1
ಆಯಲ್ಪಟ್ಟವಳಾದ ಅಮ್ಮನವರಿಗೂ ಆಕೆಯ ಮಕ್ಕಳಿಗೂ ಹಿರಿಯನಾದ--ಸತ್ಯದಲ್ಲಿ ನಿಮ್ಮನ್ನು ಪ್ರೀತಿಸುತ್ತೇನೆ; ನಾನು ಮಾತ್ರವಲ್ಲದೆ ಸತ್ಯವನ್ನು ತಿಳಿದಿರುವವರೆಲ್ಲರೂ ನಿಮ್ಮನ್ನು ಪ್ರೀತಿಸುತ್ತಾರೆ.
ಯಾಕಂದರೆ ನಮ್ಮಲ್ಲಿ ನೆಲೆಗೊಂಡಿರುವಂಥ ಮತ್ತು ನಮ್ಮೊಂದಿಗೆ ಸದಾಕಾಲವೂ ಇರುವಂಥ ಸತ್ಯದ ನಿಮಿತ್ತವಾಗಿಯೇ ನಿಮ್ಮನ್ನು ಪ್ರೀತಿಸುತ್ತಾರೆ.
ತಂದೆಯಾದ ದೇವರಿಂದಲೂ ಆ ತಂದೆಯ ಮಗನಾಗಿರುವ ಕರ್ತನಾದ ಯೇಸು ಕ್ರಿಸ್ತನಿಂದಲೂ ಕೃಪೆಯು ಕರುಣೆಯು ಮತ್ತು ಶಾಂತಿಯು ಸತ್ಯ ದಲ್ಲಿಯೂ ಪ್ರೀತಿಯಲ್ಲಿಯೂ ನಿಮ್ಮೊಂದಿಗಿರಲಿ.
ನಿನ್ನ ಮಕ್ಕಳಲ್ಲಿ ಕೆಲವರು ತಂದೆಯಿಂದ ನಾವು ಹೊಂದಿದ ಆಜ್ಞಾನುಸಾರ ಸತ್ಯದಲ್ಲಿ ನಡೆಯುವದನ್ನು ಕಂಡು ನಾನು ಬಹಳ ಸಂತೋಷವುಳ್ಳವನಾದೆನು.
ಅಮ್ಮನವರೇ, ನಾನು ಹೊಸ ಆಜ್ಞೆಯನ್ನು ನಿನಗೆ ಬರೆಯದೆ ಮೊದಲಿನಿಂದಲೂ ನಮಗೆ ಇದ್ದ ಆಜ್ಞೆ ಯನ್ನು ನಿನಗೆ ಬರೆಯುವವನಾಗಿ--ನಾವು ಒಬ್ಬರ ನ್ನೊಬ್ಬರು ಪ್ರೀತಿಸುವವರಾಗಿರಬೇಕೆಂದು ನಿನ್ನನ್ನು ಕೇಳಿಕೊಳ್ಳುತ್ತೇನೆ.
ಆತನ ಆಜ್ಞೆಗಳನ್ನು ಅನುಸರಿಸಿ ನಡೆಯುವದೇ ಪ್ರೀತಿ; ಪ್ರೀತಿಯಲ್ಲಿ ನಡೆಯ ಬೇಕೆಂಬದೇ ನೀವು ಮೊದಲಿನಿಂದಲೂ ಕೇಳಿದ ಅಪ್ಪಣೆಯಾಗಿದೆ.
ಶರೀರದಲ್ಲಿ ಬಂದಿರುವ ಯೇಸು ಕ್ರಿಸ್ತನ್ನು ಒಪ್ಪದೆ ಇರುವ ಮೋಸಗಾರರು ಅನೇಕ ಮಂದಿ ಹೊರಟು ಲೋಕದೊಳಗೆ ಹೋಗಿದ್ದಾರೆ. ಇಂಥವನೇ ಮೋಸಗಾರನೂ ಕ್ರಿಸ್ತ ವಿರೋಧಿಯೂ ಆಗಿದ್ದಾನೆ.
ನಾವು ಪ್ರಯಾಸಪಟ್ಟು ಮಾಡಿದವು ಗಳನ್ನು ಕಳಕೊಳ್ಳದೆ ಪ್ರತಿಫಲವನ್ನು ಹೊಂದುವಂತೆ ನಿಮ್ಮನ್ನು ನೀವೇ ನೋಡಿಕೊಳ್ಳಿರಿ.
ಕ್ರಿಸ್ತನ ಬೋಧನೆಯಲ್ಲಿ ನೆಲೆಗೊಳ್ಳದೆ ಅದನ್ನು ಅತಿಕ್ರಮಿ ಸುವವನಿಗೆ ದೇವರಿಲ್ಲ; ಕ್ರಿಸ್ತನ ಬೋಧನೆಯಲ್ಲಿ ನೆಲೆ ಗೊಂಡಿರುವವನಿಗೆ ತಂದೆಯೂ ಮಗನೂ ಇದ್ದಾರೆ.
ಈ ಬೋಧನೆಯನ್ನು ತಾರದಿರುವ ಯಾವನಾದರೂ ನಿಮ್ಮ ಬಳಿಗೆ ಬಂದರೆ ಅವನನ್ನು ಮನೆಯೊಳಗೆ ಸೇರಿಸಿ ಕೊಳ್ಳಬೇಡಿರಿ; ಅವನಿಗೆ ವಂದನೆ ಎಂದು ಹೇಳಬೇಡಿರಿ.
ಅವನಿಗೆ ವಂದನೆ ಎಂದು ಹೇಳುವವನು ಅವನ ದುಷ್ಕೃತ್ಯಗಳಲ್ಲಿ ಪಾಲುಗಾರನಾಗುತ್ತಾನೆ.
ನಿಮಗೆ ಬರೆಯುವದಕ್ಕೆ ನನಗೆ ಅನೇಕ ವಿಷಯಗಳಿದ್ದರೂ ಅವುಗಳನ್ನು ಮಸಿಯಿಂದ ಕಾಗದದ ಮೇಲೆ ಬರೆಯುವದಕ್ಕೆ ನನಗೆ ಮನಸ್ಸಿಲ್ಲ. ಆದರೆ ನಾನು ನಿಮ್ಮ ಬಳಿಗೆ ಬಂದು ನಿಮ್ಮ ಸಂಗಡ ಮುಖಾ ಮುಖಿಯಾಗಿ ಮಾತನಾಡುವೆನೆಂದು ನಂಬುತ್ತೇನೆ; ಆಗ ನಮ್ಮ ಸಂತೋಷವು ಪರಿಪೂರ್ಣವಾಗುವದು.ಆಯಲ್ಪಟ್ಟ ನಿನ್ನ ಸಹೋದರಿಯ ಮಕ್ಕಳು ನಿನಗೆ ವಂದನೆ ಹೇಳುತ್ತಾರೆ. ಆಮೆನ್.
ಆಯಲ್ಪಟ್ಟ ನಿನ್ನ ಸಹೋದರಿಯ ಮಕ್ಕಳು ನಿನಗೆ ವಂದನೆ ಹೇಳುತ್ತಾರೆ. ಆಮೆನ್.
- License
-
CC-0
Link to license
- Citation Suggestion for this Edition
- TextGrid Repository (2025). John the Evangelist. 2 John (Kannada). Multilingual Parallel Bible Corpus. https://hdl.handle.net/21.11113/0000-0016-A229-3