್ರದ ಅಗಾಧಗಳ ನೀರು ಗಟ್ಟಿಯಾದವು.

15:9b.EXO.015.009 ಶತ್ರುವು--ನಾನು ಹಿಂದಟ್ಟಿ, ಹಿಡಿ ಯುವೆನು, ಕೊಳ್ಳೆಯನ್ನು ಹಂಚಿಕೊಳ್ಳುವೆನು, ನನ್ನ ಆಶೆಗಳು ಅವರಿಂದ ತೃಪ್ತಿಹೊಂದುವವು. ನಾನು ನನ್ನ ಖಡ್ಗವನ್ನು ಹಿರಿಯುವೆನು, ನನ್ನ ಕೈ ಅವರನ್ನು ಸಂಹಾರ ಮಾಡುವದು ಅಂದನು.

15:10b.EXO.015.010 ನೀನು ನಿನ್ನ ಗಾಳಿಯನ್ನು ಊದಿದಾಗ ಸಮುದ್ರವು ಅವರನ್ನು ಮುಚ್ಚಿಕೊಂಡಿತು. ಅವರು ಸೀಸದಂತೆ ಮಹಾಜಲಗಳಲ್ಲಿ ಮುಳುಗಿ ಹೊದರು.

15:11b.EXO.015.011 ದೇವರುಗಳಲ್ಲಿ ಓ ಕರ್ತನೇ, ನಿನ್ನ ಹಾಗೆ ಯಾರಿದ್ದಾರೆ? ಪರಿಶುದ್ಧತ್ವದಲ್ಲಿ ಮಹಿಮೆ ಹೊಂದಿದವನೂ ಸ್ತೋತ್ರಗಳಲ್ಲಿ ಭಯಂಕರನೂ ಅದ್ಭುತಗಳನ್ನು ಮಾಡುವಾತನೂ ಆದ ನಿನ್ನ ಹಾಗೆ ಯಾರಿದ್ದಾರೆ?

15:12b.EXO.015.012 ನೀನು ನಿನ್ನ ಬಲಗೈಯನ್ನು ಚಾಚಲು ಭೂಮಿಯು ಅವರನ್ನು ನುಂಗಿತು.

15:13b.EXO.015.013 ನೀನು ವಿಮೋಚಿ ಸಿದ ಜನರನ್ನು ಕರುಣೆಯಿಂದ ನಡಿಸಿದಿ; ನೀನು ಅವ ರನ್ನು ನಿನ್ನ ಬಲದಿಂದ ನಿನ್ನ ಪರಿಶುದ್ಧ ನಿವಾಸಕ್ಕೆ ನಡಿಸಿದಿ.

15:14b.EXO.015.014 ಜನರು ಇದನ್ನು ಕೇಳಿ ಭಯಪಡುವರು; ದುಃಖವು ಫಿಲಿಷ್ಟಿಯದಲ್ಲಿ ವಾಸಿಸುವವರನ್ನು ಹಿಡಿಯುವದು.

15:15b.EXO.015.015 ಆಗ ಎದೋಮಿನ ಪ್ರಭುಗಳು ದಿಗ್ಭ್ರಮೆಗೊಳ್ಳು ವರು; ಮೋವಾಬಿನ ಬಲಿಷ್ಠರನ್ನು ಕಂಪನವು ಹಿಡಿಯು ವದು. ಕಾನಾನಿನ ನಿವಾಸಿಗಳೆಲ್ಲಾ ಕರಗಿ ಹೋಗುವರು.

15:16b.EXO.015.016 ಭಯವೂ ಹೆದರಿಕೆಯೂ ಅವರ ಮೇಲೆ ಬೀಳು ವದು; ನಿನ್ನ ಜನರು ದಾಟಿ ಹೋಗುವ ವರೆಗೆ ಓ ಕರ್ತನೇ, ನೀನು ಕೊಂಡುಕೊಂಡ ಜನರು ದಾಟಿ ಹೋಗುವ ವರೆಗೆ ನಿನ್ನ ಬಾಹುವಿನ ದೊಡ್ಡಸ್ತಿಕೆಯಿಂದ ಅವರು ಕಲ್ಲಿನಂತೆ ಸ್ತಬ್ಧರಾಗುವರು.

15:17b.EXO.015.017 ನೀನು ಅವರನ್ನು ಒಳಗೆ ಬರಮಾಡಿ ಓ ಕರ್ತನೇ, ನಿನ್ನ ಕೈಗಳು ಸ್ಥಾಪಿಸಿದ ಪರಿಶುದ್ಧ ನಿವಾಸದಲ್ಲಿಯೂ (ಓ ಕರ್ತನೇ,) ನೀನು ವಾಸಿಸುವದಕ್ಕೆ ಮಾಡಿಕೊಂಡಿರುವ ನಿನ್ನ ಸ್ವಾಸ್ಥ್ಯದ ಪರ್ವತದಲ್ಲಿಯೂ ಅವರನ್ನು ಸ್ಥಾಪಿಸುವಿ.

15:18b.EXO.015.018 ಕರ್ತನು ಯುಗಯುಗಾಂತರಗಳ ವರೆಗೆ ಆಳುವನು.

15:19b.EXO.015.019 ಫರೋ ಹನ ಕುದುರೆಗಳು ಅವನ ರಥಗಳ ಸಂಗಡಲೂ ಸವಾರರ ಸಂಗಡಲೂ ಸಮುದ್ರದೊಳಗೆ ಬಂದಾಗ ಕರ್ತನು ಸಮುದ್ರದ ನೀರನ್ನು ಅವರ ಮೇಲೆ ತಿರಿಗಿ ಬರ ಮಾಡಿದನು; ಆದರೆ ಇಸ್ರಾಯೇಲ್‌ ಮಕ್ಕಳು ಸಮುದ್ರದ ಮಧ್ಯದಲ್ಲಿ ಒಣನೆಲದ ಮೇಲೆ ಹೋದರು.

15:20b.EXO.015.020 ಆಗ ಪ್ರವಾದಿನಿಯಾಗಿದ್ದ ಆರೋನನ ಸಹೋ ದರಿ ಮಿರ್ಯಾಮಳು ಕೈಯಲ್ಲಿ ದಮ್ಮಡಿಯನ್ನು ತೆಗೆದು ಕೊಂಡಳು. ಸ್ತ್ರೀಯರೆಲ್ಲರೂ ದಮ್ಮಡಿಗಳನ್ನು ಹಿಡಿದು ಕೊಂಡು ನಾಟ್ಯವಾಡುತ್ತಾ ಆಕೆಯನ್ನು ಹಿಂಬಾಲಿಸಿ ಹೋದರು.

15:21b.EXO.015.021 ಮಿರ್ಯಾಮಳು ಅವರಿಗೆ ಕೊಟ್ಟ ಉತ್ತರವೇನಂದರೆ--ನೀವು ಕರ್ತನಿಗೆ ಹಾಡಿರಿ, ಆತನು ಮಹಿಮೆಯಿಂದ ಜಯಿಸಿದ್ದಾನೆ; ಕುದುರೆಯನ್ನು ಸವಾರ ನನ್ನು ಸಮುದ್ರದಲ್ಲಿ ಹಾಕಿದ್ದಾನೆ ಎಂಬದು.

15:22b.EXO.015.022 ಹೀಗೆ ಮೋಶೆಯು ಇಸ್ರಾಯೇಲ್ಯರನ್ನು ಕೆಂಪು ಸಮುದ್ರದಿಂದ ಬರಮಾಡಿದನು; ಅವರು ಶೂರಿನ ಅರಣ್ಯದೊಳಗೆ ಹೋದರು; ಅವರು ಅರಣ್ಯದಲ್ಲಿ ಮೂರು ದಿನ ಪ್ರಯಾಣ ಮಾಡಿದಾಗ್ಯೂ ನೀರನ್ನು ಕಂಡುಕೊಳ್ಳಲಿಲ್ಲ.

15:23b.EXO.015.023 ಅವರು ಮಾರಾಗೆ ಬಂದ ಮೇಲೆ ಮಾರಾದ ನೀರನ್ನು ಕುಡಿಯಲಾರದೆ ಇದ್ದರು; ಯಾಕಂದರೆ ಅದು ಕಹಿಯಾಗಿತ್ತು. ಆದಕಾರಣ ಅದರ ಹೆಸರು ಮಾರಾ ಎಂದು ಕರೆಯಲ್ಪಟ್ಟಿತು.

15:24b.EXO.015.024 ಆದದ ರಿಂದ ಜನರು--ನಾವು ಏನು ಕುಡಿಯೋಣ ಎಂದು ಹೇಳಿ ಮೋಶೆಗೆ ವಿರೋಧವಾಗಿ ಗುಣುಗುಟ್ಟಿದರು.

15:25b.EXO.015.025 ಅವನು ಕರ್ತನಿಗೆ ಮೊರೆಯಿಟ್ಟನು; ಆಗ ಕರ್ತನು ಅವನಿಗೆ ಒಂದು ಮರವನ್ನು ತೋರಿಸಿದನು; ಅವನು ಅದನ್ನು ನೀರಿನಲ್ಲಿ ಹಾಕಿದಾಗ ನೀರು ಸಿಹಿಯಾಗಿ ಮಾಡಲ್ಪಟ್ಟಿತು; ಅಲ್ಲಿ ಆತನು ಅವರಿಗಾಗಿ ಒಂದು ನಿಯಮವನ್ನೂ ಒಂದು ಶಾಸನವನ್ನೂ ಮಾಡಿ, ಅಲ್ಲಿಯೇ ಅವರನ್ನು ಪರೀಕ್ಷಿಸಿದನು.

15:26b.EXO.015.026 ಆತನು-- ನೀನು ನಿನ್ನ ದೇವರಾದ ಕರ್ತನ ಸ್ವರಕ್ಕೆ ಶ್ರದ್ಧೆಯಿಂದ ಕಿವಿಗೊಟ್ಟು ಆತನ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿ ಆತನ ಆಜ್ಞೆಗಳಿಗೆ ಕಿವಿಗೊಟ್ಟು ಆತನ ನಿಯಮ ಗಳನ್ನು ಕೈಕೊಂಡರೆ ಐಗುಪ್ತ್ಯರ ಮೇಲೆ ಬರಮಾಡಿದ ಯಾವ ವ್ಯಾಧಿಯನ್ನೂ ನಿನ್ನ ಮೇಲೆ ಬರಮಾಡುವದಿಲ್ಲ; ನಿನ್ನನ್ನು ಸ್ವಸ್ಥಪಡಿಸುವ ಕರ್ತನು ನಾನೇ ಆಗಿದ್ದೇನೆ ಅಂದನು.ತರುವಾಯ ಅವರು ಹನ್ನೆರಡು ನೀರಿನ ಬಾವಿಗಳೂ ಎಪ್ಪತ್ತು ಖರ್ಜೂರದ ಮರಗಳೂ ಇದ್ದ ಏಲೀಮಿಗೆ ಬಂದರು. ಅವರು ಆ ನೀರುಗಳ ಬಳಿಯಲ್ಲಿ ಇಳುಕೊಂಡರು.

15:27b.EXO.015.027 ತರುವಾಯ ಅವರು ಹನ್ನೆರಡು ನೀರಿನ ಬಾವಿಗಳೂ ಎಪ್ಪತ್ತು ಖರ್ಜೂರದ ಮರಗಳೂ ಇದ್ದ ಏಲೀಮಿಗೆ ಬಂದರು. ಅವರು ಆ ನೀರುಗಳ ಬಳಿಯಲ್ಲಿ ಇಳುಕೊಂಡರು.

16

16:1b.EXO.016.001 ತರುವಾಯ ಇಸ್ರಾಯೇಲ್‌ ಮಕ್ಕಳ ಸಭೆಯೆಲ್ಲಾ ಏಲೀಮಿನಿಂದ ಪ್ರಯಾಣ ಮಾಡಿ ಅವರು ಐಗುಪ್ತದೇಶದಿಂದ ಹೊರಟ ಎರಡ ನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ಏಲೀಮಿಗೂ ಸೀನಾಯಿಗೂ ಮಧ್ಯೆ ಇರುವ ಸೀನ್‌ ಅರಣ್ಯಕ್ಕೆ ಬಂದರು.

16:2b.EXO.016.002 ಆಗ ಇಸ್ರಾಯೇಲ್‌ ಮಕ್ಕಳ ಸಭೆಯೆಲ್ಲಾ ಅರಣ್ಯದಲ್ಲಿ ಮೋಶೆಗೂ ಆರೋನನಿಗೂ ವಿರೋಧ ವಾಗಿ ಗುಣುಗುಟ್ಟಿತು.

16:3b.EXO.016.003 ಇಸ್ರಾಯೇಲ್‌ ಮಕ್ಕಳು ಅವರಿಗೆ--ನಾವು ಐಗುಪ್ತದೇಶದಲ್ಲಿ ಮಾಂಸದ ಪಾತ್ರೆ ಗಳ ಬಳಿಯಲ್ಲಿ ಕೂತುಕೊಂಡು ಸಾಕಾಗುವಷ್ಟು ರೊಟ್ಟಿ ಯನ್ನು ತಿನ್ನುತ್ತಿದ್ದಾಗ ಕರ್ತನ ಕೈಯಿಂದ ಸತ್ತುಹೋಗಿದ್ದರೆ ಒಳ್ಳೆದಾಗಿತ್ತು. ಈ ಸಭೆಯನ್ನೆಲ್ಲಾ ಸಾಯಿಸುವಂತೆ ನಮ್ಮನ್ನು ಈ ಅರಣ್ಯಕ್ಕೆ ಬರಮಾಡಿದ್ದೀರಿ ಅಂದರು.

16:4b.EXO.016.004 ಆಗ ಕರ್ತನು ಮೋಶೆಗೆ--ಇಗೋ, ರೊಟ್ಟಿಯನ್ನು ನಿಮಗಾಗಿ ನಾನು ಆಕಾಶದಿಂದ ಸುರಿಸುತ್ತೇನೆ; ಅವರು ನನ್ನ ನ್ಯಾಯಪ್ರಮಾಣದ ಪ್ರಕಾರ ನಡೆದುಕೊಳ್ಳುವರೋ ಇಲ್ಲವೋ ಎಂದು ನಾನು ಅವರನ್ನು ಪರೀಕ್ಷಿಸುವ ಹಾಗೆ ಜನರು ಹೊರಗೆಹೋಗಿ ಪ್ರತಿದಿನ ಆ ದಿನಕ್ಕೆ ಬೇಕಾದ ದ್ದನ್ನು ಕೂಡಿಸಲಿ.

16:5b.EXO.016.005 ಆರನೆಯ ದಿವಸದಲ್ಲಿ ಅವರು ತಂದದ್ದನ್ನು ಸಿದ್ಧಮಾಡುವಾಗ ಪ್ರತಿದಿನದಲ್ಲಿ ಕೂಡಿಸು ವದಕ್ಕಿಂತ ಎರಡರಷ್ಟಾಗಿರುವದು ಎಂದು ಹೇಳಿದನು.

16:6b.EXO.016.006 ಆಗ ಮೋಶೆ ಆರೋನರು ಇಸ್ರಾಯೇಲ್‌ ಮಕ್ಕಳಿ ಗೆಲ್ಲಾ--ನಿಮ್ಮನ್ನು ಐಗುಪ್ತದೇಶದೊಳಗಿಂದ ಹೊರಗೆ ಬರಮಾಡಿದಾತನು ಕರ್ತನೇ ಎಂದು ಸಾಯಂಕಾಲವಾ ದಾಗ ನಿಮಗೆ ತಿಳಿಯುವದು.

16:7b.EXO.016.007 ಬೆಳಿಗ್ಗೆ ಕರ್ತನ ಮಹಿಮೆ ಯನ್ನು ನೋಡುವಿರಿ; ಕರ್ತನಿಗೆ ವಿರೋಧವಾಗಿ ನೀವು ಗುಣುಗುಟ್ಟಿದ್ದನ್ನು ಆತನು ಕೇಳಿದ್ದಾನೆ; ನಮಗೆ ವಿರೋಧ ವಾಗಿ ನೀವು ಗುಣುಗುಟ್ಟುವ ಹಾಗೆ ನಾವು ಯಾರು ಅಂದರು.

16:8b.EXO.016.008 ಆಗ ಮೋಶೆಯು--ಸಾಯಂಕಾಲದಲ್ಲಿ ಕರ್ತನು ನಿಮಗೆ ಮಾಂಸಾಹಾರವನ್ನೂ ಹೊತ್ತಾರೆಯಲ್ಲಿ ಬೇಕಾದಷ್ಟು ರೊಟ್ಟಿಯನ್ನೂ ಕೊಡುವನು. ನೀವು ಗುಣುಗುಟ್ಟುವ ಮಾತುಗಳು ಕರ್ತನಿಗೆ ಕೇಳಿಸಿದವು. ಆ ಗುಣುಗುಟ್ಟುವಿಕೆಯು ಕರ್ತನಿಗೇ ಹೊರತು ನಮ ಗಲ್ಲ. ನಾವು ಎಷ್ಟು ಮಾತ್ರದವರು ಅಂದನು.

16:9b.EXO.016.009 ಮೋಶೆಯು ಆರೋನನಿಗೆ--ನೀನು ಇಸ್ರಾ ಯೇಲ್‌ ಮಕ್ಕಳ ಸಭೆಗೆಲ್ಲಾ--ನಿಮ್ಮ ಗುಣುಗುಟ್ಟುವಿಕೆ ಯನ್ನು ಕರ್ತನು ಕೇಳಿದ್ದರಿಂದ ನೀವು ಆತನ ಸವಿಾಪಕ್ಕೆ ಆತನ ಮುಂದೆ ಬನ್ನಿರಿ ಎಂದು ಹೇಳು ಅಂದನು.

16:10b.EXO.016.010 ಆರೋನನು ಇಸ್ರಾಯೇಲ್‌ ಮಕ್ಕಳ ಸಭೆಯ ಸಂಗಡ ಮಾತನಾಡುತ್ತಿದ್ದಾಗ ಅವರು ಅರಣ್ಯದ ಕಡೆಗೆ ನೋಡಿ ದರು. ಆಗ ಇಗೋ, ಕರ್ತನ ಮಹಿಮೆಯು ಮೇಘದಲ್ಲಿ ಪ್ರತ್ಯಕ್ಷವಾಯಿತು.

16:11b.EXO.016.011 ಆಗ ಕರ್ತನು ಮೋಶೆಯ ಸಂಗಡ ಮಾತ ನಾಡಿ--

16:12b.EXO.016.012 ಇಸ್ರಾಯೇಲ್‌ ಮಕ್ಕಳ ಗುಣುಗುಟ್ಟು ವಿಕೆಯನ್ನು ಕೇಳಿದ್ದೇನೆ. ಅವರ ಸಂಗಡ ನೀನು ಮಾತ ನಾಡಿ--ನೀವು ಸಾಯಂಕಾಲದಲ್ಲಿ ಮಾಂಸವನ್ನು ಉಣ್ಣು ವಿರಿ, ಬೆಳಿಗ್ಗೆ ರೊಟ್ಟಿಯಿಂದ ತೃಪ್ತರಾಗುವಿರಿ. ನಾನೇ ನಿಮ್ಮ ದೇವರಾದ ಕರ್ತನೆಂದು ತಿಳಿದುಕೊಳ್ಳುವಿರಿ ಎಂದು ಅವರಿಗೆ ಹೇಳು ಅಂದನು.

16:13b.EXO.016.013 ಸಾಯಂಕಾಲದಲ್ಲಿ ಆದದ್ದೇನಂದರೆ--ಲಾವಕ್ಕಿ ಗಳು ಬಂದು ಅವರ ಪಾಳೆಯವನ್ನು ಮುಚ್ಚಿಕೊಂಡವು; ಬೆಳಿಗ್ಗೆ ಮಂಜು ಪಾಳೆಯದ ಸುತ್ತಲೂ ಬಿದ್ದಿತ್ತು.

16:14b.EXO.016.014 ಬಿದ್ದಿದ್ದ ಮಂಜು ಹೋದ ಮೇಲೆ ಇಗೋ, ಗಟ್ಟಿ ಯಾದ ಪದಾರ್ಥವು ಮಂಜಿನ ಹನಿಯಷ್ಟು ಚಿಕ್ಕ ದಾದದ್ದೂ ಗುಂಡಾದದ್ದೂ ಅರಣ್ಯದ ಭೂಮಿಯ ಮೇಲೆ ಹರಡಿತ್ತು.

16:15b.EXO.016.015 ಇಸ್ರಾಯೇಲ್‌ ಮಕ್ಕಳು ಅದನ್ನು ನೋಡಿದಾಗ ಅವರು ಒಬ್ಬರಿಗೊಬ್ಬರು--ಇದು ಮನ್ನಾ ಅಂದರು. ಯಾಕಂದರೆ ಅದು ಏನಾಗಿತ್ತೆಂದು ಅವರಿಗೆ ತಿಳಿಯಲಿಲ್ಲ. ಆಗ ಮೋಶೆಯು ಅವರಿಗೆ--ಕರ್ತನು ನಿಮಗೆ ಕೊಟ್ಟಿರುವ ರೊಟ್ಟಿಯು ಇದೇ ಎಂದು ಹೇಳಿದನು.

16:16b.EXO.016.016 ಕರ್ತನು ಆಜ್ಞಾಪಿಸಿದ್ದೇನಂದರೆ--ಪ್ರತಿಯೊಬ್ಬನು ತಾನು ಎಷ್ಟು ತಿನ್ನುವನೋ ಅದರ ಪ್ರಕಾರ ಅದನ್ನು ಕೂಡಿಸಲಿ, ಪ್ರತಿಯೊಬ್ಬನಿಗೆ ಒಂದು ಓಮೆರದಂತೆ ನಿಮ್ಮ ಡೇರೆಗಳಲ್ಲಿರುವ ವ್ಯಕ್ತಿಗಳ ಲೆಕ್ಕದ ಪ್ರಕಾರ ನೀವು ತಕ್ಕೊಳ್ಳಿರಿ ಎಂದು ಹೇಳಿದನು.

16:17b.EXO.016.017 ಇಸ್ರಾಯೇಲ್‌ ಮಕ್ಕಳು ಅದರಂತೆ ಮಾಡಿ ಕೆಲವರು ಹೆಚ್ಚು, ಕೆಲವರು ಕಡಿಮೆ ಕೂಡಿಸಿದರು.

16:18b.EXO.016.018 ಓಮೆರ ದಿಂದ ಅಳತೆ ಮಾಡಿದಾಗ ಹೆಚ್ಚು ಕೂಡಿಸಿದವನಿಗೆ ಮಿಕ್ಕಲಿಲ್ಲ, ಕಡಿಮೆ ಕೂಡಿಸಿದವನಿಗೆ ಕೊರತೆಯಾ ಗಲಿಲ್ಲ, ಒಬ್ಬೊಬ್ಬನು ಊಟಮಾಡುವಷ್ಟು ಅವರು ಕೂಡಿಸಿದರು.

16:19b.EXO.016.019 ಮೋಶೆ ಅವರಿಗೆ--ಇದರಲ್ಲಿ ಯಾರೂ ಮರುದಿನದ ವರೆಗೆ ಇಟ್ಟುಕೊಳ್ಳಬಾರದು ಎಂದು ಹೇಳಿದನು.

16:20b.EXO.016.020 ಆದಾಗ್ಯೂ ಅವರು ಮೋಶೆಯ ಮಾತನ್ನು ಕೇಳಲಿಲ್ಲ. ಕೆಲವರು ಅದನ್ನು ಬೆಳಗಿನ ವರೆಗೆ ಇಟ್ಟುಕೊಂಡಾಗ ಅದು ಹುಳಬಿದ್ದು ನಾತ ಹುಟ್ಟಿತು. ಆಗ ಮೋಶೆಯು ಅವರ ಮೇಲೆ ಕೋಪಿಸಿ ಕೊಂಡನು.

16:21b.EXO.016.021 ಹೀಗೆ ಅವರಲ್ಲಿ ಪ್ರತಿಯೊಬ್ಬನು ತಿನ್ನು ವಷ್ಟು ಪ್ರತಿ ದಿನದ ಬೆಳಿಗ್ಗೆ ಅದನ್ನು ಕೂಡಿಸುತ್ತಿದ್ದರು. ಬಿಸಿಲು ಬಹಳವಾದಾಗ ಅದು ಕರಗಿ ಹೋಗುತ್ತಿತ್ತು.

16:22b.EXO.016.022 ಆರನೆಯ ದಿನದಲ್ಲಿ ಅವರು ಎರಡರಷ್ಟು ರೊಟ್ಟಿ ಯನ್ನು ಅಂದರೆ ಒಬ್ಬನಿಗೆ ಎರಡು ಓಮೆರದಂತೆ ಕೂಡಿಸಿದ್ದರಿಂದ ಸಭೆಯ ಎಲ್ಲಾ ಅಧಿಕಾರಿಗಳು ಬಂದು ಮೋಶೆಗೆ ತಿಳಿಸಿದರು.

16:23b.EXO.016.023 ಅವನು ಅವರಿಗೆ--ಕರ್ತನು ಹೇಳಿದ ಮಾತು ಇದೇ--ನಾಳೆ ಕರ್ತನಿಗೆ ವಿಶ್ರಾಂತಿಯ ಪರಿಶುದ್ಧ ಸಬ್ಬತ್‌ ದಿನವಾಗಿದೆ, ಇಂದೇ ಸುಡಬೇಕಾ ದದ್ದನ್ನು ಸುಡಿರಿ, ಬೇಯಿಸಬೇಕಾದದ್ದನ್ನು ಬೇಯಿಸಿರಿ. ಇದರಲ್ಲಿ ಮಿಕ್ಕಾದದ್ದನ್ನೆಲ್ಲಾ ಬೆಳಗಿನ ವರೆಗೆ ಇಟ್ಟು ಕೊಳ್ಳಿರಿ ಅಂದನು.

16:24b.EXO.016.024 ಮೋಶೆಯು ಆಜ್ಞಾಪಿಸಿದ ಪ್ರಕಾರ ಅದನ್ನು ಮರು ದಿನದ ವರೆಗೆ ಇಟ್ಟುಕೊಂಡಾಗ ಅದು ನಾತಹಿಡಿಯಲಿಲ್ಲ. ಅದರಲ್ಲಿ ಹುಳಗಳೂ ಇರ ಲಿಲ್ಲ.

16:25b.EXO.016.025 ಆಗ ಮೋಶೆಯು--ಈ ಹೊತ್ತು ಅದನ್ನು ಊಟಮಾಡಿರಿ, ಯಾಕಂದರೆ ಈ ದಿನವು ಕರ್ತನ ಸಬ್ಬತ್‌ ದಿನವಾಗಿದೆ. ಈ ಹೊತ್ತು ನಿಮಗೆ ಹೊಲದಲ್ಲಿ (ಆಹಾರ) ಸಿಕ್ಕುವದಿಲ್ಲ.

16:26b.EXO.016.026 ಆರು ದಿವಸ ಅದನ್ನು ಕೂಡಿಸಬೇಕು. ಏಳನೆಯ ದಿನ ಸಬ್ಬತ್‌ ದಿನವಾಗಿರುವ ದರಿಂದ ಅಂದು (ರೊಟ್ಟಿಯು) ಇರುವದಿಲ್ಲ ಅಂದನು.

16:27b.EXO.016.027 ಏಳನೆಯ ದಿನ ಜನರಲ್ಲಿ ಕೆಲವರು ಕೂಡಿಸುವದಕ್ಕೆ ಹೊರಗೆ ಹೋದಾಗ ಅವರಿಗೆ ಸಿಕ್ಕಲಿಲ್ಲ.

16:28b.EXO.016.028 ಆಗ ಕರ್ತನು ಮೋಶೆಗೆ--ಎಷ್ಟು ಕಾಲ ನನ್ನ ಕಟ್ಟಳೆಗಳನ್ನೂ ನ್ಯಾಯಪ್ರಮಾಣಗಳನ್ನೂ ಕೈಕೊಳ್ಳದೆ ನಿರಾಕರಿಸುವಿರಿ ಅಂದನು.

16:29b.EXO.016.029 ಅವನು--ನೋಡಿರಿ, ಕರ್ತನು ನಿಮಗೆ ಸಬ್ಬತ್‌ ದಿನವನ್ನು ಕೊಟ್ಟಿದ್ದರಿಂದಲೇ ಆರನೆಯ ದಿನ ದಲ್ಲಿ ನಿಮಗೆ ಎರಡು ದಿನಗಳ ರೊಟ್ಟಿಯನ್ನು ಕೊಟ್ಟಿ ದ್ದಾನೆ. ಪ್ರತಿಯೊಬ್ಬನು ತನ್ನ ತನ್ನ ಸ್ಥಳದಲ್ಲಿ ಇರಲಿ, ಏಳನೆಯ ದಿನದಲ್ಲಿ ಯಾರೂ ತನ್ನ ಸ್ಥಳವನ್ನು ಬಿಟ್ಟು ಹೋಗಬಾರದು ಎಂದು ಹೇಳಿದನು.

16:30b.EXO.016.030 ಹೀಗೆ ಜನರು ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡರು.

16:31b.EXO.016.031 ಆಗ ಇಸ್ರಾಯೇಲ್‌ ಮನೆತನವು ಅದಕ್ಕೆ ಮನ್ನ ಎಂದು ಹೆಸರಿಟ್ಟಿತು. ಅದು ಕೊತ್ತಂಬರಿ ಬೀಜದಂತೆ ಬೆಳ್ಳಗಿತ್ತು. ಅದರ ರುಚಿಯು ಜೇನಿನಲ್ಲಿ ಕಲಸಿದ ದೋಸೆಯಂತೆ ಇತ್ತು.

16:32b.EXO.016.032 ಮೋಶೆಯು ಅವರಿಗೆ--ಕರ್ತನು ಆಜ್ಞಾಪಿಸಿದ್ದು ಇದೇ--ನಾನು ನಿಮ್ಮನ್ನು ಐಗುಪ್ತದೇಶದೊಳಗಿಂದ ಹೊರಡಿಸಿದಾಗ ಅರಣ್ಯದಲ್ಲಿ ನಿಮಗೆ ತಿನ್ನಿಸಿದ ರೊಟ್ಟಿಯನ್ನು ನಿಮ್ಮ ಸಂತಾನಗಳು ನೋಡುವಂತೆ ಒಂದು ಓಮೆರ (ಮನ್ನವನ್ನು) ತುಂಬಿಸಿ ಇಟ್ಟಿರಬೇಕು ಎಂಬದು ಅಂದನು.

16:33b.EXO.016.033 ಮೋಶೆಯು ಆರೋನನಿಗೆ--ನೀನು ಒಂದು ಪಾತ್ರೆಯನ್ನು ತೆಗೆದುಕೊಂಡು ಒಂದು ಓಮೆರ್‌ ಮನ್ನವನ್ನು ಅದರಲ್ಲಿ ಹಾಕಿ ನಿಮ್ಮ ಸಂತತಿಗಳಿಗೋಸ್ಕರ ಇಟ್ಟು ಕೊಳ್ಳುವದಕ್ಕಾಗಿ ಕರ್ತನ ಮುಂದೆ ಇಡು ಅಂದನು.

16:34b.EXO.016.034 ಕರ್ತನು ಮೋಶೆಗೆ ಆಜ್ಞಾಪಿಸಿದಂತೆಯೇ ಆರೋನನು ಅದನ್ನು (ಮನ್ನ ವನ್ನು) ಕಾಪಾಡುವದಕ್ಕೆ ಸಾಕ್ಷಿಯಾಗಿ ಇಟ್ಟನು.

16:35b.EXO.016.035 ಇಸ್ರಾಯೇಲ್‌ ಮಕ್ಕಳು ವಾಸವಾಗಿರತಕ್ಕ ದೇಶಕ್ಕೆ ಬರುವ ವರೆಗೆ ನಾಲ್ವತ್ತು ವರುಷ ಮನ್ನವನ್ನು ತಿಂದರು. ಕಾನಾನ್‌ ದೇಶದ ಮೇರೆಗಳಿಗೆ ಬರುವ ವರೆಗೂ ಅವರು ಮನ್ನವನ್ನು ತಿಂದರು.ಓಮೆರ್‌ ಅಂದರೆ ಎಫದಲ್ಲಿ ಹತ್ತನೆಯ ಒಂದು ಪಾಲು.

16:36b.EXO.016.036 ಓಮೆರ್‌ ಅಂದರೆ ಎಫದಲ್ಲಿ ಹತ್ತನೆಯ ಒಂದು ಪಾಲು.

17

17:1b.EXO.017.001 ಇಸ್ರಾಯೇಲ್‌ ಮಕ್ಕಳ ಸಭೆಯೆಲ್ಲಾ ಕರ್ತನ ಅಪ್ಪಣೆಯ ಪ್ರಕಾರ ಅವರವರು ಹೊರ ಡುವ ಕ್ರಮದಂತೆ ಸೀನ್‌ ಅರಣ್ಯದಿಂದ ಹೊರಟು ರೆಫೀದೀಮಿನಲ್ಲಿ ತಂಗಿದರು. ಅಲ್ಲಿ ಜನರಿಗೆ ಕುಡಿಯು ವದಕ್ಕೆ ನೀರು ಇರಲಿಲ್ಲ.

17:2b.EXO.017.002 ಆದಕಾರಣ ಜನರು ಮೋಶೆಯ ಸಂಗಡ ವಿವಾದಮಾಡಿ--ನಮಗೆ ಕುಡಿ ಯುವದಕ್ಕೆ ನೀರು ಕೊಡು ಅಂದಾಗ ಮೋಶೆಯು ಅವರಿಗೆ--ಯಾಕೆ ನನ್ನ ಸಂಗಡ ವಿವಾದ ಮಾಡುತ್ತೀರಿ? ಕರ್ತನನ್ನು ಯಾಕೆ ಪರೀಕ್ಷಿಸುತ್ತೀರಿ ಅಂದನು.

17:3b.EXO.017.003 ಅಲ್ಲಿ ಜನರು ದಾಹಗೊಂಡು ಮೋಶೆಗೆ ವಿರುದ್ಧವಾಗಿ ಗುಣು ಗುಟ್ಟಿ--ನಮ್ಮನ್ನೂ ನಮ್ಮ ಮಕ್ಕಳನ್ನೂ ನಮ್ಮ ದನಗಳನ್ನೂ ದಾಹದಿಂದ ಕೊಲ್ಲುವದಕ್ಕಾಗಿ ಯಾಕೆ ಐಗುಪ್ತದೊಳ ಗಿಂದ ಇಲ್ಲಿಗೆ ಬರಮಾಡಿದಿ ಅಂದರು.

17:4b.EXO.017.004 ಆಗ ಮೋಶೆಯು ಕರ್ತನಿಗೆ ಮೊರೆಯಿಟ್ಟು--ಈ ಜನರಿಗೆ ನಾನೇನು ಮಾಡಲಿ? ಅವರು ಬಹಳ ಮಟ್ಟಿಗೆ ನನ್ನನ್ನು ಕಲ್ಲೆಸೆಯುವದಕ್ಕಿದ್ದಾರೆ ಅಂದನು.

17:5b.EXO.017.005 ಆಗ ಕರ್ತನು ಮೋಶೆಗೆ--ಜನರ ಮುಂದೆ ಹಾದು ಹೋಗಿ ಇಸ್ರಾಯೇಲಿನ ಹಿರಿಯರಲ್ಲಿ ಕೆಲವರನ್ನು ಕರಕೊಂಡು ನೀನು ನದಿಯನ್ನು ಹೊಡೆದ ಕೋಲನ್ನು ಕೈಯಲ್ಲಿ ತೆಗೆದುಕೊಂಡು ಹೋಗು.

17:6b.EXO.017.006 ಅಲ್ಲಿ ಇಗೋ, ನಾನು ಹೋರೇಬಿನಲ್ಲಿ ಬಂಡೆಯ ಮೇಲೆ ನಿನ್ನ ಮುಂದೆ ನಿಂತುಕೊಳ್ಳುವೆನು ನೀನು ಬಂಡೆಯನ್ನು ಹೊಡೆಯ ಬೇಕು. ಆಗ ಜನರು ಕುಡಿಯುವಂತೆ ನೀರು ಹೊರಗೆ ಬರುವದು ಅಂದನು. ಮೋಶೆಯು ಇಸ್ರಾಯೇಲ್ಯರ ಹಿರಿಯರ ಎದುರಿನಲ್ಲಿ ಹಾಗೆಯೇ ಮಾಡಿದನು.

17:7b.EXO.017.007 ಅವನು ಆ ಸ್ಥಳಕ್ಕೆ ಮಸ್ಸಾ ಮೆರಿಬಾ ಎಂದು ಹೆಸರಿಟ್ಟನು. ಯಾಕಂದರೆ ಅಲ್ಲಿ ಇಸ್ರಾಯೇಲ್‌ ಮಕ್ಕಳು ವಿವಾದ ಮಾಡಿದರು.-- ಕರ್ತನು ನಮ್ಮ ಮಧ್ಯದಲ್ಲಿ ಇದ್ದಾನೋ ಇಲ್ಲವೋ ಎಂದು ಪರೀಕ್ಷಿಸಿದರು.

17:8b.EXO.017.008 ತರುವಾಯ ಅಮಾಲೇಕ್ಯರು ಬಂದು ರೆಫೀದೀಮಿ ನಲ್ಲಿ ಇಸ್ರಾಯೇಲ್ಯರ ಸಂಗಡ ಯುದ್ಧಮಾಡಿದರು.

17:9b.EXO.017.009 ಆಗ ಮೋಶೆಯು ಯೆಹೋಶುವನಿಗೆ--ನೀನು ನಮ ಗಾಗಿ ಮನುಷ್ಯರನ್ನು ಆರಿಸಿಕೊಂಡು ಅಮಾಲೇಕ್ಯರ ಸಂಗಡ ಯುದ್ಧಮಾಡುವದಕ್ಕೆ ಹೊರಟುಹೋಗು; ನಾಳೆ ನಾನು ದೇವರ ಕೋಲನ್ನು ಕೈಯಲ್ಲಿ ಹಿಡಿದು ಕೊಂಡು ಗುಡ್ಡದ ಮೇಲೆ ನಿಂತುಕೊಳ್ಳುವೆನು ಅಂದನು.

17:10b.EXO.017.010 ಮೋಶೆಯು ತನಗೆ ಹೇಳಿದಂತೆ ಯೆಹೋಶುವನು ಅಮಾಲೇಕ್ಯರೊಂದಿಗೆ ಯುದ್ಧಮಾಡಿದನು. ಮೋಶೆ ಯೂ ಆರೋನನೂ ಹೂರನೂ ಗುಡ್ಡದ ಮೇಲೆ ಏರಿಹೋದರು.

17:11b.EXO.017.011 ಮೋಶೆಯು ತನ್ನ ಕೈಯನ್ನು ಎತ್ತಿದಾಗ ಇಸ್ರಾಯೇಲ್ಯರು ಜಯಿಸಿದರು. ಅವನು ತನ್ನ ಕೈಯನ್ನು ಇಳಿಸಿದಾಗ ಅಮಾಲೇಕ್ಯರು ಜಯಿಸಿದರು.

17:12b.EXO.017.012 ಆದರೆ ಮೋಶೆಯ ಕೈಗಳು ಭಾರವಾಗಿರಲಾಗಿ ಅವರು ಒಂದು ಕಲ್ಲನ್ನು ತಂದು ಅವನ ಕೆಳಗೆ ಇಟ್ಟಾಗ ಅವನು ಅದರ ಮೇಲೆ ಕೂತುಕೊಂಡನು. ಆರೋನನೂ ಹೂರನೂ ಒಬ್ಬನು ಒಂದು ಕಡೆಯಲ್ಲಿಯೂ ಇನ್ನೊಬ್ಬನು ಇನ್ನೊಂದು ಕಡೆಯಲ್ಲಿಯೂ ಅವನ ಕೈಗಳಿಗೆ ಆಧಾರ ಕೊಟ್ಟರು. ಹೀಗೆ ಸೂರ್ಯನು ಮುಳುಗುವ ವರೆಗೆ ಅವನ ಕೈಗಳು ಇಳಿಯದೇ ಇದ್ದವು.

17:13b.EXO.017.013 ಯೆಹೋಶು ವನು ಅಮಾಲೇಕ್ಯನನ್ನೂ ಅವನ ಜನರನ್ನೂ ಕತ್ತಿಯಿಂದ ಸೋಲಿಸಿದನು.

17:14b.EXO.017.014 ಆಗ ಕರ್ತನು ಮೋಶೆಗೆ--ಇದನ್ನು ಜ್ಞಾಪಕಾರ್ಥ ವಾಗಿ ಪುಸ್ತಕದಲ್ಲಿ ಬರೆ; ನಾನು ಅಮಾಲೇಕ್ಯರ ನೆನಪು ಆಕಾಶದ ಕೆಳಗೆ ಇರದಂತೆ ಸಂಪೂರ್ಣವಾಗಿ ಅಳಿಸಿ ಬಿಡುವೆನು. ಇದನ್ನು ತಿರಿಗಿ ಯೆಹೋಶುವನಿಗೆ ಹೇಳು ಅಂದನು.

17:15b.EXO.017.015 ಇದಾದ ಮೇಲೆ ಮೋಶೆಯು ಯಜ್ಞವೇದಿಯನ್ನು ಕಟ್ಟಿ ಅದಕ್ಕೆ ಯೆಹೋವ ನಿಸ್ಸಿ ಎಂದು ಹೆಸರಿಟ್ಟನು.ಆತನು--ಅಮಾಲೇಕ್ಯರ ಕೂಡ ಕರ್ತನಿಗೆ ತಲ ತಲಾಂತರಗಳಲ್ಲಿ ಯುದ್ಧವಿರುವದು ಎಂದು ಕರ್ತನು ಆಣೆ ಇಟ್ಟಿದ್ದಾನೆ ಅಂದನು.

17:16b.EXO.017.016 ಆತನು--ಅಮಾಲೇಕ್ಯರ ಕೂಡ ಕರ್ತನಿಗೆ ತಲ ತಲಾಂತರಗಳಲ್ಲಿ ಯುದ್ಧವಿರುವದು ಎಂದು ಕರ್ತನು ಆಣೆ ಇಟ್ಟಿದ್ದಾನೆ ಅಂದನು.

18

18:1b.EXO.018.001 ದೇವರು ಮೋಶೆಗೆ ಮಾಡಿದವುಗಳೆಲ್ಲವನ್ನೂ ಕರ್ತನು ಇಸ್ರಾಯೇಲ್ಯರನ್ನು ಐಗುಪ್ತದೊಳಗಿಂದ ಹೊರಗೆ ತಂದದ್ದನ್ನೂ ಮಿದ್ಯಾ ನಿನ ವೈದಿಕನೂ ಮೋಶೆಯ ಮಾವನೂ ಆಗಿದ್ದ ಇತ್ರೋವನು ಕೇಳಿ

18:2b.EXO.018.002 ತನ್ನ ಬಳಿಗೆ ಕಳುಹಿಸಲ್ಪಟ್ಟಿದ್ದ ಮೋಶೆಯ ಹೆಂಡತಿ ಚಿಪ್ಪೋರಳನ್ನೂ ಆಕೆಯ ಇಬ್ಬರು ಕುಮಾರರನ್ನೂ ಕರೆದುಕೊಂಡು ಬಂದನು.

18:3b.EXO.018.003 ಆ ಕುಮಾರರಲ್ಲಿ ಒಬ್ಬನಿಗೆ ಗೇರ್ಷೋಮ್‌ ಎಂದು ಹೆಸರಿತ್ತು; ಅವನು--ನಾನು ಪರದೇಶದಲ್ಲಿ ಅನ್ಯನಾಗಿ ದ್ದೆನು ಅಂದನು.

18:4b.EXO.018.004 ಇನ್ನೊಬ್ಬನ ಹೆಸರು ಎಲೀಯೆಜರ್‌ ಎಂದಿತ್ತು; ಅವನು ನನ್ನ ತಂದೆಯ ದೇವರು ನನ್ನ ಸಹಾಯಕನಾಗಿದ್ದು ಫರೋಹನ ಕತ್ತಿಯಿಂದ ಬಿಡುಗಡೆ ಮಾಡಿದನು ಎಂದು ಹೇಳಿದನು.

18:5b.EXO.018.005 ಮೋಶೆಯ ಮಾವ ನಾದ ಇತ್ರೋವನ ಸಂಗಡ ಮೋಶೆಯ ಕುಮಾರರೂ ಅವನ ಹೆಂಡತಿಯೂ ಮೋಶೆಯ ಬಳಿಗೆ ಅರಣ್ಯಕ್ಕೆ ಅವನು ತಂಗಿದ್ದ ಸ್ಥಳವಾದ ದೇವರ ಬೆಟ್ಟದ ಬಳಿ ಬಂದರು.

18:6b.EXO.018.006 ಆಗ ಅವನು ಮೋಶೆಗೆ--ನಿನ್ನ ಮಾವ ನಾದ ಇತ್ರೋವನೆಂಬ ನಾನು ನಿನ್ನ ಹೆಂಡತಿಯನ್ನೂ ಅವಳ ಇಬ್ಬರು ಮಕ್ಕಳನ್ನೂ ಕರೆದುಕೊಂಡು ನಿನ್ನ ಬಳಿಗೆ ಬಂದಿದ್ದೇನೆಂದು ಹೇಳಿ ಕಳುಹಿಸಿದಾಗ

18:7b.EXO.018.007 ಮೋಶೆಯು ತನ್ನ ಮಾವನನ್ನು ಎದುರುಗೊಂಡು ಅವನನ್ನು ವಂದಿಸಿ ಮುದ್ದಿಟ್ಟನು. ಅವರು ಪರಸ್ಪರ ಕ್ಷೇಮ ಸಮಾಚಾರವನ್ನು ಕೇಳಿಕೊಂಡು ಗುಡಾರಕ್ಕೆ ಬಂದರು.

18:8b.EXO.018.008 ಇಸ್ರಾಯೇಲ್ಯರಿಗೋಸ್ಕರ ಕರ್ತನು ಫರೋಹ ನಿಗೂ ಐಗುಪ್ತ್ಯರಿಗೂ ಮಾಡಿದ್ದೆಲ್ಲವನ್ನೂ ಅವರಿಗೆ ಒದಗಿದ ಎಲ್ಲಾ ಸಂಕಟವನ್ನೂ ಕರ್ತನು ತಮ್ಮನ್ನು ಹೇಗೆ ತಪ್ಪಿಸಿದನೆಂಬದನ್ನೂ ಮೋಶೆಯು ತನ್ನ ಮಾವ ನಿಗೆ ತಿಳಿಯಪಡಿಸಿದನು.

18:9b.EXO.018.009 ಇದಲ್ಲದೆ ಕರ್ತನು ಇಸ್ರಾ ಯೇಲ್ಯರಿಗೆ ಮಾಡಿದ ಎಲ್ಲಾ ಉಪಕಾರಕ್ಕಾಗಿಯೂ ಆತನು ಅವರನ್ನು ಐಗುಪ್ತ್ಯರ ಕೈಗಳಿಂದ ತಪ್ಪಿಸಿದ್ದ ಕ್ಕಾಗಿಯೂ ಇತ್ರೋವನು ಸಂತೋಷಪಟ್ಟನು.

18:10b.EXO.018.010 ಇತ್ರೋವನು--ಐಗುಪ್ತ್ಯರ ಕೈಗೂ ಫರೋಹನ ಕೈಗೂ ಐಗುಪ್ತ್ಯರ ಅಧಿಕಾರದೊಳಗಿಂದಲೂ ಜನರನ್ನು ತಪ್ಪಿಸಿದ ಕರ್ತನಿಗೆ ಸ್ತೋತ್ರವಾಗಲಿ.

18:11b.EXO.018.011 ಎಲ್ಲಾ ದೇವರು ಗಳಿಗಿಂತ ಕರ್ತನೇ ದೊಡ್ಡವನೆಂದು ಈಗ ನಾನು ತಿಳಿದುಕೊಂಡಿದ್ದೇನೆ. ಐಗುಪ್ತ್ಯರು ಗರ್ವಪಟ್ಟಿದ್ದರಿಂದ ಆತನು ಅವರನ್ನು ತಗ್ಗಿಸಿದನು ಅಂದನು.

18:12b.EXO.018.012 ಮೋಶೆಯ ಮಾವನಾದ ಇತ್ರೋವನು ದಹನಬಲಿಯನ್ನೂ ಯಜ್ಞ ಗಳನ್ನೂ ತೆಗೆದುಕೊಂಡು ದೇವರಿಗೆ ಅರ್ಪಿಸಿದನು. ಆಗ ಆರೋನನೂ ಇಸ್ರಾಯೇಲಿನ ಹಿರಿಯರೆಲ್ಲರೂ ದೇವರ ಸನ್ನಿಧಿಯಲ್ಲಿ ಮೋಶೆಯ ಮಾವನ ಸಂಗಡ ಭೋಜನ ಮಾಡುವದಕ್ಕಾಗಿ ಬಂದರು.

18:13b.EXO.018.013 ಮರುದಿನದಲ್ಲಿ ಮೋಶೆಯು ಜನರಿಗೆ ನ್ಯಾಯತೀರಿಸುವದಕ್ಕೆ ಕೂತುಕೊಂಡಾಗ ಜನರು ಬೆಳಗಿನಿಂದ ಸಾಯಂಕಾಲದ ವರೆಗೆ ಮೋಶೆಯ ಬಳಿಯಲ್ಲಿ ನಿಂತಿ ದ್ದರು.

18:14b.EXO.018.014 ಮೋಶೆಯು ಜನರಿಗೆ ಮಾಡುವದನ್ನೆಲ್ಲಾ ಮೋಶೆಯ ಮಾವನು ನೋಡಿ ಮೋಶೆಗೆ--ಇದೇನು ಜನರಿಗೆ ನೀನು ಮಾಡುವದು? ಯಾಕೆ ನೀನೊಬ್ಬನೇ ಕೂತಿರಲಾಗಿ ಜನರು ಬೆಳಗಿನಿಂದ ಸಾಯಂಕಾಲದ ವರೆಗೆ ನಿನ್ನ ಬಳಿಯಲ್ಲಿ ನಿಂತಿದ್ದಾರೆ ಅಂದನು.

18:15b.EXO.018.015 ಅದಕ್ಕೆ ಮೋಶೆಯು ತನ್ನ ಮಾವನಿಗೆ--ದೇವರ ವಿಷಯದಲ್ಲಿ ಕೇಳುವದಕ್ಕಾಗಿ ಜನರು ನನ್ನ ಬಳಿಗೆ ಬರುತ್ತಾರೆ.

18:16b.EXO.018.016 ಅವರಿಗೆ ವ್ಯಾಜ್ಯವಿದ್ದರೆ ನನ್ನ ಬಳಿಗೆ ಬರುತ್ತಾರೆ. ನಾನು ಒಬ್ಬರ ಸಂಗಡ ಇನ್ನೊಬ್ಬರಿಗಿರುವ ವ್ಯಾಜ್ಯವನ್ನು ತೀರಿಸುತ್ತೇನೆ. ದೇವರ ನಿಯಮಗಳನ್ನೂ ಆತನ ನ್ಯಾಯ ಪ್ರಮಾಣಗಳನ್ನೂ ಅವರಿಗೆ ತಿಳಿಯಪಡಿಸುತ್ತೇನೆ ಅಂದನು.

18:17b.EXO.018.017 ಮೋಶೆಯ ಮಾವನು ಅವನಿಗೆ--ನೀನು ಮಾಡುವ ಈ ಕಾರ್ಯವು ಸರಿಯಲ್ಲ;

18:18b.EXO.018.018 ನೀನೂ ನಿನ್ನ ಸಂಗಡ ಇರುವ ಜನರೂ ಖಂಡಿತ ಬಳಲುವಿರಿ, ಯಾಕಂದರೆ ಇದು ನಿನಗೆ ಬಹು ಭಾರ; ನೀನು ಸ್ವತಃ ಇದನ್ನು ಮಾಡಲಾರಿ.

18:19b.EXO.018.019 ಆದದರಿಂದ ಈಗ ನನ್ನ ಮಾತನ್ನು ಕೇಳು, ನಿನಗೆ ಆಲೋಚನೆ ಹೇಳುತ್ತೇನೆ; ದೇವರು ನಿನ್ನ ಸಂಗಡ ಇರಲಿ; ನೀನು ಜನರಿಗಾಗಿ ದೇವರ ಪಕ್ಷದಲ್ಲಿದ್ದು ಅವರ ವ್ಯಾಜ್ಯಗಳನ್ನು ಆತನ ಮುಂದೆ ತರಬೇಕು.

18:20b.EXO.018.020 ನೇಮಕಗಳನ್ನೂ ನ್ಯಾಯ ಪ್ರಮಾಣಗಳನ್ನೂ ಅವರಿಗೆ ಕಲಿಸಿ, ಅವರು ಹೋಗ ತಕ್ಕ ಮಾರ್ಗವನ್ನೂ ಅವರು ಮಾಡತಕ್ಕ ಕೆಲಸವನ್ನೂ ಅವರಿಗೆ ತೋರಿಸಬೇಕು.

18:21b.EXO.018.021 ಇದಲ್ಲದೆ ನೀನು ಸಮಸ್ತ ಜನರೊಳಗೆ ಸಮರ್ಥರು ಅಂದರೆ ದೇವರಿಗೆ ಭಯ ಪಡುವವರೂ ಸತ್ಯವಂತರೂ ದುರಾಶೆಯನ್ನು ಹಗೆ ಮಾಡುವವರೂ ಆಗಿರುವ ಇಂಥವರನ್ನು ಸಾವಿರ ಜನರ ಮೇಲೆಯೂ ನೂರು ಜನರ ಮೇಲೆಯೂ ಐವತ್ತು ಜನರ ಮೇಲೆಯೂ ಹತ್ತು ಜನರ ಮೇಲೆಯೂ ಅಧಿಕಾರಿಗಳನ್ನಾಗಿ ನೇಮಿಸಬೇಕು.

18:22b.EXO.018.022 ಇವರು ಎಲ್ಲಾ ಕಾಲಗಳಲ್ಲಿ ಜನರಿಗೆ ನ್ಯಾಯತೀರಿಸಿ ದೊಡ್ಡ ವ್ಯಾಜ್ಯ ಗಳನ್ನೆಲ್ಲಾ ನಿನ್ನ ಮುಂದೆ ತಂದು ಸಣ್ಣಸಣ್ಣ ವ್ಯಾಜ್ಯಗಳನ್ನು ತಾವೇ ತೀರಿಸಬೇಕು. ಹೀಗೆ ನಿನಗೆ ಸುಲಭವಾಗು ವದು. ಅವರು ನಿನ್ನ ಸಂಗಡ ಭಾರವನ್ನು ಹೊರುವರು.

18:23b.EXO.018.023 ಈ ಕಾರ್ಯವನ್ನು ಮಾಡುವದಕ್ಕೆ ದೇವರು ನಿನಗೆ ಅಪ್ಪಣೆಕೊಟ್ಟರೆ ನೀನು ಇದನ್ನು ನಿರ್ವಹಿಸಲು ಶಕ್ತ ನಾಗುವಿ. ಈ ಜನರೆಲ್ಲರೂ ತಮ್ಮ ತಮ್ಮ ಸ್ಥಳಗಳಿಗೆ ಸಮಾಧಾನದಿಂದ ಹೋಗುವರು ಅಂದನು.

18:24b.EXO.018.024 ಮೋಶೆಯು ತನ್ನ ಮಾವನ ಮಾತನ್ನು ಕೇಳಿ ಅವನು ಹೇಳಿದ್ದನ್ನೆಲ್ಲಾ ಮಾಡಿದನು.

18:25b.EXO.018.025 ಮೋಶೆಯು ಇಸ್ರಾಯೇಲ್ಯರಲ್ಲಿ ಸಮರ್ಥರನ್ನು ಆರಿಸಿಕೊಂಡು ಜನರ ಮೇಲೆ ಮುಖ್ಯಸ್ಥರನ್ನಾಗಿ ಮಾಡಿ ಸಾವಿರ ಜನರ ಮೇಲೆಯೂ ನೂರು ಜನರ ಮೇಲೆಯೂ ಐವತ್ತು ಜನರ ಮೇಲೆಯೂ ಹತ್ತು ಜನರ ಮೇಲೆಯೂ ಅಧಿಕಾರಿಗಳನ್ನಾಗಿ ನೇಮಿಸಿದನು.

18:26b.EXO.018.026 ಇವರು ಎಲ್ಲಾ ಕಾಲಗಳಲ್ಲಿ ಜನರಿಗೆ ನ್ಯಾಯತೀರಿಸಿ ಕಠಿಣ ವ್ಯಾಜ್ಯ ಗಳನ್ನು ಮೋಶೆಯ ಬಳಿಗೆ ತಂದು ಸಣ್ಣ ವ್ಯಾಜ್ಯಗಳನ್ನು ತಾವೇ ತೀರಿಸಿದರು.ತರುವಾಯ ಮೋಶೆಯು ತನ್ನ ಮಾವನನ್ನು ಕಳುಹಿಸಲು ಅವನು ಸ್ವದೇಶಕ್ಕೆ ಹೋದನು.

18:27b.EXO.018.027 ತರುವಾಯ ಮೋಶೆಯು ತನ್ನ ಮಾವನನ್ನು ಕಳುಹಿಸಲು ಅವನು ಸ್ವದೇಶಕ್ಕೆ ಹೋದನು.

19

19:1b.EXO.019.001 ಇಸ್ರಾಯೇಲ್‌ ಮಕ್ಕಳು ಐಗುಪ್ತವನ್ನು ಬಿಟ್ಟ ಮೂರನೆಯ ತಿಂಗಳಿನ ಅದೇ ದಿನದಲ್ಲಿ ಸೀನಾಯಿ ಅರಣ್ಯಕ್ಕೆ ಬಂದರು.

19:2b.EXO.019.002 ಅವರು ರೆಫೀದೀಮಿ ನಿಂದ ಹೊರಟು ಸೀನಾಯಿ ಮರುಭೂಮಿಗೆ ಬಂದು ಅರಣ್ಯದಲ್ಲಿ ಗುಡಾರಹಾಕಿ ಬೆಟ್ಟಕ್ಕೆದುರಾಗಿ ಇಳಿದು ಕೊಂಡರು.

19:3b.EXO.019.003 ಮೋಶೆಯು ದೇವರ ಸನ್ನಿಧಿಗೆ ಹೋದನು. ಆಗ ಕರ್ತನು ಪರ್ವತದ ಮೇಲಿನಿಂದ ಅವನನ್ನು ಕರೆದು ಅವನಿಗೆ--ನೀನು ಯಾಕೋಬನ ಮನೆತನದವರಾದ ಇಸ್ರಾಯೇಲ್‌ ಮಕ್ಕಳಿಗೆ ಹೀಗೆ ಹೇಳು--

19:4b.EXO.019.004 ನಾನು ಐಗುಪ್ತ್ಯರಿಗೆ ಮಾಡಿದ್ದನ್ನು ನೀವು ನೋಡಿದ್ದೀರಿ; ನಿಮ್ಮನ್ನು ಹದ್ದುಗಳ ರೆಕ್ಕೆಗಳ ಮೇಲೆ ನಾನು ಹೇಗೆ ಹೊತ್ತುಕೊಂಡು ನನ್ನ ಬಳಿಗೆ ಬರಮಾಡಿದೆನೆಂಬದನ್ನೂ ನೀವು ನೋಡಿದ್ದೀರಿ;

19:5b.EXO.019.005 ಆದದರಿಂದ ಈಗ ನೀವು ನನ್ನ ಮಾತನ್ನು ಕೇಳಿ ನನ್ನ ಒಡಂಬಡಿಕೆಯನ್ನು ಕಾಪಾಡಿ ದರೆ, ಸಮಸ್ತ ಜನರಲ್ಲಿ ನೀವು ನನ್ನ ಅಸಮಾನ್ಯವಾದ ಸಂಪತ್ತಾಗಿರುವಿರಿ; ಭೂಮಿಯೆಲ್ಲಾ ನನ್ನದೇ.

19:6b.EXO.019.006 ನೀವು ನನಗೆ ಯಾಜಕ ರಾಜ್ಯವೂ ಪರಿಶುದ್ಧ ಜನಾಂಗವೂ ಆಗಿರುವಿರಿ ಎಂದು ಇಸ್ರಾಯೇಲ್‌ ಮಕ್ಕಳಿಗೆ ಹೇಳ ಬೇಕಾದ ಮಾತುಗಳು ಇವೇ ಅಂದನು.

19:7b.EXO.019.007 ಆಗ ಮೋಶೆಯು ಬಂದು ಜನರ ಹಿರಿಯರನ್ನು ಕರೆದು ಕರ್ತನು ತನಗೆ ಆಜ್ಞಾಪಿಸಿದ ಈ ಮಾತುಗ ಳನ್ನೆಲ್ಲಾ ಅವರ ಮುಂದೆ ಇಟ್ಟನು.

19:8b.EXO.019.008 ಜನರೆಲ್ಲಾ ಏಕವಾಗಿ ಉತ್ತರ ಕೊಟ್ಟು--ಕರ್ತನು ಹೇಳಿದವುಗಳನ್ನೆಲ್ಲಾ ಮಾಡುತ್ತೇವೆ ಎಂದು ಹೇಳಿದರು. ಆಗ ಮೋಶೆಯು ಜನರ ಮಾತುಗಳನ್ನು ಕರ್ತನಿಗೆ ತಿರಿಗಿ ಹೇಳಿದನು.

19:9b.EXO.019.009 ಕರ್ತನು ಮೋಶೆಗೆ--ಇಗೋ, ನಾನು ನಿನ್ನ ಸಂಗಡ ಮಾತನಾಡುವದನ್ನು ಜನರು ಕೇಳುವ ಹಾಗೆಯೂ ಅವರು ಸದಾಕಾಲ ನಿನ್ನನ್ನು ನಂಬುವಂತೆಯೂ ಮಂದ ವಾದ ಮೇಘದಲ್ಲಿ ನಾನು ನಿನ್ನ ಬಳಿಗೆ ಬರುತ್ತೇನೆ ಅಂದನು. ಮೋಶೆಯು ಜನರ ಮಾತುಗಳನ್ನು ಕರ್ತನಿಗೆ ತಿಳಿಸಿದನು.

19:10b.EXO.019.010 ಆಗ ಕರ್ತನು ಮೋಶೆಗೆ--ಜನರ ಬಳಿಗೆ ಹೋಗಿ ಈ ಹೊತ್ತೂ ನಾಳೆಯೂ ಅವರನ್ನು ಶುದ್ಧಮಾಡು, ಅವರು ತಮ್ಮ ವಸ್ತ್ರಗಳನ್ನು ತೊಳಕೊಳ್ಳಲಿ.

19:11b.EXO.019.011 ಮೂರ ನೆಯ ದಿನದಲ್ಲಿ ಅವರು ಸಿದ್ಧವಾಗಿರಲಿ; ಯಾಕಂದರೆ ಮೂರನೆಯ ದಿನದಲ್ಲಿ ಕರ್ತನು ಸಮಸ್ತ ಜನರ ಕಣ್ಣೆದುರಿನಲ್ಲಿ ಸೀನಾಯಿ ಪರ್ವತಕ್ಕೆ ಇಳಿದು ಬರುವನು.

19:12b.EXO.019.012 ಜನರಿಗೋಸ್ಕರ ಸುತ್ತಲೂ ಮೇರೆಗಳನ್ನು ಮಾಡಿಸಿ ಅವರಿಗೆ--ನೀವು ಬೆಟ್ಟವನ್ನು ಏರದಂತೆಯೂ ಅದರ ಮೇರೆಯನ್ನು ಮುಟ್ಟದಂತೆಯೂ ಜಾಗ್ರತೆಯಾಗಿರ್ರಿ; ಬೆಟ್ಟವನ್ನು ಮುಟ್ಟಿದವರೆಲ್ಲಾ ಖಂಡಿತವಾಗಿ ಸಾಯ ಬೇಕು.

19:13b.EXO.019.013 ಯಾವನಾದರೂ ಅದನ್ನು ಮುಟ್ಟಬಾರದು; ಮುಟ್ಟಿದ ಪಶುವನ್ನಾಗಲಿ ಮನುಷ್ಯನನ್ನಾಗಲಿ ನಿಶ್ಚಯ ವಾಗಿ ಕಲ್ಲೆಸೆದು ಕೊಲ್ಲಬೇಕು. ಇಲ್ಲವೆ ಈಟಿಯಿಂದ ತಿವಿಯಬೇಕು. ದೀರ್ಘವಾಗಿ ತುತೂರಿಯು ಊದುವ ಸಮಯದಲ್ಲಿ ಅವರು ಬೆಟ್ಟದ ಮೇಲೆ ಬರಬೇಕು ಅಂದನು.

19:14b.EXO.019.014 ಆಗ ಮೋಶೆಯು ಬೆಟ್ಟದಿಂದಿಳಿದು ಜನರನ್ನು ಶುದ್ಧಿಮಾಡಿದನು. ಅವರು ತಮ್ಮ ವಸ್ತ್ರಗಳನ್ನು ತೊಳೆದು ಕೊಂಡರು.

19:15b.EXO.019.015 ಅವನು ಜನರಿಗೆ--ಮೂರನೆಯ ದಿನ ಕ್ಕಾಗಿ ಸಿದ್ಧರಾಗಿರ್ರಿ, ನೀವು ನಿಮ್ಮ ಹೆಂಡತಿಯರ ಬಳಿಗೆ ಸೇರದೆ ಇರ್ರಿ ಅಂದನು.

19:16b.EXO.019.016 ಮೂರನೆಯ ದಿನದಲ್ಲಿ ಉದಯವಾದಾಗ ಬೆಟ್ಟದ ಮೇಲೆ ಗುಡುಗುಗಳೂ ಮಿಂಚುಗಳೂ ಮಂದವಾದ ಮೇಘವೂ ಉಂಟಾಗಿ ಬಹು ಬಲವಾದ ತುತೂರಿಯ ಶಬ್ದವಾಯಿತು. ಪಾಳೆಯದಲ್ಲಿದ್ದ ಜನರೆಲ್ಲರೂ ನಡುಗಿ ದರು.

19:17b.EXO.019.017 ಆಗ ಮೋಶೆಯು ಜನರನ್ನು ಪಾಳೆಯ ದೊಳಗಿಂದ ದೇವರನ್ನು ಸಂಧಿಸುವದಕ್ಕೆ ಹೊರಗೆ ಬರಮಾಡಿದನು; ಆಗ ಅವರು ಬೆಟ್ಟದ ಕೆಳಗೆ ನಿಂತು ಕೊಂಡರು.

19:18b.EXO.019.018 ಕರ್ತನು ಅಗ್ನಿಯೊಳಗೆ ಸೀನಾಯಿ ಬೆಟ್ಟದ ಮೇಲೆ ಇಳಿದದ್ದರಿಂದ ಆ ಬೆಟ್ಟದಲ್ಲೆಲ್ಲಾ ಹೊಗೆ ಹಾಯುತ್ತಿತ್ತು. ಅದರ ಹೊಗೆಯು ಆವಿಗೆಯ ಹೊಗೆ ಯಂತೆ ಏರಿ ಬರುತ್ತಾ ಇತ್ತು. ಬೆಟ್ಟವೆಲ್ಲಾ ಬಹಳವಾಗಿ ಕಂಪಿಸಿತು.

19:19b.EXO.019.019 ತುತೂರಿಯ ಶಬ್ದವು ಬರಬರುತ್ತಾ ಹೆಚ್ಚಾಗುತಿತ್ತು. ಮೋಶೆಯು ಮಾತನಾಡಿದಾಗ ದೇವರು ಅವನಿಗೆ ತನ್ನ ಸ್ವರದಿಂದ ಉತ್ತರಕೊಟ್ಟನು.

19:20b.EXO.019.020 ಆಗ ಕರ್ತನು ಸೀನಾಯಿ ಬೆಟ್ಟದ ತುದಿಗೆ ಇಳಿದು ಬಂದು ಮೋಶೆಯನ್ನು ತನ್ನ ಬಳಿಗೆ ಕರೆದನು, ಮೋಶೆಯು ಮೇಲೆ ಹೋದನು.

19:21b.EXO.019.021 ಕರ್ತನು ಮೋಶೆಗೆ--ನೀನು ಇಳಿದು ಹೋಗಿ ಜನರನ್ನು ಎಚ್ಚರಿಸಬೇಕು. ಅವರು ಕರ್ತನನ್ನು ನೋಡುವದಕ್ಕಾಗಿ ಮುಂದೆ ಬಂದು ಅವರಲ್ಲಿ ಬಹಳ ಜನರು ಸತ್ತಾರು.

19:22b.EXO.019.022 ಕರ್ತನ ಸವಿಾಪಕ್ಕೆ ಬರುವ ಯಾಜಕರು ಸಹ ಕರ್ತನು ಅವರನ್ನು ಸಾಯಿಸದಂತೆ ಅವರು ತಮ್ಮನ್ನು ಶುದ್ಧಮಾಡಿಕೊಳ್ಳಲಿ ಅಂದನು.

19:23b.EXO.019.023 ಮೋಶೆಯು ಕರ್ತನಿಗೆ--ಜನರು ಸೀನಾಯಿ ಬೆಟ್ಟವನ್ನು ಏರಲಾರರು. ಬೆಟ್ಟಕ್ಕೆ ಮೇರೆಗಳನ್ನು ಹಾಕಿ ಅದನ್ನು ಶುದ್ಧಮಾಡೆಂದು ನೀನೇ ನಮ್ಮನ್ನು ಎಚ್ಚರಿಸಿದ್ದೀ ಅಂದನು.

19:24b.EXO.019.024 ಆಗ ಕರ್ತನು ಅವನಿಗೆ--ನೀನು ಇಳಿದು ಹೋಗಿ ಆರೋನ ನನ್ನು ಕರಕೊಂಡು ಇಲ್ಲಿಗೆ ಬಾ. ಆದರೆ ಕರ್ತನು ಅವರನ್ನು ಸಾಯಿಸದಂತೆ ಯಾಜಕರೂ ಜನರೂ ಮುಂದೆ ಕರ್ತನ ಬಳಿಗೆ ಬಾರದೆ ಇರಲಿ ಅಂದನು.ಹೀಗೆ ಮೋಶೆಯು ಜನರ ಬಳಿಗೆ ಇಳಿದುಹೋಗಿ ಅವರೊಂದಿಗೆ ಮಾತನಾಡಿದನು.

19:25b.EXO.019.025 ಹೀಗೆ ಮೋಶೆಯು ಜನರ ಬಳಿಗೆ ಇಳಿದುಹೋಗಿ ಅವರೊಂದಿಗೆ ಮಾತನಾಡಿದನು.

20

20:1b.EXO.020.001 ದೇವರು ಈ ಎಲ್ಲಾ ವಾಕ್ಯಗಳನ್ನು ಹೇಳಿದನು. ಅವು ಯಾವವಂದರೆ--

20:2b.EXO.020.002 ನಿನ್ನನ್ನು ಐಗುಪ್ತದೇಶದಿಂದಲೂ ದಾಸತ್ವದ ಮನೆಯೊಳ ಗಿಂದಲೂ ಹೊರಗೆ ತಂದ ನಿನ್ನ ದೇವರಾದ ಕರ್ತನು ನಾನೇ.

20:3b.EXO.020.003 ನನ್ನ ಮುಂದೆ ನಿನಗೆ ಬೇರೆ ದೇವರುಗಳು ಇರಬಾರದು.

20:4b.EXO.020.004 ನಿನಗೆ ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಭೂಮಿಯ ಕೆಳಗಿರುವ ನೀರುಗಳಲ್ಲಾಗಲಿ ಯಾವದರ ವಿಗ್ರಹವನ್ನಾಗಲಿ ರೂಪವನ್ನಾಗಲಿ ನೀನು ಮಾಡಿಕೊಳ್ಳ ಬಾರದು.

20:5b.EXO.020.005 ನೀನು ಅವುಗಳಿಗೆ ಅಡ್ಡಬೀಳಬಾರದು, ಸೇವಿಸಲೂ ಬಾರದು. ನಿನ್ನ ದೇವರಾದ ಕರ್ತನಾಗಿರುವ ನಾನು ರೋಷವುಳ್ಳ ದೇವರಾಗಿದ್ದೇನೆ. ನನ್ನನ್ನು ಹಗೆ ಮಾಡುವ ತಂದೆಗಳ ಅಪರಾಧವನ್ನು ಮಕ್ಕಳ ಮೇಲೆ ಯೂ ಮೂರನೆಯ ನಾಲ್ಕನೆಯ ತಲೆಗಳ ವರೆಗೂ ಬರಮಾಡುವೆನು.

20:6b.EXO.020.006 ನನ್ನನ್ನು ಪ್ರೀತಿಮಾಡಿ ನನ್ನ ಆಜ್ಞೆ ಗಳನ್ನು ಕೈಕೊಳ್ಳುವವರಿಗೆ ಸಾವಿರ ತಲೆಗಳ ವರೆಗೆ ದಯೆತೋರಿಸುವೆನು.

20:7b.EXO.020.007 ನಿನ್ನ ದೇವರಾದ ಕರ್ತನ ಹೆಸರನ್ನು ವ್ಯರ್ಥವಾಗಿ ಎತ್ತಬಾರದು. ಕರ್ತನು ತನ್ನ ಹೆಸರನ್ನು ವ್ಯರ್ಥವಾಗಿ ಎತ್ತುವವನನ್ನು ನಿರ್ದೋಷಿ ಯೆಂದು ಎಣಿಸುವದಿಲ್ಲ.

20:8b.EXO.020.008 ಸಬ್ಬತ್‌ ದಿನವನ್ನು ಪರಿಶುದ್ಧವಾಗಿ ಇರುವಂತೆ ಜ್ಞಾಪಕದಲ್ಲಿಟ್ಟುಕೋ.

20:9b.EXO.020.009 ನೀನು ಆರು ದಿನಗಳು ದುಡಿದು ನಿನ್ನ ಕೆಲಸಗಳನ್ನೆಲ್ಲಾ ಮಾಡಿಕೋ.

20:10b.EXO.020.010 ಆದರೆ ಏಳನೆಯ ದಿನವು ನಿನ್ನ ದೇವರಾದ ಕರ್ತನ ಸಬ್ಬತ್‌ ಆಗಿದೆ. ಅದರಲ್ಲಿ ನೀನಾಗಲಿ ನಿನ್ನ ಮಗನಾಗಲಿ ಮಗಳಾ ಗಲಿ ದಾಸನಾಗಲಿ ದಾಸಿಯಾಗಲಿ ಪಶುಗಳಾಗಲಿ ಬಾಗಿಲ ಬಳಿಯಲ್ಲಿರುವ ಪ್ರವಾಸಿಯಾಗಲಿ ಯಾವ ಕೆಲಸವನ್ನೂ ಮಾಡಬಾರದು.

20:11b.EXO.020.011 ಆರು ದಿನಗಳಲ್ಲಿ ಕರ್ತನು ಆಕಾಶವನ್ನೂ ಭೂಮಿಯನ್ನೂ ಸಮುದ್ರ ವನ್ನೂ ಅವುಗಳಲ್ಲಿ ಇರುವವುಗಳೆಲ್ಲವನ್ನೂ ಉಂಟು ಮಾಡಿ ಏಳೆನೆಯ ದಿನದಲ್ಲಿ ವಿಶ್ರಮಿಸಿಕೊಂಡನು. ಆದದರಿಂದ ಕರ್ತನು ಸಬ್ಬತ್‌ ದಿನವನ್ನು ಆಶೀರ್ವದಿಸಿ ಅದನ್ನು ಪರಿಶುದ್ಧಮಾಡಿದನು.

20:12b.EXO.020.012 ನಿನ್ನ ಕರ್ತನಾದ ದೇವರು ನಿನಗೆ ಕೊಡುವ ದೇಶದಲ್ಲಿ ನಿನ್ನ ದಿವಸಗಳು ಹೆಚ್ಚಾಗುವಂತೆ ನಿನ್ನ ತಂದೆ ತಾಯಿಗಳನ್ನು ಸನ್ಮಾನಿಸು.

20:13b.EXO.020.013 ಕೊಲೆ ಮಾಡಬಾರದು.

20:14b.EXO.020.014 ವ್ಯಭಿಚಾರ ಮಾಡಬಾರದು.

20:15b.EXO.020.015 ಕದಿಯಬಾರದು.

20:16b.EXO.020.016 ನಿನ್ನ ನೆರೆಯವನಿಗೆ ವಿರೋಧವಾಗಿ ಸುಳ್ಳು ಸಾಕ್ಷಿ ಹೇಳಬಾರದು.

20:17b.EXO.020.017 ನೀನು ನಿನ್ನ ನೆರೆಯವನ ಮನೆಯನ್ನು ಆಶಿಸ ಬಾರದು, ನಿನ್ನ ನೆರೆಯವನ ಹೆಂಡತಿಯನ್ನೂ ಆಶಿಸ ಬಾರದು; ಅವನ ದಾಸನನ್ನಾಗಲಿ ದಾಸಿಯನ್ನಾಗಲಿ ಎತ್ತನ್ನಾಗಲಿ ಕತ್ತೆಯನ್ನಾಗಲಿ ನಿನ್ನ ನೆರೆಯವನಿಗೆ ಇರುವ ಯಾವದನ್ನೂ ಆಶಿಸಬಾರದು ಎಂದು ಹೇಳಿದನು.

20:18b.EXO.020.018 ಜನರೆಲ್ಲಾ ಗುಡುಗುಗಳನ್ನೂ ಮಿಂಚುಗಳನ್ನೂ ತುತೂರಿಯ ಶಬ್ದವನ್ನೂ ಬೆಟ್ಟವು ಹೊಗೆ ಹಾಯು ವದನ್ನೂ ನೋಡಿದರು; ಜನರು ಅದನ್ನು ನೋಡಿ ದೂರ ಹೋಗಿ ನಿಂತುಕೊಂಡರು.

20:19b.EXO.020.019 ಅವರು ಮೋಶೆಗೆ--ನೀನೇ ನಮ್ಮ ಸಂಗಡ ಮಾತನಾಡು, ಆಗ ನಾವು ಕೇಳುವೆವು. ನಾವು ಸಾಯದ ಹಾಗೆ ದೇವರು ನಮ್ಮ ಸಂಗಡ ಮಾತನಾಡದಿರಲಿ ಅಂದರು.

20:20b.EXO.020.020 ಆಗ ಮೋಶೆಯು ಜನರಿಗೆ--ನೀವು ಭಯಪಡ ಬೇಡಿರಿ, ನಿಮ್ಮನ್ನು ಪರೀಕ್ಷಿಸುವದಕ್ಕೂ ನೀವು ಪಾಪ ಮಾಡದಂತೆ ಆತನ ಭಯವು ನಿಮಗಿರುವದಕ್ಕೂ ದೇವರು ಬಂದಿದ್ದಾನೆ ಅಂದನು.

20:21b.EXO.020.021 ಆಗ ಜನರು ದೂರದಲ್ಲಿ ನಿಂತರು. ಮೋಶೆಯು ದೇವರಿದ್ದ ಕಾರ್ಗತ್ತಲೆಯ ಹತ್ತಿರ ಬಂದನು.

20:22b.EXO.020.022 ಕರ್ತನು ಮೋಶೆಗೆ--ನೀನು ಇಸ್ರಾಯೇಲ್‌ ಮಕ್ಕಳಿಗೆ ಹೀಗೆ ಹೇಳಬೇಕು--ನಾನು ಆಕಾಶದಿಂದ ನಿಮ್ಮ ಸಂಗಡ ಮಾತನಾಡಿದ್ದನ್ನು ನೀವು ನೋಡಿದ್ದೀರಿ.

20:23b.EXO.020.023 ನನ್ನ ಹೊರತಾಗಿ ಬೆಳ್ಳಿ ಬಂಗಾರದ ದೇವರುಗಳನ್ನೂ ನೀವು ಮಾಡಿಕೊಳ್ಳಬಾರದು.

20:24b.EXO.020.024 ನನ್ನ ಯಜ್ಞವೇದಿಯನ್ನು ಮಣ್ಣಿನಿಂದ ಮಾಡ ಬೇಕು. ಅದರ ಮೇಲೆ ನಿನ್ನ ದಹನಬಲಿಗಳನ್ನೂ ಸಮಾಧಾನದ ಬಲಿಗಳನ್ನೂ ಕುರಿಗಳನ್ನೂ ಎತ್ತುಗಳನ್ನೂ ಅರ್ಪಿಸಬೇಕು; ನನ್ನ ಹೆಸರನ್ನು ಜ್ಞಾಪಕಮಾಡುವ ಎಲ್ಲಾ ಸ್ಥಳಗಳಲ್ಲಿ ನಾನು ನಿಮ್ಮ ಬಳಿಗೆ ಬಂದು ನಿಮ್ಮನ್ನು ಆಶೀರ್ವದಿಸುವೆನು.

20:25b.EXO.020.025 ನೀನು ನನಗೆ ಯಜ್ಞವೇದಿ ಯನ್ನು ಕಲ್ಲಿನಿಂದ ಮಾಡಿದರೆ ಅದನ್ನು ಕೆತ್ತಿದ ಕಲ್ಲಿನಿಂದ ಕಟ್ಟಬಾರದು. ಉಳಿಯನ್ನು ಅದರ ಮೇಲೆ ಎತ್ತಿದರೆ ನೀನು ಅದನ್ನು ಅಪವಿತ್ರ ಮಾಡಿದವನಾಗಿದ್ದೀ.ಇಲ್ಲವೆ ನೀನು ನನ್ನ ಯಜ್ಞವೇದಿಯ ಮೇಲೆ ನಿನ್ನ ಬೆತ್ತಲೆಯು ಕಾಣುವಂತೆ ಅದರ ಮೆಟ್ಟಲುಗಳನ್ನು ಹತ್ತಬಾರದು ಎಂದು ಹೇಳಿದನು.

20:26b.EXO.020.026 ಇಲ್ಲವೆ ನೀನು ನನ್ನ ಯಜ್ಞವೇದಿಯ ಮೇಲೆ ನಿನ್ನ ಬೆತ್ತಲೆಯು ಕಾಣುವಂತೆ ಅದರ ಮೆಟ್ಟಲುಗಳನ್ನು ಹತ್ತಬಾರದು ಎಂದು ಹೇಳಿದನು.

21

21:1b.EXO.021.001 ಈಗ ಅವರ ಮುಂದೆ ನೀನು ಇಡತಕ್ಕನ್ಯಾಯವಿಧಿಗಳು ಇವೇ.

21:2b.EXO.021.002 ನೀನು ಇಬ್ರಿಯ ದಾಸನನ್ನು ಕೊಂಡುಕೊಂಡರೆ ಅವನು ಆರು ವರುಷ ನಿನಗೆ ಸೇವೆಮಾಡಬೇಕು; ಏಳನೆಯ ವರುಷದಲ್ಲಿ ಏನೂ ಕೊಡದೆ ಬಿಡುಗಡೆಯಾಗಿ ಅವನು ಹೋಗಲಿ.

21:3b.EXO.021.003 ಅವನು ಒಬ್ಬನಾಗಿ ಬಂದಿದ್ದರೆ ಒಬ್ಬನಾಗಿಯೇ ಹೋಗ ಬೇಕು. ಅವನು ಮದುವೆಯಾದವನಾಗಿದ್ದರೆ ಅವನ ಹೆಂಡತಿಯು ಅವನ ಸಂಗಡ ಹೋಗಬೇಕು.

21:4b.EXO.021.004 ಅವನ ಯಜಮಾನನು ಅವನಿಗೆ ಕೊಟ್ಟ ಹೆಂಡತಿಯು ಅವನಿಗೆ ಕುಮಾರರನ್ನೂ ಕುಮಾರ್ತೆಯರನ್ನೂ ಹೆತ್ತಿದ್ದರೆ ಹೆಂಡತಿಯೂ ಅವಳ ಮಕ್ಕಳೂ ಯಜಮಾನನವ ರಾಗಿರಬೇಕು. ಅವನು ಒಬ್ಬನಾಗಿಯೇ ಹೋಗಬೇಕು.

21:5b.EXO.021.005 ಆದರೆ ದಾಸನು--ನಾನು ನನ್ನ ಯಜಮಾನನನ್ನೂ ನನ್ನ ಹೆಂಡತಿಯನ್ನೂ ನನ್ನ ಮಕ್ಕಳನ್ನೂ ಪ್ರೀತಿ ಮಾಡು ತ್ತೇನೆ. ಆದದರಿಂದ ನಾನು ಬಿಡುಗಡೆಯಾಗಿ ಹೋಗು ವದಕ್ಕೆ ಮನಸ್ಸಿಲ್ಲ ಎಂದು ಸ್ಪಷ್ಟವಾಗಿ ಹೇಳಿದರೆ

21:6b.EXO.021.006 ಅವನ ಯಜಮಾನನು ಅವನನ್ನು ನ್ಯಾಯಾಧೀಶರ ಬಳಿಗೆ ಕರಕೊಂಡು ಬಂದು ಬಾಗಲಿನ ಬಳಿಗಾದರೂ ಅದರ ಕಂಬದ ಬಳಿಗಾದರೂ ಬರಮಾಡಿ ಅವನ ಯಜಮಾ ನನು ಅವನ ಕಿವಿಯನ್ನು ಸಲಾಕಿಯಿಂದ ಚುಚ್ಚಬೇಕು. ಆಗ ಅವನು ಸದಾಕಾಲಕ್ಕೂ ಅವನ ಸೇವೆಮಾಡಬೇಕು.

21:7b.EXO.021.007 ಒಬ್ಬನು ತನ್ನ ಮಗಳನ್ನು ದಾಸಿಯನ್ನಾಗಿ ಮಾರಿದರೆ ದಾಸರು ಹೋಗುವಂತೆ ಆಕೆಯು ಹೋಗಬಾರದು.

21:8b.EXO.021.008 ಅವಳನ್ನು ನಿಶ್ಚಯ ಮಾಡಿಕೊಂಡ ಯಜಮಾನನಿಗೆ ಒಂದು ವೇಳೆ ಅವಳು ಮೆಚ್ಚಿಕೆಯಾಗದೆ ಹೋದರೆ ಅವಳು ಬಿಡುಗಡೆಯಾಗುವಂತೆ ಮಾಡಲಿ; ಅವನು ಅವಳನ್ನು ವಂಚಿಸಿದ್ದರಿಂದ ಅನ್ಯರಿಗೆ ಅವಳನ್ನು ಮಾರು ವದಕ್ಕೆ ಅವನಿಗೆ ಅಧಿಕಾರವಿಲ್ಲ.

21:9b.EXO.021.009 ಒಂದು ವೇಳೆ ಅವನು ತನ್ನ ಮಗನಿಗೆ ಅವಳನ್ನು ನಿಶ್ಚಯಮಾಡಿದರೆ ಹೆಣ್ಣು ಮಕ್ಕಳ ನ್ಯಾಯದ ಪ್ರಕಾರ ಅವಳಿಗೆ ಮಾಡಬೇಕು.

21:10b.EXO.021.010 ಒಂದು ವೇಳೆ ಅವನು ತನಗೆ ಇನ್ನೊಬ್ಬ ಹೆಂಡತಿ ಯನ್ನು ತಕ್ಕೊಂಡರೆ ಅವಳ ಅನ್ನ ವಸ್ತ್ರ ಸಹವಾಸಗಳನ್ನು ಕಡಿಮೆಮಾಡಬಾರದು.

21:11b.EXO.021.011 ಈ ಮೂರನ್ನು ಅವಳಿಗೆ ಮಾಡದೆ ಹೋದರೆ ಅವಳು ಹಣಕೊಡದೆ ಸ್ವತಂತ್ರ ಳಾಗಿ ಹೋಗಬಹುದು.

21:12b.EXO.021.012 ಮನುಷ್ಯನನ್ನು ಸಾಯುವಂತೆ ಹೊಡೆದವನು ಖಂಡಿತವಾಗಿ ಸಾಯಬೇಕು.

21:13b.EXO.021.013 ಆದರೆ ಅವನು ಹೊಂಚಿ ನೋಡದೆ ಇದ್ದು ದೇವರು ಅವನ ಕೈಗೆ ಅವನನ್ನು ಒಪ್ಪಿಸಿದ್ದಾಗಿದ್ದರೆ ಅವನು ಓಡಿಹೋಗುವಂತೆ ಅವನಿಗೆ ಒಂದು ಸ್ಥಳವನ್ನು ನಿನಗೆ ನಾನು ನೇಮಿಸುವೆನು.

21:14b.EXO.021.014 ಒಬ್ಬನು ತನ್ನ ನೆರೆಯವನನ್ನು ಕೊಲ್ಲಬೇಕೆಂಬ ಉದ್ದೇಶ ಇಟ್ಟುಕೊಂಡು ಮೋಸತನದಿಂದ ಕೊಂದರೆ ಅವನು ಸಾಯುವಂತೆ ನೀನು ಅವನನ್ನು ನನ್ನ ಯಜ್ಞ ವೇದಿಯಿಂದ ತೆಗೆಯಬೇಕು.

21:15b.EXO.021.015 ತಂದೆ ತಾಯಿಗಳನ್ನು ಹೊಡೆಯುವವನು ಖಂಡಿತವಾಗಿ ಸಾಯಬೇಕು.

21:16b.EXO.021.016 ಮನುಷ್ಯನನ್ನು ಕದ್ದವನಿಗೆ ಅವನನ್ನು ಮಾರಿದರೂ ತನ್ನಲ್ಲಿಯೇ ಇಟ್ಟುಕೊಂಡರೂ ಅವನು ಖಂಡಿತವಾಗಿ ಸಾಯಬೇಕು.

21:17b.EXO.021.017 ತಂದೆಗಾದರೂ ತಾಯಿಗಾದರೂ ಶಾಪಕೊಟ್ಟ ವನು ಖಂಡಿತವಾಗಿ ಸಾಯಬೇಕು.

21:18b.EXO.021.018 ಇಬ್ಬರು ಜಗಳವಾಡುವಾಗ ಒಬ್ಬನು ಮತ್ತೊಬ್ಬ ನನ್ನು ಕಲ್ಲಿನಿಂದಾಗಲಿ ಮುಷ್ಟಿಯಿಂದಾಗಲಿ ಹೊಡೆದ ದ್ದರಿಂದ ಅವನು ಸಾಯದೆ ಹಾಸಿಗೆಯಲ್ಲಿ ಬಿದ್ದರೆ

21:19b.EXO.021.019 ಅವನು ಎದ್ದು ಕೋಲೂರಿಕೊಂಡು ತಿರುಗಾಡು ವಾಗ ಅವನಿಗೆ ಹೊಡೆದವನು ಅಪರಾಧವಿಲ್ಲದೆ ಹೋಗಬೇಕು. ಅವನ ನಷ್ಟವಾದ ಸಮಯಕ್ಕಾಗಿ ಮಾತ್ರ ಅವನಿಗೆ ಹಣ ಕೊಡಬೇಕು. ಅವನನ್ನು ಪೂರ್ಣ ಸ್ವಸ್ಥಮಾಡಿಸಬೇಕು.

21:20b.EXO.021.020 ಒಬ್ಬನು ದಾಸನನ್ನಾಗಲಿ ದಾಸಿಯನ್ನಾಗಲಿ ಸಾಯು ವಂತೆ ತನ್ನ ಕೋಲಿನಿಂದ ಹೊಡೆದರೆ ಅವನಿಗೆ ಖಂಡಿತವಾಗಿ ಶಿಕ್ಷೆಯಾಗಬೇಕು.

21:21b.EXO.021.021 ಆದರೂ ಅವನು ಒಂದೆರೆಡು ದಿನಗಳು ಉಳಿದರೆ ಶಿಕ್ಷೆಯಾಗಬಾರದು. ಅವನು ಅವನ ಸೊತ್ತು.

21:22b.EXO.021.022 ಮನುಷ್ಯರು ಜಗಳವಾಡುತ್ತಿರಲಾಗಿ ಗರ್ಭಿಣಿ ಯಾದ ಸ್ತ್ರೀಗೆ ಏಟು ತಗಲಿದದರಿಂದ ಅವಳಿಗೆ ಗರ್ಭ ಸ್ರಾವವೇ ಹೊರತಾಗಿ ಬೇರೆ ಯಾವ ಹಾನಿಯೂ ಆಗದೆ ಹೋದರೆ ಸ್ತ್ರೀಯ ಗಂಡನು ನ್ಯಾಯಾಧಿಪತಿಗಳ ಸಮ್ಮತಿಯಿಂದ ಎಷ್ಟು ಹಣವನ್ನು ಗೊತ್ತು ಮಾಡು ತ್ತಾನೋ ಹೊಡೆದವನು ಅಷ್ಟನ್ನು ಕೊಡಬೇಕು.

21:23b.EXO.021.023 ನಷ್ಟ ವಾದ ಪಕ್ಷದಲ್ಲಿ ಪ್ರಾಣಕ್ಕೆ ಪ್ರಾಣವನ್ನೂ

21:24b.EXO.021.024 ಕಣ್ಣಿಗೆ ಕಣ್ಣನ್ನೂ ಹಲ್ಲಿಗೆ ಹಲ್ಲನ್ನೂ ಕೈಗೆ ಕೈಯನ್ನೂ ಕಾಲಿಗೆ ಕಾಲನ್ನೂ

21:25b.EXO.021.025 ಬರೆಗೆ ಬರೆ, ಗಾಯಕ್ಕೆ ಗಾಯ, ಏಟಿಗೆ ಏಟು, ಈ ಮೇರೆಗೆ ಪ್ರತಿದಂಡನೆಯಾಗಬೇಕು.

21:26b.EXO.021.026 ಇದಲ್ಲದೆ ಒಬ್ಬನು ದಾಸನ ಕಣ್ಣನ್ನು ಇಲ್ಲವೆ ದಾಸಿಯ ಕಣ್ಣನ್ನು ಹೊಡೆದು ನಷ್ಟಪಡಿಸಿದರೆ ಆ ಕಣ್ಣಿಗೋಸ್ಕರ ಅವನನ್ನು ಬಿಡುಗಡೆಮಾಡಿ ಅವನು ಕಳುಹಿಸಲಿ.

21:27b.EXO.021.027 ಒಬ್ಬನು ದಾಸನ ಹಲ್ಲನ್ನು ಇಲ್ಲವೆ ದಾಸಿಯ ಹಲ್ಲನ್ನು ಉದುರಿಸಿದರೆ ಹಲ್ಲಿಗೋಸ್ಕರ ಅವನನ್ನು ಬಿಡುಗಡೆಮಾಡಿ ಕಳುಹಿಸಲಿ.

21:28b.EXO.021.028 ಇದಲ್ಲದೆ ಯಾವದಾದರೂ ಒಂದು ಎತ್ತು ಪುರುಷನನ್ನಾಗಲಿ ಸ್ತ್ರೀಯನ್ನಾಗಲಿ ಹಾದು ಕೊಂದರೆ ಆ ಎತ್ತನ್ನು ಖಂಡಿತವಾಗಿ ಕಲ್ಲೆಸೆದು ಕೊಲ್ಲಬೇಕು ಅದರ ಮಾಂಸವನ್ನು ತಿನ್ನಬಾರದು. ಆದರೆ ಎತ್ತಿನ ಯಜಮಾನನು ನಿರಪರಾಧಿಯಾಗಿರಬೇಕು.

21:29b.EXO.021.029 ಆದರೆ ಆ ಎತ್ತು ಮೊದಲಿನಿಂದ ಹಾಯುವಂಥದ್ದೆಂದು ಯಜಮಾನನಿಗೆ ತಿಳಿದಿದ್ದರೂ ಅವನು ಅದನ್ನು ಭದ್ರಮಾಡದೆ ಇದ್ದದರಿಂದ ಅದು ಪುರುಷನನ್ನಾಗಲಿ ಸ್ತ್ರೀಯನ್ನಾಗಲಿ ಕೊಂದುಹಾಕಿದರೆ ಎತ್ತನ್ನು ಕಲ್ಲೆಸೆದು ಕೊಲ್ಲಬೇಕು; ಅದರ ಯಜಮಾನನೂ ಸಾಯಬೇಕು.

21:30b.EXO.021.030 ಒಂದು ವೇಳೆ ಅವನಿಗೆ ಪ್ರಾಯಶ್ಚಿತ್ತವನ್ನು ನೇಮಿ ಸಿದರೆ ಅವನು ತನಗೆ ನೇಮಿಸಿದ್ದನ್ನು ತನ್ನ ಪ್ರಾಣ ವಿಮೋಚನೆಗಾಗಿ ಕೊಡಲಿ.

21:31b.EXO.021.031 ಅದು ಮಗನನ್ನಾಗಲಿ ಮಗಳನ್ನಾಗಲಿ ತಿವಿದರೂ ಈ ನ್ಯಾಯತೀರ್ಪಿನ ಪ್ರಕಾರ ಅದರ ಯಜಮಾನನಿಗೆ ಮಾಡಬೇಕು.

21:32b.EXO.021.032 ದಾಸನನ್ನಾದರೂ ದಾಸಿಯನ್ನಾದರೂ ಎತ್ತು ತಿವಿ ದರೆ ಅವರ ಯಜಮಾನನಿಗೆ ಮೂವತ್ತು ಶೆಕೆಲ್‌ ಬೆಳ್ಳಿಯನ್ನು ಕೊಟ್ಟು ಎತ್ತನ್ನು ಕಲ್ಲೆಸೆದು ಕೊಲ್ಲಬೇಕು.

21:33b.EXO.021.033 ಇದಲ್ಲದೆ ಗುಂಡಿಯನ್ನು ಅಗೆದವನು ಅದನ್ನು ಮುಚ್ಚದೆ ಇದ್ದದ್ದರಿಂದ ಎತ್ತಾದರೂ ಕತ್ತೆಯಾದರೂ ಗುಂಡಿಯಲ್ಲಿ ಬಿದ್ದರೆ

21:34b.EXO.021.034 ಗುಂಡಿಯನ್ನು ಅಗೆದವನು ಕ್ರಯ ಕೊಡಬೇಕು. ಅವುಗಳ ಯಜಮಾನನಿಗೆ ಹಣ ತೀರಿಸಬೇಕು. ಆದರೆ ಸತ್ತ ಪಶುವು ಅವನದಾಗಬೇಕು.

21:35b.EXO.021.035 ಇದಲ್ಲದೆ ಒಬ್ಬನ ಎತ್ತು ಮತ್ತೊಬ್ಬನ ಎತ್ತನ್ನು ಹಾಯ್ದುಕೊಂದರೆ ಜೀವದಿಂದಿರುವ ಎತ್ತನ್ನು ಮಾರಿ ಅದರ ಕ್ರಯವನ್ನು ಪಾಲು ಹಂಚಬೇಕು. ಸತ್ತ ಎತ್ತನ್ನು ಸಹ ಪಾಲು ಹಂಚಬೇಕು.ಇಲ್ಲವೆ ಆ ಎತ್ತು ಮೊದಲಿನಿಂದಲೂ ಹಾಯುವಂಥದ್ದೇ ಎಂದು ತಿಳಿದಿ ದ್ದರೂ ಅದರ ಯಜಮಾನನು ಅದನ್ನು ಭದ್ರಮಾಡದೆ ಹೋಗಿದ್ದರೆ ಎತ್ತಿಗೆ ಎತ್ತನ್ನು ಖಂಡಿತವಾಗಿ ಬದಲು ಕೊಡಬೇಕು. ಆದರೆ ಸತ್ತ ಪಶುವು ಅವನದಾಗಬೇಕು.

21:36b.EXO.021.036 ಇಲ್ಲವೆ ಆ ಎತ್ತು ಮೊದಲಿನಿಂದಲೂ ಹಾಯುವಂಥದ್ದೇ ಎಂದು ತಿಳಿದಿ ದ್ದರೂ ಅದರ ಯಜಮಾನನು ಅದನ್ನು ಭದ್ರಮಾಡದೆ ಹೋಗಿದ್ದರೆ ಎತ್ತಿಗೆ ಎತ್ತನ್ನು ಖಂಡಿತವಾಗಿ ಬದಲು ಕೊಡಬೇಕು. ಆದರೆ ಸತ್ತ ಪಶುವು ಅವನದಾಗಬೇಕು.

22

22:1b.EXO.022.001 ಒಬ್ಬನು ಎತ್ತನ್ನಾಗಲಿ ಕುರಿಯನ್ನಾಗಲಿ ಕದ್ದು ಕೊಯ್ದರೆ ಇಲ್ಲವೆ ಅದನ್ನು ಮಾರಿದರೆ ಅವನು ಒಂದು ಎತ್ತಿಗೆ ಬದಲಾಗಿ ಐದು ಎತ್ತುಗಳನ್ನೂ ಒಂದು ಕುರಿಗೆ ನಾಲ್ಕು ಕುರಿಗಳನ್ನೂ ಕೊಡಬೇಕು.

22:2b.EXO.022.002 ಒಬ್ಬ ಕಳ್ಳನು ಕನ್ನ ಕೊರೆಯುವಾಗ ಸಿಕ್ಕಿದರೆ ಅವನನ್ನು ಹೊಡೆದು ಸಾಯಿಸುವವನ ರಕ್ತಸುರಿಸಬಾರದು.

22:3b.EXO.022.003 ಅವನು ಕಳ್ಳತನ ಮಾಡುವಾಗ ಸೂರ್ಯೋದಯ ವಾದರೆ ಹೊಡೆದವನ ರಕ್ತ ಸುರಿಸಬೇಕು; ಕಳ್ಳನು ಸಿಕ್ಕಿದರೆ ಪೂರ್ಣವಾಗಿ ಬದಲು ಕೊಡಬೇಕು. ಅವನಲ್ಲಿ ಏನೂ ಇಲ್ಲದ ಪಕ್ಷಕ್ಕೆ ಅವನ ಕಳ್ಳತನಕ್ಕಾಗಿ ಅವನು ಮಾರಲ್ಪಡಬೇಕು.

22:4b.EXO.022.004 ಕಳ್ಳತನ ಮಾಡಿದ ಎತ್ತಾಗಲಿ ಕತ್ತೆಯಾಗಲಿ ಕುರಿಯಾಗಲಿ ಕದ್ದವನ ಬಳಿಯಲ್ಲಿ ಜೀವವುಳ್ಳದ್ದಾಗಿ ನಿಜವಾಗಿ ಸಿಕ್ಕಿದರೆ ಅವನು ಎರಡರಷ್ಟು ತಿರಿಗಿ ಕೊಡಬೇಕು.

22:5b.EXO.022.005 ಒಬ್ಬನು ಇನ್ನೊಬ್ಬನ ಹೊಲದಲ್ಲಿ ತನ್ನ ಪಶುಗಳನ್ನು ಬಿಟ್ಟು ಬೆಳೆಯನ್ನೂ ದ್ರಾಕ್ಷೇತೋಟವನ್ನೂ ಮೇಯಿಸಿ ದರೆ ಅವನು ತನ್ನ ಸ್ವಂತ ಹೊಲದ ಉತ್ತಮ ಭಾಗವನ್ನೂ ದ್ರಾಕ್ಷೇತೋಟದಲ್ಲಿ ಉತ್ತಮವಾದದ್ದನ್ನೂ ಬದಲು ಕೊಡಬೇಕು.

22:6b.EXO.022.006 ಬೆಂಕಿ ಹತ್ತಿ ಅದು ಮುಳ್ಳಿನ ಬೇಲಿಗೆ ತಗುಲಿ ಸಿವುಡುಗಳ ಬಣವಿಗಳನ್ನಾಗಲಿ ನಿಂತ ಬೆಳೆಯನ್ನಾಗಲಿ ಹೊಲವನ್ನಾಗಲಿ ಸುಟ್ಟುಬಿಟ್ಟರೆ ಆ ಬೆಂಕಿಯನ್ನು ಹಚ್ಚಿದ ವನು ಖಂಡಿತವಾಗಿ ಬದಲು ಕೊಡಬೇಕು.

22:7b.EXO.022.007 ಒಬ್ಬನು ತನ್ನ ನೆರೆಯವನಿಗೆ ತನ್ನ ಹಣವನ್ನಾಗಲಿ ಸಾಮಾನುಗಳನ್ನಾಗಲಿ ಇಟ್ಟುಕೊಳ್ಳುವದಕ್ಕೆ ಕೊಟ್ಟಾಗ ಅದು ಅವನ ಮನೆಯಿಂದ ಕಳ್ಳತನವಾಗಿ ಆ ಕಳ್ಳನು ಸಿಕ್ಕಿದರೆ ಅವನು ಎರಡರಷ್ಟು ಕೊಡಬೇಕು.

22:8b.EXO.022.008 ಕಳ್ಳನು ಸಿಕ್ಕದೆ ಹೋದರೆ ಮನೆಯ ಯಜಮಾನನು ತನ್ನ ನೆರೆಯವನ ಸಾಮಾನುಗಳನ್ನು ಅವನು ಮುಟ್ಟಲಿಲ್ಲ ವೆಂದು ವಿಚಾರಿಸುವದಕ್ಕೆ ನ್ಯಾಯಾಧಿಪತಿಗಳ ಬಳಿಗೆ ಅವನನ್ನು ಬರಮಾಡಬೇಕು.

22:9b.EXO.022.009 ಎತ್ತು ಕತ್ತೆ ಕುರೀ ವಸ್ತ್ರಗಳ ವಿಷಯವಾದ ಎಲ್ಲಾ ಅಪರಾಧಗಳಿಗೋಸ್ಕರ ಇಲ್ಲವೆ ಕಳೆದು ಹೋದ ಯಾವದೇ ತರದ ವಸ್ತುಗಳ ವಿಷಯ ದಲ್ಲಿ ಒಬ್ಬನು ಇನ್ನೊಬ್ಬನ ಬಳಿಯಲ್ಲಿ ಅದನ್ನು ಕಂಡು ಇದು ತನ್ನದೆಂದು ಹೇಳಿದ ಪಕ್ಷಕ್ಕೆ ಆ ಇಬ್ಬರ ವ್ಯಾಜ್ಯವು ನ್ಯಾಯಾಧಿಪತಿಗಳ ಮುಂದೆ ಬರಬೇಕು. ನ್ಯಾಯಾಧಿ ಪತಿಗಳು ಯಾರನ್ನು ಅಪರಾಧಿಯೆಂದು ನಿರ್ಣಯಿಸು ವರೋ ಅವನು ಎರಡರಷ್ಟು ತನ್ನ ನೆರೆಯವನಿಗೆ ಕೊಡಬೇಕು.

22:10b.EXO.022.010 ಒಬ್ಬನು ತನ್ನ ನೆರೆಯವನಿಗೆ ಕತ್ತೆಯನ್ನಾದರೂ ಎತ್ತನ್ನಾದರೂ ಕುರಿಯನ್ನಾದರೂ ಬೇರೆ ಯಾವ ಪಶು ವನ್ನಾದರೂ ಕಾಯುವದಕ್ಕೆ ಕೊಟ್ಟಾಗ ಅದು ಸತ್ತರೆ ಇಲ್ಲವೆ ಊನವಾದರೆ ಇಲ್ಲವೆ ಯಾರೂ ನೋಡದೆ ಇದ್ದಾಗ ಓಡಿಸಿಕೊಂಡು ಹೋದರೆ

22:11b.EXO.022.011 ತಾನು ತನ್ನ ನೆರೆಯವನ ವಸ್ತುವನ್ನು ತೆಗೆದುಕೊಳ್ಳಲಿಲ್ಲವೆಂದು ಅವರಿಬ್ಬರ ಮಧ್ಯದಲ್ಲಿ ಕರ್ತನ ಮೇಲೆ ಪ್ರಮಾಣ ಮಾಡಬೇಕು. ಅದನ್ನು (ಪಶುವಿನ) ಯಜಮಾನನು ಒಪ್ಪಿದರೆ ಅವನು ಬದಲುಕೊಡಬಾರದು.

22:12b.EXO.022.012 ಆದರೆ ಅದು ಕಳ್ಳತನವಾಗಿ ಅವನಿಂದ ಒಯ್ಯಲ್ಪಟ್ಟಿದ್ದರೆ ಯಜ ಮಾನನಿಗೆ ಬದಲುಕೊಡಬೇಕು.

22:13b.EXO.022.013 ಅದು (ಕಾಡು ಮೃಗದಿಂದ) ಕೊಲ್ಲಲ್ಪಟ್ಟಿದ್ದರೆ ಅದನ್ನು ಸಾಕ್ಷಿಗಾಗಿ ತರಲಿ, ಕೊಲ್ಲಲ್ಪಟ್ಟದ್ದಕ್ಕೆ ಬದಲು ಕೊಡಬಾರದು.

22:14b.EXO.022.014 ಒಬ್ಬನು ತನ್ನ ನೆರೆಯವನಿಂದ ಪಶುವನ್ನು ಎರವಾಗಿತಕ್ಕೊಂಡಿರಲಾಗಿ ಒಡೆಯನು ಅದರ ಹತ್ತಿರ ಇಲ್ಲದಿ ರುವಾಗ ಆ ಪಶುವು ಊನವಾದರೆ ಇಲ್ಲವೆ ಅದು ಸತ್ತರೆ ಅದಕ್ಕೆ ಅವನು ಖಂಡಿತವಾಗಿ ಬದಲು ಕೊಡ ಬೇಕು.

22:15b.EXO.022.015 ಆದರೆ ಯಜಮಾನನು ಅದರ ಸಂಗಡ ಇದ್ದರೆ ಬದಲು ಕೊಡದೆ ಇರಲಿ. ಅದು ಬಾಡಿಗೆಗೆ ತಂದಿದ್ದರೆ ಅದರ ಬಾಡಿಗೆಯಲ್ಲಿಯೇ ಬಂದಿರುವದು.

22:16b.EXO.022.016 ಇದಲ್ಲದೆ ಒಬ್ಬನು ನಿಶ್ಚಯಮಾಡದ ಕನ್ನಿಕೆಯನ್ನು ಮೋಸಗೊಳಿಸಿ ಅವಳ ಸಂಗಡ ಮಲಗಿದರೆ ಅವಳು ತನ್ನ ಹೆಂಡತಿಯಾಗುವಂತೆ ಅವಳಿಗೆ ಖಂಡಿತವಾಗಿ ತೆರವು ಕೊಡಬೇಕು.

22:17b.EXO.022.017 ಅವಳ ತಂದೆಗೆ ಆಕೆಯನ್ನು ಕೊಡುವದಕ್ಕೆ ಮನಸ್ಸಿಲ್ಲದಿದ್ದರೆ ಕನ್ನಿಕೆಯ ತೆರವಿನ ಪ್ರಕಾರ ಹಣ ಸಲ್ಲಿಸಬೇಕು.

22:18b.EXO.022.018 ಮಾಟಗಾರ್ತಿಯನ್ನು ಬದುಕ ಗೊಡಿಸಬಾರದು.

22:19b.EXO.022.019 ಮೃಗದ ಸಂಗಡ ಮಲಗುವ ಯಾರಾದರೂ ಸರಿಯೇ ಅವರು ಖಂಡಿತವಾಗಿ ಕೊಲ್ಲಲ್ಪಡಬೇಕು.

22:20b.EXO.022.020 ಕರ್ತನಿಗೆ ಹೊರತಾಗಿ ಮತ್ತೊಬ್ಬ ದೇವರಿಗೆ ಯಜ್ಞ ಮಾಡುವವನು ಸಂಪೂರ್ಣವಾಗಿ ನಾಶವಾಗಬೇಕು.

22:21b.EXO.022.021 ಪರದೇಶಸ್ಥನನ್ನು ಉಪದ್ರವಪಡಿಸಬೇಡ, ಬಾಧೆ ಪಡಿಸಲೂಬೇಡ; ಯಾಕಂದರೆ ನೀವು ಐಗುಪ್ತದೇಶ ದಲ್ಲಿ ಪರದೇಶಿಗಳಾಗಿದ್ದಿರಿ.

22:22b.EXO.022.022 ಯಾವ ವಿಧವೆಯನ್ನೂ ದಿಕ್ಕಿಲ್ಲದ ಮಗುವನ್ನೂ ಬಾಧಿಸಬಾರದು.

22:23b.EXO.022.023 ಯಾವದೆ ರೀತಿಯಲ್ಲಿ ಅವರನ್ನು ಬಾಧಿಸಿದರೂ ಅವರು ನನಗೆ ಮೊರೆಯಿಟ್ಟರೆ ನಾನು ನಿಶ್ಚಯವಾಗಿ ಅವರ ಮೊರೆಯನ್ನು ಕೇಳುವೆನು.

22:24b.EXO.022.024 ಆಗ ನನ್ನ ಕೋಪವು ಉರಿಯುವದು. ಕತ್ತಿಯಿಂದ ನಿಮ್ಮನ್ನು ಕೊಲ್ಲುವೆನು. ನಿಮ್ಮ ಹೆಂಡತಿಯರು ವಿಧವೆಯರಾಗಿ ನಿಮ್ಮ ಮಕ್ಕಳು ದಿಕ್ಕಿಲ್ಲದವರಾಗುವರು.

22:25b.EXO.022.025 ನಿನ್ನ ಬಳಿಯಲ್ಲಿ ಬಡವರಾಗಿರುವ ನನ್ನ ಜನರಿಗೆ ಹಣವನ್ನು ಸಾಲವಾಗಿ ಕೊಟ್ಟರೆ ಅವರಿಂದ ಬಡ್ಡಿ ತಕ್ಕೊಳ್ಳಬಾರದು. ಇಲ್ಲವೆ ಅವರ ಮೇಲೆ ಬಡ್ಡಿ ಹೊರಿಸ ಬೇಡ.

22:26b.EXO.022.026 ನಿನ್ನ ನೆರೆಯವನ ಉಡುಪನ್ನು ಅಡವಾಗಿ ತಂದರೆ ಸೂರ್ಯನು ಮುಳುಗುವದರೊಳಗಾಗಿ ಅವ ನಿಗೆ ಹಿಂದಕ್ಕೆ ಕೊಡಬೇಕು.

22:27b.EXO.022.027 ಅದು ಅವನಿಗೆ ಒಂದೇ ಹೊದಿಕೆಯಾಗಿದೆ. ಅದೇ ಅವನ ಮೈಗೆ ಉಡುಪು. ಅವನು ಯಾವದನ್ನು ಹೊದ್ದುಕೊಂಡು ಮಲಗಿ ಯಾನು? ಅವನು ನನಗೆ ಮೊರೆಯಿಟ್ಟರೆ ನಾನು ಕೇಳುವೆನು. ನಾನು ಕೃಪಾಳುವು.

22:28b.EXO.022.028 ದೇವರನ್ನು ನಿಂದಿಸಬೇಡ; ಇಲ್ಲವೆ ನಿನ್ನ ಜನರ ಅಧಿಕಾರಿಗಳನ್ನು ಶಪಿಸಬೇಡ.

22:29b.EXO.022.029 ನಿನ್ನ ಪ್ರಥಮ ಫಲಗಳನ್ನೂ ಪಾನಗಳನ್ನೂ ನನಗೆ ಅರ್ಪಿಸಲು ತಡ ಮಾಡಬೇಡ. ನಿನ್ನ ಮಕ್ಕಳಲ್ಲಿ ಚೊಚ್ಚಲಾದವರನ್ನು ನನಗೆ ಕೊಡಬೇಕು.

22:30b.EXO.022.030 ಅದರಂತೆಯೇ ನಿನ್ನ ಎತ್ತುಗಳ ಲ್ಲಿಯೂ ಕುರಿಗಳಲ್ಲಿಯೂ ಮಾಡಬೇಕು. ಅದು ಏಳು ದಿನ ತಾಯಿಯ ಬಳಿಯಲ್ಲಿರಲಿ, ಎಂಟನೆಯ ದಿನ ಅದನ್ನು ನನಗೆ ಕೊಡಬೇಕು.ನೀವು ನನಗೆ ಪರಿಶುದ್ಧ ಜನರಾಗಿರಬೇಕು. ಹೊಲದಲ್ಲಿ (ಮೃಗದಿಂದ) ಕೊಲ್ಲಲ್ಪಟ್ಟದ್ದನ್ನು ನೀವು ತಿನ್ನದೆ ಅದನ್ನು ನಾಯಿಗಳಿಗೆ ಹಾಕಬೇಕು.

22:31b.EXO.022.031 ನೀವು ನನಗೆ ಪರಿಶುದ್ಧ ಜನರಾಗಿರಬೇಕು. ಹೊಲದಲ್ಲಿ (ಮೃಗದಿಂದ) ಕೊಲ್ಲಲ್ಪಟ್ಟದ್ದನ್ನು ನೀವು ತಿನ್ನದೆ ಅದನ್ನು ನಾಯಿಗಳಿಗೆ ಹಾಕಬೇಕು.

23

23:1b.EXO.023.001 ನೀನು ಸುಳ್ಳು ಸುದ್ಧಿಯನ್ನು ಹಬ್ಬಿಸ ಬಾರದು. ಅನ್ಯಾಯದ ಸಾಕ್ಷಿಯಾಗಿರು ವದಕ್ಕೆ ದುಷ್ಟನೊಂದಿಗೆ ಸೇರಬೇಡ.

23:2b.EXO.023.002 ಕೆಟ್ಟದ್ದನ್ನು ಮಾಡು ವಂತೆ ಬಹುಮಂದಿಯನ್ನು ಹಿಂಬಾಲಿಸಬೇಡ; ಇಲ್ಲವೆ ಬಹುಮಂದಿಯೊಂದಿಗೆ ನ್ಯಾಯಕ್ಕೆ ಪ್ರತಿಕೂಲವಾಗಿ ವ್ಯಾಜ್ಯದಲ್ಲಿ ಉತ್ತರಕೊಡಬೇಡ.

23:3b.EXO.023.003 ಬಡವನಿಗೆ ವ್ಯಾಜ್ಯ ದಲ್ಲಿ ಮುಖದಾಕ್ಷಿಣ್ಯ ಮಾಡಬೇಡ.

23:4b.EXO.023.004 ನಿನ್ನ ವೈರಿಯ ಎತ್ತಾಗಲಿ ಕತ್ತೆಯಾಗಲಿ ತಪ್ಪಿಸಿಕೊಂಡು ಹೋಗುವಾಗ ಅದು ನಿನಗೆ ಸಿಕ್ಕಿದರೆ ನೀನು ಅದನ್ನು ಖಂಡಿತವಾಗಿ ತಿರಿಗಿ ಅವನಿಗೆ ತಂದುಕೊಡಬೇಕು.

23:5b.EXO.023.005 ನಿನ್ನನ್ನು ಹಗೆ ಮಾಡುವವನ ಕತ್ತೆ ಹೊರೆಯ ಕೆಳಗೆ ಬಿದ್ದಿರುವದನ್ನು ನೀನು ಕಂಡಾಗ ಅವನಿಗೆ ಸಹಾಯ ಮಾಡಲು ಮನಸ್ಸಿಲ್ಲದಿದ್ದರೂ ನೀನು ಖಂಡಿತವಾಗಿ ಅವನಿಗೆ ಸಹಾಯಮಾಡಬೇಕು.

23:6b.EXO.023.006 ಬಡವನ ವ್ಯಾಜ್ಯದಲ್ಲಿ ನ್ಯಾಯವನ್ನು ಬಿಟ್ಟು ತೀರ್ಪು ಕೊಡಬೇಡ.

23:7b.EXO.023.007 ಸುಳ್ಳಿನ ವಿಷಯಗಳಿಂದ ನೀನು ದೂರ ವಿರು; ನಿರಪರಾಧಿಯನ್ನೂ ನೀತಿವಂತನನ್ನೂ ಕೊಲ್ಲ ಬೇಡ, ಯಾಕಂದರೆ ನಾನು ದುಷ್ಟನನ್ನು ನೀತಿವಂತ ನೆಂದು ನಿರ್ಣಯಿಸುವದಿಲ್ಲ.

23:8b.EXO.023.008 ಲಂಚವನ್ನು ತೆಗೆದು ಕೊಳ್ಳಬೇಡ; ಅದು ಜ್ಞಾನಿಗಳನ್ನು ಕುರುಡರನ್ನಾಗಿ ಮಾಡಿ ನೀತಿವಂತರ ಮಾತುಗಳನ್ನು ವಕ್ರಪಡಿಸುತ್ತದೆ.

23:9b.EXO.023.009 ಪರದೇಶಸ್ಥನನ್ನು ಉಪದ್ರವ ಪಡಿಸಬೇಡ; ಪರ ದೇಶಸ್ಥನ ಹೃದಯವನ್ನು ನೀವು ತಿಳಿದಿರುವಿರಿ. ನೀವೂ ಐಗುಪ್ತದೇಶದಲ್ಲಿ ಪರದೇಶಿಗಳಾಗಿದ್ದೀರಷ್ಟೆ.

23:10b.EXO.023.010 ಆರು ವರುಷ ನಿನ್ನ ಭೂಮಿಗೆ ಬೀಜಹಾಕಿ ಅದರ ಬೆಳೆಯನ್ನು ಕೂಡಿಸಬೇಕು.

23:11b.EXO.023.011 ಏಳನೆಯ ವರುಷದಲ್ಲಿ ಅದಕ್ಕೆ ವಿಶ್ರಾಂತಿಯನ್ನು ಕೊಟ್ಟು ಅದನ್ನು ಬೀಳು ಬಿಡಬೇಕು. ಆಗ ನಿನ್ನ ಜನರಲ್ಲಿರುವ ಬಡವರು ಅದರಲ್ಲಿ ಬೆಳೆದದ್ದನ್ನು ತಿನ್ನಲಿ; ಅವರು ಬಿಟ್ಟದ್ದನ್ನು ಹೊಲದ ಪಶುಗಳು ತಿನ್ನಲಿ. ಹೀಗೆ ನಿನ್ನ ದ್ರಾಕ್ಷೇ ತೋಟದಲ್ಲಿಯೂ ಎಣ್ಣೇಮರಗಳ ತೋಪಿನಲ್ಲಿಯೂ ಮಾಡಬೇಕು.

23:12b.EXO.023.012 ಆರು ದಿವಸ ನೀನು ನಿನ್ನ ಕೆಲಸಗಳನ್ನು ಮಾಡ ಬೇಕು; ಏಳನೆಯ ದಿನದಲ್ಲಿ ನೀನು ನಿನ್ನ ಎತ್ತು ಕತ್ತೆಗಳು ವಿಶ್ರಮಿಸಿಕೊಳ್ಳಬೇಕು. ಇದಲ್ಲದೆ ನಿನ್ನ ದಾಸಿಯ ಮಗನು ಪರದೇಶಸ್ಥನು ದಣಿವಾರಿಸಿಕೊಳ್ಳಲಿ.

23:13b.EXO.023.013 ನಾನು ನಿಮಗೆ ಹೇಳಿದ್ದನ್ನೆಲ್ಲಾ ಕೈಕೊಳ್ಳಬೇಕು; ಬೇರೆ ದೇವರುಗಳ ಹೆಸರನ್ನು ಎತ್ತಬೇಡ, ಇಲ್ಲವೆ ನಿನ್ನ ಬಾಯಿಂದ ಅದು ಹೊರಡಬಾರದು.

23:14b.EXO.023.014 ವರುಷಕ್ಕೆ ಮೂರು ಸಾರಿ ನನಗೆ ಹಬ್ಬ ಮಾಡ ಬೇಕು.

23:15b.EXO.023.015 ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಆಚರಿಸಬೇಕು; (ಅಬೀಬ್‌ ತಿಂಗಳಿನ ನೇಮಕವಾದ ಸಮಯದಲ್ಲಿ ಏಳು ದಿನಗಳ ವರೆಗೆ ನಾನು ನಿನಗೆ ಆಜ್ಞಾಪಿಸಿದ ಪ್ರಕಾರ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಯಾಕಂದರೆ ನೀನು ಆ ತಿಂಗಳಲ್ಲೇ ಐಗುಪ್ತ ದಿಂದ ಹೊರಗೆ ಬಂದಿದ್ದಿ. ಒಬ್ಬರೂ ಬರೀಗೈಯಿಂದ ನನ್ನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಬಾರದು.)

23:16b.EXO.023.016 ನಿನ್ನ ಹೊಲದಲ್ಲಿ ಬಿತ್ತಿದ ಬೆಳೆಯ ಪ್ರಥಮ ಫಲಗಳ ಸುಗ್ಗಿ ಹಬ್ಬವನ್ನೂ ನಿನ್ನ ಬೆಳೆಯನ್ನು ಹೊಲದಿಂದ ಕೂಡಿಸಿದ ಮೇಲೆ ವರುಷದ ಅಂತ್ಯದಲ್ಲಿ ಕೂಡಿಸುವ ಹಬ್ಬವನ್ನೂ ಆಚರಿಸಬೇಕು.

23:17b.EXO.023.017 ವರುಷಕ್ಕೆ ಮೂರು ಸಾರಿ ನಿಮ್ಮ ಲ್ಲಿರುವ ಎಲ್ಲಾ ಪುರುಷರು ದೇವರಾದ ಕರ್ತನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಬೇಕು.

23:18b.EXO.023.018 ನನಗೆ ಸಮರ್ಪಿಸುವ ಯಜ್ಞದ ರಕ್ತವನ್ನು ಹುಳಿ ಇರುವ ರೊಟ್ಟಿಯ ಸಂಗಡ ಅರ್ಪಿಸಬಾರದು ಇಲ್ಲವೆ ನನಗೆ ಅರ್ಪಿಸಿದ ಯಜ್ಞದ ಕೊಬ್ಬು ಬೆಳಗಿನ ವರೆಗೆ ಇರಬಾರದು.

23:19b.EXO.023.019 ನಿನ್ನ ಭೂಮಿಯ ಪ್ರಥಮ ಫಲಗಳಲ್ಲಿ ಮೊದಲ ನೆಯದನ್ನು ನಿನ್ನ ದೇವರಾದ ಕರ್ತನ ಆಲಯಕ್ಕೆ ತರ ಬೇಕು. ಮೇಕೆಯ ಮರಿಯನ್ನು ತಾಯಿಯ ಹಾಲಿನಲ್ಲಿ ಬೇಯಿಸಬಾರದು.

23:20b.EXO.023.020 ಇಗೋ, ಮಾರ್ಗದಲ್ಲಿ ನಿಮ್ಮನ್ನು ಕಾಪಾಡುವದ ಕ್ಕೋಸ್ಕರವೂ ನಾನು ಸಿದ್ಧಮಾಡಿದ ಸ್ಥಳಕ್ಕೆ ನಿಮ್ಮನ್ನು ತರುವದಕ್ಕೋಸ್ಕರವೂ ಒಬ್ಬ ದೂತನನ್ನು ನಿಮ್ಮ ಮುಂದೆ ಕಳುಹಿಸುತ್ತೇನೆ.

23:21b.EXO.023.021 ಆತನ ವಿಷಯದಲ್ಲಿ ಜಾಗ್ರತೆ ಯಾಗಿದ್ದು ಆತನ ಮಾತಿಗೆ ವಿಧೇಯನಾಗು. ಆತನಿಗೆ ಕೋಪವನ್ನೆಬ್ಬಿಸಬೇಡ; ನನ್ನ ಹೆಸರು ಆತನಲ್ಲಿ ಇರುವ ದರಿಂದ ಆತನು ನಿಮ್ಮ ದ್ರೋಹಗಳನ್ನು ಮನ್ನಿಸುವದಿಲ್ಲ.

23:22b.EXO.023.022 ಆತನ ಮಾತಿಗೆ ನೀವು ನಿಜವಾಗಿಯೂ ವಿಧೇಯ ರಾಗಿ ಹೇಳಿದ್ದನ್ನೆಲ್ಲಾ ನೀವು ಮಾಡಿದರೆ ನಿಮ್ಮ ಶತ್ರುಗಳಿಗೆ ಶತ್ರುವಾಗಿಯೂ ನಿಮ್ಮ ವಿರೋಧಿಗಳಿಗೆ ವಿರೋಧಿ ಯಾಗಿಯೂ ನಾನು ಇರುವೆನು.

23:23b.EXO.023.023 ನನ್ನ ದೂತನು ನಿಮ್ಮ ಮುಂದೆ ಹೋಗಿ ಅಮೋರಿಯರೂ ಹಿತ್ತಿಯರೂ ಪೆರಿಜೀಯರೂ ಕಾನಾನ್ಯರೂ ಹಿವ್ವಿಯರೂ ಯೆಬೂಸಿ ಯರೂ ಇರುವ ದೇಶಕ್ಕೆ ನಿಮ್ಮನ್ನು ಬರಮಾಡುವನು. ಅವರನ್ನು ನಾನು ನಿರ್ಮೂಲ ಮಾಡುವೆನು.

23:24b.EXO.023.024 ಅವರ ದೇವರುಗಳಿಗೆ ನೀವು ಅಡ್ಡಬೀಳಲೂ ಬಾರದು, ಅವುಗಳನ್ನು ಸೇವಿಸಲೂಬಾರದು. ಇದಲ್ಲದೆ ನೀವು ಅವರ ಕೃತ್ಯಗಳ ಪ್ರಕಾರ ಮಾಡದೆ ಅವರನ್ನು ನಿರ್ಮೂಲ ಮಾಡಿಬಿಟ್ಟು ಅವರ ವಿಗ್ರಹಗಳನ್ನು ಪೂರ್ಣವಾಗಿ ಒಡೆದು ಹಾಕಬೇಕು.

23:25b.EXO.023.025 ನೀವು ನಿಮ್ಮ ದೇವರಾದ ಕರ್ತನಿಗೆ ಸೇವೆಮಾಡಬೇಕು. ಆಗ ಆತನು ನಿಮ್ಮ ರೊಟ್ಟಿಯನ್ನೂ ನೀರನ್ನೂ ಆಶೀರ್ವದಿಸುವನು, ನಾನು ವ್ಯಾಧಿಯನ್ನು ನಿಮ್ಮ ಮಧ್ಯದಿಂದ ತೊಲಗಿಸಿ ಬಿಡುವೆನು.

23:26b.EXO.023.026 ಗರ್ಭಸ್ರಾವವಾಗಲಿ ಬಂಜೆತನವಾಗಲಿ ನಿಮ್ಮ ದೇಶದಲ್ಲಿ ಇರುವದಿಲ್ಲ; ನಿನ್ನ ದಿನಗಳ ಲೆಕ್ಕವನ್ನು ಪೂರ್ತಿಮಾಡುವೆನು.

23:27b.EXO.023.027 ನನ್ನ ಭಯವನ್ನು ನಿಮ್ಮ ಮುಂದೆ ಕಳುಹಿಸಿ ನೀವು ಸೇರುವ ಜನರನ್ನೆಲ್ಲಾ ನಾಶಮಾಡುವೆನು ಮತ್ತು ನಿಮ್ಮನ್ನು ವಿರೋಧಿಸುವವರೆಲ್ಲಾ ನಿಮಗೆ ಬೆನ್ನು ತೋರಿ ಸುವಂತೆ ಮಾಡುವೆನು.

23:28b.EXO.023.028 ಹಿವ್ವಿಯರೂ ಕಾನಾನ್ಯರೂ ಹಿತ್ತಿಯರೂ ನಿಮ್ಮ ಎದುರಿನಿಂದ ಓಡಿಹೋಗುವಂತೆ ಕಡಜದ ಹುಳಗಳನ್ನು ನಿಮ್ಮ ಮುಂದೆ ಕಳುಹಿಸುವೆನು.

23:29b.EXO.023.029 ಭೂಮಿಯು ಬರಿದಾಗದಂತೆಯೂ ಅಡವಿಯ ಮೃಗ ಗಳು ನಿಮ್ಮ ವಿರೋಧವಾಗಿ ಹೆಚ್ಚಾಗದ ಹಾಗೆಯೂ ಅವುಗಳನ್ನು ಒಂದೇ ವರುಷದಲ್ಲಿ ನಿಮ್ಮ ಎದುರಿನಿಂದ ಓಡಿಸದೆ

23:30b.EXO.023.030 ನೀವು ಅಭಿವೃದ್ಧಿಯಾಗಿ ದೇಶವನ್ನು ಸ್ವತಂತ್ರಿ ಸಿಕೊಳ್ಳುವ ವರೆಗೆ ಸ್ವಲ್ಪಸ್ವಲ್ಪವಾಗಿ ಹೊರಡಿಸುವೆನು.

23:31b.EXO.023.031 ಕೆಂಪು ಸಮುದ್ರದಿಂದ ಫಿಲಿಷ್ಟಿಯರ ಸಮುದ್ರದ ವರೆಗೂ ಅರಣ್ಯದಿಂದ ನದಿಯ ವರೆಗೂ ನಿಮ್ಮ ಮೇರೆ ಗಳನ್ನು ನೇಮಿಸುವೆನು; ದೇಶದ ನಿವಾಸಿಗಳನ್ನು ನಿಮ್ಮ ಕೈಗಳಿಗೆ ಒಪ್ಪಿಸುವೆನು. ನೀವು ಅವರನ್ನು ನಿಮ್ಮ ಎದುರಿ ನಿಂದ ಓಡಿಸಿಬಿಡುವಿರಿ.

23:32b.EXO.023.032 ಅವರ ಸಂಗಡಲೂ ಅವರ ದೇವರುಗಳ ಸಂಗಡಲೂ ಯಾವ ಒಡಂಬಡಿಕೆಯನ್ನೂ ಮಾಡಬಾರದು.ನನಗೆ ವಿರೋಧವಾಗಿ ನೀವು ಪಾಪಮಾಡದಂತೆ ಅವರು ನಿಮ್ಮ ದೇಶದಲ್ಲಿ ವಾಸವಾ ಗಿರಬಾರದು. ನೀವು ಅವರ ದೇವರುಗಳನ್ನು ಸೇವಿಸಿದರೆ ಅದು ನಿಮಗೆ ಖಂಡಿತವಾಗಿ ಉರುಲಾಗಿರುವದು.

23:33b.EXO.023.033 ನನಗೆ ವಿರೋಧವಾಗಿ ನೀವು ಪಾಪಮಾಡದಂತೆ ಅವರು ನಿಮ್ಮ ದೇಶದಲ್ಲಿ ವಾಸವಾ ಗಿರಬಾರದು. ನೀವು ಅವರ ದೇವರುಗಳನ್ನು ಸೇವಿಸಿದರೆ ಅದು ನಿಮಗೆ ಖಂಡಿತವಾಗಿ ಉರುಲಾಗಿರುವದು.

24

24:1b.EXO.024.001 ಆತನು ಮೋಶೆಗೆ--ನೀನೂ ಆರೋನನೂ ನಾದಾಬನೂ ಅಬೀಹೂ ಇಸ್ರಾಯೇಲಿನ ಹಿರಿಯರಲ್ಲಿ ಎಪ್ಪತ್ತು ಮಂದಿಯೂ ಕರ್ತನ ಬಳಿಗೆ ಬಂದು ದೂರದಲ್ಲಿ ಆರಾಧಿಸಿರಿ.

24:2b.EXO.024.002 ಮೋಶೆ ಒಬ್ಬನೇ ಕರ್ತನ ಸವಿಾಪಕ್ಕೆ ಬರಲಿ; ಆದರೆ ಅವರು ಸವಿಾಪಕ್ಕೆ ಬರಬಾರದು. ಇಲ್ಲವೆ ಜನರು ಅವನ ಸಂಗಡ ಬರಬಾರದು ಎಂದು ಹೇಳಿದನು.

24:3b.EXO.024.003 ಮೋಶೆಯು ಬಂದು ಕರ್ತನ ಎಲ್ಲಾ ಮಾತುಗಳನ್ನೂ ಎಲ್ಲಾ ನ್ಯಾಯವಿಧಿಗಳನ್ನೂ ಜನರಿಗೆ ತಿಳಿಯಪಡಿ ಸಿದನು; ಆಗ ಜನರೆಲ್ಲಾ ಒಂದೇ ಸ್ವರದಿಂದ--ಕರ್ತನು ಹೇಳಿದ ಎಲ್ಲಾ ಮಾತುಗಳ ಪ್ರಕಾರ ಮಾಡುತ್ತೇವೆ ಎಂದು ಉತ್ತರಕೊಟ್ಟರು.

24:4b.EXO.024.004 ಮೋಶೆಯು ಕರ್ತನ ಮಾತುಗಳನ್ನೆಲ್ಲಾ ಬರೆದು ಬೆಳಿಗ್ಗೆ ಎದ್ದು ಬೆಟ್ಟದ ಕೆಳಗೆ ಯಜ್ಞವೇದಿಯನ್ನು ಕಟ್ಟಿಸಿ ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ಅನುಸಾರವಾಗಿ ಹನ್ನೆರಡು ಸ್ತಂಭಗಳನ್ನು ನಿಲ್ಲಿಸಿದನು.

24:5b.EXO.024.005 ಅವನು ಕರ್ತನಿಗೆ ದಹನಬಲಿಗಳನ್ನೂ ಸಮಾಧಾನದ ಬಲಿಗಾಗಿ ಎತ್ತು ಗಳನ್ನೂ ಅರ್ಪಿಸುವದಕ್ಕಾಗಿ ಇಸ್ರಾಯೇಲ್‌ ಮಕ್ಕಳ ಯೌವನಸ್ಥರನ್ನು ಕಳುಹಿಸಿದನು.

24:6b.EXO.024.006 ಮೋಶೆಯು ರಕ್ತದಲ್ಲಿ ಅರ್ಧವನ್ನು ತೆಗೆದುಕೊಂಡು ಬೋಗುಣಿಗಳಲ್ಲಿ ಹಾಕಿ ದನು ಮತ್ತು ರಕ್ತದಲ್ಲಿ ಅರ್ಧವನ್ನು ಯಜ್ಞವೇದಿಯ ಮೇಲೆ ಚಿಮುಕಿಸಿದನು.

24:7b.EXO.024.007 ಇದಲ್ಲದೆ ಒಡಂಬಡಿಕೆಯ ಪ್ರುಸ್ತಕವನ್ನು ತೆಗೆದುಕೊಂಡು ಜನರ ಮುಂದೆ ಓದಿದನು. ಆಗ ಅವರು--ಕರ್ತನು ಹೇಳುವದನ್ನೆಲ್ಲಾ ನಾವು ಮಾಡಿ ವಿಧೇಯರಾಗುವೆವು ಅಂದರು.

24:8b.EXO.024.008 ತರು ವಾಯ ಮೋಶೆಯು ರಕ್ತವನ್ನು ತೆಗೆದುಕೊಂಡು ಜನರ ಮೇಲೆ ಚಿಮುಕಿಸಿ--ಇಗೋ, ಈ ಎಲ್ಲಾ ಮಾತುಗಳ ವಿಷಯದಲ್ಲಿ ಕರ್ತನು ನಿಮ್ಮೊಂದಿಗೆ ಮಾಡಿದ ಒಡಂಬಡಿಕೆಯ ರಕ್ತವು ಇದೇ ಅಂದನು.

24:9b.EXO.024.009 ಆಗ ಮೋಶೆಯೂ ಅರೋನನೂ ನಾದಾಬನೂ ಅಬೀಹುವೂ ಇಸ್ರಾಯೇಲಿನ ಹಿರಿಯರಲ್ಲಿ ಎಪ್ಪತ್ತು ಜನರೂ ಏರಿಹೋದರು.

24:10b.EXO.024.010 ಅವರು ಇಸ್ರಾಯೇಲಿನ ದೇವರನ್ನು ನೋಡಿದರು. ಆತನ ಪಾದಗಳ ಕೆಳಗೆ ನೀಲವರ್ಣದ ಕಲ್ಲಿನ ಕೆಲಸಕ್ಕೆ ಸಮಾನವಾದದ್ದೂ ಆಕಾಶದ ಹಾಗೆ ನಿರ್ಮಲವಾದದ್ದೂ ಇತ್ತು.

24:11b.EXO.024.011 ಆದರೆ ಇಸ್ರಾಯೇಲ್‌ ಮಕ್ಕಳ ಶ್ರೇಷ್ಠರ ಮೇಲೆ ಆತನು ಕೈ ಹಾಕಲಿಲ್ಲ. ಅವರು ಸಹ ದೇವರ ದರ್ಶನದ ನಂತರ ತಿಂದು ಕುಡಿದರು.

24:12b.EXO.024.012 ಕರ್ತನು ಮೋಶೆಗೆ--ಬೆಟ್ಟವನ್ನೇರಿ ನನ್ನ ಬಳಿಗೆ ಬಂದು ಅಲ್ಲೇ ಇರು. ನಾನು ನಿನಗೆ ಕಲ್ಲಿನ ಹಲಗೆಗಳನ್ನು ಅವರಿಗೆ ಕಲಿಸುವದಕ್ಕೋಸ್ಕರ ನಾನು ಬರೆದ ನ್ಯಾಯ ಪ್ರಮಾಣವನ್ನು ಆಜ್ಞೆಗೆಳನ್ನು ಕೊಡುವೆನು ಎಂದು ಹೇಳಿದನು.

24:13b.EXO.024.013 ಆಗ ಮೋಶೆಯೂ ಅವನ ಸೇವಕನಾದ ಯೆಹೋಶುವನೂ ಎದ್ದು ನಿಂತರು. ಮೋಶೆಯಾ ದರೋ ದೇವರ ಬೆಟ್ಟವನ್ನು ಏರಿದನು.

24:14b.EXO.024.014 ಹಿರಿಯರಿಗೆ ಅವನು--ನಾವು ನಿಮ್ಮ ಬಳಿಗೆ ತಿರಿಗಿ ಬರುವ ವರೆಗೆ ಇಲ್ಲಿ ನಮಗಾಗಿ ಕಾದುಕೊಂಡಿರ್ರಿ; ಇಗೋ, ಆರೋ ನನೂ ಹೂರನೂ ನಿಮ್ಮ ಸಂಗಡ ಇರುತ್ತಾರೆ. ಯಾರಿ ಗಾದರೂ ವ್ಯಾಜ್ಯವಿದ್ದರೆ ಅವನು ಅವರ ಬಳಿಗೆ ಬರಲಿ ಅಂದನು.

24:15b.EXO.024.015 ಹೀಗೆ ಮೋಶೆಯು ಬೆಟ್ಟವನ್ನೇರಿ ಹೋದನು. ಆಗ ಮೇಘವು ಬೆಟ್ಟವನ್ನು ಮುಚ್ಚಿಕೊಂಡಿತು.

24:16b.EXO.024.016 ಇದ ಲ್ಲದೆ ಕರ್ತನ ಮಹಿಮೆಯು ಸೀನಾಯಿಬೆಟ್ಟದ ಮೇಲೆ ನೆಲೆಯಾಗಿದದ್ದರಿಂದ ಮೇಘವು ಅದನ್ನು ಆರು ದಿನಗಳ ವರೆಗೆ ಮುಚ್ಚಿಕೊಂಡಿತು; ಏಳನೆಯ ದಿನದಲ್ಲಿ ಆತನು ಮೇಘದೊಳಗಿಂದ ಮೋಶೆಯನ್ನು ಕರೆದನು.

24:17b.EXO.024.017 ಇದಲ್ಲದೆ ಇಸ್ರಾಯೇಲ್‌ ಮಕ್ಕಳ ಕಣ್ಣುಗಳ ಮುಂದೆ ಬೆಟ್ಟದ ತುದಿಯಲ್ಲಿ ಕರ್ತನ ಮಹಿಮೆಯ ದೃಶ್ಯವು ದಹಿಸುವ ಅಗ್ನಿಯಂತೆ ಇತ್ತು.ಆಗ ಮೋಶೆಯು ಮೇಘದ ಮಧ್ಯಕ್ಕೆ ಹೋಗಿ ಬೆಟ್ಟವನ್ನೇರಿದನು. ಅವನು ನಾಲ್ವತ್ತು ಹಗಲೂ ನಾಲ್ವತ್ತು ರಾತ್ರಿಯೂ ಪರ್ವತದಲ್ಲಿದ್ದನು.

24:18b.EXO.024.018 ಆಗ ಮೋಶೆಯು ಮೇಘದ ಮಧ್ಯಕ್ಕೆ ಹೋಗಿ ಬೆಟ್ಟವನ್ನೇರಿದನು. ಅವನು ನಾಲ್ವತ್ತು ಹಗಲೂ ನಾಲ್ವತ್ತು ರಾತ್ರಿಯೂ ಪರ್ವತದಲ್ಲಿದ್ದನು.

25

25:1b.EXO.025.001 ಆಗ ಕರ್ತನು ಮಾತನಾಡಿ ಮೋಶೆಗೆ--

25:2b.EXO.025.002 ನನಗೆ ಕಾಣಿಕೆಗಳನ್ನು ತಕ್ಕೊಂಡು ಬರು ವಂತೆ ಇಸ್ರಾಯೇಲ್‌ ಮಕ್ಕಳ ಸಂಗಡ ಮಾತನಾಡು; ಮನಃಪೂರ್ವಕವಾಗಿಯೂ ಹೃದಯಪೂರ್ವಕವಾ ಗಿಯೂ ಕೊಡುವ ನನ್ನ ಕಾಣಿಕೆಯನ್ನು ನೀವು ತೆಗೆದು ಕೊಳ್ಳಬೇಕು.

25:3b.EXO.025.003 ನೀವು ಅವರಿಂದ ತೆಗೆದುಕೊಳ್ಳಬೇಕಾದ ಕಾಣಿಕೆಗಳು: ಚಿನ್ನ ಬೆಳ್ಳಿ ತಾಮ್ರ

25:4b.EXO.025.004 ನೀಲಿ ರಕ್ತವರ್ಣ ಲಾಕಿಬಣ್ಣ ನಾರು ಮೇಕೆಯ ಕೂದಲು

25:5b.EXO.025.005 ಕೆಂಪು ಬಣ್ಣದಲ್ಲಿ ಅದ್ದಿದ ಟಗರುಗಳ ಚರ್ಮಗಳು ಕಡಲು ಹಂದಿಯ ಚರ್ಮಗಳು ಜಾಲಿ ಮರಗಳು.

25:6b.EXO.025.006 ದೀಪಕ್ಕಾಗಿ ಎಣ್ಣೆ ಮತ್ತು ಅಭಿಷೇಕಿಸುವ ಎಣ್ಣೆಗೋಸ್ಕರವೂ ಪರಿಮಳ ಧೂಪಕ್ಕೋಸ್ಕರ ಸುಗಂಧ ದ್ರವ್ಯಗಳೂ

25:7b.EXO.025.007 ಎಫೋದಿ ಗಾಗಿ ಮತ್ತು ಪದಕಕ್ಕಾಗಿ ಗೋಮೇಧಿಕಗಳೂ ಕೆತ್ತಿದ ರತ್ನಗಳೂ ಇವೇ.

25:8b.EXO.025.008 ನಾನು ಅವರ ಮಧ್ಯದಲ್ಲಿ ವಾಸಿಸುವ ಹಾಗೆ ಅವರು ನನಗೆ ಒಂದು ಪರಿಶುದ್ಧ ಆಲಯವನ್ನು ಕಟ್ಟಬೇಕು.

25:9b.EXO.025.009 ಗುಡಾರದ ಮಾದರಿಯನ್ನೂ ಅದರ ಎಲ್ಲಾ ಸಾಮಾನುಗಳ ಮಾದರಿಯನ್ನೂ ನಾನು ನಿನಗೆ ತೋರಿಸುವಂತೆಯೇ ನೀನು ಮಾಡಬೇಕು.

25:10b.EXO.025.010 ಎರಡುವರೆ ಮೊಳ ಉದ್ದವೂ ಒಂದುವರೆ ಮೊಳ ಅಗಲವೂ ಒಂದುವರೆ ಮೊಳ ಎತ್ತರವೂ ಇರುವ ಮಂಜೂಷವನ್ನು ಜಾಲೀ ಮರದಿಂದ ಮಾಡಬೇಕು.

25:11b.EXO.025.011 ಅದನ್ನು ಶುದ್ಧ ಬಂಗಾರದಿಂದ ಹೊರಗೂ ಒಳಗೂ ಹೊದಿಸಬೇಕು. ಅದರ ಸುತ್ತಲೂ ಬಂಗಾರದ ಗೋಟು ಮಾಡಬೇಕು.

25:12b.EXO.025.012 ಅದಕ್ಕೆ ಬಂಗಾರದ ನಾಲ್ಕು ಬಳೆಗಳನ್ನು ಎರಕಹೊಯ್ದು ಅದರ ನಾಲ್ಕು ಮೂಲೆಗಳಲ್ಲಿ ಅಂದರೆ ಒಂದು ಕಡೆಯಲ್ಲಿ ಎರಡು ಬಳೆಗಳನ್ನು ಮತ್ತೊಂದು ಕಡೆಯಲ್ಲಿ ಎರಡು ಬಳೆಗಳನ್ನು ಇಡಬೇಕು.

25:13b.EXO.025.013 ಜಾಲೀ ಮರದ ಕೋಲುಗಳನ್ನು ಬಂಗಾರದಿಂದ ಹೊದಿಸ ಬೇಕು,

25:14b.EXO.025.014 ಮಂಜೂಷವನ್ನು ಹೊತ್ತುಕೊಂಡು ಹೋಗು ವದಕ್ಕಾಗಿ ಕೋಲುಗಳನ್ನು ಮಂಜೂಷದ ಉಭಯ ಪಾರ್ಶ್ವಗಳಲ್ಲಿರುವ ಬಳೆಗಳಲ್ಲಿ ಸೇರಿಸಬೇಕು.

25:15b.EXO.025.015 ಮಂಜೂಷದ ಬಳೆಗಳಲ್ಲಿಯೇ ಕೋಲುಗಳನ್ನು ಇಡ ಬೇಕು. ಅವುಗಳೊಳಗಿಂದ ಕೋಲುಗಳನ್ನು ತೆಗೆಯ ಬಾರದು.

25:16b.EXO.025.016 ನಾನು ನಿನಗೆ ಕೊಡುವ ಸಾಕ್ಷಿಯ ಹಲಗೆ ಗಳನ್ನು ಮಂಜೂಷದಲ್ಲಿ ಇಡಬೇಕು.

25:17b.EXO.025.017 ಎರಡುವರೆ ಮೊಳ ಉದ್ದವೂ ಒಂದುವರೆ ಮೊಳ ಅಗಲವೂ ಆಗಿರುವ ಕರುಣಾಸನವನ್ನು ಶುದ್ಧ ಬಂಗಾರದಿಂದ ಮಾಡಬೇಕು.

25:18b.EXO.025.018 ಬಂಗಾರದಿಂದ ಎರಡು ಕೆರೂಬಿಗಳನ್ನು ನಕ್ಷೆಯ ಕೆಲಸದಿಂದ ಕರುಣಾ ಸನದ ಎರಡು ಬದಿಗಳಲ್ಲಿ ಮಾಡಿಸಬೇಕು.

25:19b.EXO.025.019 ಈ ಬದಿಯಲ್ಲಿ ಒಂದು ಕೆರೂಬಿಯನ್ನೂ ಆ ಬದಿಯಲ್ಲಿ ಮತ್ತೊಂದು ಕೆರೂಬಿಯನ್ನೂ ಹೀಗೆ ಕರುಣಾಸನದ ಮೇಲೆಯೇ ಎರಡೂ ಬದಿಗಳಲ್ಲಿ ಮಾಡಬೇಕು.

25:20b.EXO.025.020 ಆ ಕೆರೂಬಿಗಳು ತಮ್ಮ ರೆಕ್ಕೆಗಳನ್ನು ಮೇಲಕ್ಕೆ ಚಾಚಿದವುಗ ಳಾಗಿಯೂ ರೆಕ್ಕೆಗಳಿಂದ ಕರುಣಾಸನವನ್ನು ಮುಚ್ಚುವವು ಗಳಾಗಿಯೂ ಒಂದರ ಮುಖವನ್ನು ಒಂದು ನೋಡು ವವುಗಳಾಗಿಯೂ ಇರಬೇಕು. ಕೆರೂಬಿಗಳ ಮುಖಗಳು ಕರುಣಾಸನದ ಕಡೆಗೆ ತಿರುಗಿರಬೇಕು.

25:21b.EXO.025.021 ಕರುಣಾಸನ ವನ್ನು ಮಂಜೂಷದ ಮೇಲೆ ಇಡಬೇಕು ಮತ್ತು ನೀನು ಮಂಜೂಷದಲ್ಲಿ ನಾನು ನಿನಗೆ ಕೊಡುವ ಸಾಕ್ಷಿ ಹಲಗೆಗಳನ್ನು ಇಡಬೇಕು.

25:22b.EXO.025.022 ನಾನು ಅಲ್ಲಿ ನಿನ್ನನ್ನು ಸಂಧಿಸಿ ಕರುಣಾಸನದ ಮೇಲಿನಿಂದ ಮಂಜೂಷದ ಮೇಲಿರುವ ಎರಡು ಕೆರೂಬಿಗಳ ಮಧ್ಯದಿಂದ ಇಸ್ರಾಯೇಲ್‌ ಮಕ್ಕಳ ವಿಷಯದಲ್ಲಿ ಆಜ್ಞಾಪಿಸುವವು ಗಳನ್ನೆಲ್ಲಾ ನಿನಗೆ ತಿಳಿಸುವೆನು.

25:23b.EXO.025.023 ಇದಲ್ಲದೆ ಎರಡು ಮೊಳ ಉದ್ದವೂ ಒಂದು ಮೊಳ ಅಗಲವೂ ಒಂದುವರೆ ಮೊಳ ಎತ್ತರವೂ ಇರುವ ಮೇಜನ್ನು ಜಾಲೀ ಮರದಿಂದ ಮಾಡಬೇಕು.

25:24b.EXO.025.024 ಶುದ್ಧ ಬಂಗಾರದಿಂದ ಅದನ್ನು ಹೊದಿಸಿ ಅದರ ಸುತ್ತಲೂ ಬಂಗಾರದ ಗೋಟನ್ನು ಮಾಡಬೇಕು.

25:25b.EXO.025.025 ಅದರ ಸುತ್ತಲೂ ಗೇಣುದ್ದ ಅಂಚನ್ನು ಮಾಡಿ ಅಂಚಿನ ಸುತ್ತಲೂ ಬಂಗಾರದ ಗೋಟನ್ನು ಮಾಡ ಬೇಕು.

25:26b.EXO.025.026 ಇದಲ್ಲದೆ ಅದಕ್ಕೆ ಬಂಗಾರದ ನಾಲ್ಕು ಬಳೆಗಳನ್ನು ಮಾಡಿ, ಬಳೆಗಳನ್ನು ಅದರ ನಾಲ್ಕು ಕಾಲು ಗಳಲ್ಲಿರುವ ನಾಲ್ಕು ಮೂಲೆಗಳಲ್ಲಿಡಬೇಕು.

25:27b.EXO.025.027 ಅಂಚಿಗೆ ಸವಿಾಪವಾಗಿ ಮೇಜನ್ನು ಹೊರುವದಕ್ಕೋಸ್ಕರ ಇರುವ ಕೋಲುಗಳಿಗೆ ಬಳೆಗಳು ಇರಬೇಕು.

25:28b.EXO.025.028 ಮೇಜನ್ನು ಹೊರುವದಕ್ಕಾಗಿ ಕೋಲುಗಳನ್ನು ಜಾಲೀ ಮರದಿಂದ ಮಾಡಿ ಬಂಗಾರದಿಂದ ಹೊದಿಸಬೇಕು.

25:29b.EXO.025.029 ಇದಲ್ಲದೆ ನೀನು ಪಾತ್ರೆಗಳನ್ನೂ ಸೌಟುಗಳನ್ನೂ ಮುಚ್ಚಳಗಳನ್ನೂ ಬಟ್ಟಲುಗಳನ್ನೂ ಒಯ್ಯುವದಕ್ಕೋಸ್ಕರ ಶುದ್ಧ ಬಂಗಾರ ದಿಂದ ಮಾಡಬೇಕು.

25:30b.EXO.025.030 ಮೇಜಿನ ಮೇಲೆ ಸಮ್ಮುಖದ ರೊಟ್ಟಿಯನ್ನು ಯಾವಾಗಲೂ ನನ್ನ ಮುಂದೆ ಇಡಬೇಕು.

25:31b.EXO.025.031 ಇದಲ್ಲದೆ ಶುದ್ಧ ಬಂಗಾರದಿಂದ ದೀಪಸ್ತಂಭವನ್ನು ಮಾಡಬೇಕು. ಆ ದೀಪಸ್ತಂಭವನ್ನು ನಕ್ಷೆಯ ಕೆಲಸದಿಂದ ಮಾಡಬೇಕು. ಅದರ ಕಂಬವೂ ಕೊಂಬೆಗಳೂ ಹಣತೆ ಗಳೂ ಗುಂಡುಗಳೂ ಪುಷ್ಪಗಳೂ ಅದರಂತೆಯೇ ಇರ ಬೇಕು.

25:32b.EXO.025.032 ದೀಪಸ್ತಂಭದ ಉಭಯ ಪಾರ್ಶ್ವಗಳಿಂದ ಆರು ಕೊಂಬೆಗಳು, ಒಂದು ಭಾಗದಿಂದ ಮೂರು ಕೊಂಬೆಗಳೂ ಮತ್ತೊಂದು ಭಾಗದಿಂದ ಮೂರು ಕೊಂಬೆಗಳೂ ಹೊರಗೆ ಬರಬೇಕು.

25:33b.EXO.025.033 ಒಂದು ಕೊಂಬೆ ಯಲ್ಲಿ ಬಾದಾಮಿಯ ಪುಷ್ಪವಿದ್ದ ಮೂರು ಹಣತೆಗಳೂ ಗುಂಡು ಪುಷ್ಪವೂ ಮತ್ತೊಂದು ಕೊಂಬೆಯಲ್ಲಿ ಬಾದಾಮಿ ಪುಷ್ಪವಿದ್ದ ಮೂರು ಹಣತೆಗಳೂ ಗುಂಡು ಪುಷ್ಪವೂ ಬಾದಾಮಿ ಪುಷ್ಪವಿದ್ದ ಮೂರು ಹಣತೆಗಳೂ ಗುಂಡು ಪುಷ್ಪವೂ ಈ ಪ್ರಕಾರ ದೀಪಸ್ತಂಭದಿಂದ ಹೊರಗೆ ಬರುವ ಆರು ಕೊಂಬೆಗಳಲ್ಲಿ ಇರಬೇಕು.

25:34b.EXO.025.034 ದೀಪಸ್ತಂಭದಲ್ಲಿಯೇ ಗುಂಡುಗಳೂ ಪುಷ್ಪಗಳೂ ಸೇರಿದಂತೆ ಬಾದಾಮಿ ಪುಷ್ಪವಿರುವ ನಾಲ್ಕು ಹಣತೆಗಳು ಇರಬೇಕು.

25:35b.EXO.025.035 ಇದಲ್ಲದೆ ದೀಪಸ್ತಂಭದಿಂದ ಹೊರಗೆ ಬರುವ ಆರು ಕೊಂಬೆಗಳ ಪ್ರಕಾರ ಅದರಿಂದ ಬರುವ ಎರಡೆರಡು ಕೊಂಬೆಗಳ ಕೆಳಗೆ ಒಂದೊಂದು ಗುಂಡು ಇರಬೇಕು.

25:36b.EXO.025.036 ಅದರ ಗುಂಡುಗಳೂ ಕೊಂಬೆಗಳೂ ಅದರಿಂದಲೇ ಬಂದಿರಬೇಕು. ಅದೆಲ್ಲಾ ಶುದ್ಧ ಬಂಗಾ ರದ ಒಂದೇ ನಕ್ಷೆಯ ಕೆಲಸವಾಗಿರಬೇಕು.

25:37b.EXO.025.037 ಅದರ ಏಳು ದೀಪಗಳನ್ನು ಮಾಡಿ ಅವು ಮುಂದುಗಡೆಯಲ್ಲಿ ಪ್ರಕಾಶ ಕೊಡುವಂತೆ ಅವುಗಳನ್ನು ಹೊತ್ತಿಸಬೇಕು.

25:38b.EXO.025.038 ಇದಲ್ಲದೆ ಅದರ ಚಿಮಟಿಗೆಗಳನ್ನೂ ಬೂದಿಯ ಪಾತ್ರೆಗಳನ್ನೂ ಶುದ್ಧ ಬಂಗಾರದಿಂದಲೇ ಮಾಡಬೇಕು.

25:39b.EXO.025.039 ಒಂದು ತಲಾಂತು ಶುದ್ಧ ಬಂಗಾರದಿಂದ ದೀಪ ಸ್ತಂಭವನ್ನೂ ಅದರ ಎಲ್ಲಾ ಸಾಮಾನುಗಳನ್ನೂ ಮಾಡ ಬೇಕು.ಬೆಟ್ಟದಲ್ಲಿ ನಿನಗೆ ತೋರಿಸಿದ ಮಾದರಿಯ ಪ್ರಕಾರವೇ ಅವುಗಳನ್ನು ಮಾಡುವಂತೆ ನೋಡಿಕೋ.

25:40b.EXO.025.040 ಬೆಟ್ಟದಲ್ಲಿ ನಿನಗೆ ತೋರಿಸಿದ ಮಾದರಿಯ ಪ್ರಕಾರವೇ ಅವುಗಳನ್ನು ಮಾಡುವಂತೆ ನೋಡಿಕೋ.

26

26:1b.EXO.026.001 ಗುಡಾರವನ್ನು ಹತ್ತು ತೆರೆಗಳಿಂದ ಮಾಡ ಬೇಕು. ಅವು ನಯವಾಗಿ ಹೊಸೆದ ನಾರಿನಿಂದಲೂ ನೀಲಿ, ಧೂಮ್ರ, ರಕ್ತವರ್ಣಗ ಳಿಂದಲೂ ಕೌಶಲ್ಯದಿಂದ ಮಾಡಿದ ಕೆರೂಬಿಗಳುಳ್ಳವು ಗಳಾಗಿಯೂ ಇರಬೇಕು.

26:2b.EXO.026.002 ಒಂದು ತೆರೆಯ ಉದ್ದವು ಇಪ್ಪತ್ತೆಂಟು ಮೊಳ, ಅದರ ಅಗಲವು ನಾಲ್ಕು ಮೊಳ ವಾಗಿರಬೇಕು ಪ್ರತಿಯೊಂದು ತೆರೆಯು ಒಂದೇ ಅಳತೆ ಯುಳ್ಳದ್ದಾಗಿರಬೇಕು.

26:3b.EXO.026.003 ಐದು ತೆರೆಗಳು ಒಂದಕ್ಕೊಂದು ಜೋಡಿಸಲ್ಪಟ್ಟಿರಬೇಕು, ಬೇರೆ ಐದು ತೆರೆಗಳು ಒಂದ ಕ್ಕೊಂದು ಜೋಡಿಸಲ್ಪಟ್ಟಿರಬೇಕು.

26:4b.EXO.026.004 ಒಂದು ತೆರೆಯ ಅಂಚಿನ ಕೊನೆಗೆ ಜೋಡಿಸುವ ಸ್ಥಳದಲ್ಲಿ ನೀಲಿ ನೂಲಿನ ಕುಣಿಕೆಗಳನ್ನು ಮಾಡಿ ಎರಡನೇ ಜೋಡನೆಯ ಕಡೇ ತೆರೆಯ ಕೊನೆಯಲ್ಲಿಯೂ ಹಾಗೆಯೇ ಮಾಡಬೇಕು.

26:5b.EXO.026.005 ಒಂದು ತೆರೆಯನ್ನು ಜೋಡಿಸುವ ಸ್ಥಳದಲ್ಲಿ ಇರುವ ಇನ್ನೊಂದು ತೆರೆಯ ಕೊನೆಯಲ್ಲಿ ಐವತ್ತು ಕುಣಿಕೆಗಳನ್ನು ಮಾಡಬೇಕು. ಆ ಕುಣಿಕೆಗಳು ಒಂದಕ್ಕೊಂದು ಸರಿ ಯಾಗಿ ಹಿಡುಕೊಳ್ಳುವವುಗಳಾಗಿರಬೇಕು.

26:6b.EXO.026.006 ಬಂಗಾರದ ಐವತ್ತು ಕೊಂಡಿಗಳನ್ನು ಮಾಡಿ ಅವುಗಳಿಂದ ತೆರೆಗಳನ್ನು ಒಂದಕ್ಕೊಂದು ಜೋಡಿಸಬೇಕು. ಹೀಗೆ ಅದು ಒಂದೇ ಗುಡಾರವಾಗುವದು.

26:7b.EXO.026.007 ಇದಲ್ಲದೆ ನೀನು ಗುಡಾರದ ಮೇಲೆ ಹೊದಿಸು ವದಕ್ಕಾಗಿ ಮೇಕೆ ಕೂದಲಿನಿಂದ ಹನ್ನೊಂದು ತೆರೆಗಳನ್ನು ಮಾಡಬೇಕು.

26:8b.EXO.026.008 ಒಂದು ತೆರೆಯ ಉದ್ದವು ಮೂವತ್ತು ಮೊಳ, ಅದರ ಅಗಲವು ನಾಲ್ಕು ಮೊಳ, ಹನ್ನೊಂದು ತೆರೆಗಳಿಗೂ ಅದೇ ಅಳತೆ ಇರಬೇಕು.

26:9b.EXO.026.009 ಐದು ತೆರೆಗಳನ್ನು ಬೇರೆಯಾಗಿಯೂ ಆರು ತೆರೆಗಳನ್ನು ಬೇರೆಯಾಗಿಯೂ ಜೋಡಿಸಿ ಆರನೆಯ ತೆರೆಯನ್ನು ಗುಡಾರದ ಮುಂಭಾಗ ದಲ್ಲಿ ಇಮ್ಮಡಿ ಮಾಡಬೇಕು.

26:10b.EXO.026.010 ಜೋಡಿಸುವಾಗ ಕಡೇ ಒಂದು ತೆರೆಯ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನೂ ಜೋಡಣೆಯಲ್ಲಿರುವ ಎರಡನೇ ತೆರೆಯ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನೂ ಮಾಡಬೇಕು.

26:11b.EXO.026.011 ಇದಲ್ಲದೆ ಹಿತ್ತಾಳೆಯ ಐವತ್ತು ಕೊಂಡಿಗಳನ್ನು ಮಾಡಿ ಕೊಂಡಿಗಳನ್ನು ಕುಣಿಕೆಗಳಲ್ಲಿ ಸಿಕ್ಕಿಸಿ ಗುಡಾರವು ಒಂದಾಗುವ ಹಾಗೆ ಜೋಡಿಸಬೇಕು.

26:12b.EXO.026.012 ಗುಡಾರದ ತೆರೆಗಳಲ್ಲಿ ಮಿಕ್ಕಿ ಉಳಿದ ಅರ್ಧ ತೆರೆಯು ಗುಡಾರದ ಹಿಂಭಾಗದಲ್ಲಿ ತೂಗಾಡಲಿ.

26:13b.EXO.026.013 ಗುಡಾರದ ತೆರೆಗಳ ಉದ್ದದಲ್ಲಿ ಆಚೆ ಈಚೆ ಮಿಕ್ಕಿದ ಒಂದು ಮೊಳವು ಗುಡಾರದ ಈಚೆ ಆಚೆಯಲ್ಲಿ ಅದನ್ನು ಮುಚ್ಚುವದಕ್ಕಾಗಿ ತೂಗಾಡಲಿ.

26:14b.EXO.026.014 ಕೆಂಪು ಬಣ್ಣದ ಟಗರಿನ ಚರ್ಮಗಳಿಂದ ಗುಡಾರಕ್ಕೆ ಹೊದಿಕೆಯನ್ನೂ ಕಡಲು ಹಂದಿಯ ಚರ್ಮ ಗಳಿಂದ ಮೇಲು ಹೊದಿಕೆಯನ್ನೂ ಮಾಡಬೇಕು.

26:15b.EXO.026.015 ಗುಡಾರಕ್ಕೆ ಜಾಲೀ ಮರದಿಂದ ನಿಲ್ಲುವ ಹಲಿಗೆ ಗಳನ್ನು ಮಾಡಬೇಕು.

26:16b.EXO.026.016 ಹಲಿಗೆಯ ಉದ್ದವು ಹತ್ತು ಮೊಳ, ಅದರ ಅಗಲ ಒಂದುವರೆ ಮೊಳ ಇರಬೇಕು.

26:17b.EXO.026.017 ಒಂದು ಹಲಗೆಗೆ ಎರಡು ಕೂರುಗಳು ಇರಬೇಕು. ಅವುಗಳನ್ನು ಕ್ರಮವಾಗಿ ಇರಿಸುವಂತೆ ಅವು ಎದುರು ಬದುರಾಗಿ ಇರಬೇಕು. ಹೀಗೆ ಗುಡಾರದ ಎಲ್ಲಾ ಹಲಗೆ ಗಳಿಗೂ ನೀನು ಮಾಡಬೇಕು.

26:18b.EXO.026.018 ಗುಡಾರದ ದಕ್ಷಿಣ ದಿಕ್ಕಿನಲ್ಲಿ ಇಪ್ಪತ್ತು ಹಲಗೆಗಳನ್ನು ನೀನು ಮಾಡಬೇಕು.

26:19b.EXO.026.019 ಇಪ್ಪತ್ತು ಹಲಗೆಗಳ ಕೆಳಗೆ ನಾಲ್ವತ್ತು ಬೆಳ್ಳಿಯ ಕುಳಿಗಳನ್ನು ಮಾಡಬೇಕು; ಒಂದೊಂದು ಹಲಗೆಯ ಕೆಳಗೆ ಅದರ ಎರಡು ಕೂರುಗಳಿಗಾಗಿ ಎರಡೆರಡು ಕುಳಿಗಳನ್ನು ಮಾಡಬೇಕು.

26:20b.EXO.026.020 ಉತ್ತರ ದಿಕ್ಕಿನಲ್ಲಿರುವ ಅದರ ಮತ್ತೊಂದು ಪಾರ್ಶ್ವಕ್ಕೋಸ್ಕರ ಇಪ್ಪತ್ತು ಹಲಗೆ ಗಳನ್ನೂ

26:21b.EXO.026.021 ಒಂದೊಂದು ಹಲಗೆಯ ಕೆಳಗೆ ಎರಡೆರಡು ಕೂರುಗಳಂತೆ ನಾಲ್ವತ್ತು ಬೆಳ್ಳಿಯ ಕೂರುಗಳನ್ನೂ

26:22b.EXO.026.022 ಗುಡಾರದ ಪಶ್ಚಿಮದ ಕಡೆಗೆ ಆರು ಹಲಗೆಗಳನ್ನೂ ಮಾಡಬೇಕು.

26:23b.EXO.026.023 ಗುಡಾರದ ಉಭಯ ಪಾರ್ಶ್ವಗಳ ಲ್ಲಿರುವ ಮೂಲೆಗಳಿಗೆ ಎರಡು ಹಲಗೆಗಳನ್ನು ಮಾಡ ಬೇಕು.

26:24b.EXO.026.024 ಇವುಗಳನ್ನು ಅಡಿಯಲ್ಲಿ ಜೋಡಿಸಿರಬೇಕು; ಮೇಲ್ಭಾಗದಲ್ಲಿಯೂ ಒಂದೇ ಬಳೆಗೆ ಜೋಡಿಸಿರ ಬೇಕು. ಹೀಗೆ ಅವು ಎರಡಾಗಿದ್ದು ಆ ಎರಡು ಮೂಲೆಗಳಲ್ಲಿ ಇರಬೇಕು.

26:25b.EXO.026.025 ಹೀಗೆ ಅವು ಎಂಟು ಹಲಗೆಗಳು; ಒಂದೊಂದು ಹಲಗೆಯ ಕೆಳಗೆ ಎರಡೆ ರಡು ಕುಳಿಗಳು ಇರುವದರಿಂದ ಅವುಗಳಿಗೆ ಹದಿನಾರು ಬೆಳ್ಳಿಯ ಕುಳಿಗಳು ಇರಬೇಕು.

26:26b.EXO.026.026 ಜಾಲೀ ಮರದಿಂದ ಅಗುಳಿಗಳನ್ನೂ ಮಾಡಬೇಕು. ಗುಡಾರದ ಒಂದು ಪಾರ್ಶ್ವದ ಹಲಗೆಗಳಿಗೆ ಐದು

26:27b.EXO.026.027 ಗುಡಾರದ ಇನ್ನೊಂದು ಪಾರ್ಶ್ವದ ಹಲಗೆಗಳಿಗೆ ಐದು ಅಗುಳಿ ಗಳನ್ನೂ ಗುಡಾರ ಹಿಂಭಾಗದ ಪಶ್ಚಿಮದ ಎರಡು ಕಡೆಗಳಲ್ಲಿ ಇರುವ ಹಲಗೆಗಳಿಗೆ ಐದು ಅಗುಳಿಗಳನ್ನೂ ಮಾಡಬೇಕು.

26:28b.EXO.026.028 ಮಧ್ಯದ ಅಗುಳಿಯು ಹಲಗೆಗಳ ನಡುವೆ ಒಂದು ಕಡೆಯಿಂದ ಮತ್ತೊಂದು ಕಡೆಯ ವರೆಗೆ ಮುಟ್ಟಿರಬೇಕು.

26:29b.EXO.026.029 ಆ ಹಲಗೆಗಳನ್ನು ಬಂಗಾರ ದಿಂದ ಹೊದಿಸಬೇಕು. ಅವುಗಳಿಗೆ ಬಂಗಾರದಿಂದ ಬಳೆಗಳನ್ನು ಮಾಡಬೇಕು, ಅಗುಳಿಗಳನ್ನೂ ಬಂಗಾರ ದಿಂದ ಹೊದಿಸಬೇಕು.

26:30b.EXO.026.030 ಹೀಗೆ ಬೆಟ್ಟದ ಮೇಲೆ ನಾನು ನಿನಗೆ ತೋರಿಸಿದ ಕ್ರಮದ ಪ್ರಕಾರ ಗುಡಾರ ವನ್ನು ನಿಲ್ಲಿಸಬೇಕು.

26:31b.EXO.026.031 ನೀಲಿ ಧೂಮ್ರ ರಕ್ತವರ್ಣಗಳಿರುವ ನಯವಾದ ನಾರುಗಳಿಂದ ಹೊಸೆದ ತೆರೆಯನ್ನು ಮಾಡಬೇಕು. ಕೌಶಲ್ಯದಿಂದ ಮಾಡಿದ ಕೆರೂಬಿಗಳುಳ್ಳದ್ದನ್ನಾಗಿ ಅದನ್ನು ಮಾಡಬೇಕು.

26:32b.EXO.026.032 ಅದನ್ನು ಬಂಗಾರದಿಂದ ಹೊದಿಸಿದ ಬಂಗಾರದ ಕೊಂಡಿಗಳಿದ್ದ ಬೆಳ್ಳಿಯ ನಾಲ್ಕು ಕುಳಿಗಳಲ್ಲಿ ಊರಿಕೊಂಡಿರುವ ನಾಲ್ಕು ಜಾಲೀ ಮರದ ಸ್ತಂಭಗಳಲ್ಲಿ ಅದನ್ನು ತೂಗುಹಾಕಬೇಕು.

26:33b.EXO.026.033 ಆ ತೆರೆಯನ್ನು ಕೊಂಡಿಗಳ ಕೆಳಗೆ ತೂಗುಹಾಕಿ ತೆರೆಯೊಳಗೆ ಸಾಕ್ಷಿ ಹಲಗೆಗಳ ಮಂಜೂಷವನ್ನು ತರ ಬೇಕು. ಪರಿಶುದ್ಧ ಸ್ಥಳವನ್ನೂ ಅತಿಪರಿಶುದ್ಧ ಸ್ಥಳವನ್ನೂ ಆ ತೆರೆಯು ವಿಂಗಡಿಸುವದು.

26:34b.EXO.026.034 ಅತಿಪರಿಶುದ್ಧ ಸ್ಥಳದಲ್ಲಿ ಸಾಕ್ಷಿ ಹಲಗೆಗಳ ಮಂಜೂಷದ ಮೇಲೆ ಕರುಣಾಸನ ವನ್ನು ಇಡಬೇಕು.

26:35b.EXO.026.035 ತೆರೆಯ ಹೊರಗೆ ಮೇಜನ್ನು ಮೇಜಿಗೆ ಎದುರಾಗಿ ಗುಡಾರದ ದಕ್ಷಿಣ ಭಾಗದಲ್ಲಿ ದೀಪಸ್ತಂಭವನ್ನು ಇಡಬೇಕು. ಉತ್ತರ ಭಾಗದಲ್ಲಿ ಮೇಜನ್ನು ಇಡಬೇಕು.

26:36b.EXO.026.036 ಗುಡಾರದ ಬಾಗಲಿಗೆ ನೀಲಿ ಧೂಮ್ರ ರಕ್ತವರ್ಣ ಗಳಿರುವ ನಯವಾಗಿ ಹೊಸೆದ ನಾರುಗಳಿಂದ ಕಸೂತಿ ಕೆಲಸದ ತೆರೆಯನ್ನು ತೂಗುಹಾಕಬೇಕು.ಆ ತೆರೆಗೆ ಜಾಲೀ ಮರದ ಐದು ಸ್ತಂಭಗಳನ್ನು ಮಾಡಿ ಅವುಗಳನ್ನು ಬಂಗಾರದಿಂದ ಹೊದಿಸಬೇಕು. ಅವುಗಳ ಕೊಂಡಿಗಳು ಬಂಗಾರದವುಗಳಾಗಿರಬೇಕು. ಅವುಗಳಿಗೆ ಹಿತ್ತಾಳೆಯ ಐದು ಕುಳಿಗಳನ್ನು ಎರಕ ಹೊಯ್ಯಬೇಕು.

26:37b.EXO.026.037 ಆ ತೆರೆಗೆ ಜಾಲೀ ಮರದ ಐದು ಸ್ತಂಭಗಳನ್ನು ಮಾಡಿ ಅವುಗಳನ್ನು ಬಂಗಾರದಿಂದ ಹೊದಿಸಬೇಕು. ಅವುಗಳ ಕೊಂಡಿಗಳು ಬಂಗಾರದವುಗಳಾಗಿರಬೇಕು. ಅವುಗಳಿಗೆ ಹಿತ್ತಾಳೆಯ ಐದು ಕುಳಿಗಳನ್ನು ಎರಕ ಹೊಯ್ಯಬೇಕು.

27

27:1b.EXO.027.001 ಇದಲ್ಲದೆ ಜಾಲೀ ಮರದಿಂದ ಯಜ್ಞವೇದಿಯನ್ನು ಐದು ಮೊಳ ಉದ್ದವಾಗಿಯೂ ಐದು ಮೊಳ ಅಗಲವಾಗಿಯೂ ಮಾಡಬೇಕು. ಆ ಯಜ್ಞವೇದಿಯು ಚಚ್ಚೌಕವಾಗಿರಬೇಕು. ಅದರ ಎತ್ತ ರವು ಮೂರು ಮೊಳ ಇರಬೇಕು.

27:2b.EXO.027.002 ಅದರ ನಾಲ್ಕು ಮೂಲೆಗಳಲ್ಲಿ ಕೊಂಬುಗಳನ್ನು ಮಾಡಬೇಕು. ಆ ಕೊಂಬುಗಳು ಯಜ್ಞವೇದಿಗೆ ಎತ್ತರವಾಗಿರಬೇಕು; ನೀನು ಅದನ್ನು ಹಿತ್ತಾಳೆಯಿಂದ ಹೊದಿಸಬೇಕು.

27:3b.EXO.027.003 ಅದರ ಬೂದಿಗಾಗಿ ತಟ್ಟೆಗಳನ್ನು ಸಲಿಕೆಗಳನ್ನು ಬೋಗುಣಿಗಳನ್ನು ಮುಳ್ಳುಗಳನ್ನು ಅಗ್ನಿಪಾತ್ರೆಗಳನ್ನು ಎಲ್ಲಾ ಉಪಕರಣಗಳನ್ನು ಹಿತ್ತಾಳೆಯಿಂದ ಮಾಡಬೇಕು.

27:4b.EXO.027.004 ಅದಕ್ಕೆ ಹಿತ್ತಾಳೆಯ ಜಾಳಿಗೆಯನ್ನು ಮಾಡಿ ಆ ಜಾಳಿಗೆಯ ಮೇಲೆ ನಾಲ್ಕು ಮೂಲೆಗಳಿಗೆ ಹಿತ್ತಾಳೆಯ ನಾಲ್ಕು ಬಳೆಗಳನ್ನು ಮಾಡಬೇಕು.

27:5b.EXO.027.005 ಆ ಜಾಳಿಗೆಯು ಯಜ್ಞವೇದಿಯ ಸುತ್ತಲಿರುವ ಕಟ್ಟೆಯ ಕೆಳಗೆ ಇದ್ದು, ಯಜ್ಞವೇದಿಯ ಬುಡದಿಂದ ನಡುವಿನ ತನಕ ಇರು ವಂತೆ ಹಾಕಿಸಬೇಕು.

27:6b.EXO.027.006 ಯಜ್ಞವೇದಿಗೆ ಜಾಲೀ ಮರ ದಿಂದ ಕೋಲುಗಳನ್ನು ಮಾಡಿ ಅವುಗಳನ್ನು ಹಿತ್ತಾಳೆ ಯಿಂದ ಹೊದಿಸಬೇಕು.

27:7b.EXO.027.007 ಆ ಕೋಲುಗಳನ್ನು ಬಳೆ ಗಳಲ್ಲಿ ಸೇರಿಸಬೇಕು. ಅವುಗಳು ಯಜ್ಞವೇದಿಯನ್ನು ಹೊರುವದಕ್ಕೆ ಅದರ ಎರಡೂ ಪಾರ್ಶ್ವಗಳಲ್ಲಿ ಇರ ಬೇಕು.

27:8b.EXO.027.008 ಹಲಗೆಗಳಿಂದ ಅದನ್ನು ಪೊಳ್ಳಾಗಿರುವಂತೆ ಮಾಡಬೇಕು. ಬೆಟ್ಟದಲ್ಲಿ ನಿನಗೆ ತೋರಿಸಿದಂತೆಯೇ ಅದನ್ನು ಮಾಡಬೇಕು.

27:9b.EXO.027.009 ಗುಡಾರದ ಅಂಗಳವನ್ನು ಮಾಡಬೇಕು. ದಕ್ಷಿಣ ದಿಕ್ಕಿನಲ್ಲಿರುವ ದಕ್ಷಿಣ ಭಾಗದಲ್ಲಿ ಅಂಗಳಕ್ಕೋಸ್ಕರ ನಯವಾದ ಹೊಸೆದ ನಾರಿನ ಪರದೆಗಳನ್ನು ಮಾಡ ಬೇಕು. ಒಂದು ಕಡೆಯಲ್ಲಿ ಅದರ ಉದ್ದವು ನೂರು ಮೊಳವಿರಬೇಕು.

27:10b.EXO.027.010 ಅದರ ಸ್ತಂಭಗಳು ಇಪ್ಪತ್ತು, ಅವುಗಳಿಗೆ ಹಿತ್ತಾಳೆಯ ಕುಳಿಗಳು ಇರಬೇಕು; ಸ್ತಂಭಗಳ ಕೊಂಡಿಗಳನ್ನೂ ಅವುಗಳ ಪಟ್ಟಿಗಳನ್ನೂ ಬೆಳ್ಳಿಯಿಂದ ಮಾಡಬೇಕು.

27:11b.EXO.027.011 ಹಾಗೆಯೇ ಉತ್ತರ ಪಾರ್ಶ್ವದಲ್ಲಿ ನೂರು ಮೊಳ ಉದ್ದವಾದ ಪರದೆಗಳೂ ಇಪ್ಪತ್ತು ಸ್ತಂಭಗಳೂ ಇಪ್ಪತ್ತು ಹಿತ್ತಾಳೆಯ ಕುಳಿಗಳೂ ಇರಬೇಕು. ಸ್ತಂಭಗಳ ಕೊಂಡಿಗಳನ್ನೂ ಕಟ್ಟುಗಳನ್ನೂ ಬೆಳ್ಳಿಯಿಂದ ಮಾಡಬೇಕು.

27:12b.EXO.027.012 ಅಂಗಳದ ಪಶ್ಚಿಮ ಪಾರ್ಶ್ವದಲ್ಲಿ ಐವತ್ತು ಮೊಳ ಅಗಲವಾದ ಪರದೆಗಳೂ ಹತ್ತು ಸ್ತಂಭಗಳೂ ಹತ್ತು ಕುಳಿಗಳೂ ಇರಬೇಕು.

27:13b.EXO.027.013 ಪೂರ್ವದ ಕಡೆಯಲ್ಲಿ ಅಂಗಳದ ಅಗಲವು ಮೂಡಣದಲ್ಲಿ ಐವತ್ತು ಮೊಳ ಇರಬೇಕು.

27:14b.EXO.027.014 ಒಂದು ಕಡೆಯಲ್ಲಿ ಹದಿನೈದು ಮೊಳದ ಪರದೆಗಳಿದ್ದು ಮೂರು ಸ್ತಂಭಗಳೂ ಮೂರು ಕುಳಿಗಳೂ ಇರಬೇಕು.

27:15b.EXO.027.015 ಮತ್ತೊಂದು ಕಡೆಯಲ್ಲಿ ಹದಿನೈದು ಮೊಳದ ಪರದೆಗಳೂ ಮೂರು ಸ್ತಂಭ ಗಳೂ ಮೂರು ಕುಳಿಗಳೂ ಇರಬೇಕು.

27:16b.EXO.027.016 ಅಂಗಳದ ಬಾಗಲಿಗಾಗಿ ನೀಲಿ ಧೂಮ್ರ ರಕ್ತ ವರ್ಣದ ಹೊಸೆದ ನಯವಾದ ನಾರಿನಿಂದ ಕಸೂತಿಯ ಕೆಲಸ ಮಾಡಿದ ಇಪ್ಪತ್ತು ಮೊಳದ ತೆರೆಯೂ ಅದಕ್ಕೆ ನಾಲ್ಕು ಸ್ತಂಭಗಳೂ ನಾಲ್ಕು ಕುಳಿಗಳೂ ಇರಬೇಕು.

27:17b.EXO.027.017 ಅಂಗಳದ ಸುತ್ತಲಿ ರುವ ಸ್ತಂಭಗಳಿಗೆಲ್ಲಾ ಬೆಳ್ಳಿಯ ಕಟ್ಟುಗಳೂ ಬೆಳ್ಳಿಯ ಕೊಂಡಿಗಳೂ ಹಿತ್ತಾಳೆಯ ಕುಳಿಗಳೂ ಇರಬೇಕು.

27:18b.EXO.027.018 ಅಂಗಳದ ಉದ್ದ ನೂರು ಮೊಳ, ಅಗಲ ಐವತ್ತು ಮೊಳ, ಅದರ ಎತ್ತರ ಐದು ಮೊಳ ಇರಬೇಕು. ಪರದೆಗಳು ನಯವಾದ ನಾರಿನಿಂದ ಹೊಸೆದದ್ದಾಗಿದ್ದು ಅವುಗಳ ಕುಳಿಗಳನ್ನು ಹಿತ್ತಾಳೆಯಿಂದ ಮಾಡಿಸಬೇಕು.

27:19b.EXO.027.019 ಗುಡಾರದ ಎಲ್ಲಾ ಕೆಲಸಕ್ಕೆ ಬರುವ ಉಪಕರಣಗಳೂ ಗೂಟಗಳೂ ಅಂಗಳದ ಗೂಟಗಳೂ ಹಿತ್ತಾಳೆಯಿಂದ ಮಾಡಿದವುಗಳಾಗಿರಬೇಕು.

27:20b.EXO.027.020 ಇದಲ್ಲದೆ ಬೆಳಕಿಗೋಸ್ಕರ ಯಾವಾಗಲೂ ದೀಪ ವನ್ನು ಉರಿಸುವಂತೆ ಶುದ್ಧವಾದ ಕುಟ್ಟಿದ ಹಿಪ್ಪೆಯ ಎಣ್ಣೆಯನ್ನು ನಿನಗೆ ತರುವ ಹಾಗೆ ಇಸ್ರಾಯೇಲ್‌ ಮಕ್ಕಳಿಗೆ ಅಪ್ಪಣೆಕೊಡಬೇಕು.ಸಭೆಯ ಗುಡಾರ ದಲ್ಲಿ ಮಂಜೂಷದ ಮುಂದೆ ಇರುವ ತೆರೆಯ ಹೊರಗೆ ಅರೋನನೂ ಅವನ ಮಕ್ಕಳೂ ಅದನ್ನು ಸಾಯಂಕಾಲ ದಿಂದ ಉದಯದ ವರೆಗೂ ಕರ್ತನ ಮುಂದೆ ದೀಪ ವನ್ನು ಸರಿಪಡಿಸುತ್ತಿರಬೇಕು. ಇದು ಇಸ್ರಾಯೇಲ್‌ ಮಕ್ಕಳ ಪರವಾಗಿ ಅವರ ಸಂತತಿಯವರಿಗೆ ಶಾಶ್ವತವಾದ ಕಟ್ಟಳೆಯಾಗಿರಬೇಕು.

27:21b.EXO.027.021 ಸಭೆಯ ಗುಡಾರ ದಲ್ಲಿ ಮಂಜೂಷದ ಮುಂದೆ ಇರುವ ತೆರೆಯ ಹೊರಗೆ ಅರೋನನೂ ಅವನ ಮಕ್ಕಳೂ ಅದನ್ನು ಸಾಯಂಕಾಲ ದಿಂದ ಉದಯದ ವರೆಗೂ ಕರ್ತನ ಮುಂದೆ ದೀಪ ವನ್ನು ಸರಿಪಡಿಸುತ್ತಿರಬೇಕು. ಇದು ಇಸ್ರಾಯೇಲ್‌ ಮಕ್ಕಳ ಪರವಾಗಿ ಅವರ ಸಂತತಿಯವರಿಗೆ ಶಾಶ್ವತವಾದ ಕಟ್ಟಳೆಯಾಗಿರಬೇಕು.

28

28:1b.EXO.028.001 ಇದಲ್ಲದೆ ನನಗೆ ಯಾಜಕನ ಸೇವೆಮಾಡುವದಕ್ಕೆ ನೀನು ನಿನ್ನ ಅಣ್ಣನಾದ ಆರೋನನನ್ನೂ ಅವನ ಮಕ್ಕಳಾದ ನಾದಾಬ್‌ ಅಬೀಹೂ ಎಲಿಯೇಜರ್‌ ಈತಾಮಾರ್‌ ಎಂಬವರನ್ನೂ ಇಸ್ರಾಯೇಲ್‌ ಮಕ್ಕಳಿಂದ ನಿನ್ನ ಹತ್ತಿರ ಬರಮಾಡ ಬೇಕು.

28:2b.EXO.028.002 ನಿನ್ನ ಸಹೋದರನಾದ ಆರೋನನ ಗೌರವ ಕ್ಕೋಸ್ಕರವೂ ಅಲಂಕಾರಕ್ಕೋಸ್ಕರವೂ ಪರಿಶುದ್ಧ ವಸ್ತ್ರಗಳನ್ನು ನೀನು ಮಾಡಿಸಬೇಕು.

28:3b.EXO.028.003 ಇದಲ್ಲದೆ ನಾನು ಜ್ಞಾನದ ಆತ್ಮವನ್ನು ತುಂಬಿಸಿದ ವಿವೇಕ ಹೃದಯ ವಿರುವವರ ಸಂಗಡ ನೀನು ಮಾತನಾಡು, ಅವರು ಆರೋನನ ವಸ್ತ್ರಗಳನ್ನು ಮಾಡಲಿ. ಅವನು ನನಗೆ ಯಾಜಕ ಸೇವೆಮಾಡುವಂತೆ ನೀನು ಅವನನ್ನು ಪ್ರತಿಷ್ಠಿಸ ಬೇಕು.

28:4b.EXO.028.004 ಅವರು ಮಾಡಬೇಕಾದ ವಸ್ತ್ರಗಳು ಇವೇ: ಎದೆಪದಕವು ಎಫೋದ ನಿಲುವಂಗಿ ಕಸೂತಿಯ ಕೆಲಸದ ಮೇಲಂಗಿ ಮುಂಡಾಸ ನಡುಕಟ್ಟು; ನಿನ್ನ ಸಹೋದರ ನಾದ ಆರೋನನೂ ಅವನ ಕುಮಾರರೂ ನನಗೆ ಯಾಜಕ ಸೇವೆಮಾಡುವದಕ್ಕೆ ಅವರಿಗಾಗಿ ಪರಿಶುದ್ಧ ವಸ್ತ್ರಗಳನ್ನು ಮಾಡಬೇಕು.

28:5b.EXO.028.005 ಅವರು ಬಂಗಾರವನ್ನೂ ನೀಲಿ ಧೂಮ್ರ ರಕ್ತವರ್ಣದ ನೂಲನ್ನೂ ನಯವಾದ ನಾರು ಮಡಿಯನ್ನೂ ತಕ್ಕೊಳ್ಳಬೇಕು.

28:6b.EXO.028.006 ಎಫೋದನ್ನು ಬಂಗಾರದಿಂದಲೂ ನೀಲಿ ಧೂಮ್ರ ರಕ್ತವರ್ಣದ ನೂಲಿನಿಂದಲೂ ನಯವಾದ ಹೊಸೆದ ನಾರಿನಿಂದಲೂ ಕುಶಲ ಕಲೆಯಿಂದಲೂ ಮಾಡಬೇಕು.

28:7b.EXO.028.007 ಅದರ ಎರಡೂ ಅಂಚುಗಳಲ್ಲಿ ಜೋಡಿಸುವದಕ್ಕೆ ಅದಕ್ಕೆ ಎರಡು ಹೆಗಲು ಭಾಗಗಳಿರಬೇಕು, ಅವು ಜೋಡಿಸಲ್ಪಡಬೇಕು.

28:8b.EXO.028.008 ಅದರ ಮೇಲಿರುವ ವಿಚಿತ್ರ ವಾದ ಎಫೋದಿನ ನಡುಕಟ್ಟು ಅದೇ ಕೆಲಸದ್ದಾಗಿ ಅಂದರೆ ಬಂಗಾರದಿಂದಲೂ ನೀಲಿ ಧೂಮ್ರ ರಕ್ತ ವರ್ಣದ ನೂಲಿನಿಂದಲೂ ನಯವಾದ ಹೊಸೆದ ನಾರಿನಿಂದಲೂ ಮಾಡಿದ್ದಾಗಿರಬೇಕು.

28:9b.EXO.028.009 ನೀನು ಎರಡು ಗೋಮೇಧಿಕ ಕಲ್ಲುಗಳನ್ನು ತೆಗೆದುಕೊಂಡು ಇಸ್ರಾ ಯೇಲ್‌ ಮಕ್ಕಳ ಹೆಸರುಗಳನ್ನು ಅವುಗಳ ಮೇಲೆ ಕೆತ್ತಬೇಕು.

28:10b.EXO.028.010 ಒಂದು ಕಲ್ಲಿನ ಮೇಲೆ ಆರು ಹೆಸರು ಗಳನ್ನೂ ಇನ್ನೊಂದು ಕಲ್ಲಿನ ಮೇಲೆ ಉಳಿದ ಆರು ಹೆಸರುಗಳನ್ನೂ ಅವರವರ ಜನನದ ಪ್ರಕಾರ ಕೆತ್ತಬೇಕು.

28:11b.EXO.028.011 ಕಲ್ಲು ಕೆತ್ತುವವರ ಕೆಲಸದಿಂದ ಮುದ್ರೆ ಕೆತ್ತುವ ಪ್ರಕಾರ ಆ ಎರಡು ಕಲ್ಲುಗಳನ್ನು ಇಸ್ರಾಯೇಲ್‌ ಮಕ್ಕಳ ಹೆಸರುಗಳಿಗನುಸಾರವಾಗಿ ಕೆತ್ತಿಸಿ ಅವುಗಳನ್ನು ಬಂಗಾ ರದ ಜವೆಗಳಲ್ಲಿ ಹೊದಿಸಿದ್ದಾಗಿ ಮಾಡಬೇಕು.

28:12b.EXO.028.012 ಆ ಎರಡು ಕಲ್ಲುಗಳನ್ನು ಎಫೋದಿನ ಹೆಗಲು ಭಾಗದ ಮೇಲೆ ಇಸ್ರಾಯೇಲ್‌ ಮಕ್ಕಳ ಜ್ಞಾಪಕಾರ್ಥವಾದ ಕಲ್ಲುಗಳಾಗಿ ಇಡಬೇಕು. ಆರೋನನು ತನ್ನ ಎರಡು ಹೆಗಲುಗಳ ಮೇಲೆ ಅವರ ಹೆಸರುಗಳನ್ನು ಕರ್ತನ ಸನ್ನಿಧಿಯಲ್ಲಿ ಜ್ಞಾಪಕಾರ್ಥವಾಗಿ ಹೊರಬೇಕು.

28:13b.EXO.028.013 ನೀನು ಬಂಗಾರದ ಜವೆಗಳನ್ನು ಮಾಡಬೇಕು.

28:14b.EXO.028.014 ಶುದ್ಧ ಬಂಗಾರದ ಎರಡು ಸರಪಣಿಗಳನ್ನು ಹೆಣಿಗೇ ಕೆಲಸದಿಂದ ಮಾಡಿ ಆ ಹೆಣೆದ ಸರಪಣಿಗಳ ಕೊನೆ ಗಳನ್ನು ಜವೆಗಳಿಗೆ ಸೇರಿಸಬೇಕು.

28:15b.EXO.028.015 ನ್ಯಾಯದ ಎದೆ ಪದಕವನ್ನು ಕುಶಲ ಕಲೆಯ ಕೆಲಸದಿಂದ ಅಂದರೆ ಎಫೋದಿನ ಕೆಲಸದ ಹಾಗೆಯೇ ಚಿನ್ನದಿಂದಲೂ ನೀಲಿ ಧೂಮ್ರ ರಕ್ತವರ್ಣದ ನೂಲಿ ನಿಂದಲೂ ನಯವಾದ ಹೊಸೆದ ನಾರಿನಿಂದಲೂ ನೀನು ಮಾಡಿಸಬೇಕು.

28:16b.EXO.028.016 ಅದು ಚಚ್ಚೌಕವಾಗಿಯೂ ಇಮ್ಮಡಿ ಸಿದ್ದಾಗಿಯೂ ಇದ್ದು ಗೇಣುದ್ದವಾಗಿಯೂ ಗೇಣಗಲ ವಾಗಿಯೂ ಇರಬೇಕು.

28:17b.EXO.028.017 ನೀನು ಅದರಲ್ಲಿ ನಾಲ್ಕು ಕಲ್ಲುಗಳ ನಾಲ್ಕು ಸಾಲುಗಳಾಗಿ ಕಲ್ಲು ಜವೆಗಳನ್ನು ಮಾಡಬೇಕು; ಮೊದಲನೆಯ ಸಾಲಿನಲ್ಲಿ ಪದ್ಮರಾಗ ಗೋಮೇಧಕ ಮಾಣಿಕ್ಯಗಳಿರಬೇಕು. ಇದೇ ಮೊದಲ ನೆಯ ಸಾಲು.

28:18b.EXO.028.018 ಎರಡನೆಯ ಸಾಲಿನಲ್ಲಿ ಪಚ್ಚೆ ನೀಲ ವಜ್ರ ಇರಬೇಕು.

28:19b.EXO.028.019 ಮೂರನೆಯ ಸಾಲಿನಲ್ಲಿ ಸುವರ್ಣ ವೈದೂರ್ಯ ಸುಗಂಧಿಗಳಿರಬೇಕು.

28:20b.EXO.028.020 ನಾಲ್ಕನೆಯ ಸಾಲಿನಲ್ಲಿ ಬೆರುಲ್ಲ ಗೋಮೇಧಕ ವಜ್ರಗಳಿರಬೇಕು. ಇವು ಚಿನ್ನದ ಜವೆಗಳಲ್ಲಿ ಸೇರಿಸಿದವುಗಳಾಗಿರಬೇಕು.

28:21b.EXO.028.021 ಈ ಕಲ್ಲುಗಳು ಇಸ್ರಾಯೇಲ್‌ ಮಕ್ಕಳ ಹೆಸರುಗಳು ಳ್ಳವುಗಳಾಗಿ ಅವರ ಹೆಸರುಗಳ ಪ್ರಕಾರ ಅವು ಹನ್ನೆರಡಾ ಗಿರಬೇಕು. ಅವು ಒಂದೊಂದರ ಮೇಲೆ ಒಂದೊಂದು ಹೆಸರಿದ್ದು ಹನ್ನೆರಡು ಕುಲಗಳ ಪ್ರಕಾರ ಮುದ್ರೆಗಳ ಹಾಗೆ ಕೆತ್ತಿರಬೇಕು.

28:22b.EXO.028.022 ಎದೆಪದಕದ ಮೇಲಿನ ಕೊನೆಯಲ್ಲಿ ಶುದ್ಧ ಬಂಗಾರದಿಂದ ಹೆಣೆದ ಸರಪಣಿಗಳನ್ನು ಮಾಡಬೇಕು.

28:23b.EXO.028.023 ಆ ಎದೆಪದಕದ ಮೇಲೆ ಬಂಗಾರದ ಎರಡು ಬಳೆ ಗಳನ್ನು ಮಾಡಿ ಆ ಎರಡು ಬಳೆಗಳನ್ನು ಎದೆಪದಕದ ಎರಡು ಕೊನೆಗಳಲ್ಲಿ ಹಾಕಬೇಕು.

28:24b.EXO.028.024 ಚಿನ್ನದಿಂದ ಹೆಣೆದ ಆ ಎರಡು ಸರಪಣಿಗಳನ್ನು ಎದೆಪದಕದ ಕೊನೆಗಳ ಲ್ಲಿರುವ ಎರಡು ಬಳೆಗಳಲ್ಲಿ ಸೇರಿಸಬೇಕು.

28:25b.EXO.028.025 ಹೆಣೆದ ಆ ಎರಡು ಸರಪಣಿಗಳ ಕೊನೆಗಳನ್ನು ಎರಡು ಜವೆಗಳಲ್ಲಿ ಸೇರಿಸಿ ಎಫೋದಿನ ಹೆಗಲು ಭಾಗಗಳ ಮುಂದುಗಡೆ ಯಲ್ಲಿ ಇರಿಸಬೇಕು.

28:26b.EXO.028.026 ಬಂಗಾರದಿಂದ ಎರಡು ಬಳೆ ಗಳನ್ನು ಮಾಡಿ ಎದೆಪದಕದ ಎರಡು ಅಂಚುಗಳಲ್ಲಿ ಸೇರಿಸಿ ಎಫೋದಿನ ಬದಿಗೆ ಒಳಗಡೆಯಲ್ಲಿ ಹಾಕಬೇಕು.

28:27b.EXO.028.027 ಚಿನ್ನದ ಬೇರೆ ಎರಡು ಬಳೆಗಳನ್ನು ಮಾಡಿ ಎಫೋದಿನ ಎರಡು ಹೆಗಲ ಭಾಗಗಳಲ್ಲಿ ಕೆಳಗೆ ಮುಂದುಗಡೆಯಲ್ಲಿ ಎಫೋದಿನ ವಿಚಿತ್ರವಾದ ನಡುಕಟ್ಟಿನ ಮೇಲೆ ಅದನ್ನು ಜೋಡಣೆಯ ಎದುರಾಗಿ ಇರಿಸಬೇಕು.

28:28b.EXO.028.028 ಆ ಎದೆ ಪದಕವನ್ನು ಎಫೋದಿನ ವಿಚಿತ್ರವಾದ ನಡುಕಟ್ಟಿನ ಮೇಲೆ ಇರುವಂತೆಯೂ ಎದೆಪದಕವು ಎಫೋದನ್ನು ಬಿಟ್ಟು ಅಲ್ಲಾಡದಂತೆಯೂ ಅದರ ಬಳೆಗಳನ್ನು ಎಫೋ ದಿನ ಉಂಗುರಗಳಿಗೆ ನೀಲಿ ನೂಲಿನ ದಾರದಿಂದ ಕಟ್ಟಬೇಕು.

28:29b.EXO.028.029 ಹೀಗೆ ಆರೋನನು ಪರಿಶುದ್ಧ ಸ್ಥಳಕ್ಕೆ ಬರುವಾಗ ಇಸ್ರಾಯೇಲ್‌ ಮಕ್ಕಳ ಹೆಸರುಗಳನ್ನು ಯಾವಾಗಲೂ ಕರ್ತನ ಮುಂದೆ ಜ್ಞಾಪಕಮಾಡುವದಕ್ಕಾಗಿ ನ್ಯಾಯದ ಎದೆ ಪದಕವನ್ನು ತನ್ನ ಹೃದಯದ ಮೇಲೆ ಹೊರಬೇಕು.

28:30b.EXO.028.030 ನ್ಯಾಯದ ಎದೆಪದಕದಲ್ಲಿ ಊರೀಮ್‌ ತುವ್ಮೆಾಮ್‌ ಗಳನ್ನು ಇಡಬೇಕು. ಆರೋನನು ಕರ್ತನ ಸನ್ನಿಧಿಗೆ ಬರುವ ಸಮಯದಲ್ಲಿ ಅವು ಅವನ ಹೃದಯದ ಮೇಲೆ ಇರಬೇಕು. ಹೀಗೆ ಆರೋನನು ಕರ್ತನ ಮುಂದೆ ಯಾವಾಗಲೂ ಇಸ್ರಾಯೇಲ್‌ ಮಕ್ಕಳ ನ್ಯಾಯವನ್ನು ತನ್ನ ಹೃದಯದ ಮೇಲೆ ಹೊರಬೇಕು.

28:31b.EXO.028.031 ಇದಲ್ಲದೆ ಎಫೋದಿನ ನಿಲುವಂಗಿಯನ್ನೆಲ್ಲಾ ನೀಲಿ ಬಣ್ಣದ ನೂಲಿನಲ್ಲಿ ಮಾಡಬೇಕು.

28:32b.EXO.028.032 ಅದರ ಮಧ್ಯದಲ್ಲಿ ಮೇಲ್ಗಡೆ (ತಲೆದೂರಿಸುವದಕ್ಕೆ) ರಂಧ್ರವಿರಬೇಕು. ಆ ರಂಧ್ರದ ಸುತ್ತಲೂ ಹೆಣಿಗೆಯ ಕೆಲಸದ ಗೋಟಿರ ಬೇಕು. ಅದು ಹರಿಯದ ಹಾಗೆ ಅದಕ್ಕೆ ರಂಧ್ರದ ಕವಚವಿರಬೇಕು.

28:33b.EXO.028.033 ನಿಲುವಂಗಿಯ ಅಂಚಿನ ಮೇಲೆ ನೀಲ ಧೂಮ್ರ ರಕ್ತವರ್ಣಗಳ ದಾಳಿಂಬರಗಳನ್ನು ಅದರ ಅಂಚಿನ ಸುತ್ತಲೂ ಮಾಡಿ ಅವುಗಳ ಮಧ್ಯದಲ್ಲಿ ಬಂಗಾರದ ಗಂಟೆಗಳನ್ನು ಸುತ್ತಲೂ ಇರಿಸ ಬೇಕು.

28:34b.EXO.028.034 ಬಂಗಾರದ ಗಂಟೆಯೂ ದಾಳಿಂಬರವೂ ಮೇಲಂಗಿಯ ಅಂಚಿನ ಸುತ್ತಲೂ ಇರಬೇಕು.

28:35b.EXO.028.035 ಇದು ಸೇವೆಗಾಗಿ ಆರೋನನ ಮೇಲೆ ಇರಬೇಕು. ಕರ್ತನ ಸಮ್ಮುಖದಲ್ಲಿ ಪರಿಶುದ್ಧ ಸ್ಥಳಕ್ಕೆ ಬರುತ್ತಾ ಹೋಗುತ್ತಾ ಇರುವ ಸಮಯದಲ್ಲಿ ಅವನು ಸಾಯದಂತೆ ಅವುಗಳ ಶಬ್ದವು ಕೇಳಿಸಬೇಕು.

28:36b.EXO.028.036 ಶುದ್ಧ ಬಂಗಾರದ ತಗಡು ಗಳನ್ನು ಮಾಡಿ ಮುದ್ರೆ ಕೆತ್ತುವ ಪ್ರಕಾರ ಕರ್ತನಿಗೆ ಪರಿಶುದ್ಧ ಎಂದು ಅದರ ಮೇಲೆ ಕೆತ್ತಬೇಕು.

28:37b.EXO.028.037 ಅದು ಮುಂಡಾಸದ ಮುಂಭಾಗದಲ್ಲಿರುವಂತೆ ನೀನು ಅದನ್ನು ನೀಲಿ ನೂಲಿನಿಂದ ಕಟ್ಟಬೇಕು.

28:38b.EXO.028.038 ಇಸ್ರಾಯೇಲ್‌ ಮಕ್ಕಳು ತಮ್ಮ ಪರಿಶುದ್ಧ ದಾನಗಳನ್ನೆಲ್ಲಾ ಪರಿಶುದ್ಧ ಮಾಡುವ ಪರಿಶುದ್ಧ ಕಾರ್ಯಗಳ ಅಕ್ರಮವನ್ನು ಆರೋನನು ಹೊರುವ ಹಾಗೆ ಅದು ಆರೋನನ ಹಣೆಯ ಮೇಲಿರಬೇಕು. ಕರ್ತನ ಮುಂದೆ ಅವುಗಳೆಲ್ಲಾ ಅಂಗೀಕಾರವಾಗುವ ಹಾಗೆ ಅದು ಯಾವಾಗಲೂ ಅವನ ಹಣೆಯ ಮೇಲೆ ಇರಬೇಕು.

28:39b.EXO.028.039 ನಯವಾದ ನಾರಿನಿಂದ ಕಸೂತಿ ಮಾಡಿದ ಮೇಲಂಗಿಯನ್ನೂ ನಯವಾದ ನಾರಿನ ಮುಂಡಾಸ ವನ್ನೂ ಹೆಣಿಗೆಯ ಕೆಲಸದ ನಡುಕಟ್ಟನ್ನೂ ಮಾಡಿಸ ಬೇಕು.

28:40b.EXO.028.040 ಆರೋನನ ಕುಮಾರರಿಗೆ ಅಂಗಿಗಳನ್ನು ನಡುಕ ಟ್ಟುಗಳನ್ನು ಮಾಡಿಸಿ ಅವರಿಗೆ ಗೌರವಾರ್ಥವಾಗಿಯೂ ಅಂದಕ್ಕಾಗಿಯೂ ಕುಲಾಯಿಗಳನ್ನೂ ಮಾಡಿಸಬೇಕು.

28:41b.EXO.028.041 ಅವುಗಳನ್ನು ನಿನ್ನ ಸಹೋದರನಾದ ಆರೋನ ನಿಗೂ ಅವನ ಕುಮಾರರಿಗೂ ತೊಡಿಸಿ ಅವರನ್ನು ಅಭಿಷೇಕಿಸಿ ಪ್ರತಿಷ್ಠೆಮಾಡು. ಅವರು ನನಗೆ ಯಾಜಕ ಸೇವೆಮಾಡುವ ಹಾಗೆ ಅವರನ್ನು ಶುದ್ಧಮಾಡು.

28:42b.EXO.028.042 ಅವರ ಬೆತ್ತಲೆಯನ್ನು ಮುಚ್ಚುವ ಹಾಗೆ ನಾರಿನ ಇಜಾರುಗಳನ್ನು ಮಾಡಿಸು. ಅವು ಸೊಂಟದಿಂದ ತೊಡೆಯ ವರೆಗೆ ಇರಬೇಕು.ಆರೋನನೂ ಅವನ ಕುಮಾರರೂ ಸಭೆಯ ಗುಡಾರಕ್ಕೆ ಹೋಗುವಾಗಲೂ ಪರಿಶುದ್ಧ ಸ್ಥಳದಲ್ಲಿ ಸೇವೆಮಾಡುವದಕ್ಕೆ ಯಜ್ಞವೇದಿಯ ಸವಿಾಪಕ್ಕೆ ಬರುವಾಗಲೂ ತಮ್ಮ ಅಕ್ರಮವನ್ನು ಹೊತ್ತು ಸಾಯದ ಹಾಗೆ ಇವುಗಳನ್ನು ಹಾಕಿಕೊಂಡಿರಬೇಕು. ಇದೇ ಅವನಿಗೂ ಅವನ ತರುವಾಯ ಅವನ ಸಂತತಿಯ ವರಿಗೂ ಇರಬೇಕಾದ ನಿತ್ಯವಾದ ಕಟ್ಟಳೆ.

28:43b.EXO.028.043 ಆರೋನನೂ ಅವನ ಕುಮಾರರೂ ಸಭೆಯ ಗುಡಾರಕ್ಕೆ ಹೋಗುವಾಗಲೂ ಪರಿಶುದ್ಧ ಸ್ಥಳದಲ್ಲಿ ಸೇವೆಮಾಡುವದಕ್ಕೆ ಯಜ್ಞವೇದಿಯ ಸವಿಾಪಕ್ಕೆ ಬರುವಾಗಲೂ ತಮ್ಮ ಅಕ್ರಮವನ್ನು ಹೊತ್ತು ಸಾಯದ ಹಾಗೆ ಇವುಗಳನ್ನು ಹಾಕಿಕೊಂಡಿರಬೇಕು. ಇದೇ ಅವನಿಗೂ ಅವನ ತರುವಾಯ ಅವನ ಸಂತತಿಯ ವರಿಗೂ ಇರಬೇಕಾದ ನಿತ್ಯವಾದ ಕಟ್ಟಳೆ.

29

29:1b.EXO.029.001 ಅವರು ನನಗೆ ಯಾಜಕ ಸೇವೆಮಾಡು ವಂತೆ ಅವರನ್ನು ಶುದ್ಧಮಾಡುವ ಹಾಗೆ ನೀನು ಅವರಿಗೆ ಮಾಡಬೇಕಾದದ್ದೇನಂದರೆ--ಒಂದು ಹೋರಿಯನ್ನೂ ದೋಷವಿಲ್ಲದ ಎರಡು ಟಗರುಗಳನೂ

29:2b.EXO.029.002 ವಂತೆ ಅವರನ್ನು ಶುದ್ಧಮಾಡುವ ಹಾಗೆ ನೀನು ಅವರಿಗೆ ಮಾಡಬೇಕಾದದ್ದೇನಂದರೆ--ಒಂದು ಹೋರಿಯನ್ನೂ ದೋಷವಿಲ್ಲದ ಎರಡು ಟಗರುಗಳನೂ

29:3b.EXO.029.003 ಇವುಗಳನ್ನು ಒಂದೇ ಪುಟ್ಟಿಯಲ್ಲಿ ಇಟ್ಟು ಕೊಂಡು ಹೋರಿ ಮತ್ತು ಎರಡು ಟಗರುಗಳ ಸಂಗಡ ತಕ್ಕೊಂಡು ಬರಬೇಕು.

29:4b.EXO.029.004 ಆರೋನನನ್ನೂ ಅವನ ಕುಮಾರರನ್ನೂ ಸಭೆಯ ಗುಡಾರದ ಬಾಗಲಿನ ಬಳಿಗೆ ತಂದು ನೀರಿನಲ್ಲಿ ಅವರನ್ನು ತೊಳೆಯಬೇಕು.

29:5b.EXO.029.005 ತರು ವಾಯ ಆ ವಸ್ತ್ರಗಳನ್ನು ತಕ್ಕೊಂಡು ಆರೋನನಿಗೆ ಅಂಗಿಯನ್ನೂ ಎಫೋದಿನ ನಿಲುವಂಗಿಯನ್ನೂ ಎಫೋ ದನ್ನೂ ಎದೆಪದಕವನ್ನೂ ತೊಡಿಸಿ ಎಫೋದಿನ ವಿಚಿತ್ರ ವಾದ ನಡುಕಟ್ಟನ್ನು ಅವನಿಗೆ ಕಟ್ಟಿ

29:6b.EXO.029.006 ಅವನ ತಲೆಗೆ ಮುಂಡಾಸವನ್ನು ಇಟ್ಟು ಮುಂಡಾಸದ ಮೇಲೆ ಪರಿಶುದ್ಧ ಕಿರೀಟವನ್ನು ಇಟ್ಟು

29:7b.EXO.029.007 ಅಭಿಷೇಕಿಸುವ ಎಣ್ಣೆಯನ್ನು ತೆಗೆದು ಕೊಂಡು ಅವನ ತಲೆಯ ಮೇಲೆ ಹೊಯ್ದು ಅವನನ್ನು ಅಭಿಷೇಕಿಸಬೇಕು.

29:8b.EXO.029.008 ನೀನು ಅವನ ಕುಮಾರರನ್ನು ಕರಕೊಂಡು ಬಂದು ಅವರಿಗೆ ಮೇಲಂಗಿಗಳನ್ನು ತೊಡಿಸಿ

29:9b.EXO.029.009 ಆರೋನನಿಗೂ ಅವನ ಕುಮಾರರಿಗೂ ನಡುಕಟ್ಟುಗಳನ್ನು ಕಟ್ಟಿ ಅವರಿಗೆ ಕುಲಾಯಿಗಳನ್ನು ಇಡಬೇಕು. ಹೀಗೆ ಅವರಿಗೆ ಯಾಜಕ ಸೇವೆಯು ಶಾಶ್ವತ ಕಟ್ಟಳೆಯಾಗಿರುವದು. ಆರೋನ ನನ್ನೂ ಅವನ ಕುಮಾರರನ್ನೂ ನೀನು ಪ್ರತಿಷ್ಠೆ ಮಾಡಬೇಕು.

29:10b.EXO.029.010 ಇದಲ್ಲದೆ ಆ ಹೋರಿಯನ್ನು ಸಭೆಯ ಗುಡಾರದ ಮುಂದೆ ತರಬೇಕು. ಆರೋನನೂ ಅವನ ಕುಮಾರರೂ ಹೋರಿಯ ತಲೆಯ ಮೇಲೆ ತಮ್ಮ ಕೈಗಳನ್ನು ಇಡಬೇಕು.

29:11b.EXO.029.011 ತರುವಾಯ ನೀನು ಆ ಹೋರಿಯನ್ನು ಕರ್ತನ ಮುಂದೆ ಸಭೆಯ ಗುಡಾರದ ಬಾಗಲಲ್ಲಿ ವಧಿಸಬೇಕು.

29:12b.EXO.029.012 ನೀನು ಹೋರಿಯ ರಕ್ತವನ್ನು ತೆಗೆದುಕೊಂಡು ನಿನ್ನ ಬೆರಳಿನಿಂದ ಯಜ್ಞವೇದಿಯ ಕೊಂಬುಗಳಿಗೆ ಹಚ್ಚಿ ರಕ್ತವನ್ನೆಲ್ಲಾ ಯಜ್ಞವೇದಿಯ ಅಡಿಯಲ್ಲಿ ಸುರಿಯಬೇಕು.

29:13b.EXO.029.013 ನೀನು ಕರುಳುಗಳನ್ನೂ ಅವುಗಳ ಮೇಲೆ ಇರುವ ಎಲ್ಲಾ ಕೊಬ್ಬನ್ನೂ ಕಲಿಜದ ಮೇಲೆ ಬರುವ ಕೊಬ್ಬನ್ನೂ ಎರಡು ಮೂತ್ರಜನಕಾಂಗಗಳನ್ನೂ ಅವುಗಳ ಮೇಲೆ ಇರುವ ಕೊಬ್ಬನ್ನೂ ತೆಗೆದುಕೊಂಡು ಯಜ್ಞವೇದಿಯ ಮೇಲೆ ಸುಡಬೇಕು.

29:14b.EXO.029.014 ಇದಲ್ಲದೆ ಹೋರಿಯ ಮಾಂಸ ವನ್ನೂ ಅದರ ಚರ್ಮವನ್ನೂ ಸಗಣಿಯನ್ನೂ ಪಾಳೆಯದ ಹೊರಗೆ ಬೆಂಕಿಯಿಂದ ಸುಡಬೇಕು. ಅದು ಪಾಪದ ಬಲಿಯಾಗಿದೆ.

29:15b.EXO.029.015 ನೀನು ಒಂದು ಟಗರನ್ನು ಸಹ ತೆಗೆದುಕೊಳ್ಳ ಬೇಕು. ಆರೋನನೂ ಅವನ ಕುಮಾರರೂ ಆ ಟಗರಿನ ತಲೆಯ ಮೇಲೆ ತಮ್ಮ ಕೈಗಳನ್ನು ಇಡಬೇಕು.

29:16b.EXO.029.016 ತರು ವಾಯ ಆ ಟಗರನ್ನು ನೀನು ವಧಿಸಿ ಅದರ ರಕ್ತವನ್ನು ತೆಗೆದುಕೊಂಡು ಯಜ್ಞವೇದಿಯ ಮೇಲೆ ಸುತ್ತಲೂ ಚಿಮುಕಿಸಬೇಕು.

29:17b.EXO.029.017 ಇದಲ್ಲದೆ ಆ ಟಗರನ್ನು ತುಂಡು ತುಂಡಾಗಿ ಕಡಿದು ಅದರ ಕರುಳುಗಳನ್ನೂ ಕಾಲುಗಳನ್ನೂ ತೊಳೆದು ಅದರ ತುಂಡುಗಳನ್ನು ತಲೆಯ ಸಂಗಡ ಇಡಬೇಕು.

29:18b.EXO.029.018 ಆ ಟಗರನ್ನು ಯಜ್ಞವೇದಿಯ ಮೇಲೆ ಸುಡಬೇಕು, ಅದು ಕರ್ತನಿಗೆ ದಹನಬಲಿಯಾಗಿದೆ. ಅದು ಕರ್ತನಿಗೆ ಸುವಾಸನೆಯ ದಹನಬಲಿಯಾಗಿದೆ.

29:19b.EXO.029.019 ಇನ್ನೊಂದು ಟಗರನ್ನು ನೀನು ತಂದಾಗ ಆರೋ ನನೂ ಅವನ ಕುಮಾರರೂ ಟಗರಿನ ತಲೆಯ ಮೇಲೆ ತಮ್ಮ ಕೈಗಳನ್ನು ಇಡಬೇಕು.

29:20b.EXO.029.020 ತರುವಾಯ ನೀನು ಅದನ್ನು ವಧಿಸಿ ಅದರ ರಕ್ತವನ್ನು ಆರೋನನ ಮತ್ತು ಅವನ ಕುಮಾರರ ಬಲ ಕಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆರಳಿಗೂ ಹಚ್ಚಿ ಮಿಕ್ಕ ರಕ್ತವನ್ನು ಯಜ್ಞವೇದಿಯ ಸುತ್ತಲೂ ಚಿಮುಕಿಸಬೇಕು.

29:21b.EXO.029.021 ಆರೋನನೂ ಅವನ ವಸ್ತ್ರಗಳೂ ಅವನೊಂದಿಗೆ ಅವನ ಕುಮಾರರೂ ಅವರ ವಸ್ತ್ರಗಳೂ ಪರಿಶುದ್ಧ ವಾಗುವ ಹಾಗೆ ಯಜ್ಞವೇದಿಯ ಮೇಲಿರುವ ರಕ್ತವನ್ನೂ ಅಭಿಷೇಕ ತೈಲವನ್ನೂ ತೆಗೆದುಕೊಂಡು ಆರೋನನ ಮೇಲೆಯೂ ಅವನ ವಸ್ತ್ರಗಳ ಮೇಲೆಯೂ ಅವನ ಕುಮಾರರ ಮೇಲೆಯೂ ಅವರ ವಸ್ತ್ರಗಳ ಮೇಲೆಯೂ ನೀನು ಚಿಮುಕಿಸಬೇಕು.

29:22b.EXO.029.022 ಇದಲ್ಲದೆ ಆ ಟಗರಿನ ಕೊಬ್ಬನ್ನೂ ಬಾಲವನ್ನೂ ಕರುಳುಗಳ ಮೇಲಿರುವ ಕೊಬ್ಬನ್ನೂ ಕಲಿಜದ ಮೇಲಿ ರುವ ಪರೆಯನ್ನೂ ಮೂತ್ರಜನಕಾಂಗಗಳನ್ನೂ ಅವು ಗಳ ಮೇಲಿರುವ ಕೊಬ್ಬನ್ನೂ ಬಲ ತೊಡೆಯನ್ನೂ ತೆಗೆದುಕೊಳ್ಳಬೇಕು. ಯಾಕಂದರೆ ಅದು ಪ್ರತಿಷ್ಠೆಯ ಟಗರು.

29:23b.EXO.029.023 ಕರ್ತನ ಮುಂದಿರುವ ಹುಳಿಯಿಲ್ಲದ ರೊಟ್ಟಿಯ ಪುಟ್ಟಿಯೊಳಗಿಂದ ಒಂದು ರೊಟ್ಟಿಯನ್ನೂ ಎಣ್ಣೆಯ ಒಂದು ಹೋಳಿಗೆಯನ್ನೂ ಒಂದು ಪೂರಿ ಯನ್ನೂ

29:24b.EXO.029.024 ನೀನು ತೆಗೆದುಕೊಂಡು ಅವುಗಳನ್ನೆಲ್ಲಾ ಆರೋನನ ಮತ್ತು ಅವನ ಕುಮಾರರ ಕೈಗಳಿಗೆ ಕೊಟ್ಟು ಅವರು ಕರ್ತನ ಮುಂದೆ ಅದನ್ನು ತೂಗು ಅರ್ಪಣೆಗಾಗಿ ತೂಗಬೇಕು.

29:25b.EXO.029.025 ನೀನು ಅವುಗಳನ್ನು ಅವರ ಕೈಯಿಂದ ತೆಗೆದುಕೊಂಡು ಯಜ್ಞವೇದಿಯ ಮೇಲೆ ದಹನಬಲಿ ಯಾಗಿ ಕರ್ತನ ಮುಂದೆ ಸುವಾಸನೆಗೋಸ್ಕರ ದಹಿಸ ಬೇಕು. ಅದು ಕರ್ತನಿಗೆ ಬೆಂಕಿಯಿಂದ ಮಾಡಿದ ಅರ್ಪಣೆ.

29:26b.EXO.029.026 ಇದಲ್ಲದೆ ಆರೋನನು ಪ್ರತಿಷ್ಠೆಯ ಟಗರಿನ ಎದೆಯ ಭಾಗವನ್ನು ತೆಗೆದುಕೊಂಡು ಕರ್ತನ ಮುಂದೆ ತೂಗು ಅರ್ಪಣೆಗಾಗಿ ತೂಗಬೇಕು. ಅದು ನಿನ್ನ ಪಾಲಾಗಿರುವದು.

29:27b.EXO.029.027 ನೀನು ಟಗರಿನ ಎದೆಯ ಭಾಗದ ಆಡಿಸುವ ಅರ್ಪಣೆಯನ್ನು ಎತ್ತಿದ ಬಲದ ಮುಂದೊ ಡೆಯನ್ನು ಆರೋನನ ಮತ್ತು ಅವನ ಕುಮಾರರ ಪ್ರತಿಷ್ಠೆಗಾಗಿ ಎತ್ತಿದ್ದನ್ನೂ ಪರಿಶುದ್ಧ ಮಾಡು.

29:28b.EXO.029.028 ಅದು ಆರೋನನಿಗೂ ಅವನ ಕುಮಾರರಿಗೂ ಇಸ್ರಾಯೇಲ್‌ ಮಕ್ಕಳಿಗೆ ನಿತ್ಯ ಕಟ್ಟಳೆಯಾಗಿರತಕ್ಕದ್ದು. ಯಾಕಂದರೆ ಅದು ಎತ್ತುವ ಅರ್ಪಣೆಯಾಗಿದೆ. ಇಸ್ರಾಯೇಲ್‌ ಮಕ್ಕಳಿಂದ ಎತ್ತುವ ಅರ್ಪಣೆಯೂ ಅವರ ಸಮಾ ಧಾನದ ಬಲಿಗಳ ಅರ್ಪಣೆಗಳಿಂದ ಅವರು ಕರ್ತನಿಗೆ ಎತ್ತುವ ಅರ್ಪಣೆಯೂ ಆಗಿರಬೇಕು.

29:29b.EXO.029.029 ಇದಲ್ಲದೆ ಆರೋನನಿಗೆ ಇದ್ದ ಪರಿಶುದ್ಧ ವಸ್ತ್ರಗಳು ಅವನ ತರುವಾಯ ಅವನ ಕುಮಾರರಿಗೆ ಆಗಬೇಕು. ಅವರು ಅವುಗಳನ್ನು ತೊಟ್ಟುಕೊಂಡು ಅಭಿಷೇಕಿಸಲ್ಪಟ್ಟು ಪ್ರತಿಷ್ಠಿಸಲ್ಪಡಬೇಕು.

29:30b.EXO.029.030 ಅವನ ಬದಲಾಗಿ ಅವನ ಮಗನು ಯಾಜಕತ್ವವನ್ನು ನಡಿಸಿ ಪರಿಶುದ್ಧ ಸ್ಥಳದಲ್ಲಿ ಸೇವೆಮಾಡುವಂತೆ ಬರುವದಕ್ಕಿರುವವನು ಅವುಗಳನ್ನು ಏಳು ದಿನಗಳ ವರೆಗೆ ತೊಟ್ಟುಕೊಳ್ಳಬೇಕು.

29:31b.EXO.029.031 ಪ್ರತಿಷ್ಠೆಯ ಟಗರನ್ನು ತೆಗೆದುಕೊಂಡು ನೀನು ಅದರ ಮಾಂಸವನ್ನು ಪರಿಶುದ್ಧ ಸ್ಥಳದಲ್ಲಿ ಬೇಯಿಸು.

29:32b.EXO.029.032 ಆರೋನನೂ ಅವನ ಕುಮಾರರೂ ಟಗರಿನ ಮಾಂಸ ವನ್ನೂ ಪುಟ್ಟಿಯಲ್ಲಿರುವ ರೊಟ್ಟಿಯನ್ನೂ ಸಭೆಯ ಗುಡಾ ರದ ಬಾಗಲಿನ ಬಳಿಯಲ್ಲಿ ಊಟಮಾಡಬೇಕು.

29:33b.EXO.029.033 ಅವ ರನ್ನು ಪ್ರತಿಷ್ಠೆಮಾಡುವದಕ್ಕೋಸ್ಕರ ಮತ್ತು ಪರಿಶುದ್ಧ ಮಾಡುವದಕ್ಕೋಸ್ಕರ ಅವರಿಗಾಗಿ ಪ್ರಾಯಶ್ಚಿತ್ತ ಮಾಡಿ ದವುಗಳನ್ನು ಅವರೇ ಊಟಮಾಡಬೇಕು. ಅನ್ಯರು ಅವುಗಳನ್ನು ಉಣ್ಣಬಾರದು, ಯಾಕಂದರೆ ಅವುಗಳು ಪರಿಶುದ್ಧವಾದವುಗಳು.

29:34b.EXO.029.034 ಪ್ರತಿಷ್ಠೆಯ ಮಾಂಸದ ಲ್ಲಿಯೂ ರೊಟ್ಟಿಯಲ್ಲಿಯೂ ಮರುದಿನದ ವರೆಗೆ ಏನಾದರೂ ಮಿಕ್ಕಿದ್ದರೆ ಅದನ್ನು ಬೆಂಕಿಯಿಂದ ಸುಡ ಬೇಕು. ಅದು ಪರಿಶುದ್ಧವಾಗಿರುವದರಿಂದ ಅದನ್ನು ಊಟ ಮಾಡಬಾರದು.

29:35b.EXO.029.035 ಹೀಗೆ ಆರೋನನಿಗೂ ಅವನ ಕುಮಾರರಿಗೂ ನಾನು ನಿನಗೆ ಆಜ್ಞಾಪಿಸಿದ ಎಲ್ಲವುಗಳ ಪ್ರಕಾರ ನಡಿಸಿ ಏಳು ದಿವಸ ಅವರನ್ನು ಪ್ರತಿಷ್ಠೆಮಾಡಬೇಕು.

29:36b.EXO.029.036 ಪಾಪದ ಯಜ್ಞವಾದ ಹೋರಿಯನ್ನು ಪ್ರತಿದಿನ ಪ್ರಾಯಶ್ಚಿತ್ತಕ್ಕಾಗಿ ತಂದು ಯಜ್ಞವೇದಿಗಾಗಿ ಪ್ರಾಯ ಶ್ಚಿತ್ತ ಮಾಡಿದ ಮೇಲೆ ಅದರ ದೋಷವನ್ನು ಪರಿ ಹರಿಸಿ ಅದನ್ನು ಪವಿತ್ರಮಾಡುವದಕ್ಕೆ ಅದನ್ನು ಅಭಿಷೇಕಿಸಬೇಕು.

29:37b.EXO.029.037 ಏಳು ದಿವಸ ಯಜ್ಞವೇದಿಗೋಸ್ಕರ ಪ್ರಾಯಶ್ಚಿತ್ತ ಮಾಡಿ ಅದನ್ನು ಪವಿತ್ರಮಾಡಬೇಕು. ಆಗ ಯಜ್ಞ ವೇದಿಯು ಅತಿಪರಿಶುದ್ಧವಾಗಿರುವದು. ಯಜ್ಞವೇದಿ ಯನ್ನು ಮುಟ್ಟುವದೆಲ್ಲಾ ಪವಿತ್ರವಾಗಿರಬೇಕು.

29:38b.EXO.029.038 ಇದಲ್ಲದೆ ಯಜ್ಞವೇದಿಯ ಮೇಲೆ ನೀನು ಅರ್ಪಿಸ ಬೇಕಾದದ್ದು ಇದೇ; ಒಂದು ವರುಷದ ಎರಡು ಕುರಿಮರಿಗಳನ್ನು ಪ್ರತಿದಿನ ಬಿಡದೆ ಅರ್ಪಿಸಬೇಕು.

29:39b.EXO.029.039 ಒಂದು ಕುರಿಮರಿಯನ್ನು ಬೆಳಿಗ್ಗೆ ಅರ್ಪಿಸಬೇಕು, ಮತ್ತೊಂದನ್ನು ಸಾಯಂಕಾಲ ಅರ್ಪಿಸಬೇಕು.

29:40b.EXO.029.040 ಹಿನ್ನಿನ ನಾಲ್ಕನೆಯ ಒಂದು ಪಾಲಿನಷ್ಟು ಹಿಂಡಿದ ಎಣ್ಣೆ ಹೊಯಿದ ನಯವಾದ ಹಿಟ್ಟಿನ ಹತ್ತನೆಯ ಪಾಲೂ ಹಿನ್ನಿನ ನಾಲ್ಕನೆಯ ಪಾಲಿನಷ್ಟು ದ್ರಾಕ್ಷಾರಸದ ಪಾನ ದರ್ಪಣೆಯೂ ಒಂದು ಕುರಿಮರಿಯೊಂದಿಗೆ ಅರ್ಪಿಸ ಬೇಕು.

29:41b.EXO.029.041 ಇನ್ನೊಂದು ಕುರಿಮರಿಯನ್ನು ಸಾಯಂಕಾಲ ದಲ್ಲಿ ಅರ್ಪಿಸಬೇಕು. ಉದಯದ ಆಹಾರ ಕಾಣಿಕೆ ಯಂತೆಯೂ ಅದರ ಪಾನದರ್ಪಣೆಯಂತೆಯೂ ಇದಕ್ಕೂ ಮಾಡಿ ಕರ್ತನಿಗೆ ಸುವಾಸನೆಯಾಗಿರುವಂತೆ ಬೆಂಕಿಯಿಂದ ಅರ್ಪಿಸಬೇಕು.

29:42b.EXO.029.042 ಇದು ತಲತಲಾಂತರಗಳಲ್ಲಿಯೂ ನಿತ್ಯಕ್ಕೂ ಸಭೆಯ ಗುಡಾರದ ಮುಂದೆ ಕರ್ತನ ಸನ್ನಿಧಿಯಲ್ಲಿ ನಾನು ನಿಮ್ಮ ಸಂಗಡ ಮಾತನಾಡುವದಕ್ಕೆ ಸಂಧಿಸುವಲ್ಲಿ ಇದೇ ನಿತ್ಯವಾದ ದಹನಬಲಿಯಾಗಿರುವದು.

29:43b.EXO.029.043 ಅಲ್ಲಿ ನಾನು ಇಸ್ರಾಯೇಲ್‌ ಮಕ್ಕಳನ್ನು ಸಂಧಿಸುವೆನು. ಗುಡಾರವು ನನ್ನ ಮಹಿಮೆಯಿಂದ ಪವಿತ್ರವಾಗುವದು.

29:44b.EXO.029.044 ಸಭೆಯ ಗುಡಾರವನ್ನೂ ಯಜ್ಞವೇದಿಯನ್ನೂ ಪರಿಶುದ್ಧಮಾಡುವೆನು. ಆರೋನನನ್ನೂ ಅವನ ಕುಮಾರರನ್ನೂ ನನಗೆ ಯಾಜಕ ಸೇವೆಮಾಡುವಂತೆ ಪವಿತ್ರಮಾಡುವೆನು.

29:45b.EXO.029.045 ಇಸ್ರಾಯೇಲ್‌ ಮಕ್ಕಳ ಮಧ್ಯ ದಲ್ಲಿ ನಾನು ವಾಸಮಾಡಿ ಅವರಿಗೆ ದೇವರಾಗಿರುವೆನು.ಅವರ ಮಧ್ಯದಲ್ಲಿ ನಾನು ವಾಸವಾಗಿರುವದಕ್ಕಾಗಿ ಅವರನ್ನು ಐಗುಪ್ತದೇಶದೊಳಗಿಂದ ಹೊರಗೆ ಬರ ಮಾಡಿದ ಅವರ ದೇವರಾದ ಕರ್ತನು ನಾನೇ ಎಂದು ಅವರಿಗೆ ತಿಳಿಯುವದು. ನಾನೇ ಅವರ ದೇವರಾದ ಕರ್ತನು.

29:46b.EXO.029.046 ಅವರ ಮಧ್ಯದಲ್ಲಿ ನಾನು ವಾಸವಾಗಿರುವದಕ್ಕಾಗಿ ಅವರನ್ನು ಐಗುಪ್ತದೇಶದೊಳಗಿಂದ ಹೊರಗೆ ಬರ ಮಾಡಿದ ಅವರ ದೇವರಾದ ಕರ್ತನು ನಾನೇ ಎಂದು ಅವರಿಗೆ ತಿಳಿಯುವದು. ನಾನೇ ಅವರ ದೇವರಾದ ಕರ್ತನು.

30

30:1b.EXO.030.001 ನೀನು ಧೂಪ ಸುಡುವ ವೇದಿಯನ್ನು ಮಾಡಬೇಕು; ಜಾಲೀ ಮರದಿಂದ ಅದನ್ನು ಮಾಡಬೇಕು.

30:2b.EXO.030.002 ಅದರ ಉದ್ದ ಒಂದು ಮೊಳ, ಅಗಲ ಒಂದು ಮೊಳ, ಎತ್ತರ ಎರಡು ಮೊಳ ಇದ್ದು ಅದು ಚಚ್ಚೌಕವಾಗಿರಬೇಕು. ಅದಕ್ಕೆ ಕೊಂಬುಗಳನ್ನು ಅದ ರಿಂದಲೇ ಮಾಡಬೇಕು.

30:3b.EXO.030.003 ಮೇಲ್ಭಾಗವನ್ನೂ ಸುತ್ತಲಿನ ಭಾಗಗಳನ್ನೂ ಕೊಂಬುಗಳನ್ನೂ ಶುದ್ಧ ಬಂಗಾರದಿಂದ ಹೊದಿಸಿ ಸುತ್ತಲೂ ಬಂಗಾರದ ಗೋಟನ್ನು ಮಾಡ ಬೇಕು.

30:4b.EXO.030.004 ಗೋಟಿನ ಕೆಳಗೆ ಎರಡೂ ಪಕ್ಕಗಳ ಎರಡು ಮೂಲೆಗಳಲ್ಲಿ ಎರಡು ಬಂಗಾರದ ಬಳೆಗಳನ್ನು ಮಾಡ ಬೇಕು. ಇವುಗಳನ್ನು ಹೊರುವದಕ್ಕಾಗಿ ಅವುಗಳಲ್ಲಿ ಸಿಕ್ಕಿಸಬೇಕು.

30:5b.EXO.030.005 ಆ ಕೋಲುಗಳನ್ನು ಜಾಲೀ ಮರದಿಂದ ಮಾಡಿ ಅವುಗಳನ್ನು ಬಂಗಾರದಿಂದ ಹೊದಿಸಬೇಕು.

30:6b.EXO.030.006 ಅದನ್ನು ಸಾಕ್ಷಿ ಹಲಗೆಗಳಿದ್ದ ಮಂಜೂಷದ ಮುಂದೆ ಇರುವ ತೆರೆಯ ಮುಂದೆಯೂ ನಾನು ನಿನ್ನನ್ನು ಸಂಧಿಸುವ ಸ್ಥಳದಲ್ಲಿ ಇರುವ ಮಂಜೂಷದ ಮೇಲಿನ ಕರುಣಾ ಸನದ ಮುಂದೆಯೂ ಇಡಬೇಕು.

30:7b.EXO.030.007 ಪ್ರತಿದಿನ ಬೆಳಿಗ್ಗೆ ಆರೋನನು ಪರಿಮಳ ಧೂಪ ವನ್ನು ಅದರ ಮೇಲೆ ಸುಡಬೇಕು. ಅವನು ದೀಪಗಳನ್ನು ಸಿದ್ಧಮಾಡುವಾಗ ಪರಿಮಳ ಧೂಪವನ್ನು ಅದರ ಮೇಲೆ ಸುಡಬೇಕು.

30:8b.EXO.030.008 ಆರೋನನು ಸಾಯಂಕಾಲ ದೀಪಗಳನ್ನು ಅಂಟಿಸುವ ಸಮಯದಲ್ಲಿ ಧೂಪವೇದಿಯ ಮೇಲೆ ಧೂಪವನ್ನು ಸುಡಬೇಕು. ಅದೇ ನಿಮ್ಮ ಸಂತತಿಯವರಿಗೆ ಕರ್ತನ ಮುಂದೆ ಅರ್ಪಿಸಬೇಕಾದ ನಿತ್ಯವಾದ ಧೂಪ ವು.

30:9b.EXO.030.009 ನೀವು ಅದರ ಮೇಲೆ ಬೇರೆ ಧೂಪವನ್ನಾಗಲಿ ದಹನಬಲಿಗಳನ್ನಾಗಲಿ ಆಹಾರಾರ್ಪಣೆಯನ್ನಾಗಲಿ ಅರ್ಪಿಸಬಾರದು. ಇಲ್ಲವೆ ಪಾನಾರ್ಪಣೆಯನ್ನು ಅದರ ಮೇಲೆ ಹೊಯ್ಯಬಾರದು.

30:10b.EXO.030.010 ಆರೋನನು ಅದರ ಕೊಂಬುಗಳಿಗೆ ವರುಷಕ್ಕೆ ಒಂದು ಸಾರಿ ಪ್ರಾಯಶ್ಚಿತ್ತದ ಬಲಿಯ ರಕ್ತದಿಂದ ಪ್ರಾಯಶ್ಚಿತ್ತ ಮಾಡಬೇಕು. ವರುಷಕ್ಕೊಂದು ಸಾರಿ ನಿಮ್ಮ ಸಂತತಿಗಳಲ್ಲೆಲ್ಲಾ ಅದನ್ನು ಮಾಡಬೇಕು. ಅದು ಕರ್ತನಿಗೆ ಅತಿಪರಿಶುದ್ಧವಾದದ್ದು.

30:11b.EXO.030.011 ಆಗ ಕರ್ತನು ಮಾತನಾಡಿ ಮೋಶೆಗೆ--

30:12b.EXO.030.012 ನೀನು ಇಸ್ರಾಯೇಲ್‌ ಮಕ್ಕಳ ಲೆಕ್ಕವನ್ನು ಅದರ ಸಂಖ್ಯೆಗೆ ಸರಿಯಾಗಿ ಎಣಿಸಿದಾಗ ಅವರಲ್ಲಿ ವ್ಯಾಧಿ ಉಂಟಾಗದ ಹಾಗೆ ಅವರನ್ನು ಕ್ರಮವಾಗಿ ಎಣಿಸಿ ಒಬ್ಬೊಬ್ಬನು ತನ್ನ ಪ್ರಾಣದ ವಿಮೋಚನೆಯ ಕ್ರಮವನ್ನು ಕರ್ತನಿಗೆ ಕೊಡಬೇಕು.

30:13b.EXO.030.013 ಎಣಿಸಲ್ಪಟ್ಟವರಲ್ಲಿ ಸೇರುವ ಪ್ರತಿ ಮನುಷ್ಯನು ಕೊಡಬೇಕಾದದ್ದು ಏನಂದರೆ: ಶೆಕೆಲಿಗೆ ಇಪ್ಪತ್ತು ಗೇರಾ ಪ್ರಕಾರವಾಗಿ ಪರಿಶುದ್ಧ ಆಲಯದ ಶೆಕೆಲಿನ ಮೇರೆಗೆ ಅರೆ ಶೆಕೆಲ್‌ ಕೊಡಬೇಕು. ಅರೆ ಶೆಕೆಲ್‌ ಕರ್ತನಿಗೆ ಅರ್ಪಿಸುವ ಕಾಣಿಕೆಯಾಗಿರಬೇಕು.

30:14b.EXO.030.014 ಕ್ರಮವಾಗಿ ಲೆಕ್ಕಿಸಲ್ಪಟ್ಟವರಲ್ಲಿ ಸೇರುವ ಪ್ರತಿ ಮನು ಷ್ಯನು ಇಪ್ಪತ್ತು ವರುಷ ಮೊದಲುಗೊಂಡು ಅದಕ್ಕೆ ಮೇಲಾದ ಪ್ರಾಯವುಳ್ಳವರು ಕರ್ತನಿಗೆ ಕಾಣಿಕೆಯನ್ನು ಕೊಡಬೇಕು.

30:15b.EXO.030.015 ನಿಮ್ಮ ಪ್ರಾಣಗಳ ಪ್ರಾಯಶ್ಚಿತ್ತಕ್ಕೆ ಕರ್ತನಿಗೆ ಅರ್ಪಿಸುವ ಕಾಣಿಕೆಯನ್ನು ಕೊಡುವದರಲ್ಲಿ ಐಶ್ವರ್ಯವಂತರು ಅರೆ ಶೆಕೆಲಿಗಿಂತ ಹೆಚ್ಚು ಕೊಡಬಾರದು. ಬಡವನು ಕಡಿಮೆ ಕೊಡಬಾರದು.

30:16b.EXO.030.016 ಪ್ರಾಯಶ್ಚಿತ್ತದ ಹಣವನ್ನು ಇಸ್ರಾಯೇಲ್‌ ಮಕ್ಕಳಿಂದ ತೆಗೆದುಕೊಂಡು ಸಭೆಯ ಗುಡಾರದ ಕೆಲಸಕ್ಕಾಗಿ ಪ್ರತ್ಯೇ ಕಿಸಬೇಕು. ಇದೇ ಕರ್ತನ ಮುಂದೆ ಇಸ್ರಾಯೇಲ್‌ ಮಕ್ಕಳಿಗೆ ಜ್ಞಾಪಕಾರ್ಥಕ್ಕಾಗಿಯೂ ಅವರ ಪ್ರಾಣಗಳ ಪ್ರಾಯಶ್ಚಿತ್ತಕ್ಕಾಗಿಯೂ ಇರುವದು ಅಂದನು.

30:17b.EXO.030.017 ಕರ್ತನು ಮೋಶೆಗೆ--

30:18b.EXO.030.018 ತೊಳೆದುಕೊಳ್ಳುವ ದಕ್ಕಾಗಿ ಹಿತ್ತಾಳೆಯಒಂದು ಗಂಗಾಳವನ್ನೂ ಅದಕ್ಕೆ ಹಿತ್ತಾಳೆಯ ಕಾಲುಗಳನ್ನು ಮಾಡಿ ಅದನ್ನು ಸಭೆಯ ಗುಡಾರಕ್ಕೂ ಯಜ್ಞವೇದಿಗೂ ಮಧ್ಯದಲ್ಲಿಟ್ಟು ಅದರಲ್ಲಿ ನೀರನ್ನು ಹೊಯ್ಯಬೇಕು.

30:19b.EXO.030.019 ಆರೋನನೂ ಅವನ ಕುಮಾರರೂ ಅದರಲ್ಲಿ ಕೈಕಾಲುಗಳನ್ನು ತೊಳೆಯಬೇಕು.

30:20b.EXO.030.020 ಅವರು ಸಭೆಯ ಗುಡಾರದಲ್ಲಿ ಪ್ರವೇಶಿಸುವಾಗ ಸೇವೆಮಾಡುವದಕ್ಕೂ ಬೆಂಕಿಯಿಂದ ಕರ್ತನಿಗೆ ದಹನ ಬಲಿಯನ್ನು ಅರ್ಪಿಸುವದಕ್ಕೂ ಯಜ್ಞವೇದಿಯ ಬಳಿಗೆ ಬರುವಾಗ ಅವರು ಸಾಯದ ಹಾಗೆ ನೀರಿನಲ್ಲಿ ತೊಳೆದು ಕೊಳ್ಳಬೇಕು.

30:21b.EXO.030.021 ಅವರು ಸಾಯದ ಹಾಗೆ ತಮ್ಮ ಕೈಕಾಲು ಗಳನ್ನು ತೊಳೆದುಕೊಳ್ಳಬೇಕು. ಇದೇ ಅವನಿಗೂ ಅವನ ಸಂತತಿಯವರಿಗೂ ತಲತಲಾಂತರಗಳಲ್ಲಿ ನಿತ್ಯವಾದ ಕಟ್ಟಳೆಯಾಗಿರಬೇಕು ಅಂದನು.

30:22b.EXO.030.022 ಇದಲ್ಲದೆ ಕರ್ತನು ಮೋಶೆಗೆ--

30:23b.EXO.030.023 ಉತ್ತಮ ವಾದ ತೈಲಗಳನ್ನು ಅಂದರೆ ಐದುನೂರು ಶೆಕೆಲ್‌ ಸ್ವಚ್ಚವಾದ ರಕ್ತ ಬೋಳವು, ಅದರ ಅರ್ಧದಷ್ಟು ಅಂದರೆ ಇನ್ನೂರೈವತ್ತು ಶೆಕೆಲಿನ ಸುಗಂಧವಾದ ಲವಂಗ ಪಟ್ಟೆ ಯನ್ನು ಮತ್ತು ಇನ್ನೂರೈವತ್ತು ಶೆಕೆಲ್‌ ಸುಗಂಧವಾದ ಬಜೆಯನ್ನು,

30:24b.EXO.030.024 ಐದುನೂರು ಶೆಕೆಲ್‌ದಾಲ್ಚಿನ್ನಿಯನ್ನು, ಪರಿಶುದ್ಧ ಸ್ಥಳದ ಶೆಕೆಲಿನ ಮೇರೆಗೆ ಇವುಗಳನ್ನು ನೀನು ತೆಗೆದುಕೊಳ್ಳಬೇಕು. ಹಿಪ್ಪೆ ಎಣ್ಣೆಯ ಒಂದು ಹಿನ್ನೆಯನ್ನು ಸಹ ತೆಗೆದುಕೊಂಡು,

30:25b.EXO.030.025 ಅದರಿಂದ ತೈಲಗಾರರ ವಿದ್ಯೆಯ ಪ್ರಕಾರ ಪರಿಶುದ್ಧವಾದ ಅಭಿಷೇಕ ತೈಲವನ್ನು ಮಾಡು, ಇದು ಪರಿಶುದ್ಧವಾದ ಅಭಿಷೇಕದ ತೈಲವಾಗಿ ರುವದು.

30:26b.EXO.030.026 ಅದರಿಂದ ಸಭೆಯ ಗುಡಾರವನ್ನೂ ಸಾಕ್ಷಿಯ ಹಲಗೆಗಳ ಮಂಜೂಷವನ್ನೂ ನೀನು ಅಭಿಷೇ ಕಿಸಬೇಕು.

30:27b.EXO.030.027 ಮೇಜನ್ನೂ ಅದರ ಎಲ್ಲಾ ಸಾಮಾನು ಗಳನ್ನೂ ದೀಪಸ್ತಂಭವನ್ನೂ ಅದರ ಎಲ್ಲಾ ಸಾಮಾನು ಗಳನ್ನೂ ಧೂಪವೇದಿಯನ್ನೂ

30:28b.EXO.030.028 ದಹನಬಲಿಯ ವೇದಿಯನ್ನೂ ಅದರ ಎಲ್ಲಾ ಸಾಮಾನುಗಳನ್ನೂ ಗಂಗಾ ಳವನ್ನೂ ಅದರ ಪೀಠವನ್ನೂ ಅಭಿಷೇಕಿಸು.

30:29b.EXO.030.029 ಅವು ಅತಿಪರಿಶುದ್ಧವಾಗುವಂತೆ ಅವುಗಳನ್ನು ಶುದ್ಧಮಾಡು. ಅವುಗಳನ್ನು ಮುಟ್ಟುವದೆಲ್ಲವೂ ಪರಿಶುದ್ಧವಾಗಿರ ಬೇಕು.

30:30b.EXO.030.030 ಆರೋನನನ್ನೂ ಅವನ ಕುಮಾರರನ್ನೂ ಅಭಿಷೇಕಿಸಿ ಅವರು ನನಗೆ ಯಾಜಕ ಸೇವೆಮಾಡುವಂತೆ ಅವರನ್ನು ಪ್ರತಿಷ್ಠೆಮಾಡು ಅಂದನು.

30:31b.EXO.030.031 ಇಸ್ರಾಯೇಲ್‌ ಮಕ್ಕಳಿಗೆ ನೀನು--ಇದೇ ನಿಮ್ಮ ತಲತಲಾಂತರಗಳಲ್ಲಿ ನನಗೆ ಪರಿಶುದ್ಧವಾದ ಅಭಿಷೇಕಿ ಸುವ ಎಣ್ಣೆಯಾಗಿರಬೇಕು.

30:32b.EXO.030.032 ಅದನ್ನು ಮನುಷ್ಯರ ಮೇಲೆ ಹೊಯ್ಯಬಾರದು, ಇಲ್ಲವೆ ಅದರ ಮಾದರಿ ಯಂತೆ ಅದಕ್ಕೆ ಸಮಾನವಾದದ್ದನ್ನು ಮಾಡಬಾರದು. ಅದು ಪರಿಶುದ್ಧವಾದದ್ದು, ಅದು ನಿಮಗೆ ಪರಿಶುದ್ಧ ವಾಗಿರಬೇಕು.

30:33b.EXO.030.033 ಅದರ ಹಾಗೆ ತೈಲ ಮಾಡುವವನೂ ಅದನ್ನು ಅನ್ಯನಿಗೆ ಕೊಡುವವನೂ ತನ್ನ ಜನರೊಳಗಿಂದ ತೆಗೆದುಹಾಕಲ್ಪಡಬೇಕು ಎಂದು ಹೇಳು ಅಂದನು.

30:34b.EXO.030.034 ಕರ್ತನು ಮೋಶೆಗೆ--ನೀನು ಪರಿಮಳಗಳನ್ನು ಅಂದರೆ ಹಾಲುಮಡ್ಡಿ ಗುಗ್ಗುಲ ಗಂಧದ ಚೆಕ್ಕೆ ಎಂಬ ಪರಿಮಳಗಳನ್ನೂ ಶುದ್ಧವಾದ ಸಾಂಬ್ರಾಣಿಯನ್ನೂ ತೆಗೆದುಕೋ. ಅವು ಸಮತೂಕವಾಗಿರಲಿ.

30:35b.EXO.030.035 ಅದನ್ನು ಸುಗಂಧತೈಲ ಮಾಡುವವರ ವಿದ್ಯೆ ಪ್ರಕಾರ ಬೆರಸಿ ಶುದ್ಧವಾದ ಮತ್ತು ಪವಿತ್ರವಾದ ತೈಲವನ್ನು ಮಾಡ ಬೇಕು.

30:36b.EXO.030.036 ಅದರಲ್ಲಿ ಸ್ವಲ್ಪ ಪುಡಿಮಾಡಿ ಸಭೆಯ ಗುಡಾರ ದಲ್ಲಿ ನಾನು ನಿನ್ನನ್ನು ಸಂಧಿಸುವ ಸ್ಥಳದಲ್ಲಿ ಸಾಕ್ಷಿ ಹಲಗೆಗಳ ಮುಂದೆ ಇಡು. ಅದು ನಿಮಗೆ ಅತಿಪರಿಶುದ್ಧ ವಾಗಿರಲಿ.

30:37b.EXO.030.037 ನೀನು ಮಾಡುವ ಧೂಪದ ಮಾದರಿ ಯಂತೆ ನಿಮಗೋಸ್ಕರ ಮಾಡಿಕೊಳ್ಳಬಾರದು. ಕರ್ತನಿ ಗೋಸ್ಕರ ಅದು ನಿನಗೆ ಪರಿಶುದ್ಧವಾಗಿರಬೇಕು.ಅದರ ಪರಿಮಳವನ್ನು ನೋಡುವದಕ್ಕೆ ಅದರ ಹಾಗೆ ಮಾಡುವವನು ತನ್ನ ಜನರೊಳಗಿಂದ ತೆಗೆದು ಹಾಕಲ್ಪಡ ಬೇಕು ಅಂದನು.

30:38b.EXO.030.038 ಅದರ ಪರಿಮಳವನ್ನು ನೋಡುವದಕ್ಕೆ ಅದರ ಹಾಗೆ ಮಾಡುವವನು ತನ್ನ ಜನರೊಳಗಿಂದ ತೆಗೆದು ಹಾಕಲ್ಪಡ ಬೇಕು ಅಂದನು.

31

31:1b.EXO.031.001 ಕರ್ತನು ಮೋಶೆಯ ಸಂಗಡ ಮಾತನಾಡಿಅವನಿಗೆ--

31:2b.EXO.031.002 ನೋಡು, ನಾನು ಯೆಹೂದ ಕುಲದವನಾದ ಹೂರನ ಮೊಮ್ಮಗನೂ ಊರಿಯನ ಮಗನೂ ಆಗಿರುವ ಬೆಚಲೇಲನನ್ನು ಹೆಸರು ಹೇಳಿ ಕರೆದಿದ್ದೇನೆ.

31:3b.EXO.031.003 ನಾನು ಅವನನ್ನು ದೇವರ ಆತ್ಮನಿಂದಲೂ ಜ್ಞಾನದಿಂದಲೂ ತಿಳುವಳಿಕೆಯಿಂದಲೂ ವಿವೇಕ ದಿಂದಲೂ ಎಲ್ಲಾ ತರವಾದ ಕೆಲಸದ ಕಲೆಯಿಂದಲೂ ತುಂಬಿಸಿದ್ದೇನೆ.

31:4b.EXO.031.004 ಅವನು ಚಿನ್ನ ಬೆಳ್ಳಿ ಹಿತ್ತಾಳೆಯ ಕೌಶಲ್ಯದ ಕೆಲಸವನ್ನು ಕಲ್ಪಿಸುವದಕ್ಕೂ

31:5b.EXO.031.005 ಶಿಲ್ಪಿಯ ಕೆಲಸವನ್ನೂ ಮರ ಕೆತ್ತನೆಯನ್ನೂ ಸಕಲ ವಿಧವಾದ ಕೆಲಸಗಳನ್ನೂ ಬಲ್ಲವನಾಗಿರುವನು.

31:6b.EXO.031.006 ನಾನು ಇಗೋ, ನಾನೇ ಅವನೊಂದಿಗೆ ದಾನ್‌ ಕುಲದವನೂ ಅಹೀಸಾ ಮಾಕನ ಮಗನೂ ಆದ ಒಹೊಲೀಯಾಬನನ್ನು ಕೊಟ್ಟಿ ದ್ದೇನೆ. ನಾನು ನಿನಗೆ ಆಜ್ಞಾಪಿಸಿದ್ದೆಲ್ಲವನ್ನು ಮಾಡುವ ದಕ್ಕೆ ಜಾಣನಾದವರೆಲ್ಲರ ಹೃದಯಗಳಲ್ಲಿ ಜ್ಞಾನವನ್ನು ಇಟ್ಟಿದ್ದೇನೆ.

31:7b.EXO.031.007 ಸಭೆಯ ಗುಡಾರವನ್ನೂ ಸಾಕ್ಷಿಯ ಹಲಗೆ ಗಳ ಮಂಜೂಷವನ್ನೂ ಅದರ ಮೇಲಿರುವ ಕರುಣಾಸ ನವನ್ನೂ ಗುಡಾರದ ಎಲ್ಲಾ ಉಪಕರಣಗಳನ್ನೂ

31:8b.EXO.031.008 ಮೇಜನ್ನೂ ಅದರ ಉಪಕರಣಗಳನ್ನೂ ಶುದ್ಧವಾದ ದೀಪಸ್ತಂಭವನ್ನೂ ಅದರ ಎಲ್ಲಾ ಉಪಕರಣಗಳನ್ನೂ ಧೂಪವೇದಿಯನ್ನೂ

31:9b.EXO.031.009 ದಹನಬಲಿಯ ವೇದಿಯನ್ನೂ ಅದರ ಎಲ್ಲಾ ಉಪಕರಣಗಳನ್ನೂ ಗಂಗಾಳವನ್ನೂ ಅದರ ಪೀಠವನ್ನೂ

31:10b.EXO.031.010 ಯಾಜಕನಾದ ಆರೋನನ ಸೇವಾ ವಸ್ತ್ರಗಳನ್ನೂ ಪರಿಶುದ್ಧ ವಸ್ತ್ರ ಗಳನ್ನೂ ಯಾಜಕನ ಕೆಲಸಮಾಡುವದಕ್ಕೆ ಅವನ ಮಕ್ಕಳ ವಸ್ತ್ರಗಳನ್ನೂ

31:11b.EXO.031.011 ಅಭಿಷೇಕಿಸುವ ತೈಲವನ್ನೂ ಪರಿಶುದ್ಧ ಸ್ಥಳಕ್ಕೋಸ್ಕರ ವಿರುವ ಪರಿಮಳ ಧೂಪವನ್ನೂ ನಾನು ನಿನಗೆ ಆಜ್ಞಾಪಿಸಿ ದವುಗಳೆಲ್ಲವನ್ನೂ ಅವರು ಮಾಡುವರು ಅಂದನು.

31:12b.EXO.031.012 ಕರ್ತನು ಮೋಶೆಯೊಂದಿಗೆ ಮಾತನಾಡಿ--

31:13b.EXO.031.013 ನೀನು ಇಸ್ರಾಯೇಲ್‌ ಮಕ್ಕಳೊಂದಿಗೆ ಸಹ ಮಾತ ನಾಡಿ--ನಿಶ್ಚಯವಾಗಿ ನೀವು ನನ್ನ ಸಬ್ಬತ್ತುಗಳನ್ನು ಕೈಕೊಳ್ಳಬೇಕು. ನಿಮ್ಮನ್ನು ಪರಿಶುದ್ಧ ಮಾಡುವ ಕರ್ತನು ನಾನೇ ಎಂದು ನೀವು ತಿಳಿಯುವಂತೆ ಇದೇ ನನಗೂ ನಿಮಗೂ ನಿಮ್ಮ ಸಂತತಿಯವರಿಗೂ ಗುರುತಾಗಿದೆ.

31:14b.EXO.031.014 ಹೀಗಿರುವದರಿಂದ ನೀವು ಸಬ್ಬತ್ತನ್ನು ಕೈಕೊಳ್ಳ ಬೇಕು, ಅದು ನಿಮಗೆ ಪರಿಶುದ್ಧವಾದದ್ದು. ಅದನ್ನು ಅಪವಿತ್ರಮಾಡುವ ಪ್ರತಿಯೊಬ್ಬನು ಖಂಡಿತವಾಗಿ ಸಾಯಬೇಕು. ಆ ದಿನದಲ್ಲಿ ಯಾರಾದರೂ ಕೆಲಸ ಮಾಡಿದರೆ ಅವರನ್ನು ತನ್ನ ಜನರೊಳಗಿಂದ ತೆಗೆದು ಹಾಕಬೇಕು.

31:15b.EXO.031.015 ಆರು ದಿವಸ ಕೆಲಸಮಾಡಬೇಕು; ಆದರೆ ಏಳನೆಯ ದಿನವು ಕರ್ತನಿಗೆ ಪರಿಶುದ್ಧವಾದ ವಿಶ್ರಾಂತಿಯ ಸಬ್ಬತ್ತು. ಸಬ್ಬತ್‌ ದಿನದಲ್ಲಿ ಕೆಲಸ ಮಾಡು ವವರೆಲ್ಲಾ ಖಂಡಿತವಾಗಿ ಸಾಯಬೇಕು.

31:16b.EXO.031.016 ಹೀಗಿರ ಲಾಗಿ ಇಸ್ರಾಯೇಲ್‌ ಮಕ್ಕಳು ತಮ್ಮ ತಲತಲಾಂತರ ಗಳಲ್ಲಿ ನಿತ್ಯ ಒಡಂಬಡಿಕೆಯಾಗಿ ಆಚರಿಸುವಂತೆ ಸಬ್ಬತ್ತ ನ್ನು ಕೈಕೊಳ್ಳಬೇಕು.

31:17b.EXO.031.017 ನನಗೂ ಇಸ್ರಾಯೇಲ್‌ ಮಕ್ಕ ಳಿಗೂ ಇದೇ ಶಾಶ್ವತವಾದ ಗುರುತು. ಯಾಕಂದರೆ ಆರು ದಿವಸಗಳಲ್ಲಿ ಕರ್ತನು ಆಕಾಶವನ್ನೂ ಭೂಮಿ ಯನ್ನೂ ಉಂಟುಮಾಡಿ ಏಳನೆಯ ದಿನದಲ್ಲಿ ವಿಶ್ರಮಿಸಿ ಕೊಂಡು ಉಲ್ಲಾಸಗೊಂಡನು ಎಂದು ಹೇಳು ಅಂದನು.ಆತನು ಮೋಶೆಯ ಸಂಗಡ ಸೀನಾಯಿ ಬೆಟ್ಟದಲ್ಲಿ ಮಾತನಾಡಿ ಮುಗಿಸಿದ ಮೇಲೆ ಅವನಿಗೆ ಆ ಎರಡು ಸಾಕ್ಷಿ ಹಲಗೆಗಳನ್ನೂ ಕೊಟ್ಟನು. ಅವು ದೇವರ ಕೈಯಿಂದ ಕೆತ್ತಲ್ಪಟ್ಟ ಕಲ್ಲಿನ ಹಲಗೆಗಳಾಗಿದ್ದವು.

31:18b.EXO.031.018 ಆತನು ಮೋಶೆಯ ಸಂಗಡ ಸೀನಾಯಿ ಬೆಟ್ಟದಲ್ಲಿ ಮಾತನಾಡಿ ಮುಗಿಸಿದ ಮೇಲೆ ಅವನಿಗೆ ಆ ಎರಡು ಸಾಕ್ಷಿ ಹಲಗೆಗಳನ್ನೂ ಕೊಟ್ಟನು. ಅವು ದೇವರ ಕೈಯಿಂದ ಕೆತ್ತಲ್ಪಟ್ಟ ಕಲ್ಲಿನ ಹಲಗೆಗಳಾಗಿದ್ದವು.

32

32:1b.EXO.032.001 ಮೋಶೆಯು ಬೆಟ್ಟದಿಂದ ಇಳಿದುಬರುವದರಲ್ಲಿ ತಡವಾದದ್ದನ್ನು ಜನರು ನೋಡಿದಾಗ ಅವರು ಆರೋನನ ಬಳಿಗೆ ಕೂಡಿ ಬಂದು ಅವನಿಗೆ--ನೀನು ಎದ್ದು ನಮ್ಮ ಮುಂದೆ ಹೋಗುವ ದೇವರುಗಳನ್ನು ನಮಗಾಗಿ ಮಾಡು, ಐಗುಪ್ತದೇಶದೊಳಗಿಂದ ನಮ್ಮನ್ನು ಕರೆದುಕೊಂಡು ಬಂದ ಮನುಷ್ಯನಾದ ಈ ಮೋಶೆಗೆ ಏನಾಯಿತೋ ನಮಗೆ ತಿಳಿಯದು ಅಂದರು.

32:2b.EXO.032.002 ಅದಕ್ಕೆ ಆರೋನನು ಅವರಿಗೆ--ನಿಮ್ಮ ಹೆಂಡತಿಯರ ಮತ್ತು ನಿಮ್ಮ ಕುಮಾರ ಕುಮಾರ್ತೆಯರ ಕಿವಿಗಳಲ್ಲಿರುವ ಚಿನ್ನದ ವಾಲೆಗಳನ್ನು ಕಿತ್ತು ನನ್ನ ಬಳಿಗೆ ತನ್ನಿರಿ ಅಂದನು.

32:3b.EXO.032.003 ಆಗ ಜನರೆಲ್ಲರು ತಮ್ಮ ಕಿವಿಗಳಲ್ಲಿದ್ದ ಚಿನ್ನದ ವಾಲೆಗಳನ್ನು ಕಿತ್ತು ಆರೋನನ ಬಳಿಗೆ ತಂದರು.

32:4b.EXO.032.004 ಅವನು ಅವುಗಳನ್ನು ಅವರ ಕೈಗಳಿಂದ ತೆಗೆದುಕೊಂಡು ಉಳಿಯಿಂದ ರೂಪಿಸಿ ಎರಕಹೊಯ್ದ ಕರುವಾಗಿ ಮಾಡಿದನು. ಆಗ ಅವರು--ಓ ಇಸ್ರಾ ಯೇಲೇ, ನಿನ್ನನ್ನು ಐಗುಪ್ತದೇಶದೊಳಗಿಂದ ಬರ ಮಾಡಿದ ನಿನ್ನ ದೇವರುಗಳು ಇವೇ ಆಗಿರಲಿ ಅಂದರು.

32:5b.EXO.032.005 ಆರೋನನು ಅದನ್ನು ನೋಡಿ ಅದರ ಮುಂದೆ ಯಜ್ಞವೇದಿಯನ್ನು ಕಟ್ಟಿದನು. ಆರೋನನು--ನಾಳೆ ಕರ್ತನಿಗೆ ಹಬ್ಬ ಎಂದು ಪ್ರಕಟಿಸಿದನು.

32:6b.EXO.032.006 ಮರುದಿನ ದಲ್ಲಿ ಅವರು ಬೆಳಿಗ್ಗೆ ಎದ್ದು ದಹನಬಲಿಗಳನ್ನು ಅರ್ಪಿಸಿ ಸಮಾಧಾನದ ಬಲಿಗಳನ್ನು ತಂದರು. ಜನರು ಉಣ್ಣುವದಕ್ಕೂ ಕುಡಿಯುವದಕ್ಕೂ ಕೂತುಕೊಂಡು, ಎದ್ದು ಕುಣಿದಾಡಿದರು.

32:7b.EXO.032.007 ಆಗ ಕರ್ತನು ಮೋಶೆಗೆ--ನೀನು ಇಳಿದು ಹೋಗು; ನೀನು ಐಗುಪ್ತ ದೇಶದೊಳಗಿಂದ ಬರ ಮಾಡಿದ ನಿನ್ನ ಜನರು ತಮ್ಮನ್ನು ಕೆಡಿಸಿಕೊಂಡಿದ್ದಾರೆ.

32:8b.EXO.032.008 ನಾನು ಅವರಿಗೆ ಆಜ್ಞಾಪಿಸಿದ ಮಾರ್ಗವನ್ನು ಬೇಗನೆ ಬಿಟ್ಟು ತಮಗೆ ಎರಕ ಹೊಯ್ದ ಕರುವನ್ನು ಮಾಡಿ ಕೊಂಡು ಅದನ್ನು ಆರಾಧಿಸುತ್ತಾ ಅದಕ್ಕೆ ಬಲಿ ಅರ್ಪಿಸಿ--ಓ ಇಸ್ರಾಯೇಲೇ, ನಿನ್ನನ್ನು ಐಗುಪ್ತ ದೇಶದೊಳಗಿಂದ ಬರಮಾಡಿದ ನಿನ್ನ ದೇವರುಗಳು ಇವುಗಳೇ ಎಂದು ಹೇಳುತ್ತಾರೆ.

32:9b.EXO.032.009 ಇದಲ್ಲದೆ ಕರ್ತನು ಮೋಶೆಗೆ--ನಾನು ಈ ಜನ ರನ್ನು ನೋಡಿದ್ದೇನೆ; ಇಗೋ, ಇದು ಬೊಗ್ಗದ ಕುತ್ತಿಗೆಯುಳ್ಳ ಜನವೇ.

32:10b.EXO.032.010 ಹೀಗಿರುವದರಿಂದ ನನ್ನ ಕೋಪವು ಅವರ ಮೇಲೆ ಉರಿದು ಅವರನ್ನು ದಹಿಸಿ ಬಿಡುವಂತೆ ನನ್ನನ್ನು ಬಿಡು. ತರುವಾಯ ನಾನು ನಿನ್ನನ್ನು ದೊಡ್ಡ ಜನಾಂಗವಾಗುವಂತೆ ಮಾಡುವೆನು ಅಂದನು.

32:11b.EXO.032.011 ಅದಕ್ಕೆ ಮೋಶೆಯು ತನ್ನ ದೇವರಾದ ಕರ್ತನ ಸನ್ನಿಧಿಯಲ್ಲಿ ಬೇಡಿಕೊಂಡು ಹೇಳಿದ್ದೇನಂದರೆ--ಕರ್ತನೇ, ನೀನು ಮಹಾಶಕ್ತಿಯಿಂದಲೂ ಬಲವುಳ್ಳ ಕೈಯಿಂದಲೂ ಐಗುಪ್ತದೇಶದೊಳಗಿಂದ ಹೊರಗೆ ಬರಮಾಡಿದ ನಿನ್ನ ಜನರ ಮೇಲೆ ನಿನ್ನ ಕೋಪವು ಯಾಕೆ ಉರಿಯುವದು?

32:12b.EXO.032.012 ಕೇಡಿನ ನಿಮಿತ್ತವೂ ಬೆಟ್ಟಗಳಲ್ಲಿ ಅವರನ್ನು ಕೊಲ್ಲುವದಕ್ಕೂ ಭೂಮಿಯ ಮೇಲಿನಿಂದ ಅವರನ್ನು ದಹಿಸಿಬಿಡುವದಕ್ಕೂ ಆತನು ಅವರನ್ನು ಹೊರಗೆ ಬರಮಾಡಿದ್ದಾನೆ ಎಂದು ಐಗುಪ್ತ್ಯರು ಯಾಕೆ ಹೇಳಬೇಕು? ನಿನ್ನ ಕೋಪದುರಿ ಯನ್ನು ಬಿಟ್ಟು ತಿರುಗಿಕೋ, ನಿನ್ನ ಜನರಿಗೆ ವಿರೋಧ ವಾದ ಈ ಕೇಡಿನ ವಿಷಯದಲ್ಲಿ ನಿನ್ನ ಮನಸ್ಸನ್ನು ಬದಲಾಯಿಸು.

32:13b.EXO.032.013 ಆಕಾಶದ ನಕ್ಷತ್ರಗಳ ಹಾಗೆ ನಿಮ್ಮ ಸಂತತಿಯನ್ನು ಹೆಚ್ಚಿಸಿ, ನಾನು ಹೇಳಿದ ಈ ದೇಶವನ್ನು ನಿಮ್ಮ ಸಂತತಿಯು ನಿತ್ಯವಾಗಿ ಸ್ವತಂತ್ರಿಸಿಕೊಳ್ಳುವರು ಎಂದು ಯಾರಿಗೆ ನಿನ್ನ ಆಣೆಯಿಟ್ಟು ಪ್ರಮಾಣಮಾಡಿ ದಿಯೋ ಆ ನಿನ್ನ ಸೇವಕರಾದ ಅಬ್ರಹಾಮನನ್ನೂ ಇಸಾಕನನ್ನೂ ಇಸ್ರಾಯೇಲನನ್ನೂ ಜ್ಞಾಪಕ ಮಾಡಿಕೋ ಅಂದನು.

32:14b.EXO.032.014 ಆಗ ಕರ್ತನು ತನ್ನ ಜನರಿಗೆ ಮಾಡುತ್ತೇನೆಂದು ಹೇಳಿದ ಕೇಡಿನ ವಿಷಯದಲ್ಲಿ ಮನಸ್ಸನ್ನು ಬದಲಾಯಿಸಿ ಕೊಂಡನು.

32:15b.EXO.032.015 ಆಗ ಮೋಶೆಯು ತಿರುಗಿಕೊಂಡು ಎರಡೂ ಬದಿಯಲ್ಲಿ ಬರೆದಿರುವ ಹಲಗೆಗಳಾದ ಸಾಕ್ಷಿಯ ಎರಡು ಹಲಗೆಗಳನ್ನು ಕೈಯಲ್ಲಿ ಹಿಡಿದುಕೊಂಡು ಬೆಟ್ಟದಿಂದಿ ಳಿದನು; ಆ ಹಲಗೆಗಳು ಈ ಪಕ್ಕದಲ್ಲಿಯೂ ಆ ಪಕ್ಕದಲ್ಲಿಯೂ ಬರೆಯಲ್ಪಟ್ಟಿದ್ದವು.

32:16b.EXO.032.016 ಆ ಹಲಗೆಗಳು ದೇವರ ಕೆಲಸವಾಗಿದ್ದವು. ಆ ಬರಹವು ಹಲಗೆಗಳ ಮೇಲೆ ಕೆತ್ತಿದ ದೇವರ ಬರಹವೇ.

32:17b.EXO.032.017 ಜನರು ಕೂಗುತ್ತಿದ್ದ ಶಬ್ದವನ್ನು ಯೆಹೋಶುವನು ಕೇಳಿದಾಗ ಮೋಶೆಗೆ--ಪಾಳೆಯದಲ್ಲಿ ಯುದ್ಧದ ಶಬ್ದವು ಇದೆ ಎಂದು ಹೇಳಿದನು.

32:18b.EXO.032.018 ಅದಕ್ಕೆ ಮೋಶೆಯು--ಅದು ಜಯಧ್ವನಿಯು ಅಲ್ಲ, ಅಪ ಜಯದ ಧ್ವನಿಯೂ ಅಲ್ಲ, ಆದರೆ ಹಾಡುವವರ ಧ್ವನಿ ಯನ್ನು ನಾನು ಕೇಳುತ್ತೇನೆ ಅಂದನು.

32:19b.EXO.032.019 ಇದಾದ ಮೇಲೆ ಮೋಶೆಯು ಪಾಳೆಯದ ಸವಿಾಪಕ್ಕೆ ಬಂದು ಆ ಕರುವನ್ನೂ ಅವರ ನಾಟ್ಯವನ್ನೂ ನೋಡಿ ಕೋಪ ಗೊಂಡು ಕೈಯಲ್ಲಿದ್ದ ಹಲಗೆಗಳನ್ನು ಬಿಸಾಡಿ ಬೆಟ್ಟದ ಅಡಿಯಲ್ಲಿ ಅವುಗಳನ್ನು ಒಡೆದುಬಿಟ್ಟನು.

32:20b.EXO.032.020 ಅವರು ಮಾಡಿದ ಕರುವನ್ನು ಅವನು ತೆಗೆದುಕೊಂಡು ಅದನ್ನು ಬೆಂಕಿಯಲ್ಲಿ ಸುಟ್ಟು ಪುಡಿಯಾಗುವ ವರೆಗೆ ಅರೆಸಿ ನೀರಿನ ಮೇಲೆ ಚೆಲ್ಲಿ ಆ ನೀರನ್ನು ಇಸ್ರಾಯೇಲ್‌ ಮಕ್ಕಳು ಕುಡಿಯುವಂತೆ ಮಾಡಿದನು.

32:21b.EXO.032.021 ಮೋಶೆಯು ಆರೋನನಿಗೆ--ಈ ಜನರ ಮೇಲೆ ದೊಡ್ಡ ಪಾಪವನ್ನು ನೀನು ಬರಮಾಡುವಂತೆ ಅವರು ನಿನಗೆ ಏನು ಮಾಡಿದರು ಎಂದು ಕೇಳಿದನು.

32:22b.EXO.032.022 ಅದಕ್ಕೆ ಆರೋನನು--ನನ್ನ ಒಡೆಯನ ಕೋಪ ಉರಿಯದೆ ಇರಲಿ. ಈ ಜನರು ಕೇಡಿನ ಮನಸ್ಸಿನವರಾಗಿದ್ದಾರೆಂದು ನೀನು ಬಲ್ಲೆ.

32:23b.EXO.032.023 ನಮಗೋಸ್ಕರ ನಮ್ಮ ಮುಂದೆ ಹೋಗುವ ದೇವರುಗಳನ್ನು ಮಾಡು. ಯಾಕಂದರೆ ಐಗುಪ್ತದೇಶದೊಳಗಿಂದ ನಮ್ಮನ್ನು ಬರಮಾಡಿದ ಈ ಮೋಶೆಗೆ ಏನಾಯಿತೋ ನಮಗೆ ತಿಳಿಯದು ಎಂದು ನನಗೆ ಅವರು ಹೇಳಿದರು.

32:24b.EXO.032.024 ಆದದರಿಂದ ನಾನು ಅವರಿಗೆ--ಚಿನ್ನ ಇದ್ದವರು ಅದನ್ನು ಕಿತ್ತು ಬಿಡಲಿ ಅಂದೆನು. ಅವರು ಅದನ್ನು ನನಗೆ ಕೊಟ್ಟರು. ನಾನು ಅದನ್ನು ಬೆಂಕಿಯಲ್ಲಿ ಹಾಕಿದಾಗ ಈ ಕರುವು ಉಂಟಾ ಯಿತು ಅಂದೆನು.

32:25b.EXO.032.025 ಜನರು ಬೆತ್ತಲೆಯಾಗಿರುವದನ್ನು ಮೋಶೆಯು ನೋಡಿದಾಗ (ಆರೋನನು ಅವರ ಶತ್ರುಗಳ ಮಧ್ಯ ದಲ್ಲಿ ನಾಚಿಕೆಯಾಗುವಂತೆ ಅವರನ್ನು ಬೆತ್ತಲೆಯಾಗಿ ಮಾಡಿದ್ದನು.)

32:26b.EXO.032.026 ಅವನು ಪಾಳೆಯದ ಬಾಗಿಲಲ್ಲಿ ನಿಂತುಕೊಂಡು--ಕರ್ತನ ಪಕ್ಷದವನು ಯಾರು ಅವನು ನನ್ನ ಬಳಿಗೆ ಬರಲಿ ಅಂದನು. ಆಗ ಲೇವಿಯ ಕುಮಾರರೆಲ್ಲರು ಅವನ ಬಳಿಗೆ ಕೂಡಿ ಬಂದರು.

32:27b.EXO.032.027 ಅವನು ಅವರಿಗೆ--ಇಸ್ರಾಯೇಲಿನ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಪ್ರತಿಯೊಬ್ಬನು ತನ್ನ ಕತ್ತಿಯನ್ನು ಸೊಂಟಕ್ಕೆ ಕಟ್ಟಿಕೊಂಡು ಪಾಳೆಯದಲ್ಲೆಲ್ಲಾ ಒಳಗಿನಿಂದ ಹೊರಕ್ಕೆ ದ್ವಾರದಿಂದ ದ್ವಾರಕ್ಕೆ ಹೋಗಿ ತನ್ನ ಸಹೋದರನನ್ನೂ ತನ್ನ ಜೊತೆಗಾರನನ್ನೂ ತನ್ನ ನೆರೆಯವನನ್ನೂ ಕೊಲ್ಲಲಿ ಎಂದು ಹೇಳಿದನು.

32:28b.EXO.032.028 ಲೇವಿಯ ಮಕ್ಕಳು ಮೋಶೆಯ ಮಾತಿನಂತೆ ಮಾಡಿದರು. ಆ ದಿನದಲ್ಲಿ ಜನರೊಳಗೆ ಹೆಚ್ಚು ಕಡಿಮೆ ಮೂರುಸಾವಿರ ಜನರು ಸತ್ತರು.

32:29b.EXO.032.029 ಮೋಶೆಯು--ಈ ದಿನ ಆತನು ನಿಮ್ಮ ಮೇಲೆ ತನ್ನ ಆಶೀರ್ವಾದವನ್ನು ಅನುಗ್ರಹಿಸುವಂತೆ ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಮಗನಿಗೋಸ್ಕರವೂ ತನ್ನ ಸಹೋದರನಿಗೋಸ್ಕರವೂ ಈ ದಿನ ಕರ್ತನಿಗೆ ಪ್ರತಿಷ್ಠೆ ಮಾಡಿಕೊಳ್ಳಲಿ ಅಂದನು.

32:30b.EXO.032.030 ಮರುದಿನದಲ್ಲಿ ಆದದ್ದೇನಂದರೆ, ಮೋಶೆಯು ಜನರಿಗೆ-ನೀವು ದೊಡ್ಡ ಪಾಪವನ್ನು ಮಾಡಿದ್ದೀರಿ, (ಆದದರಿಂದ) ಈಗ ನಾನು ಕರ್ತನ ಬಳಿಗೆ ಹೋಗು ವೆನು, ಒಂದು ವೇಳೆ ನಿಮ್ಮ ಪಾಪಕ್ಕಾಗಿ ನಾನು ಪ್ರಾಯ ಶ್ಚಿತ್ತ ಮಾಡಿಯೇನು ಅಂದನು.

32:31b.EXO.032.031 ಹೀಗೆ ಮೋಶೆಯು ಕರ್ತನ ಬಳಿಗೆ ತಿರಿಗಿ ಹೋಗಿ ಹೇಳಿದ್ದೇನಂದರೆ, ಅಯ್ಯೋ, ಈ ಜನರು ದೊಡ್ಡ ಪಾಪವನ್ನು ಮಾಡಿದ್ದಾರೆ. ಅವರು ತಮಗೆ ಚಿನ್ನದ ದೇವರುಗಳನ್ನು ಮಾಡಿಕೊಂಡಿದ್ದಾರೆ.

32:32b.EXO.032.032 ಆದಾಗ್ಯೂ ಈಗ ನೀನು ಅವರ ಪಾಪವನ್ನು ಕ್ಷಮಿಸಬೇಕು. ಇಲ್ಲ ವಾದರೆ ನೀನು ಬರೆದ ನಿನ್ನ ಪುಸ್ತಕದಿಂದ ನನ್ನ ಹೆಸರನ್ನು ಅಳಿಸಿಬಿಡು ಎಂದು ಬೇಡಿಕೊಂಡನು.

32:33b.EXO.032.033 ಅದಕ್ಕೆ ಕರ್ತನು ಮೋಶೆಗೆ--ನನಗೆ ವಿರೋಧ ವಾಗಿ ಪಾಪಮಾಡಿದವನ ಹೆಸರನ್ನೇ ನಾನು ನನ್ನ ಪುಸ್ತಕದಿಂದ ಅಳಿಸಿಬಿಡುವೆನು.

32:34b.EXO.032.034 ಆದರೆ ಈಗ ನೀನು ಹೋರಟು ನಾನು ನಿನಗೆ ಹೇಳಿದ ಸ್ಥಳಕ್ಕೆ ಜನರನ್ನು ಕರೆದುಕೊಂಡು ಹೋಗು; ಇಗೋ, ನನ್ನ ದೂತನು ನಿನ್ನ ಮುಂದೆ ಹೋಗುವನು. ಆದಾಗ್ಯೂ ನಾನು ಶಿಕ್ಷಿಸುವ ದಿನದಲ್ಲಿ ಅವರ ಪಾಪಕ್ಕೆ ತಕ್ಕಂತೆ ಶಿಕ್ಷಿಸುವೆನು.ಹೀಗೆ ಜನರ ಪ್ರೇರಣೆಯಿಂದ ಆರೋನನು ಕರುವನ್ನು ಮಾಡಿದ್ದರಿಂದ ಕರ್ತನು ಜನರನ್ನು ಬಾಧಿಸಿದನು.

32:35b.EXO.032.035 ಹೀಗೆ ಜನರ ಪ್ರೇರಣೆಯಿಂದ ಆರೋನನು ಕರುವನ್ನು ಮಾಡಿದ್ದರಿಂದ ಕರ್ತನು ಜನರನ್ನು ಬಾಧಿಸಿದನು.

33

33:1b.EXO.033.001 ಕರ್ತನು ಮೋಶೆಗೆ--ನೀನು ಐಗುಪ್ತ ದೇಶದಿಂದ ಬರಮಾಡಿದ ಜನರ ಸಂಗಡ ಈ ಸ್ಥಳವನ್ನು ಬಿಟ್ಟು ನಾನು ಅಬ್ರಹಾಮ್‌ ಇಸಾಕ್‌ ಯಾಕೋಬರಿಗೂ--ನಿಮ್ಮ ಸಂತತಿಗೆ ಅದನ್ನು ಕೊಡು ವೆನು ಎಂದು ಹೇಳಿ ಪ್ರಮಾಣಮಾಡಿದ ದೇಶಕ್ಕೆ ಹೋಗು.

33:2b.EXO.033.002 ನಾನು ನಿನ್ನ ಮುಂದೆ ದೂತನನ್ನು ಕಳುಹಿಸಿ ಕಾನಾನ್ಯರನ್ನೂ ಅಮೋರಿಯರನ್ನೂ ಹಿತ್ತಿಯರನ್ನೂ ಪೆರಿಜೀಯರನ್ನೂ ಹಿವ್ವಿಯರನ್ನೂ ಯೆಬೂಸಿಯರನ್ನೂ ಹೊರಡಿಸಿ ಬಿಡುವೆನು.

33:3b.EXO.033.003 ಹಾಲೂ ಜೇನೂ ಹರಿಯುವ ದೇಶಕ್ಕೆ ಹೋಗು, ನಾನು ನಿಮ್ಮ ಮಧ್ಯದಲ್ಲಿ ಹೋಗು ವದಿಲ್ಲ. ನೀವು ಬಗ್ಗದ ಕುತ್ತಿಗೆಯುಳ್ಳ ಜನವಾಗಿದ್ದೀರಿ; ಮಾರ್ಗದಲ್ಲಿ ನಿಮ್ಮನ್ನು ನಾನು ಸಂಹರಿಸೇನು ಅಂದನು.

33:4b.EXO.033.004 ಜನರು ಈ ಕಠಿಣವಾದ ಮಾತುಗಳನ್ನು ಕೇಳಿ ದುಃಖಪಟ್ಟರು. ಯಾರೂ ತಮ್ಮ ಆಭರಣಗಳನ್ನು ಹಾಕಿ ಕೊಳ್ಳಲಿಲ್ಲ.

33:5b.EXO.033.005 ಕರ್ತನು ಮೋಶೆಗೆ--ಇಸ್ರಾಯೇಲ್‌ ಮಕ್ಕಳಿಗೆ ಹೀಗೆ ಹೇಳು--ನೀವು ಬಗ್ಗದ ಕುತ್ತಿಗೆಯುಳ್ಳ ಜನರು, ನಾನು ಕ್ಷಣಮಾತ್ರದಲ್ಲಿ ನಿಮ್ಮೊಳಗೆ ಬಂದು ನಿಮ್ಮನ್ನು ನಿರ್ಮೂಲಮಾಡುವೆನು. ಹೀಗಿರುವದರಿಂದ ನಾನು ನಿಮಗೆ ಏನು ಮಾಡಬೇಕೋ ಅದನ್ನು ತಿಳುಕೊಳ್ಳು ವಂತೆ ನಿಮ್ಮ ಆಭರಣಗಳನ್ನು ಈಗ ನಿಮ್ಮಿಂದ ತೆಗೆದು ಬಿಡಿರಿ ಎಂದು ಹೇಳು ಅಂದನು.

33:6b.EXO.033.006 ಅದರಂತೆಯೇ ಇಸ್ರಾಯೇಲ್‌ ಮಕ್ಕಳು ಹೋರೆಬ್‌ ಬೆಟ್ಟದ ಬಳಿಯಲ್ಲಿ ತಮ್ಮ ಆಭರಣಗಳನ್ನು ತೆಗೆದುಬಿಟ್ಟರು.

33:7b.EXO.033.007 ಇದಲ್ಲದೆ ಮೋಶೆಯು ಗುಡಾರವನ್ನು ತೆಗೆದು ಪಾಳೆಯದ ಹೊರಗೆ ಪಾಳೆಯಕ್ಕೆ ದೂರವಾಗಿ ಹಾಕಿ ಅದಕ್ಕೆ ದೇವದರ್ಶನ ಗುಡಾರ ಎಂದು ಹೆಸರಿಟ್ಟನು. ತರುವಾಯ ಕರ್ತನನ್ನು ಹುಡುಕುವವರೆಲ್ಲಾ ಪಾಳೆಯದ ಹೊರಗೆ ಇರುವ ದೇವದರ್ಶನ ಗುಡಾರಕ್ಕೆ ಹೋದರು.

33:8b.EXO.033.008 ಇದಾದ ಮೇಲೆ ಮೋಶೆಯು ಹೊರಗೆ ಗುಡಾರದ ಬಳಿಗೆ ಹೋಗುವಾಗೆಲ್ಲಾ ಜನರೆಲ್ಲರು ಎದ್ದು ತಮ್ಮ ತಮ್ಮ ಗುಡಾರಗಳ ಬಾಗಿಲುಗಳಲ್ಲಿ ನಿಂತುಕೊಂಡು ಮೋಶೆಯು ಗುಡಾರದಲ್ಲಿ ಪ್ರವೇಶಿಸುವ ವರೆಗೆ ಅವನ ಹಿಂದೆ ನೋಡುತ್ತಿದ್ದರು.

33:9b.EXO.033.009 ತರುವಾಯ ಮೋಶೆಯು ಗುಡಾರದಲ್ಲಿ ಪ್ರವೇಶಿಸಿದಾಗ ಮೇಘಸ್ತಂಭವು ಇಳಿದು ಬಂದು ಗುಡಾರದ ಬಾಗಿಲಲ್ಲಿ ನಿಲ್ಲುತಿತ್ತು. ಕರ್ತನು ಮೋಶೆಯ ಸಂಗಡ ಮಾತನಾಡುವನು.

33:10b.EXO.033.010 ಜನ ರೆಲ್ಲರೂ ಗುಡಾರದ ಬಾಗಿಲಲ್ಲಿ ನಿಂತ ಮೇಘಸ್ತಂಭವನ್ನು ನೋಡಿ ತಮ್ಮ ತಮ್ಮ ಡೇರೆಗಳ ಬಾಗಿಲುಗಳಲ್ಲಿ ಎದ್ದು ನಿಂತು ಆರಾಧಿಸುತ್ತಿದ್ದರು.

33:11b.EXO.033.011 ಒಬ್ಬ ಮನುಷ್ಯನು ತನ್ನ ಸ್ನೇಹಿತನ ಸಂಗಡ ಮಾತನಾಡುವಂತೆ ಕರ್ತನು ಮೋಶೆಯ ಸಂಗಡ ಮುಖಾಮುಖಿಯಾಗಿ ಮಾತಾಡು ತ್ತಿದ್ದನು. ತರುವಾಯ ಅವನು ಪಾಳೆಯಕ್ಕೆ ಹಿಂತಿರಿಗಿ ಹೋದನು. ಆದರೆ ಅವನ ಸೇವಕನೂ ನೂನನ ಮಗನೂ ಆದ ಯೆಹೋಶುವ ಎಂಬ ಯೌವನಸ್ಥನು ಗುಡಾರವನ್ನು ಬಿಟ್ಟುಹೋಗಲಿಲ್ಲ.

33:12b.EXO.033.012 ಆಗ ಮೋಶೆಯು ಕರ್ತನಿಗೆ--ನೋಡು, ನೀನು ಜನರನ್ನು ಕರೆದುಕೊಂಡು ಹೋಗು ಎಂದು ನನಗೆ ಹೇಳಿದ್ದೀ ಯಾರನ್ನು ನನ್ನ ಸಂಗಡ ಕಳುಹಿಸುವಿ ಎಂದು ನೀನು ನನಗೆ ತಿಳಿಸಲಿಲ್ಲ. ಆದಾಗ್ಯೂ ನೀನು--ನಾನು ನಿನ್ನ ಹೆಸರಿನ ಮೂಲಕ ನಿನ್ನನ್ನು ತಿಳಿದಿದ್ದೇನೆ, ನನ್ನ ದೃಷ್ಟಿಯಲ್ಲಿ ನಿನಗೆ ಕೃಪೆ ದೊರೆ ಯಿತು ಎಂದು ಹೇಳಿದ್ದೀಯಲ್ಲಾ.

33:13b.EXO.033.013 ಈಗ ನಿನ್ನ ದೃಷ್ಟಿಯಲ್ಲಿ ನನಗೆ ಕೃಪೆ ದೊರಕ್ಕಿದ್ದಾದರೆ ನಾನು ನಿನ್ನನ್ನು ತಿಳಿಯುವ ಹಾಗೆ ನಿನ್ನ ಮಾರ್ಗವನ್ನು ನನಗೆ ತೋರಿಸು. ಆಗ ನಿನ್ನ ದೃಷ್ಟಿಯಲ್ಲಿ ನನಗೆ ಕೃಪೆ ದೊರಕಿರುವದು. ಈ ಜನಾಂಗವು ನಿನ್ನ ಜನರೆಂದು ತಿಳಿದುಕೋ ಎಂದು ನಾನು ಬೇಡಿಕೊಳ್ಳುತ್ತೇನೆ ಎಂದು ಹೇಳಿದನು.

33:14b.EXO.033.014 ಆಗ ಆತನು--ನನ್ನ ಸನ್ನಿಧಾನವು ನಿನ್ನ ಸಂಗಡ ಹೋಗುವದು; ನಾನು ನಿನಗೆ ವಿಶ್ರಾಂತಿಯನ್ನು ಕೊಡುವೆನು ಅಂದನು.

33:15b.EXO.033.015 ಮೋಶೆಯು ಆತನಿಗೆ--ನಿನ್ನ ಸನ್ನಿಧಾನವು ನನ್ನೊಂದಿಗೆ ಹೋಗದಿದ್ದರೆ ನಮ್ಮನ್ನು ಇಲ್ಲಿಂದ ಕರ ಕೊಂಡು ಹೋಗಬೇಡ.

33:16b.EXO.033.016 ನನಗೂ ನಿನ್ನ ಜನರಿಗೂ ನಿನ್ನ ದೃಷ್ಟಿಯಲ್ಲಿ ಕೃಪೆ ದೊರಕಿತೆಂದು ಯಾವದರಿಂದ ತಿಳಿದು ಬರುವದು? ನೀನು ನಮ್ಮೊಂದಿಗೆ ಹೋಗುವ ದರಿಂದ ಅಲ್ಲವೋ? ಹೀಗೆ ನಾನೂ ನಿನ್ನ ಜನರೂ ಭೂಮಿಯ ಮೇಲಿರುವ ಎಲ್ಲಾ ಜನರಿಂದ ಪ್ರತ್ಯೇಕ ವಾಗುವೆವು ಅಂದನು.

33:17b.EXO.033.017 ಅದಕ್ಕೆ ಕರ್ತನು ಮೋಶೆಗೆ--ನೀನು ಆಡಿದ ಈ ಮಾತಿನಂತೆಯೇ ನಾನು ಇದನ್ನು ಮಾಡುತ್ತೇನೆ. ನನ್ನ ದೃಷ್ಟಿಯಲ್ಲಿ ನಿನಗೆ ಕೃಪೆ ದೊರಕಿತು. ನಾನು ನಿನ್ನನ್ನು ಹೆಸರಿನಿಂದ ತಿಳಿದಿದ್ದೇನೆ ಅಂದನು.

33:18b.EXO.033.018 ಅವನು--ನಿನ್ನ ಮಹಿಮೆಯನ್ನು ನನಗೆ ತೋರಿಸು ಎಂದು ನಾನು ನಿನ್ನನ್ನು ಬೇಡುತ್ತೇನೆ ಅಂದನು.

33:19b.EXO.033.019 ಅದಕ್ಕೆ ಆತನು--ನಾನು ನನ್ನ ಸರ್ವೋತ್ತಮತ್ವವನ್ನು ನಿನ್ನೆದುರಿಗೆ ಹಾದು ಹೋಗಗೊಡಿಸಿ ಕರ್ತನ ಹೆಸರನ್ನು ನಿನ್ನ ಮುಂದೆ ಪ್ರಕಟಮಾಡಿ ನಾನು ಯಾರಿಗೆ ಕೃಪೆಯುಳ್ಳವ ನಾಗಿರಬೇಕೋ ಅವರಿಗೆ ಕೃಪೆಯುಳ್ಳವನಾಗಿರುವೆನು; ನಾನು ಯಾರಿಗೆ ಕರುಣೆಯನ್ನು ತೋರಿಸಬೇಕೋ ಅವರಿಗೆ ಕರುಣೆಯನ್ನು ತೋರಿಸುವೆನು ಅಂದನು.

33:20b.EXO.033.020 ಆತನು ಅವನಿಗೆ--ನೀನು ನನ್ನ ಮುಖವನ್ನು ನೋಡ ಲಾರಿ; ಯಾವ ಮನುಷ್ಯನೂ ನನ್ನನ್ನು ನೋಡಿ ಬದುಕುವದಿಲ್ಲ ಅಂದನು.

33:21b.EXO.033.021 ಇದಲ್ಲದೆ ಕರ್ತನುಇಗೋ, ನನ್ನ ಬಳಿಯಲ್ಲಿ ಒಂದು ಸ್ಥಳವಿದೆ; ನೀನು ಬಂಡೆಯ ಮೇಲೆ ನಿಂತುಕೊಳ್ಳುವಿ.

33:22b.EXO.033.022 ನನ್ನ ಮಹಿ ಮೆಯು ಹಾದು ಹೋಗುವಾಗ ನಿನ್ನನ್ನು ಬಂಡೆಯ ಬಿರುಕಿನಲ್ಲಿ ನಿಲ್ಲಿಸಿ ನಿನ್ನ ಮೇಲೆ ನನ್ನ ಕೈ ಮುಚ್ಚುವೆನು.ತರುವಾಯ ನನ್ನ ಕೈಯನ್ನು ತೆಗೆದು ಬಿಡುವೆನು, ಆಗ ನೀನು ನನ್ನ ಹಿಂಭಾಗವನ್ನು ನೋಡುವಿ, ಆದರೆ ನನ್ನ ಮುಖವು ಕಾಣಿಸುವದಿಲ್ಲ ಅಂದನು.

33:23b.EXO.033.023 ತರುವಾಯ ನನ್ನ ಕೈಯನ್ನು ತೆಗೆದು ಬಿಡುವೆನು, ಆಗ ನೀನು ನನ್ನ ಹಿಂಭಾಗವನ್ನು ನೋಡುವಿ, ಆದರೆ ನನ್ನ ಮುಖವು ಕಾಣಿಸುವದಿಲ್ಲ ಅಂದನು.

34

34:1b.EXO.034.001 ಕರ್ತನು ಮೋಶೆಗೆ--ಮೊದಲಿನವುಗಳಂತಿರುವ ಕಲ್ಲಿನ ಎರಡು ಹಲಗೆಗಳನ್ನು ಕೆತ್ತಿಸಿಕೋ. ಆಗ ನೀನು ಒಡೆದ ಆ ಮೊದಲನೆಯ ಹಲಗೆಗಳ ಮೇಲೆ ಇದ್ದ ವಾಕ್ಯಗಳನ್ನು ಈ ಹಲಗೆಗಳ ಮೇಲೆ ನಾನು ಬರೆಯುವೆನು.

34:2b.EXO.034.002 ನೀನು ಬೆಳಿಗ್ಗೆ ಸಿದ್ಧನಾಗಿದ್ದು ಸೀನಾಯಿ ಬೆಟ್ಟವನ್ನೇರಿ ಅದರ ಮೇಲೆ ಅಲ್ಲಿ ನನಗಾಗಿ ನೀನು ಹಾಜರಾಗಿರು.

34:3b.EXO.034.003 ಆದರೆ ಯಾರೂ ನಿನ್ನ ಸಂಗಡ ಮೇಲಕ್ಕೆ ಬರಬಾರದು, ಇಲ್ಲವೆ ಬೆಟ್ಟದ ಮೇಲೆ ಎಲ್ಲಿಯೂ ಯಾರೂ ಕಾಣಿಸಬಾರದು, ಇಲ್ಲವೆ ಆ ಬೆಟ್ಟದ ಎದುರಿನಲ್ಲಿ ಕುರಿ ದನಗಳು ಸಹ ಮೇಯ ಬಾರದು.

34:4b.EXO.034.004 ಆಗ ಮೋಶೆಯು ಮೊದಲಿನವುಗಳಂತೆ ಎರಡು ಕಲ್ಲಿನ ಹಲಗೆಗಳನ್ನು ಕೆತ್ತಿಸಿ ಕೊಂಡನು. ಕರ್ತನು ತನಗೆ ಆಜ್ಞಾಪಿಸಿದಂತೆ ಅವನು ಬೆಳಿಗ್ಗೆ ಎದ್ದು ಎರಡು ಕಲ್ಲಿನ ಹಲಗೆಗಳನ್ನು ತನ್ನ ಕೈಯಲ್ಲಿ ತೆಗೆದುಕೊಂಡು ಸೀನಾಯಿ ಬೆಟ್ಟದ ಮೇಲಕ್ಕೆ ಹೋದನು.

34:5b.EXO.034.005 ಆಗ ಕರ್ತನು ಮೇಘದಲ್ಲಿ ಇಳಿದು ಬಂದು ಅವನ ಸಂಗಡ ಅಲ್ಲಿ ನಿಂತುಕೊಂಡು ಕರ್ತನ ಹೆಸರನ್ನು ಪ್ರಕಟ ಮಾಡಿದನು.

34:6b.EXO.034.006 ಕರ್ತನು ಅವನೆದುರಿಗೆ ಹಾದು ಹೋಗುತ್ತಾ--ಕರ್ತನು, ಕರ್ತನಾದ ದೇವರು, ಕರುಣಾಳುವೂ ಕೃಪಾಳುವೂ ದೀರ್ಘಶಾಂತನೂ ಒಳ್ಳೇತನದಲ್ಲಿ ಮತ್ತು ಸತ್ಯದಲ್ಲಿ ಸಮೃದ್ಧಿಯಾದಾತನೂ

34:7b.EXO.034.007 ಸಾವಿರ (ತಲೆಗಳ) ವರೆಗೂ ಕರುಣೆ ತೋರಿಸುವಾತನೂ ದೋಷಾಪರಾಧ ವನ್ನೂ ಪಾಪವನ್ನೂ ಕ್ಷಮಿಸುವಾತನೂ ಅಪರಾಧಿ ಯನ್ನು ನಿರಪರಾಧಿಯೆಂದು ಎಣಿಸದವನೂ ತಂದೆಗಳ ದೋಷವನ್ನು ಮಕ್ಕಳ ಮೇಲೆಯೂ ಮೊಮ್ಮಕ್ಕಳ ಮೇಲೆಯೂ ಮೂರನೆಯ ಮತ್ತು ನಾಲ್ಕನೆಯ ತಲೆ ಗಳವರೆಗೂ ವಿಚಾರಿಸುವಾತನೂ ಎಂದು ಪ್ರಕಟಿಸಿ ಕೊಂಡನು.

34:8b.EXO.034.008 ಆಗ ಮೋಶೆಯು ತ್ವರೆಪಟ್ಟು ನೆಲಕ್ಕೆ ಬೊಗ್ಗಿ ಆತನನ್ನು ಆರಾಧಿಸಿದನು.

34:9b.EXO.034.009 ಅವನು--ಈಗ ನಿನ್ನ ದೃಷ್ಟಿಯಲ್ಲಿ ನನಗೆ ದಯೆ ದೊರಕಿದ್ದಾದರೆ ಓ ಕರ್ತನೇ, ನನ್ನ ಕರ್ತನು ನಮ್ಮ ಮಧ್ಯದಲ್ಲಿ ಬರಲಿ ಅದು ಬಗ್ಗದ ಕುತ್ತಿಗೆಯುಳ್ಳ ಜನಾಂಗವೇ ಹೌದು. ಆದಾಗ್ಯೂ ನಮ್ಮ ದೋಷವನ್ನೂ ಪಾಪವನ್ನೂ ಮನ್ನಿಸಿ ನಮ್ಮನ್ನು ನಿನ್ನ ಸ್ವಾಸ್ಥ್ಯವಾಗಿ ತೆಗೆದುಕೋ ಅಂದನು.

34:10b.EXO.034.010 ಅದಕ್ಕೆ ಕರ್ತನು--ಇಗೋ, ನಾನು ಒಂದು ಒಡಂಬಡಿಕೆಯನ್ನು ಮಾಡುತ್ತೇನೆ. ಸಮಸ್ತ ಭೂಮಿ ಯಲ್ಲಿಯೂ ಯಾವ ಜನಾಂಗದಲ್ಲಿಯೂ ಮಾಡ ದಿರುವಂಥ ಅದ್ಭುತಗಳನ್ನು ನಿನ್ನ ಜನರೆಲ್ಲರ ಮುಂದೆ ಮಾಡುವೆನು. ನೀನು ಯಾರ ಮಧ್ಯದಲ್ಲಿ ಇರುವಿಯೋ ಆ ಜನರೆಲ್ಲರು ಕರ್ತನ ಕಾರ್ಯವನ್ನು ನೋಡುವರು. ನಾನು ನಿಮಗೆ ಮಾಡುವಂಥದ್ದು ಭಯಂಕರ ವಾಗಿರುವದು.

34:11b.EXO.034.011 ನಾನು ಈ ಹೊತ್ತು ನಿನಗೆ ಆಜ್ಞಾಪಿಸುವದನ್ನು ಅನುಸರಿಸು; ಇಗೋ, ಅಮೋರಿಯರನ್ನೂ ಕಾನಾನ್ಯ ರನ್ನೂ ಹಿತ್ತಿಯರನ್ನೂ ಪೆರಿಜೀಯರನ್ನೂ ಹಿವ್ವಿಯರನ್ನೂ ಯೆಬೂಸಿಯರನ್ನೂ ನಿನ್ನ ಎದುರಿನಿಂದ ಹೊರಡಿಸಿ ಬಿಡುತ್ತೇನೆ.

34:12b.EXO.034.012 ನೀನು ಹೋಗುವ ದೇಶದ ನಿವಾಸಿಗಳ ಸಂಗಡ ಒಡಂಬಡಿಕೆಯನ್ನು ಮಾಡದಂತೆ ನೋಡಿಕೋ. ಒಂದು ವೇಳೆ ಮಾಡಿದರೆ ಅದು ನಿಮ್ಮ ಮಧ್ಯದಲ್ಲಿ ಉರುಲಾಗಿರುವದು.

34:13b.EXO.034.013 ಆದರೆ ನೀವು ಅವರ ಯಜ್ಞ ವೇದಿಗಳನ್ನು ಹಾಳುಮಾಡಿ ವಿಗ್ರಹಗಳನ್ನು ಒಡೆದು (ಅಶೇರ) ವಿಗ್ರಹ ಸ್ತಂಭಗಳನ್ನು ಕಡಿದುಹಾಕಬೇಕು.

34:14b.EXO.034.014 ರೋಷವುಳ್ಳವನೆಂದು ಹೆಸರುಳ್ಳ ಕರ್ತನು ರೋಷ ವುಳ್ಳ ದೇವರಾಗಿರುವದರಿಂದ ನೀನು ಬೇರೆ ದೇವರು ಗಳನ್ನು ಆರಾಧಿಸಬಾರದು.

34:15b.EXO.034.015 ಆ ದೇಶ ನಿವಾಸಿಗಳ ಸಂಗಡ ಒಡಂಬಡಿಕೆ ಮಾಡಬಾರದು. ಅವರು ಅನ್ಯ ದೇವರುಗಳನ್ನು ಆರಾಧಿಸಿ, ಅವುಗಳಿಗೆ ಯಜ್ಞಗಳನ್ನು ಮಾಡುವಾಗ ಒಬ್ಬನು ನಿನ್ನನ್ನು ಕರೆದಾನು; ನೀನು ಅವನ ಬಲಿಯನ್ನು ತಿನ್ನ ಬೇಕಾದೀತು.

34:16b.EXO.034.016 ಇದಲ್ಲದೆ ಅವರ ಕುಮಾರ್ತೆಯರನ್ನು ನಿನ್ನ ಕುಮಾರರಿಗೋಸ್ಕರ ತಕ್ಕೊಳ್ಳಬೇಕಾಗಬಹುದು. ತಕ್ಕೊಂಡರೆ ಅವರ ಕುಮಾರ್ತೆಯರು ತಮ್ಮ ದೇವರುಗಳನ್ನು ಆರಾಧಿಸಿ ನಿಮ್ಮ ಕುಮಾರರು ತಮ್ಮ ದೇವರುಗಳನ್ನು ಆರಾಧಿಸುವಂತೆ ಮಾಡಾರು.

34:17b.EXO.034.017 ನೀನು ಎರಕಹೊಯ್ದ ವಿಗ್ರಹಗಳನ್ನು ಮಾಡಿ ಕೊಳ್ಳಬಾರದು.

34:18b.EXO.034.018 ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಆಚರಿಸಬೇಕು. ನಾನು ನಿಮಗೆ ಆಜ್ಞಾಪಿಸಿದಂತೆ ಅಬೀಬ್‌ ತಿಂಗಳಿನಲ್ಲಿ ಏಳು ದಿವಸ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಯಾಕಂದರೆ ಅಬೀಬ್‌ ತಿಂಗಳಿ ನಲ್ಲಿ ನೀವು ಐಗುಪ್ತದೇಶವನ್ನು ಬಿಟ್ಟು ಬಂದಿದ್ದೀರಿ.

34:19b.EXO.034.019 ಪ್ರಥಮ ಗರ್ಭ ತೆರೆಯುವದೆಲ್ಲಾ ನನ್ನದೇ. ನಿಮ್ಮ ಪಶುಗಳಾಗಲಿ ಎತ್ತುಗಳಾಗಲಿ ಟಗರುಗಳಾಗಲಿ ಮೊದಲು ಹುಟ್ಟುವ ಗಂಡಾದವುಗಳೆಲ್ಲಾ ನನ್ನವೇ.

34:20b.EXO.034.020 ಕತ್ತೆಗಳಲ್ಲಿ ಗರ್ಭ ತೆರೆಯುವಂಥದ್ದನ್ನು ಕುರಿಮರಿ ಯಿಂದ ವಿಮೋಚಿಸಬೇಕು. ನೀನು ವಿಮೋಚಿಸದೆ ಹೋದರೆ ಅದರ ಕುತ್ತಿಗೆಯನ್ನು ಮುರಿಯಬೇಕು. ನಿನ್ನ ಕುಮಾರರ ಚೊಚ್ಚಲಾದವರನ್ನೆಲ್ಲಾ ವಿಮೋಚಿಸ ಬೇಕು. ನನ್ನ ಮುಂದೆ ಯಾರೂ ಬರೀಗೈಯಿಂದ ಕಾಣಿಸಿ ಕೊಳ್ಳಬಾರದು.

34:21b.EXO.034.021 ಆರು ದಿನಗಳು ಕೆಲಸಮಾಡಿ ಏಳನೆಯ ದಿನದಲ್ಲಿ ವಿಶ್ರಮಿಸಿಕೊಳ್ಳಬೇಕು. ಬಿತ್ತುವ ಕಾಲದಲ್ಲಿಯೂ ಕೊಯ್ಯುವ ಕಾಲದಲ್ಲಿಯೂ (ಏಳನೆಯ ದಿನದಲ್ಲಿ) ವಿಶ್ರಮಿಸಿಕೊಳ್ಳಬೇಕು.

34:22b.EXO.034.022 ಪ್ರಥಮ ಗೋದಿ ಸುಗ್ಗಿಯ ವಾರಗಳ ಹಬ್ಬವನ್ನೂ ಸಂವತ್ಸರದ ಕೊನೆಯಲ್ಲಿ (ಬೆಳೆ) ಸಂಗ್ರಹದ ಹಬ್ಬ ವನ್ನೂ ಆಚರಿಸಬೇಕು.

34:23b.EXO.034.023 ವರುಷಕ್ಕೆ ಮೂರುಸಾರಿ ನಿಮ್ಮ ಗಂಡು ಮಕ್ಕಳೆಲ್ಲಾ ಕರ್ತನಾದ ದೇವರ ಮುಂದೆ ಅಂದರೆ ಇಸ್ರಾಯೇಲಿನ ದೇವರ ಮುಂದೆ ಬರಬೇಕು.

34:24b.EXO.034.024 ನಾನು ಜನಾಂಗಗಳನ್ನು ನಿಮ್ಮ ಎದುರಿನಿಂದ ಹೊರ ಡಿಸಿಬಿಟ್ಟು ನಿಮ್ಮ ಮೇರೆಗಳನ್ನು ವಿಸ್ತಾರಮಾಡುವೆನು. ವರುಷಕ್ಕೆ ಮೂರು ಸಾರಿ ನೀವು ನಿಮ್ಮ ದೇವರಾದ ಕರ್ತನ ಸನ್ನಿಧಿಗೆ ಹೋಗುವ ಸಮಯದಲ್ಲಿ ಯಾರೂ ನಿಮ್ಮ ದೇಶವನ್ನು ಆಶಿಸರು.

34:25b.EXO.034.025 ನನ್ನ ಬಲಿಯ ರಕ್ತವನ್ನು ಹುಳಿಹಿಟ್ಟಿನ ಸಂಗಡ ಅರ್ಪಿಸಬಾರದು. ಇಲ್ಲವೆ ಪಸ್ಕ ಹಬ್ಬದ ಬಲಿಯನ್ನು ಬೆಳಗಿನ ವರೆಗೂ ಉಳಿಸಬಾರದು.

34:26b.EXO.034.026 ನಿಮ್ಮ ಭೂಮಿಯ ಪ್ರಥಮ ಫಲಗಳಲ್ಲಿ ಮೊದಲ ನೆಯದನ್ನು ನಿಮ್ಮ ದೇವರಾದ ಕರ್ತನ ಮನೆಗೆ ತರ ಬೇಕು. ಮೇಕೆಯ ಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು ಎಂದು ಹೇಳಿದನು.

34:27b.EXO.034.027 ಕರ್ತನು ಮೋಶೆಗೆ--ನೀನು ಈ ವಾಕ್ಯಗಳನ್ನು ಬರೆ; ಈ ವಾಕ್ಯಗಳ ಪ್ರಕಾರವೇ ನಿನ್ನ ಸಂಗಡಲೂ ಇಸ್ರಾಯೇಲಿನ ಸಂಗಡಲೂ ನಾನು ಒಡಂಬಡಿಕೆಯನ್ನು ಮಾಡಿದ್ದೇನೆ ಅಂದನು.

34:28b.EXO.034.028 ಮೋಶೆಯು ನಾಲ್ವತ್ತು ಹಗಲು ನಾಲ್ವತ್ತು ರಾತ್ರಿ ರೊಟ್ಟಿಯನ್ನು ತಿನ್ನದೆ ನೀರನ್ನು ಕುಡಿಯದೆ ಅಲ್ಲಿ ಕರ್ತನ ಸಂಗಡ ಇದ್ದನು. ಆತನು ಒಡಂಬಡಿಕೆಯ ವಾಕ್ಯಗಳಾದ ಹತ್ತು ಆಜ್ಞೆಗಳನ್ನು ಹಲಗೆಗಳ ಮೇಲೆ ಬರೆದನು.

34:29b.EXO.034.029 ಮೋಶೆಯು ಸಾಕ್ಷಿಯ ಎರಡು ಹಲಗೆಗಳನ್ನು ತನ್ನ ಕೈಯಲ್ಲಿ ಹಿಡುಕೊಂಡು ಸೀನಾಯಿ ಬೆಟ್ಟದಿಂದ ಇಳಿದಾಗ ಅವನು ದೇವರ ಸಂಗಡ (ಬೆಟ್ಟದಲ್ಲಿ) ಮಾತನಾಡಿದ್ದರಿಂದ ಅವನ ಮುಖವು ಪ್ರಕಾಶಿ ಸುತ್ತಿದೆ ಎಂದು ಮೋಶೆಗೆ ತಿಳಿಯಲಿಲ್ಲ.

34:30b.EXO.034.030 ಆದರೆ ಆರೋನನೂ ಇಸ್ರಾಯೇಲ್‌ ಮಕ್ಕಳೆಲ್ಲರೂ ಮೋಶೆ ಯನ್ನು ನೋಡಿದಾಗ ಇಗೋ, ಅವನ ಮುಖವು ಪ್ರಕಾಶಿಸುತ್ತಿತ್ತು. ಆದದರಿಂದ ಅವರು ಅವನ ಹತ್ತಿರ ಬರುವದಕ್ಕೆ ಭಯಪಟ್ಟರು.

34:31b.EXO.034.031 ಮೋಶೆಯು ಅವರನ್ನು ಕರೆದಾಗ ಆರೋನನೂ ಸಭೆಯ ಮುಖ್ಯಸ್ಥರೆಲ್ಲರೂ ಅವನ ಬಳಿಗೆ ತಿರಿಗಿ ಬಂದರು. ಮೋಶೆಯು ಅವರ ಸಂಗಡ ಮಾತನಾಡಿದನು.

34:32b.EXO.034.032 ತರುವಾಯ ಇಸ್ರಾ ಯೇಲ್‌ ಮಕ್ಕಳೆಲ್ಲರೂ ಹತ್ತಿರ ಬಂದರು. ಅವನು ತನಗೆ ಕರ್ತನು ಸೀನಾಯಿ ಬೆಟ್ಟದಲ್ಲಿ ಹೇಳಿದವುಗಳ ನ್ನೆಲ್ಲಾ ಅವರಿಗೆ ಆಜ್ಞಾಪಿಸಿ ಹೇಳಿದನು.

34:33b.EXO.034.033 ಮೋಶೆಯು ಅವರ ಸಂಗಡ ಮಾತನಾಡಿ ಮುಗಿಸುವ ವರೆಗೂ ಅವನು ತನ್ನ ಮುಖದ ಮೇಲೆ ಮುಸುಕು ಹಾಕಿ ಕೊಂಡನು.

34:34b.EXO.034.034 ಆದರೆ ಮೋಶೆಯು ಕರ್ತನ ಸನ್ನಿಧಿಯಲ್ಲಿ ಆತನ ಸಂಗಡ ಮಾತನಾಡಲು ಒಳಗೆ ಪ್ರವೇಶಿಸಿ ಹೊರಗೆ ಬರುವ ವರೆಗೆ ಆ ಮುಸುಕನ್ನು ತೆಗೆದಿಡುತ್ತಿ ದ್ದನು. ಅವನು ಹೊರಗೆ ಬಂದು ತನಗೆ ಆಜ್ಞಾಪಿಸಿದ್ದನ್ನು ಇಸ್ರಾಯೇಲ್‌ ಮಕ್ಕಳಿಗೆ ತಿಳಿಸುವನು.ಮೋಶೆಯ ಮುಖವು ಪ್ರಕಾಶಿಸುವದನ್ನು ಇಸ್ರಾಯೇಲ್‌ ಮಕ್ಕಳು ನೋಡುತ್ತಿದ್ದರು. ಮೋಶೆಯು ದೇವರ ಸಂಗಡ ಮಾತ ನಾಡುವದಕ್ಕೆ ತಿರಿಗಿ ಹೋಗುವ ವರೆಗೆ ಅವನು ತನ್ನ ಮುಖದ ಮೇಲೆ ತಿರಿಗಿ ಮುಸುಕನ್ನು ಹಾಕಿ ಕೊಳ್ಳುತ್ತಿದ್ದನು.

34:35b.EXO.034.035 ಮೋಶೆಯ ಮುಖವು ಪ್ರಕಾಶಿಸುವದನ್ನು ಇಸ್ರಾಯೇಲ್‌ ಮಕ್ಕಳು ನೋಡುತ್ತಿದ್ದರು. ಮೋಶೆಯು ದೇವರ ಸಂಗಡ ಮಾತ ನಾಡುವದಕ್ಕೆ ತಿರಿಗಿ ಹೋಗುವ ವರೆಗೆ ಅವನು ತನ್ನ ಮುಖದ ಮೇಲೆ ತಿರಿಗಿ ಮುಸುಕನ್ನು ಹಾಕಿ ಕೊಳ್ಳುತ್ತಿದ್ದನು.

35

35:1b.EXO.035.001 ಮೋಶೆಯು ಇಸ್ರಾಯೇಲ್‌ ಮಕ್ಕಳ ಸಭೆಯನ್ನು ಒಟ್ಟುಗೂಡಿಸಿ ಅವರಿಗೆ--ನೀವು ಮಾಡುವದಕ್ಕೆ ಕರ್ತನು ಆಜ್ಞಾಪಿಸಿದ ವಾಕ್ಯಗಳು ಇವೇ.

35:2b.EXO.035.002 ಆರು ದಿನಗಳು ಕೆಲಸ ಮಾಡಬೇಕು. ಆದರೆ ಏಳನೆಯ ದಿನವು ನಿಮಗೆ ಪರಿಶುದ್ಧದಿನವಾಗಿಯೂ ಕರ್ತನಿಗೆ ವಿಶ್ರಾಂತಿಯ ಸಬ್ಬತ್ತಾಗಿಯೂ ಇರಬೇಕು. ಆ ದಿನದಲ್ಲಿ ಕೆಲಸ ಮಾಡುವವನು ಕೊಲ್ಲಲ್ಪಡಬೇಕು.

35:3b.EXO.035.003 ನೀವು ವಾಸಿಸುವ ಯಾವ ಸ್ಥಳದಲ್ಲಿಯಾದರೂ ಸಬ್ಬತ್‌ ದಿನದಲ್ಲಿ ಬೆಂಕಿಯನ್ನೂ ಹೊತ್ತಿಸಬಾರದು ಎಂದು ಹೇಳಿದನು.

35:4b.EXO.035.004 ಮೋಶೆಯು ಇಸ್ರಾಯೇಲ್‌ ಮಕ್ಕಳ ಸಭೆಗೆಲ್ಲಾ-- ಕರ್ತನು ಆಜ್ಞಾಪಿಸಿದ್ದು ಇದೇ. ಅದೇನಂದರೆ--

35:5b.EXO.035.005 ಕರ್ತನಿಗೋಸ್ಕರ ನಿಮ್ಮೊಳಗಿಂದ ಕಾಣಿಕೆಗಳನ್ನು ತೆಗೆದು ಕೊಳ್ಳಿರಿ. ಮನಃಪೂರ್ವಕವಾಗಿ ಕರ್ತನಿಗೆ ತರಬೇಕಾದವುಗಳು; ಚಿನ್ನ, ಬೆಳ್ಳಿ, ಹಿತ್ತಾಳೆ

35:6b.EXO.035.006 ನೀಲಿ, ಧೂಮ್ರ, ಕೆಂಪುವರ್ಣದ ನಯವಾದ ನಾರುಮಡಿ, ಮೇಕೆಯ ಕೂದಲು,

35:7b.EXO.035.007 ಕೆಂಪು ಬಣ್ಣದಲ್ಲಿ ಅದ್ದಿದ ಟಗರಿನ ಚರ್ಮಗಳು, ಕಡಲು ಹಂದಿಯ ಚರ್ಮಗಳು ಜಾಲೀಮರವು.

35:8b.EXO.035.008 ದೀಪಕ್ಕೋಸ್ಕರ ಎಣ್ಣೆ, ಅಭಿಷೇಕಿಸುವ ತೈಲಕ್ಕೋಸ್ಕರ ಮತ್ತು ಪರಿಮಳ ಧೂಪಕ್ಕೋಸ್ಕರ ಸುಗಂಧತೈಲ,

35:9b.EXO.035.009 ಗೋಮೇಧಕ, ಎಫೋದ್‌ನ್ನು ಎದೆಯಲ್ಲಿಯೂ ಪದಕದಲ್ಲಿಯೂ ಕೂಡ್ರಿಸಲು ರತ್ನಗಳು ಇವೆ.

35:10b.EXO.035.010 ನಿಮ್ಮಲ್ಲಿ ಜ್ಞಾನದ ಹೃದಯವುಳ್ಳವರೆಲ್ಲರೂ ಬಂದು ಕರ್ತನು ಆಜ್ಞಾಪಿಸಿದವುಗಳನ್ನೆಲ್ಲಾ ಮಾಡಲಿ.

35:11b.EXO.035.011 ಅವು ಯಾವವಂದರೆ: ಗುಡಾರವನ್ನೂ ಅದರ ಡೇರೆಯನ್ನೂ ಅದರ ಹೊದಿಕೆಯನ್ನೂ ಅದರ ಕೊಂಡಿಗಳನ್ನೂ ಅದರ ಹಲಗೆಗಳನ್ನೂ ಅದರ ಅಗುಳಿಗಳನ್ನೂ ಅದರ ಸ್ತಂಭ ಗಳನ್ನೂ ಅದರ ಕುಳಿಗಳನ್ನೂ

35:12b.EXO.035.012 ಮಂಜೂಷವನ್ನೂ ಅದರ ಕೋಲುಗಳನ್ನೂ ಅವುಗಳೊಂದಿಗೆ ಕರುಣಾಸನ ವನ್ನೂ ಮರೆಮಾಡುವ ತೆರೆಯನ್ನೂ

35:13b.EXO.035.013 ಮೇಜನ್ನೂ ಅದರ ಕೋಲುಗಳನ್ನೂ ಅದರ ಎಲ್ಲಾ ಉಪಕರಣ ಗಳನ್ನೂ ಸಮ್ಮುಖದ ರೊಟ್ಟಿಯನ್ನೂ

35:14b.EXO.035.014 ಬೆಳಕಿಗಾಗಿ ದೀಪಸ್ತಂಭವನ್ನೂ ಅದರ ಉಪಕರಣಗಳನ್ನೂ ಅದರ ದೀಪಗಳನ್ನೂ ಬೆಳಕಿಗಾಗಿ ಎಣ್ಣೆಯನ್ನೂ

35:15b.EXO.035.015 ಧೂಪ ವೇದಿಯನ್ನೂ ಅದರ ಕೋಲುಗಳನ್ನೂ ಅಭಿಷೇಕಿಸುವ ಎಣ್ಣೆಯನ್ನೂ ಪರಿಮಳ ಧೂಪವನ್ನೂ ಗುಡಾರದಲ್ಲಿ ಪ್ರವೇಶಿಸುವ ಬಾಗಲಿನ ತೆರೆಯನ್ನೂ

35:16b.EXO.035.016 ಯಜ್ಞವೇದಿ ಯನ್ನೂ ಅದರೊಂದಿಗೆ ಹಿತ್ತಾಳೆಯ ಜಲ್ಲಡಿಯನ್ನೂ ಅದರ ಕೋಲುಗಳನ್ನೂ ಅದರ ಎಲ್ಲಾ ಉಪಕರಣ ಗಳನ್ನೂ ಗಂಗಾಳವನ್ನೂ ಅದರ ಪೀಠ

35:17b.EXO.035.017 ಅಂಗಳದ ಪರದೆಗಳನ್ನೂ ಅದರ ಸ್ತಂಭಗಳನ್ನೂ ಅದರ ಕುಳಿಗ ಳನ್ನೂ ಅಂಗಳದ ಬಾಗಲಿನ ತೆರೆಗಳನ್ನೂ

35:18b.EXO.035.018 ಗುಡಾರದ ಗೂಟಗಳನ್ನೂ ಅಂಗಳದ ಗೂಟಗಳನ್ನೂ ಅವುಗಳ ಹಗ್ಗಗಳನ್ನೂ

35:19b.EXO.035.019 ಪರಿಶುದ್ಧ ಸ್ಥಳದಲ್ಲಿ ಸೇವೆಮಾಡುವದ ಕ್ಕಾಗಿ ಸೇವೆಯ ವಸ್ತ್ರಗಳನ್ನೂ ಯಾಜಕನಾದ ಆರೋನನ ಪರಿಶುದ್ಧ ವಸ್ತ್ರಗಳನ್ನೂ ಯಾಜಕ ಸೇವೆಗೋಸ್ಕರ ಅವನ ಕುಮಾರರ ವಸ್ತ್ರಗಳನ್ನೂ ಮಾಡಲಿ ಅಂದನು.

35:20b.EXO.035.020 ಆಗ ಇಸ್ರಾಯೇಲ್‌ ಮಕ್ಕಳ ಸಭೆಯವರೆಲ್ಲರೂ ಮೋಶೆಯ ಎದುರಿನಿಂದ ಹೊರಟುಹೋದರು.

35:21b.EXO.035.021 ಅವರಲ್ಲಿ ಪ್ರತಿಯೊಬ್ಬನು ಹೃದಯ ಪ್ರೇರಣೆಯಿಂದ ಮತ್ತು ಪ್ರತಿಯೊಬ್ಬನು ತನ್ನ ಮನಸ್ಸು ಇಷ್ಟಪಡುವಂತೆ ಸಭೆಯ ಗುಡಾರದ ಕೆಲಸಕ್ಕಾಗಿಯೂ ಅದರ ಎಲ್ಲಾ ಸೇವೆಗಾಗಿಯೂ ಪರಿಶುದ್ಧ ವಸ್ತ್ರಗಳಿಗಾಗಿಯೂ ಕರ್ತನಿಗೆ ಕಾಣಿಕೆಗಳನ್ನು ತೆಗೆದುಕೊಂಡು ಬಂದರು.

35:22b.EXO.035.022 ಸ್ತ್ರೀಪುರುಷರೆಲ್ಲರೂ ಮನಃಪೂರ್ವಕವಾಗಿ ಬಂದು ಬಳೆಗಳನ್ನೂ ಮುರುವುಗಳನ್ನೂ ಉಂಗುರಗಳನ್ನೂ ಮುದ್ರೆಗಳನ್ನೂ ಚಿನ್ನದ ಎಲ್ಲಾ ಒಡವೆಗಳನ್ನೂ ತಂದರು. ಪ್ರತಿಯೊಬ್ಬನೂ ಚಿನ್ನದ ಕಾಣಿಕೆಯನ್ನು ಕರ್ತನಿಗೆ ಅರ್ಪಿಸಿದನು.

35:23b.EXO.035.023 ನೀಲಿ, ಧೂಮ್ರ, ರಕ್ತವರ್ಣ ನಯವಾದ ನಾರುಮಡಿ, ಮೇಕೆಯ ಕೂದಲು; ಟಗರುಗಳ ಕೆಂಪು ಬಣ್ಣದ ಚರ್ಮಗಳು, ಕಡಲು ಹಂದಿಯ ಚರ್ಮಗಳು, ಯಾರ ಬಳಿಯಲ್ಲಿದ್ದವೋ ಅವರೆಲ್ಲರು ತಂದರು.

35:24b.EXO.035.024 ಬೆಳ್ಳಿ ಹಿತ್ತಾಳೆಗಳ ಕಾಣಿಕೆ ಗಳನ್ನು ಅರ್ಪಿಸುವದಕ್ಕೆ ಮನಸ್ಸಿದ್ದವರೆಲ್ಲರೂ ಕರ್ತನಿಗೆ ಕಾಣಿಕೆಗಳನ್ನು ತಂದರು. ಸೇವೆಯ ಎಲ್ಲಾ ಕೆಲಸ ಕ್ಕೋಸ್ಕರ ಜಾಲೀ ಮರವಿದ್ದವರು ಅದನ್ನು ತಂದರು.

35:25b.EXO.035.025 ಜ್ಞಾನ ಹೃದಯವುಳ್ಳ ಸ್ತ್ರೀಯರೆಲ್ಲರೂ ತಮ್ಮ ಕೈಗಳಿಂದ ನೇಯ್ದ ನೀಲಿ, ಧೂಮ್ರ, ರಕ್ತವರ್ಣ ಮತ್ತು ನಯವಾದ ನಾರುಮಡಿ ಇವುಗಳನ್ನು ತಂದರು.

35:26b.EXO.035.026 ಜ್ಞಾನದಲ್ಲಿ ಹೃದಯ ಪ್ರೇರಣೆ ಹೊಂದಿದ ಸ್ತ್ರೀಯರೆಲ್ಲರೂ ಮೇಕೆ ಕೂದಲುಗಳನ್ನೂ ನೇಯ್ದರು.

35:27b.EXO.035.027 ಅಧಿಪತಿಗಳು ಎಫೋ ದಿನಲ್ಲಿಯೂ ಎದೆಪದಕದಲ್ಲಿಯೂ ಕೂಡ್ರಿಸುವದಕ್ಕೆ ಗೋಮೇಧಿಕಗಳನ್ನೂ ರತ್ನಗಳನ್ನೂ

35:28b.EXO.035.028 ಸುಗಂಧದ್ರವ್ಯ ಗಳನ್ನೂ ದೀಪಕ್ಕೋಸ್ಕರವೂ ಅಭಿಷೇಕಿಸುವ ತೈಲ ಕ್ಕೋಸ್ಕರವೂ ಪರಿಮಳ ಧೂಪಕ್ಕೋಸ್ಕರವೂ ಎಣ್ಣೆ ಯನ್ನೂ ತಂದರು.

35:29b.EXO.035.029 ಹೀಗೆ ಮಾಡಬೇಕೆಂದು ಕರ್ತನು ಮೋಶೆಯ ಮುಖಾಂತರವಾಗಿ ಆಜ್ಞಾಪಿಸಿದ ಎಲ್ಲಾ ಕೆಲಸಕ್ಕೋಸ್ಕರ ತರುವದಕ್ಕೆ ಹೃದಯ ಪ್ರೇರಿತರಾದ ಇಸ್ರಾಯೇಲಿನ ಎಲ್ಲಾ ಪುರುಷರೂ ಸ್ತ್ರೀಯರೂ ಕರ್ತ ನಿಗೆ ಮನಃಪೂರ್ವಕವಾದ ಕಾಣಿಕೆಯನ್ನು ತಂದರು.

35:30b.EXO.035.030 ಆಗ ಮೋಶೆಯು ಇಸ್ರಾಯೇಲ್‌ ಮಕ್ಕಳಿಗೆ--ನೋಡಿರಿ, ಕರ್ತನು ಯೂದ ಕುಲದ ಹೂರನ ಮೊಮ್ಮಗನೂ ಊರಿಯನ ಮಗನೂ ಆದ ಬೆಚಲೇಲ ನನ್ನು ಹೆಸರು ಹೇಳಿ ಕರೆದು

35:31b.EXO.035.031 ಅವನನ್ನು ದೇವರಾತ್ಮ ನಿಂದ ಜ್ಞಾನದಲ್ಲಿಯೂ ತಿಳುವಳಿಕೆಯಲ್ಲಿಯೂ ವಿವೇಕ ದಲ್ಲಿಯೂ ಎಲ್ಲಾ ವಿಧವಾದ ಕೌಶಲ್ಯದಲ್ಲಿಯೂ

35:32b.EXO.035.032 ಚಿನ್ನ ಬೆಳ್ಳಿ ಹಿತ್ತಾಳೆ ಇವುಗಳಿಂದ ವಿಚಿತ್ರವಾದ ಕಲ್ಪನೆಯ ಕೆಲಸವನ್ನು ಮಾಡುವದರಲ್ಲಿಯೂ

35:33b.EXO.035.033 ಕಲ್ಲುಗಳನ್ನು ಕೆತ್ತಿಡುವದರಲ್ಲಿಯೂ ಮರ ಕೆತ್ತನೆಯಲ್ಲಿಯೂ ಎಲ್ಲಾ ತರವಾದ ಕೌಶಲ್ಯದ ಕೆಲಸದಲ್ಲಿಯೂ ಜ್ಞಾನದಿಂದ ತುಂಬಿಸಿದ್ದಾನೆ.

35:34b.EXO.035.034 ಇದಲ್ಲದೆ ಅವನಿಗೂ ದಾನ ಕುಲದ ವನಾದ ಅಹೀಸಾಮಾಕನ ಮಗನಾದ ಒಹೋಲಿಯಾ ಬನಿಗೂ ಕಲಿಸುವ ಹೃದಯವನ್ನು ಕೊಟ್ಟಿದ್ದಾನೆ.ಅವರು ಕೆತ್ತನೆಯ ಕೆಲಸಗಳನ್ನು ಮಾಡುವದಕ್ಕೂ ಚಮತ್ಕಾರದ ಕೆಲಸವನ್ನು ಮಾಡುವದಕ್ಕೂ ನೀಲಿ, ಧೂಮ್ರ, ರಕ್ತವರ್ಣ ನಯವಾದ ನಾರುಮಡಿ ಇವು ಗಳಲ್ಲಿ ಕಸೂತಿ ಕೆಲಸ ಮಾಡುವದಕ್ಕೂ ನೇಯ್ಗೆಯ ಕೆಲಸ ಮಾಡುವದಕ್ಕೂ ಅಂದರೆ ಅವುಗಳಲ್ಲಿ ಯಾವ ಕೆಲಸವನ್ನಾದರೂ ಮಾಡುವದಕ್ಕೂ ಚಮತ್ಕಾರದ ಕೆಲಸವನ್ನು ಕಲ್ಪಿಸಿ ಮಾಡುವವರಂತೆಯೂ ಹೀಗೆ ಎಲ್ಲಾ ತರವಾದ ಕೆಲಸಮಾಡುವದಕ್ಕೆ ಜ್ಞಾನದ ಹೃದಯವನ್ನು ದೇವರು ಅವರಲ್ಲಿ ತುಂಬಿಸಿದ್ದಾನೆ.

35:35b.EXO.035.035 ಅವರು ಕೆತ್ತನೆಯ ಕೆಲಸಗಳನ್ನು ಮಾಡುವದಕ್ಕೂ ಚಮತ್ಕಾರದ ಕೆಲಸವನ್ನು ಮಾಡುವದಕ್ಕೂ ನೀಲಿ, ಧೂಮ್ರ, ರಕ್ತವರ್ಣ ನಯವಾದ ನಾರುಮಡಿ ಇವು ಗಳಲ್ಲಿ ಕಸೂತಿ ಕೆಲಸ ಮಾಡುವದಕ್ಕೂ ನೇಯ್ಗೆಯ ಕೆಲಸ ಮಾಡುವದಕ್ಕೂ ಅಂದರೆ ಅವುಗಳಲ್ಲಿ ಯಾವ ಕೆಲಸವನ್ನಾದರೂ ಮಾಡುವದಕ್ಕೂ ಚಮತ್ಕಾರದ ಕೆಲಸವನ್ನು ಕಲ್ಪಿಸಿ ಮಾಡುವವರಂತೆಯೂ ಹೀಗೆ ಎಲ್ಲಾ ತರವಾದ ಕೆಲಸಮಾಡುವದಕ್ಕೆ ಜ್ಞಾನದ ಹೃದಯವನ್ನು ದೇವರು ಅವರಲ್ಲಿ ತುಂಬಿಸಿದ್ದಾನೆ.

36

36:1b.EXO.036.001 ತರುವಾಯ ಬೆಚಲೇಲನೂ ಒಹೋಲಿ ಯಾಬನೂ ಪರಿಶುದ್ಧ ಸ್ಥಳದ ಸೇವೆ ಗೋಸ್ಕರ ಎಲ್ಲಾ ವಿಧವಾದ ಕೆಲಸವನ್ನು ಹೇಗೆ ಮಾಡಬೇಕೆಂದು ತಿಳಿಯುವ ಹಾಗೆ ಕರ್ತನಿಂದ ಜ್ಞಾನ ವಿವೇಕಗಳನ್ನು ಹೊಂದಿದ ಹೃದಯದವರೆಲ್ಲರೂ ಕರ್ತನು ಆಜ್ಞಾಪಿಸಿದಂತೆಯೇ ಎಲ್ಲವುಗಳನ್ನು ಮಾಡಿ ದರು. ತರುವಾಯ ಪರಿಶುದ್ಧ ಸ್ಥಳದ ಸೇವೆಗೋಸ್ಕರ ಪ್ರತಿ ವಿಧವಾದ ಕೆಲಸ ಮಾಡುವದನ್ನು ತಿಳುಕೊಳ್ಳುವ ದಕ್ಕಾಗಿ ಆತನು ಜ್ಞಾನ ವಿವೇಕಗಳನ್ನು ಅನುಗ್ರಹಿಸಿದ ಬೆಚಲೇಲನೂ ಒಹೋಲಿಯಾಬನೂ ಜ್ಞಾನ ವಿವೇಕ ವಿದ್ದವರೆಲ್ಲರೂ ಎಲ್ಲವನ್ನೂ ಕರ್ತನು ಆಜ್ಞಾಪಿಸಿದಂತೆ ಮಾಡಿದರು.

36:2b.EXO.036.002 ಬೆಚಲೇಲನನ್ನೂ ಒಹೋಲಿಯಾಬನನ್ನೂ ಕರ್ತನು ಯಾರ ಹೃದಯಗಳಲ್ಲಿ ಜ್ಞಾನವಿಟ್ಟನೋ ಆ ಜ್ಞಾನ ಹೃದಯವಿದ್ದ ಪ್ರತಿಯೊಬ್ಬನನ್ನೂ ಆ ಕೆಲಸ ಮಾಡುವದಕ್ಕೆ ಹೃದಯವು ಪ್ರೇರೇಪಿಸಲ್ಪಟ್ಟ ಪ್ರತಿ ಯೊಬ್ಬನನ್ನೂ ಮೋಶೆಯು ಕರೆದನು.

36:3b.EXO.036.003 ಆಗ ಇಸ್ರಾ ಯೇಲ್‌ ಮಕ್ಕಳು ಪರಿಶುದ್ಧ ಆಲಯದ ಸೇವೆಯ ಕೆಲಸಕ್ಕೋಸ್ಕರವೂ ಅದನ್ನು ಮಾಡಿಸುವದಕ್ಕೋಸ್ಕ ರವೂ ತಂದ ಕಾಣಿಕೆಗಳನ್ನೆಲ್ಲಾ ಮೋಶೆಯ ಬಳಿಯಿಂದ ಅವರು ತಕ್ಕೊಂಡರು. ಇದಲ್ಲದೆ ಅವರು ಪ್ರತಿ ಉದಯ ದಲ್ಲಿ ಅವನಿಗೆ ಇನ್ನೂ ಉಚಿತವಾದ ಕಾಣಿಕೆಗಳನ್ನು ತರುತ್ತಿದ್ದರು.

36:4b.EXO.036.004 ಆಗ ಪರಿಶುದ್ಧ ಸ್ಥಳದ ಕೆಲಸವನ್ನು ಮಾಡುವ ಜ್ಞಾನಿಗಳೆಲ್ಲರೂ ತಾವು ಮಾಡುತ್ತಿದ್ದ ಕೆಲಸದಿಂದ ಬಂದು

36:5b.EXO.036.005 ಮೋಶೆಯ ಸಂಗಡ ಮಾತನಾಡಿ ಕರ್ತನು ಮಾಡಬೇಕೆಂದು ಆಜ್ಞಾಪಿಸಿದ ಸೇವೆಯ ಕೆಲಸಕ್ಕೆ ಬೇಕಾಗಿರುವದಕ್ಕಿಂತಲೂ ಹೆಚ್ಚಾದದ್ದನ್ನು ಈ ಜನರು ತರುತ್ತಿದ್ದಾರೆ ಎಂದು ಹೇಳಿದರು.

36:6b.EXO.036.006 ಆಗ ಮೋಶೆಯು ಇನ್ನು ಮೇಲೆ ಪರಿಶುದ್ಧ ಸ್ಥಳದ ಕಾಣಿಕೆ ಗೋಸ್ಕರ ಯಾವ ಗಂಡಸಾಗಲಿ ಹೆಂಗಸಾಗಲಿ ಕೆಲಸ ಮಾಡಬಾರದೆಂದು ಪಾಳೆಯದಲ್ಲೆಲ್ಲಾ ಪ್ರಕಟಿಸ ಬೇಕೆಂಬದಾಗಿ ಆಜ್ಞಾಪಿಸಬೇಕು ಎಂದು ಹೇಳಿದನು. ಹೀಗೆ ಜನರು ತರುವದನ್ನು ನಿಲ್ಲಿಸಿಬಿಟ್ಟರು.

36:7b.EXO.036.007 ಅವರಿಗೆ ಎಲ್ಲಾ ಕೆಲಸವನ್ನು ಮಾಡುವದಕ್ಕೆ ಸಾಕಾಗಿ ಮಿಕ್ಕುವಷ್ಟು ಸಾಮಾನು ಇತ್ತು.

36:8b.EXO.036.008 ಹೀಗಿರಲಾಗಿ ಕೆಲಸದವರಲ್ಲಿ ಜ್ಞಾನ ಹೃದಯವುಳ್ಳ ಪ್ರತಿಯೊಬ್ಬನೂ ಗುಡಾರವನ್ನು ಹತ್ತು ತೆರೆಗಳಿಂದ ಮಾಡಿ ಹೊಸೆದ ನಾರಿನಿಂದಲೂ ನೀಲಿ, ಧೂಮ್ರ, ರಕ್ತವರ್ಣದ ಹೊಸೆದ ನಯವಾದ ನೂಲಿನಿಂದಲೂ ಕೌಶಲ್ಯದ ಕೆಲಸದಿಂದಲೂ ಕೆರೂಬಿಗಳನ್ನು ಮಾಡಿ ದನು.

36:9b.EXO.036.009 ಒಂದು ತೆರೆಯು ಇಪ್ಪತ್ತೆಂಟು ಮೊಳ ಉದ್ದ ವಾಗಿಯೂ ನಾಲ್ಕು ಮೊಳ ಅಗಲವಾಗಿಯೂ ಇತ್ತು. ತೆರೆಗಳೆಲ್ಲಾ ಒಂದೇ ಅಳತೆಯವುಗಳಾಗಿದ್ದವು.

36:10b.EXO.036.010 ಅವನು ಐದು ತೆರೆಗಳನ್ನು ಒಂದಕ್ಕೊಂದು ಜೋಡಿ ಸಿದನು, ಬೇರೆ ಐದು ತೆರೆಗಳನ್ನೂ ಒಂದಕ್ಕೊಂದು ಜೋಡಿಸಿದನು.

36:11b.EXO.036.011 ಈ ಎರಡು ಜೋಡನೆಗಳಲ್ಲಿ ಒಂದೊಂದರ ಕೊನೇ ಬಟ್ಟೆಯ ಅಂಚಿನಲ್ಲಿ ನೀಲಿ ದಾರದಿಂದ ಕುಣಿಕೆಗಳನ್ನು ಮಾಡಿದರು;

36:12b.EXO.036.012 ಒಂದು ತೆರೆಯಲ್ಲಿ ಐವತ್ತು ಕುಣಿಕೆಗಳನ್ನು ಮಾಡಿ ಇನ್ನೊಂದು ತೆರೆಯ ಅಂಚನ್ನು ಜೋಡಿಸುವ ಸ್ಥಳದಲ್ಲಿ ಐವತ್ತು ಕುಣಿಕೆಗಳನ್ನು ಮಾಡಿದನು. ಆ ಕುಣಿಕೆಗಳು ಒಂದು ತೆರೆಯನ್ನು ಮತ್ತೊಂದು ತೆರೆಯು ಹಿಡಿದುಕೊಳ್ಳುವಂತೆ ಮಾಡಿದನು.

36:13b.EXO.036.013 ಅವನು ಚಿನ್ನದ ಐವತ್ತು ಕೊಂಡಿಗಳನ್ನು ಮಾಡಿ ಆ ಕೊಂಡಿಗಳಿಂದ ತೆರೆಗಳನ್ನು ಒಂದ ಕ್ಕೊಂದಾಗಿ ಜೋಡಿಸಿದನು. ಹೀಗೆ ಅದು ಒಂದೇ ಗುಡಾರವಾಯಿತು.

36:14b.EXO.036.014 ಈ ಗುಡಾರದ ಮೇಲಿನ ಡೇರೆಗೋಸ್ಕರ ಅವನು ಮೇಕೆಯ ಕೂದಲಿನ ಹನ್ನೊಂದು ತೆರೆಗಳನ್ನು ಮಾಡಿ ಸಿದನು.

36:15b.EXO.036.015 ಒಂದು ತೆರೆಯು ಮೂವತ್ತು ಮೊಳ ಉದ್ದ ವಾಗಿಯೂ ನಾಲ್ಕು ಮೊಳ ಅಗಲವಾಗಿಯೂ ಇತ್ತು. ಹನ್ನೊಂದು ತೆರೆಗಳೂ ಒಂದೇ ಅಳತೆಯಾಗಿದ್ದವು.

36:16b.EXO.036.016 ಅವನು ಐದು ತೆರೆಗಳನ್ನು ಬೇರೆಯಾಗಿಯೂ ಆರು ತೆರೆಗಳನ್ನು ಬೇರೆಯಾಗಿಯೂ ಜೋಡಿಸಿದನು.

36:17b.EXO.036.017 ಅವನು ತೆರೆಯ ಕೊನೇ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನೂ ಎರಡನೆಯ ತೆರೆಯನ್ನು ಜೋಡಿಸುವ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನೂ ಮಾಡಿದನು.

36:18b.EXO.036.018 ಅದು ಒಂದೇ ಡೇರೆ ಆಗುವಂತೆ ಅವುಗಳ ಜೋಡ ಣೆಗೆ ಅವನು ಐವತ್ತು ಹಿತ್ತಾಳೆಯ ಕೊಂಡಿಗಳನ್ನು ಮಾಡಿದನು.

36:19b.EXO.036.019 ಅವನು ಆ ಡೇರೆಗಾಗಿ ಕೆಂಪು ಬಣ್ಣದಲ್ಲಿ ಅದ್ದಿ ತೆಗೆದ ಟಗರುಗಳ ಚರ್ಮದ ಹೊದಿಕೆಯನ್ನು ಮಾಡಿದನು. ಅದರ ಮೇಲೆ ಕಡಲ ಹಂದಿಯ ಚರ್ಮದ ಮೇಲ್ಹೊದಿಕೆಯನ್ನು ಮಾಡಿದನು.

36:20b.EXO.036.020 ಗುಡಾರವು ನಿಂತುಕೊಂಡಿರುವದಕ್ಕೆ ಅವನು ಜಾಲೀ ಮರದಿಂದ ಹಲಗೆಗಳನ್ನು ಮಾಡಿದನು.

36:21b.EXO.036.021 ಒಂದು ಹಲಗೆಯ ಉದ್ದಳತೆ ಹತ್ತು ಮೊಳದ್ದಾಗಿಯೂಆ ಹಲಗೆಯ ಅಗಲಳತೆ ಒಂದುವರೆ ಮೊಳದ್ದಾಗಿಯೂ ಇತ್ತು.

36:22b.EXO.036.022 ಒಂದು ಹಲಗೆಗೆ ಒಂದಕ್ಕೊಂದು ಸರಿಯಾದ ಅಂತರದಲ್ಲಿ ಎರಡು ಕೈಗಳನ್ನು ಮಾಡಿದನು; ಅದೇ ಪ್ರಕಾರ ಅವನು ಗುಡಾರದ ಎಲ್ಲಾ ಹಲಗೆಗಳಿಗೆ ಮಾಡಿದನು.

36:23b.EXO.036.023 ಅವನು ಗುಡಾರಕ್ಕೋಸ್ಕರ ಹಲಗೆ ಗಳನ್ನು ಮಾಡಿದನು. ದಕ್ಷಿಣ ದಿಕ್ಕಿಗೆ ದಕ್ಷಿಣಭಾಗಕ್ಕೆ ಇಪ್ಪತ್ತು ಹಲಗೆಗಳನ್ನು ಮಾಡಿದನು.

36:24b.EXO.036.024 ಅವನು ಇಪ್ಪತ್ತು ಹಲಗೆಗಳ ಕೆಳಗೆ ನಾಲ್ವತ್ತು ಬೆಳ್ಳಿಯ ಕಾಲುಗಳನ್ನು ಮಾಡಿದನು; ಒಂದು ಹಲಗೆಯ ಕೆಳಗೆ ಇರುವ ಎರಡು ಕೈಗಳಿಗೋಸ್ಕರ ಎರಡು ಕಾಲುಗಳನ್ನೂ ಇನ್ನೊಂದು ಹಲಗೆಯ ಕೆಳಗೆ ಇರುವ ಎರಡು ಕೈಗಳಿಗೋಸ್ಕರ ಎರಡು ಕಾಲುಗಳನ್ನೂ

36:25b.EXO.036.025 ಗುಡಾರದ ಉತ್ತರ ದಿಕ್ಕಿನ ಮೂಲೆಯ ಇನ್ನೊಂದು ಭಾಗಕ್ಕೆ ಅವನು ಇಪ್ಪತ್ತು ಹಲಗೆಗಳನ್ನೂ ಮಾಡಿದನು.

36:26b.EXO.036.026 ಒಂದೊಂದು ಹಲಗೆಯ ಕೆಳಗೆ ಎರಡೆರಡಾಗಿ ನಾಲ್ವತ್ತು ಬೆಳ್ಳಿಯ ಕಾಲುಗಳನ್ನು ಮಾಡಿದನು.

36:27b.EXO.036.027 ಗುಡಾರದ ಪಶ್ಚಿಮ ಭಾಗದ ಮಗ್ಗಲುಗಳಿಗೆ ಆರು ಹಲಗೆಗಳನ್ನು ಮಾಡಿ ದನು.

36:28b.EXO.036.028 ಅವನು ಗುಡಾರದ ಎರಡು ಪಾರ್ಶ್ವಗಳಲ್ಲಿ ರುವ ಮೂಲೆಗಳಿಗೆ ಎರಡು ಹಲಗೆಗಳನ್ನು ಮಾಡಿದನು.

36:29b.EXO.036.029 ಅವುಗಳು ಅಡಿಯಲ್ಲಿಯೂ ಮೇಲ್ಗಡೆಯಲ್ಲಿಯೂ ಒಂದೇ ಉಂಗುರದಿಂದ ಜೋಡಿಸಲ್ಪಟ್ಟವು. ಇದೇ ರೀತಿಯಲ್ಲಿ ಅವನು ಎರಡೂ ಮೂಲೆಗಳಲ್ಲಿರುವ ಎರಡಕ್ಕೂ ಮಾಡಿದನು.

36:30b.EXO.036.030 ಇಂಥ ಎಂಟು ಹಲಗೆ ಗಳಿದ್ದವು; ಪ್ರತಿಯೊಂದು ಹಲಗೆಯ ಕೆಳಗೆ ಎರಡೆರಡು ಕಾಲುಗಳಂತೆ ಅವುಗಳಿಗೆ ಹದಿನಾರು ಬೆಳ್ಳಿಯ ಕಾಲು ಗಳಿದ್ದವು.

36:31b.EXO.036.031 ಅವನು ಜಾಲೀ ಮರದ ಅಗುಳಿಗಳನ್ನು ಮಾಡಿದನು; ಗುಡಾರದ ಒಂದು ಭಾಗದ ಹಲಗೆಗಳಿಗೆ ಐದು ಅಗುಳಿಗಳು,

36:32b.EXO.036.032 ಗುಡಾರದ ಇನ್ನೊಂದು ಭಾಗದ ಹಲಗೆಗಳಿಗೆ ಐದು ಅಗುಳಿಗಳು, ಗುಡಾರದ ಪಶ್ಚಿಮ ಭಾಗಗಳಲ್ಲಿರುವ ಹಲಗೆಗಳಿಗೆ ಐದು ಅಗುಳಿಗಳನ್ನು ಮಾಡಿದನು.

36:33b.EXO.036.033 ಮಧ್ಯದ ಅಗುಳಿಯು ಹಲಗೆಗಳ ನಡುವೆ ಒಂದು ಬದಿಯಿಂದ ಇನ್ನೊಂದು ಬದಿಯ ವರೆಗೆ ಹಾದು ಹೋಗುವ ಹಾಗೆ ಮಾಡಿದನು.

36:34b.EXO.036.034 ಆ ಹಲಗೆಗಳನ್ನು ಚಿನ್ನದಿಂದ ಹೊದಿಸಿ ಅಗುಳಿಗಳಿಗೆ ಬಳೆಗಳಾಗಿರುವ ಉಂಗುರಗಳನ್ನು ಚಿನ್ನದಿಂದ ಮಾಡಿ ಅಗುಳಿಗಳನ್ನು ಚಿನ್ನದಿಂದ ಹೊದಿಸಿದನು.

36:35b.EXO.036.035 ನೀಲಿ, ಧೂಮ್ರ, ರಕ್ತವರ್ಣ, ನಯವಾಗಿ ಹೊಸೆದ ನಾರುಗಳಿಂದ ತೆರೆಯನ್ನು ಮಾಡಿದನು. ಅದರ ಮೇಲೆ ಕುಶಲ ಕೆಲಸದಿಂದ ಕೆರೂಬಿಗಳನ್ನು ಮಾಡಿದನು.

36:36b.EXO.036.036 ಇದಲ್ಲದೆ ಜಾಲೀ ಮರದ ನಾಲ್ಕು ಸ್ತಂಭಗಳನ್ನು ಮಾಡಿ ಚಿನ್ನದಿಂದ ಅವುಗಳನ್ನು ಹೊದಿಸಿ ದನು. ಅವುಗಳ ಮೊಳೆಗಳು ಚಿನ್ನದವುಗಳಾಗಿದ್ದವು; ಅವನು ಅವುಗಳಿಗೆ ಬೆಳ್ಳಿಯ ನಾಲ್ಕು ಕಾಲುಗಳನ್ನು ಎರಕಹೊಯ್ದನು.

36:37b.EXO.036.037 ಬಾಗಲಿಗೆ ನೀಲಿ, ಧೂಮ್ರ, ರಕ್ತವರ್ಣದ ಹೊಸೆದ ನಯವಾದ ನಾರುಗಳಿಂದ ಕಸೂತಿ ಹಾಕಿ ತೆರೆಯನ್ನು ಮಾಡಿದನು;ಕೊಂಡಿ ಇರುವ ಐದು ಕಂಬಗಳನ್ನು ಮಾಡಿ ಅವುಗಳ ತಲೆಗಳನ್ನೂ ಕಂಬ ಗಳನ್ನೂ ಚಿನ್ನದಿಂದ ಹೊದಿಸಿದನು. ಆದರೆ ಅವುಗಳ ಐದು ಕಾಲುಗಳು ಹಿತ್ತಾಳೆಯದ್ದಾಗಿದ್ದವು.

36:38b.EXO.036.038 ಕೊಂಡಿ ಇರುವ ಐದು ಕಂಬಗಳನ್ನು ಮಾಡಿ ಅವುಗಳ ತಲೆಗಳನ್ನೂ ಕಂಬ ಗಳನ್ನೂ ಚಿನ್ನದಿಂದ ಹೊದಿಸಿದನು. ಆದರೆ ಅವುಗಳ ಐದು ಕಾಲುಗಳು ಹಿತ್ತಾಳೆಯದ್ದಾಗಿದ್ದವು.

37

37:1b.EXO.037.001 ಬೆಚಲೇಲನು ಜಾಲೀ ಮರದಿಂದಎರಡುವರೆ ಮೊಳ ಉದ್ದ, ಒಂದುವರೆ ಮೊಳ ಅಗಲ, ಒಂದುವರೆ ಮೊಳ ಎತ್ತರವಾಗಿರುವ ಮಂಜೂಷವನ್ನು ಮಾಡಿದನು.

37:2b.EXO.037.002 ಅದನ್ನು ಚೊಕ್ಕ ಬಂಗಾರದಿಂದ ಒಳಗೂ ಹೊರಗೂ ಹೊದಿಸಿ ಅದರ ಸುತ್ತಲೂ ಚಿನ್ನದ ಕಿರೀಟವನ್ನು ಮಾಡಿದನು.

37:3b.EXO.037.003 ಅವನು ಅದರ ನಾಲ್ಕು ಮೂಲೆಗಳಿಗೆ ನಾಲ್ಕು ಉಂಗುರಗಳನ್ನು ಎರಕ ಹೊಯ್ದನು; ಇದಲ್ಲದೆ ಅದರ ಒಂದು ಮಗ್ಗಲಿಗೆ ಎರಡು ಇನ್ನೊಂದು ಮಗ್ಗಲಿಗೆ ಎರಡು ಉಂಗುರಗಳನ್ನು ಎರಕ ಹೊಯ್ದನು.

37:4b.EXO.037.004 ಅವನು ಜಾಲೀ ಮರದಿಂದ ಕೋಲುಗಳನ್ನು ಮಾಡಿ ಚಿನ್ನದಿಂದ ಅವುಗಳನ್ನು ಹೊದಿ ಸಿದನು.

37:5b.EXO.037.005 ಮಂಜೂಷವನ್ನು ಹೊರುವದಕ್ಕಾಗಿ ಕೋಲು ಗಳನ್ನು ಮಂಜೂಷದ ಭಾಗಗಳಲ್ಲಿರುವ ಉಂಗುರ ಗಳಲ್ಲಿ ಸೇರಿಸಿದನು.

37:6b.EXO.037.006 ಎರಡುವರೆ ಮೊಳ ಉದ್ದವೂ ಒಂದುವರೆ ಮೊಳ ಅಗಲವೂ ಇರುವ ಕರುಣಾಸನವನ್ನು ಚೊಕ್ಕ ಬಂಗಾರ ದಿಂದ ಮಾಡಿದನು.

37:7b.EXO.037.007 ಅವನು ಕರುಣಾಸನದ ಎರಡು ತುದಿಗಳಲ್ಲಿ ಎರಡು ಚಿನ್ನದ ಕೆರೂಬಿಗಳನ್ನು ಮಾಡಿದನು. ಅವು ಒಂದೇ ತುಂಡಿನಲ್ಲಿ ಹೊಡೆದು ಮಾಡಿದ್ದಾಗಿದ್ದವು.

37:8b.EXO.037.008 ಒಂದು ಬದಿಯ ಕೊನೆಯಲ್ಲಿ ಒಂದು ಕೆರೂಬಿಯನ್ನು ಇನ್ನೊಂದು ಬದಿಯ ಕೊನೆಯಲ್ಲಿ ಇನ್ನೊಂದು ಕೆರೂಬಿ ಯನ್ನು ಮಾಡಿದನು. ಹೀಗೆ ಕರುಣಾಸನದ ಎರಡೂ ಬದಿಗಳಲ್ಲಿ ಕೆರೂಬಿಯರನ್ನು ಮಾಡಿದನು.

37:9b.EXO.037.009 ಆ ಕೆರೂಬಿ ಗಳು ತಮ್ಮ ರೆಕ್ಕೆಗಳನ್ನು ಮೇಲಕ್ಕೆ ಹರಡಿಕೊಂಡು ಕರುಣಾಸನವನ್ನು ಮುಚ್ಚಿದಂತಿದ್ದವು, ಆ ಕೆರೂಬಿಯರ ಮುಖಗಳು ಒಂದನ್ನೊಂದು ನೋಡುತ್ತಿರುವಂತೆಯೂ ಕರುಣಾಸನವನ್ನು ನೋಡುತ್ತಿರುವಂತೆಯೂ ಇದ್ದವು.

37:10b.EXO.037.010 ಅವನು ಜಾಲೀ ಮರದಿಂದ ಒಂದು ಮೇಜನ್ನು ಮಾಡಿದನು; ಅದು ಎರಡು ಮೊಳ ಉದ್ದವೂ ಒಂದು ಮೊಳ ಅಗಲವೂ ಒಂದುವರೆ ಮೊಳ ಎತ್ತರವೂ ಆಗಿತ್ತು.

37:11b.EXO.037.011 ಅವನು ಅದನ್ನು ಚೊಕ್ಕ ಬಂಗಾರದಿಂದ ಹೊದಿಸಿ ಅದರ ಸುತ್ತಲೂ ಚಿನ್ನದ ಕೀರೀಟವನ್ನು ಮಾಡಿದನು.

37:12b.EXO.037.012 ಅವನು ಅದರ ಸುತ್ತಲೂ ಗೇಣಗಲವಾದ ಅಂಚನ್ನು ಮಾಡಿದನು; ಆ ಅಂಚಿನ ಸುತ್ತಲೂ ಚಿನ್ನದ ಕಿರೀಟವನ್ನು ಮಾಡಿದನು.

37:13b.EXO.037.013 ಅವನು ಅದಕ್ಕೆ ನಾಲ್ಕು ಚಿನ್ನದ ಉಂಗುರಗಳನ್ನು ಎರಕಹೊಯ್ದು ಆ ಉಂಗುರಗಳನ್ನು ಅದರ ನಾಲ್ಕು ಕಾಲುಗಳಿರುವ ನಾಲ್ಕು ಮೂಲೆಗಳಲ್ಲಿಟ್ಟನು.

37:14b.EXO.037.014 ಮೇಜನ್ನು ಹೊರುವದಕ್ಕೆ ಕೋಲನ್ನು ಸಿಕ್ಕಿಸುವ ಸ್ಥಳಗಳಲ್ಲಿ ಆ ಉಂಗುರಗಳು ಮೇಜಿನ ಅಂಚಿನ ಮೇಲಿದ್ದವು.

37:15b.EXO.037.015 ಮೇಜನ್ನು ಹೊರು ವದಕ್ಕೆ ಜಾಲೀ ಮರದಿಂದ ಕೋಲುಗಳನ್ನು ಮಾಡಿ ಅವುಗಳನ್ನು ಚಿನ್ನದಿಂದ ಹೊದಿಸಿದನು.

37:16b.EXO.037.016 ಅನಂತರ ಅವನು ಮೇಜಿನ ಮೇಲಿರುವ ಪಾತ್ರೆಗಳನ್ನು ಮಾಡಿ ದನು. ಅದರ ಹರಿವಾಣಗಳು, ಅದರ ಚಮಚಗಳು, ಅದರ ಬಟ್ಟಲುಗಳು ಅದೇ ರೀತಿಯಲ್ಲಿ ಅವುಗಳ ಮುಚ್ಚಳಗಳು ಇವುಗಳನ್ನು ಚೊಕ್ಕ ಬಂಗಾರದಿಂದ ಮಾಡಿದನು.

37:17b.EXO.037.017 ಅವನು ಚೊಕ್ಕ ಬಂಗಾರದ ದೀಪಸ್ತಂಭವನ್ನು ಮಾಡಿದನು; ಆ ದೀಪಸ್ತಂಭವನ್ನು ಅವನು ನಕ್ಷೆಯ ಕೆಲಸಮಾಡಿದ ಅಚ್ಚಿನ ಮೇಲೆ ಬಡಿದು ತಯಾರಿಸಿದನು.

37:18b.EXO.037.018 ಆ ದೀಪ ಸ್ತಂಭದಿಂದ ಆರು ಕೊಂಬೆಗಳು ಹೊರ ಬಂದಿದ್ದವು. ಒಂದು ಭಾಗದಿಂದ ಮೂರು ಮತ್ತೊಂದು ಭಾಗದಿಂದ ಮೂರು.

37:19b.EXO.037.019 ಒಂದು ಕೊಂಬೆಯಲ್ಲಿ ಬಾದಾ ಮಿಯ ಹೂವುಳ್ಳ ಮೂರು ಹಣತೆಗಳೂ, ಗುಂಡೂ ಹೂವೂ, ಮತ್ತೊಂದು ಕೊಂಬೆಯಲ್ಲಿ ಬಾದಾಮಿ ಹೂವುಳ್ಳ ಮೂರು ಹಣತೆಗಳೂ ಗುಂಡೂ ಹೂವೂ; ಈ ಪ್ರಕಾರ ದೀಪಸ್ತಂಭದಿಂದ ಹೊರಗೆ ಬರುವ ಆರು ಕೊಂಬೆಗಳಲ್ಲಿ ಇದ್ದವು.

37:20b.EXO.037.020 ದೀಪಸ್ತಂಭದಲ್ಲಿ ಗೂಡುಗಳೂ ಹೂವುಗಳೂ ಕೂಡಿದ ಬಾದಾವಿ ಹೂವುಳ್ಳ ನಾಲ್ಕು ಹಣತೆಗಳು.

37:21b.EXO.037.021 ದೀಪಸ್ತಂಭದೊಳ ಗಿಂದ ಹೊರಗೆ ಬರುವ ಆರು ಕೊಂಬೆಗಳಿಗೆ ಅದರಿಂದ ಬರುವ ಎರಡೆರಡು ಕೊಂಬೆಗಳ ಕೆಳಗೆ ಒಂದೊಂದು ಗೂಡು.

37:22b.EXO.037.022 ಅದರ ಗೂಡುಗಳೂ ಕೊಂಬೆಗಳೂ ಅದರಿಂದಲೇ ಉಂಟಾಗಿದ್ದವು; ಅದೆಲ್ಲಾ ಚೊಕ್ಕ ಬಂಗಾರದ ಒಂದೇ ಕಲಾಕೃತಿಯಾಗಿತ್ತು.

37:23b.EXO.037.023 ಅವನು ಏಳು ಬತ್ತಿಯ ದೀವಿಗೆಗಳನ್ನೂ ಕುಡಿ ಕತ್ತರಿಸಲು ಕತ್ತರಿ ಗಳನ್ನೂ ಕುಡಿ ಹಾಕಲು ಪಾತ್ರೆಗಳನ್ನೂ ಚೊಕ್ಕ ಬಂಗಾರ ದಿಂದ ಮಾಡಿದನು.

37:24b.EXO.037.024 ಇವೆಲ್ಲವುಗಳನ್ನೂ ಸಮಸ್ತ ಪಾತ್ರೆಗಳನ್ನೂ ಅವನು ಒಂದು ತಲಾಂತು ಚೊಕ್ಕ ಬಂಗಾರದಿಂದ ಮಾಡಿದನು.

37:25b.EXO.037.025 ಅವನು ಜಾಲೀ ಮರದಿಂದ ಧೂಪಪೀಠವನ್ನು ಮಾಡಿದನು; ಅದು ಒಂದು ಮೊಳ ಉದ್ದ, ಒಂದು ಮೊಳ ಅಗಲವಾಗಿ ಚಚ್ಚೌಕವಾಗಿತ್ತು; ಅದು ಎರಡು ಮೊಳ ಎತ್ತರವಾಗಿತ್ತು. ಅದರ ಕೊಂಬುಗಳು ಸಹ ಜಾಲೀ ಮರದಿಂದಲೇ ಮಾಡಲ್ಪಟ್ಟಿದ್ದವು.

37:26b.EXO.037.026 ಅವನು ಅದರ ಮೇಲ್ಭಾಗವನ್ನೂ ಅದರ ಸುತ್ತಲಿನ ಬದಿಗಳನ್ನೂ ಅದರ ಕೊಂಬುಗಳನ್ನೂ ಚೊಕ್ಕ ಬಂಗಾರದಿಂದ ಹೊದಿಸಿದನು; ಅದರ ಸುತ್ತಲೂ ಬಂಗಾರದ ಕಿರೀಟ ವನ್ನಿಟ್ಟನು.

37:27b.EXO.037.027 ಅದನ್ನು ಹೊರುವದಕ್ಕೆ ಕೋಲುಗಳನ್ನು ಸಿಕ್ಕಿಸುವದಕ್ಕೋಸ್ಕರ ಅದರ ಕಿರೀಟದ ಕೆಳಗೆ ಎರಡು ಬದಿಗಿರುವ ಎರಡು ಮೂಲೆಗಳಲ್ಲಿ ಚಿನ್ನದ ಎರಡು ಉಂಗುರಗಳನ್ನು ಮಾಡಿದನು.

37:28b.EXO.037.028 ಅವನು ಜಾಲೀ ಮರದಿಂದ ಕೋಲುಗಳನ್ನು ಮಾಡಿ ಅವುಗಳನ್ನು ಚಿನ್ನದಿಂದ ಹೊದಿಸಿದನು.ಅನಂತರ ಅವನು ವೈದ್ಯನ ಪದ್ಧತಿಯ ಪ್ರಕಾರ ಪವಿತ್ರವಾದ ಅಭಿಷೇಕ ತೈಲವನ್ನೂ ಪರಿಮಳ ದ್ರವ್ಯ ದಿಂದ ಶುದ್ಧವಾದ ಧೂಪವನ್ನೂ ತಯಾರಿಸಿದನು.

37:29b.EXO.037.029 ಅನಂತರ ಅವನು ವೈದ್ಯನ ಪದ್ಧತಿಯ ಪ್ರಕಾರ ಪವಿತ್ರವಾದ ಅಭಿಷೇಕ ತೈಲವನ್ನೂ ಪರಿಮಳ ದ್ರವ್ಯ ದಿಂದ ಶುದ್ಧವಾದ ಧೂಪವನ್ನೂ ತಯಾರಿಸಿದನು.

38

38:1b.EXO.038.001 ಅವನು ಜಾಲೀ ಮರದಿಂದ ದಹನ ಬಲಿಪೀಠವನ್ನು ಮಾಡಿದನು. ಅದು ಐದು ಮೊಳ ಉದ್ದವಾಗಿಯೂ ಐದು ಮೊಳ ಅಗಲವಾ ಗಿಯೂ ಚಚ್ಚೌಕವಾಗಿತ್ತು; ಅದರ ಎತ್ತರ ಮೂರು ಮೊಳವಾಗಿತ್ತು.

38:2b.EXO.038.002 ಇದಲ್ಲದೆ ಅವನು ಅದರ ನಾಲ್ಕು ಮೂಲೆಗಳಲ್ಲಿ ಕೊಂಬುಗಳನ್ನು ಮಾಡಿದನು; ಅದರ ಕೊಂಬುಗಳು ಜಾಲೀ ಮರದ್ದೇ ಆಗಿದ್ದವು; ಅವನು ಅವುಗಳನ್ನು ಹಿತ್ತಾಳೆಯಿಂದ ಹೊದಿಸಿದನು.

38:3b.EXO.038.003 ಅನಂತರ ಅವನು ಬಲಿಪೀಠದ ಎಲ್ಲಾ ಸಾಮಾನುಗಳನ್ನು ಮಾಡಿ ದನು: ಕೊಡಗಳು, ಸಲಿಕೆಗಳು, ಬೋಗುಣಿಗಳು, ಮಾಂಸ ಸಿಕ್ಕಿಸುವ ಕೊಂಡಿಗಳು, ಅಗ್ಗಿಷ್ಟಿಗೆಗಳು; ಇವೆಲ್ಲ ವುಗಳನ್ನು ಅವನು ಹಿತ್ತಾಳೆಯಿಂದ ಮಾಡಿದನು.

38:4b.EXO.038.004 ಬಲಿಪೀಠದ ಕೆಳಗಿನ ಆವರಣದಲ್ಲಿ ನೆಲದಿಂದ ಪೀಠದ ಮಧ್ಯದ ವರೆಗೆ ಬರುವಂತೆ ಜಾಲರೀ ಕೆಲಸದಿಂದ ಹಿತ್ತಾಳೆಯ ಬೆಂಕಿಗೂಡನ್ನು ಮಾಡಿದನು.

38:5b.EXO.038.005 ಆ ಹಿತ್ತಾಳೆ ಯ ಬೆಂಕಿಯ ಗೂಡನ್ನು ಹೊರುವಾಗ ಕೋಲು ಸಿಕ್ಕಿಸುವದಕ್ಕೋಸ್ಕರ ಅದರ ನಾಲ್ಕು ತುದಿಗಳಲ್ಲಿ ನಾಲ್ಕು ಉಂಗುರಗಳನ್ನು ಎರಕಹೊಯ್ದನು.

38:6b.EXO.038.006 ಅವನು ಜಾಲೀ ಮರದಿಂದ ಕೋಲುಗಳನ್ನು ಮಾಡಿ ಅವುಗಳಿಗೆ ಹಿತ್ತಾ ಳೆಯ ಹೊದಿಕೆಯನ್ನು ಹೊದಿಸಿದನು.

38:7b.EXO.038.007 ಬಲಿಪೀಠವನ್ನು ಹೊರುವದಕ್ಕೆ ಅದರ ಬದಿಯಲ್ಲಿ ಮಾಡಿದ ಉಂಗುರ ಗಳಲ್ಲಿ ಆ ಕೋಲುಗಳನ್ನು ಸಿಕ್ಕಿಸಿದನು; ಅವನು ಆ ಬಲಿಪೀಠವನ್ನು ಹಲಗೆಗಳಿಂದ ಪೊಳ್ಳಾಗಿ ಮಾಡಿದನು.

38:8b.EXO.038.008 ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಸೇರಿಬರು ತ್ತಿದ್ದ ಸ್ತ್ರೀಯರ ಕನ್ನಡಿಗಳಿಂದ ಅವನು ಹಿತ್ತಾಳೆಯ ಗಂಗಾಳವನ್ನೂ ಅದರ ಅಡ್ಡಣಿಗೆಯನ್ನು ಮಾಡಿದನು.

38:9b.EXO.038.009 ಅವನು ಅಂಗಳವನ್ನು ಮಾಡಿದನು: ಅಂಗಳದ ದಕ್ಷಿಣ ದಿಕ್ಕಿನ ಭಾಗದಲ್ಲಿದ್ದ ತೆರೆಗಳು ನಯವಾಗಿ ಹೊಸೆದ ನೂಲಿನ ಬಟ್ಟೆಯಿಂದ ಮಾಡಲ್ಪಟ್ಟಿದ್ದವು. ಅವು ನೂರು ಮೊಳ ಉದ್ದವಾಗಿದ್ದವು.

38:10b.EXO.038.010 ಅವುಗಳಿಗೆ ಇಪ್ಪತ್ತು ಸ್ತಂಭಗಳಿದ್ದವು, ಅವುಗಳಿಗೆ ಇಪ್ಪತ್ತು ಹಿತ್ತಾಳೆಯ ಕಾಲು ಕುಣಿಕೆಗಳಿದ್ದವು; ಆ ಸ್ತಂಭಗಳಿಗೆ ಇದ್ದ ಕೊಂಡಿ ಮತ್ತು ಅಲಂಕಾರದ ಪಟ್ಟಿಗಳು ಬೆಳ್ಳಿಯಿಂದ ಮಾಡಲ್ಪ ಟ್ಟಿದ್ದವು.

38:11b.EXO.038.011 ಉತ್ತರ ದಿಕ್ಕಿನ ತೆರೆಗಳು ನೂರು ಮೊಳ ಉದ್ದವಾಗಿದ್ದವು; ಅವುಗಳಿಗೆ ಇಪ್ಪತ್ತು ಸ್ತಂಭಗಳಿದ್ದು ಆ ಸ್ತಂಭಗಳಿಗೆ ಇಪ್ಪತ್ತು ಹಿತ್ತಾಳೆಯ ಕಾಲು ಕುಣಿಕೆ ಗಳಿದ್ದವು. ಆ ಸ್ತಂಭಗಳ ಕೊಂಡಿ ಮತ್ತು ಅಲಂಕಾರದ ಪಟ್ಟಿಗಳು ಬೆಳ್ಳಿಯದಾಗಿದ್ದವು.

38:12b.EXO.038.012 ಪಶ್ಚಿಮ ದಿಕ್ಕಿನ ತೆರೆಗಳು ಐವತ್ತು ಮೊಳ ಉದ್ದವಾಗಿದ್ದವು; ಅವುಗಳಿಗೆ ಹತ್ತು ಸ್ತಂಭಗಳಿದ್ದು ಆ ಸ್ತಂಭಗಳಿಗೆ ಹತ್ತು ಹಿತ್ತಾಳೆಯ ಕಾಲು ಕುಣಿಕೆಗಳಿದ್ದವು. ಆ ಸ್ತಂಭಗಳ ಕೊಂಡಿಗಳೂ ಮತ್ತು ಅಲಂಕಾರದ ಪಟ್ಟಿಗಳೂ ಬೆಳ್ಳಿಯದಾಗಿದ್ದವು.

38:13b.EXO.038.013 ಪೂರ್ವ ದಿಕ್ಕಿನ ಬದಿಗೆ ಐವತ್ತು ಮೊಳ.

38:14b.EXO.038.014 ದ್ವಾರದ ಒಂದು ಬದಿಯ ತೆರೆಗಳು ಹದಿನೈದು ಮೊಳ ಉದ್ದ ವಾಗಿದ್ದವು; ಅವುಗಳಿಗೆ ಮೂರು ಸ್ತಂಭಗಳೂ ಆ ಸ್ತಂಭಗಳಿಗೆ ಮೂರು ಕಾಲುಕುಣಿಕೆಗಳೂ ಇದ್ದವು.

38:15b.EXO.038.015 ಅಂಗಳದ ಇನ್ನೊಂದು ಬದಿಯ ದ್ವಾರದ ಎರಡು ಕಡೆಗಳಲ್ಲಿ ಹದಿನೈದು ಮೊಳ ಉದ್ದವಾದ ತೆರೆಗಳಿದ್ದವು; ಅವುಗಳಿಗೆ ಮೂರು ಸ್ತಂಭಗಳೂ ಆ ಸ್ತಂಭಗಳಿಗೆ ಮೂರು ಕಾಲುಕುಣಿಕೆಗಳೂ ಇದ್ದವು.

38:16b.EXO.038.016 ಅಂಗಳದ ಸುತ್ತಲಿದ್ದ ಎಲ್ಲ ತೆರೆಗಳು ನಯವಾಗಿ ಹೊಸೆದ ನೂಲಿನ ಬಟ್ಟೆಯಿಂದ ಮಾಡಲ್ಪಟ್ಟಿದ್ದವು.

38:17b.EXO.038.017 ಸ್ತಂಭಗಳ ಕಾಲು ಕುಣಿಕೆಗಳು ಹಿತ್ತಾಳೆಯವುಗಳು; ಆ ಸ್ತಂಭಗಳ ಕೊಂಡಿಯೂ ಅಲಂಕಾರದ ಪಟ್ಟಿಗಳೂ ಬೆಳ್ಳಿಯದಾ ಗಿದ್ದವು; ಕಂಬದ ಬೋದಿಗಳು ಬೆಳ್ಳಿಯಿಂದ ಹೊದಿಸ ಲ್ಪಟ್ಟಿದ್ದವು; ಅಂಗಳದ ಎಲ್ಲಾ ಸ್ತಂಭಗಳು ಬೆಳ್ಳಿಯ ಅಲಂಕಾರದ ಪಟ್ಟಿಗಳಿಂದ ಸುತ್ತುವರಿಯಲ್ಪಟ್ಟಿದ್ದವು.

38:18b.EXO.038.018 ಅಂಗಳ ದ್ವಾರದ ತೆರೆಯು ನಯವಾಗಿ ಹೊಸೆದ ನೂಲಿನ ಬಟ್ಟೆಯಾಗಿತ್ತು; ಅದರ ಮೇಲೆ ನೀಲಿ ಧೂಮ್ರ ರಕ್ತವರ್ಣ ದಾರಗಳಿಂದ ಕಸೂತಿ ಕೆಲಸ ಮಾಡಲಾಗಿತ್ತು; ಅವು ಇಪ್ಪತ್ತು ಮೊಳ ಉದ್ದವಾಗಿದ್ದು ಅಗಲ ಎತ್ತರಗಳಲ್ಲಿ ಅಂಗಳದ ಉಳಿದ ತೆರೆಗಳಿಗೆ ಸರಿಯಾಗುವಂತೆ ಐದು ಮೊಳ ಇತ್ತು.

38:19b.EXO.038.019 ಅವುಗಳಿಗೆ ನಾಲ್ಕು ಸ್ತಂಭಗಳು, ಆ ಸ್ತಂಭಗಳಿಗೆ ನಾಲ್ಕು ಹಿತ್ತಾಳೆಯ ಕಾಲು ಕುಣಿಕೆಗಳು ಇದ್ದವು; ಅವುಗಳ ಕೊಂಡಿಗಳು ಬೆಳ್ಳಿಯದಾಗಿದ್ದವು, ಅವುಗಳ ಬೋದಿಗಳ ಹೊದಿಕೆಯೂ ಅಲಂಕಾರದ ಪಟ್ಟಿಗಳೂ ಬೆಳ್ಳಿಯದಾಗಿದ್ದವು.

38:20b.EXO.038.020 ಗುಡಾರದ ಅಂಗಳ ಸುತ್ತಲೂ ಇರುವ ಗೂಟಗಳು ಹಿತ್ತಾಳೆಯದಾಗಿದ್ದವು.

38:21b.EXO.038.021 ಮೋಶೆಯ ಆಜ್ಞೆಯ ಮೇರೆಗೆ ಲೇವಿಯ ಸೇವೆಗಾಗಿ ಯಾಜಕನಾದ ಆರೋನನ ಮಗ ಈತಾಮಾರನ ಕೈಗೆ ಒಪ್ಪಿಸಿದ ಸಾಕ್ಷಿ ಗುಡಾರವನ್ನೊಳಗೊಂಡ ಗುಡಾ ರವನ್ನು ನಿರ್ಮಿಸಲು ಮಾಡಬೇಕಾದ ಒಟ್ಟು ಏರ್ಪಾಡುಗಳು ಇವೇ.

38:22b.EXO.038.022 ಕರ್ತನು ಮೋಶೆಗೆ ಆಜ್ಞಾಪಿಸಿದ್ದನ್ನೆಲ್ಲಾ ಯೂದಾ ಕುಲದವನಾದ ಹೂರನ ಮೊಮ್ಮಗನೂ ಊರಿಯನ ಮಗನೂ ಆದ ಬೆಚಲೇಲನು ಮಾಡಿದನು.

38:23b.EXO.038.023 ಅವನ ಜೊತೆಯಲ್ಲಿ ದಾನ ಕುಲದವನಾದ ಅಹೀಸಾಮಾಕನ ಮಗನಾದ ಒಹೋಲಿಯಾಬನೂ ಇದ್ದನು. ಇವನು ಕೆತ್ತನೆ ಕೆಲಸ ಮಾಡುವವನೂ ಕುಶಲ ಕೆಲಸಗಾರನೂ ನೀಲಿ ಧೂಮ್ರ ರಕ್ತವರ್ಣ ನಯವಾದ ನೂಲು ಇವುಗಳಿಂದ ಕಸೂತಿ ಕೆಲಸ ಮಾಡುವವನೂ ಆಗಿದ್ದನು.

38:24b.EXO.038.024 ಪರಿಶುದ್ಧಾಲಯ ನಿಯಮದ ಮೇರೆಗೆ ಪರಿಶುದ್ಧ ಕೆಲಸಕ್ಕೆ ಉಪಯೋಗಿಸಿದ ಎಲ್ಲಾ ಬಂಗಾರವು ಕಾಣಿಕೆಯ ಬಂಗಾರವನ್ನೊಳಗೊಂಡು ಒಟ್ಟು ಇಪ್ಪ ತ್ತೊಂಭತ್ತು ತಲಾಂತು ಮತ್ತು ಏಳುನೂರ ಮೂವತ್ತು ಶೆಕೆಲುಗಳಾಗಿತ್ತು.

38:25b.EXO.038.025 ಪರಿಶುದ್ಧಾಲಯ ನಿಯಮದ ಮೇರೆಗೆ ಸಭೆ ಯವರು ಎಣಿಸಿದ ಬೆಳ್ಳಿಯು ಒಂದು ನೂರು ತಲಾಂತು, ಒಂದು ಸಾವಿರದ ಏಳುನೂರ ಎಪ್ಪತ್ತೈದು ಶೆಕೆಲು ಗಳಾಗಿತ್ತು.

38:26b.EXO.038.026 ಪರಿಶುದ್ಧಾಲಯ ನಿಯಮದ ಮೇರೆಗೆ ತಲಾ ಒಂದು ಬೆಕಾ, ಅಂದರೆ ಅರ್ಧ ಶೆಕೆಲಿನಂತೆ ಇಪ್ಪತ್ತು ಮೊದಲುಗೊಂಡು ಅದಕ್ಕೆ ಮೇಲಿನ ಪ್ರಾಯ ದವರನ್ನು ಲೆಕ್ಕ ಮಾಡಲಾಗಿ ಆರು ಲಕ್ಷ ಮೂರು ಸಾವಿರದ ಐದು ನೂರ ಐವತ್ತು ಗಂಡಸರ ಸಂಖ್ಯೆ ಇತ್ತು.

38:27b.EXO.038.027 ಪರಿಶುದ್ಧಾಲಯದ ಕುಣಿಕೆಗಳಿಗೆ ಮತ್ತು ತೆರೆಗಳ ಕುಣಿಕೆಗಳಿಗೆ ಎರಕ ಹೊಯ್ಯಲು ಒಂದು ನೂರು ತಲಾಂತು ಬೆಳ್ಳಿ ಹಿಡಿಯಿತು; ಒಂದು ಕುಣಿಕೆಗೆ ಒಂದು ತಲಾಂತಿನಂತೆ ನೂರು ಕುಣಿಕೆಗಳಿಗೆ ನೂರು ತಲಾಂತು ಬೆಳ್ಳಿ ಆಯಿತು.

38:28b.EXO.038.028 ಒಂದು ಸಾವಿರದ ಏಳುನೂರ ಎಪ್ಪತ್ತೈದು ಶೆಕೆಲಿನಿಂದ ಅವನು ಕಂಬಗಳಿಗೆ ಕೊಂಡಿಗಳನ್ನೂ ಕಂಬದ ಬೋದಿಗೆ ಮೇಲ್ಹೊದಿಕೆ ಯನ್ನೂ ಅಲಂಕಾರದ ಪಟ್ಟಿಗಳನ್ನೂ ಮಾಡಿದನು.

38:29b.EXO.038.029 ಕಾಣಿಕೆಯಾಗಿ ಬಂದ ಹಿತ್ತಾಳೆಯು ಎಪ್ಪತ್ತು ತಲಾಂತು ಮತ್ತು ಎರಡು ಸಾವಿರದ ನಾಲ್ಕುನೂರು ಶೆಕೆಲುಗಳಾಗಿತ್ತು.

38:30b.EXO.038.030 ಆ ಹಿತ್ತಾಳೆಯಿಂದ ಅವನು ಸಭಾಗುಡಾರದ ದ್ವಾರಗಳಿಗೆ ಕುಣಿಕೆಗಳನ್ನೂ ಬಲಿ ಪೀಠವನ್ನೂ ಅದಕ್ಕೆ ಜಾಲರಿಯನ್ನೂ ಬಲಿಪೀಠದ ಸಮಸ್ತ ಪ್ರಾತ್ರೆಗಳನ್ನೂ ಮಾಡಿದನು.ಸುತ್ತಲಿನ ಅಂಗಳದ ಕುಣಿಕೆಗಳನ್ನೂ ಗುಡಾರದ ಗೂಟಗಳನ್ನೂ ಅಂಗಳದ ಸುತ್ತಲಿನ ಎಲ್ಲಾ ಗೂಟಗಳನ್ನೂ ಮಾಡಿದನು.

38:31b.EXO.038.031 ಸುತ್ತಲಿನ ಅಂಗಳದ ಕುಣಿಕೆಗಳನ್ನೂ ಗುಡಾರದ ಗೂಟಗಳನ್ನೂ ಅಂಗಳದ ಸುತ್ತಲಿನ ಎಲ್ಲಾ ಗೂಟಗಳನ್ನೂ ಮಾಡಿದನು.

39

39:1b.EXO.039.001 ಕರ್ತನು ಮೋಶೆಗೆ ಆಜ್ಞಾಪಿಸಿದ ಮೇರೆಗೆನೀಲಿ ಧೂಮ್ರ ರಕ್ತವರ್ಣದ ನೂಲಿನಿಂದ ಪವಿತ್ರ ಆಲಯದ ಸೇವೆಮಾಡುವದಕ್ಕೆ ಸೇವಾ ವಸ್ತ್ರಗಳನ್ನೂ ಆರೋನನಿಗೆ ಪರಿಶುದ್ಧ ವಸ್ತ್ರಗಳನ್ನು ಮಾಡಿದರು.

39:2b.EXO.039.002 ಅವನು ಎಫೋದನ್ನು ಚಿನ್ನದಿಂದಲೂ ನೀಲಿ ಧೂಮ್ರ ಮತ್ತು ರಕ್ತವರ್ಣ ನಯವಾಗಿ ಹೊಸೆದ ನೂಲು ಇವುಗಳಿಂದ ಮಾಡಿದನು.

39:3b.EXO.039.003 ಅವರು ಚಿನ್ನವನ್ನು ಹೊಡೆದು ತೆಳುವಾದ ತಗಡುಗಳನ್ನಾಗಿಮಾಡಿ ಅದನ್ನು ಕತ್ತರಿಸಿ ತೆಳುವಾದ ಎಳೆಗಳನ್ನಾಗಿಮಾಡಿ ಆ ಎಳೆಗಳನ್ನೂ ನೀಲಿ ಧೂಮ್ರ ರಕ್ತವರ್ಣ ನಯವಾಗಿ ಹೊಸೆದ ನೂಲುಗಳೊಂದಿಗೆ ಸೇರಿಸಿ ಕಸೂತಿ ಕೆಲಸ ಮಾಡು ವದಕ್ಕೆ ಉಪಯೋಗಿಸುತ್ತಿದ್ದರು.

39:4b.EXO.039.004 (ಎಫೋದಕ್ಕೆ) ಜೋಡಿಸಲು ಹೆಗಲ ಪಟ್ಟಿಯನ್ನು ತಯಾರಿಸಿದರು; ಅದರ ಎರಡೂ ಅಂಚುಗಳು ಜೋಡಿಸಲ್ಪಟ್ಟಿದ್ದವು.

39:5b.EXO.039.005 ಅದರ ಮೇಲಿರುವ ವಿಚಿತ್ರವಾದ ಎಫೋದಿನ ನಡು ಕಟ್ಟು ಅದೇ ಕೆಲಸಕ್ಕನುಸಾರವಾಗಿ ಚಿನ್ನ ನೀಲಿ ಧೂಮ್ರ ರಕ್ತವರ್ಣ ಹೊಸೆದ ನಯವಾದ ನಾರುಗಳುಳ್ಳದ್ದಾಗಿದ್ದು ಕರ್ತನು ಮೋಶೆಗೆ ಆಜ್ಞಾಪಿಸಿದಂತೆಯೇ ಇತ್ತು.

39:6b.EXO.039.006 ಗೋಮೇಧಕ ಕಲ್ಲುಗಳನ್ನು ಮುದ್ರೆಯನ್ನು ಕೆತ್ತು ವಂತೆ ಬಂಗಾರದಲ್ಲಿ ಕೆತ್ತಲ್ಪಟ್ಟವುಗಳಾಗಿ ಇಸ್ರಾಯೇಲಿನ ಮಕ್ಕಳ ಹೆಸರುಗಳ ಪ್ರಕಾರ ಮಾಡಿದರು.

39:7b.EXO.039.007 ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಅವನು ಅವುಗಳನ್ನು ಎಫೋದಿನ ಹೆಗಲಿನ ಭಾಗಗಳ ಮೇಲೆ ಇಸ್ರಾ ಯೇಲ್ಯರ ಮಕ್ಕಳ ಜ್ಞಾಪಕಾರ್ಥವಾದ ಕಲ್ಲುಗಳಿರ ತಕ್ಕದ್ದೆಂದು ಅವುಗಳನ್ನು ಇಟ್ಟನು.

39:8b.EXO.039.008 ಎದೆಪದಕವನ್ನು ಕೌಶಲ್ಯ ಕೆಲಸದಿಂದ ಎಫೋದಿನ ಕೆಲಸದ ಹಾಗೆಯೇ ಬಂಗಾರ ನೀಲಿ ಧೂಮ್ರ ರಕ್ತವರ್ಣ ಹೊಸೆದ ನಯವಾದ ನಾರುಗಳಿಂದ ಮಾಡಿದರು.

39:9b.EXO.039.009 ಅದು ಚಚ್ಚೌಕವಾಗಿತ್ತು; ಎದೆಪದಕವನ್ನು ಇಮ್ಮಡಿ ಸಿದ್ದಾಗಿ ಮಾಡಿದರು. ಅದು ಗೇಣುದ್ದವಾಗಿಯೂ ಗೇಣಗಲವಾಗಿಯೂ ಇಮ್ಮಡಿಸಿದ್ದಾಗಿತ್ತು.

39:10b.EXO.039.010 ಅದರಲ್ಲಿ ಕಲ್ಲುಗಳನ್ನು ನಾಲ್ಕು ಸಾಲುಗಳಾಗಿ ಕೂಡ್ರಿಸಿದರು; ಮಾಣಿಕ್ಯ ಪುಷ್ಯರಾಗ ಸ್ಪಟಿಕ ಇವು ಮೊದಲನೆಯ ಸಾಲಿನಲ್ಲಿ ಇದ್ದವು.

39:11b.EXO.039.011 ಕೆಂಪರಳು ನೀಲ ವಜ್ರ ಇವು ಎರಡನೆಯ ಸಾಲಿನಲ್ಲಿ ಇದ್ದವು.

39:12b.EXO.039.012 ಪದ್ಮರಾಗ, ವೈದೂರ್ಯ, ಸುಗಂಧ ಇವು ಮೂರನೆಯ ಸಾಲಿ ನಲ್ಲಿದ್ದವು.

39:13b.EXO.039.013 ಬೆರುಲ್ಲ ಗೋಮೇಧಕ ವೈದೂರ್ಯ ಇವು ನಾಲ್ಕನೆಯ ಸಾಲಿನಲ್ಲಿ ಇದ್ದವು. ಇವು ಕೆತ್ತಲ್ಪಟ್ಟ ಚಿನ್ನದಲ್ಲಿ ಕೂಡ್ರಿಸಿದವುಗಳಾಗಿದ್ದವು.

39:14b.EXO.039.014 ಆ ಕಲ್ಲುಗಳು ಇಸ್ರಾಯೇಲ್ಯರ ಮಕ್ಕಳ ಹೆಸರುಗಳ ಪ್ರಕಾರ ಹನ್ನೆರಡಾಗಿ ಅವರ ಹೆಸರುಗಳಿಗನುಸಾರವಾಗಿ ಇದ್ದವು. ಒಂದೊಂದಕ್ಕೆ ಒಂದೊಂದು ಹೆಸರಾಗಿ ಹನ್ನೆರಡು ಕಲ್ಲುಗಳಿಗೋಸ್ಕರ ಮುದ್ರೆಗಳ ಹಾಗೆ ಕೆತ್ತಿದವುಗಳಾ ಗಿದ್ದವು.

39:15b.EXO.039.015 ಎದೆಪದಕದ ಮೇಲಿರುವ ಕೊನೆಗಳಲ್ಲಿ ಶುದ್ಧ ಬಂಗಾರದಿಂದ ನೂಲಿನ ಹಾಗೆ ಹೆಣೆದಿರುವ ಸರಪಣಿಯನ್ನು ಮಾಡಿದರು.

39:16b.EXO.039.016 ಬಂಗಾರದ ಆ ಎರಡು ಜಡೆಗಳನ್ನು ಮಾಡಿ ಆ ಎರಡು ಉಂಗುರಗಳನ್ನು ಎದೆಪದಕದ ಎರಡು ಕೊನೆಗಳಲ್ಲಿ ಸೇರಿಸಿದನು.

39:17b.EXO.039.017 ಆ ಎರಡು ಹೆಣೆದ ಬಂಗಾರದ ಸರಪಣಿಗಳನ್ನು ಪದಕದ ಕೊನೆಗಳಲ್ಲಿರುವ ಎರಡು ಉಂಗುರಗಳಲ್ಲಿ ಸೇರಿಸಿದನು.

39:18b.EXO.039.018 ಆ ಎರಡು ಹೆಣೆದ ಸರಪಣಿಗಳ ಎರಡು ಕೊನೆಗಳನ್ನು ಆ ಎರಡು ಜವೆಗಳಲ್ಲಿ ಸಿಕ್ಕಿಸಿ ಎಫೋದಿನ ಹೆಗಲು ಭಾಗಗಳ ಮುಂದುಗಡೆ ಇರಿಸಿ ದರು.

39:19b.EXO.039.019 ಬಂಗಾರದ ಎರಡು ಉಂಗುರಗಳನ್ನು ಮಾಡಿ ಎದೆಪದಕದ ಎರಡು ಕೊನೆಗಳಲ್ಲಿ ಎಫೋದಿನ ಕಡೆಗೆ ಒಳಗಡೆಯಲ್ಲಿ ಹಾಕಿದರು.

39:20b.EXO.039.020 ಚಿನ್ನದ ಬೇರೆ ಎರಡು ಉಂಗುರಗಳನ್ನು ಮಾಡಿ ಎಫೋದಿನ ಮುಂಬದಿಯ ಕೆಳಗಿನ ಎರಡು ಭಾಗಗಳಲ್ಲಿ ಎಫೋದಿನ ವಿಚಿತ್ರವಾದ ನಡುಕಟ್ಟಿನ ಮೇಲೆ ಅದನ್ನು ಜೋಡಿಸುವ ಸ್ಥಳಕ್ಕೆ ಎದುರಾಗಿ ಇರಿಸಿದರು.

39:21b.EXO.039.021 ಕರ್ತನು ಮೋಶೆಗೆ ಆಜ್ಞಾಪಿ ಸಿದ ಹಾಗೆಯೇ ಆ ಎದೆಪದಕವನ್ನು ಎಫೋದಿನ ವಿಚಿತ್ರವಾದ ನಡುಕಟ್ಟಿನ ಮೇಲೆ ಇರುವ ಹಾಗೆಯೂ ಎದೆಪದಕವು ಎಫೋದನ್ನು ಬಿಟ್ಟು ಅಲ್ಲಾಡದ ಹಾಗೆ ಯೂ ಅದರ ಉಂಗುರಗಳ ಮೂಲಕವಾಗಿ ನೀಲಿ ನೂಲಿನಿಂದ ಎಫೋದಿನ ಉಂಗುರಗಳಿಗೆ ಕಟ್ಟಿದರು.

39:22b.EXO.039.022 ಎಫೋದಿನ ನಿಲುವಂಗಿಗಳನ್ನೆಲ್ಲಾ ನೇತ ಕೆಲಸ ಕ್ಕನುಸಾರ ನೀಲಿಯಿಂದ ಮಾಡಿದರು.

39:23b.EXO.039.023 ನಿಲುವಂಗಿಯ ರಂಧ್ರ ಕವಚ ರಂಧ್ರದ ಹಾಗೆ ಅದರ ಮಧ್ಯದಲ್ಲಿ ಇತ್ತು. ಅದು ಹರಿಯದ ಹಾಗೆ ಆ ರಂಧ್ರದ ಸುತ್ತಲೂ ಗೋಟು ಇತ್ತು.

39:24b.EXO.039.024 ನಿಲುವಂಗಿಯ ಅಂಚಿನ ಮೇಲೆ ಹೊಸೆದ ನೀಲಿ ಧೂಮ್ರ ರಕ್ತವರ್ಣದ ದಾಳಿಂಬರ ಗಳನ್ನು ಮಾಡಿದನು.

39:25b.EXO.039.025 ಶುದ್ಧ ಬಂಗಾರದ ಗಂಟೆಗಳನ್ನು ಮಾಡಿ ಆ ಗಂಟೆಗಳನ್ನು ದಾಳಿಂಬರಗಳ ನಡುವೆ ಇಟ್ಟು ನಿಲುವಂಗಿಗಳ ಅಂಚಿನ ಮೇಲೆ ಸುತ್ತಲೂ ದಾಳಿಂಬರಗಳ ನಡುವೆಯೇ ಇರಿಸಿದನು.

39:26b.EXO.039.026 ಸೇವೆ ಗೋಸ್ಕರ ಮಾಡಿದ ನಿಲುವಂಗಿಯ ಅಂಚಿನ ಮೇಲೆ ಸುತ್ತಲೂ ಒಂದು ಗಂಟೆ ಒಂದು ದಾಳಿಂಬರದ ಮೇರೆಗೆ ಇಟ್ಟರು, ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಅದು ಇತ್ತು.

39:27b.EXO.039.027 ಆರೋನನಿಗೂ ಅವನ ಮಕ್ಕಳಿಗೂ ನಾರು ನೂಲಿನಿಂದ ಮಾಡಿದ ನೇಯ್ಗೆ ಕೆಲಸದ ಅಂಗಿಗಳನ್ನೂ

39:28b.EXO.039.028 ನಾರಿನ ಮುಂಡಾಸವನ್ನೂ ಸೌಂದರ್ಯವುಳ್ಳ ನಾರಿನ ಕುಲಾವಿಗಳನ್ನೂ ನಾರು ಗಳಿಂದ ಮಾಡಿದ ಇಜಾರುಗಳನ್ನೂ

39:29b.EXO.039.029 ಹೊಸೆದ ನಯ ವಾದ ನಾರು ನೀಲಿ ಧೂಮ್ರ ರಕ್ತವರ್ಣದ ಹೆಣಿಗೆಯ ಕೆಲಸದ ಪ್ರಕಾರ ನಡುಕಟ್ಟನ್ನೂ ಮಾಡಿದರು. ಇವು ಗಳನ್ನು ಕರ್ತನು ಮೋಶೆಗೆ ಆಜ್ಞಾಪಿಸಿದಂತೆಯೇ ಮಾಡಿದರು.

39:30b.EXO.039.030 ಪರಿಶುದ್ಧ ಕಿರೀಟವಾಗಿರುವ ತಗಡನ್ನು ಶುದ್ಧ ಬಂಗಾರದಿಂದ ಮಾಡಿ ಕರ್ತನಿಗೆ ಪರಿಶುದ್ಧ ಎಂದು ಮುದ್ರೆ ಕೆತ್ತುವವರ ಬರಹದಿಂದ ಅದರ ಮೇಲೆ ಬರೆದು

39:31b.EXO.039.031 ಅದನ್ನು ಮುಂಡಾಸದ ಮೇಲೆ ಬಿಗಿಸುವದ ಕ್ಕೋಸ್ಕರ ನೀಲಿ ನೂಲಿನಿಂದ ಕಟ್ಟಿದರು. ಇದನ್ನು ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಮಾಡಿದರು.

39:32b.EXO.039.032 ಈ ಪ್ರಕಾರ ಸಭೆ ಡೇರೆಯ ಗುಡಾರದ ಕೆಲಸವೆಲ್ಲಾ ಮುಗಿಯಿತು. ಕರ್ತನು ಮೋಶೆಗೆ ಆಜ್ಞಾಪಿಸಿದ್ದನ್ನೆಲ್ಲಾ ಇಸ್ರಾಯೇಲ್‌ ಮಕ್ಕಳು ಅದರಂತೆಯೇ ಮಾಡಿದರು.

39:33b.EXO.039.033 ಆಗ ಅವರು ಗುಡಾರವನ್ನು ಮೋಶೆಯ ಬಳಿಗೆ ತಂದರು. ಅದರ ಎಲ್ಲಾ ಸಾಮಾನುಗಳನ್ನು ಹಲಗೆಗಳನ್ನು ಅಗುಳಿಗಳನ್ನು ಸ್ತಂಭಗಳನ್ನು ಕುಣಿಕೆಗಳನ್ನು;

39:34b.EXO.039.034 ಕೆಂಪು ಬಣ್ಣದಲ್ಲಿ ಅದ್ದಿದ ಟಗರುಗಳ ಹೊದಿಕೆಯನ್ನು, ಕಡಲು ಹಂದಿಗಳ ಚರ್ಮಗಳ ಹೊದಿಕೆಗಳನ್ನು ಮರೆಯ ತೆರೆಯನ್ನು;

39:35b.EXO.039.035 ಮಂಜೂಷದ ಸಾಕ್ಷಿಯ ಪೆಟ್ಟಿಗೆ ಯನ್ನು, ಅದರ ಕೋಲುಗಳನ್ನು, ಕರುಣಾಸನವನ್ನು;

39:36b.EXO.039.036 ಮೇಜನ್ನು ಅದರ ಎಲ್ಲಾ ಸಾಮಾನುಗಳನ್ನು, ಸಮ್ಮು ಖದ ರೊಟ್ಟಿಯನ್ನು;

39:37b.EXO.039.037 ಶುದ್ಧವಾದ ದೀಪ ಸ್ತಂಭವನ್ನು, ಅದರ ದೀಪಗಳನ್ನು ಕ್ರಮವಾಗಿಡುವ ದೀಪಗಳನ್ನು ಅದರ ಎಲ್ಲಾ ಸಾಮಾನುಗಳನ್ನು, ದೀಪಸ್ತಂಭಕ್ಕಾಗಿ ಎಣ್ಣೆಯನ್ನು;

39:38b.EXO.039.038 ಚಿನ್ನದ ಬಲಿಪೀಠವನ್ನು, ಅಭಿಷೇಕಿಸುವ ತೈಲವನ್ನು, ಪರಿಮಳ ಧೂಪವನ್ನು, ಗುಡಾರದ ಬಾಗಿಲಿನ ತೆರೆಯನ್ನು;

39:39b.EXO.039.039 ಹಿತ್ತಾಳೆಯ ಬಲಿಪೀಠವನ್ನು, ಅದಕ್ಕಿರುವ ಹಿತ್ತಾಳೆಯ ಜಲ್ಲಡಿಯನ್ನು, ಕೋಲುಗಳನ್ನು, ಎಲ್ಲಾ ಸಾಮಾನುಗಳನ್ನು, ಕುಣಿಕೆಗಳನ್ನು,

39:40b.EXO.039.040 ಅಂಗಳದ ತೆರೆಗಳನ್ನು, ಸ್ತಂಭಗಳನ್ನು, ಕುಣಿಕೆಗಳನ್ನು, ಅಂಗಳದ ಬಾಗಿಲಿನ ತೆರೆಯನ್ನು, ಹಗ್ಗಗಳನ್ನು, ಗೂಟಗಳನ್ನು, ಸಭೆಯ ಗುಡಾರಕ್ಕೆ ಬೇಕಾದ ಎಲ್ಲಾ ಸಾಮಾನುಗಳನ್ನು;

39:41b.EXO.039.041 ಪರಿಶುದ್ಧ ಸ್ಥಳದ ಸೇವೆಗೋಸ್ಕರ ಸೇವಾ ವಸ್ತ್ರಗಳನ್ನು, ಯಾಜಕನಾದ ಆರೋನನ ಪರಿಶುದ್ಧ ವಸ್ತ್ರಗಳನ್ನು, ಅವನ ಕುಮಾರರಿಗೆ ಯಾಜಕ ಸೇವೆಗೋಸ್ಕರ ಬೇಕಾದ ವಸ್ತ್ರಗಳನ್ನು ತಂದರು.

39:42b.EXO.039.042 ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಇಸ್ರಾಯೇಲ್‌ ಮಕ್ಕಳು ಈ ಕೆಲಸಗಳನ್ನೆಲ್ಲಾ ಮಾಡಿ ದರು.ಮೋಶೆಯು ಆ ಕೆಲಸವನ್ನೆಲ್ಲಾ ನೋಡಿದಾಗ ಇಗೋ, ಕರ್ತನು ಆಜ್ಞಾಪಿಸಿದ ಪ್ರಕಾರವೇ ಅವರು ಅದನ್ನು ಮಾಡಿದ್ದರು. ಆಗ ಮೋಶೆಯು ಅವರನ್ನು ಆಶೀರ್ವದಿಸಿದನು.

39:43b.EXO.039.043 ಮೋಶೆಯು ಆ ಕೆಲಸವನ್ನೆಲ್ಲಾ ನೋಡಿದಾಗ ಇಗೋ, ಕರ್ತನು ಆಜ್ಞಾಪಿಸಿದ ಪ್ರಕಾರವೇ ಅವರು ಅದನ್ನು ಮಾಡಿದ್ದರು. ಆಗ ಮೋಶೆಯು ಅವರನ್ನು ಆಶೀರ್ವದಿಸಿದನು.

40

40:1b.EXO.040.001 ಆಗ ಕರ್ತನು ಮೋಶೆಯ ಸಂಗಡ ಮಾತನಾಡಿ--

40:2b.EXO.040.002 ಮೊದಲನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಸಭೆಯ ಡೇರೆಯನ್ನು ಮತ್ತು ಗುಡಾರವನ್ನು ಎತ್ತಿ ನಿಲ್ಲಿಸು.

40:3b.EXO.040.003 ಮಂಜೂಷದ ಸಾಕ್ಷಿಯ ಪೆಟ್ಟಿಗೆಯನ್ನು ಒಳಗಿಟ್ಟು ಅದನ್ನು ನೀನು ತೆರೆಯಿಂದ ಮುಚ್ಚಬೇಕು.

40:4b.EXO.040.004 ಮೇಜನ್ನು ಒಳಗೆ ತಂದು ಅದರ ಮೇಲಿಡಬೇಕಾದದ್ದನ್ನು ಸರಿಯಾಗಿ ಇಡಬೇಕು. ದೀಪ ಸ್ತಂಭವನ್ನು ಒಳಗೆ ತಂದು ನೀನು ಅದರ ದೀಪಗಳನ್ನು ಅಂಟಿಸಬೇಕು.

40:5b.EXO.040.005 ನೀನು ಧೂಪಕ್ಕೋಸ್ಕರ ಮಾಡಿದ ಚಿನ್ನದ ಬಲಿಪೀಠವನ್ನು ಮಂಜೂಷದ ಸಾಕ್ಷಿಯ ಪೆಟ್ಟಿಗೆಗೆ ಎದುರಾಗಿ ಇಟ್ಟು, ಗುಡಾರದ ಬಾಗಿಲಿಗೆ ತೆರೆಯನ್ನು ಹಾಕಬೇಕು.

40:6b.EXO.040.006 ನೀನು ದಹನಬಲಿಪೀಠವನ್ನು ಸಭೆಯ ಡೇರೆಯಾದ ಗುಡಾರದ ಬಾಗಿಲಿಗೆ ಎದುರಾಗಿ ಇಡ ಬೇಕು.

40:7b.EXO.040.007 ನೀನು ಸಭೆಯ ಡೇರೆಗೂ ಯಜ್ಞವೇದಿಗೂ ಮಧ್ಯದಲ್ಲಿ ಗಂಗಾಳವನ್ನಿಟ್ಟು ಅದರಲ್ಲಿ ನೀರನ್ನು ಹೊಯ್ಯ ಬೇಕು.

40:8b.EXO.040.008 ಅದರ ಸುತ್ತಲೂ ಆವರಣವನ್ನು ನಿಲ್ಲಿಸಿ, ಆ ಆವರಣದ ಬಾಗಿಲಿನ ಬಳಿಯಲ್ಲಿ ನೀನು ತೆರೆಯನ್ನು ತೂಗುಹಾಕಬೇಕು.

40:9b.EXO.040.009 ನೀನು ಅಭಿಷೇಕ ತೈಲವನ್ನು ತಕ್ಕೊಂಡು ಗುಡಾರ ವನ್ನೂ ಅದರಲ್ಲಿರುವ ಎಲ್ಲವುಗಳನ್ನೂ ಅಭಿಷೇಕಿಸಿ ಅದನ್ನೂ ಅದರಲ್ಲಿರುವ ಎಲ್ಲಾ ಸಾಮಾನುಗಳನ್ನೂ ಪರಿಶುದ್ಧ ಮಾಡು; ಆಗ ಅದು ಪರಿಶುದ್ಧವಾಗುವದು.

40:10b.EXO.040.010 ದಹನಬಲಿಪೀಠವನ್ನೂ ಅದರ ಎಲ್ಲಾ ಸಾಮಾನು ಗಳನ್ನೂ ನೀನು ಅಭಿಷೇಕಿಸಿ ಬಲಿಪೀಠವನ್ನು ಪವಿತ್ರ ಮಾಡು; ಆಗ ಅದು ಅತೀ ಪರಿಶುದ್ಧವಾದ ಬಲಿಪೀಠ ವಾಗುವದು.

40:11b.EXO.040.011 ಗಂಗಾಳವನ್ನೂ ಅದರ ಕಾಲುಗಳನ್ನೂ ನೀನು ಅಭಿಷೇಕಿಸಿ ಅದನ್ನು ಪರಿಶುದ್ಧ ಮಾಡಬೇಕು.

40:12b.EXO.040.012 ಆರೋನನನ್ನೂ ಅವನ ಮಕ್ಕಳನ್ನೂ ಸಭೆಯ ಗುಡಾರದ ಬಾಗಿಲಿನ ಬಳಿಗೆ ಬರಮಾಡಿ ಅವರನ್ನು ನೀರಿನಿಂದ ತೊಳೆಯಬೇಕು.

40:13b.EXO.040.013 ಆರೋನನು ನನಗೆ ಯಾಜಕ ಸೇವೆಮಾಡುವ ಹಾಗೆ ಅವನಿಗೆ ಪರಿಶುದ್ಧ ವಸ್ತ್ರಗಳನ್ನು ತೊಡಿಸಿ, ಅವನನ್ನು ಅಭಿಷೇಕಿಸಿ ಶುದ್ಧ ಮಾಡಬೇಕು.

40:14b.EXO.040.014 ಅವನ ಕುಮಾರರನ್ನು ನೀನು ಬರ ಮಾಡಿಕೊಂಡು ಅವರಿಗೆ ಅಂಗಿಗಳನ್ನು ತೊಡಿಸಿ

40:15b.EXO.040.015 ಅವರ ತಂದೆಯನ್ನು ಅಭಿಷೇಕಿಸಿದ ಪ್ರಕಾರ ಅವರು ನನಗೆ ಯಾಜಕ ಸೇವೆಯನ್ನು ಮಾಡುವ ಹಾಗೆ ಅವ ರನ್ನೂ ನೀನು ಅಭಿಷೇಕಿಸು. ಅವರ ಅಭಿಷೇಕವು ನಿಶ್ಚಯವಾಗಿದ್ದು ಅವರ ಸಂತತಿಗಳಲ್ಲಿ ನಿತ್ಯವಾದ ಯಾಜಕತ್ವವಾಗಿರುವದು ಎಂದು ಹೇಳಿದನು.

40:16b.EXO.040.016 ಮೋಶೆಯು ಹಾಗೆಯೇ ಮಾಡಿದನು. ಕರ್ತನು ತನಗೆ ಆಜ್ಞಾಪಿಸಿದ ಪ್ರಕಾರವೇ ಅವನು ಎಲ್ಲವನ್ನು ಮಾಡಿದನು.

40:17b.EXO.040.017 ಎರಡನೆಯ ವರುಷದ ಮೊದಲನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಗುಡಾರವು ನಿಲ್ಲಿಸಲ್ಪಟ್ಟಿತು.

40:18b.EXO.040.018 ಆಗ ಮೋಶೆಯು ಗುಡಾರವನ್ನು ನಿಲ್ಲಿಸಿ ಅದರ ಕಾಲುಗಳನ್ನು ಬಿಗಿದು ಅದರ ಹಲಗೆಗಳನ್ನು ಇರಿಸಿ ಅಗುಳಿಗಳನ್ನು ಹಾಕಿ ಅದರ ಸ್ತಂಭಗಳನ್ನು ನಿಲ್ಲಿಸಿದನು.

40:19b.EXO.040.019 ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆ ಗುಡಾರದ ಮೇಲೆ ಡೇರೆಯನ್ನು ಹರಡಿಸಿ ಡೇರೆಯ ಹೊದಿಕೆಯನ್ನು ಅದರ ಮೇಲೆ ಹಾಕಿದನು.

40:20b.EXO.040.020 ಅವನು ಪ್ರಮಾಣವನ್ನು ತೆಗೆದುಕೊಂಡು ಮಂಜೂಷದ ಪೆಟ್ಟಿಗೆಯಲ್ಲಿ ಇಟ್ಟು ಮಂಜೂಷಕ್ಕೆ ಕೋಲುಗಳನ್ನು ಸೇರಿಸಿ ಮಂಜೂಷದ ಮೇಲೆ ಕರುಣಾ ಸನವನ್ನು ಇಟ್ಟನು.

40:21b.EXO.040.021 ಅವನು ಮಂಜೂಷವನ್ನು ಗುಡಾರಕ್ಕೆ ತಂದು ಮರೆಮಾಡುವ ತೆರೆಯನ್ನಿರಿಸಿದನು. ಕರ್ತನು ಹೇಳಿದ ಹಾಗೆಯೇ ಮೋಶೆಯು ಮಾಡಿದನು.

40:22b.EXO.040.022 ಸಭೆ ಡೇರೆಯ ಗುಡಾರದ ಉತ್ತರ ಭಾಗದಲ್ಲಿ ತೆರೆಯ ಹೊರಗೆ ಮೇಜನ್ನು ಇಟ್ಟನು.

40:23b.EXO.040.023 ರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆ ಅದರ ಮೇಲೆ ರೊಟ್ಟಿ ಯನ್ನು ಕರ್ತನ ಸನ್ನಿಧಿಯಲ್ಲಿ ಕ್ರಮವಾಗಿ ಇಟ್ಟನು.

40:24b.EXO.040.024 ಸಭೆಯ ಡೇರೆಯಲ್ಲಿ ಮೇಜಿಗೆ ಎದುರಾಗಿ ಗುಡಾರದ ದಕ್ಷಿಣ ಭಾಗದಲ್ಲಿ ದೀಪಸ್ತಂಭವನ್ನು ಇಟ್ಟನು.

40:25b.EXO.040.025 ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆ ಕರ್ತನ ಸನ್ನಿಧಿಯಲ್ಲಿ ದೀಪಗಳನ್ನು ಹತ್ತಿಸಿದನು.

40:26b.EXO.040.026 ಚಿನ್ನದ ವೇದಿಯನ್ನು ಸಭೆಯ ಡೇರೆಯಲ್ಲಿ ತೆರೆಯ ಮುಂದೆ ಇಟ್ಟನು.

40:27b.EXO.040.027 ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆ ಅದರ ಮೇಲೆ ಪರಿಮಳ ಧೂಪವನ್ನು ಸುಟ್ಟನು.

40:28b.EXO.040.028 ಗುಡಾರದ ಬಾಗಿಲಿನ ತೆರೆಯನ್ನು ತೂಗುಹಾಕಿ ದನು. ಸಭೆ ಡೇರೆಯ ಗುಡಾರದ ಬಳಿಯಲ್ಲಿ ದಹನ ಬಲಿಪೀಠವನ್ನು ಇಟ್ಟನು.

40:29b.EXO.040.029 ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆ ಅದರ ಮೇಲೆ ದಹನಬಲಿಯನ್ನೂ ಆಹಾರಸಮರ್ಪಣೆಯನ್ನೂ ಅರ್ಪಿಸಿದನು.

40:30b.EXO.040.030 ಸಭೆ ಡೇರೆಗೂ ಯಜ್ಞವೇದಿಗೂ ಮಧ್ಯ ಗಂಗಾಳ ವನ್ನು ಇಟ್ಟು ಅದರಲ್ಲಿ ತೊಳೆಯುವದಕ್ಕೆ ನೀರನ್ನು ಹೊಯ್ದನು.

40:31b.EXO.040.031 ಮೋಶೆಯೂ ಆರೋನನೂ ಅವನ ಕುಮಾರರೂ ಅದರಲ್ಲಿ ಕೈಕಾಲುಗಳನ್ನು ತೊಳೆದು ಕೊಂಡರು.

40:32b.EXO.040.032 ಅವರು ಸಭೆಯ ಡೇರೆಯೊಳಗೆ ಸೇರುವ ಸಮಯದಲ್ಲಿಯೂ ಯಜ್ಞವೇದಿಯ ಸವಿಾಪಕ್ಕೆ ಬರುವ ಸಮಯದಲ್ಲಿಯೂ ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಅವರು ತೊಳೆದುಕೊಂಡರು.

40:33b.EXO.040.033 ಗುಡಾರಕ್ಕೂ ಯಜ್ಞವೇದಿಗೂ ಸುತ್ತಲೂ ಅಂಗಳ ವನ್ನು ನಿಲ್ಲಿಸಿ ಅಂಗಳದ ಬಾಗಿಲಿನ ತೆರೆಯನ್ನು ತೂಗು ಹಾಕಿದನು. ಈ ಪ್ರಕಾರ ಮೋಶೆಯು ಆ ಕೆಲಸವನ್ನು ತೀರಿಸಿದನು.

40:34b.EXO.040.034 ಆಗ ಮೇಘವು ಸಭೆಯ ಡೇರೆಯನ್ನು ಮುಚ್ಚಿಕೊಂಡು ಕರ್ತನ ಮಹಿಮೆಯು ಗುಡಾರವನ್ನು ತುಂಬಿಕೊಂಡಿತು.

40:35b.EXO.040.035 ಸಭೆ ಡೇರೆಯ ಮೇಲೆ ಮೇಘವು ನೆಲೆಯಾಗಿದದ್ದರಿಂದಲೂ ಕರ್ತನ ಮಹಿಮೆಯು ಗುಡಾರವನ್ನು ತುಂಬಿದ್ದರಿಂದಲೂ ಮೋಶೆಯು ಒಳಗೆ ಪ್ರವೇಶಿಸಲಾರದೆ ಇದ್ದನು.

40:36b.EXO.040.036 ಮೇಘವು ಗುಡಾರದ ಮೇಲಕ್ಕೆ ಎತ್ತಲ್ಪಟ್ಟಾಗ ಇಸ್ರಾಯೇಲ್‌ ಮಕ್ಕಳು ತಮ್ಮ ಎಲ್ಲಾ ಪ್ರಯಾಣಗಳನ್ನು ಮುಂದುವರಿಸುತ್ತಿದ್ದರು.

40:37b.EXO.040.037 ಆದರೆ ಮೇಘವು ಎತ್ತಲ್ಪ ಡದೆ ಇರುವಾಗ ಅದು ಎತ್ತಲ್ಪಡುವ ದಿವಸದ ವರೆಗೆ ಅವರು ಪ್ರಯಾಣ ಮಾಡಲಿಲ್ಲ,ಇಸ್ರಾಯೇಲ್ಯರ ಮನೆಯವರೆಲ್ಲರ ಕಣ್ಣುಗಳ ಮುಂದೆ ಅವರ ಎಲ್ಲಾ ಪ್ರಯಾಣಗಳಲ್ಲಿ ಹಗಲಿನಲ್ಲಿ ಕರ್ತನ ಮೇಘವು ಗುಡಾರದ ಮೇಲೆ ಇತ್ತು. ರಾತ್ರಿಯಲ್ಲಿ ಅಗ್ನಿಯು ಅದರ ಮೇಲೆ ಇತ್ತು.

40:38b.EXO.040.038 ಇಸ್ರಾಯೇಲ್ಯರ ಮನೆಯವರೆಲ್ಲರ ಕಣ್ಣುಗಳ ಮುಂದೆ ಅವರ ಎಲ್ಲಾ ಪ್ರಯಾಣಗಳಲ್ಲಿ ಹಗಲಿನಲ್ಲಿ ಕರ್ತನ ಮೇಘವು ಗುಡಾರದ ಮೇಲೆ ಇತ್ತು. ರಾತ್ರಿಯಲ್ಲಿ ಅಗ್ನಿಯು ಅದರ ಮೇಲೆ ಇತ್ತು.


Holder of rights
Multilingual Bible Corpus

Citation Suggestion for this Object
TextGrid Repository (2025). Kannada Collection. Exodus (Kannada). Exodus (Kannada). Multilingual Parallel Bible Corpus. Multilingual Bible Corpus. https://hdl.handle.net/21.11113/0000-0016-A174-F