John (Kannada)

John (Kannada)

1

1:1b.JOH.001.001 ಆದಿಯಲ್ಲಿ ವಾಕ್ಯವಿದ್ದನು; ಆ ವಾಕ್ಯವು ದೇವರೊಂದಿಗೆ ಇದ್ದನು; ಆ ವಾಕ್ಯವು ದೇವರಾಗಿದ್ದನು.

1:2b.JOH.001.002 ಆತನೇ ಆದಿಯಲ್ಲಿ ದೇವರೊಂದಿಗೆ ಇದ್ದನು.

1:3b.JOH.001.003 ಎಲ್ಲವು ಆತನಿಂದ ಉಂಟಾಯಿತು; ಉಂಟಾದದ್ದರಲ್ಲಿ ಆತನಿಲ್ಲದೆ ಯಾವದೂ ಉಂಟಾಗ ಲಿಲ್ಲ.

1:4b.JOH.001.004 ಆತನಲ್ಲಿ ಜೀವವಿತ್ತು; ಆ ಜೀವವು ಮನುಷ್ಯ ರಿಗೆ ಬೆಳಕಾಗಿತ್ತು.

1:5b.JOH.001.005 ಆ ಬೆಳಕು ಕತ್ತಲಲ್ಲಿ ಪ್ರಕಾಶಿಸುತ್ತದೆ; ಆ ಕತ್ತಲು ಅದನ್ನು ಗ್ರಹಿಸಲಿಲ್ಲ.

1:6b.JOH.001.006 ದೇವರಿಂದ ಕಳುಹಿ ಸಲ್ಪಟ್ಟ ಒಬ್ಬ ಮನುಷ್ಯನಿದ್ದನು; ಅವನ ಹೆಸರು ಯೋಹಾನನು.

1:7b.JOH.001.007 ಎಲ್ಲರೂ ತನ್ನ ಮೂಲಕವಾಗಿ ನಂಬುವಂತೆ ಅವನೇ ಆ ಬೆಳಕಿನ ವಿಷಯದಲ್ಲಿ ಸಾಕ್ಷಿ ಕೊಡುವದಕ್ಕೆ ಸಾಕ್ಷಿಗಾಗಿ ಬಂದನು.

1:8b.JOH.001.008 ಅವನು ಆ ಬೆಳಕಲ್ಲ. ಆದರೆ ಆ ಬೆಳಕಿನ ವಿಷಯದಲ್ಲಿ ಸಾಕ್ಷಿ ಕೊಡು ವದಕ್ಕೆ ಕಳುಹಿಸಲ್ಪಟ್ಟನು.

1:9b.JOH.001.009 ಲೋಕದಲ್ಲಿ ಬರುವ ಪ್ರತಿಯೊಬ್ಬ ಮನುಷ್ಯನಿಗೆ ಆತನು ಬೆಳಕನ್ನು ಕೊಡುವ ನಿಜವಾದ ಬೆಳಕಾಗಿದ್ದನು.

1:10b.JOH.001.010 ಆತನು ಲೋಕದಲ್ಲಿ ಇದ್ದನು; ಲೋಕವು ಆತನಿಂದ ಉಂಟಾಯಿತು; ಲೋಕವು ಆತನನ್ನು ಅರಿಯಲಿಲ್ಲ.

1:11b.JOH.001.011 ಆತನು ತನ್ನ ಸ್ವಂತದವರ ಬಳಿಗೆ ಬಂದನು. ಆತನ ಸ್ವಂತದವರು ಆತನನ್ನು ಅಂಗೀಕರಿಸಲಿಲ್ಲ.

1:12b.JOH.001.012 ಆದರೆ ಯಾರಾರು ಆತನನ್ನು ಅಂಗೀಕರಿಸಿದರೋ ಅವರಿಗೆ ಅಂದರೆ ಆತನ ಹೆಸರಿನ ಮೇಲೆ ನಂಬಿಕೆಯಿಡುವವರಿಗೆ ದೇವರ ಪುತ್ರರಾಗುವ ಅಧಿಕಾರವನ್ನು ಆತನು ಕೊಟ್ಟನು.

1:13b.JOH.001.013 ಇವರು ರಕ್ತದಿಂದಾಗಲಿ ಇಲ್ಲವೆ ಶರೀರದ ಇಚ್ಛೆಯಿಂದಾಗಲಿ ಇಲ್ಲವೆ ಮನುಷ್ಯನ ಇಚ್ಛೆಯಿಂದಾ ಗಲಿ ಹುಟ್ಟಿದವರಲ್ಲ, ದೇವರಿಂದಲೇ ಹುಟ್ಟಿದವರು.

1:14b.JOH.001.014 ಇದಲ್ಲದೆ ಆ ವಾಕ್ಯವಾಗಿರುವಾತನು ಶರೀರಧಾರಿ ಯಾಗಿ ಕೃಪೆಯಿಂದಲೂ ಸತ್ಯದಿಂದಲೂ ತುಂಬಿ ನಮ್ಮ ಮಧ್ಯದಲ್ಲಿ ವಾಸಮಾಡಿದನು. (ತಂದೆಯಿಂದ ಹುಟ್ಟಿದ ಒಬ್ಬನೇ ಮಗನ ಮಹಿಮೆಯಂತೆ ನಾವು ಆತನ ಮಹಿಮೆಯನ್ನು ನೋಡಿದೆವು).

1:15b.JOH.001.015 ಯೋಹಾನನು ಆತನ ವಿಷಯದಲ್ಲಿ ಸಾಕ್ಷಿ ಕೊಟ್ಟು--ನನ್ನ ಹಿಂದೆ ಬರುವಾತನು ನನಗಿಂತ ಮೊದಲೇ ಇದ್ದದರಿಂದ ನನಗಿಂತ ಮುಂದಿನವನು ಎಂದು ನಾನು ಹೇಳಿದಾತನು ಈತನೇ ಎಂದು ಕೂಗಿ ಹೇಳಿದನು.

1:16b.JOH.001.016 ಆತನ ಸಂಪೂರ್ಣತೆಯೊಳಗಿಂದ ನಾವೆಲ್ಲರೂ ಕೃಪೆಗಾಗಿ ಕೃಪೆಯನ್ನು ಹೊಂದಿದೆವು.

1:17b.JOH.001.017 ನ್ಯಾಯಪ್ರಮಾಣವು ಮೋಶೆಯ ಮುಖಾಂತರ ವಾಗಿ ಕೊಡಲ್ಪಟ್ಟಿತು; ಆದರೆ ಕೃಪೆಯೂ ಸತ್ಯವೂ ಯೇಸು ಕ್ರಿಸ್ತನ ಮುಖಾಂತರವಾಗಿ ಬಂದವು.

1:18b.JOH.001.018 ಯಾವನೂ ಯಾವ ಕಾಲದಲ್ಲೂ ದೇವರನ್ನು ಕಂಡಿಲ್ಲ. ತಂದೆಯ ಎದೆಯಲ್ಲಿರುವ ಆ ಒಬ್ಬನೇ ಮಗ ನಾಗಿರುವಾತನು ಆತನನ್ನು ತಿಳಿಯಪಡಿಸಿದ್ದಾನೆ.

1:19b.JOH.001.019 ನೀನು ಯಾರು ಎಂದು ಅವನನ್ನು ಕೇಳುವದ ಕ್ಕಾಗಿ ಯೆಹೂದ್ಯರು ಯಾಜಕರನ್ನೂ ಲೇವಿಯರನ್ನೂ ಯೆರೂಸಲೇಮಿನಿಂದ ಕಳುಹಿಸಿದಾಗ ಯೋಹಾನನು ಕೊಟ್ಟ ಸಾಕ್ಷಿ ಇದೇ.

1:20b.JOH.001.020 ಅವನು ಒಪ್ಪಿಕೊಂಡನು. ಅಲ್ಲಗಳೆಯಲಿಲ್ಲ; ಅವನು--ನಾನು ಕ್ರಿಸ್ತನಲ್ಲ ಎಂದು ಒಪ್ಪಿಕೊಂಡನು.

1:21b.JOH.001.021 ಅದಕ್ಕವರು--ಹಾಗಾದರೇನು? ನೀನು ಎಲೀಯನೋ ಎಂದು ಕೇಳಿದರು. ಅದಕ್ಕೆ ಅವನು--ನಾನಲ್ಲ ಅಂದನು. ಅವರು ನೀನು ಆ ಪ್ರವಾದಿಯೋ ಎಂದು ಕೇಳಿದ್ದಕ್ಕೆ ಅವನು--ಅಲ್ಲ ಎಂದು ಉತ್ತರಕೊಟ್ಟನು.

1:22b.JOH.001.022 ಆಗ ಅವರು ಅವ ನಿಗೆ--ನೀನು ಯಾರು? ನಮ್ಮನ್ನು ಕಳುಹಿಸಿದವರಿಗೆ ನಾವು ಉತ್ತರ ಹೇಳುವಂತೆ ನೀನು ನಿನ್ನ ವಿಷಯದಲ್ಲಿ ಏನು ಹೇಳುತ್ತೀ ಎಂದು ಕೇಳಿದರು.

1:23b.JOH.001.023 ಅವನು--ಕರ್ತನ ದಾರಿಯನ್ನು ನೆಟ್ಟಗೆ ಮಾಡಿರಿ ಎಂದು ಅಡವಿ ಯಲ್ಲಿ ಕೂಗುವ ಒಬ್ಬನ ಶಬ್ದವದೆ ಎಂದು ಪ್ರವಾದಿ ಯಾದ ಯೆಶಾಯನು ಹೇಳಿದ ಶಬ್ದವೇ ನಾನು ಎಂದು ಉತ್ತರಕೊಟ್ಟನು.

1:24b.JOH.001.024 ಕಳುಹಿಸಲ್ಪಟ್ಟವರು ಫರಿಸಾಯರ ಕಡೆಯವರಾಗಿದ್ದರು.

1:25b.JOH.001.025 ಅವರು ಅವನಿಗೆ--ನೀನು ಆ ಕ್ರಿಸ್ತನೂ ಎಲೀಯನೂ ಇಲ್ಲವೆ ಆ ಪ್ರವಾದಿಯೂ ಅಲ್ಲದಿದ್ದರೆ ಬಾಪ್ತಿಸ್ಮ ಮಾಡಿಸುವದು ಯಾಕೆ ಎಂದು ಕೇಳಿದರು.

1:26b.JOH.001.026 ಯೋಹಾನನು ಅವರಿಗೆ ಪ್ರತ್ಯುತ್ತರ ವಾಗಿ--ನಾನು ನೀರಿನಿಂದ ಬಾಪ್ತಿಸ್ಮ ಮಾಡಿಸುತ್ತೇನೆ; ಆದರೆ ನೀವು ಅರಿಯದಿರುವಂಥ ಒಬ್ಬಾತನು ನಿಮ್ಮ ಮಧ್ಯದಲ್ಲಿ ನಿಂತಿದ್ದಾನೆ;

1:27b.JOH.001.027 ಆತನೇ ನನ್ನ ಹಿಂದೆ ಬರು ವಾತನಾಗಿದ್ದು ನನಗಿಂತ ಮುಂದಿನವನಾದನು; ಆತನ ಕೆರದ ಬಾರನ್ನು ಬಿಚ್ಚುವದಕ್ಕೆ ನಾನು ಯೋಗ್ಯನಲ್ಲ ಎಂದು ಹೇಳಿದನು.

1:28b.JOH.001.028 ಇವುಗಳು ಯೊರ್ದನಿನ ಆಚೆ ಕಡೆಯ ಬೇಥಾಬರದಲ್ಲಿ ನಡೆದವು; ಅಲ್ಲಿ ಯೋಹಾನನು ಬಾಪ್ತಿಸ್ಮ ಮಾಡಿಸುತ್ತಿದ್ದನು.

1:29b.JOH.001.029 ಮರುದಿನ ಯೋಹಾನನು ತನ್ನ ಕಡೆಗೆ ಬರುತ್ತಿದ್ದ ಯೇಸುವನ್ನು ನೋಡಿ--ಇಗೋ, ಲೋಕದ ಪಾಪ ವನ್ನು ತೆಗೆದುಹಾಕುವ ದೇವರ ಕುರಿಮರಿ ಎಂದು ಹೇಳಿದನು.

1:30b.JOH.001.030 ನನ್ನ ಹಿಂದೆ ಒಬ್ಬ ಮನುಷ್ಯನು ಬರು ತ್ತಾನೆ; ಆತನು ನನಗಿಂತ ಮೊದಲೇ ಇದ್ದದರಿಂದ ನನಗಿಂತ ಮುಂದಿನವನು ಎಂದು ನಾನು ಯಾರ ವಿಷಯದಲ್ಲಿ ಹೇಳಿದೆನೋ ಆತನೇ ಈತನು.

1:31b.JOH.001.031 ನಾನು ಆತನನ್ನು ಅರಿತಿರಲಿಲ್ಲ; ಆದರೆ ಆತನು ಇಸ್ರಾಯೇಲ್ಯರಿಗೆ ಪ್ರತ್ಯಕ್ಷನಾಗುವಂತೆ ನಾನು ನೀರಿನಿಂದ ಬಾಪ್ತಿಸ್ಮ ಮಾಡಿಸುವವನಾಗಿ ಬಂದಿದ್ದೇನೆ ಅಂದನು.

1:32b.JOH.001.032 ಯೋಹಾನನು ಸಾಕ್ಷಿಕೊಟ್ಟು--ಆತ್ಮನು ಪಾರಿವಾಳ ದಂತೆ ಪರಲೋಕದಿಂದ ಇಳಿದು ಆತನ ಮೇಲೆ ನೆಲೆ ಗೊಂಡಿರುವದನ್ನು ನಾನು ನೋಡಿದೆನು.

1:33b.JOH.001.033 ನಾನು ಆತನನ್ನು ಅರಿತಿರಲಿಲ್ಲ; ಆದರೆ ನೀರಿನಿಂದ ಬಾಪ್ತಿಸ್ಮ ಮಾಡಿಸುವದಕ್ಕೆ ನನ್ನನ್ನು ಕಳುಹಿಸಿದಾತನೇ ನನಗೆ-- ಯಾವಾತನ ಮೇಲೆ ಆತ್ಮನು ಇಳಿದು ನೆಲೆಯಾಗಿರು ವದನ್ನು ನೀನು ನೋಡುವಿಯೋ ಆತನೇ ಪವಿತ್ರಾತ್ಮ ನಿಂದ ಬಾಪ್ತಿಸ್ಮ ಮಾಡಿಸುವಾತನು ಎಂದು ಹೇಳಿದನು.

1:34b.JOH.001.034 ನಾನು ನೋಡಿ ಈತನೇ ದೇವರಮಗನೆಂದು ಸಾಕ್ಷಿ ಕೊಟ್ಟಿದ್ದೇನೆ ಅಂದನು.

1:35b.JOH.001.035 ಮಾರನೆಯ ದಿನ ತಿರಿಗಿ ಯೋಹಾನನೂ ಅವನ ಶಿಷ್ಯರಲ್ಲಿ ಇಬ್ಬರೂ ನಿಂತುಕೊಂಡಿದ್ದರು.

1:36b.JOH.001.036 ಆಗ ನಡೆ ದಾಡುತ್ತಿದ್ದ ಯೇಸುವನ್ನು ನೋಡಿ ಅವನು (ಯೋಹಾ ನನು)--ಇಗೋ, ದೇವರ ಕುರಿಮರಿ! ಎಂದು ಹೇಳಿದನು.

1:37b.JOH.001.037 ಅವನು ಹೇಳಿದ್ದನ್ನು ಕೇಳಿ ಆ ಇಬ್ಬರು ಶಿಷ್ಯರು ಯೇಸುವಿನ ಹಿಂದೆ ಹೋದರು.

1:38b.JOH.001.038 ಆಗ ಯೇಸು ಹಿಂತಿರುಗಿ ತನ್ನ ಹಿಂದೆ ಬರುತ್ತಿದ್ದವರನ್ನು ನೋಡಿ ಅವರಿಗೆ--ನೀವು ಏನು ಹುಡುಕುತ್ತೀರಿ? ಅನ್ನಲು ಅವರು ಆತನಿಗೆ--ರಬ್ಬಿಯೇ, (ರಬ್ಬಿ ಅಂದರೆ ಗುರು ಎಂದರ್ಥ) ನೀನು ವಾಸಿಸುವದು ಎಲ್ಲಿ ಅಂದರು.

1:39b.JOH.001.039 ಆತನು ಅವರಿಗೆ--ಬಂದು ನೋಡಿರಿ ಅಂದನು. ಅವರು ಹೋಗಿ ಆತನು ವಾಸಿಸುತ್ತಿದ್ದ ಸ್ಥಳವನ್ನು ನೋಡಿ ಆ ದಿವಸ ಆತನ ಸಂಗಡ ಇದ್ದರು. ಆಗ ಹೆಚ್ಚು ಕಡಿಮೆ ಹತ್ತನೆಯ ತಾಸಾಗಿತ್ತು.

1:40b.JOH.001.040 ಯೋಹಾ ನನ ಮಾತನ್ನು ಕೇಳಿ ಆತನನ್ನು ಹಿಂಬಾಲಿಸಿದ ಇಬ್ಬರಲ್ಲಿ ಸೀಮೋನ್‌ ಪೇತ್ರನ ಸಹೋದರನಾದ ಅಂದ್ರೆಯನು ಒಬ್ಬನಾಗಿದ್ದನು.

1:41b.JOH.001.041 ಇವನು ಮೊದಲು ತನ್ನ ಸ್ವಂತ ಸಹೋದರನಾದ ಸೀಮೋನನನ್ನು ಕಂಡು ಅವ ನಿಗೆ--ನಾವು ಮೆಸ್ಸೀಯನನ್ನು ಕಂಡುಕೊಂಡೆವು ಎಂದು ಹೇಳಿದನು (ಮೆಸ್ಸೀಯನು ಅಂದರೆ ಕ್ರಿಸ್ತನು ಎಂದರ್ಥ).

1:42b.JOH.001.042 42ಆಗ ಅಂದ್ರೆಯನು ಸೀಮೋನನ್ನು ಯೇಸುವಿನ ಬಳಿಗೆ ಕರಕೊಂಡು ಬಂದನು. ಯೇಸು ಅವನನ್ನು ನೋಡಿ--ನೀನು ಯೋನನ ಮಗನಾದ ಸೀಮೋನನು, ನೀನು ಕೇಫನೆಂದು ಕರೆಯಲ್ಪಡುವಿ ಅಂದನು. (ಕೇಫ ಅಂದರೆ ಕಲ್ಲು ಎಂದರ್ಥ).

1:43b.JOH.001.043 ಮರುದಿನ ಯೇಸು ಗಲಿಲಾಯಕ್ಕೆ ಹೊರಟು ಹೋಗಬೇಕೆಂದಿದ್ದಾಗ ಫಿಲಿಪ್ಪನನ್ನು ಕಂಡು ಅವ ನಿಗೆ--ನನ್ನನ್ನು ಹಿಂಬಾಲಿಸು ಅಂದನು.

1:44b.JOH.001.044 ಫಿಲಿಪ್ಪನು ಅಂದ್ರೆಯನ ಮತ್ತು ಪೇತ್ರನ ಪಟ್ಟಣವಾದ ಬೇತ್ಸಾಯಿ ದವನು.

1:45b.JOH.001.045 ಫಿಲ್ಫಿಪನು ನತಾನಯೇಲನನ್ನು ಕಂಡು ಅವನಿಗೆ--ನ್ಯಾಯಪ್ರಮಾಣದಲ್ಲಿ ಮೋಶೆಯು ಮತ್ತು ಪ್ರವಾದಿಗಳು ಯಾವಾತನ ವಿಷಯವಾಗಿ ಬರೆದರೋ ಆತನನ್ನು ನಾವು ಕಂಡುಕೊಂಡೆವು; ಆತನು ಯೋಸೇ ಫನ ಮಗನಾದ ನಜರೇತಿನ ಯೇಸುವು ಅಂದನು.

1:46b.JOH.001.046 ಅದಕ್ಕೆ ನತಾನಯೇಲನು ಅವನಿಗೆ--ನಜರೇತಿ ನಿಂದ ಒಳ್ಳೇದೇನಾದರೂ ಬರುವದೋ? ಅಂದಾಗ ಫಿಲಿಪ್ಪನು ಅವನಿಗೆ--ಬಂದು ನೋಡು ಅಂದನು.

1:47b.JOH.001.047 ಯೇಸು ತನ್ನ ಬಳಿಗೆ ಬರುವ ನತಾನಯೇಲನನ್ನು ಕಂಡು ಅವನ ವಿಷಯವಾಗಿ--ಇಗೋ, ಇವನು ನಿಜ ವಾಗಿಯೂ ಇಸ್ರಾಯೇಲನು; ಇವನಲ್ಲಿ ಕಪಟವಿಲ್ಲ ಅಂದನು.

1:48b.JOH.001.048 ನತಾನಯೇಲನು ಆತನಿಗೆ--ನೀನು ನನ್ನನ್ನು ಹೇಗೆ ಬಲ್ಲೆ? ಅಂದನು; ಯೇಸು ಪ್ರತ್ಯುತ್ತರ ವಾಗಿ ಅವನಿಗೆ--ಫಿಲಿಪ್ಪನು ನಿನ್ನನ್ನು ಕರೆಯುವದಕ್ಕಿಂತ ಮುಂಚೆ ನೀನು ಆ ಅಂಜೂರ ಮರದ ಕೆಳಗೆ ಇದ್ದಾಗ ನಾನು ನಿನ್ನನ್ನು ನೋಡಿದೆನು ಅಂದನು.

1:49b.JOH.001.049 ನತಾನ ಯೇಲನು ಪ್ರತ್ಯುತ್ತರವಾಗಿ ಆತನಿಗೆ--ರಬ್ಬಿಯೇ, ನೀನು ದೇವರಕುಮಾರನು; ನೀನು ಇಸ್ರಾಯೇಲಿನ ಅರಸನು ಅಂದನು.

1:50b.JOH.001.050 ಯೇಸು ಪ್ರತ್ಯುತ್ತರವಾಗಿ ಅವನಿಗೆ--ನಾನು ಆ ಅಂಜೂರ ಮರದ ಕೆಳಗೆ ನಿನ್ನನ್ನು ನೋಡಿದೆನೆಂದು ಹೇಳಿದ್ದರಿಂದ ನೀನು ನಂಬು ತ್ತೀಯೋ? ನೀನು ಇವುಗಳಿಗಿಂತ ಮಹತ್ತಾದವುಗಳನ್ನು ನೋಡುವಿ ಅಂದನು.ಆತನು ಅವನಿಗೆ--ನಿನಗೆ ನಿಜನಿಜವಾಗಿ ಹೇಳುತ್ತೇನೆ. ಇಂದಿನಿಂದ ಪರಲೋಕವು ತೆರೆದಿರುವದನ್ನೂ ದೇವದೂತರು ಮನುಷ್ಯಕುಮಾರನ ಮೇಲೆ ಏರುವದನ್ನೂ ಇಳಿಯುವದನ್ನೂ ನೀವು ನೋಡುವಿರಿ ಅಂದನು.

1:51b.JOH.001.051 ಆತನು ಅವನಿಗೆ--ನಿನಗೆ ನಿಜನಿಜವಾಗಿ ಹೇಳುತ್ತೇನೆ. ಇಂದಿನಿಂದ ಪರಲೋಕವು ತೆರೆದಿರುವದನ್ನೂ ದೇವದೂತರು ಮನುಷ್ಯಕುಮಾರನ ಮೇಲೆ ಏರುವದನ್ನೂ ಇಳಿಯುವದನ್ನೂ ನೀವು ನೋಡುವಿರಿ ಅಂದನು.

2

2:1b.JOH.002.001 ಮೂರನೆಯ ದಿನದಲ್ಲಿ ಗಲಿಲಾಯದ ಕಾನಾದಲ್ಲಿ ಒಂದು ಮದುವೆ ಆಯಿತು. ಅಲ್ಲಿ ಯೇಸುವಿನ ತಾಯಿಯು ಇದ್ದಳು.

2:2b.JOH.002.002 ಇದಲ್ಲದೆ ಯೇಸುವನ್ನೂ ಆತನ ಶಿಷ್ಯರನ್ನೂ ಮದುವೆಗೆ ಕರೆದಿ ದ್ದರು.

2:3b.JOH.002.003 ಆಗ ಅವರಿಗೆ ದ್ರಾಕ್ಷಾರಸವು ಸಾಲದೆ ಹೋದ ದ್ದರಿಂದ ಯೇಸುವಿನ ತಾಯಿಯು ಆತನಿಗೆ--ಅವರಿಗೆ ದ್ರಾಕ್ಷಾರಸವು ಇಲ್ಲ ಅಂದಳು.

2:4b.JOH.002.004 ಯೇಸು ಆಕೆಗೆ-- ಸ್ತ್ರೀಯೇ, ನನ್ನ ಗೊಡವೆ ನಿನಗೆ ಯಾಕೆ? ನನ್ನ ಗಳಿಗೆ ಯು ಇನ್ನೂ ಬಂದಿಲ್ಲ ಅಂದನು.

2:5b.JOH.002.005 ಆತನ ತಾಯಿಯು ಸೇವಕರಿಗೆ--ಆತನು ನಿಮಗೆ ಏನು ಹೇಳುತ್ತಾನೋ ಅದನ್ನು ಮಾಡಿರಿ ಅಂದಳು.

2:6b.JOH.002.006 ಯೆಹೂದ್ಯರ ಶುದ್ಧೀ ಕರಣದ ಪ್ರಕಾರ ಅಲ್ಲಿ ಪ್ರತಿಯೊಂದು ಎರಡು ಇಲ್ಲವೆ ಮೂರು ಕೊಳಗ ನೀರು ಹಿಡಿಯುವಷ್ಟು ಆರು ಕಲ್ಲಿನ ಬಾನೆಗಳು ಇದ್ದವು.

2:7b.JOH.002.007 ಯೇಸು ಅವರಿಗೆ--ಆ ಬಾನೆ ಗಳಲ್ಲಿ ನೀರು ತುಂಬಿರಿ ಅಂದನು. ಅವರು ಅವುಗಳನ್ನು ಕಂಠದವರೆಗೆ ತುಂಬಿದ್ದರು.

2:8b.JOH.002.008 ಆತನು ಅವರಿಗೆ--ಈಗ ಇದನ್ನು ತೋಡಿಕೊಂಡು ಹೋಗಿ ಔತಣದ ಪಾರುಪತ್ಯಗಾರನಿಗೆ ಕೊಡಿರಿ ಎಂದು ಹೇಳಲು ಅವರು ತಕ್ಕೊಂಡು ಹೋಗಿ ಕೊಟ್ಟರು.

2:9b.JOH.002.009 ಔತಣದ ಪಾರುಪತ್ಯ ಗಾರನು ದ್ರಾಕ್ಷಾರಸವಾದ ನೀರನ್ನು ರುಚಿ ನೋಡಿದಾಗ ಅದು ಎಲ್ಲಿಂದ ಬಂತೆಂದು ತಿಳಿಯದವನಾಗಿ (ನೀರನ್ನು ತೋಡಿಕೊಂಡ ಸೇವಕರಿಗೆ ತಿಳಿದಿತ್ತು) ಮದಲಿಂಗನನ್ನು ಕರೆದು

2:10b.JOH.002.010 ಅವನಿಗೆ--ಪ್ರತಿ ಮನುಷ್ಯನು ಮೊದಲು ಒಳ್ಳೇ ದ್ರಾಕ್ಷಾರಸವನ್ನು ಕೊಟ್ಟು ಜನರು ಚೆನ್ನಾಗಿ ಕುಡಿದ ಮೇಲೆ ಕನಿಷ್ಠವಾದದ್ದನ್ನು ಕೊಡುತ್ತಾನೆ; ಆದರೆ ನೀನು ಇದು ವರೆಗೆ ಒಳ್ಳೇ ದ್ರಾಕ್ಷಾರಸವನ್ನು ಇಟ್ಟು ಕೊಂಡಿದ್ದೀ ಅಂದನು.

2:11b.JOH.002.011 ಯೇಸು ಈ ಮೊದಲನೆಯ ಅದ್ಭುತ ಕಾರ್ಯವನ್ನು ಗಲಿಲಾಯದ ಕಾನಾದಲ್ಲಿ ಮಾಡಿ ತನ್ನ ಮಹಿಮೆಯನ್ನು ತೋರ್ಪಡಿಸಿದನು; ಮತ್ತು ಆತನ ಶಿಷ್ಯರು ಆತನ ಮೇಲೆ ನಂಬಿಕೆ ಇಟ್ಟರು.

2:12b.JOH.002.012 ಇದಾದ ಮೇಲೆ ಆತನೂ ಆತನ ತಾಯಿಯೂ ಆತನ ಸಹೋದರರೂ ಆತನ ಶಿಷ್ಯರೂ ಕಪೆರ್ನೌಮಿಗೆ ಹೋಗಿ ಅಲ್ಲಿ ಕೆಲವು ದಿವಸ ಇದ್ದರು.

2:13b.JOH.002.013 ಯೆಹೂದ್ಯರ ಪಸ್ಕವು ಹತ್ತಿರವಾದಾಗ ಯೇಸು ಯೆರೂಸಲೇಮಿಗೆ ಹೋಗಿ

2:14b.JOH.002.014 ದೇವಾಲಯದಲ್ಲಿ ಎತ್ತು ಕುರಿ ಪಾರಿವಾಳ ಇವುಗಳನ್ನು ಮಾರುವವ ರನ್ನೂ ಹಣ ಬದಲಾಯಿಸುವವರು ಕೂತಿರುವದನೂ ಕಂಡನು;

2:15b.JOH.002.015 ಆಗ ಆತನು ಸಣ್ಣ ಹಗ್ಗಗಳಿಂದ ಕೊರಡೆ ಮಾಡಿ ಕುರಿ ಎತ್ತು ಸಹಿತ ಎಲ್ಲರನ್ನೂ ದೇವಾಲಯದ ಹೊರಕ್ಕೆ ಅಟ್ಟಿ ಚಿನಿವಾರರ ಹಣವನ್ನು ಚೆಲ್ಲಿ ಮೇಜು ಗಳನ್ನು ಕೆಡವಿದನು.

2:16b.JOH.002.016 ಆತನು ಪಾರಿವಾಳ ಮಾರುವ ವರಿಗೆ--ಇವುಗಳನ್ನು ಇಲ್ಲಿಂದ ತಕ್ಕೊಂಡು ಹೋಗಿರಿ; ನನ್ನ ತಂದೆಯ ಮನೆಯನ್ನು ವ್ಯಾಪಾರದ ಮನೆಯ ನ್ನಾಗಿ ಮಾಡಬೇಡಿರಿ ಅಂದನು.

2:17b.JOH.002.017 ಆಗ ಆತನ ಶಿಷ್ಯರು--ನಿನ್ನ ಆಲಯದ ಆಸಕ್ತಿಯು ನನ್ನನ್ನು ದಹಿಸಿ ಬಿಟ್ಟಿದೆ ಎಂದು ಬರೆದಿರುವದನ್ನು ಜ್ಞಾಪಕಮಾಡಿ ಕೊಂಡರು.

2:18b.JOH.002.018 ಆಗ ಯೆಹೂದ್ಯರು ಆತನಿಗೆ--ನೀನು ಇವುಗಳನ್ನು ಮಾಡುವದಕ್ಕೆ ಯಾವ ಸೂಚಕಕಾರ್ಯ ವನ್ನು ನಮಗೆ ತೋರಿಸುತ್ತೀ ಎಂದು ಕೇಳಿದರು.

2:19b.JOH.002.019 ಯೇಸು ಪ್ರತ್ಯುತ್ತರವಾಗಿ ಅವರಿಗೆ--ಈ ದೇವಾಲ ಯವನ್ನು ಕೆಡವಿದರೆ ನಾನು ಮೂರು ದಿನಗಳಲ್ಲಿ ಅದನ್ನು ಎಬ್ಬಿಸುವೆನು ಅಂದನು.

2:20b.JOH.002.020 ಅದಕ್ಕೆ ಯೆಹೂದ್ಯರು-- ಈ ದೇವಾಲಯವನ್ನು ಕಟ್ಟುವದಕ್ಕೆ ನಾಲ್ವತ್ತಾರು ವರುಷಗಳು ಹಿಡಿದವು; ನೀನು ಮೂರು ದಿನಗಳಲ್ಲಿ ಅದನ್ನು ಎಬ್ಬಿಸುವಿಯೋ ಅಂದರು.

2:21b.JOH.002.021 ಆದರೆ ಆತನು ತನ್ನ ದೇಹವೆಂಬ ಆಲಯವನ್ನು ಕುರಿತು ಹೇಳಿದನು.

2:22b.JOH.002.022 ಆದದರಿಂದ ಆತನು ಸತ್ತವರೊಳಗಿಂದ ಎದ್ದಮೇಲೆ ಆತನ ಶಿಷ್ಯರು ತಮಗೆ ಹೇಳಿದ ಈ ಮಾತನ್ನು ನೆನಪು ಮಾಡಿಕೊಂಡು ಬರಹವನ್ನೂ ಯೇಸು ತಮಗೆ ಹೇಳಿದ್ದನ್ನೂ ನಂಬಿದರು.

2:23b.JOH.002.023 ಆತನು ಪಸ್ಕಹಬ್ಬದ ದಿನದಲ್ಲಿ ಯೆರೂಸಲೇಮಿ ನಲ್ಲಿದ್ದಾಗ ಆತನು ಮಾಡಿದ ಅದ್ಭುತ ಕಾರ್ಯಗಳನ್ನು ಅನೇಕರು ನೋಡಿ ಆತನ ಹೆಸರಿನಲ್ಲಿ ನಂಬಿಕೆ ಇಟ್ಟರು.

2:24b.JOH.002.024 ಆದರೆ ಯೇಸು ತನ್ನನ್ನು ಅವರಿಗೆ ವಶಪಡಿಸಿ ಕೊಳ್ಳಲಿಲ್ಲ; ಯಾಕಂದರೆ ಆತನು ಎಲ್ಲರನ್ನೂ ಅರಿತ ವನಾಗಿದ್ದನು.ಆತನು ಮನುಷ್ಯರ ಅಂತರಂಗವನ್ನು ತಿಳಿದವನಾದ ಕಾರಣ ಯಾರೂ ಯಾವ ಮನುಷ್ಯನ ವಿಷಯದಲ್ಲಿಯೂ ಆತನಿಗೆ ಸಾಕ್ಷಿಕೊಡಬೇಕಾದ ಅವಶ್ಯವಿರಲಿಲ್ಲ.

2:25b.JOH.002.025 ಆತನು ಮನುಷ್ಯರ ಅಂತರಂಗವನ್ನು ತಿಳಿದವನಾದ ಕಾರಣ ಯಾರೂ ಯಾವ ಮನುಷ್ಯನ ವಿಷಯದಲ್ಲಿಯೂ ಆತನಿಗೆ ಸಾಕ್ಷಿಕೊಡಬೇಕಾದ ಅವಶ್ಯವಿರಲಿಲ್ಲ.

3

3:1b.JOH.003.001 ಫರಿಸಾಯರಲ್ಲಿ ಯೆಹೂದ್ಯರ ಅಧಿಕಾರಿ ಯಾದ ನಿಕೊದೇಮನೆಂಬ ಒಬ್ಬ ಮನುಷ್ಯ ನಿದ್ದನು.

3:2b.JOH.003.002 ಇವನು ರಾತ್ರಿಯಲ್ಲಿ ಯೇಸುವಿನ ಬಳಿಗೆ ಬಂದು ಆತನಿಗೆ--ರಬ್ಬಿಯೇ (ಗುರುವು), ನೀನು ದೇವರ ಬಳಿಯಿಂದ ಬಂದ ಬೋಧಕನೆಂದು ನಾವು ಬಲ್ಲೆವು, ಯಾಕಂದರೆ ದೇವರು ಒಬ್ಬನ ಕೂಡ ಇಲ್ಲದ ಹೊರತು ನೀನು ಮಾಡುವ ಅದ್ಭುತಕಾರ್ಯಗಳನ್ನು ಯಾವ ಮನುಷ್ಯನೂ ಮಾಡಲಾರನು ಅಂದನು.

3:3b.JOH.003.003 ಯೇಸು ಪ್ರತ್ಯುತ್ತರವಾಗಿ ಅವನಿಗೆ--ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ಒಬ್ಬನು ತಿರಿಗಿ ಹುಟ್ಟದಿದ್ದರೆ ಅವನು ದೇವರ ರಾಜ್ಯವನ್ನು ನೋಡಲಾರನು ಅಂದನು.

3:4b.JOH.003.004 ನಿಕೊದೇಮನು ಆತನಿಗೆ--ಒಬ್ಬನು ಮುದುಕನಾದ ಮೇಲೆ ಹುಟ್ಟುವದು ಹೇಗೆ? ಅವನು ತನ್ನ ತಾಯಿಯ ಗರ್ಭದಲ್ಲಿ ಎರಡನೆಯ ಸಾರಿ ಪ್ರವೇಶಿಸಿ ಹುಟ್ಟುವದಾದೀತೇ ಎಂದು ಕೇಳಿದನು.

3:5b.JOH.003.005 ಯೇಸು ಪ್ರತ್ಯುತ್ತರವಾಗಿ ಅವನಿಗೆ--ನಿನಗೆ ನಿಜನಿಜ ವಾಗಿ ಹೇಳುತ್ತೇನೆ, ಒಬ್ಬನು ನೀರಿನಿಂದಲೂ ಆತ್ಮ ನಿಂದಲೂ ಹುಟ್ಟದಿದ್ದರೆ ಅವನು ದೇವರ ರಾಜ್ಯದೊಳಗೆ ಪ್ರವೇಶಿಸಲಾರನು.

3:6b.JOH.003.006 ಶರೀರದಿಂದ ಹುಟ್ಟಿದ್ದು ಶರೀ ರವೇ; ಆತ್ಮನಿಂದ ಹುಟ್ಟಿದ್ದು ಆತ್ಮವೇ.

3:7b.JOH.003.007 ನೀವು ತಿರಿಗಿ ಹುಟ್ಟತಕ್ಕದ್ದು ಎಂದು ನಾನು ನಿನಗೆ ಹೇಳಿದ್ದರಿಂದ ಆಶ್ಚರ್ಯಪಡಬೇಡ.

3:8b.JOH.003.008 ಗಾಳಿಯು ತನ್ನ ಮನಸ್ಸು ಬಂದ ಕಡೆಗೆ ಬೀಸುತ್ತದೆ; ನೀನು ಅದರ ಶಬ್ದವನ್ನು ಕೇಳುತ್ತೀ; ಆದರೆ ಅದು ಎಲ್ಲಿಂದ ಬರುತ್ತದೋ ಎಲ್ಲಿಗೆ ಹೋಗು ತ್ತದೋ ಹೇಳಲಾರಿ; ಅದರಂತೆಯೇ ಆತ್ಮನಿಂದ ಹುಟ್ಟಿದ ಪ್ರತಿಯೊಬ್ಬನು ಇದ್ದಾನೆ ಅಂದನು.

3:9b.JOH.003.009 ಅದಕ್ಕೆ ನಿಕೊ ದೇಮನು ಪ್ರತ್ಯುತ್ತರವಾಗಿ ಆತನಿಗೆ--ಇವುಗಳು ಹೇಗಾದಾವು ಎಂದು ಕೇಳಿದ್ದಕ್ಕೆ

3:10b.JOH.003.010 ಯೇಸು ಪ್ರತ್ಯುತ್ತರ ವಾಗಿ ಅವನಿಗೆ--ಇಸ್ರಾಯೇಲ್ಯರಿಗೆ ಬೋಧಕನಾಗಿ ರುವ ನಿನಗೆ ಈ ವಿಷಯಗಳು ತಿಳಿಯುವದಿಲ್ಲವೋ?

3:11b.JOH.003.011 ನಾನು ನಿನಗೆ ನಿಜನಿಜ ವಾಗಿ ಹೇಳುತ್ತೇನೆ, ನಾವು ಅರಿತಿರುವದನ್ನು ಮಾತನಾಡುತ್ತೇವೆ ಮತ್ತು ನೋಡಿ ದ್ದಕ್ಕೆ ಸಾಕ್ಷೀಕರಿಸುತ್ತೇವೆ; ಆದರೆ ನೀವು ನಮ್ಮ ಸಾಕ್ಷಿ ಯನ್ನು ಅಂಗೀಕರಿಸುವದಿಲ್ಲ.

3:12b.JOH.003.012 ನಾನು ಭೂಲೋಕ ದವುಗಳನ್ನು ನಿಮಗೆ ಹೇಳಿದರೆ ನೀವು ನಂಬುವದಿಲ್ಲ; ಆದರೆ ಪರಲೋಕದವುಗಳನ್ನು ನಿಮಗೆ ಹೇಳಿದರೆ ಹೇಗೆ ನಂಬೀರಿ?

3:13b.JOH.003.013 ಪರಲೋಕದಿಂದ ಇಳಿದು ಬಂದಾತನೇ ಅಂದರೆ ಪರಲೋಕದಲ್ಲಿರುವ ಮನುಷ್ಯ ಕುಮಾರನೇ ಹೊರತು ಯಾವನೂ ಪರಲೋಕಕ್ಕೆ ಏರಿಹೋದವನಲ್ಲ.

3:14b.JOH.003.014 ಇದಲ್ಲದೆ ಮೋಶೆಯು ಅರಣ್ಯದಲ್ಲಿ ಸರ್ಪವನ್ನು ಎತ್ತಿದ ಹಾಗೆಯೇ ಮನುಷ್ಯ ಕುಮಾರನು ಸಹ ಎತ್ತಲ್ಪಡತಕ್ಕದ್ದು.

3:15b.JOH.003.015 ಹೀಗೆ ಆತನನ್ನು ನಂಬುವ ಯಾವನಾದರೂ ನಾಶವಾಗದೆ ನಿತ್ಯಜೀವ ವನ್ನು ಪಡೆದಿರುವನು.

3:16b.JOH.003.016 ದೇವರು ಲೋಕವನ್ನು ಎಷ್ಟೋ ಪ್ರೀತಿಮಾಡಿ ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಯಾವನಾದರೂ ನಾಶವಾಗದೆ ನಿತ್ಯಜೀವ ವನ್ನು ಪಡೆದವನಾಗಿರುವನು.

3:17b.JOH.003.017 ದೇವರು ಲೋಕಕ್ಕೆ ತೀರ್ಪು ಮಾಡುವದಕ್ಕಾಗಿ ಅಲ್ಲ; ಆದರೆ ತನ್ನ ಮಗನ ಮುಖಾಂತರ ಲೋಕವನ್ನು ರಕ್ಷಿಸುವದಕ್ಕಾಗಿ ಆತನನ್ನು ಕಳುಹಿಸಿದನು.

3:18b.JOH.003.018 ಆತನ ಮೇಲೆ ನಂಬಿಕೆ ಇಡುವವನಿಗೆ ತೀರ್ಪು ಆಗುವದಿಲ್ಲ; ಆದರೆ ನಂಬಿಕೆಯಿಡದವನಿಗೆ ಆಗಲೇ ತೀರ್ಪಾಯಿತು; ಯಾಕಂದರೆ ಅವನು ದೇವರ ಒಬ್ಬನೇ ಮಗನ ಹೆಸರಿನ ಮೇಲೆ ನಂಬಿಕೆ ಇಡಲಿಲ್ಲ.

3:19b.JOH.003.019 ಆ ತೀರ್ಪು ಏನಂದರೆ, ಬೆಳಕು ಲೋಕಕ್ಕೆ ಬಂದಿದ್ದರೂ ಮನುಷ್ಯರ ಕ್ರಿಯೆಗಳು ಕೆಟ್ಟವುಗಳಾ ಗಿರುವದರಿಂದ ಅವರು ಬೆಳಕಿಗಿಂತ ಕತ್ತಲೆಯನ್ನೇ ಪ್ರೀತಿ ಮಾಡಿದರು.

3:20b.JOH.003.020 ಕೆಟ್ಟದ್ದನ್ನು ಮಾಡುವ ಪ್ರತಿ ಯೊಬ್ಬನು ತನ್ನ ಕೃತ್ಯಗಳು ಖಂಡಿಸಲ್ಪಟ್ಟಾವೆಂದು ಬೆಳಕನ್ನು ಹಗೆಮಾಡುತ್ತಾನೆ ಮತ್ತು ಬೆಳಕಿಗೆ ಬರುವದಿಲ್ಲ.

3:21b.JOH.003.021 ಆದರೆ ಸತ್ಯವನ್ನು ಅನುಸರಿಸುವವನು ತನ್ನ ಕೃತ್ಯಗಳು ದೇವರಿಂದ ಮಾಡಲ್ಪಟ್ಟವುಗಳೆಂದು ಪ್ರಕಟವಾಗು ವಂತೆ ಬೆಳಕಿಗೆ ಬರುತ್ತಾನೆ ಎಂದು ಹೇಳಿದನು.

3:22b.JOH.003.022 ಇವುಗಳಾದ ಮೇಲೆ ಯೇಸುವೂ ಆತನ ಶಿಷ್ಯರೂ ಯೂದಾಯ ದೇಶಕ್ಕೆ ಬಂದರು; ಅಲ್ಲಿ ಆತನು ಅವರೊಂದಿಗೆ ಇದ್ದು ಬಾಪ್ತಿಸ್ಮ ಮಾಡಿಸುತ್ತಿದ್ದನು.

3:23b.JOH.003.023 ಇದಲ್ಲದೆ ಯೋಹಾನನು ಸಹ ಸಲೀಮಿನ ಸವಿಾಪ ದಲ್ಲಿದ್ದ ಐನೋನಿನಲ್ಲಿ ಬಾಪ್ತಿಸ್ಮ ಮಾಡಿಸುತ್ತಿದ್ದನು; ಯಾಕಂದರೆ ಅಲ್ಲಿ ಬಹಳ ನೀರು ಇತ್ತು; ಅವರು (ಜನರು) ಬಂದು ಬಾಪ್ತಿಸ್ಮ ಮಾಡಿಸಿಕೊಳ್ಳುತ್ತಿದ್ದರು.

3:24b.JOH.003.024 ಯಾಕಂದರೆ ಯೋಹಾನನು ಅದುವರೆಗೆ ಸೆರೆಯಲ್ಲಿ ಹಾಕಲ್ಪಟ್ಟಿರಲಿಲ್ಲ.

3:25b.JOH.003.025 ತರುವಾಯ ಯೋಹಾನನ ಶಿಷ್ಯರಲ್ಲಿ ಕೆಲವರಿಗೂ ಯೆಹೂದ್ಯರಿಗೂ ಮಧ್ಯದಲ್ಲಿ ಶುದ್ಧೀಕರಣದ ವಿಷಯವಾಗಿ ವಿವಾದ ಉಂಟಾಯಿತು.

3:26b.JOH.003.026 ಅವರು ಯೋಹಾನನ ಬಳಿಗೆ ಬಂದು ಅವ ನಿಗೆ--ಗುರುವೇ, ಇಗೋ, ಯೊರ್ದನಿನ ಆಚೆ ನಿನ್ನ ಬಳಿಯಲ್ಲಿದ್ದ ಒಬ್ಬಾತನ ವಿಷಯದಲ್ಲಿ ನೀನು ಸಾಕ್ಷಿಕೊಟ್ಟಿಯಲ್ಲಾ; ಆತನೂ ಬಾಪ್ತಿಸ್ಮ ಮಾಡಿಸುತ್ತಾನೆ, ಎಲ್ಲರೂ ಆತನ ಬಳಿಗೆ ಹೋಗುತ್ತಾರೆ ಅಂದರು.

3:27b.JOH.003.027 ಯೋಹಾನನು ಪ್ರತ್ಯುತ್ತರವಾಗಿ--ಪರಲೋಕ ದಿಂದ ಒಬ್ಬ ಮನುಷ್ಯನಿಗೆ ಕೊಡಲ್ಪಡದ ಹೊರತು ಅವನು ಯಾವದನ್ನೂ ಹೊಂದಲಾರನು.

3:28b.JOH.003.028 ನಾನು ಕ್ರಿಸ್ತನಲ್ಲ, ಆದರೆ ಆತನ ಮುಂದಾಗಿ ಕಳುಹಿಸಲ್ಪಟ್ಟ ವನೆಂದು ನಾನು ಹೇಳಿದ್ದಕ್ಕೆ ನೀವೇ ನನಗೆ ಸಾಕ್ಷಿಗಳಾ ಗಿದ್ದೀರಿ.

3:29b.JOH.003.029 ಮದಲಗಿತ್ತಿಯುಳ್ಳವನೇ ಮದಲಿಂಗನು; ಆದರೆ ಮದಲಿಂಗನ ಸ್ನೇಹಿತನು ನಿಂತುಕೊಂಡು ಆತನ ಮಾತನ್ನು ಕೇಳಿ ಮದಲಿಂಗನ ಧ್ವನಿಗೆ ಬಹಳವಾಗಿ ಸಂತೋಷ ಪಡುತ್ತಾನೆ; ಆದಕಾರಣ ಈ ನನ್ನ ಸಂತೋಷವು ನೆರವೇರಿತು.

3:30b.JOH.003.030 ಆತನು ಹೆಚ್ಚಿಸಲ್ಪ ಡತಕ್ಕದ್ದು; ನಾನು ತಗ್ಗಿಸಲ್ಪಡತಕ್ಕದ್ದು.

3:31b.JOH.003.031 ಮೇಲಿನಿಂದ ಬರುವಾತನು ಎಲ್ಲರ ಮೇಲೆ ಇದ್ದಾನೆ; ಯಾವನು ಭೂಸಂಬಂಧವಾದವನಾಗಿದ್ದಾನೋ ಅವನು ಭೂ ಸಂಬಂಧದವನಾಗಿದ್ದು ಭೂಸಂಬಂಧವಾದವುಗಳನ್ನು ಮಾತನಾಡುತ್ತಾನೆ; ಪರಲೋಕದಿಂದ ಬರುವಾತನು ಎಲ್ಲರ ಮೇಲೆ ಇದ್ದಾನೆ.

3:32b.JOH.003.032 ಆತನು ಯಾವದನ್ನು ಕಂಡು ಕೇಳಿದನೋ ಅದಕ್ಕೆ ಸಾಕ್ಷಿ ಕೊಡುತ್ತಾನೆ; ಆದರೆ ಆತನ ಸಾಕ್ಷಿಯನ್ನು ಯಾವನೂ ಅಂಗೀಕರಿಸುವದಿಲ್ಲ.

3:33b.JOH.003.033 ಆತನ ಸಾಕ್ಷಿಯನ್ನು ಅಂಗೀಕರಿಸಿದವನು ದೇವರು ಸತ್ಯವಂತನೆಂಬದಕ್ಕೆ ತನ್ನ ಮುದ್ರೆಯನ್ನು ಹಾಕಿದ್ದಾನೆ.

3:34b.JOH.003.034 ದೇವರು ಕಳುಹಿಸಿದಾತನು ದೇವರ ಮಾತುಗಳನ್ನೇ ಆಡುತ್ತಾನೆ; ದೇವರು ಆತನಿಗೆ ಆತ್ಮನನ್ನು ಅಳತೆ ಮಾಡದೆ ಕೊಡುತ್ತಾನೆ.

3:35b.JOH.003.035 ತಂದೆಯು ಮಗನನ್ನು ಪ್ರೀತಿಸಿ ಎಲ್ಲವುಗಳನ್ನು ಆತನ ಕೈಯಲ್ಲಿ ಕೊಟ್ಟಿದ್ದಾನೆ.ಮಗನ ಮೇಲೆ ನಂಬಿಕೆಯಿಡುವವನಿಗೆ ನಿತ್ಯಜೀವ ಉಂಟು; ಯಾವನು ಮಗನನ್ನು ನಂಬುವದಿಲ್ಲವೋ ಅವನು ಜೀವವನ್ನು ಕಾಣುವದಿಲ್ಲ; ಆದರೆ ದೇವರ ಕೋಪವು ಅವನ ಮೇಲೆ ನೆಲೆಗೊಂಡಿದೆ ಅಂದನು.

3:36b.JOH.003.036 ಮಗನ ಮೇಲೆ ನಂಬಿಕೆಯಿಡುವವನಿಗೆ ನಿತ್ಯಜೀವ ಉಂಟು; ಯಾವನು ಮಗನನ್ನು ನಂಬುವದಿಲ್ಲವೋ ಅವನು ಜೀವವನ್ನು ಕಾಣುವದಿಲ್ಲ; ಆದರೆ ದೇವರ ಕೋಪವು ಅವನ ಮೇಲೆ ನೆಲೆಗೊಂಡಿದೆ ಅಂದನು.

4

4:1b.JOH.004.001 ಯೇಸು ಯೋಹಾನನಿಗಿಂತ ಹೆಚ್ಚು ಶಿಷ್ಯರನ್ನು ಮಾಡಿಕೊಂಡು ಬಾಪ್ತಿಸ್ಮ ಮಾಡಿಸುತ್ತಿದ್ದದ್ದು ಫರಿಸಾಯರು ಕೇಳಿದ್ದಾರೆಂದು ಕರ್ತ ನಿಗೆ ಗೊತ್ತಾಯಿತು.

4:2b.JOH.004.002 (ಆದಾಗ್ಯೂ ಬಾಪ್ತಿಸ್ಮ ಮಾಡಿಸು ತ್ತಿದ್ದಾತನು ಯೇಸು ತಾನೇ ಅಲ್ಲ, ಆದರೆ ಆತನ ಶಿಷ್ಯರು ಮಾಡಿಸುತ್ತಿದ್ದರು).

4:3b.JOH.004.003 ಆಗ ಆತನು ಯೂದಾಯ ವನ್ನು ಬಿಟ್ಟು ಗಲಿಲಾಯಕ್ಕೆ ತಿರಿಗಿ ಹೊರಟು ಹೋದನು.

4:4b.JOH.004.004 ಆತನು ಸಮಾರ್ಯದ ಮಾರ್ಗವಾಗಿ ಹೋಗಬೇಕಾದದ್ದು ಅವಶ್ಯವಾಗಿತ್ತು.

4:5b.JOH.004.005 ಆಗ ಯಾಕೋ ಬನು ತನ್ನ ಮಗನಾದ ಯೋಸೇಫನಿಗೆ ಕೊಟ್ಟ ಭೂಮಿಯ ಸವಿಾಪದಲ್ಲಿರುವ ಸುಖರ್‌ ಎಂಬ ಸಮಾರ್ಯದ ಪಟ್ಟಣಕ್ಕೆ ಆತನು ಬಂದನು.

4:6b.JOH.004.006 ಅಲ್ಲಿ ಯಾಕೋಬನ ಬಾವಿ ಇತ್ತು; ಯೇಸು ಪ್ರಯಾಣದಿಂದ ಆಯಾಸಗೊಂಡಿರಲಾಗಿ ಆ ಬಾವಿಯ ಬಳಿಯಲ್ಲಿ ಹಾಗೆಯೇ ಕೂತುಕೊಂಡನು. ಆಗ ಸುಮಾರು ಆರನೇ ತಾಸಾಗಿತ್ತು. (ಅಂದರೆ ಮಧ್ಯಾಹ್ನ ಹನ್ನೆರಡು ಗಂಟೆಯಾ ಗಿತ್ತು).

4:7b.JOH.004.007 ಆಗ ಸಮಾರ್ಯದ ಒಬ್ಬ ಸ್ತ್ರೀಯು ನೀರು ಸೇದುವದಕ್ಕಾಗಿ ಬಂದಳು; ಯೇಸು ಆಕೆಗೆ--ನನಗೆ ಕುಡಿಯುವದಕ್ಕೆ ಕೊಡು ಅಂದನು.

4:8b.JOH.004.008 (ಯಾಕಂದರೆ ಆತನ ಶಿಷ್ಯರು ಆಹಾರವನ್ನು ಕೊಂಡುಕೊಳ್ಳುವದಕ್ಕಾಗಿ ಪಟ್ಟಣದೊಳಕ್ಕೆ ಹೋಗಿದ್ದರು).

4:9b.JOH.004.009 ಅದಕ್ಕೆ ಆ ಸಮಾ ರ್ಯದ ಸ್ತ್ರೀಯು ಆತನಿಗೆ--ನೀನು ಯೆಹೂದ್ಯನಾಗಿದ್ದು ಕುಡಿಯುವದಕ್ಕೆ ಕೊಡು ಎಂದು ಸಮಾರ್ಯದ ಸ್ತ್ರೀಯಾದ ನನ್ನಿಂದ ಕೇಳುವದು ಹೇಗೆ? ಯಾಕಂದರೆ ಯೆಹೂದ್ಯರು ಸಮಾರ್ಯದವರೊಂದಿಗೆ ಹೊಕ್ಕು ಬಳಿಕೆ ಮಾಡುವದಿಲ್ಲವಲ್ಲಾ ಅಂದಳು.

4:10b.JOH.004.010 ಯೇಸು ಪ್ರತ್ಯುತ್ತರವಾಗಿ ಆಕೆಗೆ--ದೇವರ ದಾನವೇನೆಂಬದೂ ಮತ್ತು--ನನಗೆ ಕುಡಿಯುವದಕ್ಕೆ ಕೊಡು ಎಂದು ನಿನ್ನನ್ನು ಕೇಳಿದಾತನು ಯಾರೆಂಬದೂ ನಿನಗೆ ತಿಳಿದಿದ್ದರೆ ನೀನು ಆತನನ್ನು ಕೇಳುತ್ತಿದ್ದಿ, ಆತನು ನಿನಗೆ ಜೀವಕರವಾದ ನೀರನ್ನು ಕೊಡುತ್ತಿದ್ದನು ಎಂದು ಹೇಳಿದನು.

4:11b.JOH.004.011 ಆ ಸ್ತ್ರೀಯು ಆತನಿಗೆ--ಅಯ್ಯಾ, ಸೇದುವದಕ್ಕೆ ನಿನಗೆ ಏನೂ ಇಲ್ಲ ಮತ್ತು ಬಾವಿ ಅಳವಾಗಿದೆ; ಹೀಗಿರುವಲ್ಲಿ ಆ ಜೀವಕರವಾದ ನೀರು ನಿನಗೆ ಎಲ್ಲಿಂದ ಬಂತು?

4:12b.JOH.004.012 ತಾನೂ ತನ್ನ ಮಕ್ಕಳೂ ತನ್ನ ದನಗಳೂ ಈ ಬಾವಿ ಯಿಂದ ಕುಡಿದು ನಮಗೆ ಅದನ್ನು ಕೊಟ್ಟ ನಮ್ಮ ತಂದೆಯಾದ ಯಾಕೋಬನಿಗಿಂತ ನೀನು ದೊಡ್ಡ ವನೋ? ಅಂದಳು.

4:13b.JOH.004.013 ಯೇಸು ಪ್ರತ್ಯುತ್ತರವಾಗಿ ಆಕೆಗೆ--ಈ ನೀರನ್ನು ಕುಡಿಯುವ ಪ್ರತಿಯೊಬ್ಬನಿಗೆ ತಿರಿಗಿ ನೀರಡಿಕೆಯಾಗುವದು;

4:14b.JOH.004.014 ಆದರೆ ನಾನು ಕೊಡುವ ನೀರನ್ನು ಕುಡಿಯುವವನಿಗೆ ಎಂದಿಗೂ ನೀರ ಡಿಕೆಯಾಗುವದಿಲ್ಲ; ಯಾಕಂದರೆ ನಾನು ಅವನಿಗೆ ಕೊಡುವ ನೀರು ಅವನಲ್ಲಿ ನಿತ್ಯಜೀವಕ್ಕೆ ಉಕ್ಕುವ ನೀರಿನ ಬಾವಿಯಾಗಿರುವದು ಅಂದನು.

4:15b.JOH.004.015 ಆ ಸ್ತ್ರೀಯು ಆತನಿಗೆ--ಅಯ್ಯಾ, ನನಗೆ ನೀರಡಿಕೆಯಾಗದಂತೆಯೂ ನೀರು ಸೇದುವದಕ್ಕೆ ನಾನು ಇಲ್ಲಿಗೆ ಬಾರದಂತೆಯೂ ನನಗೆ ಈ ನೀರನ್ನು ಕೊಡು ಅಂದಳು.

4:16b.JOH.004.016 ಯೇಸು ಆಕೆಗೆ--ಹೋಗಿ ನಿನ್ನ ಗಂಡನನ್ನು ಕರಕೊಂಡು ಇಲ್ಲಿಗೆ ಬಾ ಅಂದನು.

4:17b.JOH.004.017 ಆಗ ಆ ಸ್ತ್ರೀಯು ಪ್ರತ್ಯುತ್ತರ ವಾಗಿ--ನನಗೆ ಗಂಡನಿಲ್ಲ ಅಂದಳು, ಯೇಸು ಆಕೆಗೆ--ನನಗೆ ಗಂಡನಿಲ್ಲ ಎಂದು ನೀನು ಹೇಳಿದ್ದು ಸರಿಯೇ;

4:18b.JOH.004.018 ಯಾಕಂದರೆ ನಿನಗೆ ಐದು ಮಂದಿ ಗಂಡಂದಿರಿದ್ದರು; ಈಗ ನಿನಗಿರುವವನು ನಿನ್ನ ಗಂಡ ನಲ್ಲ; ಆ ವಿಷಯದಲ್ಲಿ ನೀನು ಹೇಳಿದ್ದು ಸತ್ಯವಾದದ್ದು ಅಂದನು.

4:19b.JOH.004.019 ಆಗ ಆ ಸ್ತ್ರೀಯು ಆತನಿಗೆ--ಅಯ್ಯಾ, ನೀನು ಒಬ್ಬ ಪ್ರವಾದಿಯೆಂದು ನಾನು ಗ್ರಹಿಸುತ್ತೇನೆ;

4:20b.JOH.004.020 ನಮ್ಮ ಪಿತೃಗಳು ಈ ಬೆಟ್ಟದಲ್ಲಿ ಆರಾಧಿಸಿದರು; ಆದರೆ ಜನರು ಆರಾಧಿಸತಕ್ಕ ಸ್ಥಳವು ಯೆರೂಸಲೇಮಿ ನಲ್ಲಿಯೇ ಎಂದು ನೀವು ಅನ್ನುತ್ತೀರಿ ಅಂದಳು.

4:21b.JOH.004.021 ಯೇಸು ಆಕೆಗೆ--ಸ್ತ್ರೀಯೇ, ನನ್ನನ್ನು ನಂಬು; ಈ ಬೆಟ್ಟದಲ್ಲಿಯಾಗಲೀ ಯೆರೂಸಲೇಮಿನಲ್ಲಿಯಾಗಲೀ ನೀವು ತಂದೆಯನ್ನು ಆರಾಧಿಸದೆ ಇರುವ ಗಳಿಗೆ ಬರುತ್ತದೆ.

4:22b.JOH.004.022 ನೀವು ಅರಿಯದೆ ಇರುವದನ್ನು ಆರಾಧಿ ಸುತ್ತೀರಿ; ನಾವು ಅರಿತಿರುವದನ್ನೇ ಆರಾಧಿಸುತ್ತೇವೆ; ಯಾಕಂದರೆ ರಕ್ಷಣೆಯು ಯೆಹೂದ್ಯರಿಂದಲೇ.

4:23b.JOH.004.023 ನಿಜ ವಾದ ಆರಾಧಕರು ತಂದೆಯನ್ನು ಆತ್ಮದಿಂದಲೂ ಸತ್ಯ ದಿಂದಲೂ ಆರಾಧಿಸುವ ಗಳಿಗೆಯು ಬರುತ್ತದೆ, ಅದು ಈಗಲೇ ಬಂದಿದೆ; ಯಾಕಂದರೆ ತನ್ನನ್ನು ಆರಾಧಿಸು ವದಕ್ಕೆ ತಂದೆಯು ಅಂಥವರನ್ನು ಹುಡುಕುತ್ತಾನೆ.

4:24b.JOH.004.024 ದೇವರು ಆತ್ಮನಾಗಿದ್ದಾನೆ; ಆತನನ್ನು ಆರಾಧಿಸುವ ವರು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸತಕ್ಕದ್ದು ಅಂದನು.

4:25b.JOH.004.025 ಆ ಸ್ತ್ರೀಯು ಆತನಿಗೆ--ಕ್ರಿಸ್ತನೆಂದು ಕರೆಯಲ್ಪಟ್ಟ ಮೆಸ್ಸೀಯನು ಬರುತ್ತಾನೆಂದು ನಾನು ಬಲ್ಲೆನು; ಆತನು ಬಂದಾಗ ನಮಗೆ ಎಲ್ಲವುಗಳನ್ನು ತಿಳಿಯಪಡಿಸುವನು ಅಂದಳು.

4:26b.JOH.004.026 ಯೇಸು ಆಕೆಗೆ--ನಿನ್ನೊಂದಿಗೆ ಮಾತನಾಡುವ ನಾನೇ ಆತನು ಅಂದನು.

4:27b.JOH.004.027 ಅಷ್ಟರೊಳಗೆ ಆತನ ಶಿಷ್ಯರು ಬಂದು ಆತನು ಆ ಸ್ತ್ರೀಯೊಂದಿಗೆ ಮಾತನಾಡುತ್ತಿದ್ದನೆಂದು ಆಶ್ಚರ್ಯ ಪಟ್ಟರು; ಆದಾಗ್ಯೂ--ನಿನಗೆ ಏನು ಬೇಕು? ಇಲ್ಲವೆ ಆಕೆಯೊಂದಿಗೆ ಯಾಕೆ ಮಾತನಾಡುತ್ತೀ ಎಂದು ಒಬ್ಬ ನಾದರೂ ಕೇಳಲಿಲ್ಲ.

4:28b.JOH.004.028 ಆಗ ಆ ಸ್ತ್ರೀಯು ತನ್ನ ನೀರಿನ ಕೊಡವನ್ನು ಬಿಟ್ಟು ಪಟ್ಟಣದೊಳಕ್ಕೆ ಹೊರಟುಹೋಗಿ ಜನರಿಗೆ--

4:29b.JOH.004.029 ಬನ್ನಿರಿ, ನಾನು ಮಾಡಿದವುಗಳನ್ನೆಲ್ಲಾ ನನಗೆ ತಿಳಿಸಿದ ಮನುಷ್ಯನನ್ನು ನೋಡಿರಿ; ಈತನು ಆ ಕ್ರಿಸ್ತನಲ್ಲವೇ ಅಂದಳು.

4:30b.JOH.004.030 ಆಗ ಅವರು ಪಟ್ಟಣದಿಂದ ಆತನ ಬಳಿಗೆ ಹೊರಟು ಬಂದರು.

4:31b.JOH.004.031 ಆ ಸಮಯದಲ್ಲಿ ಆತನ ಶಿಷ್ಯರು ಆತನಿಗೆ--ಬೋಧಕನೇ, ಊಟ ಮಾಡು ಎಂದು ಬೇಡಿ ಕೊಂಡರು.

4:32b.JOH.004.032 ಆದರೆ ಆತನು ಅವರಿಗೆ--ನಿಮಗೆ ತಿಳಯದಿರುವ ಆಹಾರವು ನನಗೆ ಊಟಕ್ಕೆ ಇದೆ ಅಂದನು.

4:33b.JOH.004.033 ಆದದರಿಂದ ಶಿಷ್ಯರು--ಊಟ ಮಾಡು ವದಕ್ಕೆ ಯಾರಾದರೂ ಆತನಿಗೆ ಏನಾದರೂ ತಂದು ಕೊಟ್ಟರೋ ಎಂದು ಒಬ್ಬರಿಗೊಬ್ಬರು ಮಾತನಾಡಿ ಕೊಂಡರು.

4:34b.JOH.004.034 ಆದರೆ ಯೇಸು ಅವರಿಗೆ--ನನ್ನನ್ನು ಕಳುಹಿಸಿದಾತನ ಚಿತ್ತವನ್ನು ನೆರವೇರಿಸಿ ಆತನ ಕೆಲಸ ವನ್ನು ಪೂರೈಸುವದೇ ನನ್ನ ಆಹಾರ ಅಂದನು.

4:35b.JOH.004.035 ನೀವು--ಸುಗ್ಗಿಯು ಬರುವದಕ್ಕೆ ಇನ್ನೂ ನಾಲ್ಕು ತಿಂಗಳುಗಳು ಇವೆಯೆಂದು ಹೇಳುತ್ತೀರಲ್ಲವೋ? ಮತ್ತು--ಇಗೋ, ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿ ಹೊಲಗಳನ್ನು ನೋಡಿರಿ, ಯಾಕಂದರೆ ಅವು ಈಗಾ ಗಲೇ ಬೆಳ್ಳಗಾಗಿ ಕೊಯ್ಲಿಗೆ ಬಂದವೆ ಎಂದು ನಾನು ನಿಮಗೆ ಹೇಳುತ್ತೇನೆ.

4:36b.JOH.004.036 ಕೊಯ್ಯುವವನು ಕೂಲಿಯನ್ನು ಹೊಂದಿ ನಿತ್ಯಜೀವಕ್ಕಾಗಿ ಫಲವನ್ನು ಕೂಡಿಸಿಕೊಳ್ಳು ತ್ತಾನೆ; ಹೀಗೆ ಬಿತ್ತುವವನೂ ಕೊಯ್ಯುವವನೂ ಒಟ್ಟಾಗಿ ಸಂತೋಷಿಸುವರು.

4:37b.JOH.004.037 ಬಿತ್ತುವವನೊಬ್ಬನು, ಕೊಯ್ಯು ವವನು ಮತ್ತೊಬ್ಬನು ಎಂದು ಹೇಳುವ ಮಾತು ಇದ ರಲ್ಲಿ ಸತ್ಯವಾಗಿದೆ.

4:38b.JOH.004.038 ನೀವು ಕಷ್ಟಪಡದಂಥ ಬೆಳೆಯನ್ನು ಕೊಯ್ಯುವದಕ್ಕೆ ನಾನು ನಿಮ್ಮನ್ನು ಕಳುಹಿಸಿದೆನು. ಬೇರೊಬ್ಬರು ಕಷ್ಟ ಪಟ್ಟರು ನೀವು ಅವರ ಕಷ್ಟದಲ್ಲಿ ಸೇರಿಕೊಂಡಿದ್ದೀರಿ ಅಂದನು.

4:39b.JOH.004.039 ಆಗ--ನಾನು ಮಾಡಿ ದೆಲ್ಲವನ್ನು ನನಗೆ ತಿಳಿಸಿದನೆಂದು ಸಾಕ್ಷಿಕೊಟ್ಟ ಆ ಸ್ತ್ರೀಯ ಮಾತಿಗೋಸ್ಕರ ಆ ಪಟ್ಟಣದ ಅನೇಕ ಸಮಾರ್ಯದವರು ಆತನ ಮೇಲೆ ನಂಬಿಕೆ ಇಟ್ಟರು.

4:40b.JOH.004.040 ಹೀಗೆ ಆ ಸಮಾರ್ಯ ದವರು ಆತನ ಬಳಿಗೆ ಬಂದಾಗ ಆತನು ತಮ್ಮೊಂದಿಗೆ ಇರಬೇಕೆಂದು ಆತನನ್ನು ಬೇಡಿಕೊಳ್ಳಲು ಆತನು ಎರಡು ದಿವಸ ಅಲ್ಲಿ ಇಳುಕೊಂಡನು.

4:41b.JOH.004.041 ಇನ್ನೂ ಹೆಚ್ಚು ಜನರು ಆತನ ಸ್ವಂತ ಮಾತಿಗೋಸ್ಕರ ಆತನನ್ನು ನಂಬಿದರು.

4:42b.JOH.004.042 ಆ ಸ್ತ್ರೀಗೆ-- ನಾವು ಈಗ ನಂಬುವದು ನಿನ್ನ ಮಾತಿನಿಂದಲ್ಲ; ಯಾಕಂದರೆ ನಾವೇ ಸ್ವತಃ ಈತನ ಮಾತನ್ನು ಕೇಳಿದ್ದೇವೆ ಮತ್ತು ಈತನು ನಿಜವಾಗಿಯೂ ಲೋಕರಕ್ಷಕನಾದ ಕ್ರಿಸ್ತನೆಂದು ಬಲ್ಲೆವು ಅಂದರು.

4:43b.JOH.004.043 ಎರಡು ದಿವಸಗಳಾದ ಮೇಲೆ ಆತನು ಅಲ್ಲಿಂದ ಹೊರಟು ಗಲಿಲಾಯಕ್ಕೆ ಹೋದನು.

4:44b.JOH.004.044 ಯಾಕಂದರೆ ಪ್ರವಾದಿಗೆ ತನ್ನ ಸ್ವದೇಶದಲ್ಲಿ ಸನ್ಮಾನವಿಲ್ಲವೆಂದು ಯೇಸು ತಾನೇ ಸಾಕ್ಷಿ ಹೇಳಿದನು.

4:45b.JOH.004.045 ಗಲಿಲಾಯ ದವರು ಯೆರೂಸಲೇಮಿನ ಹಬ್ಬಕ್ಕೆ ಹೋದಾಗ ಆತನು ಅಲ್ಲಿ ಮಾಡಿದವುಗಳನ್ನೆಲ್ಲಾ ಅವರು ನೋಡಿ ದ್ದರಿಂದ ಆತನು ಗಲಿಲಾಯಕ್ಕೆ ಬಂದಾಗ ಆತನನ್ನು ಸ್ವೀಕರಿಸಿದರು.

4:46b.JOH.004.046 ಹೀಗೆ ಯೇಸು ತಾನು ನೀರನ್ನು ದ್ರಾಕ್ಷಾರಸ ವನ್ನಾಗಿ ಮಾಡಿದ ಗಲಿಲಾಯದ ಕಾನಾನಿಗೆ ತಿರಿಗಿ ಬಂದನು. ಆಗ ಕಪೆರ್ನೌಮಿನಲ್ಲಿದ್ದ ಒಬ್ಬ ಪ್ರಧಾನನ ಮಗನು ಅಸ್ವಸ್ಥನಾಗಿದ್ದನು.

4:47b.JOH.004.047 ಯೇಸು ಯೂದಾಯ ದಿಂದ ಗಲಿಲಾಯಕ್ಕೆ ಬಂದನೆಂದು ಅವನು ಕೇಳಿದಾಗ ಆತನ ಬಳಿಗೆ ಹೋಗಿ ತಾನು ಬಂದು ತನ್ನ ಮಗನನ್ನು ಸ್ವಸ್ಥಪಡಿಸಬೇಕೆಂದು ಆತನನ್ನು ಬೇಡಿಕೊಂಡನು; ಯಾಕಂದರೆ ಅವನು ಸಾಯುವ ಹಾಗಿದ್ದನು.

4:48b.JOH.004.048 ಯೇಸು ಅವನಿಗೆ--ನೀವು ಸೂಚಕ ಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ನೋಡದ ಹೊರತು ನಂಬು ವದೇ ಇಲ್ಲ ಅಂದನು.

4:49b.JOH.004.049 ಆಗ ಆ ಪ್ರಧಾನನು ಆತನಿಗೆ--ಅಯ್ಯಾ, ನನ್ನ ಮಗನು ಸಾಯುವದಕ್ಕೆ ಮೊದಲು ಬರಬೇಕು ಅಂದನು.

4:50b.JOH.004.050 ಯೇಸು ಅವನಿಗೆ--ನೀನು ಹೋಗು, ನಿನ್ನ ಮಗನು ಬದುಕಿರುತ್ತಾನೆ ಅಂದನು. ಮತ್ತು ಆ ಮನುಷ್ಯನು ಯೇಸು ಹೇಳಿದ ಮಾತನ್ನು ನಂಬಿ ಹೊರಟುಹೋದನು.

4:51b.JOH.004.051 ಹೀಗೆ ಅವನು ಹೋಗುತ್ತಿರುವಾಗ ಅವನ ಸೇವಕರು ಅವ ನನ್ನು ಸಂಧಿಸಿ--ನಿನ್ನ ಮಗನು ಬದುಕಿದನು ಎಂದು ಅವನಿಗೆ ಹೇಳಿದರು.

4:52b.JOH.004.052 ಆಗ ಅವನು--ಯಾವ ಗಳಿಗೆಯಲ್ಲಿ ಅವನಿಗೆ ಗುಣವಾಗತೊಡಗಿತು ಎಂದು ಅವರನ್ನು ವಿಚಾರಿಸಿದಾಗ ಅವರು ನಿನ್ನೆ ಏಳನೇ ತಾಸಿನಲ್ಲಿ ಜ್ವರವು ಅವನನ್ನು ಬಿಟ್ಟಿತು ಎಂದು ಅವನಿಗೆ ಹೇಳಿದರು.

4:53b.JOH.004.053 ಹೀಗೆ--ನಿನ್ನ ಮಗನು ಬದುಕುತ್ತಾನೆ ಎಂದು ಯೇಸು ತನಗೆ ಹೇಳಿದ ಗಳಿಗೆಯಲ್ಲಿಯೇ ಅದು ಆಯಿತೆಂದು ತಂದೆಯು ತಿಳಿದುಕೊಂಡು ತಾನೂ ತನ್ನ ಮನೆಯವರೆಲ್ಲರೂ ನಂಬಿದರು.ಯೇಸು ಯೂದಾಯದಿಂದ ಗಲಿಲಾಯಕ್ಕೆ ಬಂದಮೇಲೆ ತಿರಿಗಿ ಮಾಡಿದ ಎರಡನೆಯ ಅದ್ಭುತಕಾರ್ಯವು ಇದಾಗಿದೆ.

4:54b.JOH.004.054 ಯೇಸು ಯೂದಾಯದಿಂದ ಗಲಿಲಾಯಕ್ಕೆ ಬಂದಮೇಲೆ ತಿರಿಗಿ ಮಾಡಿದ ಎರಡನೆಯ ಅದ್ಭುತಕಾರ್ಯವು ಇದಾಗಿದೆ.

5

5:1b.JOH.005.001 ಇದಾದ ಮೇಲೆ ಯೆಹೂದ್ಯರದೊಂದು ಹಬ್ಬ ಇದ್ದದರಿಂದ ಯೇಸು ಯೆರೂ ಸಲೇಮಿಗೆ ಹೋದನು.

5:2b.JOH.005.002 ಯೆರೂಸಲೇಮಿನಲ್ಲಿ ಕುರಿ ಮಾರುವ ಸ್ಥಳದ ಹತ್ತಿರದಲ್ಲಿ ಒಂದು ಕೊಳವಿದೆ; ಇದು ಇಬ್ರಿಯ ಭಾಷೆಯಲ್ಲಿ ಬೇತ್ಸಥಾ ಎಂದು ಕರೆಯ ಲ್ಪಡುತ್ತದೆ. ಅದಕ್ಕೆ ಐದು ದ್ವಾರಾಂಗಳಗಳಿವೆ.

5:3b.JOH.005.003 ಇವು ಗಳಲ್ಲಿ ಬಲಹೀನರೂ ಕುರುಡರೂ ಕುಂಟರೂ ಮೈ ಒಣಗಿದವರೂ ಆಗಿದ್ದ ದೊಡ್ಡ ಸಮೂಹವು ಬಿದ್ದು ಕೊಂಡಿದ್ದು ನೀರಿನ ಕದಲಿಸುವಿಕೆಗಾಗಿ ಕಾದುಕೊಂಡಿ ದ್ದರು.

5:4b.JOH.005.004 ಆಯಾ ಕಾಲದಲ್ಲಿ ಒಬ್ಬ ದೂತನು ಕೊಳ ದೊಳಗೆ ಇಳಿದುಹೋಗಿ ನೀರನ್ನು ಕದಲಿಸುತ್ತಿದ್ದನು; ನೀರು ಕದಲಿಸಲ್ಪಟ್ಟ ಮೇಲೆ ಮೊದಲು ಯಾರು ನೀರಿನೊಳಗೆ ಹೆಜ್ಜೆಯಿಡುತ್ತಿದ್ದರೋ ಅವರಿಗೆ ಯಾವ ರೋಗವಿದ್ದರೂ ಸ್ವಸ್ಥವಾಗುತ್ತಿತ್ತು.

5:5b.JOH.005.005 ಆಗ ಮೂವತ್ತೆಂಟು ವರುಷದಿಂದ ರೋಗಿಯಾಗಿದ್ದ ಒಬ್ಬಾನೊಬ್ಬ ಮನು ಷ್ಯನು ಅಲ್ಲಿ ಇದ್ದನು.

5:6b.JOH.005.006 ಅವನು ಬಿದ್ದುಕೊಂಡಿರುವದನ್ನು ಯೇಸು ನೋಡಿ ಅವನು ಬಹುಕಾಲದಿಂದ ಆ ಸ್ಥಿತಿ ಯಲ್ಲಿ ಇದ್ದಾನೆಂದು ತಿಳಿದು ಅವನಿಗೆ--ನಿನಗೆ ಸ್ವಸ್ಥವಾ ಗುವದಕ್ಕೆ ಮನಸ್ಸುಂಟೋ ಎಂದು ಕೇಳಿದನು.

5:7b.JOH.005.007 ಅದಕ್ಕೆ ಆ ರೋಗಿಯು ಪ್ರತ್ಯುತ್ತರವಾಗಿ ಆತನಿಗೆ--ಅಯ್ಯಾ, ನೀರು ಕದಲಿಸಲ್ಪಡುವಾಗ ನನ್ನನ್ನು ಕೊಳದೊಳಗೆ ಇಳಿಸುವದಕ್ಕೆ ನನಗೆ ಯಾರು ಇಲ್ಲ; ಆದರೆ ನಾನು ಬರುತ್ತಿರುವಾಗಲೇ ನನಗಿಂತ ಮುಂದಾಗಿ ಮತ್ತೊಬ್ಬನು ಇಳಿಯುತ್ತಾನೆ ಅಂದನು.

5:8b.JOH.005.008 ಯೇಸು ಅವನಿಗೆ-- ಎದ್ದು ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ ಅಂದನು.

5:9b.JOH.005.009 ಕೂಡಲೆ ಆ ಮನುಷ್ಯನು ಸ್ವಸ್ಥನಾಗಿ ತನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆದನು; ಆ ದಿನವು ಸಬ್ಬತ್ತಾಗಿತ್ತು.

5:10b.JOH.005.010 ಆದದರಿಂದ ಯೆಹೂದ್ಯರು ಸ್ವಸ್ಥನಾದವನಿಗೆ--ಇದು ಸಬ್ಬತ್‌ ದಿನವಾಗಿದೆ; ನೀನು ಹಾಸಿಗೆಯನ್ನು ಹೊತ್ತುಕೊಳ್ಳುವದು ನ್ಯಾಯವಲ್ಲ ಅಂದರು.

5:11b.JOH.005.011 ಅವನು ಪ್ರತ್ಯುತ್ತರವಾಗಿ ಅವರಿಗೆ--ನನ್ನನ್ನು ಸ್ವಸ್ಥ ಮಾಡಿದಾತನೇ--ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ ಎಂದು ನನಗೆ ಹೇಳಿದ್ದಾನೆ ಅಂದನು.

5:12b.JOH.005.012 ಅದಕ್ಕೆ ಅವರು ಅವನಿಗೆ--ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ ಎಂದು ನಿನಗೆ ಹೇಳಿದ ಮನುಷ್ಯನು ಯಾರು ಎಂದು ಕೇಳಿದರು.

5:13b.JOH.005.013 ಆದರೆ ಆತನು ಯಾರೆಂದು ಸ್ವಸ್ಥನಾದವನಿಗೆ ತಿಳಿದಿರಲಿಲ್ಲ; ಯಾಕಂದರೆ ಆ ಸ್ಥಳ ದಲ್ಲಿ ಜನಸಮೂಹವು ಇದ್ದದರಿಂದ ಯೇಸು ಅಲ್ಲಿಂದ ಸರಕೊಂಡು ಹೋಗಿದ್ದನು.

5:14b.JOH.005.014 ತರುವಾಯ ಯೇಸು ಅವನನ್ನು ದೇವಾಲಯದಲ್ಲಿ ಕಂಡುಕೊಂಡು ಅವ ನಿಗೆ--ಇಗೋ, ನಿನಗೆ ಸ್ವಸ್ಥವಾಯಿತಲ್ಲಾ; ನಿನ್ನ ಮೇಲೆ ಹೆಚ್ಚಿನ ಕೇಡು ಬಾರದಂತೆ ಇನ್ನು ಪಾಪಮಾಡಬೇಡ ಅಂದನು.

5:15b.JOH.005.015 ಆಗ ಅವನು ಹೊರಟು ಹೋಗಿ ತನ್ನನ್ನು ಸ್ವಸ್ಥಪಡಿಸಿದಾತನು ಯೇಸುವೇ ಎಂದು ಯೆಹೂದ್ಯ ರಿಗೆ ತಿಳಿಸಿದನು.

5:16b.JOH.005.016 ಆತನು ಇವುಗಳನ್ನು ಸಬ್ಬತ್‌ ದಿನದಲ್ಲಿ ಮಾಡಿದ ಕಾರಣ ಯೆಹೂದ್ಯರು ಯೇಸು ವನ್ನು ಹಿಂಸಿಸಿ ಆತನನ್ನು ಕೊಲ್ಲುವದಕ್ಕೆ ನೋಡಿದರು.

5:17b.JOH.005.017 ಆದರೆ ಯೇಸು ಅವರಿಗೆ--ನನ್ನ ತಂದೆಯು ಈ ವರೆಗೂ ಕೆಲಸ ಮಾಡುತ್ತಾನೆ ಮತ್ತು ನಾನೂ ಕೆಲಸ ಮಾಡುತ್ತೇನೆ ಅಂದನು.

5:18b.JOH.005.018 ಆದದರಿಂದ ಆತನು ಸಬ್ಬತ್ತನ್ನು ವಿಾರಿದ್ದು ಮಾತ್ರವಲ್ಲದೆ ದೇವರನ್ನು ತನ್ನ ಸ್ವಂತ ತಂದೆ ಎಂದು ಕರೆದು ತನ್ನನ್ನು ದೇವರಿಗೆ ಸಮಾನ ಮಾಡಿಕೊಂಡ ಕಾರಣ ಯೆಹೂದ್ಯರು ಆತನನ್ನು ಕೊಲ್ಲುವದಕ್ಕೆ ಇನ್ನಷ್ಟು ಪ್ರಯತ್ನ ಮಾಡಿದರು.

5:19b.JOH.005.019 ಆಗ ಯೇಸು ಪ್ರತ್ಯುತ್ತರವಾಗಿ ಅವರಿಗೆ-- ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ತಂದೆಯು ಮಾಡುವದನ್ನು ಕಂಡದ್ದನ್ನಲ್ಲದೆ ಮಗನು ತನ್ನಷ್ಟಕ್ಕೆ ತಾನೇ ಯಾವದನ್ನೂ ಮಾಡಲಾರನು; ಆತನು ಮಾಡುವದನ್ನೆಲ್ಲಾ ಹಾಗೆಯೇ ಮಗನೂ ಮಾಡುವನು.

5:20b.JOH.005.020 ಯಾಕಂದರೆ ತಂದೆಯು ಮಗನನ್ನು ಪ್ರೀತಿಸಿ ತಾನು ಸ್ವತಃ ಮಾಡುವವುಗಳನ್ನೆಲ್ಲಾ ಮಗನಿಗೆ ತೋರಿಸುತ್ತಾನೆ; ನೀವು ಆಶ್ಚರ್ಯಪಡುವ ಹಾಗೆ ಇವುಗಳಿಗಿಂತ ಮಹತ್ತಾದ ಕೆಲಸಗಳನ್ನು ಆತನಿಗೆ ತೋರಿಸುವನು.

5:21b.JOH.005.021 ತಂದೆಯು ಹೇಗೆ ಸತ್ತವರನ್ನು ಎಬ್ಬಿಸಿ ಬದುಕಿಸುತ್ತಾನೋ ಹಾಗೆಯೇ ಮಗನೂ ತನಗೆ ಇಷ್ಟವಿರು ವವರನ್ನು ಬದುಕಿಸುತ್ತಾನೆ.

5:22b.JOH.005.022 ಇದಲ್ಲದೆ ತಂದೆಯು ಯಾರಿಗೂ ತೀರ್ಪು ಮಾಡುವದಿಲ್ಲ;

5:23b.JOH.005.023 ಆದರೆ ಎಲ್ಲರೂ ತಂದೆಗೆ ಮಾನಕೊಡುವ ಪ್ರಕಾರವೇ ಮಗನಿಗೂ ಮಾನ ಕೊಡಬೇಕೆಂದು ತೀರ್ಪು ಮಾಡು ವದನ್ನೆಲ್ಲಾ ಮಗನಿಗೆ ಒಪ್ಪಿಸಿದ್ದಾನೆ. ಮಗನಿಗೆ ಮಾನ ಕೊಡದವನು ಆತನನ್ನು ಕಳುಹಿಸಿದ ತಂದೆಗೂ ಮಾನ ಕೊಡದವನಾಗಿದ್ದಾನೆ.

5:24b.JOH.005.024 ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನ ವಾಕ್ಯವನ್ನು ಕೇಳಿ ನನ್ನನ್ನು ಕಳುಹಿಸಿ ದಾತನನ್ನು ನಂಬುವವನು ನಿತ್ಯಜೀವವನ್ನು ಹೊಂದಿ ದ್ದಾನೆ. ಅವನು ತೀರ್ಪಿಗೆ ಗುರಿಯಾಗುವದಿಲ್ಲ; ಆದರೆ ಮರಣದಿಂದ ಜೀವಕ್ಕೆ ದಾಟಿದ್ದಾನೆ.

5:25b.JOH.005.025 ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಸತ್ತವರು ದೇವಕುಮಾರನ ಧ್ವನಿಯನ್ನು ಕೇಳುವ ಗಳಿಗೆ ಬರುತ್ತದೆ; ಅದು ಈಗಲೇ ಬಂದಿದೆ; ಕೇಳುವವರು ಬದುಕುವರು.

5:26b.JOH.005.026 ತಂದೆಯು ಹೇಗೆ ಸ್ವತಃ ಜೀವವುಳ್ಳವನಾಗಿದ್ದಾನೋ ಹಾಗೆಯೇ ಮಗನೂ ಸ್ವತಃ ಜೀವವುಳ್ಳವನಾಗಿರುವಂತೆ ಆತನು ಅನುಗ್ರಹಿಸಿದ್ದಾನೆ.

5:27b.JOH.005.027 ಆತನು ಮನುಷ್ಯಕುಮಾರ ನಾಗಿರುವದರಿಂದ ನ್ಯಾಯತೀರಿಸುವ ಅಧಿಕಾರವನ್ನು ಸಹ ಆತನಿಗೆ ಕೊಟ್ಟಿದ್ದಾನೆ.

5:28b.JOH.005.028 ಇದಕ್ಕೆ ಆಶ್ಚರ್ಯಪಡ ಬೇಡಿರಿ; ಒಂದು ಕಾಲ ಬರುತ್ತದೆ; ಆಗ ಸಮಾಧಿಗಳಲ್ಲಿ ರುವವರೆಲ್ಲರೂ ಆತನ ಧ್ವನಿಯನ್ನು ಕೇಳಿ ಹೊರಗೆ ಬರುವರು,

5:29b.JOH.005.029 ಒಳ್ಳೇದನ್ನು ಮಾಡಿದವರು ಜೀವದ ಪುನರುತ್ಥಾನವನ್ನೂ ಕೆಟ್ಟದ್ದನ್ನು ಮಾಡಿದವರು ತೀರ್ಪಿನ ಪುನರುತ್ಥಾನವನ್ನೂ ಹೊಂದುವರು.

5:30b.JOH.005.030 ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆನು; ನಾನು ಕೇಳುವಂತೆಯೇ ತೀರ್ಪು ಮಾಡುತ್ತೇನೆ ಮತ್ತು ನನ್ನ ತೀರ್ಪು ನ್ಯಾಯ ವಾದದ್ದು; ಯಾಕಂದರೆ ನಾನು ನನ್ನ ಸ್ವಂತಚಿತ್ತವನ್ನಲ್ಲ, ಆದರೆ ನನ್ನನ್ನು ಕಳುಹಿಸಿದ ತಂದೆಯ ಚಿತ್ತವು ನೆರವೇರ ಬೇಕೆಂದು ಅಪೆಕ್ಷಿಸುತ್ತೇನೆ.

5:31b.JOH.005.031 ನನ್ನನ್ನು ಕುರಿತು ನಾನೇ ಸಾಕ್ಷಿ ಹೇಳುವದಾದರೆ ನನ್ನ ಸಾಕ್ಷಿಯು ನಿಜವಾದದ್ದಲ್ಲ.

5:32b.JOH.005.032 ನನ್ನನ್ನು ಕುರಿತು ಸಾಕ್ಷಿಕೊಡುವಾತನು ಬೇರೊಬ್ಬನಿ ದ್ದಾನೆ; ಆತನು ನನ್ನ ವಿಷಯದಲ್ಲಿ ಕೊಡುವ ಸಾಕ್ಷಿಯು ನಿಜವೆಂದು ನಾನು ಬಲ್ಲೆನು.

5:33b.JOH.005.033 ನೀವು ಯೋಹಾನನ ಬಳಿಗೆ ಕಳುಹಿಸಿದಿರಿ; ಅವನು ಸತ್ಯಕ್ಕೆ ಸಾಕ್ಷಿಕೊಟ್ಟನು.

5:34b.JOH.005.034 ನಾನು ಮನುಷ್ಯನಿಂದ ಸಾಕ್ಷಿ ಅಂಗೀಕರಿಸುವದಿಲ್ಲ; ಆದರೆ ನೀವು ರಕ್ಷಣೆ ಹೊಂದುವಂತೆ ನಾನು ಇವು ಗಳನ್ನು ಹೇಳುತ್ತೇನೆ.

5:35b.JOH.005.035 ಅವನು ಉರಿದು ಪ್ರಕಾಶಿಸುವ ದೀಪವಾಗಿದ್ದನು; ನೀವು ಸ್ವಲ್ಪಕಾಲ ಅವನ ಬೆಳಕಿನಲ್ಲಿ ಸಂತೋಷಿಸುವದಕ್ಕೆ ಮನಸ್ಸುಳ್ಳವರಾಗಿದ್ದೀರಿ;

5:36b.JOH.005.036 ಆದರೆ ಯೋಹಾನನಿಗಿಂತಲೂ ಹೆಚ್ಚಿನ ಸಾಕ್ಷಿ ನನಗುಂಟು; ಹೇಗೆಂದರೆ ಪೂರೈಸುವದಕ್ಕಾಗಿ ತಂದೆಯು ನನಗೆ ಕೊಟ್ಟ ಕೆಲಸಗಳು ಅಂದರೆ ನಾನು ಮಾಡುತ್ತಿರುವ ಈ ಕೆಲಸಗಳೇ ತಂದೆಯು ನನ್ನನ್ನು ಕಳುಹಿಸಿದ್ದಾನೆಂದು ನನ್ನ ವಿಷಯವಾಗಿ ಸಾಕ್ಷಿ ಕೊಡುತ್ತವೆ.

5:37b.JOH.005.037 ನನ್ನನ್ನು ಕಳುಹಿಸಿದ ತಂದೆಯು ತಾನೇ ನನ್ನ ವಿಷಯದಲ್ಲಿ ಸಾಕ್ಷಿ ಹೇಳಿದ್ದಾನೆ; ನೀವು ಎಂದಾದರೂ ಆತನ ಧ್ವನಿಯನ್ನು ಕೇಳಲಿಲ್ಲ ಇಲ್ಲವೆ ಆತನ ರೂಪವನ್ನು ನೋಡಲಿಲ್ಲ.

5:38b.JOH.005.038 ಆತನ ವಾಕ್ಯವು ನಿಮ್ಮಲ್ಲಿ ನೆಲೆಯಾಗಿರುವದಿಲ್ಲ; ಯಾಕಂದರೆ ಆತನು ಕಳುಹಿಸಿದಾತನನ್ನು ನೀವು ನಂಬು ವದಿಲ್ಲ.

5:39b.JOH.005.039 ಬರಹಗಳನ್ನು ಪರಿಶೋಧಿಸಿರಿ; ಅವುಗಳಲ್ಲಿ ನಿಮಗೆ ನಿತ್ಯಜೀವ ಉಂಟೆಂದು ನೀವು ನೆನಸುತ್ತೀರಲ್ಲಾ; ಅವುಗಳೇ ನನ್ನ ವಿಷಯವಾಗಿ ಸಾಕ್ಷಿಕೊಡುವವುಗಳಾ ಗಿವೆ.

5:40b.JOH.005.040 ಆದರೆ ನೀವು ಜೀವವನ್ನು ಹೊಂದುವಂತೆ ನನ್ನ ಬಳಿಗೆ ಬರುವದಿಲ್ಲ.

5:41b.JOH.005.041 ನಾನು ಮನುಷ್ಯರಿಂದ ಮಾನವನ್ನು ಅಂಗೀಕರಿ ಸುವದಿಲ್ಲ.

5:42b.JOH.005.042 ಆದರೆ ನಾನು ನಿಮ್ಮನ್ನು ಬಲ್ಲೆನು, ನಿಮ್ಮಲ್ಲಿ ದೇವರ ಪ್ರೀತಿ ಇಲ್ಲ.

5:43b.JOH.005.043 ನಾನು ನನ್ನ ತಂದೆಯ ಹೆಸರಿನಲ್ಲಿ ಬಂದಿದ್ದೇನೆ, ನೀವು ನನ್ನನ್ನು ಅಂಗೀಕರಿ ಸುವದಿಲ್ಲ; ಮತ್ತೊಬ್ಬನು ತನ್ನ ಸ್ವಂತ ಹೆಸರಿನಲ್ಲಿ ಬಂದರೆ ನೀವು ಅವನನ್ನು ಅಂಗೀಕರಿಸುವಿರಿ.

5:44b.JOH.005.044 ದೇವರಿಂದ ಮಾತ್ರ ಬರುವ ಮಾನವನ್ನು ಹುಡುಕದೆ ಒಬ್ಬರಿಂದೊ ಬ್ಬರಿಗೆ ಬರುವ ಮಾನವನ್ನು ಹೊಂದುವ ನೀವು ಹೇಗೆ ನಂಬೀರಿ?

5:45b.JOH.005.045 ತಂದೆಯ ಮುಂದೆ ನಿಮ್ಮ ಮೇಲೆ ನಾನು ತಪ್ಪು ಹೊರಿಸುವೆನೆಂದು ನೀವು ನೆನಸಬೇಡಿರಿ; ಆದರೆ ನೀವು ನಂಬಿರುವ ಮೋಶೆಯೇ ನಿಮ್ಮ ಮೇಲೆ ತಪ್ಪು ಹೊರಿಸುತ್ತಾನೆ.

5:46b.JOH.005.046 ನೀವು ಮೋಶೆಯನ್ನು ನಂಬಿದ್ದರೆ ನನ್ನನ್ನೂ ನಂಬುತ್ತಿದ್ದಿರಿ; ಯಾಕಂದರೆ ಅವನು ನನ್ನ ವಿಷಯವಾಗಿ ಬರೆದನು.ಅವನು ಬರೆದದ್ದನ್ನು ನೀವು ನಂಬದಿದ್ದರೆ ನನ್ನ ಮಾತುಗಳನ್ನು ಹೇಗೆ ನಂಬಿರಿ ಅಂದನು.

5:47b.JOH.005.047 ಅವನು ಬರೆದದ್ದನ್ನು ನೀವು ನಂಬದಿದ್ದರೆ ನನ್ನ ಮಾತುಗಳನ್ನು ಹೇಗೆ ನಂಬಿರಿ ಅಂದನು.

6

6:1b.JOH.006.001 ಇವುಗಳಾದ ಮೇಲೆ ಯೇಸು ತಿಬೇರಿ ಯವೆಂಬ ಗಲಿಲಾಯ ಸಮುದ್ರದ ಆಚೆಗೆ ಹೋದನು.

6:2b.JOH.006.002 ಆಗ ಆತನು ರೋಗಿಗಳಲ್ಲಿ ನಡಿಸಿದ ಆತನ ಅದ್ಭುತ ಕಾರ್ಯಗಳನ್ನು ನೋಡಿದ ಜನರ ದೊಡ್ಡ ಸಮೂಹವು ಆತನನ್ನು ಹಿಂಬಾಲಿಸುತ್ತಿತ್ತು.

6:3b.JOH.006.003 ಯೇಸು ಬೆಟ್ಟವನ್ನೇರಿ ಅಲ್ಲಿ ತನ್ನ ಶಿಷ್ಯರೊಂದಿಗೆ ಕೂತು ಕೊಂಡನು.

6:4b.JOH.006.004 ಆಗ ಯೆಹೂದ್ಯರ ಪಸ್ಕ ಹಬ್ಬವು ಸವಿಾಪವಾಗಿತ್ತು.

6:5b.JOH.006.005 ಜನರ ದೊಡ್ಡ ಗುಂಪು ತನ್ನ ಕಡೆಗೆ ಬರುವದನ್ನು ಯೇಸು ಕಣ್ಣೆತ್ತಿ ನೋಡಿ ಫಿಲಿಪ್ಪ ನಿಗೆ--ಇವರು ಊಟ ಮಾಡುವಂತೆ ನಾವು ರೊಟ್ಟಿ ಯನ್ನು ಎಲ್ಲಿಂದ ಕೊಂಡು ತರೋಣ ಅಂದನು.

6:6b.JOH.006.006 ಅವ ನನ್ನು ಪರೀಕ್ಷಿಸುವದಕ್ಕಾಗಿ ಆತನು ಇದನ್ನು ಹೇಳಿದನು; ಯಾಕಂದರೆ ತಾನು ಮಾಡಬೇಕೆಂದಿದ್ದದ್ದು ಆತನು ತಾನೇ ತಿಳಿದವನಾಗಿದ್ದನು.

6:7b.JOH.006.007 ಫಿಲಿಪ್ಪನು ಪ್ರತ್ಯುತ್ತರ ವಾಗಿ ಆತನಿಗೆ--ಇವರಲ್ಲಿ ಪ್ರತಿಯೊಬ್ಬನು ಸ್ವಲ್ಪ ಸ್ವಲ್ಪ ತಿಂದರೂ ಇನ್ನೂರು ಹಣಗಳಷ್ಟು ರೊಟ್ಟಿಗಳು ಅವ ರಿಗೆ ಸಾಲುವದಿಲ್ಲ ಅಂದನು.

6:8b.JOH.006.008 ಆಗ ಆತನ ಶಿಷ್ಯರಲ್ಲಿ ಒಬ್ಬನಾಗಿರುವ ಸೀಮೋನ್‌ ಪೇತ್ರನ ಸಹೋದರನಾದ ಅಂದ್ರೆಯನು ಆತನಿಗೆ--

6:9b.JOH.006.009 ಇಲ್ಲಿ ಒಬ್ಬ ಹುಡುಗನಿ ದ್ದಾನೆ; ಅವನಲ್ಲಿ ಐದು ಜವೆಗೋದಿಯ ರೊಟ್ಟಿಗಳೂ ಎರಡು ಸಣ್ಣ ವಿಾನುಗಳೂ ಅವೆ; ಆದರೆ ಇಷ್ಟೊಂದು ಜನರಿಗೆ ಅವು ಯಾತಕ್ಕಾದಾವು ಅಂದನು.

6:10b.JOH.006.010 ಆಗ ಯೇಸು--ಜನರನ್ನು ಕೂಡ್ರಿಸಿರಿ ಅಂದನು. ಆ ಸ್ಥಳ ದಲ್ಲಿ ಬಹಳ ಹುಲ್ಲು ಇರಲಾಗಿ ಜನರೆಲ್ಲರು ಕುಳಿತು ಕೊಂಡರು ಅವರಲ್ಲಿ ಸುಮಾರು ಐದು ಸಾವಿರ ಪುರುಷರೇ ಇದ್ದರು.

6:11b.JOH.006.011 ತರುವಾಯ ಯೇಸು ರೊಟ್ಟಿ ಗಳನ್ನು ತೆಗೆದುಕೊಂಡು ಸ್ತೋತ್ರಮಾಡಿ ಶಿಷ್ಯರಿಗೆ ಹಂಚಿದನು; ಅವರು ಕುಳಿತುಕೊಂಡವರಿಗೆ ಹಂಚಿ ದರು; ಅದೇ ರೀತಿಯಲ್ಲಿ ವಿಾನುಗಳನ್ನು ಅವರಿಗೆ ಬೇಕಾದಷ್ಟು ಹಂಚಿದರು.

6:12b.JOH.006.012 ಅವರಿಗೆ ತೃಪ್ತಿಯಾದ ಮೇಲೆ ಯೇಸು ತನ್ನ ಶಿಷ್ಯರಿಗೆ--ಏನೂ ನಷ್ಟವಾಗ ದಂತೆ ಮಿಕ್ಕಿದ ತುಂಡುಗಳನ್ನು ಕೂಡಿಸಿರಿ ಅಂದನು.

6:13b.JOH.006.013 ಆದದರಿಂದ ಅವರು ಐದು ಜವೆಗೋದಿಯ ರೊಟ್ಟಿಗಳಲ್ಲಿ ತಿಂದವರಿಂದ ಮಿಕ್ಕಿದ ತುಂಡುಗಳನ್ನು ಕೂಡಿಸಿ ಹನ್ನೆರಡು ಪುಟ್ಟಿಗಳಲ್ಲಿ ತುಂಬಿದರು.

6:14b.JOH.006.014 ಬಳಿಕ ಆ ಜನರು ಯೇಸು ಮಾಡಿದ ಅದ್ಭುತ ಕಾರ್ಯವನ್ನು ನೋಡಿ--ನಿಜವಾಗಿಯೂ ಲೋಕಕ್ಕೆ ಬರಬೇಕಾಗಿದ್ದ ಆ ಪ್ರವಾದಿಯು ಈತನೇ ಅಂದರು.

6:15b.JOH.006.015 ಆದದರಿಂದ ಅವರು ಬಂದು ತನ್ನನ್ನು ಒತ್ತಾಯ ದಿಂದ ತೆಗೆದುಕೊಂಡು ಹೋಗಿ ಅರಸನನ್ನಾಗಿ ಮಾಡ ಬೇಕೆಂದಿದ್ದಾರೆಂದು ಯೇಸು ತಿಳಿದು ಅಲ್ಲಿಂದ ತಿರಿಗಿ ತಾನೊಬ್ಬನೇ ಒಂಟಿಗನಾಗಿ ಒಂದು ಬೆಟ್ಟಕ್ಕೆ ಹೊರಟು ಹೋದನು.

6:16b.JOH.006.016 ಸಾಯಂಕಾಲವಾದಾಗ ಆತನ ಶಿಷ್ಯರು ಸಮುದ್ರಕ್ಕೆ ಹೊರಟುಹೋಗಿ

6:17b.JOH.006.017 ದೋಣಿಯನ್ನು ಹತ್ತಿ ಸಮುದ್ರಮಾರ್ಗವಾಗಿ ಕಪೆರ್ನೌಮಿಗೆ ಹೋಗುತ್ತಿ ದ್ದರು. ಆಗಲೇ ಕತ್ತಲಾಗಿತ್ತು , ಯೇಸು ಅವರ ಬಳಿಗೆ ಬಂದಿರಲಿಲ್ಲ.

6:18b.JOH.006.018 ಆಗ ಬಲವಾದ ಗಾಳಿಯು ಬೀಸಿದ್ದ ರಿಂದ ಸಮುದ್ರವು ಅಲ್ಲಕಲ್ಲೋಲವಾಯಿತು.

6:19b.JOH.006.019 ಹೀಗೆ ಅವರು ಹುಟ್ಟು ಹಾಕುತ್ತಾ ಒಂದು ಹರದಾರಿಯಷ್ಟು ದೂರ ಹೋದ ಮೇಲೆ ಯೇಸು ಸಮುದ್ರದ ಮೇಲೆ ನಡೆದು ತಮ್ಮ ದೋಣಿಯ ಕಡೆಗೆ ಸವಿಾಪಿಸುತ್ತಿರು ವದನ್ನು ಅವರು ಕಂಡು ಭಯಪಟ್ಟರು.

6:20b.JOH.006.020 ಆದರೆ ಆತನು ಅವರಿಗೆ--ನಾನೇ, ಭಯಪಡಬೇಡಿರಿ ಅಂದನು.

6:21b.JOH.006.021 ಆಗ ಅವರು ಮನಃಪೂರ್ವಕವಾಗಿ ಆತನನ್ನು ದೋಣಿಯಲ್ಲಿ ಸೇರಿಸಿಕೊಂಡರು; ಕೂಡಲೆ ದೋಣಿಯು ಅವರು ಹೋಗುವದಕ್ಕಿದ್ದ ದಡಕ್ಕೆ ಸೇರಿತು.

6:22b.JOH.006.022 ಆತನ ಶಿಷ್ಯರು ಹತ್ತಿದ ಒಂದೇ ದೋಣಿಯ ಹೊರತು ಮತ್ತೊಂದು ಅಲ್ಲಿ ಇರಲಿಲ್ಲವೆಂದೂ ಆತನ ಶಿಷ್ಯರು ಮಾತ್ರ ಹೋದರೆಂದೂ ಯೇಸು ತನ್ನ ಶಿಷ್ಯರ ಸಂಗಡ ದೋಣಿಯಲ್ಲಿ ಹೋಗಲಿಲ್ಲವೆಂದೂ ಮರು ದಿನ ಸಮುದ್ರದ ಆಚೆಯಲ್ಲಿ ನಿಂತಿದ್ದ ಜನರು ನೋಡಿ ದ್ದರು.

6:23b.JOH.006.023 (ಆದಾಗ್ಯೂ ಕರ್ತನು ಸ್ತೋತ್ರ ಮಾಡಿದ ನಂತರ ಅವರು ರೊಟ್ಟಿಯನ್ನು ತಿಂದ ಸ್ಥಳದ ಸವಿಾಪಕ್ಕೆ ತಿಬೇರಿಯದಿಂದ ಬೇರೆ ದೋಣಿಗಳು ಬಂದವು).

6:24b.JOH.006.024 ಆಗ ಯೇಸು ಮತ್ತು ಆತನ ಶಿಷ್ಯರು ಅಲ್ಲಿ ಇಲ್ಲದಿರುವದನ್ನು ಜನರು ನೋಡಿ ಅವರು ಸಹ ದೋಣಿಗಳಲ್ಲಿ ಹತ್ತಿ ಯೇಸುವನ್ನು ಹುಡುಕುತ್ತಾ ಕಪೆರ್ನೌಮಿಗೆ ಬಂದರು.

6:25b.JOH.006.025 ಅವರು ಆತನನ್ನು ಸಮು ದ್ರದ ಆಚೇಕಡೆಯಲ್ಲಿ ಕಂಡು ಆತನಿಗೆ--ರಬ್ಬಿಯೇ, ನೀನು ಇಲ್ಲಿಗೆ ಯಾವಾಗ ಬಂದಿ ಅಂದರು.

6:26b.JOH.006.026 ಯೇಸು ಪ್ರತ್ಯುತ್ತರವಾಗಿ ಅವರಿಗೆ--ನಾನು ನಿಮಗೆ ನಿಜನಿಜ ವಾಗಿ ಹೇಳುತ್ತೇನೆ, ನೀವು ನನ್ನನ್ನು ಹುಡುಕುವದು ಅದ್ಭುತಕಾರ್ಯಗಳನ್ನು ನೋಡಿದ್ದರಿಂದಲ್ಲ, ಆದರೆ ರೊಟ್ಟಿಗಳನ್ನು ತಿಂದು ತೃಪ್ತಿ ಹೊಂದಿದ್ದರಿಂದಲೇ.

6:27b.JOH.006.027 ನಾಶವಾಗುವ ಆಹಾರಕ್ಕಾಗಿ ಅಲ್ಲ, ನಿತ್ಯಜೀವ ವನ್ನುಂಟು ಮಾಡುವ ಆಹಾರಕ್ಕೋಸ್ಕರ ದುಡಿಯಿರಿ; ಅದನ್ನು ಮನುಷ್ಯಕುಮಾರನು ನಿಮಗೆ ಕೊಡುವನು; ತಂದೆಯಾದ ದೇವರು (ಇದಕ್ಕಾಗಿ) ಆತನಿಗೆ ಮುದ್ರೆ ಹಾಕಿದ್ದಾನೆ ಅಂದನು.

6:28b.JOH.006.028 ಆಗ ಅವರು ಆತನಿಗೆ--ನಾವು ದೇವರ ಕ್ರಿಯೆ ಗಳನ್ನು ಮಾಡುವಂತೆ ಏನು ಮಾಡಬೇಕು ಎಂದು ಕೇಳಿದ್ದಕ್ಕೆ

6:29b.JOH.006.029 ಯೇಸು ಪ್ರತ್ಯುತ್ತರವಾಗಿ ಅವರಿಗೆ--ದೇವರಕ್ರಿಯೆ ಯಾವದಂದರೆ, ಆತನು ಕಳುಹಿಸಿ ಕೊಟ್ಟಾತನನ್ನು ನೀವು ನಂಬುವದೇ ಅಂದನು.

6:30b.JOH.006.030 ಅದಕ್ಕೆ ಅವರು ಆತನಿಗೆ--ಹಾಗಾದರೆ ನಾವು ನೋಡಿ ನಿನ್ನನ್ನು ನಂಬುವಂತೆ ಯಾವ ಸೂಚಕ ಕಾರ್ಯವನ್ನು ನಮಗೆ ತೋರಿಸುತ್ತೀ? ನೀನು ಯಾವ ಕ್ರಿಯೆಯನ್ನು ಮಾಡುತ್ತೀ?

6:31b.JOH.006.031 ತಿನ್ನುವದಕ್ಕಾಗಿ ಆತನು ಅವರಿಗೆ ಪರಲೋಕದಿಂದ ರೊಟ್ಟಿಯನ್ನು ಕೊಟ್ಟನು ಎಂದು ಬರೆದಿರುವ ಪ್ರಕಾರ ನಮ್ಮ ಪಿತೃಗಳು ಅಡವಿ ಯಲ್ಲಿ ಮನ್ನಾ ತಿಂದರು ಎಂದು ಹೇಳಿದರು.

6:32b.JOH.006.032 ಆಗ ಯೇಸು ಅವರಿಗೆ--ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ. ಮೋಶೆಯು ನಿಮಗೆ ಪರಲೋಕದಿಂದ ರೊಟ್ಟಿ ಕೊಡಲಿಲ್ಲ; ಆದರೆ ನನ್ನ ತಂದೆಯು ನಿಮಗೆ ನಿಜವಾದ ರೊಟ್ಟಿಯನ್ನು ಪರಲೋಕದಿಂದ ಕೊಡು ತ್ತಾನೆ.

6:33b.JOH.006.033 ಪರಲೋಕದಿಂದ ಕೆಳಗೆ ಬಂದು ಲೋಕಕ್ಕೆ ಜೀವವನ್ನು ಕೊಡುವಾತನೇ ದೇವರ ರೊಟ್ಟಿಯಾಗಿದ್ದಾನೆ ಅಂದನು.

6:34b.JOH.006.034 ಅದಕ್ಕವರು ಆತನಿಗೆ--ಕರ್ತನೇ, ಈ ರೊಟ್ಟಿಯನ್ನು ನಮಗೆ ಯಾವಾಗಲೂ ಕೊಡು ಅಂದರು.

6:35b.JOH.006.035 ಅದಕ್ಕೆ ಯೇಸು ಅವರಿಗೆ--ನಾನೇ ಆ ಜೀವದ ರೊಟ್ಟಿ; ನನ್ನ ಬಳಿಗೆ ಬರುವವನಿಗೆ ಎಂದಿಗೂ ಹಸಿವೆಯಾಗುವದಿಲ್ಲ ಮತ್ತು ನನ್ನ ಮೇಲೆ ನಂಬಿಕೆ ಇಡುವವನಿಗೆ ಎಂದಿಗೂ ನೀರಡಿಕೆಯಾಗುವದಿಲ್ಲ.

6:36b.JOH.006.036 ಆದರೆ--ನೀವು ನನ್ನನ್ನು ನೋಡಿಯೂ ನಂಬಲಿಲ್ಲ ಎಂದು ನಾನು ನಿಮಗೆ ಹೇಳಿದೆನು.

6:37b.JOH.006.037 ತಂದೆಯು ನನಗೆ ಕೊಡುವಂಥವರೆಲ್ಲರೂ ನನ್ನ ಬಳಿಗೆ ಬರು ವರು; ನನ್ನ ಬಳಿಗೆ ಬರುವವನನ್ನು ನಾನು ಹೊರಗೆ ತಳ್ಳಿಬಿಡುವದೇ ಇಲ್ಲ.

6:38b.JOH.006.038 ನಾನು ನನ್ನ ಸ್ವಂತ ಚಿತ್ತವನ್ನಲ್ಲ; ಆದರೆ ನನ್ನನ್ನು ಕಳುಹಿಸಿದಾತನ ಚಿತ್ತವನ್ನೇ ಮಾಡುವದಕ್ಕೆ ಪರಲೋಕದಿಂದ ಬಂದೆನು.

6:39b.JOH.006.039 ನನ್ನನ್ನು ಕಳುಹಿಸಿದ ತಂದೆಯ ಚಿತ್ತವೇನಂದರೆ, ಆತನು ನನಗೆ ಕೊಟ್ಟವರಲ್ಲಿ ನಾನು ಒಬ್ಬನನ್ನೂ ಕಳಕೊಳ್ಳದೆ ಕಡೇ ದಿನದಲ್ಲಿ ಅವನನ್ನು ತಿರಿಗಿ ಎಬ್ಬಿಸುವದೇ.

6:40b.JOH.006.040 ನನ್ನನ್ನು ಕಳುಹಿಸದಾತನ ಚಿತ್ತವೇನಂದರೆ, ಮಗನನ್ನು ನೋಡಿ ಆತನ ಮೇಲೆ ನಂಬಿಕೆ ಇಡುವ ಪ್ರತಿಯೊಬ್ಬನು ನಿತ್ಯ ಜೀವವನ್ನು ಹೊಂದುವದೇ; ನಾನು ಅವನನ್ನು ಕಡೇ ದಿನದಲ್ಲಿ ಎಬ್ಬಿಸುವೆನು ಎಂದು ಹೇಳಿದನು.

6:41b.JOH.006.041 ಪರಲೋಕದಿಂದ ಇಳಿದು ಬಂದ ರೊಟ್ಟಿ ನಾನೇ ಎಂದು ಆತನು ಹೇಳಿದ್ದಕ್ಕೆ ಯೆಹೂದ್ಯರು ಆತನ ವಿಷಯವಾಗಿ ಗುಣುಗುಟ್ಟಿ--

6:42b.JOH.006.042 ಇವನು ಯೋಸೇಫನ ಮಗನಾದ ಯೇಸು ಅಲ್ಲವೇ? ಇವನ ತಂದೆ ತಾಯಿ ಗಳನ್ನು ನಾವು ಬಲ್ಲೆವಲ್ಲವೇ? ಹಾಗಾದರೆ--ನಾನು ಪರಲೋಕದಿಂದ ಇಳಿದು ಬಂದೆನು ಎಂದು ಇವನು ಹೇಳುವದು ಹೇಗೆ ಅಂದರು.

6:43b.JOH.006.043 ಯೇಸು ಪ್ರತ್ಯುತ್ತರ ವಾಗಿ ಅವರಿಗೆ--ನಿಮ್ಮ ನಿಮ್ಮೊಳಗೆ ಗುಣುಗುಟ್ಟ ಬೇಡಿರಿ.

6:44b.JOH.006.044 ನನ್ನನ್ನು ಕಳುಹಿಸಿದ ತಂದೆಯು ಎಳೆಯದ ಹೊರತು ಯಾವನೂ ನನ್ನ ಬಳಿಗೆ ಬರಲಾರನು. ನಾನು ಅವನನ್ನು ಕಡೇ ದಿನದಲ್ಲಿ ಎಬ್ಬಿಸುವೆನು.

6:45b.JOH.006.045 ಅವರೆಲ್ಲರು ದೇವರಿಂದ ಬೋಧಿಸಲ್ಪಡುವರೆಂದು ಪ್ರವಾದನೆಗಳಲ್ಲಿ ಬರೆಯಲ್ಪಟ್ಟಿದೆ. ಆದಕಾರಣ ತಂದೆಯಿಂದ ಕೇಳಿ ಕಲಿತ ಪ್ರತಿಯೊಬ್ಬ ಮನುಷ್ಯನು ನನ್ನ ಬಳಿಗೆ ಬರುತ್ತಾನೆ.

6:46b.JOH.006.046 ದೇವರಿಗೆ ಸಂಬಂಧಪಟ್ಟ ವನೇ ತಂದೆಯನ್ನು ನೋಡಿದ್ದಾನೆ ಹೊರತು ಬೇರೆ ಯಾವನೂ ತಂದೆಯನ್ನು ನೋಡಲಿಲ್ಲ.

6:47b.JOH.006.047 ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ--ನನ್ನ ಮೇಲೆ ನಂಬಿಕೆ ಇಡುವವನು ನಿತ್ಯಜೀವವನ್ನು ಹೊಂದಿದ್ದಾನೆ.

6:48b.JOH.006.048 ನಾನೇ ಆ ಜೀವದ ರೊಟ್ಟಿಯಾಗಿದ್ದೇನೆ.

6:49b.JOH.006.049 ನಿಮ್ಮ ಪಿತೃಗಳು ಅಡವಿಯಲ್ಲಿ ಮನ್ನಾ ತಿಂದಾಗ್ಯೂ ಸತ್ತು ಹೋದರು.

6:50b.JOH.006.050 ಮನುಷ್ಯನು ತಿಂದು ಸಾಯದೇ ಇರು ವಂತೆ ಪರಲೋಕದಿಂದ ಕೆಳಗೆ ಇಳಿದು ಬಂದ ರೊಟ್ಟಿ ಇದೇ.

6:51b.JOH.006.051 ಪರಲೋಕದಿಂದ ಇಳಿದುಬಂದ ಜೀವದ ರೊಟ್ಟಿಯು ನಾನೇ; ಈ ರೊಟ್ಟಿಯನ್ನು ಯಾವನಾದರೂ ತಿಂದರೆ ಅವನು ಎಂದೆಂದಿಗೂ ಬದುಕುವನು; ನಾನು ಕೊಡುವ ರೊಟ್ಟಿಯು ನನ್ನ ಮಾಂಸವೇ; ಅದನ್ನು ನಾನು ಲೋಕದ ಜೀವಕ್ಕಾಗಿ ಕೊಡುವೆನು ಅಂದನು.

6:52b.JOH.006.052 ಇದರಿಂದ ಯೆಹೂದ್ಯರು ತಮ್ಮತಮ್ಮೊಳಗೆ ವಾಗ್ವಾದ ಮಾಡುತ್ತಾ--ಈ ಮನುಷ್ಯನು ತನ್ನ ಮಾಂಸ ವನ್ನು ತಿನ್ನುವದಕ್ಕೆ ನಮಗೆ ಹೇಗೆ ಕೊಡುತ್ತಾನೆ ಅಂದರು.

6:53b.JOH.006.053 ಆಗ ಯೇಸು ಅವರಿಗೆ--ನಿಮಗೆ ನಿಜ ನಿಜವಾಗಿ ಹೇಳುತ್ತೇನೆ, ನೀವು ಮನುಷ್ಯಕುಮಾರನ ಮಾಂಸವನ್ನು ತಿಂದು ಆತನ ರಕ್ತವನ್ನು ಕುಡಿಯದ ಹೊರತು ನಿಮ್ಮೊಳಗೆ ಜೀವವಿಲ್ಲ.

6:54b.JOH.006.054 ಯಾವನು ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುತ್ತಾನೋ ಅವನು ನಿತ್ಯಜೀವವನ್ನು ಹೊಂದಿದ್ದಾನೆ; ನಾನು ಅವ ನನ್ನು ಕಡೇ ದಿನದಲ್ಲಿ ಎಬ್ಬಿಸುವೆನು.

6:55b.JOH.006.055 ಯಾಕಂದರೆ ನನ್ನ ಮಾಂಸವು ನಿಜವಾದ ಆಹಾರವೂ ನನ್ನ ರಕ್ತವು ನಿಜವಾದ ಪಾನವೂ ಆಗಿದೆ.

6:56b.JOH.006.056 ಯಾವನು ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುತ್ತಾನೋ ಅವನು ನನ್ನಲ್ಲಿ ವಾಸಿಸುತ್ತಾನೆ; ನಾನು ಅವನಲ್ಲಿ ವಾಸಿ ಸುತ್ತೇನೆ.

6:57b.JOH.006.057 ಜೀವವುಳ್ಳ ತಂದೆಯು ನನ್ನನ್ನು ಕಳುಹಿಸಿ ರಲಾಗಿ ನಾನು ತಂದೆಯ ಮೂಲಕ ಜೀವಿಸುವಂತೆಯೇ ನನ್ನನ್ನು ತಿನ್ನುವವನು ನನ್ನ ಮೂಲಕವಾಗಿಯೇ ಜೀವಿ ಸುವನು.

6:58b.JOH.006.058 ಪರಲೋಕದಿಂದ ಇಳಿದು ಬಂದ ರೊಟ್ಟಿಯು ಇದೆ; ನಿಮ್ಮ ಪಿತೃಗಳು ಮನ್ನಾ ತಿಂದಾಗ್ಯೂ ಸತ್ತುಹೋದಂತೆ ಅಲ್ಲ; ಆದರೆ ಈ ರೊಟ್ಟಿಯನ್ನು ತಿನ್ನುವವನು ಎಂದೆಂದಿಗೂ ಜೀವಿಸುವನು ಅಂದನು.

6:59b.JOH.006.059 ಕಪೆರ್ನೌಮಿನಲ್ಲಿ ಬೋಧಿಸುತ್ತಿರುವಾಗ ಸಭಾ ಮಂದಿರದಲ್ಲಿ ಆತನು ಇವುಗಳನ್ನು ಹೇಳಿದನು.

6:60b.JOH.006.060 ಆದದರಿಂದ ಆತನ ಶಿಷ್ಯರಲ್ಲಿ ಅನೇಕರು ಇದನ್ನು ಕೇಳಿ--ಇದು ಕಠಿಣವಾದ ಮಾತು; ಇದನ್ನು ಯಾರು ಕೇಳಾರು ಅಂದರು.

6:61b.JOH.006.061 ತನ್ನ ಶಿಷ್ಯರೂ ಇದಕ್ಕೆ ಗುಣು ಗುಟ್ಟುತ್ತಾರೆಂದು ಯೇಸು ತನ್ನಲ್ಲಿ ತಿಳಿದುಕೊಂಡು ಅವರಿಗೆ--ಇದು ನಿಮಗೆ ಅಭ್ಯಂತರವಾಯಿತೋ?

6:62b.JOH.006.062 ಹಾಗಾದರೆ ಮನುಷ್ಯಕುಮಾರನು ತಾನು ಮೊದಲು ಇದ್ದಲ್ಲಿಗೆ ಏರಿಹೋಗುವದನ್ನು ನೀವು ನೋಡಿದರೆ ಏನನ್ನುವಿರಿ?

6:63b.JOH.006.063 ಬದುಕಿಸುವಂಥದ್ದು ಆತ್ಮವೇ; ಮಾಂಸವು ಯಾವದಕ್ಕೂ ಪ್ರಯೋಜನವಾಗುವದಿಲ್ಲ; ನಾನು ನಿಮಗೆ ಹೇಳುವ ಮಾತುಗಳೇ ಆತ್ಮವಾಗಿಯೂ ಜೀವವಾಗಿಯೂ ಇವೆ.

6:64b.JOH.006.064 ಆದರೆ ನಂಬದವರು ಕೆಲವರು ನಿಮ್ಮಲ್ಲಿ ಇದ್ದಾರೆ ಅಂದನು. ಯಾಕಂದರೆ ನಂಬದವರು ಯಾರೆಂದೂ ತನ್ನನ್ನು ಹಿಡುಕೊಡು ವವನು ಯಾರೆಂದೂ ಮೊದಲಿನಿಂದಲೇ ಯೇಸು ತಿಳಿದಿದ್ದನು.

6:65b.JOH.006.065 ಆತನು--ನನ್ನ ತಂದೆಯಿಂದ ಒಬ್ಬನಿಗೆ ಕೊಡಲ್ಪಟ್ಟ ಹೊರತು ಯಾವನೂ ನನ್ನ ಬಳಿಗೆ ಬರ ಲಾರನು; ಇದಕ್ಕೋಸ್ಕರವೇ ನಾನು ನಿಮಗೆ ಹೇಳಿದೆನು ಅಂದನು.

6:66b.JOH.006.066 ಅಂದಿನಿಂದ ಆತನ ಶಿಷ್ಯರಲ್ಲಿ ಅನೇಕರು ಹಿಂದಕ್ಕೆ ಹೊರಟುಹೋಗಿ ಮತ್ತೆ ಅವರು ಆತನ ಸಂಗಡ ಎಂದಿಗೂ ಸಂಚರಿಸಲೇ ಇಲ್ಲ.

6:67b.JOH.006.067 ಆಗ ಯೇಸು ಹನ್ನೆ ರಡು ಮಂದಿಗೆ--ನೀವು ಸಹ ಹೊರಟು ಹೋಗಬೇಕೆಂ ದಿದ್ದೀರೋ ಎಂದು ಕೇಳಲು

6:68b.JOH.006.068 ಸೀಮೋನ್‌ ಪೇತ್ರನು ಪ್ರತ್ಯುತ್ತರವಾಗಿ ಆತನಿಗೆ--ಕರ್ತನೇ, ನಾವು ಯಾರ ಬಳಿಗೆ ಹೋಗೋಣ? ನಿನ್ನಲ್ಲಿ ನಿತ್ಯಜೀವದ ವಾಕ್ಯಗಳು ಉಂಟಲ್ಲಾ.

6:69b.JOH.006.069 ನೀನು ಜೀವವುಳ್ಳ ದೇವರಮಗನಾದ ಆ ಕ್ರಿಸ್ತನೆಂದು ನಾವು ಖಂಡಿತವಾಗಿ ನಂಬಿದ್ದೇವೆ ಅಂದನು.

6:70b.JOH.006.070 ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವ ರಿಗೆ--ಹನ್ನೆರಡು ಮಂದಿಯಾದ ನಿಮ್ಮನ್ನು ನಾನು ಆರಿಸಿ ಕೊಂಡೆನಲ್ಲವೇ? ಆದರೆ ನಿಮ್ಮಲ್ಲಿ ಒಬ್ಬನು ಸೈತಾನನಾ ಗಿದ್ದಾನೆ ಅಂದನು.ಸೀಮೋನನ ಮಗನಾದ ಇಸ್ಕರಿಯೋತ್‌ ಯೂದನ ವಿಷಯವಾಗಿ ಆತನು ಹೇಳಿ ದನು. ಯಾಕಂದರೆ ಹನ್ನೆರಡು ಮಂದಿಯಲ್ಲಿ ಒಬ್ಬನಾದ ಇವನು ಆತನನ್ನು ಹಿಡುಕೊಡುವದಕ್ಕಿದ್ದನು.

6:71b.JOH.006.071 ಸೀಮೋನನ ಮಗನಾದ ಇಸ್ಕರಿಯೋತ್‌ ಯೂದನ ವಿಷಯವಾಗಿ ಆತನು ಹೇಳಿ ದನು. ಯಾಕಂದರೆ ಹನ್ನೆರಡು ಮಂದಿಯಲ್ಲಿ ಒಬ್ಬನಾದ ಇವನು ಆತನನ್ನು ಹಿಡುಕೊಡುವದಕ್ಕಿದ್ದನು.

7

7:1b.JOH.007.001 ಇವುಗಳಾದ ಮೇಲೆ ಯೇಸು ಗಲಿಲಾ ಯದಲ್ಲಿ ಸಂಚಾರ ಮಾಡಿದನು; ಯೆಹೂದ್ಯರು ಆತನನ್ನು ಕೊಲ್ಲುವದಕ್ಕೆ ಹುಡುಕುತ್ತಿ ದ್ದದರಿಂದ ಯೂದಾಯದಲ್ಲಿ ಸಂಚರಿಸಲು ಆತನಿಗೆ ಮನಸ್ಸಿರಲಿಲ್ಲ.

7:2b.JOH.007.002 ಆಗ ಯೆಹೂದ್ಯರ ಗುಡಾರಗಳ ಹಬ್ಬವು ಹತ್ತಿರವಾಗಿತ್ತು.

7:3b.JOH.007.003 ಆದದರಿಂದ ಆತನ ಸಹೋದರರು ಆತನಿಗೆ--ನೀನು ಮಾಡುವ ಕ್ರಿಯೆಗಳನ್ನು ನಿನ್ನ ಶಿಷ್ಯರು ಸಹ ನೋಡುವಂತೆ ಇಲ್ಲಿಂದ ಹೊರಟು ಯೂದಾಯಕ್ಕೆ ಹೋಗು;

7:4b.JOH.007.004 ಯಾಕಂದರೆ ತಾನು ಪ್ರಸಿದ್ಧಿಗೆ ಬರಬೇಕೆಂದಿರುವ ಯಾವನಾದರೂ ರಹಸ್ಯವಾಗಿ ಯಾವದನ್ನೂ ಮಾಡುವದಿಲ್ಲ; ನೀನು ಇವುಗಳನ್ನು ಮಾಡುವದಾದರೆ ಲೋಕಕ್ಕೆ ನಿನ್ನನ್ನು ನೀನೇ ತೋರ್ಪಡಿಸಿಕೋ ಅಂದರು.

7:5b.JOH.007.005 ಯಾಕಂದರೆ ಆತನ ಸಹೋದರರು ಸಹ ಆತನ ಮೇಲೆ ನಂಬಿಕೆ ಇಟ್ಟಿರಲಿಲ್ಲ.

7:6b.JOH.007.006 ತರುವಾಯ ಯೇಸು ಅವರಿಗೆ-- ನನ್ನ ಸಮಯವು ಇನ್ನೂ ಬಂದಿಲ್ಲ; ಆದರೆ ನಿಮ್ಮ ಸಮಯವು ಯಾವಾಗಲೂ ಸಿದ್ಧವಾಗಿದೆ.

7:7b.JOH.007.007 ಲೋಕವು ನಿಮ್ಮನ್ನು ಹಗೆಮಾಡಲಾರದು; ಆದರೆ ಅದರ ಕ್ರಿಯೆಗಳು ಕೆಟ್ಟವುಗಳಾಗಿವೆ ಎಂದು ಅದರ ವಿಷಯ ದಲ್ಲಿ ನಾನು ಸಾಕ್ಷಿ ಹೇಳುವದರಿಂದ ಅದು ನನ್ನನ್ನು ಹಗೆಮಾಡುತ್ತದೆ.

7:8b.JOH.007.008 ನೀವು ಈ ಹಬ್ಬಕ್ಕೆ ಹೋಗಿರಿ; ನಾನು ಈ ಹಬ್ಬಕ್ಕೆ ಈಗಲೇ ಹೋಗುವದಿಲ್ಲ, ಯಾಕಂದರೆ ನನ್ನ ಸಮಯವು ಇನ್ನೂ ಪೂರ್ಣವಾಗಿ ಬರಲಿಲ್ಲ ಅಂದನು.

7:9b.JOH.007.009 ಆತನು ಈ ಮಾತುಗಳನ್ನು ಅವರಿಗೆ ಹೇಳಿದ್ದಾದ ಮೇಲೆ ಇನ್ನೂ ಗಲಿಲಾಯ ದಲ್ಲಿಯೇ ಉಳಿದನು.

7:10b.JOH.007.010 ಆದರೆ ಆತನ ಸಹೋದರರು ಹೋದಮೇಲೆ ಆತನು ಸಹ ಹಬ್ಬಕ್ಕೆ ಬಹಿರಂಗವಾಗಿ ಹೋಗದೆ ಗುಪ್ತವಾಗಿ ಹೋದನು.

7:11b.JOH.007.011 ಆಗ ಯೆಹೂದ್ಯರು ಆ ಹಬ್ಬದಲ್ಲಿ ಆತನನ್ನು ಹುಡುಕಿ--ಆತನು ಎಲ್ಲಿದ್ದಾನೆ ಅಂದರು.

7:12b.JOH.007.012 ಆ ಜನಗಳಲ್ಲಿ ಆತನ ವಿಷಯವಾಗಿ ಬಹಳ ಗುಣುಗುಟ್ಟುವಿಕೆ ಇತ್ತು; ಯಾಕಂದರೆ ಕೆಲವರು--ಆತನು ಒಬ್ಬ ಒಳ್ಳೇ ಮನುಷ್ಯನಾಗಿದ್ದಾನೆ ಅಂದರು; ಬೇರೆ ಕೆಲವರು--ಅಲ್ಲ; ಆತನು ಜನರನ್ನು ಮೋಸ ಗೊಳಿಸುತ್ತಾನೆ ಎಂದು ಅನ್ನುತ್ತಿದ್ದರು.

7:13b.JOH.007.013 ಆದಾಗ್ಯೂ ಯೆಹೂದ್ಯರ ಭಯದ ನಿಮಿತ್ತ ಆತನ ವಿಷಯದಲ್ಲಿ ಯಾರೂ ಬಹಿರಂಗವಾಗಿ ಮಾತನಾಡಲಿಲ್ಲ.

7:14b.JOH.007.014 ಆಗ ಯೇಸು ಆ ಹಬ್ಬದ ಮಧ್ಯದಲ್ಲಿ ದೇವಾ ಲಯದೊಳಗೆ ಹೋಗಿ ಬೋಧಿಸಿದನು.

7:15b.JOH.007.015 ಯೆಹೂ ದ್ಯರು ಆಶ್ಚರ್ಯಪಟ್ಟು--ಏನನ್ನೂ ಕಲಿಯದಿರುವ ಈ ಮನುಷ್ಯನಿಗೆ ಇಂಥ ಜ್ಞಾನವು ಬಂದಿರುವದು ಹೇಗೆ ಅಂದರು.

7:16b.JOH.007.016 ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವ ರಿಗೆ--ನನ್ನ ಬೋಧನೆಯು ನನ್ನದಲ್ಲ; ಆದರೆ ನನ್ನನ್ನು ಕಳುಹಿಸಿದಾತನದೇ.

7:17b.JOH.007.017 ಯಾವನಾದರೂ ಆತನ ಚಿತದಂತೆ ಮಾಡಿದರೆ ಈ ಬೋಧನೆಯು ದೇವರದೋ ಅಥವಾ ನನ್ನಷ್ಟಕ್ಕೆ ನಾನೇ ಹೇಳುತ್ತೇನೋ ಎಂಬದು ಅವನಿಗೆ ತಿಳಿಯುವದು.

7:18b.JOH.007.018 ತನ್ನ ವಿಷಯವಾಗಿ ತಾನೇ ಮಾತನಾಡುವವನು ತನ್ನ ಸ್ವಂತ ಮಹಿಮೆಯನ್ನು ಹುಡುಕುತ್ತಾನೆ; ಆದರೆ ತನ್ನನ್ನು ಕಳುಹಿಸಿದಾತನ ಮಹಿಮೆಯನ್ನು ಹುಡುಕುವಾತನೇ ಸತ್ಯವಂತನು; ಆತ ನಲ್ಲಿ ಅನೀತಿಯಿಲ್ಲ.

7:19b.JOH.007.019 ಮೋಶೆಯು ನಿಮಗೆ ನ್ಯಾಯ ಪ್ರಮಾಣವನ್ನು ಕೊಟ್ಟಾಗ್ಯೂ ನಿಮ್ಮಲ್ಲಿ ಒಬ್ಬನೂ ಆ ನ್ಯಾಯಪ್ರಮಾಣವನ್ನು ಕೈಕೊಳ್ಳಲಿಲ್ಲವಲ್ಲಾ; ನೀವು ಯಾಕೆ ನನ್ನನ್ನು ಕೊಲ್ಲುವದಕ್ಕೆ ನೋಡುತ್ತೀರಿ ಎಂದು ಹೇಳಿದನು.

7:20b.JOH.007.020 ಅದಕ್ಕೆ ಜನರು ಪ್ರತ್ಯುತ್ತರವಾಗಿ--ನಿನಗೆ ದೆವ್ವ ಹಿಡಿದಿದೆ; ನಿನ್ನನ್ನು ಕೊಲ್ಲುವದಕ್ಕೆ ನೋಡು ವವರು ಯಾರು ಅಂದರು.

7:21b.JOH.007.021 ಯೇಸು ಪ್ರತ್ಯುತ್ತರ ವಾಗಿ ಅವರಿಗೆ--ನಾನು ಒಂದು ಕ್ರಿಯೆಯನ್ನು ಮಾಡಿ ದೆನು; ಅದಕ್ಕೆ ನೀವೆಲ್ಲರು ಆಶ್ಚರ್ಯಪಡುತ್ತೀ

7:22b.JOH.007.022 ಹಾಗಿದ್ದರೆ ಮೋಶೆಯು ನಿಮಗೆ ಸುನ್ನತಿಯನ್ನು ಕೊಟ್ಟನು; (ಅದು ಮೋಶೆಯದಲ್ಲ, ಆದರೆ ಅದು ಪಿತೃಗಳದೇ). ನೀವು ಸಬ್ಬತ್‌ ದಿನದಲ್ಲಿ ಮನುಷ್ಯನಿಗೆ ಸುನ್ನತಿ ಮಾಡುತ್ತೀರಿ.

7:23b.JOH.007.023 ಒಬ್ಬ ಮನುಷ್ಯನು ಮೋಶೆಯ ನ್ಯಾಯಪ್ರಮಾಣವನ್ನು ವಿಾರದ ಹಾಗೆ ಸಬ್ಬತ್‌ ದಿನ ದಲ್ಲಿ ಸುನ್ನತಿಯನ್ನು ಮಾಡಿಸಿಕೊಂಡರೆ ನಾನು ಒಬ್ಬ ಮನುಷ್ಯನನ್ನು ಸಬ್ಬತ್‌ದಿನದಲ್ಲಿ ಸಂಪೂರ್ಣವಾಗಿ ಸ್ವಸ್ಥ ಮಾಡಿದ್ದಕ್ಕೆ ನನ್ನ ಮೇಲೆ ನೀವು ಕೋಪಗೊಳ್ಳು ತ್ತೀರೋ?

7:24b.JOH.007.024 ತೋರಿಕೆಗೆ ಅನುಸಾರವಾಗಿ ನ್ಯಾಯತೀರಿ ಸಬೇಡಿರಿ. ಆದರೆ ನೀತಿಯ ನ್ಯಾಯತೀರ್ಪನ್ನು ಮಾಡಿರಿ ಅಂದನು.

7:25b.JOH.007.025 ಆಮೇಲೆ ಯೆರೂಸಲೇಮಿನವರಲ್ಲಿ ಕೆಲವರು-- ಅವರು ಕೊಲ್ಲಬೇಕೆಂದು ಹುಡುಕುತ್ತಿರುವದು ಈತನನ್ನೇ ಅಲ್ಲವೇ?

7:26b.JOH.007.026 ಆದಾಗ್ಯೂ ಇಗೋ, ಈತನು ಧೈರ್ಯ ವಾಗಿ ಮಾತನಾಡುತ್ತಾನೆ; ಆದರೆ ಅವರು ಈತನಿಗೆ ಏನೂ ಹೇಳುವದಿಲ್ಲ. ಈತನೇ ನಿಜವಾದ ಆ ಕ್ರಿಸ್ತನೆಂದು ಅಧಿಕಾರಿಗಳು ತಿಳುಕೊಂಡಿದ್ದಾರೋ?

7:27b.JOH.007.027 ಹೇಗೂ ಈ ಮನುಷ್ಯನು ಎಲ್ಲಿಯವನೆಂದು ನಾವು ಬಲ್ಲೆವು; ಆದರೆ ಕ್ರಿಸ್ತನು ಬರುವಾಗ ಆತನು ಎಲ್ಲಿಯವ ನೆಂದು ಯಾರಿಗೂ ತಿಳಿಯದು ಅಂದರು.

7:28b.JOH.007.028 ತರು ವಾಯ ಯೇಸು ದೇವಾಲಯದಲ್ಲಿ ಬೋಧಿಸುತ್ತಿ ದ್ದಾಗ--ನೀವು ನನ್ನನ್ನು ಬಲ್ಲಿರಿ ಮತ್ತು ನಾನು ಎಲ್ಲಿಯವನೆಂದೂ ನೀವು ಬಲ್ಲಿರಿ; ಆದರೆ ನನ್ನಷ್ಟಕ್ಕೆ ನಾನೇ ಬರಲಿಲ್ಲ; ನನ್ನನ್ನು ಕಳುಹಿಸಿದಾತನು ಸತ್ಯ ವಂತನೇ; ಆತನನ್ನು ನೀವು ಅರಿತವರಲ್ಲ.

7:29b.JOH.007.029 ಆದರೆ ನಾನು ಆತನನ್ನು ಬಲ್ಲೆನು; ಯಾಕಂದರೆ ನಾನು ಆತನ ಕಡೆಯಿಂದ ಬಂದವನು; ಆತನು ನನ್ನನ್ನು ಕಳುಹಿಸಿಕೊಟ್ಟಿದ್ದಾನೆ ಎಂದು ಕೂಗಿ ಹೇಳಿದನು.

7:30b.JOH.007.030 ಆಗ ಅವರು ಆತನನ್ನು ಹಿಡಿಯಲು ಹವಣಿಸಿದರು; ಆದರೆ ಆತನ ಗಳಿಗೆ ಇನ್ನೂ ಬಾರದೆ ಇದ್ದದರಿಂದ ಆತನ ಮೇಲೆ ಯಾರೂ ಕೈ ಹಾಕಲಿಲ್ಲ.

7:31b.JOH.007.031 ಜನರಲ್ಲಿ ಅನೇಕರು ಆತನನ್ನು ನಂಬಿ--ಕ್ರಿಸ್ತನು ಬಂದಾಗ ಈ ಮನುಷ್ಯನು ಮಾಡಿದ್ದಕ್ಕಿಂತ ಹೆಚ್ಚು ಅದ್ಭುತಕಾರ್ಯಗಳನ್ನು ಮಾಡು ವನೋ ಅಂದರು.

7:32b.JOH.007.032 ಆತನ ವಿಷಯವಾಗಿ ಜನರು ಗುಣುಗುಟ್ಟಿದ ರೆಂದು ಫರಿಸಾಯರು ಕೇಳಿದರು; ಫರಿಸಾಯರೂ ಪ್ರಧಾನಯಾಜಕರೂ ಆತನನ್ನು ಹಿಡಿಯುವದಕ್ಕೆ ಅಧಿ ಕಾರಿಗಳನ್ನು ಕಳುಹಿಸಿದರು.

7:33b.JOH.007.033 ತರುವಾಯ ಯೇಸು ಅವರಿಗೆ--ಇನ್ನು ಸ್ವಲ್ಪಕಾಲ ನಾನು ನಿಮ್ಮೊಂದಿಗಿದ್ದು ಆಮೇಲೆ ನನ್ನನ್ನು ಕಳುಹಿಸಿದಾತನ ಬಳಿಗೆ ಹೋಗು ತ್ತೇನೆ.

7:34b.JOH.007.034 ನೀವು ನನ್ನನ್ನು ಹುಡುಕುವಿರಿ, ಆದರೆ ನನ್ನನ್ನು ಕಾಣುವದಿಲ್ಲ; ನಾನಿರುವಲ್ಲಿಗೆ ನೀವು ಬರಲಾರಿರಿ ಅಂದನು.

7:35b.JOH.007.035 ಆಗ ಯೆಹೂದ್ಯರು--ನಾವು ಅವನನ್ನು ಕಾಣದ ಹಾಗೆ ಅವನು ಎಲ್ಲಿಗೆ ಹೋಗುವನು? ಅನ್ಯಜನರ ಮಧ್ಯದಲ್ಲಿ ಚದರಿಹೋದವರ ಬಳಿಗೆ ಹೋಗಿ ಅನ್ಯಜನರಿಗೆ ಬೋಧಿಸುವನೋ?

7:36b.JOH.007.036 ನೀವು ನನ್ನನ್ನು ಹುಡುಕುವಿರಿ, ಆದರೆ ನನ್ನನ್ನು ಕಾಣಲಾರಿರಿ; ನಾನಿರುವಲ್ಲಿಗೆ ನೀವು ಬರಲಾರಿರಿ ಎಂದು ಇವನು ಹೇಳಿರುವದು ಎಂಥಾ ಮಾತಾಗಿರಬಹುದು ಎಂದು ತಮ್ಮಲ್ಲಿ ಅಂದುಕೊಂಡರು.

7:37b.JOH.007.037 ಹಬ್ಬದ ಆ ಮಹಾದಿವಸವಾದ ಕಡೇ ದಿನದಲ್ಲಿ ಯೇಸು ನಿಂತುಕೊಂಡು--ಯಾವನಿಗಾದರೂ ನೀರಡಿಕೆ ಯಾಗಿದ್ದರೆ ಅವನು ನನ್ನ ಬಳಿಗೆ ಬಂದು ಕುಡಿಯಲಿ.

7:38b.JOH.007.038 ನನ್ನ ಮೇಲೆ ನಂಬಿಕೆ ಇಡುವವನಿಗೆ ಬರಹವು ಹೇಳಿದ ಪ್ರಕಾರ ಆತನ ಹೊಟ್ಟೆಯೊಳಗಿಂದ ಜೀವ ಕರವಾದ ನೀರಿನ ಹೊಳೆಗಳು ಹರಿಯುವವು ಎಂದು ಕೂಗಿ ಹೇಳಿದನು.

7:39b.JOH.007.039 (ಆದರೆ ಆತನು ತನ್ನಲ್ಲಿ ವಿಶ್ವಾಸವಿಡುವವರು ಹೊಂದಲಿರುವ ಆತ್ಮನನ್ನು ಕುರಿತು ಇದನ್ನು ಹೇಳಿದನು; ಯಾಕಂದರೆ ಯೇಸು ಇನ್ನೂ ಮಹಿಮೆಯನ್ನು ಹೊಂದಿರಲಿಲ್ಲವಾದ್ದರಿಂದ ಪವಿತ್ರಾ ತ್ಮನು ಇನ್ನೂ ಕೊಡಲ್ಪಟ್ಟಿರಲಿಲ್ಲ.)

7:40b.JOH.007.040 ಆದದರಿಂದ ಜನರಲ್ಲಿ ಅನೇಕರು ಈ ಮಾತನ್ನು ಕೇಳಿದಾಗ--ಈತನು ನಿಜವಾಗಿಯೂ ಆ ಪ್ರವಾದಿ ಯಾಗಿದ್ದಾನೆ ಅಂದರು.

7:41b.JOH.007.041 ಬೇರೆಯವರು--ಈತನೇ ಆ ಕ್ರಿಸ್ತನು ಅಂದರು. ಆದರೆ ಕೆಲವರು--ಕ್ರಿಸ್ತನು ಗಲಿಲಾಯದಿಂದ ಬರುವನೋ?

7:42b.JOH.007.042 ಆದರೆ ಕ್ರಿಸ್ತನು ದಾವೀದನ ಸಂತಾನದಿಂದಲೂ ದಾವೀದನಿದ್ದ ಬೇತೆಹೇಮೆಂಬ ಊರಿನಿಂದಲೂ ಬರುವನೆಂದು ಬರಹವು ಹೇಳುತ್ತದಲ್ಲವೇ? ಅಂದರು.

7:43b.JOH.007.043 ಹೀಗೆ ಆತನ ನಿಮಿತ್ತ ವಾಗಿ ಜನರಲ್ಲಿ ಭೇದ ಉಂಟಾಯಿತು;

7:44b.JOH.007.044 ಅವರಲ್ಲಿ ಕೆಲವರು ಆತನನ್ನು ಹಿಡಿಯಬೇಕೆಂದಿದ್ದರು; ಆದರೆ ಯಾರೂ ಆತನ ಮೇಲೆ ಕೈ ಹಾಕಲಿಲ್ಲ.

7:45b.JOH.007.045 ಬಳಿಕ ಪ್ರಧಾನಯಾಜಕರ ಮತ್ತು ಫರಿಸಾಯರ ಬಳಿಗೆ ಅಧಿಕಾರಿಗಳು ಬಂದಾಗ ಅವರಿಗೆ--ನೀವು ಯಾಕೆ ಆತನನ್ನು ಕರತರಲಿಲ್ಲ ಎಂದು ಕೇಳಿದರು.

7:46b.JOH.007.046 ಅದಕ್ಕೆ ಅಧಿಕಾರಿಗಳು ಪ್ರತ್ಯುತ್ತರವಾಗಿ--ಈ ಮನುಷ್ಯನಂತೆ ಯಾವನೂ ಎಂದೂ ಮಾತನಾಡಲಿಲ್ಲ ಅಂದರು.

7:47b.JOH.007.047 ಆಗ ಫರಿಸಾಯರೂ ಅವರಿಗೆ--ನೀವು ಸಹ ಮೋಸ ಹೋದಿರೋ?

7:48b.JOH.007.048 ಅಧಿಕಾರಿಗಳಲ್ಲಿಯೂ ಫರಿಸಾಯರಲ್ಲಿಯೂ ಯಾರಾದರೂ ಅವನ ಮೇಲೆ ವಿಶ್ವಾಸವಿಟ್ಟಿದ್ದಾರೋ?

7:49b.JOH.007.049 ಆದರೆ ನ್ಯಾಯಪ್ರಮಾಣ ವನ್ನರಿಯದ ಈ ಜನರು ಶಾಪಗ್ರಸ್ತರೇ ಎಂದು ಹೇಳಿದರು.

7:50b.JOH.007.050 ನಿಕೊದೇಮನು ಅವರಿಗೆ--(ರಾತ್ರಿಯಲ್ಲಿ ಯೇಸುವಿನ ಬಳಿಗೆ ಬಂದಿದ್ದ ಇವನು ಅವರಲ್ಲಿ ಒಬ್ಬ ನಾಗಿದ್ದನು.)

7:51b.JOH.007.051 ಒಬ್ಬನನ್ನು ವಿಚಾರಿಸಿ ಅವನು ಮಾಡು ವದೇನೆಂದು ತಿಳಿದುಕೊಳ್ಳುವದಕ್ಕಿಂತ ಮುಂಚೆ ಅವ ನನ್ನು ನಮ್ಮ ನ್ಯಾಯಪ್ರಮಾಣವು ತೀರ್ಪು ಮಾಡುವ ದುಂಟೇ ಅಂದನು.

7:52b.JOH.007.052 ಅವರು ಪ್ರತ್ಯುತ್ತರವಾಗಿ ಅವನಿಗೆ--ನೀನು ಸಹ ಗಲಿಲಾಯದವನೋ? ಗಲಿ ಲಾಯದಲ್ಲಿ ಪ್ರವಾದಿಯು ಏಳುವದೇ ಇಲ್ಲ, ಪರಿ ಶೋಧಿಸಿ ನೋಡು ಅಂದರು.ಪ್ರತಿಯೊಬ್ಬನು ತನ್ನ ಸ್ವಂತ ಮನೆಗೆ ಹೋದನು.

7:53b.JOH.007.053 ಪ್ರತಿಯೊಬ್ಬನು ತನ್ನ ಸ್ವಂತ ಮನೆಗೆ ಹೋದನು.

8

8:1b.JOH.008.001 ಯೇಸು ಎಣ್ಣೇಮರಗಳ ಗುಡ್ಡಕ್ಕೆ ಹೋದನು.

8:2b.JOH.008.002 ಬೆಳಿಗ್ಗೆ ಆತನು ತಿರಿಗಿ ದೇವಾಲಯಕ್ಕೆ ಬಂದಾಗ ಎಲ್ಲಾ ಜನರು ಆತನ ಬಳಿಗೆ ಬಂದರು; ಆತನು ಕೂತುಕೊಂಡು ಅವರಿಗೆ ಬೋಧಿಸಿ ದನು.

8:3b.JOH.008.003 ಆಗ ವ್ಯಭಿಚಾರದಲ್ಲಿ ಸಿಕ್ಕಿದ ಒಬ್ಬ ಹೆಂಗಸನ್ನು ಶಾಸ್ತ್ರಿಗಳು ಮತ್ತು ಫರಿಸಾಯರು ಆತನ ಬಳಿಗೆ ತಂದು ಆಕೆಯನ್ನು ನಡುವೆ ನಿಲ್ಲಿಸಿ

8:4b.JOH.008.004 ಆತನಿಗೆ -- ಬೋಧಕನೇ, ಈ ಹೆಂಗಸು ವ್ಯಭಿಚಾರ ಮಾಡುವಾಗಲೇ ಹಿಡಿಯ ಲ್ಪಟ್ಟಳು.

8:5b.JOH.008.005 ಇಂಥವರು ಕಲ್ಲೆಸೆಯಲ್ಪಡಬೇಕೆಂದು ಮೋಶೆಯು ನ್ಯಾಯಪ್ರಮಾಣದಲ್ಲಿ ನಮಗೆ ಅಪ್ಪಣೆ ಕೊಟ್ಟಿದ್ದಾನೆ; ಆದರೆ ನೀನು ಏನು ಹೇಳುತ್ತೀ ಎಂದು ಕೇಳಿದರು.

8:6b.JOH.008.006 ಅವರು ಆತನನ್ನು ಶೋಧಿಸುವವರಾಗಿ ಆತನ ಮೇಲೆ ತಪ್ಪು ಹೊರಿಸಬೇಕೆಂದು ಹೀಗೆ ಹೇಳಿ ದರು. ಆದರೆ ಯೇಸು ಅವರ ಮಾತುಗಳನ್ನು ಕೇಳದವ ನಂತೆ ಬೊಗ್ಗಿಕೊಂಡು ತನ್ನ ಬೆರಳಿನಿಂದ ನೆಲದ ಮೇಲೆ ಬರೆದನು.

8:7b.JOH.008.007 ಆದರೆ ಅವರು ಬಿಡದೆ ಆತನನ್ನು ಕೇಳುತ್ತಿರಲು ಆತನು ಮೇಲಕ್ಕೆ ನೋಡಿ--ನಿಮ್ಮೊಳಗೆ ಯಾವನು ಪಾಪವಿಲ್ಲದವನಾಗಿದ್ದಾನೋ ಅವನೇ ಮೊದಲು ಆಕೆಯ ಮೇಲೆ ಕಲ್ಲನ್ನು ಹಾಕಲಿ ಎಂದು ಅವರಿಗೆ ಹೇಳಿದನು.

8:8b.JOH.008.008 ತಿರಿಗಿ ಆತನು ಬೊಗ್ಗಿಕೊಂಡು ನೆಲದ ಮೇಲೆ ಬರೆದನು.

8:9b.JOH.008.009 ಅದನ್ನು ಕೇಳಿದವರು ತಮ್ಮ ಸ್ವಂತ ಮನಸ್ಸಾಕ್ಷಿಯಿಂದ ಮನವರಿಕೆಯಾಗಿ ಹಿರಿಯವನು ಮೊದಲುಗೊಂಡು ಕಡೆಯವನವರೆಗೂ ಒಬ್ಬೊಬ್ಬರಾಗಿ ಹೊರಗೆಹೋದರು; ಆಗ ಯೇಸು ಒಬ್ಬನೇ ಉಳಿದನು; ಆ ಹೆಂಗಸು ನಡುವೆ ನಿಂತು ಕೊಂಡಿದ್ದಳು.

8:10b.JOH.008.010 ಯೇಸು ಮೇಲಕ್ಕೆ ನೋಡಿ ಆ ಹೆಂಗಸಿನ ಹೊರತು ಯಾರನ್ನೂ ಕಾಣದೆ ಆಕೆಗೆ--ಸ್ತ್ರೀಯೇ, ನಿನ್ನ ಮೇಲೆ ದೂರು ಹೊರಿಸಿದವರು ಎಲ್ಲಿ ದ್ದಾರೆ? ನಿನಗೆ ಯಾರೂ ಶಿಕ್ಷೆ ವಿಧಿಸಲಿಲ್ಲವೋ? ಅಂದನು.

8:11b.JOH.008.011 ಅದಕ್ಕೆ ಆಕೆಯು-- ಕರ್ತನೇ, ಯಾರೂ ವಿಧಿಸಲಿಲ್ಲ ಅಂದಳು. ಯೇಸು ಆಕೆಗೆ--ನಾನೂ ನಿನಗೆ ಶಿಕ್ಷೆ ವಿಧಿಸುವದಿಲ್ಲ; ಹೋಗು, ಇನ್ನು ಮೇಲೆ ಪಾಪಮಾಡಬೇಡ ಅಂದನು.

8:12b.JOH.008.012 ತರುವಾಯ ಯೇಸು ತಿರಿಗಿ ಮಾತನಾಡಿ ಅವರಿಗೆ--ನಾನೇ ಲೋಕಕ್ಕೆ ಬೆಳಕಾಗಿದ್ದೇನೆ; ನನ್ನನ್ನು ಹಿಂಬಾಲಿಸುವವನು ಕತ್ತಲೆಯಲ್ಲಿ ನಡೆಯುವದಿಲ್ಲ; ಆದರೆ ಜೀವದ ಬೆಳಕನ್ನು ಹೊಂದುವನು ಎಂದು ಹೇಳಿದನು.

8:13b.JOH.008.013 ಆದಕಾರಣ ಫರಿಸಾಯರು ಆತ ನಿಗೆ--ನಿನ್ನ ವಿಷಯವಾಗಿ ನೀನೇ ಸಾಕ್ಷಿಕೊಡುತ್ತೀ; ನಿನ್ನ ಸಾಕ್ಷಿಯು ನಿಜವಲ್ಲ ಎಂದು ಹೇಳಿದರು.

8:14b.JOH.008.014 ಯೇಸು ಪ್ರತ್ಯುತ್ತರವಾಗಿ ಅವರಿಗೆ--ನನ್ನ ವಿಷಯ ವಾಗಿ ನಾನು ಸಾಕ್ಷಿಕೊಟ್ಟಾಗ್ಯೂ ನನ್ನ ಸಾಕ್ಷಿ ನಿಜವೇ; ಯಾಕಂದರೆ ನಾನು ಎಲ್ಲಿಂದ ಬಂದೆನೋ ಮತ್ತು ಎಲ್ಲಿಗೆ ಹೋಗುತ್ತೇನೋ ನಾನು ಬಲ್ಲೆನು; ಆದರೆ ನಾನು ಎಲ್ಲಿಂದ ಬಂದೆನೋ ಇಲ್ಲವೆ ಎಲ್ಲಿಗೆ ಹೋಗುತ್ತೇನೋ ನೀವು ಹೇಳಲಾರಿರಿ.

8:15b.JOH.008.015 ನೀವು ಶಾರೀರಿಕ ರೀತಿಯಲ್ಲಿ ತೀರ್ಪು ಮಾಡುತ್ತೀರಿ; ಆದರೆ ಯಾವ ಮನುಷ್ಯನಿಗೂ ನಾನು ತೀರ್ಪುಮಾಡುವದಿಲ್ಲ.

8:16b.JOH.008.016 ನಾನು ತೀರ್ಪು ಮಾಡಿದರೂ ನನ್ನ ತೀರ್ಪು ನಿಜ ವಾದದ್ದೇ; ಯಾಕಂದರೆ ನಾನು ಒಂಟಿಗನಲ್ಲ, ಆದರೆ ನಾನೂ ನನ್ನನ್ನು ಕಳುಹಿಸಿದ ತಂದೆಯೂ ಇದ್ದೇವೆ.

8:17b.JOH.008.017 ಇಬ್ಬರ ಸಾಕ್ಷಿಯು ನಿಜವೆಂದು ನಿಮ್ಮ ನ್ಯಾಯ ಪ್ರಮಾಣದಲ್ಲಿಯೂ ಬರೆದದೆ.

8:18b.JOH.008.018 ನನ್ನ ವಿಷಯವಾಗಿ ನಾನೇ ಸಾಕ್ಷಿ ಕೊಡುತ್ತೇನೆ ಮತ್ತು ನನ್ನನ್ನು ಕಳುಹಿಸಿದ ತಂದೆಯೂ ನನ್ನ ವಿಷಯವಾಗಿ ಸಾಕ್ಷಿಕೊಡುತ್ತಾನೆ ಅಂದನು.

8:19b.JOH.008.019 ತರುವಾಯ ಅವರು ಆತನಿಗೆ--ನಿನ್ನ ತಂದೆ ಎಲ್ಲಿ ಅಂದರು. ಅದಕ್ಕೆ ಯೇಸು ಪ್ರತ್ಯುತ್ತರ ವಾಗಿ--ನನ್ನನ್ನಾಗಲಿ ನನ್ನ ತಂದೆಯನ್ನಾಗಲಿ ನೀವು ಅರಿತಿಲ್ಲ; ನೀವು ನನ್ನನ್ನು ಅರಿತುಕೊಂಡಿದ್ದರೆ ನನ್ನ ತಂದೆಯನ್ನು ಸಹ ಅರಿತುಕೊಳ್ಳುತ್ತಿದ್ದಿರಿ ಅಂದನು.

8:20b.JOH.008.020 ಯೇಸು ದೇವಾಲಯದಲ್ಲಿ ಬೋಧಿಸುತ್ತಿದ್ದಾಗ ಬೊಕ್ಕಸದ ಬಳಿಯಲ್ಲಿ ಈ ಮಾತುಗಳನ್ನು ಆಡಿದನು; ಆದರೆ ಆತನ ಗಳಿಗೆ ಇನ್ನೂ ಬಾರದೆ ಇದ್ದದರಿಂದ ಯಾರೂ ಆತನ ಮೇಲೆ ಕೈಹಾಕಲಿಲ್ಲ.

8:21b.JOH.008.021 ಯೇಸು ತಿರಿಗಿ ಅವರಿಗೆ--ನಾನು ಹೋಗುತ್ತೇನೆ; ನೀವು ನನ್ನನ್ನು ಹುಡುಕುವಿರಿ ಮತ್ತು ನಿಮ್ಮ ಪಾಪ ಗಳಲ್ಲಿ ಸಾಯುವಿರಿ; ನಾನು ಹೋಗುವಲ್ಲಿಗೆ ನೀವು ಬರಲಾರಿರಿ ಅಂದನು.

8:22b.JOH.008.022 ಅದಕ್ಕೆ ಯೆಹೂದ್ಯರು--ಇವನು ತನ್ನನ್ನು ತಾನೇ ಕೊಂದುಕೊಳ್ಳಬೇಕೆಂದಿ ದ್ದಾನೋ? ಯಾಕಂದರೆ--ನಾನು ಹೋಗುವಲ್ಲಿಗೆ ನೀವು ಬರಲಾರಿರಿ ಎಂದು ಹೇಳುತ್ತಾನಲ್ಲಾ ಅಂದರು.

8:23b.JOH.008.023 ಆತನು ಅವರಿಗೆ--ನೀವು ಕೆಳಗಿನವರು, ನಾನು ಮೇಲಿನವನು; ನೀವು ಈ ಲೋಕದವರು, ನಾನು ಈ ಲೋಕದವನಲ್ಲ.

8:24b.JOH.008.024 ಆದದರಿಂದ ನೀವು ನಿಮ್ಮ ಪಾಪಗಳಲ್ಲಿಯೇ ಸಾಯುವಿರಿ ಎಂದು ನಾನು ನಿಮಗೆ ಹೇಳಿದೆನು. ಯಾಕಂದರೆ ನನ್ನನ್ನು ಆತನೆಂದು ನೀವು ನಂಬದೆ ಹೋದರೆ ನೀವು ನಿಮ್ಮ ಪಾಪಗಳಲ್ಲಿಯೇ ಸಾಯುವಿರಿ ಎಂದು ಹೇಳಿದನು.

8:25b.JOH.008.025 ತರುವಾಯ ಅವರು ಆತನಿಗೆ--ನೀನು ಯಾರಾಗಿದ್ದೀ ಅಂದರು. ಅದಕ್ಕೆ ಯೇಸು ಅವರಿಗೆ--ಮೊದಲಿನಿಂದಲೂ ನಾನು ನಿಮಗೆ ಹೇಳಿದಂತವನೇ.

8:26b.JOH.008.026 ನಿಮ್ಮ ವಿಷಯವಾಗಿ ಹೇಳುವದಕ್ಕೂ ತೀರ್ಪುಮಾಡುವದಕ್ಕೂ ನನಗೆ ಅನೇಕ ವಿಷಯಗಳಿವೆ. ಆದರೆ ನನ್ನನ್ನು ಕಳುಹಿಸಿದಾತನು ಸತ್ಯವಂತನು. ನಾನು ಆತನಿಂದ ಕೇಳಿದವುಗಳನ್ನೇ ಲೋಕಕ್ಕೆ ಹೇಳುತ್ತೇನೆ ಅಂದನು.

8:27b.JOH.008.027 ಆತನು ತಂದೆಯ ವಿಷಯವಾಗಿ ತಮ್ಮ ಸಂಗಡ ಮಾತನಾಡಿದನೆಂದು ಅವರು ಗ್ರಹಿಸಲಿಲ್ಲ.

8:28b.JOH.008.028 ಆಮೇಲೆ ಯೇಸು ಅವ ರಿಗೆ--ಮನುಷ್ಯಕುಮಾರನನ್ನು ನೀವು ಮೇಲಕ್ಕೆತ್ತಿದಾಗ ನಾನೇ ಆತನೆಂದೂ ನನ್ನಷ್ಟಕ್ಕೆ ನಾನೇ ಏನೂ ಮಾಡದೆ ನನ್ನ ತಂದೆಯು ನನಗೆ ತಿಳಿಸಿದ ಹಾಗೆ ಈ ಸಂಗತಿ ಗಳನ್ನು ಹೇಳುತ್ತೇನೆಂದೂ ನೀವು ತಿಳಿದುಕೊಳ್ಳುವಿರಿ.

8:29b.JOH.008.029 ಇದಲ್ಲದೆ ನನ್ನನ್ನು ಕಳುಹಿಸಿದಾತನು ನನ್ನ ಸಂಗಡ ಇದ್ದಾನೆ; ತಂದೆಯು ನನ್ನನ್ನು ಒಂಟಿಯಾಗಿ ಬಿಡಲಿಲ್ಲ;ಯಾಕಂದರೆ ಆತನು ಮೆಚ್ಚುವವುಗಳನ್ನೇ ನಾನು ಯಾವಾಗಲೂ ಮಾಡುತ್ತೇನೆ ಅಂದನು.

8:30b.JOH.008.030 ಆತನು ಈ ಮಾತುಗಳನ್ನು ಹೇಳುತ್ತಿದ್ದಾಗಲೇ ಅನೇಕರು ಆತನಲ್ಲಿ ನಂಬಿಕೆಯಿಟ್ಟರು.

8:31b.JOH.008.031 ಆತನ ಮೇಲೆ ನಂಬಿಕೆಯಿಟ್ಟ ಆ ಯೆಹೂದ್ಯರಿಗೆ ಯೇಸು ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡಿದ್ದರೆ ನಿಜವಾ ಗಿಯೂ ನೀವು ನನ್ನ ಶಿಷ್ಯರಾಗುವಿರಿ.

8:32b.JOH.008.032 ಇದಲ್ಲದೆ ನೀವು ಸತ್ಯವನ್ನು ತಿಳಿದುಕೊಳ್ಳುವಿರಿ; ಆ ಸತ್ಯವು ನಿಮ್ಮನ್ನು ಬಿಡುಗಡೆ ಮಾಡುವದು ಎಂದು ಹೇಳಿದನು.

8:33b.JOH.008.033 ಅದಕ್ಕೆ ಅವರು ಪ್ರತ್ಯುತ್ತರವಾಗಿ ಆತನಿಗೆ--ನಾವು ಅಬ್ರಹಾಮನ ಸಂತತಿಯವರಾಗಿರಲಾಗಿ ಯಾವ ಮನುಷ್ಯನಿಗೂ ಎಂದಿಗೂ ಗುಲಾಮರಾಗಿರಲಿಲ್ಲ; ಹಾಗಾದರೆ--ನಿಮಗೆ ಬಿಡುಗಡೆಯಾಗುವದೆಂದು ನೀನು ಹೇಗೆ ಹೇಳುತ್ತೀ ಅಂದರು.

8:34b.JOH.008.034 ಆಗ ಯೇಸು ಪ್ರತ್ಯುತ್ತರವಾಗಿ ಅವರಿಗೆ--ನಾನು ನಿಮಗೆ ನಿಜನಿಜ ವಾಗಿ ಹೇಳುತ್ತೇನೆ--ಪಾಪ ಮಾಡುವವನು ಪಾಪಕ್ಕೆ ಗುಲಾಮನಾಗಿದ್ದಾನೆ.

8:35b.JOH.008.035 ಗುಲಾಮನು ಮನೆಯಲ್ಲಿ ಯಾವಾಗಲೂ ಇರುವದಿಲ್ಲ; ಆದರೆ ಮಗನು ಯಾವಾಗಲೂ ಇರುತ್ತಾನೆ.

8:36b.JOH.008.036 ಆದದರಿಂದ ಮಗನು ನಿಮ್ಮನ್ನು ಬಿಡುಗಡೆ ಮಾಡಿದರೆ ನಿಜವಾಗಿಯೂ ನೀವು ಬಿಡುಗಡೆಯಾಗುವಿರಿ.

8:37b.JOH.008.037 ನೀವು ಅಬ್ರಹಾಮನ ಸಂತತಿಯವರೆಂದು ನಾನು ಬಲ್ಲೆನು; ಆದರೆ ನಿಮ್ಮಲ್ಲಿ ನನ್ನ ವಾಕ್ಯಕ್ಕೆ ಸ್ಥಳವಿಲ್ಲದ ಕಾರಣ ನೀವು ನನ್ನನ್ನು ಕೊಲ್ಲುವದಕ್ಕೆ ನೋಡುತ್ತೀರಿ.

8:38b.JOH.008.038 ನನ್ನ ತಂದೆಯ ಬಳಿ ಯಲ್ಲಿ ನಾನು ನೋಡಿದ್ದನ್ನೇ ಮಾತನಾಡುತ್ತೇನೆ; ನೀವು ನಿಮ್ಮ ತಂದೆಯ ಬಳಿಯಲ್ಲಿ ನೋಡಿದ್ದನ್ನು ಮಾಡುತ್ತೀರಿ ಅಂದನು.

8:39b.JOH.008.039 ಅವರು ಪ್ರತ್ಯುತ್ತರವಾಗಿ ಆತನಿಗೆ--ಅಬ್ರಹಾಮನು ನಮ್ಮ ತಂದೆ ಅಂದರು; ಅದಕ್ಕೆ ಯೇಸು ಅವರಿಗೆ--ನೀವು ಅಬ್ರಹಾಮನ ಮಕ್ಕಳಾಗಿದ್ದರೆ ಅಬ್ರಹಾಮನ ಕ್ರಿಯೆಗಳನ್ನು ಮಾಡು ತ್ತಿದ್ದಿರಿ.

8:40b.JOH.008.040 ಆದರೆ ದೇವರಿಂದ ಕೇಳಿದ ಸತ್ಯವನ್ನು ನಿಮಗೆ ಹೇಳಿದ ನನ್ನನ್ನು ಈಗ ಕೊಲ್ಲುವದಕ್ಕೆ ನೋಡುತ್ತೀರಿ; ಇದನ್ನು ಅಬ್ರಹಾಮನು ಮಾಡಲಿಲ್ಲ.

8:41b.JOH.008.041 ನೀವು ನಿಮ್ಮ ತಂದೆಯ ಕ್ರಿಯೆಗಳನ್ನು ಮಾಡುತ್ತೀರಿ ಅಂದನು. ಅದಕ್ಕವರು ಆತನಿಗೆ--ನಾವು ವ್ಯಭಿಚಾರದಿಂದ ಹುಟ್ಟಿ ದವರಲ್ಲ; ನಮಗೆ ಒಬ್ಬನೇ ತಂದೆ, ಆತನು ದೇವರೇ ಅಂದರು.

8:42b.JOH.008.042 ಯೇಸು ಅವರಿಗೆ--ದೇವರು ನಿಮ್ಮ ತಂದೆಯಾಗಿದ್ದರೆ ನೀವು ನನ್ನನ್ನು ಪ್ರೀತಿಸುತ್ತಿದ್ದಿರಿ; ಯಾಕಂದರೆ ನಾನು ದೇವರಿಂದ ಹೊರಟುಬಂದಿದ್ದೇನೆ. ನನ್ನಷ್ಟಕ್ಕೆ ನಾನೇ ಬರಲಿಲ್ಲ; ಆದರೆ ಆತನೇ ನನ್ನನ್ನು ಕಳುಹಿಸಿದನು.

8:43b.JOH.008.043 ನೀವು ನನ್ನ ಮಾತನ್ನು ಯಾಕೆ ಗ್ರಹಿ ಸದೆ ಇದ್ದೀರಿ? ನೀವು ನನ್ನ ವಾಕ್ಯವನ್ನು ಕೇಳದೆ ಇರುವದರಿಂದಲೇ.

8:44b.JOH.008.044 ನೀವು ನಿಮ್ಮ ತಂದೆಯಾದ ಸೈತಾನನಿಗೆ ಸಂಬಂಧಪಟ್ಟವರಾಗಿದ್ದೀರಿ. ನಿಮ್ಮ ತಂದೆಯ ದುರಾಶೆಗಳನ್ನೇ ನೀವು ಮಾಡುವದಕ್ಕೆ ಇಚ್ಛೈಸುತ್ತೀರಿ; ಅವನು ಆದಿಯಿಂದಲೂ ಕೊಲೆಗಾರನಾಗಿದ್ದು ಸತ್ಯ ದಲ್ಲಿ ನಿಲ್ಲಲಿಲ್ಲ. ಯಾಕಂದರೆ ಅವನಲ್ಲಿ ಸತ್ಯವೇ ಇಲ್ಲ; ಅವನು ಸುಳ್ಳಾಡುವಾಗ ತನ್ನ ಸ್ವಂತವಾದವುಗಳಿಂದ ಮಾ

8:45b.JOH.008.045 ನಾನು ನಿಮಗೆ ಸತ್ಯವನ್ನು ಹೇಳುವವನಾದದರಿಂದ ನೀವು ನನ್ನನ್ನು ನಂಬುವದಿಲ್ಲ.

8:46b.JOH.008.046 ನನ್ನಲ್ಲಿ ಪಾಪವಿದೆ ಎಂದು ನಿಮ್ಮಲ್ಲಿ ಯಾರು ಸ್ಥಾಪಿಸುವಿರಿ? ಮತ್ತು ನಾನು ಸತ್ಯವನ್ನು ಹೇಳಿದರೆ ನೀವು ನನ್ನನ್ನು ಯಾಕೆ ನಂಬುವದಿಲ್ಲ?

8:47b.JOH.008.047 ದೇವರಿಗೆ ಸಂಬಂಧಪಟ್ಟವನು ದೇವರ ವಾಕ್ಯಗಳನ್ನು ಕೇಳುತ್ತಾನೆ. ಆದರೆ ನೀವು ದೇವರಿಗೆ ಸಂಬಂಧಪಟ್ಟವರಲ್ಲದ ಕಾರಣ ಅವುಗಳನ್ನು ಕೇಳುವದಿಲ್ಲ ಎಂದು ಹೇಳಿದನು.

8:48b.JOH.008.048 ಆಗ ಯೆಹೂದ್ಯರು ಪ್ರತ್ಯುತ್ತರವಾಗಿ ಆತನಿಗೆ--ನೀನು ಸಮಾರ್ಯನು ಮತ್ತು ನಿನಗೆ ದೆವ್ವ ಹಿಡಿದದೆ ಎಂದು ನಾವು ಹೇಳುವದು ಸರಿಯಲ್ಲವೋ ಎಂದು ಹೇಳಿದರು.

8:49b.JOH.008.049 ಅದಕ್ಕೆ ಯೇಸು ಪ್ರತ್ಯುತ್ತರವಾಗಿ-- ನನಗೆ ದೆವ್ವ ಹಿಡಿದಿಲ್ಲ; ಆದರೆ ನನ್ನ ತಂದೆಯನ್ನು ಸನ್ಮಾನಿಸುತ್ತೇನೆ, ನೀವು ನನ್ನನ್ನು ಅವಮಾನ ಪಡಿಸುತ್ತೀರಿ.

8:50b.JOH.008.050 ಇದಲ್ಲದೆ ನಾನು ನನ್ನ ಸ್ವಂತ ಮಹಿಮೆಯನ್ನು ಹುಡುಕುವದಿಲ್ಲ; ಆದರೆ ಹುಡುಕು ವವನೂ ನ್ಯಾಯತೀರಿಸುವವನೂ ಒಬ್ಬನಿದ್ದಾನೆ.

8:51b.JOH.008.051 ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ--ಒಬ್ಬನು ನನ್ನ ಮಾತನ್ನು ಕೈಕೊಂಡರೆ ಅವನು ಎಂದಿಗೂ ಮರಣವನ್ನು ಕಾಣುವದಿಲ್ಲ ಅಂದನು.

8:52b.JOH.008.052 ಆಗ ಯೆಹೂದ್ಯರು ಆತನಿಗೆ--ನಿನಗೆ ದೆವ್ವ ಹಿಡಿದದೆ ಎಂದು ನಮಗೆ ಈಗ ತಿಳಿಯಿತು; ಅಬ್ರಹಾಮನು ಮತ್ತು ಪ್ರವಾದಿಗಳು ಸತ್ತರು; ಆದರೆ--ಯಾವನಾದರೂ ನನ್ನ ಮಾತನ್ನು ಕೈಕೊಂಡರೆ ಅವನು ಎಂದಿಗೂ ಮರಣವನ್ನು ಅನುಭವಿಸುವದಿಲ್ಲವೆಂದು ನೀನು ಹೇಳುತ್ತೀಯಲ್ಲಾ;

8:53b.JOH.008.053 ಸತ್ತುಹೋದ ನಮ್ಮ ತಂದೆ ಯಾದ ಅಬ್ರಹಾಮನಿಗಿಂತಲೂ ನೀನು ದೊಡ್ಡ ವನೋ? ಪ್ರವಾದಿಗಳೂ ಸತ್ತುಹೋದರು. ನಿನ್ನನ್ನು ಯಾರೆಂದು ನೀನು ಮಾಡಿಕೊಳ್ಳುತ್ತೀ ಎಂದು ಕೇಳಲು

8:54b.JOH.008.054 ಯೇಸು--ನನ್ನನ್ನು ನಾನೇ ಸನ್ಮಾನಿಸಿಕೊಂಡರೆ ನನ್ನ ಸನ್ಮಾನವು ಏನೂ ಅಲ್ಲ; ನೀವು ಯಾವಾತನನ್ನು ನಿಮ್ಮ ದೇವರೆಂದು ಹೇಳುತ್ತೀರೋ ಆ ನನ್ನ ತಂದೆಯೇ ನನ್ನನ್ನು ಸನ್ಮಾನಿಸುತ್ತಾನೆ.

8:55b.JOH.008.055 ಆದಾಗ್ಯೂ ನೀವು ಆತನನ್ನು ಅರಿತುಕೊಂಡಿಲ್ಲ; ಆದರೆ ನಾನು ಆತನನ್ನು ಅರಿತಿದ್ದೇನೆ. ನಾನು ಆತನನ್ನು ಅರಿಯಲಿಲ್ಲವೆಂದು ಹೇಳಿದರೆ ನಿಮ್ಮ ಹಾಗೆ ನಾನೂ ಸುಳ್ಳುಗಾರನಾಗಿ ರುವೆನು; ಆದರೆ ನಾನು ಆತನನ್ನು ಅರಿತಿದ್ದೇನೆ; ಆತನ ಮಾತನ್ನು ಕೈಕೊಂಡಿದ್ದೇನೆ.

8:56b.JOH.008.056 ನಿಮ್ಮ ತಂದೆಯಾದ ಅಬ್ರಹಾಮನು ನನ್ನ ದಿನವನ್ನು ನೋಡಲು ಸಂತೋಷಿ ಸಿದನು, ಅದನ್ನು ನೋಡಿ ಅವನು ಉಲ್ಲಾಸಗೊಂಡನು ಎಂದು ಹೇಳಿದನು.

8:57b.JOH.008.057 ಆಗ ಯೆಹೂದ್ಯರು ಆತ ನಿಗೆ--ನಿನಗೆ ಇನ್ನೂ ಐವತ್ತು ವರುಷವಾಗಿಲ್ಲ; ನೀನು ಅಬ್ರಹಾಮನನ್ನು ನೋಡಿದ್ದೀಯೋ ಅಂದರು.

8:58b.JOH.008.058 ಯೇಸು ಅವರಿಗೆ--ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಅಬ್ರಹಾಮನಿಗಿಂತ ಮುಂಚೆಯೇ ನಾನು ಇದ್ದೇನೆ ಅಂದನು.ಆಗ ಅವರು ಆತನ ಮೇಲೆ ಕಲ್ಲುಗಳನ್ನು ಎಸೆಯಲು ತಕ್ಕೊಂಡರು; ಆದರೆ ಯೇಸು ಅಡಗಿಕೊಂಡು ಅವರ ಮಧ್ಯದಿಂದ ದೇವಾಲಯದ ಹೊರಗೆ ಬಂದು ಅಲ್ಲಿಂದ ಹಾದು ಹೊರಟು ಹೋದನು.

8:59b.JOH.008.059 ಆಗ ಅವರು ಆತನ ಮೇಲೆ ಕಲ್ಲುಗಳನ್ನು ಎಸೆಯಲು ತಕ್ಕೊಂಡರು; ಆದರೆ ಯೇಸು ಅಡಗಿಕೊಂಡು ಅವರ ಮಧ್ಯದಿಂದ ದೇವಾಲಯದ ಹೊರಗೆ ಬಂದು ಅಲ್ಲಿಂದ ಹಾದು ಹೊರಟು ಹೋದನು.

9

9:1b.JOH.009.001 ಯೇಸು ಹಾದುಹೋಗುತ್ತಿರುವಾಗ ಹುಟ್ಟುಕುರುಡನಾಗಿದ್ದ ಒಬ್ಬ ಮನುಷ್ಯನನ್ನು ಕಂಡನು.

9:2b.JOH.009.002 ಆತನ ಶಿಷ್ಯರು--ಬೋಧಕನೇ, ಇವನು ಕುರುಡನಾಗಿ ಹುಟ್ಟಿರುವದಕ್ಕೆ ಪಾಪಮಾಡಿದವರು ಯಾರು? ಈ ಮನುಷ್ಯನೋ ಅಥವಾ ಇವನ ತಂದೆ ತಾಯಿಗಳೋ ಎಂದು ಆತನನ್ನು ಕೇಳಿದರು;

9:3b.JOH.009.003 ಯೇಸು ಪ್ರತ್ಯುತ್ತರವಾಗಿ--ಈ ಮನುಷ್ಯನಾಗಲಿ ಇಲ್ಲವೆ ಇವನ ತಂದೆತಾಯಿಗಳಾಗಲಿ ಪಾಪಮಾಡಲಿಲ್ಲ; ಆದರೆ ದೇವರ ಕ್ರಿಯೆಗಳು ಇವನಲ್ಲಿ ಪ್ರಕಟವಾಗುವದಕ್ಕಾ ಗಿಯೇ ಇದಾಯಿತು.

9:4b.JOH.009.004 ನನ್ನನ್ನು ಕಳುಹಿಸಿದಾತನ ಕೆಲಸ ಗಳನ್ನು ಹಗಲಿರುವಾಗ ನಾನು ಮಾಡತಕ್ಕದ್ದು; ರಾತ್ರಿ ಬರುತ್ತದೆ, ಆಗ ಯಾವ ಮನುಷ್ಯನೂ ಕೆಲಸಮಾಡ ಲಾರನು.

9:5b.JOH.009.005 ನಾನು ಈ ಲೋಕದಲ್ಲಿರುವವರೆಗೆ ಲೋಕದ ಬೆಳಕಾಗಿದ್ದೇನೆ ಅಂದನು.

9:6b.JOH.009.006 ಆತನು ಹೀಗೆ ಮಾತನಾಡಿ ನೆಲದ ಮೇಲೆ ಉಗುಳಿ ಆ ಉಗುಳಿನಿಂದ ಕೆಸರು ಮಾಡಿ ಆ ಕೆಸರನ್ನು ಕುರುಡನ ಕಣ್ಣುಗಳಿಗೆ ಹಚ್ಚಿದನು;

9:7b.JOH.009.007 ಅವನಿಗೆ--ಹೋಗು, ಸಿಲೋವ ಕೊಳ ದಲ್ಲಿ ತೊಳೆದುಕೋ(ಸಿಲೋವ ಅಂದರೆ ಕಳುಹಿಸಲ್ಪಟ್ಟ ವನು ಎಂದರ್ಥ) ಅಂದನು. ಅವನು ಹೋಗಿ ತೊಳೆದುಕೊಂಡು ದೃಷ್ಟಿಯುಳ್ಳವನಾಗಿ ಬಂದನು.

9:8b.JOH.009.008 ಹೀಗಿರುವದರಿಂದ ನೆರೆಯವರೂ ಅವನು ಮೊದಲು ಕುರುಡನಾಗಿದ್ದಾಗ ಅವನನ್ನು ನೋಡಿದವರೂ-- ಕೂತುಕೊಂಡು ಭಿಕ್ಷೆ ಬೇಡುತ್ತಿದ್ದವನು ಇವನೇ ಅಲ್ಲವೋ ಅಂದರು.

9:9b.JOH.009.009 ಕೆಲವರು--ಅವನು ಇವನೇ ಅಂದರು. ಬೇರೆಯವರು--ಇವನು ಅವನ ಹಾಗೆ ಇದ್ದಾನೆ ಅಂದರು. ಆದರೆ ಅವನು--ನಾನೇ ಅವನು ಎಂದು ಹೇಳಿದನು.

9:10b.JOH.009.010 ಆದದರಿಂದ ಅವರು ಅವ ನಿಗೆ--ನಿನ್ನ ಕಣ್ಣುಗಳು ಹೇಗೆ ತೆರೆಯಲ್ಪಟ್ಟವು ಎಂದು ಕೇಳಲು

9:11b.JOH.009.011 ಅವನು ಪ್ರತ್ಯುತ್ತರವಾಗಿ--ಯೇಸು ಎಂದು ಕರೆಯಲ್ಪಟ್ಟ ಮನುಷ್ಯನು ಕೆಸರುಮಾಡಿ ನನ್ನ ಕಣ್ಣಿಗೆ ಹಚ್ಚಿ ನನಗೆ--ಸಿಲೋವಕೊಳಕ್ಕೆ ಹೋಗಿ ತೊಳೆ ದುಕೋ ಎಂದು ಹೇಳಲು ನಾನು ಹೋಗಿ ತೊಳೆದು ಕೊಂಡು ದೃಷ್ಟಿಯನ್ನು ಹೊಂದಿದೆನು ಅಂದನು.

9:12b.JOH.009.012 ಆಗ ಅವರು ಅವನಿಗೆ--ಅವನು ಎಲ್ಲಿದ್ದಾನೆ? ಅಂದಾಗ ಅವನು--ನನಗೆ ಗೊತ್ತಿಲ್ಲ ಅಂದನು;

9:13b.JOH.009.013 ಮೊದಲು ಕುರುಡನಾಗಿದ್ದವನನ್ನು ಅವರು ಫರಿಸಾ ಯರ ಬಳಿಗೆ ಕರೆದುಕೊಂಡು ಬಂದರು.

9:14b.JOH.009.014 ಯೇಸು ಕೆಸರುಮಾಡಿ ಅವನ ಕಣ್ಣುಗಳನ್ನು ತೆರೆದಾಗ ಅದು ಸಬ್ಬತ್‌ದಿನವಾಗಿತ್ತು.

9:15b.JOH.009.015 ಆಗ ಫರಿಸಾಯರು ಸಹ ತಿರಿಗಿ ಅವನು ಹೇಗೆ ದೃಷ್ಟಿಹೊಂದಿದ್ದಾನೆಂದು ಅವ ನನ್ನು ಕೇಳಲು ಅವನು ಅವರಿಗೆ--ಆತನು ಕೆಸರನ್ನು ನನ್ನ ಕಣ್ಣುಗಳ ಮೇಲೆ ಇಡಲು ನಾನು ತೊಳೆದುಕೊಂಡ ವನಾಗಿ ನೋಡುತ್ತೇನೆ ಅಂದನು.

9:16b.JOH.009.016 ತರುವಾಯ ಫರಿಸಾಯರಲ್ಲಿ ಕೆಲವರು--ಈ ಮನುಷ್ಯನು ದೇವರಿಗೆ ಸಂಬಂಧಪಟ್ಟವನಲ್ಲ; ಯಾಕಂದರೆ ಈತನು ಸಬ್ಬತ್‌ ದಿನವನ್ನು ಕೈಕೊಳ್ಳುವವನಲ್ಲ ಅಂದರು. ಬೇರೆಯ ವರು--ಪಾಪಿಯಾದ ಒಬ್ಬ ಮನುಷ್ಯನು ಇಂಥ ಅದ್ಭುತ ಕಾರ್ಯಗಳನ್ನು ಹೇಗೆ ಮಾಡುತ್ತಾನೆ ಅಂದರು. ಹೀಗೆ ಅವರಲ್ಲಿ ಭೇದವುಂಟಾ

9:17b.JOH.009.017 ಅವರು ತಿರಿಗಿ ಕುರುಡನಿಗೆ--ನಿನ್ನ ಕಣ್ಣುಗಳನ್ನು ತೆರೆದಾತನ ವಿಷಯವಾಗಿ ನೀನು ಏನು ಹೇಳುತ್ತೀ ಅಂದಾಗ ಅವನು--ಆತನು ಒಬ್ಬ ಪ್ರವಾದಿ ಅಂದನು.

9:18b.JOH.009.018 ಆದರೆ ದೃಷ್ಟಿ ಹೊಂದಿದವನ ತಂದೆತಾಯಿ ಗಳನ್ನು ಕರೆಯುವವರೆಗೆ ಯೆಹೂದ್ಯರು ಅವನ ವಿಷಯವಾಗಿ ಅವನು ಕುರುಡನಾಗಿದ್ದು ದೃಷ್ಟಿ ಹೊಂದಿ ದನೆಂದು ನಂಬಲಿಲ್ಲ.

9:19b.JOH.009.019 ಅವರು--ಕುರುಡನಾಗಿ ಹುಟ್ಟಿದನೆಂದು ನೀವು ಹೇಳುವ ನಿಮ್ಮ ಮಗನು ಇವನೋ? ಹಾಗಾದರೆ ಈಗ ಅವನು ಹೇಗೆ ನೋಡುತ್ತಾನೆ ಎಂದು ಅವರನ್ನು ಕೇಳಿದರು.

9:20b.JOH.009.020 ಅವನ ತಂದೆತಾಯಿಗಳು ಪ್ರತ್ಯುತ್ತರವಾಗಿ ಅವರಿಗೆ--ಅವನು ನಮ್ಮ ಮಗನೆಂದೂ ಅವನು ಕುರುಡನಾಗಿ ಹುಟ್ಟಿದ ನೆಂದೂ ನಾವು ಬಲ್ಲೆವು.

9:21b.JOH.009.021 ಆದರೆ ಅವನು ಈಗ ಯಾವದರ ಮೂಲಕ ನೋಡುತ್ತಾನೋ ನಮಗೆ ಗೊತ್ತಿಲ್ಲ; ಇಲ್ಲವೆ ಯಾರು ಅವನ ಕಣ್ಣುಗಳನ್ನು ತೆರೆದರೋ ಅದೂ ನಮಗೆ ಗೊತ್ತಿಲ್ಲ; ಅವನು ಪ್ರಾಯದವನಾಗಿದ್ದಾನೆ. ಅವನನ್ನೇ ಕೇಳಿರಿ; ಅವನೇ ತನ್ನ ವಿಷಯ ಮಾತನಾಡುವನು ಎಂದು ಹೇಳಿದರು.

9:22b.JOH.009.022 ಅವನ ತಂದೆತಾಯಿಗಳು ಯೆಹೂದ್ಯರಿಗೆ ಭಯಪಟ್ಟ ದ್ದರಿಂದ ಈ ಮಾತುಗಳನ್ನು ಹೇಳಿದರು; ಯಾಕಂದರೆ ಯಾವನಾದರೂ ಆತನು ಕ್ರಿಸ್ತನೆಂದು ಒಪ್ಪಿಕೊಂಡರೆ ಅವನನ್ನು ಸಭಾಮಂದಿರದಿಂದ ಬಹಿಷ್ಕರಿಸಬೇಕೆಂದು ಯೆಹೂದ್ಯರು ಆಗಲೇ ನಿರ್ಣಯಿಸಿದ್ದರು.

9:23b.JOH.009.023 ಆದದ ರಿಂದ ಅವನ ತಂದೆ ತಾಯಿಗಳು--ಅವನು ಪ್ರಾಯದ ವನಾಗಿದ್ದಾನಲ್ಲಾ; ಅವನನ್ನೇ ಕೇಳಿರಿ ಎಂದು ಹೇಳಿದರು.

9:24b.JOH.009.024 ತರುವಾಯ ಅವರು ಆ ಕುರುಡನಾಗಿದ್ದ ಮನುಷ್ಯನನ್ನು ಕರೆದು ಅವನಿಗೆ--ದೇವರಿಗೆ ಸ್ತೋತ್ರ ಸಲ್ಲಿಸು; ಈ ಮನುಷ್ಯನು ಪಾಪಿಯೆಂದು ನಾವು ಬಲ್ಲೆವು ಅಂದರು.

9:25b.JOH.009.025 ಅವನು ಪ್ರತ್ಯುತ್ತರವಾಗಿ--ಆತನು ಪಾಪಿಯೋ ಅಲ್ಲವೋ ನನಗೆ ಗೊತ್ತಿಲ್ಲ; ಒಂದು ಮಾತ್ರ ಬಲ್ಲೆನು; ಅದೇನಂದರೆ ನಾನು ಕುರುಡನಾಗಿದ್ದೆನು; ಈಗ ನಾನು ನೋಡುತ್ತೇನೆ ಅಂದನು.

9:26b.JOH.009.026 ಅವರು ತಿರಿಗಿ ಅವನಿಗೆ--ಆತನು ನಿನಗೆ ಏನು ಮಾಡಿದನು? ಆತನು ನಿನ್ನ ಕಣ್ಣುಗಳನ್ನು ಹೇಗೆ ತೆರೆದನು ಎಂದು ಹೇಳಿದ್ದಕ್ಕೆ

9:27b.JOH.009.027 ಅವನು ಪ್ರತ್ಯುತ್ತರವಾಗಿ ಅವರಿಗೆ--ನಾನು ನಿಮಗೆ ಆಗಲೇ ಹೇಳಿದ್ದೇನಲ್ಲಾ; ಆದರೆ ನೀವು ಕೇಳಲಿಲ್ಲ; ನೀವು ಅದನ್ನು ತಿರಿಗಿ ಯಾಕೆ ಕೇಳಬೇಕೆಂದಿದ್ದೀರಿ? ಆತನ ಶಿಷ್ಯರಾಗುವದಕ್ಕೆ ನಿಮಗೂ ಮನಸ್ಸಿದೆಯೋ ಅಂದನು.

9:28b.JOH.009.028 ಆಗ ಅವರು ಅವನನ್ನು ದೂಷಿಸಿ--ನೀನು ಅವನ ಶಿಷ್ಯನು; ಆದರೆ ನಾವು ಮೋಶೆಯ ಶಿಷ್ಯರು.

9:29b.JOH.009.029 ಮೋಶೆಯ ಸಂಗಡ ದೇವರು ಮಾತನಾಡಿದನೆಂದು ನಾವು ಬಲ್ಲೆವು; ಆದರೆ ಇವನು ಎಲ್ಲಿಯವನೋ ನಮಗೆ ಗೊತ್ತಿಲ್ಲ ಅಂದರು.

9:30b.JOH.009.030 ಆಗ ಆ ಮನುಷ್ಯನು ಪ್ರತ್ಯುತ್ತರವಾಗಿ ಅವರಿಗೆ--ಆತನು ನನ್ನ ಕಣ್ಣುಗಳನ್ನು ತೆರೆದರೂ ಆತನು ಎಲ್ಲಿಯ ವನೆಂದು ನಿಮಗೆ ತಿಳಿಯದೆ ಇರುವದು ಆಶ್ಚರ್ಯವಾದ ವಿಷಯವಲ್ಲವೇ?

9:31b.JOH.009.031 ದೇವರು ಪಾಪಿಗಳ ಪ್ರಾರ್ಥನೆ ಯನ್ನು ಕೇಳುವದಿಲ್ಲ; ಆದರೆ ಯಾವನಾದರೂ ದೇವ ರನ್ನು ಆರಾಧಿಸುವವನಾಗಿದ್ದು ಆತನ ಚಿತ್ತದಂತೆ ನಡೆದರೆ ಅವನ ಪ್ರಾರ್ಥನೆಯನ್ನು ಆತನು ಕೇಳು ತ್ತಾನೆಂದು ನಾವು ಬಲ್ಲೆವು.

9:32b.JOH.009.032 ಹುಟ್ಟುಕುರುಡನಾಗಿದ್ದ ಒಬ್ಬ ಮನುಷ್ಯನ ಕಣ್ಣುಗಳನ್ನು ಯಾವನಾದರೂ ತೆರೆದಿ ದ್ದದ್ದನ್ನು ಲೋಕಾದಿಯಿಂದ ಕೇಳಿರಲಿಲ್ಲ.

9:33b.JOH.009.033 ಈ ಮನುಷ್ಯನು ದೇವರ ಕಡೆಯಿಂದ ಬಂದವನಲ್ಲ ದಿದ್ದರೆ ಏನೂ ಮಾಡಲಾರದೆ ಇರುತ್ತಿದ್ದನು ಅಂದನು.

9:34b.JOH.009.034 ಅದಕ್ಕೆ ಅವರು ಅವನಿಗೆ--ನೀನು ಕೇವಲ ಪಾಪ ದಲ್ಲಿಯೇ ಹುಟ್ಟಿದವನು; ನೀನು ನಮಗೆ ಬೋಧಿಸು ತ್ತೀಯೋ ಎಂದು ಹೇಳಿ ಅವನನ್ನು ಹೊರಗೆ ಹಾಕಿದರು.

9:35b.JOH.009.035 ಅವರು ಅವನನ್ನು ಹೊರಗೆ ಹಾಕಿದ್ದನ್ನು ಯೇಸು ಕೇಳಿ ಅವನನ್ನು ಕಂಡು ಅವನಿಗೆ--ನೀನು ದೇವರ ಮಗನನ್ನು ನಂಬುತ್ತೀಯೋ ಅಂದನು.

9:36b.JOH.009.036 ಅದಕ್ಕೆ ಅವನು ಪ್ರತ್ಯುತ್ತರವಾಗಿ--ಕರ್ತನೇ, ನಾನು ಆತನನ್ನು ನಂಬುವಂತೆ ಆತನು ಯಾರು ಅಂದನು.

9:37b.JOH.009.037 ಯೇಸು ಅವನಿಗೆ--ನೀನು ಆತನನ್ನು ನೋಡಿದ್ದೀ; ನಿನ್ನ ಸಂಗಡ ಮಾತನಾಡುತ್ತಿರುವ ನಾನೇ ಆತನು ಎಂದು ಹೇಳಿದನು.

9:38b.JOH.009.038 ಆಗ ಅವನು--ಕರ್ತನೇ, ನಾನು ನಂಬುತ್ತೇನೆ ಎಂದು ಹೇಳಿ ಆತನನ್ನು ಆರಾಧಿಸಿದನು.

9:39b.JOH.009.039 ಯೇಸು--ನೋಡದವರು ನೋಡುವಂತೆಯೂ ನೋಡುವವರು ಕುರುಡರಾಗುವಂತೆಯೂ ನ್ಯಾಯತೀರ್ಪಿಗೋಸ್ಕರ ನಾನು ಈ ಲೋಕಕ್ಕೆ ಬಂದಿದ್ದೇನೆ ಅಂದನು.

9:40b.JOH.009.040 ಆತ ನೊಂದಿಗಿದ್ದ ಫರಿಸಾಯರಲ್ಲಿ ಕೆಲವರು ಈ ಮಾತು ಗಳನ್ನು ಕೇಳಿ--ನಾವು ಸಹ ಕುರುಡರೋ ಎಂದು ಆತನನ್ನು ಕೇಳಿದರು.ಅದಕ್ಕೆ ಯೇಸು ಅವರಿಗೆ--ನೀವು ಕುರುಡರಾಗಿದ್ದರೆ ನಿಮ್ಮಲ್ಲಿ ಪಾಪವು ಇರುತ್ತಿರ ಲಿಲ್ಲ. ಆದರೆ--ನಾವು ನೋಡುತ್ತೇವೆಂದು ನೀವು ಹೇಳುವದರಿಂದ ನಿಮ್ಮ ಪಾಪವು ಉಳಿದದೆ ಅಂದನು.

9:41b.JOH.009.041 ಅದಕ್ಕೆ ಯೇಸು ಅವರಿಗೆ--ನೀವು ಕುರುಡರಾಗಿದ್ದರೆ ನಿಮ್ಮಲ್ಲಿ ಪಾಪವು ಇರುತ್ತಿರ ಲಿಲ್ಲ. ಆದರೆ--ನಾವು ನೋಡುತ್ತೇವೆಂದು ನೀವು ಹೇಳುವದರಿಂದ ನಿಮ್ಮ ಪಾಪವು ಉಳಿದದೆ ಅಂದನು.

10

10:1b.JOH.010.001 ನಾನು ನಿಮಗೆ ನಿಜನಿಜವಾಗಿ ಹೇಳು ತ್ತೇನೆ--ಬಾಗಲಿನಿಂದ ಕುರೀಹಟ್ಟಿಯೊಳಗೆ ಬಾರದೆ ಮತ್ತೆಲ್ಲಿಂದಾದರೂ ಹತ್ತಿಬರುವವನೇ ಕಳ್ಳನೂ ಸುಲುಕೊಳ್ಳುವವನೂ ಆಗಿದ್ದಾನೆ.

10:2b.JOH.010.002 ಆದರೆ ಬಾಗಲಿ ನಿಂದ ಒಳಗೆ ಬರುವವನು ಆ ಕುರಿಗಳ ಕುರುಬನಾಗಿ ದ್ದಾನೆ.

10:3b.JOH.010.003 ಬಾಗಲು ಕಾಯುವವನು ಅವನಿಗೆ ತೆರೆಯು ತ್ತಾನೆ; ಕುರಿಗಳು ಅವನ ಸ್ವರವನ್ನು ಕೇಳುತ್ತವೆ, ಅವನು ತನ್ನ ಸ್ವಂತ ಕುರಿಗಳನ್ನು ಹೆಸರು ಹೇಳಿ ಕರೆದು ಅವು ಗಳನ್ನು ಹೊರಗೆ ನಡಿಸುತ್ತಾನೆ.

10:4b.JOH.010.004 ಅವನು ತನ್ನ ಕುರಿ ಗಳನ್ನು ಹೊರಗೆ ಬಿಟ್ಟ ಮೇಲೆ ಅವುಗಳ ಮುಂದೆ ಹೋಗುತ್ತಾನೆ. ಕುರಿಗಳು ಅವನ ಸ್ವರವನ್ನು ತಿಳು ಕೊಳ್ಳುವದರಿಂದ ಅವನನ್ನು ಹಿಂಬಾಲಿಸುತ್ತವೆ;

10:5b.JOH.010.005 ಅವು ಅನ್ಯನನ್ನು ಹಿಂಬಾಲಿಸದೆ ಅವನ ಬಳಿಯಿಂದ ಓಡಿ ಹೋಗುವವು; ಅವು ಅನ್ಯರ ಸ್ವರವನ್ನು ತಿಳಿಯುವದಿಲ್ಲ.

10:6b.JOH.010.006 ಯೇಸು ಈ ಸಾಮ್ಯವನ್ನು ಅವರಿಗೆ ಹೇಳಿದನು; ಆದರೆ ಆತನು ಅವರ ಸಂಗಡ ಮಾತನಾಡಿದ ವಿಷಯಗಳು ಏನಾಗಿದ್ದವು ಎಂದು ಅವರು ಗ್ರಹಿಸಲಿಲ್ಲ.

10:7b.JOH.010.007 ಯೇಸು ತಿರಿಗಿ ಅವರಿಗೆ--ನಾನು ನಿಮಗೆ ನಿಜ ನಿಜವಾಗಿ ಹೇಳುತ್ತೇನೆ, ಕುರಿಗಳಿಗೆ ನಾನೇ ಬಾಗ ಲಾಗಿದ್ದೇನೆ.

10:8b.JOH.010.008 ನನಗಿಂತ ಮುಂಚೆ ಬಂದವರೆಲ್ಲರು ಕಳ್ಳರೂ ಸುಲುಕೊಳ್ಳುವವರೂ ಆಗಿದ್ದಾರೆ. ಆದರೆ ಕುರಿಗಳು ಅವರಿಗೆ ಕಿವಿಗೊಡಲಿಲ್ಲ.

10:9b.JOH.010.009 ನಾನೇ ಆಬಾಗಲು; ನನ್ನ ಮೂಲಕವಾಗಿ ಯಾವನಾದರೂ ಪ್ರವೇಶಿಸಿದರೆ ಅವನು ರಕ್ಷಣೆ ಹೊಂದುವನು; ಇದ ಲ್ಲದೆ ಅವನು ಒಳಗೆ ಹೋಗುತ್ತಾನೆ, ಹೊರಗೆ ಬರು ತ್ತಾನೆ ಮತ್ತು ಮೇವನ್ನು ಕಂಡುಕೊಳ್ಳುತ್ತಾನೆ.

10:10b.JOH.010.010 ಕಳ್ಳನು ಕದ್ದುಕೊಳ್ಳುವದಕ್ಕೂ ಕೊಲ್ಲುವದಕ್ಕೂ ಹಾಳುಮಾಡು ವದಕ್ಕೂ ಮಾತ್ರ ಬರುತ್ತಾನೇ ಹೊರತು ಮತ್ತಾವದಕ್ಕೂ ಬರುವದಿಲ್ಲ; ನಾನಾದರೋ ಅವುಗಳಿಗೆ ಜೀವವು ಇರಬೇಕೆಂತಲೂ ಸಮೃದ್ಧಿಯು ಇರಬೇಕೆಂತಲೂ ಬಂದೆನು.

10:11b.JOH.010.011 ನಾನೇ ಒಳ್ಳೇ ಕುರುಬನು; ಒಳ್ಳೇ ಕುರುಬನು ಕುರಿಗಳಿಗೋಸ್ಕರ ತನ್ನ ಪ್ರಾಣವನ್ನು ಕೊಡುತ್ತಾನೆ.

10:12b.JOH.010.012 ಆದರೆ ಕೂಲಿಯವನು ಕುರುಬನಲ್ಲವಾದದ ರಿಂದಲೂ ಕುರಿಗಳು ತನ್ನವುಗಳಲ್ಲವಾದದರಿಂದಲೂ ತೋಳ ಬರುವದನ್ನು ಕಂಡು ಕುರಿಗಳನ್ನು ಬಿಟ್ಟು ಓಡಿ ಹೋಗುತ್ತಾನೆ; ಆಗ ತೋಳವು ಕುರಿಗಳನ್ನು ಹಿಡಿದು ಕೊಂಡು ಅವುಗಳನ್ನು ಚದರಿಸುತ್ತದೆ.

10:13b.JOH.010.013 ಕೂಲಿಯವನು ಕೂಲಿಯವನೇ ಆಗಿರುವದರಿಂದ ಕುರಿಗಳಿಗೋಸ್ಕರ ಚಿಂತಿಸದೆ ಓಡಿ ಹೋಗುತ್ತಾನೆ.

10:14b.JOH.010.014 ನಾನೇ ಒಳ್ಳೇ ಕುರುಬನು; ನನ್ನ ಕುರಿಗಳನ್ನು ನಾನು ಬಲ್ಲೆನು. ನನ್ನ ಕುರಿಗಳು ನನ್ನನ್ನು ತಿಳಿದವೆ.

10:15b.JOH.010.015 ತಂದೆಯು ನನ್ನನ್ನು ತಿಳಿದಿರುವಂತೆ ನಾನು ತಂದೆಯನ್ನು ತಿಳಿದಿರುತ್ತೇನೆ; ಕುರಿಗಳಿಗೋಸ್ಕರ ನನ್ನ ಪ್ರಾಣವನ್ನು ಕೊಡುತ್ತೇನೆ.

10:16b.JOH.010.016 ಇದಲ್ಲದೆ ಈ ಹಟ್ಟಿಗೆ ಸೇರದ ಬೇರೆ ಕುರಿಗಳು ನನಗುಂಟು; ಅವುಗಳನ್ನು ಸಹ ನಾನು ತರಬೇಕು ಮತ್ತು ಅವು ನನ್ನ ಸ್ವರಕ್ಕೆ ಕಿವಿಗೊಡುವವು; ಆಗ ಒಂದೇ ಹಿಂಡು ಆಗುವದು ಮತ್ತು ಒಬ್ಬನೇ ಕುರುಬನು ಇರುವನು.

10:17b.JOH.010.017 ಯಾಕಂದರೆ ನಾನು ನನ್ನ ಪ್ರಾಣವನ್ನು ತಿರಿಗಿಪಡಕೊಳ್ಳುವಂತೆ ಅದನ್ನು ಕೊಡುತ್ತೇನೆ; ಆದದ ರಿಂದ ನನ್ನ ತಂದೆಯು ನನ್ನನ್ನು ಪ್ರೀತಿಸುತ್ತಾನೆ.

10:18b.JOH.010.018 ಯಾವ ಮನುಷ್ಯನಾದರೂ ಅದನ್ನು ನನ್ನಿಂದ ತೆಗೆಯುವದಿಲ್ಲ; ಆದರೆ ನನ್ನಷ್ಟಕ್ಕೆ ನಾನೇ ಅದನ್ನು ಕೊಡುತ್ತೇನೆ. ನಾನು ಅದನ್ನು ಕೊಡುವದಕ್ಕೆ ನನಗೆ ಅಧಿಕಾರವಿದೆ; ಅದನ್ನು ತಿರಿಗಿ ಪಡಕೊಳ್ಳುವದಕ್ಕೆ ನನಗೆ ಅಧಿಕಾರವಿದೆ. ಈ ಅಪ್ಪಣೆಯನ್ನು ನಾನು ನನ್ನ ತಂದೆ ಯಿಂದ ಹೊಂದಿದ್ದೇನೆ ಅಂದನು.

10:19b.JOH.010.019 ಈ ಮಾತುಗಳ ದೆಸೆಯಿಂದ ಯೆಹೂದ್ಯರ ಮಧ್ಯದಲ್ಲಿ ತಿರಿಗಿ ಭೇದಉಂಟಾಯಿತು.

10:20b.JOH.010.020 ಅವರಲ್ಲಿ ಅನೇಕರು--ಅವನಿಗೆ ದೆವ್ವ ಹಿಡಿದದೆ ಮತ್ತು ಹುಚ್ಚನಾಗಿ ದ್ದಾನೆ; ನೀವು ಯಾಕೆ ಅವನ ಮಾತನ್ನು ಕೇಳುತ್ತೀರಿ ಅಂದರು.

10:21b.JOH.010.021 ಬೇರೆಯವರು--ಇವು ದೆವ್ವ ಹಿಡಿದವನ ಮಾತುಗಳಲ್ಲ, ದೆವ್ವವು ಕುರುಡನ ಕಣ್ಣುಗಳನ್ನು ತೆರೆ ಯುವದಕ್ಕಾದೀತೇ ಅಂದರು.

10:22b.JOH.010.022 ಯೆರೂಸಲೇಮಿನಲ್ಲಿ (ದೇವಾಲಯದ) ಪ್ರತಿ ಷ್ಠೆಯ ಹಬ್ಬವಿತ್ತು; ಆಗ ಚಳಿಗಾಲವಾಗಿತ್ತು.

10:23b.JOH.010.023 ಯೇಸು ದೇವಾಲಯದಲ್ಲಿ ಸೊಲೊಮೋನನ ದ್ವಾರಾಂಗಳ ದೊಳಗೆ ತಿರುಗಾಡುತ್ತಿದ್ದನು;

10:24b.JOH.010.024 ಆಗ ಯೆಹೂದ್ಯರು ಆತನ ಸುತ್ತಲು ಬಂದು ಆತನಿಗೆ--ಇನ್ನು ಎಷ್ಟರ ವರೆಗೆ ನಮ್ಮನ್ನು ಸಂದೇಹಪಡಿಸುತ್ತೀ? ನೀನು ಕ್ರಿಸ್ತ ನಾಗಿದ್ದರೆ ನಮಗೆ ಸ್ಪಷ್ಟವಾಗಿ ಹೇಳು ಅಂದರು.

10:25b.JOH.010.025 ಯೇಸು ಅವರಿಗೆ--ನಾನು ನಿಮಗೆ ಹೇಳಿದೆನು, ಆದರೆ ನೀವು ನಂಬಲಿಲ್ಲ; ನನ್ನ ತಂದೆಯ ಹೆಸರಿನಲ್ಲಿ ನಾನು ಮಾಡುವ ಕ್ರಿಯೆಗಳೇ ನನ್ನ ವಿಷಯವಾಗಿ ಸಾಕ್ಷಿಕೊಡುತ್ತವೆ.

10:26b.JOH.010.026 ಆದರೆ ನಾನು ನಿಮಗೆ ಹೇಳಿದಂತೆ ನೀವು ನನ್ನ ಕುರಿಗಳಲ್ಲವಾದದರಿಂದ ನಂಬದೆ ಇದ್ದೀರಿ.

10:27b.JOH.010.027 ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ, ನಾನು ಅವುಗಳನ್ನು ಬಲ್ಲೆನು; ಅವು ನನ್ನನ್ನು ಹಿಂಬಾಲಿಸುತ್ತವೆ.

10:28b.JOH.010.028 ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ; ಅವು ಎಂದಿಗೂ ನಾಶವಾಗುವದಿಲ್ಲ; ಇಲ್ಲವೆ ಅವು ಗಳನ್ನು ಯಾವನೂ ನನ್ನ ಕೈಯೊಳಗಿಂದ ಕಸಕೊಳ್ಳ ಲಾರನು.

10:29b.JOH.010.029 ಅವುಗಳನ್ನು ನನಗೆ ಕೊಟ್ಟ ನನ್ನ ತಂದೆಯು ಎಲ್ಲರಿಗಿಂತಲೂ ದೊಡ್ಡವನು; ನನ್ನ ತಂದೆಯ ಕೈಯೊಳ ಗಿಂದ ಅವುಗಳನ್ನು ಯಾವನೂ ಕಸಕೊಳ್ಳಲಾರನು.

10:30b.JOH.010.030 ನಾನು ಮತ್ತು ನನ್ನ ತಂದೆಯು ಒಂದಾಗಿದ್ದೇವೆ ಎಂದು ಉತ್ತರಕೊಟ್ಟನು.

10:31b.JOH.010.031 ಆಗ ಯೆಹೂದ್ಯರು ತಿರಿಗಿ ಆತನನ್ನು ಕೊಲ್ಲುವ ದಕ್ಕಾಗಿ ಕಲ್ಲುಗಳನ್ನು ತಕ್ಕೊಂಡರು.

10:32b.JOH.010.032 ಅದಕ್ಕೆ ಯೇಸು ಅವರಿಗೆ--ನನ್ನ ತಂದೆಯಿಂದ ಅನೇಕ ಒಳ್ಳೇ ಕಾರ್ಯ ಗಳನ್ನು ನಾನು ನಿಮಗೆ ತೋರಿಸಿದ್ದೇನೆ; ಅವುಗಳಲ್ಲಿ ಯಾವ ಕಾರ್ಯಗಳಿಗೋಸ್ಕರ ನೀವು ನನ್ನ ಮೇಲೆ ಕಲ್ಲೆಸೆಯಬೇಕೆಂದಿದ್ದೀರಿ ಎಂದು ಕೇಳಿದನು.

10:33b.JOH.010.033 ಅದಕ್ಕೆ ಯೆಹೂದ್ಯರು ಪ್ರತ್ಯುತ್ತರವಾಗಿ ಆತನಿಗೆ--ಒಳ್ಳೇ ಕಾರ್ಯಗಳಿಗೋಸ್ಕರವಲ್ಲ, ದೇವದೂಷಣೆಗೋಸ್ಕ ರವೂ ನೀನು ಮನುಷ್ಯನಾಗಿದ್ದು ನಿನ್ನನ್ನು ನೀನೇ ದೇವರಾಗಿ ಮಾಡಿಕೊಳ್ಳುವದಕ್ಕೊಸ್ಕರವೂ ನಾವು ನಿನ್ನ ಮೇಲೆ ಕಲ್ಲೆಸೆಯುತ್ತೇವೆ ಅಂದರು.

10:34b.JOH.010.034 ಯೇಸು ಪ್ರತ್ಯುತ್ತರವಾಗಿ ಅವರಿಗೆ--ನೀವು ದೇವರುಗಳಾ ಗಿದ್ದೀರಿ ಎಂದು ನಾನು ಹೇಳಿದೆನು ಎಂಬದಾಗಿ ನಿಮ್ಮ ನ್ಯಾಯಪ್ರಮಾಣದಲ್ಲಿ ಬರೆದಿರುವದಿಲ್ಲವೋ?

10:35b.JOH.010.035 ಹಾಗಾದರೆ ದೇವರವಾಕ್ಯವನ್ನು ಹೊಂದಿದವರು ದೇವರುಗಳೆಂದು ಆತನು ಕರೆದಿರುವಲ್ಲಿ ಬರಹವು ವ್ಯರ್ಥವಾಗಲಾರದಷ್ಟೆ.

10:36b.JOH.010.036 ತಂದೆಯು ಪ್ರತಿಷ್ಠೆಮಾಡಿ ಲೋಕಕ್ಕೆ ಕಳುಹಿಸಿಕೊಟ್ಟವನಾದ ನಾನು ದೇವರ ಮಗನಾಗಿದ್ದೇನೆಂದು ಹೇಳಿದ್ದಕ್ಕೆ--ನೀನು ದೇವ ದೂಷಣೆ ಮಾಡುತ್ತೀ ಎಂದು ನೀವು ಅನ್ನುತ್ತೀರೋ?

10:37b.JOH.010.037 ನನ್ನ ತಂದೆಯ ಕಾರ್ಯಗಳನ್ನು ನಾನು ಮಾಡದೆ ಹೋದರೆ ನನ್ನನ್ನು ನಂಬಬೇಡಿರಿ.

10:38b.JOH.010.038 ನಾನು ಮಾಡಿ ದರೂ ನೀವು ನನ್ನನ್ನು ನಂಬದಿದ್ದರೆ ತಂದೆಯು ನನ್ನ ಲ್ಲಿಯೂ ನಾನು ಆತನಲ್ಲಿಯೂ ಇರುವದನ್ನು ನೀವು ತಿಳಿದುಕೊಂಡು ನಂಬುವಂತೆ ಈ ಕಾರ್ಯಗಳನ್ನಾ ದರೂ ನಂಬಿರಿ ಅಂದನು.

10:39b.JOH.010.039 ಆದದರಿಂದ ತಿರಿಗಿ ಅವರು ಆತನನ್ನು ಹಿಡಿಯುವದಕ್ಕೆ ಹುಡುಕಿದರು; ಆದರೆ ಆತನು ಅವರ ಕೈಯಿಂದ ತಪ್ಪಿಸಿಕೊಂಡು

10:40b.JOH.010.040 ಯೋಹಾನನು ಮೊದಲು ಬಾಪ್ತಿಸ್ಮ ಮಾಡಿಸುತ್ತಿದ್ದ ಸ್ಥಳವಾದ ಯೊರ್ದನಿನ ಆಚೆಗೆ ತಿರಿಗಿಹೋಗಿ ಅಲ್ಲಿ ವಾಸಿಸಿದನು.

10:41b.JOH.010.041 ಆಗ ಅನೇಕರು ಆತನ ಬಳಿಗೆ ಬಂದು--ಯೋಹಾನನು ಅದ್ಭುತಕಾರ್ಯಗಳನ್ನು ಮಾಡಲಿಲ್ಲ; ಆದರೆ ಈ ಮನುಷ್ಯನ ವಿಷಯವಾಗಿ ಯೋಹಾನನು ಹೇಳಿದ್ದೆಲ್ಲವೂ ನಿಜವಾಗಿದೆ ಅಂದರು.ಅಲ್ಲಿ ಅನೇಕರು ಆತನ ಮೇಲೆ ನಂಬಿಕೆಯಿಟ್ಟರು.

10:42b.JOH.010.042 ಅಲ್ಲಿ ಅನೇಕರು ಆತನ ಮೇಲೆ ನಂಬಿಕೆಯಿಟ್ಟರು.

11

11:1b.JOH.011.001 ಮರಿಯಳ ಮತ್ತು ಆಕೆಯ ಸಹೋದರಿ ಯಾದ ಮಾರ್ಥಳ ಊರಾದ ಬೇಥಾನ್ಯ ದಲ್ಲಿ ಲಾಜರನೆಂಬವನೊಬ್ಬನು ಅಸ್ವಸ್ಥನಾಗಿದ್ದನು.

11:2b.JOH.011.002 (ಕರ್ತನಿಗೆ ತೈಲವನ್ನು ಹಚ್ಚಿ ತನ್ನ ತಲೇಕೂದಲಿನಿಂದ ಆತನ ಪಾದಗಳನ್ನು ಒರಸಿದ ಈ ಮರಿಯಳ ಸಹೋ ದರನಾದ ಲಾಜರನು ಅಸ್ವಸ್ಥನಾಗಿದ್ದನು).

11:3b.JOH.011.003 ಆದದ ರಿಂದ ಅವನ ಸಹೋದರಿಯರು--ಕರ್ತನೇ, ಇಗೋ, ನೀನು ಪ್ರೀತಿಮಾಡುತ್ತಿರುವವನು ಅಸ್ವಸ್ಥನಾಗಿದ್ದಾನೆ ಎಂದು ಆತನಿಗೆ ಹೇಳಿಕಳುಹಿಸಿದರು.

11:4b.JOH.011.004 ಯೇಸು ಅದನ್ನು ಕೇಳಿ--ಈ ರೋಗವು ಮರಣಕ್ಕಾಗಿಯಲ್ಲ, ಆದರೆ ದೇವಕುಮಾರನು ಅದರಿಂದ ಮಹಿಮೆ ಹೊಂದುವಂತೆ ದೇವರ ಮಹಿಮೆಗೋಸ್ಕರವೇ ಬಂದದ್ದು ಎಂದು ಹೇಳಿದನು.

11:5b.JOH.011.005 ಮಾರ್ಥಳನ್ನೂ ಅವಳ ಸಹೋದರಿಯನ್ನೂ ಲಾಜರನನ್ನೂ ಯೇಸು ಪ್ರೀತಿಸು ತ್ತಿದ್ದನು.

11:6b.JOH.011.006 ಅವನು ಅಸ್ವಸ್ಥನಾಗಿದ್ದಾನೆಂದು ಆತನು ಕೇಳಿ ದರೂ ಎರಡು ದಿವಸ ತಾನಿದ್ದ ಸ್ಥಳದಲ್ಲೇ ಉಳಿದನು.

11:7b.JOH.011.007 ತರುವಾಯ ಆತನು ತನ್ನ ಶಿಷ್ಯರಿಗೆ--ನಾವು ತಿರಿಗಿ ಯೂದಾಯಕ್ಕೆ ಹೋಗೋಣ ಅಂದನು.

11:8b.JOH.011.008 ಆತನ ಶಿಷ್ಯರು ಆತನಿಗೆ--ಬೋಧಕನೇ, ಆಗಲೇ ಯೆಹೂದ್ಯರು ನಿನ್ನ ಮೇಲೆ ಕಲ್ಲೆಸೆಯಬೇಕೆಂದು ಹುಡುಕುತ್ತಿ ದ್ದರಲ್ಲಾ; ತಿರಿಗಿ ನೀನು ಅಲ್ಲಿಗೆ ಹೋಗುತ್ತೀಯೋ? ಅಂದರು.

11:9b.JOH.011.009 ಯೇಸು--ಹಗಲಿಗೆ ಹನ್ನೆರಡು ತಾಸುಗಳು ಇವೆಯಲ್ಲವೇ? ಯಾವ ಮನುಷ್ಯನಾದರೂ ಹಗಲಿ ನಲ್ಲಿ ತಿರುಗಾಡಿದರೆ ಈ ಲೋಕದ ಬೆಳಕನ್ನು ನೋಡು ವದರಿಂದ ಅವನು ಎಡವುವದಿಲ್ಲ.

11:10b.JOH.011.010 ಆದರೆ ಒಬ್ಬ ಮನುಷ್ಯನು ರಾತ್ರಿಯಲ್ಲಿ ತಿರುಗಾಡಿದರೆ ತನ್ನಲ್ಲಿ ಬೆಳಕು ಇಲ್ಲವಾದದರಿಂದ ಅವನು ಎಡವುತ್ತಾನೆ ಎಂದು ಉತ್ತರಕೊಟ್ಟನು.

11:11b.JOH.011.011 ಈ ಮಾತುಗಳನ್ನು ಹೇಳಿದ ತರುವಾಯ ಆತನು ಅವರಿಗೆ--ನಮ್ಮ ಸ್ನೇಹಿತನಾದ ಲಾಜರನು ನಿದ್ರಿಸುತ್ತಿದ್ದಾನೆ; ಆದರೆ ನಾನು ಅವನನ್ನು ನಿದ್ರೆಯಿಂದ ಎಬ್ಬಿಸುವದಾಕ್ಕಾಗಿ ಹೋಗುತ್ತೇನೆ ಎಂದು ಹೇಳಿದನು.

11:12b.JOH.011.012 ಆಗ ಆತನ ಶಿಷ್ಯರು--ಕರ್ತನೇ, ಅವನು ನಿದ್ರೆಮಾಡುತ್ತಿದ್ದರೆ ಸ್ವಸ್ಥನಾಗುವನು ಅಂದರು.

11:13b.JOH.011.013 ಆದರೆ ಯೇಸು ಅವನ ಮರಣದ ವಿಷಯವಾಗಿ ಹೇಳಿದ್ದನು; ಆದರೆ ಅವರು ನಿದ್ರೆಯಲ್ಲಿಯ ವಿಶ್ರಾಂತಿ ಕುರಿತು ಆತನು ಹೇಳಿದ ನೆಂದು ಯೋಚಿಸಿದರು.

11:14b.JOH.011.014 ಆಗ ಯೇಸು ಸ್ಪಷ್ಟವಾಗಿ ಅವರಿಗೆ--ಲಾಜರನು ಸತ್ತಿದ್ದಾನೆ.

11:15b.JOH.011.015 ನೀವು ನಂಬು ವಂತೆ ನಿಮಗೋಸ್ಕರ ನಾನು ಅಲ್ಲಿ ಇಲ್ಲದಿರುವದಕ್ಕೆ ಸಂತೋಷಪಡುತ್ತೇನೆ; ಹೇಗೂ ನಾವು ಅವನ ಬಳಿಗೆ ಹೋಗೋಣ ಎಂದು ಅವರಿಗೆ ಹೇಳಿದನು.

11:16b.JOH.011.016 ತರು ವಾಯ ದಿದುಮನೆಂಬ ತೋಮನು ತನ್ನ ಜೊತೆ ಶಿಷ್ಯರಿಗೆ--ನಾವು ಸಹ ಆತನೊಂದಿಗೆ ಸಾಯುವಂತೆ ಹೋಗೋಣ ಅಂದನು.

11:17b.JOH.011.017 ತರುವಾಯ ಯೇಸು ಬಂದಾಗ ಲಾಜರನನ್ನು ಸಮಾಧಿಯಲ್ಲಿಟ್ಟು ಆಗಲೇ ನಾಲ್ಕು ದಿವಸಗಳಾಗಿದ್ದ ವೆಂದು ಆತನು ತಿಳಿದುಕೊಂಡನು;

11:18b.JOH.011.018 ಬೇಥಾನ್ಯವು ಯೆರೂಸಲೇಮಿಗೆ ಹೆಚ್ಚುಕಡಿಮೆ ಒಂದು ಹರದಾರಿ ಯಷ್ಟು ಸವಿಾಪದಲ್ಲಿತ್ತು.

11:19b.JOH.011.019 ಯೆಹೂದ್ಯರಲ್ಲಿ ಅನೇಕರು ಮಾರ್ಥಳನ್ನು ಮತ್ತು ಮರಿಯಳನ್ನು ಅವರ ಸಹೋ ದರನ ವಿಷಯವಾಗಿ ಆದರಿಸುವದಕ್ಕೆ ಬಂದಿದ್ದರು.

11:20b.JOH.011.020 ಆಗ ಯೇಸು ಬರುತ್ತಿದ್ದಾನೆಂದು ಮಾರ್ಥಳು ಕೇಳು ತ್ತಲೇ ಹೋಗಿ ಆತನನ್ನು ಎದುರುಗೊಂಡಳು. ಮರಿಯಳಾದರೋ ಮನೆಯಲ್ಲಿಯೇ ಕೂತುಕೊಂಡಿ ದ್ದಳು.

11:21b.JOH.011.021 ಆಗ ಮಾರ್ಥಳು ಯೇಸುವಿಗೆ-- ಕರ್ತನೇ, ನೀನು ಇಲ್ಲಿ ಇರುತ್ತಿದ್ದರೆ ನನ್ನ ಸಹೋದರನು ಸಾಯು ತ್ತಿರಲಿಲ್ಲ.

11:22b.JOH.011.022 ಆದರೆ ಈಗಲೂ ಸಹ ನೀನು ದೇವರಿಂದ ಏನು ಕೇಳಿಕೊಳ್ಳುತ್ತೀಯೋ ದೇವರು ಅದನ್ನು ನಿನಗೆ ಕೊಡುವನೆಂದು ನಾನು ಬಲ್ಲೆನು ಅಂದಳು.

11:23b.JOH.011.023 ಯೇಸು ಆಕೆಗೆ--ನಿನ್ನ ಸಹೋದರನು ತಿರಿಗಿ ಎದ್ದೇಳುವನು ಎಂದು ಹೇಳಿದನು.

11:24b.JOH.011.024 ಮಾರ್ಥಳು ಆತನಿಗೆ--ಕಡೇ ದಿನದಲ್ಲಿ ಪುನರುತ್ಥಾನವಾಗುವಾಗ ಅವನೂ ತಿರಿಗಿ ಎದ್ದೇಳುವನೆಂದು ನಾನು ಬಲ್ಲೆನು ಎಂದು ಹೇಳಿದಳು.

11:25b.JOH.011.025 ಯೇಸು ಆಕೆಗೆ--ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನಲ್ಲಿ ನಂಬಿಕೆ ಇಡುವವನು ಸತ್ತರೂ ಬದುಕುವನು;

11:26b.JOH.011.026 ಯಾವನಾದರೂ ಬದುಕುತ್ತಾ ನನ್ನಲ್ಲಿ ನಂಬಿಕೆಯಿಡುವದಾದರೆ ಅವನು ಎಂದಿಗೂ ಸಾಯುವ ದಿಲ್ಲ. ಇದನ್ನು ನೀನು ನಂಬುತ್ತೀಯೋ ಎಂದು ಕೇಳಿದ್ದಕ್ಕೆ

11:27b.JOH.011.027 ಆಕೆಯು ಆತನಿಗೆ--ಹೌದು, ಕರ್ತನೇ, ಲೋಕಕ್ಕೆ ಬರಬೇಕಾಗಿದ್ದ ದೇವರಮಗನಾದ ಕ್ರಿಸ್ತನು ನೀನೇ ಎಂದು ನಾನು ನಂಬುತ್ತೇನೆ ಅಂದಳು.

11:28b.JOH.011.028 ಆಕೆಯು ಹೀಗೆ ಹೇಳಿದ ಮೇಲೆ ಹೊರಟು ಹೋಗಿ ತನ್ನ ಸಹೋದರಿಯಾದ ಮರಿಯಳನ್ನು ಗುಪ್ತ ವಾಗಿ ಕರೆದು--ಬೋಧಕನು ಬಂದಿದ್ದಾನೆ, ನಿನ್ನನ್ನು ಕರೆಯುತ್ತಾನೆ ಅಂದಳು.

11:29b.JOH.011.029 ಆಕೆಯು ಇದನ್ನು ಕೇಳಿದ ಕೂಡಲೆ ತಟ್ಟನೆ ಎದ್ದು ಆತನ ಬಳಿಗೆ ಬಂದಳು.

11:30b.JOH.011.030 ಯೇಸು ಇನ್ನೂ ಊರೊಳಕ್ಕೆ ಬಾರದೆ ಮಾರ್ಥಳು ಆತನನ್ನು ಸಂಧಿಸಿದ ಸ್ಥಳದಲ್ಲಿಯೇ ಇದ್ದನು.

11:31b.JOH.011.031 ಮನೆ ಯಲ್ಲಿ ಆಕೆಯ ಕೂಡ ಇದ್ದು ಆಕೆಯನ್ನು ಆದರಿಸುತ್ತಿದ್ದ ಯೆಹೂದ್ಯರು ಆಕೆಯು ತಟ್ಟನೆ ಎದ್ದು ಹೊರಗೆ ಹೋಗುವದನ್ನು ನೋಡಿ--ಆಕೆಯು ಅಳುವದಕ್ಕಾಗಿ ಸಮಾಧಿಯ ಬಳಿಗೆ ಹೋಗುತ್ತಾಳೆಂದು ತಿಳಿದು ಆಕೆ ಯನ್ನು ಹಿಂಬಾಲಿಸಿದರು.

11:32b.JOH.011.032 ತರುವಾಯ ಯೇಸು ಇದ್ದ ಸ್ಥಳಕ್ಕೆ ಮರಿಯಳು ಬಂದು ಆತನನ್ನು ಕಂಡು ಆತನ ಪಾದಗಳಿಗೆ ಬಿದ್ದು ಆತನಿಗೆ--ಕರ್ತನೇ, ನೀನು ಇಲ್ಲಿ ಇರುತ್ತಿದ್ದರೆ ನನ್ನ ಸಹೋದರನು ಸಾಯುತ್ತಿರಲಿಲ್ಲ ಎಂದು ಹೇಳಿದಳು.

11:33b.JOH.011.033 ಆಕೆಯು ಅಳುವದನ್ನು ಮತ್ತು ಆಕೆಯೊಂದಿಗೆ ಬಂದ ಯೆಹೂದ್ಯರು ಸಹ ಅಳುವದನ್ನು ಯೇಸು ನೋಡಿದಾಗ ಆತ್ಮದಲ್ಲಿ ಕಳವಳಪಟ್ಟು ಮೂಲ್ಗುತ್ತಾ--

11:34b.JOH.011.034 ಅವನನ್ನು ಎಲ್ಲಿ ಇಟ್ಟಿದ್ದೀರಿ ಅಂದನು. ಅವರು ಆತನಿಗೆ--ಕರ್ತನೇ, ಬಂದು ನೋಡು ಅಂದರು.

11:35b.JOH.011.035 ಯೇಸು ಅತ್ತನು.

11:36b.JOH.011.036 ಆಗ ಯೆಹೂದ್ಯ ರು--ಇಗೋ, ಆತನು ಅವನನ್ನು ಎಷ್ಟು ಪ್ರೀತಿ ಮಾಡಿದನಲ್ಲಾ ಅಂದರು.

11:37b.JOH.011.037 ಅವರಲ್ಲಿ ಕೆಲ ವರು--ಆ ಕುರುಡನ ಕಣ್ಣುಗಳನ್ನು ತೆರೆದ ಈ ಮನುಷ್ಯನು ಇವನನ್ನೂ ಸಾಯದಹಾಗೆ ಮಾಡಲಾರದೆ ಇದ್ದನೇ ಅಂದರು.

11:38b.JOH.011.038 ಆದದರಿಂದ ಯೇಸು ತಿರಿಗಿ ತನ್ನಲ್ಲಿ ಮೂಲ್ಗುತ್ತಾ ಸಮಾಧಿಗೆ ಬಂದನು. ಅದು ಗವಿಯಾಗಿತ್ತು; ಒಂದು ಕಲ್ಲು ಅದರ ಮೇಲೆ ಇಟ್ಟಿತ್ತು.

11:39b.JOH.011.039 ಯೇಸು--ಆ ಕಲ್ಲನ್ನು ತೆಗೆದುಹಾಕಿರಿ ಅಂದನು. ಅದಕ್ಕೆ ಸತ್ತುಹೋದವನ ಸಹೋದರಿಯಾದ ಮಾರ್ಥಳು ಆತನಿಗೆ--ಕರ್ತನೇ, ಇಷ್ಟರೊಳಗೆ ಅವನು ನಾರುತ್ತಾನೆ; ಯಾಕಂದರೆ ಅವನು ಸತ್ತು ನಾಲ್ಕು ದಿನಗಳಾದವು ಅಂದಳು.

11:40b.JOH.011.040 ಯೇಸು ಆಕೆಗೆ--ನೀನು ನಂಬುವದಾದರೆ ದೇವರ ಮಹಿಮೆಯನ್ನು ನೋಡುವಿ ಎಂದು ನಾನು ನಿನಗೆ ಹೇಳಲಿಲ್ಲವೇ ಅಂದನು.

11:41b.JOH.011.041 ಆಗ ಅವರು ಸತ್ತವನನ್ನು ಇಟ್ಟಿದ್ದ ಸ್ಥಳದಿಂದ ಕಲ್ಲನ್ನು ತೆಗೆದುಹಾಕಿದರು. ಯೇಸು ಕಣ್ಣೆತ್ತಿ ಮೇಲಕ್ಕೆ ನೋಡಿ--ತಂದೆಯೇ, ನೀನು ನನ್ನ ಪ್ರಾರ್ಥನೆಯನ್ನು ಕೇಳಿದ್ದಕ್ಕೆ ನಾನು ನಿನ್ನನ್ನು ಕೊಂಡಾಡುತ್ತೇನೆ.

11:42b.JOH.011.042 ನೀನು ನನ್ನ ಪ್ರಾರ್ಥನೆಯನ್ನು ಯಾವಾಗಲೂ ಕೇಳುತ್ತೀ ಎಂದು ನಾನು ಬಲ್ಲೆನು. ಆದರೆ ನನ್ನ ಹತ್ತಿರದಲ್ಲಿ ನಿಂತಿರುವ ಜನರ ನಿಮಿತ್ತವಾಗಿ ನೀನು ನನ್ನನ್ನು ಕಳುಹಿಸಿದ್ದೀ ಎಂದು ಅವರು ನಂಬುವಂತೆ ನಾನು ಅದನ್ನು ಹೇಳಿದೆನು ಅಂದನು.

11:43b.JOH.011.043 ಆತನು ಹೀಗೆ ಮಾತನಾಡಿದ ಮೇಲೆ--ಲಾಜರನೇ, ಹೊರಗೆ ಬಾ ಎಂದು ಗಟ್ಟಿಯಾದ ಸ್ವರದಿಂದ ಕೂಗಿದನು.

11:44b.JOH.011.044 ಆಗ ಪ್ರೇತ ವಸ್ತ್ರಗಳಿಂದ ಕೈಕಾಲುಗಳನ್ನು ಕಟ್ಟಿದ್ದ ಆ ಸತ್ತವನು ಹೊರಗೆ ಬಂದನು. ಅವನ ಮುಖವು ವಸ್ತ್ರ ದಿಂದ ಸುತ್ತಲ್ಪಟ್ಟಿತ್ತು; ಯೇಸು ಅವರಿಗೆ--ಅವನನ್ನು ಬಿಚ್ಚಿರಿ, ಅವನು ಹೋಗಲಿ ಎಂದು ಹೇಳಿದನು.

11:45b.JOH.011.045 ಆಗ ಮರಿಯಳ ಬಳಿಗೆ ಬಂದಿದ್ದ ಯೆಹೂದ್ಯ ರಲ್ಲಿ ಅನೇಕರು ಯೇಸು ಮಾಡಿದವುಗಳನ್ನು ನೋಡಿ ಆತನಲ್ಲಿ ನಂಬಿಕೆಯಿಟ್ಟರು.

11:46b.JOH.011.046 ಆದರೆ ಅವರಲ್ಲಿ ಕೆಲವರು ಫರಿಸಾಯರ ಬಳಿಗೆ ಹೋಗಿ ಯೇಸು ಮಾಡಿದವುಗಳನ್ನು ಅವರಿಗೆ ಹೇಳಿದರು.

11:47b.JOH.011.047 ಆಗ ಪ್ರಧಾನಯಾಜಕರೂ ಫರಿಸಾಯರೂ ಆಲೋಚನಾ ಸಭೆಯನ್ನು ಕೂಡಿಸಿ--ಈ ಮನುಷ್ಯನು ಅನೇಕ ಅದ್ಭುತಕಾರ್ಯಗಳನ್ನು ಮಾಡುತ್ತಾನಲ್ಲಾ, ನಾವು ಏನು ಮಾಡೋಣ?

11:48b.JOH.011.048 ನಾವು ಅವನನ್ನು ಹಾಗೆಯೇ ಬಿಟ್ಟರೆ ಎಲ್ಲರೂ ಅವನ ಮೇಲೆ ನಂಬಿಕೆಯಿಡುವರು ಮತ್ತು ರೋಮಾಯರು ಬಂದು ನಮ್ಮ ಸ್ಥಳವನ್ನೂ ಜನಾಂಗವನ್ನೂ ತೆಗೆದುಕೊಂಡು ಬಿಟ್ಟಾರು ಅಂದರು.

11:49b.JOH.011.049 ಆದರೆ ಅವರಲ್ಲಿ ಆ ವರುಷದ ಮಹಾಯಾಜಕ ನಾದ ಕಾಯಫನೆಂಬವನು ಅವರಿಗೆ--

11:50b.JOH.011.050 ನಿಮಗೆ ಏನೂ ತಿಳಿಯದು; ಜನಾಂಗವೆಲ್ಲಾ ನಾಶವಾಗದ ಹಾಗೆ ಒಬ್ಬ ಮನುಷ್ಯನು ಜನರಿಗೋಸ್ಕರ ಸಾಯುವದು ನಮಗೆ ವಿಹಿತವಾಗಿದೆ ಎಂದು ನೀವು ಯೋಚಿಸುವದೂ ಇಲ್ಲ ಅಂದನು.

11:51b.JOH.011.051 ಈ ಮಾತನ್ನು ತನ್ನಷ್ಟಕ್ಕೆ ತಾನೇ ಮಾತನಾಡಲಿಲ್ಲ; ಆದರೆ ಅವನು ಆ ವರುಷದಲ್ಲಿ ಮಹಾಯಾಜಕನಾಗಿದ್ದು ಯೇಸು ಆ ಜನಾಂಗಕ್ಕೋಸ್ಕರ ಮಾತ್ರವಲ್ಲದೆ

11:52b.JOH.011.052 ಚದರಿರುವ ದೇವರ ಮಕ್ಕಳನ್ನು ಒಟ್ಟುಗೂಡಿಸುವದಕ್ಕೂ ಆತನು ಸಾಯಬೇಕಾಗಿದೆ ಎಂದು ಅವನು ಪ್ರವಾದಿಸಿದನು.

11:53b.JOH.011.053 ಅವರು ಕೂಡಿ ಕೊಂಡು ಆ ದಿನದಿಂದ ಆತನನ್ನು ಕೊಲ್ಲಬೇಕೆಂದು ಆಲೋಚನೆ ಮಾಡಿಕೊಂಡರು.

11:54b.JOH.011.054 ಹೀಗಿರುವದರಿಂದ ಯೇಸು ಯೆಹೂದ್ಯರ ಮಧ್ಯದಲ್ಲಿ ಬಹಿರಂಗವಾಗಿ ತಿರುಗಾಡಲಿಲ್ಲ. ಆದರೆ ಅಲ್ಲಿಂದ ಅಡವಿಗೆ ಸವಿಾಪ ದಲ್ಲಿದ್ದ ಪ್ರದೇಶದ ಎಫ್ರಾಯಿಮ್‌ ಎಂಬ ಪಟ್ಟಣಕ್ಕೆ ಹೋಗಿ ಅಲ್ಲಿ ತನ್ನ ಶಿಷ್ಯರ ಸಂಗಡ ಇದ್ದನು.

11:55b.JOH.011.055 ಆಗ ಯೆಹೂದ್ಯರ ಪಸ್ಕವು ಹತ್ತಿರವಾಗಿತ್ತು; ಅನೇಕರು ತಮ್ಮನ್ನು ಶುದ್ಧಿ ಮಾಡಿಕೊಳ್ಳುವದಕ್ಕೋಸ್ಕರ ಪಸ್ಕಕ್ಕೆ ಮುಂಚೆ ಹಳ್ಳಿಗಳಿಂದ ಯೆರೂಸಲೇಮಿಗೆ ಹೋದರು.

11:56b.JOH.011.056 ಆಗ ಅವರು ಯೇಸುವನ್ನು ಹುಡುಕು ವವರಾಗಿ ದೇವಾಲಯದಲ್ಲಿ ನಿಂತುಕೊಂಡಿದ್ದಾಗ--ಆತನು ಹಬ್ಬಕ್ಕೆ ಬರುವದಿಲ್ಲವೋ? ನಿಮಗೆ ಹೇಗೆ ಕಾಣುತ್ತದೆ ಎಂದು ತಮ್ಮತಮ್ಮೊಳಗೆ ಮಾತನಾಡಿ ಕೊಂಡರು.ಆಗ ಪ್ರಧಾನಯಾಜಕರೂ ಫರಿಸಾಯ ರೂ ಆತನನ್ನು ಹಿಡಿಯುವಂತೆ ಆತನಿರುವ ಸ್ಥಳವು ಯಾರಿಗಾದರೂ ತಿಳಿದರೆ ಅವರು ತಮಗೆ ತೋರಿಸ ಬೇಕೆಂದು ಅಪ್ಪಣೆ ಕೊಟ್ಟಿದ್ದರು.

11:57b.JOH.011.057 ಆಗ ಪ್ರಧಾನಯಾಜಕರೂ ಫರಿಸಾಯ ರೂ ಆತನನ್ನು ಹಿಡಿಯುವಂತೆ ಆತನಿರುವ ಸ್ಥಳವು ಯಾರಿಗಾದರೂ ತಿಳಿದರೆ ಅವರು ತಮಗೆ ತೋರಿಸ ಬೇಕೆಂದು ಅಪ್ಪಣೆ ಕೊಟ್ಟಿದ್ದರು.

12

12:1b.JOH.012.001 ಇದಾದ ಮೇಲೆ ಪಸ್ಕಕ್ಕೆ ಆರು ದಿನಗಳ ಮುಂಚೆ ಸತ್ತವರೊಳಗಿಂದ ಎಬ್ಬಿಸಿದ ಲಾಜರನು ಇದ್ದ ಬೇಥಾನ್ಯಕ್ಕೆ ಯೇಸು ಬಂದನು.

12:2b.JOH.012.002 ಅಲ್ಲಿ ಅವರು ಆತನಿಗಾಗಿ ಔತಣವನ್ನು ಸಿದ್ಧ ಮಾಡಿದರು; ಮಾರ್ಥಳು ಉಪಚಾರ ಮಾಡಿದಳು. ಆತನೊಂದಿಗೆ ಊಟಕ್ಕೆ ಕೂತವರಲ್ಲಿ ಲಾಜರನೂ ಒಬ್ಬನಾಗಿದ್ದನು.

12:3b.JOH.012.003 ಆಗ ಮರಿಯಳು ಬಹು ಬೆಲೆಯುಳ್ಳ ಅಚ್ಚ ಜಟಾಮಾಂಸಿ ತೈಲವನ್ನು ಒಂದು ಸೇರಷ್ಟು ತಂದು ಯೇಸುವಿನ ಪಾದಕ್ಕೆ ಹಚ್ಚಿ ತನ್ನ ತಲೆಯ ಕೂದಲಿನಿಂದ ಆತನ ಪಾದಗಳನ್ನು ಒರಸಿದಳು; ಆ ತೈಲದ ಪರಿ ಮಳವು ಮನೆಯಲ್ಲಿ ತುಂಬಿಕೊಂಡಿತ್ತು.

12:4b.JOH.012.004 ಆಗ ಆತನ ಶಿಷ್ಯರಲ್ಲಿ ಒಬ್ಬನು ಅಂದರೆ ಆತನನ್ನು ಹಿಡಿದು ಕೊಡುವದಕ್ಕಿದ್ದ ಸೀಮೋನನ ಮಗನಾದ ಯೂದ ಇಸ್ಕರಿಯೋತನು--

12:5b.JOH.012.005 ಈ ತೈಲವನ್ನು ಯಾಕೆ ಮುನ್ನೂರು ನಾಣ್ಯಗಳಿಗೆ ಮಾರಿ ಬಡವರಿಗೆ ಕೊಡಲಿಲ್ಲ ಅಂದನು.

12:6b.JOH.012.006 ಅವನು ಬಡವರಿಗೋಸ್ಕರ ಚಿಂತಿಸಿದ್ದಕ್ಕಾಗಿ ಅಲ್ಲ , ಅವನು ಕಳ್ಳನಾಗಿದ್ದು ಹಣದ ಚೀಲವನ್ನು ಇಟ್ಟು ಕೊಂಡು ಅದರಲ್ಲಿ ಹಾಕಿದ್ದನ್ನು ತಕ್ಕೊಳ್ಳುವವನಾಗಿದ್ದ ದರಿಂದಲೇ ಇದನ್ನು ಹೇಳಿದನು.

12:7b.JOH.012.007 ಆಗ ಯೇಸು--ಈಕೆಯನ್ನು ಬಿಟ್ಟುಬಿಡಿರಿ; ನನ್ನನ್ನು ಹೂಣಿಡುವ ದಿವಸಕ್ಕಾಗಿ ಈಕೆಯು ಇದನ್ನು ಇಟ್ಟುಕೊಂಡಿದ್ದಾಳೆ.

12:8b.JOH.012.008 ಯಾಕಂದರೆ ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ; ಆದರೆ ನಾನು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುವದಿಲ್ಲ ಅಂದನು.

12:9b.JOH.012.009 ಆದಕಾರಣ ಯೇಸು ಅಲ್ಲಿದ್ದಾನೆಂದು ಯೆಹೂದ್ಯ ರಲ್ಲಿ ಬಹಳ ಜನರು ತಿಳಿದು ಆತನನ್ನು ಮಾತ್ರವಲ್ಲದೆ ಆತನು ಸತ್ತವರೊಳಗಿಂದ ಎಬ್ಬಿಸಿದ ಲಾಜರನನ್ನೂ ನೋಡುವದಕ್ಕಾಗಿ ಬಂದರು.

12:10b.JOH.012.010 ಆದರೆ ಪ್ರಧಾನ ಯಾಜಕರು ಲಾಜರನನ್ನು ಸಹ ಕೊಲ್ಲಬೇಕೆಂದು ಆಲೋಚನೆ ಮಾಡಿಕೊಂಡರು.

12:11b.JOH.012.011 ಯಾಕಂದರೆ ಅವನ ನಿಮಿತ್ತ ಅನೇಕ ಯೆಹೂದ್ಯರು ಹೋಗಿ ಯೇಸುವಿನಲ್ಲಿ ನಂಬಿಕೆಯಿಟ್ಟರು.

12:12b.JOH.012.012 ಮರುದಿನ ಹಬ್ಬಕ್ಕೆ ಬಂದ ಬಹಳ ಜನರು ಯೇಸು ಯೆರೂಸಲೇಮಿಗೆ ಬರುತ್ತಾನೆಂದು ಕೇಳಿದಾಗ

12:13b.JOH.012.013 ಖರ್ಜೂರದ ಗರಿಗಳನ್ನು ತಕ್ಕೊಂಡು ಆತನನ್ನು ಎದುರುಗೊಳ್ಳುವದಕ್ಕೆ ಹೊರಗೆ ಬಂದು--ಹೊಸನ್ನ, ಕರ್ತನ ಹೆಸರಿನಲ್ಲಿ ಬರುವ ಇಸ್ರಾಯೇಲಿನ ಅರಸನು ಆಶೀರ್ವದಿಸಲ್ಪಡಲಿ ಎಂದು ಕೂಗಿದರು.

12:14b.JOH.012.014 ಯೇಸು ಪ್ರಾಯದ ಕತ್ತೆಯನ್ನು ಕಂಡುಕೊಂಡು ಅದರ ಮೇಲೆ ಕೂತುಕೊಂಡನು;

12:15b.JOH.012.015 ಹೀಗೆ--ಚೀಯೋನ್‌ಕುಮಾ ರಿಯೇ, ಭಯಪಡಬೇಡ; ಇಗೋ, ನಿನ್ನ ಅರಸನು ಪ್ರಾಯದ ಕತ್ತೆಯ ಮೇಲೆ ಕೂತುಕೊಂಡು ಬರುತ್ತಾನೆ ಎಂದು ಬರೆದಿರುವ ಪ್ರಕಾರ ನೆರವೇರಿತು.

12:16b.JOH.012.016 ಇವು ಗಳನ್ನು ಆತನ ಶಿಷ್ಯರು ಮೊದಲು ತಿಳಿದಿರಲಿಲ್ಲ; ಆದರೆ ಯೇಸು ಮಹಿಮೆ ಹೊಂದಿದಾಗ ಇವು ಆತನ ವಿಷಯವಾಗಿ ಬರೆಯಲ್ಪಟ್ಟಿವೆಯೆಂದೂ ಇವುಗಳನ್ನು ಅವರು ಆತನಿಗೆ ಮಾಡಿದರೆಂದೂ ಜ್ಞಾಪಕಮಾಡಿ ಕೊಂಡರು.

12:17b.JOH.012.017 ಇದಲ್ಲದೆ ಆತನು ಲಾಜರನನ್ನು ಸಮಾ ಧಿಯೊಳಗಿಂದ ಕರೆದು ಅವನನ್ನು ಸತ್ತವರೊಳಗಿಂದ ಎಬ್ಬಿಸಿದಾಗ ಆತನ ಸಂಗಡ ಇದ್ದ ಜನರು ಸಾಕ್ಷಿಕೊಟ್ಟರು.

12:18b.JOH.012.018 ಆತನು ಈ ಅದ್ಭುತಕಾರ್ಯವನ್ನು ಮಾಡಿದನೆಂದು ಕೇಳಿದ ಜನರು ಸಹ ಆತನನ್ನು ಎದುರುಗೊಂಡರು.

12:19b.JOH.012.019 ಆದದರಿಂದ ಫರಿಸಾಯರು ತಮ್ಮತಮ್ಮೊಳಗೆ--ನಿಮ್ಮ ಯತ್ನವೇನೂ ಸಾಗಲಿಲ್ಲವೆಂದು ನೀವು ತಿಳಿಯುವದಿಲ್ಲವೋ? ಇಗೋ, ಲೋಕವು ಆತನ ಹಿಂದೆ ಹೋಯಿತು ಎಂದು ಅಂದುಕೊಂಡರು.

12:20b.JOH.012.020 ಹಬ್ಬದಲ್ಲಿ ಆರಾಧಿಸುವದಕ್ಕೆ ಬಂದವರಲ್ಲಿ ಕೆಲ ವರು ಗ್ರೀಕರಿದ್ದರು.

12:21b.JOH.012.021 ಇವರು ಗಲಿಲಾಯ ಬೇತ್ಸಾಯಿದವನಾದ ಫಿಲಿಪ್ಪನ ಬಳಿಗೆ ಬಂದು--ಅಯ್ಯಾ, ನಾವು ಯೇಸುವನ್ನು ನೋಡಬೇಕೆಂದಿದ್ದೇವೆ ಅಂದರು.

12:22b.JOH.012.022 ಫಿಲಿಪ್ಪನು ಬಂದು ಅಂದ್ರೆಯನಿಗೆ ಹೇಳಿ ದನು; ಅಂದ್ರೆಯನೂ ಫಿಲಿಪ್ಪನೂ ತಿರಿಗಿ ಯೇಸುವಿಗೆ ಹೇಳಿದರು.

12:23b.JOH.012.023 ಯೇಸು ಪ್ರತ್ಯುತ್ತರವಾಗಿ ಅವರಿಗೆ--ಮನುಷ್ಯಕುಮಾರನು ಮಹಿಮೆ ಹೊಂದುವ ಗಳಿಗೆ ಬಂದದೆ.

12:24b.JOH.012.024 ನಾನು ನಿಮಗೆ ನಿಜನಿಜವಾಗಿ ಹೇಳು ತ್ತೇನೆ--ಗೋದಿಯ ಕಾಳು ಭೂಮಿಯಲ್ಲಿ ಬಿದ್ದು ಸಾಯ ದಿದ್ದರೆ ಅದು ಒಂದೇ ಆಗಿ ಉಳಿಯುವದು; ಅದು ಸತ್ತಮೇಲೆ ಬಹಳ ಫಲಕೊಡುವದು.

12:25b.JOH.012.025 ತನ್ನ ಪ್ರಾಣ ವನ್ನು ಪ್ರೀತಿಸುವವನು ಅದನ್ನು ಕಳಕೊಳ್ಳುವನು; ಈ ಲೋಕದಲ್ಲಿ ತನ್ನ ಪ್ರಾಣವನ್ನು ಹಗೆಮಾಡುವವನು ನಿತ್ಯಜೀವಕ್ಕಾಗಿ ಅದನ್ನು ಕಾಪಾಡಿಕೊಳ್ಳುವನು.

12:26b.JOH.012.026 ಯಾವನಾದರೂ ನನ್ನನ್ನು ಸೇವಿಸುವವನಾದರೆ ಅವನು ನನ್ನನ್ನು ಹಿಂಬಾಲಿಸಲಿ; ನಾನು ಇರುವಲ್ಲಿಯೇ ನನ್ನ ಸೇವಕನೂ ಇರುವನು; ಯಾವನಾದರೂ ನನ್ನನ್ನು ಸೇವಿಸುವವನಾದರೆ ನನ್ನ ತಂದೆಯು ಅವನನ್ನು ಸನ್ಮಾನಿಸುವನು.

12:27b.JOH.012.027 ಈಗ ನನ್ನ ಪ್ರಾಣವು ತತ್ತರಿಸುತ್ತದೆ. ನಾನು ಏನು ಹೇಳಲಿ? ತಂದೆಯೇ, ಈ ಗಳಿಗೆಯಿಂದ ನನ್ನನ್ನು ತಪ್ಪಿಸು; ಆದರೆ ಇದಕ್ಕಾಗಿಯೇ ನಾನು ಈ ಗಳಿಗೆಗೆ ಬಂದೆನು.

12:28b.JOH.012.028 ತಂದೆಯೇ, ನಿನ್ನ ಹೆಸರನ್ನು ಮಹಿಮೆಪಡಿಸಿಕೋ ಅಂದನು. ಆಗ--ನಾನು ಮಹಿ ಮೆಪಡಿಸಿದ್ದೇನೆ, ತಿರಿಗಿ ಅದನ್ನು ಮಹಿಮೆಪಡಿಸುವೆನು ಎಂದು ಹೇಳುವ ಧ್ವನಿಯು ಪರಲೋಕದಿಂದ ಬಂತು.

12:29b.JOH.012.029 ಆಗ ಅಲ್ಲಿ ನಿಂತಿದ್ದ ಜನರು ಅದನ್ನು ಕೇಳಿ--ಗುಡುಗಿತು ಅಂದರು. ಬೇರೆಯವರು--ದೂತ ನೊಬ್ಬನು ಈತನ ಸಂಗಡ ಮಾತನಾಡಿದನು ಅಂದರು.

12:30b.JOH.012.030 ಯೇಸು ಪ್ರತ್ಯುತ್ತರವಾಗಿ--ಈ ಧ್ವನಿಯು ನನಗೋ ಸ್ಕರವಲ್ಲ, ನಿಮಗೋಸ್ಕರವೇ ಬಂದಿದೆ.

12:31b.JOH.012.031 ಈಗ ಈ ಲೋಕಕ್ಕೆ ನ್ಯಾಯತೀರ್ಪು ಆಗುತ್ತದೆ; ಇಹಲೋಕದ ಅಧಿಪತಿಯು ಈಗ ಹೊರಗೆ ಹಾಕಲ್ಪಡುವನು.

12:32b.JOH.012.032 ನಾನು ಭೂಮಿಯಿಂದ ಮೇಲಕ್ಕೆ ಎತ್ತಲ್ಪಟ್ಟರೆ ಎಲ್ಲ ರನ್ನೂ ನನ್ನ ಬಳಿಗೆ ಎಳಕೊಳ್ಳುವೆನು ಅಂದನು.

12:33b.JOH.012.033 ತಾನು ಎಂಥಾ ಮರಣದಿಂದ ಸಾಯಬೇಕಾಗಿತ್ತೆಂದು ಸೂಚಿಸಿ ಇದನ್ನು ಹೇಳಿದನು.

12:34b.JOH.012.034 ಜನರು ಆತ ನಿಗೆ--ಕ್ರಿಸ್ತನು ಸದಾಕಾಲವೂ ಇರುತ್ತಾನೆಂದು ನಾವು ನ್ಯಾಯಪ್ರಮಾಣದಲ್ಲಿ ಕೇಳಿದ್ದೇವೆ; ಹಾಗಾದರೆ ಮನುಷ್ಯಕುಮಾರನು ಎತ್ತಲ್ಪಡಬೇಕೆಂದು ನೀನು ಹೇಳುವದು ಹೇಗೆ? ಈ ಮನುಷ್ಯಕುಮಾರನು ಯಾರು ಎಂದು ಕೇಳಿದರು.

12:35b.JOH.012.035 ಆಗ ಯೇಸು ಅವ ರಿಗೆ--ಇನ್ನು ಸ್ವಲ್ಪಕಾಲವೇ ಬೆಳಕು ನಿಮ್ಮೊಂದಿಗೆ ಇರು ತ್ತದೆ. ಕತ್ತಲೆ ನಿಮ್ಮನ್ನು ಮುಸುಕಿಕೊಳ್ಳದಂತೆ ನಿಮಗೆ ಬೆಳಕಿರುವಾಗಲೇ ನಡೆಯಿರಿ; ಯಾಕಂದರೆ ಕತ್ತಲೆಯಲ್ಲಿ ನಡೆಯುವವನು ತಾನು ಎಲ್ಲಿಗೆ ಹೋಗುತ್ತಾನೆಂದು ತಿಳಿಯನು.

12:36b.JOH.012.036 ನೀವು ಬೆಳಕಿನ ಮಕ್ಕಳಾಗುವಂತೆ ನಿಮಗೆ ಬೆಳಕು ಇರುವಾಗಲೇ ಬೆಳಕನ್ನು ನಂಬಿರಿ ಅಂದನು. ಯೇಸು ಇವುಗಳನ್ನು ಹೇಳಿದ ಮೇಲೆ ಹೊರಟುಹೋಗಿ ಅವರಿಂದ ಅಡಗಿಕೊಂಡನು.

12:37b.JOH.012.037 ಆದರೆ ಆತನು ಅನೇಕ ಅದ್ಭುತಕಾರ್ಯಗಳನ್ನು ಅವರ ಮುಂದೆ ಮಾಡಿದಾಗ್ಯೂ ಅವರು ಆತನನ್ನು ನಂಬಲಿಲ್ಲ.

12:38b.JOH.012.038 ಇದರಿಂದ--ಕರ್ತನೇ, ನಮ್ಮ ವರ್ತ ಮಾನವನ್ನು ಯಾರು ನಂಬಿದ್ದಾರೆ? ಕರ್ತನ ಬಾಹುವು ಯಾರಿಗೆ ಪ್ರಕಟವಾಯಿತು ಎಂದು ಪ್ರವಾದಿಯಾದ ಯೆಶಾಯನು ನುಡಿದದ್ದು ನೆರವೇರುವ ಹಾಗೆ ಇದಾಯಿತು.

12:39b.JOH.012.039 ಅವರು ನಂಬಲಾರದೆ ಇದ್ದದರಿಂದ ಯೆಶಾಯನು ತಿರಿಗಿ ಹೇಳಿದ್ದೇನಂದರೆ--

12:40b.JOH.012.040 ಅವರು ಕಣ್ಣಿನಿಂದ ಕಾಣದೆ ಹೃದಯದಿಂದ ಗ್ರಹಿಸದೆ ಮತ್ತು ತಿರುಗಿಕೊಂಡು ನನ್ನಿಂದ ಸ್ವಸ್ಥತೆಯನ್ನು ಹೊಂದದೆ ಇರುವಂತೆ ಆತನು ಅವರ ಕಣ್ಣುಗಳನ್ನು ಕುರುಡು ಮಾಡಿ ಅವರ ಹೃದಯವನ್ನು ಕಠಿಣ ಮಾಡಿದನು ಎಂಬದು.

12:41b.JOH.012.041 ಯೆಶಾಯನು ಆತನ ಮಹಿಮೆಯನ್ನು ನೋಡಿದ್ದರಿಂದ ಆತನ ವಿಷಯವಾಗಿ ಇವುಗಳನ್ನು ಹೇಳಿದನು.

12:42b.JOH.012.042 ಆದಾಗ್ಯೂ ಮುಖ್ಯಾಧಿಕಾರಿಗಳಲ್ಲಿ ಅನೇಕರು ಆತನ ಮೇಲೆ ನಂಬಿಕೆಯಿಟ್ಟರು. ಆದರೆ ಫರಿಸಾಯರ ನಿಮಿತ್ತ ತಾವು ಸಭಾಮಂದಿರದಿಂದ ಬಹಿಷ್ಕರಿಸಲ್ಪಡಬಾರದೆಂದು ಅವರು ಆತನನ್ನು ಒಪ್ಪಿ ಕೊಳ್ಳಲಿಲ್ಲ.

12:43b.JOH.012.043 ಯಾಕಂದರೆ ಅವರು ದೇವರ ಹೊಗಳಿ ಕೆಗಿಂತ ಮನುಷ್ಯರ ಹೊಗಳಿಕೆಯನ್ನೇ ಹೆಚ್ಚಾಗಿ ಪ್ರೀತಿಸಿದರು.

12:44b.JOH.012.044 ಆಗ ಯೇಸು--ನನ್ನನ್ನು ನಂಬುವವನು ನನ್ನನ್ನಲ್ಲ. ನನ್ನನ್ನು ಕಳುಹಿಸಿಕೊಟ್ಟಾತನನ್ನೇ ನಂಬಿದ್ದಾನೆ.

12:45b.JOH.012.045 ನನ್ನನ್ನು ನೋಡುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನೇ ನೋಡುತ್ತಾನೆ.

12:46b.JOH.012.046 ನನ್ನಲ್ಲಿ ನಂಬಿಕೆಯಿಟ್ಟ ಯಾವನೂ ಕತ್ತಲೆಯಲ್ಲಿ ಇರಬಾರದೆಂದು ನಾನು ಬೆಳಕಾಗಿ ಲೋಕಕ್ಕೆ ಬಂದಿದ್ದೇನೆ.

12:47b.JOH.012.047 ಯಾವನಾದರೂ ನನ್ನ ಮಾತುಗಳನ್ನು ಕೇಳಿ ನಂಬದೆಹೋದರೆ ನಾನು ಅವ ನಿಗೆ ತೀರ್ಪು ಮಾಡುವದಿಲ್ಲ; ಲೋಕಕ್ಕೆ ತೀರ್ಪು ಮಾಡುವದಕ್ಕಾಗಿ ಅಲ್ಲ, ಲೋಕವನ್ನು ರಕ್ಷಿಸುವದ ಕ್ಕಾಗಿಯೇ ನಾನು ಬಂದೆನು.

12:48b.JOH.012.048 ನನ್ನನ್ನು ತಿರಸ್ಕರಿಸಿ ನನ್ನ ಮಾತುಗಳನ್ನು ಅಂಗೀಕರಿಸದಿರುವವನಿಗೆ ತೀರ್ಪು ಮಾಡುವಂಥದು ಒಂದು ಇದೆ; ಅದು ನಾನು ಹೇಳಿದ ಮಾತೇ; ಅದು ಕಡೇ ದಿನದಲ್ಲಿ ಅವನಿಗೆ ತೀರ್ಪು ಮಾಡುವದು.

12:49b.JOH.012.049 ನನ್ನಷ್ಟಕ್ಕೆ ನಾನೇ ಮಾತನಾಡಲಿಲ್ಲ; ಆದರೆ ನಾನು ಏನು ಹೇಳಬೇಕು ಮತ್ತು ನಾನು ಏನು ಮಾತನಾಡಬೇಕೆಂಬದನ್ನು ನನ್ನನ್ನು ಕಳುಹಿಸಿದ ತಂದೆಯೇ ನನಗೆ ಆಜ್ಞಾಪಿಸಿದ್ದಾನೆ.ಆತನ ಆಜ್ಞೆಯು ನಿತ್ಯಜೀವವಾಗಿದೆ ಎಂದು ನಾನು ಬಲ್ಲೆನು; ಆದದರಿಂದ ನಾನು ಮಾತನಾಡುವವುಗಳನ್ನು ತಂದೆಯು ನನಗೆ ಹೇಳಿದಂತೆಯೇ ನಾನು ಮಾತನಾಡು ತ್ತೇನೆ ಎಂದು ಹೇಳಿದನು.

12:50b.JOH.012.050 ಆತನ ಆಜ್ಞೆಯು ನಿತ್ಯಜೀವವಾಗಿದೆ ಎಂದು ನಾನು ಬಲ್ಲೆನು; ಆದದರಿಂದ ನಾನು ಮಾತನಾಡುವವುಗಳನ್ನು ತಂದೆಯು ನನಗೆ ಹೇಳಿದಂತೆಯೇ ನಾನು ಮಾತನಾಡು ತ್ತೇನೆ ಎಂದು ಹೇಳಿದನು.

13

13:1b.JOH.013.001 ಆಗ ಪಸ್ಕ ಹಬ್ಬದ ಮುಂಚೆ ಯೇಸು ತಾನು ಈ ಲೋಕದೊಳಗಿಂದ ತಂದೆಯ ಬಳಿಗೆ ಹೋಗಬೇಕಾದ ತನ್ನ ಗಳಿಗೆಯು ಬಂತೆಂದು ತಿಳಿದು ಈ ಲೋಕದಲ್ಲಿದ್ದ ತನ್ನ ಸ್ವಂತದವರನ್ನು ಪ್ರೀತಿಸಿ ಅವರನ್ನು ಅಂತ್ಯದವರೆಗೆ ಪ್ರೀತಿಸಿದನು.

13:2b.JOH.013.002 ಊಟವಾದ ಮೇಲೆ ಆತನನ್ನು ಹಿಡುಕೊಡಬೇಕೆಂಬದನ್ನು ಸೀಮೋ ನನ ಮಗನಾದ ಯೂದ ಇಸ್ಕರಿಯೋತನ ಹೃದಯದಲ್ಲಿ ಸೈತಾನನು ಆಲೋಚನೆ ಹುಟ್ಟಿಸಿದನು.

13:3b.JOH.013.003 ತಂದೆಯು ತನ್ನ ಕೈಯಲ್ಲಿ ಎಲ್ಲವನ್ನೂ ಕೊಟ್ಟಿದ್ದಾನೆಂತಲೂ ತಾನು ದೇವರ ಬಳಿಯಿಂದ ಹೊರಟು ಬಂದಿದ್ದು ತಿರಿಗಿ ದೇವರ ಬಳಿಗೆ ಹೋಗುತ್ತೇನೆಂತಲೂ ಯೇಸು ತಿಳಿದು ಕೊಂಡು

13:4b.JOH.013.004 ಊಟದಿಂದೆದ್ದು ತನ್ನ ಉಡುಪುಗಳನ್ನು ತೆಗೆದಿಟ್ಟು ಕೈ ಪಾವಡವನ್ನು ತಕ್ಕೊಂಡು ನಡುವನ್ನು ಕಟ್ಟಿಕೊಂಡನು.

13:5b.JOH.013.005 ತರುವಾಯ ಆತನು ಬೋಗುಣಿ ಯಲ್ಲಿ ನೀರು ಹಾಕಿಕೊಂಡು ಶಿಷ್ಯರ ಕಾಲುಗಳನ್ನು ತೊಳೆಯುವದಕ್ಕೂ ತಾನು ನಡುವಿಗೆ ಕಟ್ಟಿಕೊಂಡ ಕೈ ಪಾವಡದಿಂದ ಅವುಗಳನ್ನು ಒರಸುವದಕ್ಕೂ ಪ್ರಾರಂಭಿಸಿದನು.

13:6b.JOH.013.006 ಆತನು ಸೀಮೋನ ಪೇತ್ರನ ಬಳಿಗೆ ಬಂದಾಗ ಅವನು ಆತನಿಗೆ--ಕರ್ತನೇ, ನೀನು ನನ್ನ ಕಾಲುಗಳನ್ನು ತೊಳೆಯುತ್ತೀಯೋ ಎಂದು ಕೇಳಿ ದನು.

13:7b.JOH.013.007 ಯೇಸು ಪ್ರತ್ಯುತ್ತರವಾಗಿ ಅವನಿಗೆ--ನಾನು ಮಾಡುವದು ಏನೆಂದು ಈಗ ನಿನಗೆ ತಿಳಿಯುವದಿಲ್ಲ; ಆದರೆ ಇನ್ನು ಮೇಲೆ ನಿನಗೆ ತಿಳಿಯುವದು ಅಂದನು.

13:8b.JOH.013.008 ಪೇತ್ರನು ಆತನಿಗೆ--ನೀನು ನನ್ನ ಕಾಲುಗಳನ್ನು ಎಂದಿಗೂ ತೊಳೆಯಬಾರದು ಅಂದನು; ಯೇಸು ಪ್ರತ್ಯುತ್ತರವಾಗಿ ಅವನಿಗೆ--ನಾನು ನಿನ್ನನ್ನು ತೊಳೆಯ ದಿದ್ದರೆ ನನ್ನೊಂದಿಗೆ ನಿನಗೆ ಪಾಲಿಲ್ಲ ಎಂದು ಹೇಳಿದನು.

13:9b.JOH.013.009 ಅದಕ್ಕೆ ಸೀಮೋನ ಪೇತ್ರನು ಆತ ನಿಗೆ--ಕರ್ತನೇ, ನನ್ನ ಪಾದಗಳನ್ನು ಮಾತ್ರವಲ್ಲದೆ ನನ್ನ ಕೈಗಳನ್ನು ಮತ್ತು ತಲೆಯನ್ನು ಸಹ ತೊಳೆ ಅಂದನು.

13:10b.JOH.013.010 ಯೇಸು ಅವನಿಗೆ--ಸ್ನಾನಮಾಡಿಕೊಂಡವನು ತನ ಪಾದಗಳನ್ನು ಹೊರತು ಮತ್ತೇನೂ ತೊಳೆಯುವದು ಅವಶ್ಯವಿಲ್ಲ; ಯಾಕಂದರೆ ಅವನು ಸಂಪೂರ್ಣವಾಗಿ ಶುದ್ಧನಾಗಿದ್ದಾನೆ. ನೀವು ಶುದ್ಧರಾಗಿದ್ದೀರಿ, ಆದರೆ ಎಲ್ಲರೂ ಅಲ್ಲ ಅಂದನು.

13:11b.JOH.013.011 ತನ್ನನ್ನು ಹಿಡಿದುಕೊಡುವ ವನು ಯಾರೆಂದು ಆತನು ತಿಳಿದಿದ್ದರಿಂದ--ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ ಎಂದು ಹೇಳಿದನು.

13:12b.JOH.013.012 ಆತನು ಅವರ ಪಾದಗಳನ್ನು ತೊಳೆದ ಮೇಲೆ ತನ್ನ ಉಡುಪುಗಳನ್ನು ಹಾಕಿಕೊಂಡು ತಿರಿಗಿ ಕೂತು ಕೊಂಡ ಮೇಲೆ ಅವರಿಗೆ--ನಾನು ನಿಮಗೆ ಮಾಡಿದ್ದು ಏನೆಂದು ತಿಳಿಯಿತೋ?

13:13b.JOH.013.013 ನೀವು ನನ್ನನ್ನು ಬೋಧ ಕನು ಮತ್ತು ಕರ್ತನು ಎಂದು ಕರೆಯುತ್ತೀರಿ; ನೀವು ಹೇಳುವದು ಸರಿ; ಯಾಕಂದರೆ ನಾನು ಅಂಥವನೇ ಹೌದು.

13:14b.JOH.013.014 ಹಾಗಾದರೆ ನಿಮ್ಮ ಕರ್ತನೂ ಬೋಧಕನೂ ಆಗಿರುವ ನಾನು ನಿಮ್ಮ ಕಾಲುಗಳನ್ನು ತೊಳೆದರೆ ನೀವು ಸಹ ಒಬ್ಬರ ಕಾಲುಗಳನ್ನೊಬ್ಬರು ತೊಳೆಯತಕ್ಕದ್ದು.

13:15b.JOH.013.015 ನಾನು ನಿಮಗೆ ಮಾಡಿದಂತೆಯೇ ನೀವು ಸಹ ಮಾಡಬೇಕೆಂದು ನಾನು ನಿಮಗೆ ಮಾದರಿಯನ್ನು ತೋರಿಸಿದ್ದೇನೆ.

13:16b.JOH.013.016 ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ--ತನ್ನ ಒಡೆಯನಿಗಿಂತ ಸೇವಕನು ದೊಡ್ಡವನಲ್ಲ; ಇಲ್ಲವೆ ಕಳುಹಿಸಲ್ಪಟ್ಟವನು ಅವನನ್ನು ಕಳುಹಿಸಿದವನಿಗಿಂತ ದೊಡ್ಡವನಲ್ಲ.

13:17b.JOH.013.017 ನೀವು ಇವು ಗಳನ್ನು ತಿಳುಕೊಂಡು ಇದರಂತೆ ಮಾಡಿದರೆ ನೀವು ಧನ್ಯರು.

13:18b.JOH.013.018 ನಾನು ನಿಮ್ಮೆಲ್ಲರ ವಿಷಯದಲ್ಲಿ ಮಾತ ನಾಡುವದಿಲ್ಲ; ನಾನು ಆರಿಸಿಕೊಂಡವರನ್ನು ಬಲ್ಲೆನು; ಆದರೆ--ನನ್ನೊಂದಿಗೆ ರೊಟ್ಟಿಯನ್ನು ತಿನ್ನುವವನು ನನಗೆ ವಿರೋಧವಾಗಿ ತನ್ನ ಹಿಮ್ಮಡಿಯನ್ನು ಎತ್ತಿದ್ದಾನೆ ಎಂಬ ಬರಹವು ನೆರವೇರಬೇಕಾಗಿದೆ.

13:19b.JOH.013.019 ಅದು ಆಗುವಾಗ ನಾನೇ ಆತನೆಂದು ನೀವು ನಂಬುವಂತೆ ಅದು ಸಂಭವಿಸುವದಕ್ಕಿಂತ ಮುಂಚೆ ಈಗಲೇ ನಿಮಗೆ ಹೇಳುತ್ತೇನೆ.

13:20b.JOH.013.020 ನಾನು ನಿಮಗೆ ನಿಜ ನಿಜವಾಗಿ ಹೇಳುತ್ತೇನೆ--ನಾನು ಕಳುಹಿಸಿದವನನ್ನು ಅಂಗೀಕರಿಸು ವವನು ನನ್ನನ್ನು ಅಂಗೀಕರಿಸುತ್ತಾನೆ; ನನ್ನನ್ನು ಅಂಗೀಕರಿ ಸುವವನು ನನ್ನನ್ನು ಕಳುಹಿಸಿದಾತನನ್ನೇ ಅಂಗೀಕರಿ ಸುತ್ತಾನೆ.

13:21b.JOH.013.021 ಯೇಸು ಹೀಗೆ ಹೇಳಿದ ಮೇಲೆ ಆತ್ಮದಲ್ಲಿ ಕಳವಳ ಗೊಂಡು ಸಾಕ್ಷೀಕರಿಸಿ--ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ. ನಿಮ್ಮಲ್ಲಿ ಒಬ್ಬನು ನನ್ನನ್ನು ಹಿಡಿದು ಕೊಡುವನು ಎಂದು ಹೇಳಿದನು.

13:22b.JOH.013.022 ಆಗ ಶಿಷ್ಯರು ಅನುಮಾನದಿಂದ ಈತನು ಯಾರನ್ನು ಕುರಿತು ಹೇಳಿದನೆಂದು ಒಬ್ಬರನೊಬ್ಬರು ನೋಡಿದರು.

13:23b.JOH.013.023 ಶಿಷ್ಯ ರಲ್ಲಿ ಯೇಸು ಪ್ರೀತಿಸಿದ ಒಬ್ಬನು ಆತನ ಎದೆಯ ಮೇಲೆ ಒರಗಿಕೊಂಡಿದ್ದನು.

13:24b.JOH.013.024 ಆದದರಿಂದ ಸೀಮೋನ ಪೇತ್ರನು ಅವನಿಗೆ ಸನ್ನೆ ಮಾಡಿ ಆತನು ಯಾರ ವಿಷಯವಾಗಿ ಮಾತನಾಡಿದನೆಂದು ಕೇಳಿದನು.

13:25b.JOH.013.025 ತರುವಾಯ ಅವನು ಯೇಸುವಿನ ಎದೆಯಮೇಲೆ ಒರಗಿಕೊಂಡು--ಕರ್ತನೇ, ಅವನು ಯಾರು ಎಂದು ಆತನನ್ನು ಕೇಳಿದನು.

13:26b.JOH.013.026 ಅದಕ್ಕೆ ಯೇಸು--ನಾನು ರೊಟ್ಟಿಯ ತುಂಡನ್ನು ಅದ್ದಿ ಯಾವನಿಗೆ ಕೊಡುತ್ತೇನೋ ಅವನೇ ಎಂದು ಉತ್ತರ ಕೊಟ್ಟನು. ಆ ರೊಟ್ಟಿಯ ತುಂಡನ್ನು ಅದ್ದಿ ಆತನು ಸೀಮೋನನ ಮಗನಾದ ಯೂದ ಇಸ್ಕರಿಯೋತನಿಗೆ ಕೊಟ್ಟನು.

13:27b.JOH.013.027 ರೊಟ್ಟಿಯ ತುಂಡನ್ನು ತಕ್ಕೊಂಡ ಮೇಲೆ ಸೈತಾನನು ಅವನೊಳಗೆ ಹೊಕ್ಕನು. ಆಗ ಯೇಸು ಅವನಿಗೆ--ನೀನು ಮಾಡುವ ದನ್ನು ಬೇಗನೆ ಮಾಡು ಎಂದು ಹೇಳಿದನು.

13:28b.JOH.013.028 ಆತನು ಯೂದನಿಗೆ ಇದನ್ನು ಹೇಳಿದ ಉದ್ದೇಶವೇನೆಂದು ಊಟಕ್ಕೆ ಕೂತವರಲ್ಲಿ ಯಾರಿಗೂ ಗೊತ್ತಾಗಲಿಲ್ಲ.

13:29b.JOH.013.029 ಯೂದನು ಹಣದ ಚೀಲವನ್ನು ಇಟ್ಟುಕೊಂಡ ದ್ದರಿಂದ ಯೇಸು ಅವನಿಗೆ--ಹಬ್ಬಕ್ಕೆ ನಮಗೆ ಬೇಕಾದವು ಗಳನ್ನು ಕೊಂಡುಕೋ ಎಂತಲೋ ಇಲ್ಲವೆ ಬಡವರಿಗೆ ಏನಾದರೂ ಕೊಡು ಎಂತಲೋ ಅವನಿಗೆ ಆತನು ಹೇಳಿದನೆಂದು ಅವರಲ್ಲಿ ಕೆಲವರು ನೆನಸಿದರು.

13:30b.JOH.013.030 ಯೂದನು ಆ ರೊಟ್ಟಿಯ ತುಂಡನ್ನು ತೆಗೆದುಕೊಂಡ ಕೂಡಲೇ ಹೊರಗೆ ಹೋದನು; ಆಗ ರಾತ್ರಿಯಾಗಿತ್ತು.

13:31b.JOH.013.031 ಅವನು ಹೊರಗೆ ಹೋದಮೇಲೆ ಯೇಸು-- ಈಗ ಮನುಷ್ಯಕುಮಾರನು ಮಹಿಮೆಪಟ್ಟಿದ್ದಾನೆ. ದೇವರು ಆತನಲ್ಲಿ ಮಹಿಮೆಪಟ್ಟಿದ್ದಾನೆ.

13:32b.JOH.013.032 ದೇವರು ಆತನಲ್ಲಿ ಮಹಿಮೆಪಟ್ಟಿರಲಾಗಿ ದೇವರು ಸಹ ಆತನನ್ನು ತನ್ನಲ್ಲಿಯೇ ಮಹಿಮೆಪಡಿಸುವನು; ಕೂಡಲೆ ಆತನನ್ನು ಮಹಿಮೆಪಡಿಸುವನು.

13:33b.JOH.013.033 ಚಿಕ್ಕಮಕ್ಕಳೇ, ಇನ್ನು ಸ್ವಲ್ಪ ಕಾಲವೇ ನಾನು ನಿಮ್ಮ ಸಂಗಡ ಇರುತ್ತೇನೆ, ನೀವು ನನ್ನನ್ನು ಹುಡುಕುವಿರಿ; ನಾನು ಹೋಗುವಲ್ಲಿಗೆ ನೀವು ಬರಲಾರಿರೆಂದು ನಾನು ಯೆಹೂದ್ಯರಿಗೆ ಹೇಳಿದಂತೆಯೇ ನಿಮಗೂ ಈಗ ಹೇಳುತ್ತೇನೆ.

13:34b.JOH.013.034 ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಒಂದು ಹೊಸ ಆಜ್ಞೆಯನ್ನು ನಾನು ನಿಮಗೆ ಕೊಡುತ್ತೇನೆ--ನಾನು ನಿಮ್ಮನ್ನು ಪ್ರೀತಿಸಿದ ಹಾಗೆಯೇ ನೀವೂ ಒಬ್ಬರನ್ನೊಬ್ಬರು ಪ್ರೀತಿಸಬೇಕು.

13:35b.JOH.013.035 ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಇದರಿಂದ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳಿದುಕೊಳ್ಳು ವರು ಎಂದು ಹೇಳಿದನು.

13:36b.JOH.013.036 ಸೀಮೋನ ಪೇತ್ರನು ಆತನಿಗೆ--ಕರ್ತನೇ, ನೀನು ಎಲ್ಲಿಗೆ ಹೋಗುತ್ತೀ? ಅನ್ನಲು ಯೇಸು ಪ್ರತ್ಯುತ್ತರವಾಗಿ ಅವನಿಗೆ--ನಾನು ಹೋಗುವಲ್ಲಿಗೆ ನೀನು ಈಗ ಬರಲಾರಿ; ತರುವಾಯ ನೀನು ನನ್ನನ್ನು ಹಿಂಬಾಲಿಸುವಿ ಅಂದನು.

13:37b.JOH.013.037 ಪೇತ್ರನು ಆತನಿಗೆ-- ಕರ್ತನೇ, ನಾನು ಯಾಕೆ ಈಗ ನಿನ್ನ ಹಿಂದೆ ಬರ ಲಾರೆನು? ನಿನಗೋಸ್ಕರ ನನ್ನ ಪ್ರಾಣವನ್ನು ಕೊಡು ವೆನು ಅಂದನು.ಯೇಸು ಪ್ರತ್ಯುತ್ತರವಾಗಿ ಅವ ನಿಗೆ--ನೀನು ನನಗೋಸ್ಕರ ನಿನ್ನ ಪ್ರಾಣವನ್ನು ಕೊಡು ತ್ತೀಯೋ? ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ನೀನು ನನ್ನನ್ನು ಮೂರು ಸಾರಿ ಅಲ್ಲಗಳೆಯುವ ತನಕ ಹುಂಜವು ಕೂಗುವದಿಲ್ಲ ಅಂದನು.

13:38b.JOH.013.038 ಯೇಸು ಪ್ರತ್ಯುತ್ತರವಾಗಿ ಅವ ನಿಗೆ--ನೀನು ನನಗೋಸ್ಕರ ನಿನ್ನ ಪ್ರಾಣವನ್ನು ಕೊಡು ತ್ತೀಯೋ? ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ನೀನು ನನ್ನನ್ನು ಮೂರು ಸಾರಿ ಅಲ್ಲಗಳೆಯುವ ತನಕ ಹುಂಜವು ಕೂಗುವದಿಲ್ಲ ಅಂದನು.

14

14:1b.JOH.014.001 ನಿಮ್ಮ ಹೃದಯವು ಕಳವಳಗೊಳ್ಳದೆ ಇರಲಿ; ನೀವು ದೇವರನ್ನು ನಂಬಿರಿ, ನನ್ನನ್ನೂ ನಂಬಿರಿ.

14:2b.JOH.014.002 ನನ್ನ ತಂದೆಯ ಮನೆಯಲ್ಲಿ ಬಹಳ ಭವನ ಗಳಿವೆ; ಇಲ್ಲದಿದ್ದರೆ ನಾನು ನಿಮಗೆ ಹೇಳುತ್ತಿದ್ದೆನು, ನಾನು ನಿಮಗೆ ಸ್ಥಳವನ್ನು ಸಿದ್ಧಮಾಡುವದಕ್ಕೆ ಹೋಗು ತ್ತೇನಲ್ಲಾ.

14:3b.JOH.014.003 ನಾನು ಹೋಗಿ ನಿಮಗೋಸ್ಕರ ಸ್ಥಳವನ್ನು ಸಿದ್ಧಮಾಡಿ ತಿರಿಗಿ ಬಂದು ನಿಮ್ಮನ್ನು ನನ್ನ ಬಳಿಗೆ ಸೇರಿಸಿಕೊಳ್ಳುವೆನು; ಆಗ ನಾನಿರುವಲ್ಲಿ ನೀವು ಸಹ ಇರುವಿರಿ.

14:4b.JOH.014.004 ನಾನು ಎಲ್ಲಿಗೆ ಹೋಗುತ್ತೇನೆಂಬದು ನಿಮಗೆ ತಿಳಿದದೆ; ಮಾರ್ಗವೂ ನಿಮಗೆ ಗೊತ್ತಿದೆ ಅಂದನು.

14:5b.JOH.014.005 ತೋಮನು ಆತನಿಗೆ--ಕರ್ತನೇ, ನೀನು ಎಲ್ಲಿಗೆ ಹೋಗುತ್ತೀಯೋ ನಮಗೆ ತಿಳಿಯದು; ನಮಗೆ ಮಾರ್ಗವು ಹೇಗೆ ಗೊತ್ತಾದೀತು ಅಂದನು.

14:6b.JOH.014.006 ಯೇಸು ಅವನಿಗೆ--ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ; ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ.

14:7b.JOH.014.007 ನೀವು ನನ್ನನ್ನು ತಿಳಿದಿದ್ದರೆ ನನ್ನ ತಂದೆಯನ್ನು ಸಹ ತಿಳಿದವರಾಗಿ ರುತ್ತಿದ್ದಿರಿ; ಈಗಿನಿಂದ ನೀವು ಆತನನ್ನು ತಿಳಿದಿದ್ದೀರಿ; ಆತನನ್ನು ನೋಡಿದವರಾಗಿದ್ದೀರಿ ಎಂದು ಹೇಳಿದನು.

14:8b.JOH.014.008 ಫಿಲಿಪ್ಪನು ಆತನಿಗೆ--ಕರ್ತನೇ, ತಂದೆಯನ್ನು ನಮಗೆ ತೋರಿಸು, ನಮಗೆ ಅಷ್ಟೇ ಸಾಕು ಅಂದನು.

14:9b.JOH.014.009 ಯೇಸು ಅವನಿಗೆ--ಫಿಲಿಪ್ಪನೇ, ನಾನು ನಿಮ್ಮ ಸಂಗಡ ಇಷ್ಟು ಕಾಲ ಇದ್ದರೂ ನೀನು ನನ್ನನ್ನು ತಿಳಿಯಲಿಲ್ಲವೋ? ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ; ಹಾಗಾದರೆ ತಂದೆಯನ್ನು ನಮಗೆ ತೋರಿಸು ಎಂದು ನೀನು ಹೇಳುವದು ಹೇಗೆ?

14:10b.JOH.014.010 ನಾನು ತಂದೆಯಲ್ಲಿ ಇದ್ದೇನೆ ಮತ್ತು ತಂದೆಯು ನನ್ನಲ್ಲಿ ಇದ್ದಾನೆ ಎಂದು ನೀನು ನಂಬುವದಿಲ್ಲವೋ? ನಾನು ನಿಮಗೆ ಹೇಳುವ ಮಾತುಗಳನ್ನು ನನ್ನಷ್ಟಕ್ಕೆ ನಾನೇ ಮಾತನಾಡುವದಿಲ್ಲ; ಆದರೆ ನನ್ನಲ್ಲಿ ವಾಸಿಸುತ್ತಿರುವ ತಂದೆಯೇ ಆ ಕಾರ್ಯಗಳನ್ನು ಮಾಡುತ್ತಾನೆ.

14:11b.JOH.014.011 ನಾನು ತಂದೆ ಯಲ್ಲಿದ್ದೇನೆಂತಲೂ ತಂದೆಯು ನನ್ನಲ್ಲಿದ್ದಾನೆಂತಲೂ ನನ್ನನ್ನು ನಂಬಿರಿ. ಇಲ್ಲದಿದ್ದರೆ ಆ ಕ್ರಿಯೆಗಳ ನಿಮಿತ್ತವಾದರೂ ನನ್ನನ್ನು ನಂಬಿರಿ.

14:12b.JOH.014.012 ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ--ನನ್ನನ್ನು ನಂಬುವವನು ನಾನು ಮಾಡುವ ಕ್ರಿಯೆ ಗಳನ್ನು ಸಹ ಮಾಡುವನು; ಇವುಗಳಿಗಿಂತ ಮಹತ್ತಾದ ಕ್ರಿಯೆಗಳನ್ನು ಅವನು ಮಾಡುವನು; ಯಾಕಂದರೆ ನಾನು ನನ್ನ ತಂದೆಯ ಬಳಿಗೆ ಹೋಗುತ್ತೇನೆ.

14:13b.JOH.014.013 ನನ್ನ ಹೆಸರಿನಲ್ಲಿ ನೀವು ಏನೇನು ಬೇಡಿಕೊಳ್ಳುವಿರೋ ಅದನ್ನು ನಾನು ಮಾಡುವೆನು. ಹೀಗೆ ಮಗನಲ್ಲಿ ತಂದೆಯು ಮಹಿಮೆ ಹೊಂದುವನು.

14:14b.JOH.014.014 ನೀವು ನನ್ನ ಹೆಸರಿನಲ್ಲಿ ಏನಾದರೂ ಕೇಳಿಕೊಂಡರೆ ನಾನು ಅದನ್ನು ಮಾಡುವೆನು.

14:15b.JOH.014.015 ನೀವು ನನ್ನನ್ನು ಪ್ರೀತಿಸುವದಾದರೆ ನನ್ನ ಆಜ್ಞೆ ಗಳನ್ನು ಕೈಕೊಳ್ಳಿರಿ.

14:16b.JOH.014.016 ನಾನು ತಂದೆಯನ್ನು ಬೇಡಿ ಕೊಳ್ಳುವೆನು; ಆಗ ಆತನು ನಿಮಗೆ ಬೇರೊಬ್ಬ ಆದರಿ ಕನನ್ನು ಸದಾಕಾಲವೂ ನಿಮ್ಮ ಸಂಗಡ ಇರುವದಕ್ಕೆ ಕೊಡುವನು.

14:17b.JOH.014.017 ಆತನು ಸತ್ಯದ ಆತ್ಮನೇ; ಲೋಕವು ಆತನನ್ನು ನೋಡದೆಯೂ ತಿಳಿಯದೆಯೂ ಇರುವದ ರಿಂದ ಆತನನ್ನು ಹೊಂದಲಾರದು. ಆದರೆ ನೀವು ಆತನನ್ನು ಬಲ್ಲಿರಿ. ಯಾಕಂದರೆ ಆತನು ನಿಮ್ಮೊಂದಿಗೆ ವಾಸಿಸುತ್ತಾನೆ ಮತ್ತು ನಿಮ್ಮೊಳಗಿರುವನು.

14:18b.JOH.014.018 ನಾನು ನಿಮ್ಮನ್ನು ಆದರಣೆಯಿಲ್ಲದೆ ಬಿಡುವದಿಲ್ಲ; ನಿಮ್ಮ ಬಳಿಗೆ ನಾನು ಬರುವೆನು.

14:19b.JOH.014.019 ಇನ್ನು ಸ್ವಲ್ಪ ಕಾಲವಾದ ಮೇಲೆ ಲೋಕವು ನನ್ನನ್ನು ನೋಡುವದಿಲ್ಲ. ಆದರೆ ನೀವು ನನ್ನನ್ನು ನೋಡುವಿರಿ; ನಾನು ಜೀವಿಸುವ ದರಿಂದ ನೀವು ಸಹ ಜೀವಿಸುವಿರಿ.

14:20b.JOH.014.020 ನಾನು ನನ್ನ ತಂದೆಯಲ್ಲಿಯೂ ನೀವು ನನ್ನಲ್ಲಿಯೂ ನಾನು ನಿಮ್ಮ ಲ್ಲಿಯೂ ಇರುವೆನೆಂದು ನೀವು ಆ ದಿನದಲ್ಲಿ ತಿಳಿದು ಕೊಳ್ಳುವಿರಿ.

14:21b.JOH.014.021 ನನ್ನ ಆಜ್ಞೆಗಳನ್ನು ಹೊಂದಿ ಅವುಗಳನ್ನು ಅನುಸರಿಸುವವನೇ ನನ್ನನ್ನು ಪ್ರೀತಿಸುವವನು; ನನ್ನನ್ನು ಪ್ರೀತಿಸುವವನನ್ನು ನನ್ನ ತಂದೆಯೂ ಪ್ರೀತಿಸುವನು. ನಾನು ಅವನನ್ನು ಪ್ರೀತಿಸಿ ಅವನಿಗೆ ನನ್ನನ್ನು ವ್ಯಕ್ತಪಡಿಸಿ ಕೊಳ್ಳುವೆನು ಎಂದು ಹೇಳಿದನು.

14:22b.JOH.014.022 ಯೂದನು (ಇಸ್ಕರಿಯೋತನಲ್ಲ)--ಕರ್ತನೇ, ನೀನು ಲೋಕಕ್ಕೆ ಕಾಣಿಸಿಕೊಳ್ಳದೆ ನಮಗೆ ಕಾಣಿಸಿ ಕೊಳ್ಳುವದು ಹೇಗೆ ಎಂದು ಆತನನ್ನು ಕೇಳಿದನು.

14:23b.JOH.014.023 ಯೇಸು ಪ್ರತ್ಯುತ್ತರವಾಗಿ ಅವನಿಗೆ--ಯಾವನಾ ದರೂ ನನ್ನನ್ನು ಪ್ರೀತಿಸುವದಾದರೆ ಅವನು ನನ್ನ ಮಾತುಗಳನ್ನು ಕೈಕೊಳ್ಳುವನು; ನನ್ನ ತಂದೆಯು ಅವ ನನ್ನು ಪ್ರೀತಿಸುವನು. ಇದಲ್ಲದೆ ನಾವು ಅವನ ಬಳಿಗೆ ಬಂದು ಅವನೊಂದಿಗೆ ನಮ್ಮ ನಿವಾಸವನ್ನು ಮಾಡಿ ಕೊಳ್ಳುವೆವು.

14:24b.JOH.014.024 ನನ್ನನ್ನು ಪ್ರೀತಿಸದವನು ನನ್ನ ಮಾತು ಗಳನ್ನು ಕೈಕೊಳ್ಳುವದಿಲ್ಲ; ನೀವು ಕೇಳಿದ ಮಾತು ನನ್ನದಲ್ಲ; ಆದರೆ ನನ್ನನ್ನು ಕಳುಹಿಸಿದ ನನ್ನ ತಂದೆಯ ಮಾತೇ.

14:25b.JOH.014.025 ನಾನು ಇನ್ನೂ ನಿಮ್ಮ ಬಳಿಯಲ್ಲಿ ಇರುವಾಗಲೇ ಈ ಸಂಗತಿಗಳನ್ನು ನಿಮಗೆ ಹೇಳಿದ್ದೇನೆ;

14:26b.JOH.014.026 ತಂದೆಯು ನನ್ನ ಹೆಸರಿನಲ್ಲಿ ಕಳುಹಿಸಿಕೊಡುವ ಪರಿಶುದ್ಧಾತ್ಮನೆಂಬ ಆದರಿಕನೇ ಎಲ್ಲವುಗಳನ್ನು ನಿಮಗೆ ಬೋಧಿಸಿ ನಾನು ನಿಮಗೆ ಹೇಳಿದವುಗಳನ್ನೆಲ್ಲಾ ನಿಮ್ಮ ನೆನಪಿಗೆ ತರುವನು.

14:27b.JOH.014.027 ನಾನು ನಿಮಗೆ ಸಮಾಧಾನವನ್ನು ಬಿಟ್ಟು ಹೋಗುತ್ತೇನೆ, ನನ್ನ ಸಮಾಧಾನವನ್ನು ನಾನು ನಿಮಗೆ ಕೊಡುತ್ತೇನೆ; ಲೋಕವು ಕೊಡುವ ರೀತಿಯಲ್ಲಿ ನಾನು ನಿಮಗೆ ಕೊಡುವದಿಲ್ಲ, ನಿಮ್ಮ ಹೃದಯವು ಕಳವಳಗೊಳ್ಳ ದಿರಲಿ ಇಲ್ಲವೆ ಅಂಜದಿರಲಿ.

14:28b.JOH.014.028 ನಾನು ಹೋಗಿ ತಿರಿಗಿ ನಿಮ್ಮ ಬಳಿಗೆ ಬರುವದು ಹೇಗೆ ಎಂದು ನಾನು ನಿಮಗೆ ಹೇಳಿದ್ದನ್ನು ನೀವು ಕೇಳಿದ್ದೀರಿ; ನೀವು ನನ್ನನ್ನು ಪ್ರೀತಿಸಿದ್ದರೆ ನಾನು ನನ್ನ ತಂದೆಯ ಬಳಿಗೆ ಹೊಗುತ್ತೇನೆಂದು ಹೇಳಿದ್ದಕ್ಕೆ ಸಂತೋಷಪಡುತ್ತಿದ್ದಿರಿ; ನನ್ನ ತಂದೆಯು ನನಗಿಂತಲೂ ದೊಡ್ಡವನಾಗಿದ್ದಾನೆ.

14:29b.JOH.014.029 ಅದು ನಡೆಯುವಾಗ ನೀವು ನಂಬುವಂತೆ ನಡೆಯು ವದಕ್ಕಿಂತ ಮುಂಚೆಯೇ ಈಗ ನಾನು ನಿಮಗೆ ಹೇಳಿದ್ದೇನೆ.

14:30b.JOH.014.030 ಇನ್ನು ಮೇಲೆ ನಾನು ನಿಮ್ಮೊಂದಿಗೆ ಬಹಳವಾಗಿ ಮಾತನಾಡುವದಿಲ್ಲ; ಯಾಕಂದರೆ ಇಹ ಲೋಕದ ಅಧಿಪತಿಯು ಬರುತ್ತಾನೆ. ಅವನಿಗೆ ಸಂಬಂಧಪಟ್ಟದ್ದು ನನ್ನಲ್ಲಿ ಏನೂ ಇಲ್ಲ.ನಾನು ತಂದೆಯನ್ನು ಪ್ರೀತಿಮಾಡುತ್ತೇನೆಂದು ಲೋಕವು ತಿಳಿಯುವ ಹಾಗೆ ತಂದೆಯು ನನಗೆ ಆಜ್ಞೆ ಕೊಟ್ಟಂತೆಯೇ ನಾನು ಮಾಡುತ್ತೇನೆ. ಏಳಿರಿ, ನಾವು ಇಲ್ಲಿಂದ ಹೋಗೋಣ ಅಂದನು.

14:31b.JOH.014.031 ನಾನು ತಂದೆಯನ್ನು ಪ್ರೀತಿಮಾಡುತ್ತೇನೆಂದು ಲೋಕವು ತಿಳಿಯುವ ಹಾಗೆ ತಂದೆಯು ನನಗೆ ಆಜ್ಞೆ ಕೊಟ್ಟಂತೆಯೇ ನಾನು ಮಾಡುತ್ತೇನೆ. ಏಳಿರಿ, ನಾವು ಇಲ್ಲಿಂದ ಹೋಗೋಣ ಅಂದನು.

15

15:1b.JOH.015.001 ನಾನೇ ನಿಜವಾದ ದ್ರಾಕ್ಷೇ ಬಳ್ಳಿ ನನ್ನ ತಂದೆ ವ್ಯವಸಾಯಗಾರನು.

15:2b.JOH.015.002 ನನ್ನಲ್ಲಿ ಫಲಫಲಿಸದ ಪ್ರತಿಯೊಂದು ಕೊಂಬೆಯನ್ನು ಆತನು ತೆಗೆದುಹಾಕುತ್ತಾನೆ; ಫಲಕೊಡುವ ಪ್ರತಿಯೊಂದು ಕೊಂಬೆಯು ಹೆಚ್ಚಾಗಿ ಫಲಕೊಡುವ ಹಾಗೆ ಅದನ್ನು ಶುದ್ಧಿ ಮಾಡುತ್ತಾನೆ.

15:3b.JOH.015.003 ನಾನು ನಿಮಗೆ ಹೇಳಿದ ಮಾತಿನ ದೆಸೆಯಿಂದ ನೀವು ಈಗ ಶುದ್ಧರಾಗಿದ್ದೀರಿ.

15:4b.JOH.015.004 ನನ್ನಲ್ಲಿ ನೆಲೆಗೊಂಡಿರ್ರಿ, ನಾನು ನಿಮ್ಮಲ್ಲಿ ನೆಲೆ ಗೊಂಡಿರುವೆನು. ಕೊಂಬೆಯು ದ್ರಾಕ್ಷೇಯಬಳ್ಳಿಯಲ್ಲಿ ನೆಲೆಗೊಂಡಿರದಿದ್ದರೆ ಹೇಗೆ ತನ್ನಷ್ಟಕ್ಕೆ ತಾನೇ ಫಲ ಕೊಡಲಾರದೋ ಹಾಗೆಯೇ ನೀವೂ ನನ್ನಲಿ ನೆಲೆಗೊಂಡಿರದಿದ್ದರೆ ಫಲಕೊಡಲಾರಿರಿ.

15:5b.JOH.015.005 ನಾನೇ ದ್ರಾಕ್ಷೇಬಳ್ಳಿ, ನೀವು ಕೊಂಬೆಗಳು; ಒಬ್ಬನು ನನ್ನಲ್ಲಿ ಮತ್ತು ನಾನು ಅವನಲ್ಲಿ ನೆಲೆಗೊಂಡಿದ್ದರೆ ಅವನೇ ಬಹಳ ಫಲವನ್ನು ಕೊಡುವನು; ಯಾಕಂದರೆ ನಾನಿಲ್ಲದೆ ನೀವು ಏನೂ ಮಾಡಲಾರಿರಿ.

15:6b.JOH.015.006 ಒಬ್ಬನು ನನ್ನಲ್ಲಿ ನೆಲೆಗೊಂಡಿರದಿದ್ದರೆ ಅವನು ಕೊಂಬೆಯಂತೆ ಬಿಸಾಡಲ್ಪಟ್ಟು ಒಣಗಿ ಹೋಗುವದರಿಂದ ಜನರು ಅವುಗಳನ್ನು ಕೂಡಿಸಿ ಬೆಂಕಿಯೊಳಗೆ ಹಾಕುವರು; ಅವು ಸುಡಲ್ಪಡುವವು.

15:7b.JOH.015.007 ನೀವು ನನ್ನಲ್ಲಿಯೂ ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ನಿಮಗೆ ಬೇಕಾದದ್ದನ್ನು ಬೇಡಿಕೊಳ್ಳಿರಿ, ನಿಮಗೆ ಅದು ದೊರೆ ಯುವದು.

15:8b.JOH.015.008 ನೀವು ಬಹಳ ಫಲವನ್ನು ಕೊಡುವ ದರಿಂದ ನನ್ನ ತಂದೆಗೆ ಮಹಿಮೆ ಉಂಟಾಗುವದು; ಹೀಗೆ ನೀವು ನನ್ನ ಶಿಷ್ಯರಾಗುವಿರಿ.

15:9b.JOH.015.009 ತಂದೆಯು ನನ್ನನ್ನು ಪ್ರೀತಿಸಿದ ಹಾಗೆಯೇ ನಾನು ನಿಮ್ಮನ್ನು ಪ್ರೀತಿಸಿದ್ದೇನೆ; ನೀವು ನನ್ನ ಪ್ರೀತಿಯಲ್ಲಿ ನೆಲೆಯಾಗಿರ್ರಿ.

15:10b.JOH.015.010 ನಾನು ನನ್ನ ತಂದೆಯ ಆಜ್ಞೆಗಳನ್ನು ಕೈಕೊಂಡು ಆತನ ಪ್ರೀತಿಯಲ್ಲಿ ನೆಲೆಯಾಗಿರು ವಂತೆಯೇ ನೀವು ನನ್ನ ಆಜ್ಞೆಗಳನ್ನು ಕೈಕೊಂಡರೆ ನನ್ನ ಪ್ರೀತಿಯಲ್ಲಿ ನೆಲೆಯಾಗಿರುವಿರಿ.

15:11b.JOH.015.011 ನನ್ನ ಆನಂದವು ನಿಮ್ಮಲ್ಲಿರುವ ಹಾಗೆಯೂ ನಿಮ್ಮ ಆನಂದವು ಸಂಪೂರ್ಣವಾಗುವ ಹಾಗೆಯೂ ನಾನು ಇವುಗಳನ್ನು ನಿಮಗೆ ಹೇಳಿದ್ದೇನೆ.

15:12b.JOH.015.012 ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬದೇ ನನ್ನ ಆಜ್ಞೆಯಾಗಿದೆ.

15:13b.JOH.015.013 ಒಬ್ಬನು ತನ್ನ ಸ್ನೇಹಿತರಿ ಗೋಸ್ಕರ ತನ್ನ ಪ್ರಾಣವನ್ನು ಕೊಡುವ ಪ್ರೀತಿಗಿಂತ ಹೆಚ್ಚಿನದು ಯಾವದೂ ಇಲ್ಲ.

15:14b.JOH.015.014 ನಾನು ನಿಮಗೆ ಆಜ್ಞಾಪಿಸಿರುವವುಗಳನ್ನು ಮಾಡಿದರೆ ನೀವು ನನ್ನ ಸ್ನೇಹಿತರಾಗಿರುವಿರಿ.

15:15b.JOH.015.015 ಇನ್ನು ಮೇಲೆ ನಾನು ನಿಮ್ಮನ್ನು ಆಳುಗಳೆಂದು ಕರೆಯುವದಿಲ್ಲ; ಯಾಕಂದರೆ ತನ್ನ ದಣಿಯು ಮಾಡುವಂಥದ್ದು ಆಳಿಗೆ ತಿಳಿಯುವದಿಲ್ಲ; ಆದರೆ ನಾನು ನಿಮ್ಮನ್ನು ಸ್ನೇಹಿತರೆಂದು ಕರೆದಿದ್ದೇನೆ; ಯಾಕಂದರೆ ನನ್ನ ತಂದೆಯಿಂದ ಕೇಳಿದವುಗಳನ್ನೆಲ್ಲಾ ನಾನು ನಿಮಗೆ ತಿಳಿಯಪಡಿಸಿದ್ದೇನೆ.

15:16b.JOH.015.016 ನೀವು ನನ್ನನ್ನು ಆರಿಸಿಕೊಂಡಿಲ್ಲ; ಆದರೆ ನಾನು ನಿಮ್ಮನ್ನು ಆರಿಸಿ ಕೊಂಡು, ನೀವು ಹೋಗಿ ಫಲಕೊಡುವಂತೆಯೂ ನಿಮ್ಮ ಫಲವು ನೆಲೆಗೊಂಡಿರುವಂತೆಯೂ ನಿಮ್ಮನ್ನು ನೇಮಿಸಿದ್ದೇನೆ. ಆದಕಾರಣ ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಏನು ಕೇಳಿಕೊಂಡರೂ ಆತನು ಅದನ್ನು ನಿಮಗೆ ಕೊಡುವನು.

15:17b.JOH.015.017 ನೀವು ಒಬ್ಬರನ್ನೊಬ್ಬರು ಪ್ರೀತಿ ಮಾಡಬೇಕೆಂದು ನಾನು ಇವುಗಳನ್ನು ನಿಮಗೆ ಆಜ್ಞಾಪಿಸುತ್ತೇನೆ.

15:18b.JOH.015.018 ಲೋಕವು ನಿಮ್ಮನ್ನು ದ್ವೇಷಮಾಡಿದರೆ ನಿಮಗಿಂತ ಮೊದಲು ಅದು ನನ್ನನ್ನು ದ್ವೇಷಮಾಡಿದೆ ಎಂದು ನಿಮಗೆ ತಿಳಿದದೆ.

15:19b.JOH.015.019 ನೀವು ಲೋಕದವರಾಗಿದ್ದರೆ ಲೋಕವು ತನ್ನವರನ್ನು ಪ್ರೀತಿಸುತ್ತಿತ್ತು; ಆದರೆ ನೀವು ಲೋಕದವರಲ್ಲದೆ ಇರುವದರಿಂದಲೂ ನಾನು ಲೋಕದೊಳಗಿಂದ ನಿಮ್ಮನ್ನು ಆರಿಸಿಕೊಂಡದ್ದರಿಂದಲೂ ಲೋಕವು ನಿಮ್ಮನ್ನು ದ್ವೇಷಮಾಡುತ್ತದೆ.

15:20b.JOH.015.020 ತನ್ನ ದಣಿಗಿಂತ ಆಳು ದೊಡ್ಡವನಲ್ಲ ಎಂದು ನಾನು ನಿಮಗೆ ಹೇಳಿದ ಮಾತನ್ನು ಜ್ಞಾಪಕಮಾಡಿಕೊಳ್ಳಿರಿ; ಅವರು ನನ್ನನ್ನು ಹಿಂಸಿಸಿದರೆ ನಿಮ್ಮನ್ನು ಸಹ ಹಿಂಸಿಸುವರು. ಅವರು ನನ್ನ ಮಾತನ್ನು ಕೈ ಕೊಂಡಿದ್ದರೆ ನಿಮ್ಮ ಮಾತನ್ನು ಸಹ ಕೈಕೊಳ್ಳುವರು.

15:21b.JOH.015.021 ಆದರೆ ಅವರು ನನ್ನನ್ನು ಕಳುಹಿಸಿದಾತನನ್ನು ತಿಳಿಯದಿರುವದರಿಂದ ನನ್ನ ಹೆಸ ರಿನ ನಿಮಿತ್ತ ಇವುಗಳನ್ನೆಲ್ಲಾ ನಿಮಗೆ ಮಾಡುವರು.

15:22b.JOH.015.022 ನಾನು ಬಂದು ಅವರಿಗೆ ಹೇಳದಿದ್ದರೆ ಅವರಲ್ಲಿ ಪಾಪವು ಇರುತ್ತಿದ್ದಿಲ್ಲ; ಆದರೆ ಈಗ ಅವರ ಪಾಪಕ್ಕೆ ನೆವವಿಲ್ಲ.

15:23b.JOH.015.023 ನನ್ನನ್ನು ದ್ವೇಷಮಾಡುವವನು ನನ್ನ ತಂದೆಯನ್ನು ಸಹ ದ್ವೇಷಮಾಡುತ್ತಾನೆ.

15:24b.JOH.015.024 ಬೇರೆ ಯಾರೂ ಮಾಡದಿರುವ ಕ್ರಿಯೆಗಳನ್ನು ನಾನು ಅವರೊಳಗೆ ಮಾಡದಿದ್ದರೆ ಅವರಿಗೆ ಪಾಪವು ಇರು ತ್ತಿರಲಿಲ್ಲ; ಆದರೆ ಈಗ ಅವರು ನನ್ನನ್ನು ಮತ್ತು ನನ್ನ ತಂದೆಯನ್ನು ನೋಡಿ ದ್ವೇಷಮಾಡಿದ್ದಾರೆ.

15:25b.JOH.015.025 ಆದರೆ--ಅವರು ನನ್ನನ್ನು ನಿಷ್ಕಾರಣವಾಗಿ ದ್ವೇಷ ಮಾಡಿದರೆಂದು ಅವರ ನ್ಯಾಯಪ್ರಮಾಣದಲ್ಲಿ ಬರೆದಿರುವ ಮಾತು ನೆರವೇರುವಂತೆ ಹೀಗಾಯಿತು.

15:26b.JOH.015.026 ಆದರೆ ತಂದೆಯ ಬಳಿಯಿಂದ ನಾನು ನಿಮಗೆ ಕಳುಹಿಸಿಕೊಡುವ ಆದರಿಕನು ಅಂದರೆ ತಂದೆಯ ಬಳಿಯಿಂದ ಹೊರಡುವ ಸತ್ಯದ ಆತ್ಮನು ಬಂದಾಗ ಆತನು ನನ್ನ ವಿಷಯವಾಗಿ ಸಾಕ್ಷಿ ಕೊಡುವನು.ನೀವು ಮೊದಲಿನಿಂದಲೂ ನನ್ನ ಸಂಗಡ ಇದ್ದದರಿಂದ ನೀವು ಸಹ ಸಾಕ್ಷಿ ಕೊಡುವಿರಿ.

15:27b.JOH.015.027 ನೀವು ಮೊದಲಿನಿಂದಲೂ ನನ್ನ ಸಂಗಡ ಇದ್ದದರಿಂದ ನೀವು ಸಹ ಸಾಕ್ಷಿ ಕೊಡುವಿರಿ.

16

16:1b.JOH.016.001 ನೀವು ಅಭ್ಯಂತರಪಡಬಾರದೆಂದು ಈ ಮಾತುಗಳನ್ನು ನಾನು ನಿಮಗೆ ಹೇಳಿದ್ದೇನೆ.

16:2b.JOH.016.002 ಅವರು ನಿಮ್ಮನ್ನು ಸಭಾಮಂದಿರಗಳಿಂದ ಹೊರಗೆ ಹಾಕುವರು; ಹೌದು, ನಿಮ್ಮನ್ನು ಕೊಲ್ಲುವವನು ದೇವರ ಸೇವೆ ಮಾಡುತ್ತಾನೆಂದು ನೆನಸುವ ಗಳಿಗೆ ಬರುತ್ತದೆ.

16:3b.JOH.016.003 ಅವರು ತಂದೆಯನ್ನಾಗಲಿ ಇಲ್ಲವೆ ನನ್ನನ್ನಾ ಗಲಿ ತಿಳಿಯದಿರುವ ಕಾರಣ ಇವೆಲ್ಲವುಗಳನ್ನು ನಿಮಗೆ ಮಾಡುವರು.

16:4b.JOH.016.004 ಆದರೆ ಸಮಯ ಬಂದಾಗ ಇವುಗಳ ವಿಷಯವಾಗಿ ನಾನು ನಿಮಗೆ ಹೇಳಿದ್ದೇನೆಂದು ನೀವು ಜ್ಞಾಪಕಮಾಡಿಕೊಳ್ಳುವಂತೆ ಇವುಗಳನ್ನು ನಿಮಗೆ ಹೇಳಿದ್ದೇನೆ. ನಾನು ನಿಮ್ಮ ಸಂಗಡಲೇ ಇದ್ದದರಿಂದ ಪ್ರಾರಂಭದಲ್ಲಿ ಇವುಗಳನ್ನು ನಿಮಗೆ ಹೇಳಲಿಲ್ಲ.

16:5b.JOH.016.005 ಆದರೆ ಈಗ ನನ್ನನ್ನು ಕಳುಹಿಸಿದಾತನ ಬಳಿಗೆ ನಾನು ಹೋಗುತ್ತೇನೆ; ನಿಮ್ಮಲ್ಲಿ ಒಬ್ಬನಾದರೂ--ನೀನು ಎಲ್ಲಿಗೆ ಹೋಗುತ್ತೀ ಎಂದು ನನ್ನನ್ನು ಕೇಳುವದಿಲ್ಲ.

16:6b.JOH.016.006 ಆದರೆ ಇವುಗಳನ್ನು ನಾನು ನಿಮಗೆ ಹೇಳಿದ್ದರಿಂದ ನಿಮ್ಮ ಹೃದಯದಲ್ಲಿ ದುಃಖವು ತುಂಬಿಯದೆ.

16:7b.JOH.016.007 ಆದರೂ ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ; ನಾನು ಹೋಗುವದು ನಿಮಗೆ ಹಿತಕರವಾಗಿದೆ; ಯಾಕಂದರೆ ನಾನು ಹೋಗದಿದ್ದರೆ ಆದರಿಕನು ನಿಮ್ಮ ಬಳಿಗೆ ಬರುವದಿಲ್ಲ; ನಾನು ಹೋದರೆ ಆತನನ್ನು ನಿಮ್ಮ ಬಳಿಗೆ ಕಳುಹಿಸುವೆನು.

16:8b.JOH.016.008 ಆತನು ಬಂದಾಗ ಪಾಪ ನೀತಿ ನ್ಯಾಯ ತೀರ್ವಿಕೆಯ ವಿಷಯಗಳಲ್ಲಿಯೂ

16:9b.JOH.016.009 ಅವರು ನನ್ನನ್ನು ನಂಬದೆ ಇರುವದರಿಂದ ಪಾಪದ ವಿಷಯವಾಗಿಯೂ

16:10b.JOH.016.010 ನಾನು ನನ್ನ ತಂದೆಯ ಬಳಿಗೆ ಹೋಗುವದರಿಂದ ನೀವು ನನ್ನನ್ನು ಎಂದಿಗೂ ನೋಡದ ಕಾರಣ ನೀತಿಯ ವಿಷಯವಾಗಿಯೂ

16:11b.JOH.016.011 ಇಹಲೋಕಾಧಿಪತಿಯು ನ್ಯಾಯತೀರ್ಪನ್ನು ಹೊಂದಿರುವದರಿಂದ ನ್ಯಾಯ ತೀರ್ವಿಕೆಯ ವಿಷಯವಾಗಿಯೂ ಲೋಕವನ್ನು ಗದರಿಸುವನು.

16:12b.JOH.016.012 ನಾನು ನಿಮಗೆ ಹೇಳಬೇಕಾದ ವಿಷಯಗಳು ಇನ್ನೂ ಬಹಳ ಇವೆ; ಆದರೆ ನೀವು ಈಗ ಅವುಗಳನ್ನು ಹೊರಲಾರಿರಿ;

16:13b.JOH.016.013 ಆದರೆ ಆತನು ಅಂದರೆ ಸತ್ಯದ ಆತ್ಮನು ಬಂದಾಗ ಆತನು ನಿಮ್ಮನ್ನು ಎಲ್ಲಾ ಸತ್ಯಕ್ಕೆ ನಡಿಸುವನು. ಆತನು ತನ್ನಷ್ಟಕ್ಕೆ ತಾನೇ ಮಾತನಾಡದೆ ತಾನು ಕೇಳಿದವುಗಳನ್ನೇ ಮಾತನಾಡುತ್ತಾನೆ; ಮುಂದೆ ಬರುವದಕ್ಕಿರುವ ವಿಷಯಗಳನ್ನು ಆತನು ನಿಮಗೆ ತೋರಿಸುವನು.

16:14b.JOH.016.014 ಆತನು ನನ್ನನ್ನು ಮಹಿಮೆಪಡಿ ಸುವನು; ಆತನು ನನ್ನದರೊಳಗಿಂದ ತೆಗೆದುಕೊಂಡು ನಿಮಗೆ ತಿಳಿಯಪಡಿಸುವನು.

16:15b.JOH.016.015 ತಂದೆಗೆ ಇರುವವು ಗಳೆಲ್ಲವು ನನ್ನವೇ; ಆದದರಿಂದಲೇ ಆತನು ನನ್ನದರೊ ಳಗಿಂದ ತೆಗೆದುಕೊಂಡು ನಿಮಗೆ ತಿಳಿಯಪಡಿಸುವನು ಎಂದು ನಾನು ಹೇಳಿದೆನು.

16:16b.JOH.016.016 ಸ್ವಲ್ಪ ಕಾಲವಾದ ಮೇಲೆ ನೀವು ನನ್ನನ್ನು ನೋಡುವದಿಲ್ಲ; ತಿರಿಗಿ ಸ್ವಲ್ಪ ಕಾಲವಾದ ಮೇಲೆ ನೀವು ನನ್ನನ್ನು ನೋಡುವಿರಿ; ಯಾಕಂದರೆ ನಾನು ತಂದೆಯ ಬಳಿಗೆ ಹೋಗುತ್ತೇನೆ ಅಂದನು.

16:17b.JOH.016.017 ಆಗ ಆತನ ಶಿಷ್ಯರಲ್ಲಿ ಕೆಲವರು--ಈತನು ನಮಗೆ ಹೇಳುವದೇನು? ಸ್ವಲ್ಪ ಕಾಲವಾದ ಮೇಲೆ ನೀವು ನನ್ನನ್ನು ನೋಡುವದಿಲ್ಲ; ತಿರಿಗಿ ಸ್ವಲ್ಪಕಾಲವಾದ ಮೇಲೆ ನೀವು ನನ್ನನ್ನು ನೋಡುವಿರಿ; ಯಾಕಂದರೆ ನಾನು ತಂದೆಯ ಬಳಿಗೆ ಹೋಗುತ್ತೇನೆ ಅನ್ನುತ್ತಾನಲಾ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡ

16:18b.JOH.016.018 ಆದದರಿಂದ ಅವರು--ಈತನು ಹೇಳುವ ಈ ಮಾತೇನು? ಸ್ವಲ್ಪಕಾಲ ಎಂದು ಹೇಳುತ್ತಾನಲ್ಲಾ? ಈತನು ಹೇಳುವದನ್ನು ನಾವು ಅರಿಯೆವು ಅಂದರು.

16:19b.JOH.016.019 ಯೇಸು ತನ್ನನ್ನು ಪ್ರಶ್ನಿಸುವದಕ್ಕೆ ಅಪೇಕ್ಷಿಸುತ್ತಿ ದ್ದಾರೆಂದು ತಿಳಿದು ಅವರಿಗೆ--ಸ್ವಲ್ಪ ಕಾಲವಾದ ಮೇಲೆ ನೀವು ನನ್ನನ್ನು ನೋಡುವದಿಲ್ಲ; ತಿರಿಗಿ ಸ್ವಲ್ಪಕಾಲವಾದ ಮೇಲೆ ನನ್ನನ್ನು ನೋಡುವಿರಿ ಎಂದು ನಾನು ನಿಮಗೆ ಹೇಳಿದ್ದಕ್ಕೆ ನಿಮ್ಮ ನಿಮ್ಮೊಳಗೆ ವಿಚಾರಿಸಿಕೊಳ್ಳುತ್ತೀರೋ?

16:20b.JOH.016.020 ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ--ನೀವು ಅಳುತ್ತಾ ಗೋಳಾಡುವಿರಿ, ಆದರೆ ಲೋಕವು ಸಂತೋಷಿಸುವದು; ನೀವು ದುಃಖಿಸುವಿರಿ, ಆದರೆ ನಿಮ್ಮ ದುಃಖವು ಹೋಗಿ ಆನಂದವು ಬರುವದು.

16:21b.JOH.016.021 ಒಬ್ಬ ಸ್ತ್ರೀಗೆ ತನ್ನ ಪ್ರಸವವೇದನೆಯ ಗಳಿಗೆ ಬಂದಾಗ ದುಃಖವಿರುವದು; ಆಕೆಯು ಮಗುವನ್ನು ಹೆತ್ತಕೂಡಲೆ ಈ ಲೋಕದೊಳಗೆ ಒಬ್ಬ ಮನುಷ್ಯನು ಹುಟ್ಟಿದನೆಂದು ಸಂತೋಷದಿಂದ ಆ ನೋವನ್ನು ಆಕೆಯು ನೆನಪಿಗೆ ತರುವದೇ ಇಲ್ಲ.

16:22b.JOH.016.022 ಆದದರಿಂದ ಈಗ ನಿಮಗೆ ದುಃಖವುಂಟು; ಆದರೆ ನಾನು ನಿಮ್ಮನ್ನು ತಿರಿಗಿ ನೋಡುವೆನು; ಆಗ ನಿಮ್ಮ ಹೃದಯವು ಉಲ್ಲಾಸಿಸುವದು; ನಿಮ್ಮ ಆನಂದವನ್ನು ನಿಮ್ಮಿಂದ ಯಾರೂ ತೆಗೆಯುವದಿಲ್ಲ.

16:23b.JOH.016.023 ಆ ದಿನದಲ್ಲಿ ನೀವು ನನ್ನನ್ನು ಏನೂ ಕೇಳುವದಿಲ್ಲ. ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ--ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಏನು ಕೇಳಿಕೊಂಡರೂ ಅದನ್ನು ಆತನು ನಿಮಗೆ ಕೊಡುವನು.

16:24b.JOH.016.024 ನೀವು ಇದುವರೆಗೆ ನನ್ನ ಹೆಸರಿನಲ್ಲಿ ಏನೂ ಬೇಡಿಕೊಳ್ಳಲಿಲ್ಲ; ಬೇಡಿಕೊಳ್ಳಿರಿ, ನಿಮಗೆ ದೊರೆಯುವದು; ಆಗ ನಿಮ್ಮ ಆನಂದವು ಪರಿಪೂರ್ಣವಾಗುವದು.

16:25b.JOH.016.025 ಇವುಗಳನ್ನು ನಾನು ಸಾಮ್ಯಗಳಿಂದ ನಿಮಗೆ ಹೇಳಿದ್ದೇನೆ; ಆದರೆ ನಾನು ಇನ್ನು ಸಾಮ್ಯಗಳಿಂದ ಮಾತನಾಡದೆ ತಂದೆಯ ವಿಷಯ ನಿಮಗೆ ಸ್ಪಷ್ಟವಾಗಿ ತಿಳಿಸುವ ಸಮಯ ಬರುತ್ತದೆ.

16:26b.JOH.016.026 ಆ ದಿವಸದಲ್ಲಿ ನೀವು ನನ್ನ ಹೆಸರಿನಲ್ಲಿ ಬೇಡಿಕೊಳ್ಳುವಿರಿ; ನಿಮಗೋಸ್ಕರ ತಂದೆ ಯನ್ನು ಕೇಳಿಕೊಳ್ಳುವೆನೆಂದು ನಾನು ನಿಮಗೆ ಹೇಳು ವದಿಲ್ಲ.

16:27b.JOH.016.027 ನೀವು ನನ್ನನ್ನು ಪ್ರೀತಿಸಿ ನಾನು ದೇವರ ಬಳಿಯಿಂದ ಹೊರಟುಬಂದೆನೆಂದು ನಂಬಿದ್ದರಿಂದ ತಂದೆಯು ತಾನೇ ನಿಮ್ಮನ್ನು ಪ್ರೀತಿಸುತ್ತಾನೆ.

16:28b.JOH.016.028 ನಾನು ತಂದೆಯ ಬಳಿಯಿಂದ ಹೊರಟು ಈ ಲೋಕಕ್ಕೆ ಬಂದಿದ್ದೇನೆ; ತಿರಿಗಿ ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗುತ್ತೇನೆ ಅಂದನು.

16:29b.JOH.016.029 ಆತನ ಶಿಷ್ಯರು ಆತನಿಗೆ--ಇಗೋ, ಈಗ ನೀನು ಸಾಮ್ಯರೂಪದಲ್ಲಿ ಮಾತನಾಡದೆ ಸ್ಪಷ್ಟವಾಗಿಯೇ ಮಾತನಾಡುತ್ತೀ.

16:30b.JOH.016.030 ನೀನು ಎಲ್ಲಾ ವಿಷಯಗಳನ್ನು ತಿಳಿದಾತನೆಂದೂ ಯಾವ ಮನುಷ್ಯನು ನಿನ್ನನ್ನು ಕೇಳು ವದು ಅಗತ್ಯವಿಲ್ಲವೆಂದೂ ಈಗ ನಮಗೆ ನಿಶ್ಚಯ ವಾಯಿತು; ಇದರಿಂದ ನೀನು ದೇವರ ಕಡೆಯಿಂದ ಹೊರಟು ಬಂದಿದ್ದೀ ಎಂದು ನಾವು ನಂಬುತ್ತೇವೆ ಅಂದರು.

16:31b.JOH.016.031 ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವರಿಗೆ--ಈಗ ನೀವು ನಂಬುತ್ತೀರೋ?

16:32b.JOH.016.032 ಇಗೋ, ಒಬ್ಬೊಬ್ಬನು ತನ್ನ ತನ್ನ ಸ್ಥಳಕ್ಕೆ ಚದರಿ ಹೋಗಿ ನನ್ನನ್ನು ಒಂಟಿಗನಾಗಿ ಬಿಡುವ ಗಳಿಗೆ ಬರುವದು. ಹೌದು, ಈಗಲೇ ಬಂದಿದೆ. ಆದಾಗ್ಯೂ ನಾನು ಒಂಟಿಗನಲ್ಲ; ತಂದೆಯು ನನ್ನ ಸಂಗಡ ಇದ್ದಾನೆ.ನನ್ನಲ್ಲಿ ನಿಮಗೆ ಸಮಾಧಾನವು ಉಂಟಾಗುವಂತೆ ಇವುಗಳನ್ನು ನಾನು ನಿಮಗೆ ಹೇಳಿದ್ದೇನೆ, ಲೋಕದಲ್ಲಿ ನಿಮಗೆ ಸಂಕಟ ಇರುವದು; ಆದರೆ ಧೈರ್ಯವಾಗಿರ್ರಿ; ನಾನು ಲೋಕ ವನ್ನು ಜಯಿಸಿದ್ದೇನೆ ಅಂದನು.

16:33b.JOH.016.033 ನನ್ನಲ್ಲಿ ನಿಮಗೆ ಸಮಾಧಾನವು ಉಂಟಾಗುವಂತೆ ಇವುಗಳನ್ನು ನಾನು ನಿಮಗೆ ಹೇಳಿದ್ದೇನೆ, ಲೋಕದಲ್ಲಿ ನಿಮಗೆ ಸಂಕಟ ಇರುವದು; ಆದರೆ ಧೈರ್ಯವಾಗಿರ್ರಿ; ನಾನು ಲೋಕ ವನ್ನು ಜಯಿಸಿದ್ದೇನೆ ಅಂದನು.

17

17:1b.JOH.017.001 ಯೇಸು ಈ ಮಾತುಗಳನ್ನು ಹೇಳಿ ಪರಲೋಕದ ಕಡೆಗೆ ಕಣ್ಣುಗಳನ್ನೆತ್ತಿ-- ತಂದೆಯೇ, ಈಗ ಗಳಿಗೆ ಬಂದಿದೆ; ನಿನ್ನ ಮಗನನ್ನು ಮಹಿಮೆಪಡಿಸು; ಆಗ ನಿನ್ನ ಮಗನೂ ನಿನ್ನನ್ನು ಮಹಿಮೆಪಡಿಸುವದಕ್ಕಾಗುವದು.

17:2b.JOH.017.002 ನೀನು ಆತನಿಗೆ ಯಾರಾರನ್ನು ಕೊಟ್ಟಿದ್ದೀಯೋ ಅವರಿಗೆ ಆತನು ನಿತ್ಯಜೀವವನ್ನು ಕೊಡಬೇಕೆಂದು ಆತನಿಗೆ ಎಲ್ಲಾ ಮನುಷ್ಯರ ಮೇಲೆ ಅಧಿಕಾರವನ್ನು ಕೊಟ್ಟಿದ್ದೀ.

17:3b.JOH.017.003 ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ಅವರು ಅರಿತು ಕೊಳ್ಳುವದೇ ನಿತ್ಯಜೀವ.

17:4b.JOH.017.004 ನಾನು ನಿನ್ನನ್ನು ಭೂಮಿಯ ಮೇಲೆ ಮಹಿಮೆಪಡಿಸಿದ್ದೇನೆ; ನೀನು ನನಗೆ ಕೊಟ್ಟ ಕೆಲಸವನ್ನು ನಾನು ಮುಗಿಸಿದ್ದೇನೆ;

17:5b.JOH.017.005 ಓ ತಂದೆಯೇ, ಹೀಗೆ ಲೋಕವು ಇದ್ದದ್ದಕ್ಕಿಂತ ಮುಂಚೆ ನಿನ್ನೊಂದಿಗೆ ನನಗಿದ್ದ ಮಹಿಮೆಯಿಂದ ನೀನು ಸ್ವತಃ ನನ್ನನ್ನು ಮಹಿಮೆಪಡಿಸು.

17:6b.JOH.017.006 ಲೋಕದೊಳಗಿಂದ ನೀನು ನನಗೆ ಕೊಟ್ಟ ಮನು ಷ್ಯರಿಗೆ ನಾನು ನಿನ್ನ ಹೆಸರನ್ನು ಪ್ರತ್ಯಕ್ಷಪಡಿಸಿದ್ದೇನೆ. ಅವರು ನಿನ್ನವರಾಗಿದ್ದರು; ನೀನು ಅವರನ್ನು ನನಗೆ ಕೊಟ್ಟಿದ್ದೀ; ಇದಲ್ಲದೆ ಅವರು ನಿನ್ನ ವಾಕ್ಯವನ್ನು ಕೈ ಕೊಂಡಿದ್ದಾರೆ.

17:7b.JOH.017.007 ನೀನು ನನಗೆ ಕೊಟ್ಟಿರುವವುಗಳೆಲ್ಲವು ನಿನ್ನವುಗಳೇ ಎಂದು ಈಗ ಅವರು ತಿಳಿದುಕೊಂಡಿದ್ದಾರೆ.

17:8b.JOH.017.008 ನೀನು ನನಗೆ ಕೊಟ್ಟ ವಾಕ್ಯಗಳನ್ನು ನಾನು ಇವರಿಗೆ ಕೊಟ್ಟಿದ್ದೇನೆ. ಇವರು ಅವುಗಳನ್ನು ಅಂಗೀಕರಿಸಿದ್ದಾರೆ; ನಾನು ನಿನ್ನ ಬಳಿಯಿಂದಲೇ ಹೊರಟುಬಂದವನೆಂದು ನಿಶ್ಚಯವಾಗಿ ತಿಳಿದು ನೀನೇ ನನ್ನನ್ನು ಕಳುಹಿಸಿದ್ದೀ ಯೆಂದು ನಂಬಿದ್ದಾರೆ.

17:9b.JOH.017.009 ನಾನು ಅವರಿಗೋಸ್ಕರ ಕೇಳಿ ಕೊಳ್ಳುತ್ತೇನೆ; ನೀನು ನನಗೆ ಕೊಟ್ಟವರಿಗೋಸ್ಕರವೇ ಹೊರತು ನಾನು ಲೋಕಕ್ಕೋಸ್ಕರ ಕೇಳಿಕೊಳ್ಳುವದಿಲ್ಲ; ಯಾಕಂದರೆ ಅವರು ನಿನ್ನವರು.

17:10b.JOH.017.010 ನನ್ನವರೆಲ್ಲರು ನಿನ್ನ ವರೇ; ನಿನ್ನವರು ನನ್ನವರೇ; ಅವರಲ್ಲಿ ಮಹಿಮೆ ಪಟ್ಟಿದ್ದೇನೆ.

17:11b.JOH.017.011 ಇನ್ನು ಮೇಲೆ ನಾನು ಲೋಕದಲ್ಲಿ ಇರುವದಿಲ್ಲ; ಆದರೆ ಇವರು ಲೋಕದಲ್ಲಿದ್ದಾರೆ; ನಾನು ನಿನ್ನ ಬಳಿಗೆ ಬರುತ್ತೇನೆ. ಪರಿಶುದ್ಧನಾದ ತಂದೆಯೇ, ನಾವು ಒಂದಾಗಿರುವ ಹಾಗೆಯೇ ಅವರು ಸಹ ಒಂದಾಗಿರುವಂತೆ ನೀನು ನನಗೆ ಕೊಟ್ಟಿರುವವರನ್ನು ನಿನ್ನ ಸ್ವಂತ ಹೆಸರಿನಲ್ಲಿ ಕಾಪಾಡು.

17:12b.JOH.017.012 ನಾನು ಅವರೊಂದಿಗೆ ಲೋಕದಲ್ಲಿದ್ದಾಗ ನಿನ್ನ ಹೆಸರಿನಲ್ಲಿ ಅವರನ್ನು ಕಾಪಾಡಿದೆನು; ನೀನು ನನಗೆ ಕೊಟ್ಟವರನ್ನು ನಾನು ಕಾಪಾಡಿದ್ದೇನೆ; ಬರಹವು ನೆರವೇರುವ ಹಾಗೆ ಆ ನಾಶನದ ಮಗನೇ ಹೊರತು ಅವರಲ್ಲಿ ಒಬ್ಬನೂ ನಾಶವಾಗಲಿಲ್ಲ.

17:13b.JOH.017.013 ಈಗ ನಾನು ನಿನ್ನ ಬಳಿಗೆ ಬರು ತ್ತೇನೆ ನನ್ನ ಆನಂದವು ಅವರೊಳಗೆ ಈಡೇರುವಂತೆ ನಾನು ಲೋಕದಲ್ಲಿ ಈ ವಿಷಯಗಳನ್ನು ಮಾತನಾಡು ತ್ತೇನೆ.

17:14b.JOH.017.014 ನಾನು ನಿನ್ನ ವಾಕ್ಯವನ್ನು ಅವರಿಗೆ ಕೊಟ್ಟಿದ್ದೇನೆ ನಾನು ಲೋಕದವನಲ್ಲದ ಪ್ರಕಾರ ಅವರೂ ಲೋಕದವರಲ್ಲವಾದದರಿಂದ ಲೋಕವು ಅವರನ್ನು ಹಗೆಮಾಡಿಯದೆ.

17:15b.JOH.017.015 ನೀನು ಅವರನ್ನು ಲೋಕದೊಳಗಿಂದ ತೆಗೆಯಬೇಕೆಂತಲ್ಲ; ಅವರನ್ನು ಕೇಡಿನಿಂದ ಕಾಪಾಡಬೇಕೆಂದು ನಾನು ಕೇಳಿಕೊಳ್ಳು ತ್ತೇನೆ.

17:16b.JOH.017.016 ನಾನು ಲೋಕದವನಲ್ಲದ ಪ್ರಕಾರ ಅವರೂ ಲೋಕದವರಲ್ಲ.

17:17b.JOH.017.017 ನಿನ್ನ ಸತ್ಯದಿಂದ ಅವರನ್ನು ಪ್ರತಿಷ್ಠೆ ಪಡಿಸು; ನಿನ್ನ ವಾಕ್ಯವೇ ಸತ್ಯವು

17:18b.JOH.017.018 ನೀನು ನನ್ನನ್ನು ಲೋಕದೊಳಗೆ ಕಳುಹಿಸಿದ ಹಾಗೆಯೇ ನಾನು ಸಹ ಅವರನ್ನು ಲೋಕದೊಳಗೆ ಕಳುಹಿಸಿದ್ದೇನೆ.

17:19b.JOH.017.019 ಅವರು ಸತ್ಯದಲ್ಲಿ ಪ್ರತಿಷ್ಠಿಸಲ್ಪಡುವಂತೆ ನಾನು ನನ್ನನ್ನು ಅವರಿ ಗೋಸ್ಕರ ಪ್ರತಿಷ್ಠಿಸಿಕೊಳ್ಳುತ್ತೇನೆ.

17:20b.JOH.017.020 ಆದರೆ ಇವರಿಗೊಸ್ಕರ ಮಾತ್ರವಲ್ಲದೆ ಇವರ ವಾಕ್ಯದಿಂದ ನನ್ನ ಮೇಲೆ ನಂಬಿಕೆಯಿಡುವವರಿಗೋ ಸ್ಕರವೂ ಕೇಳಿಕೊಳ್ಳುತ್ತೇನೆ.

17:21b.JOH.017.021 ಇದಲ್ಲದೆ ಅವರೆಲ್ಲರೂ ನಮ್ಮಲ್ಲಿ ಒಂದಾಗಿರಬೇಕೆಂತಲೂ ನೀನು ನನ್ನನ್ನು ಕಳುಹಿಸಿದ್ದೀ ಎಂದು ಲೋಕವು ನಂಬುವಂತೆಯೂ ತಂದೆಯಾದ ನೀನು ನನ್ನಲ್ಲಿಯೂ ನಾನು ನಿನ್ನಲ್ಲಿಯೂ ಇರುವ ಹಾಗೆ ಇವರು ಸಹ ನಮ್ಮಲ್ಲಿ ಒಂದಾಗಿರ ಬೇಕೆಂತಲೂ ಕೇಳಿಕೊಳ್ಳುತ್ತೇನೆ.

17:22b.JOH.017.022 ನಾವು ಒಂದಾಗಿರುವ ಹಾಗೆ ಇವರೂ ಒಂದಾಗಿರುವಂತೆ ನೀನು ನನಗೆ ಕೊಟ್ಟ ಮಹಿಮೆಯನ್ನು ನಾನು ಇವರಿಗೆ ಕೊಟ್ಟಿದ್ದೇನೆ.

17:23b.JOH.017.023 ನಾನು ಇವರಲ್ಲಿಯೂ ನೀನು ನನ್ನಲ್ಲಿಯೂ (ಇರುವಂತೆ) ಅವರೂ ಒಂದಾಗಿ ಪರಿಪೂರ್ಣರಾಗಿ ರುವರು; ನೀನು ನನ್ನನ್ನು ಕಳುಹಿಸಿದ್ದೀ ಎಂತಲೂ ನನ್ನನ್ನು ಪ್ರೀತಿ ಮಾಡಿದಂತೆ ಅವರನ್ನು ನೀನು ಪ್ರೀತಿಮಾಡಿದ್ದೀ ಎಂತಲೂ ಲೋಕವು ತಿಳಿದುಕೊಳ್ಳುವದು.

17:24b.JOH.017.024 ತಂದೆ ಯೇ, ನೀನು ನನಗೆ ಕೊಟ್ಟಿರುವ ಮಹಿಮೆಯನ್ನು ನೀನು ನನಗೆ ಕೊಟ್ಟವರು ಸಹ ನೋಡುವ ಹಾಗೆಯೂ ನಾನಿರುವಲ್ಲಿ ಅವರು ನನ್ನೊಂದಿಗೆ ಇರುವಂತೆಯೂ ನಾನು ಇಚ್ಛೈಸುತ್ತೇನೆ. ಜಗದುತ್ಪತ್ತಿಗೆ ಮುಂಚೆ ನೀನು ನನ್ನನ್ನು ಪ್ರೀತಿಸಿದಿ.

17:25b.JOH.017.025 ಓ ನೀತಿಯುಳ್ಳ ತಂದೆಯೇ, ಲೋಕವು ನಿನ್ನನ್ನು ತಿಳಿಯಲಿಲ್ಲ; ಆದರೆ ನಾನು ನಿನ್ನನ್ನು ತಿಳಿದಿದ್ದೇನೆ, ನೀನೇ ನನ್ನನ್ನು ಕಳುಹಿಸಿದ್ದೀ ಎಂದು ಇವರು ತಿಳಿದಿದ್ದಾರೆ.ನೀನು ನನ್ನನ್ನು ಪ್ರೀತಿಸಿದಂಥ ಪ್ರೀತಿಯು ಅವರಲ್ಲಿ ಇರಬೇಕೆಂತಲೂ ನಾನು ಅವರಲ್ಲಿ ಇರುವಂತೆಯೂ ನಾನು ಅವರಿಗೆ ನಿನ್ನ ಹೆಸರನ್ನು ಪ್ರಕಟಿಸಿದ್ದೇನೆ; ಇನ್ನೂ ಪ್ರಕಟಿಸುವೆನು ಅಂದನು.

17:26b.JOH.017.026 ನೀನು ನನ್ನನ್ನು ಪ್ರೀತಿಸಿದಂಥ ಪ್ರೀತಿಯು ಅವರಲ್ಲಿ ಇರಬೇಕೆಂತಲೂ ನಾನು ಅವರಲ್ಲಿ ಇರುವಂತೆಯೂ ನಾನು ಅವರಿಗೆ ನಿನ್ನ ಹೆಸರನ್ನು ಪ್ರಕಟಿಸಿದ್ದೇನೆ; ಇನ್ನೂ ಪ್ರಕಟಿಸುವೆನು ಅಂದನು.

18

18:1b.JOH.018.001 ಯೇಸು ಈ ಮಾತುಗಳನ್ನು ಆಡಿದ ಮೇಲೆ ತನ್ನ ಶಿಷ್ಯರೊಂದಿಗೆ ಕೆದ್ರೋನ್‌ ಹಳ್ಳದ ಆಚೆಗೆ ಹೋದನು. ಅಲ್ಲಿ ಒಂದು ತೋಟ ವಿತ್ತು, ಆತನೂ ಆತನ ಶಿಷ್ಯರೂ ಅದರೊಳಗೆ ಪ್ರವೇಶಿ ಸಿದರು.

18:2b.JOH.018.002 ಆತನನ್ನು ಹಿಡುಕೊಟ್ಟ ಯೂದನಿಗೂ ಆ ಸ್ಥಳವು ಗೊತ್ತಿತ್ತು; ಯಾಕಂದರೆ ಅನೇಕ ಸಾರಿ ಯೇಸು ತನ್ನ ಶಿಷ್ಯರೊಂದಿಗೆ ಅಲ್ಲಿ ಕೂಡಿಬರುತ್ತಿದ್ದನು.

18:3b.JOH.018.003 ಆಗ ಯೂದನು ಪ್ರಧಾನಯಾಜಕರಿಂದ ಮತ್ತು ಫರಿಸಾಯ ರಿಂದ ಜನರ ಗುಂಪನ್ನೂ ಅಧಿಕಾರಿಗಳನ್ನೂ ಪಡೆದು ಕೊಂಡು ದೀಪಗಳಿಂದಲೂ ಪಂಜುಗಳಿಂದಲೂ ಆಯುಧಗಳಿಂದಲೂ ಅಲ್ಲಿಗೆ ಬಂದನು.

18:4b.JOH.018.004 ಯೇಸು ತನ್ನ ಮೇಲೆ ಬರುವವುಗಳನ್ನೆಲ್ಲಾ ತಿಳಿದುಕೊಂಡು ಮುಂದಕ್ಕೆ ಹೋಗಿ ಅವರಿಗೆ--ನೀವು ಯಾರನ್ನು ಹುಡುಕುತ್ತೀರಿ ಎಂದು ಕೇಳಲು

18:5b.JOH.018.005 ಅವರು ಪ್ರತ್ಯುತ್ತರ ವಾಗಿ ಆತನಿಗೆ--ನಜರೇತಿನ ಯೇಸು ಅಂದರು. ಅದಕ್ಕೆ ಯೇಸು ಅವರಿಗೆ--ನಾನೇ ಆತನು ಅಂದನು. ಮತ್ತು ಆತನನ್ನು ಹಿಡುಕೊಡುವ ಯೂದನು ಸಹ ಅವರೊಂದಿಗೆ ನಿಂತಿದ್ದನು.

18:6b.JOH.018.006 ಆತನು ಅವರಿಗೆ--ನಾನೇ ಆತನು ಎಂದು ಹೇಳಿದ ಕೂಡಲೇ ಅವರು ಹಿಂದಕ್ಕೆ ಸರಿದು ನೆಲಕ್ಕೆ ಬಿದ್ದರು.

18:7b.JOH.018.007 ಆಗ ಆತನು ತಿರಿಗಿ ಅವರಿಗೆ--ನೀವು ಯಾರನ್ನು ಹುಡುಕುತ್ತೀರಿ ಎಂದು ಕೇಳಲು ಅವರು--ನಜರೇತಿನ ಯೇಸುವನ್ನು ಅಂದರು.

18:8b.JOH.018.008 ಯೇಸು ಪ್ರತ್ಯುತ್ತರವಾಗಿ--ನಾನೇ ಆತನು ಎಂದು ನಿಮಗೆ ಹೇಳಿದೆನಲ್ಲಾ; ನೀವು ನನ್ನನ್ನೆ ಹುಡುಕು ವುದಾದರೆ ಇವರನ್ನು ಹೋಗಬಿಡಿರಿ ಅಂದನು.

18:9b.JOH.018.009 ಹೀಗೆ--ನೀನು ನನಗೆ ಕೊಟ್ಟವರಲ್ಲಿ ಒಬ್ಬನನ್ನಾದರೂ ನಾನು ಕಳಕೊಳ್ಳಲಿಲ್ಲವೆಂದು ಆತನು ಹೇಳಿದ ಮಾತು ನೆರವೇರುವಂತೆ ಇದಾಯಿತು.

18:10b.JOH.018.010 ಆಗ ಸೀಮೋನ ಪೇತ್ರನು ತನ್ನಲ್ಲಿದ್ದ ಕತ್ತಿಯನ್ನು ಹಿರಿದು ಮಹಾ ಯಾಜಕನ ಆಳನ್ನು ಹೊಡೆದು ಅವನ ಬಲಗಿವಿಯನ್ನು ಕತ್ತರಿಸಿದನು; ಆ ಆಳಿನ ಹೆಸರು ಮಲ್ಕನು.

18:11b.JOH.018.011 ಆಗ ಯೇಸು ಪೇತ್ರನಿಗೆ--ನಿನ್ನ ಕತ್ತಿಯನ್ನು ಒರೆಗೆಹಾಕು. ನನ್ನ ತಂದೆಯೂ ನನಗೆ ಕೊಟ್ಟ ಪಾತ್ರೆಯನ್ನು ನಾನು ಕುಡಿಯಬಾರದೋ ಎಂದು ಹೇಳಿದನು.

18:12b.JOH.018.012 ತರುವಾಯ ಜನರ ಗುಂಪೂ ನಾಯಕನೂ ಯೆಹೂದ್ಯರ ಅಧಿಕಾರಿಗಳೂ ಯೇಸುವನ್ನು ಹಿಡಿದು ಕಟ್ಟಿ.

18:13b.JOH.018.013 ಆತನನ್ನು ಮೊದಲು ಅನ್ನನ ಬಳಿಗೆ ಕರೆದು ಕೊಂಡು ಹೋದರು; ಅವನು ಆ ವರುಷದ ಮಹಾ ಯಾಜಕನಾಗಿದ್ದ ಕಾಯಫನ ಮಾವನಾಗಿದ್ದನು.

18:14b.JOH.018.014 ಜನರಿಗೋಸ್ಕರ ಒಬ್ಬ ಮನುಷ್ಯನು ಸಾಯುವದು ಹಿತವೆಂದು ಯೆಹೂದ್ಯರಿಗೆ ಆಲೋಚನೆ ಹೇಳಿಕೊಟ್ಟ ಕಾಯಫನು ಇವನೇ.

18:15b.JOH.018.015 ಸೀಮೋನ ಪೇತ್ರನು ಯೇಸುವನ್ನು ಹಿಂಬಾಲಿಸಿದನು; ಹಾಗೆಯೇ ಬೇರೊಬ್ಬ ಶಿಷ್ಯನೂ ಆತನನ್ನು ಹಿಂಬಾಲಿಸಿದನು; ಆ ಶಿಷ್ಯನು ಮಹಾಯಾಜಕನಿಗೆ ಪರಿಚಯವಿದ್ದದರಿಂದ ಯೇಸು ವಿನ ಸಂಗಡ ಮಹಾಯಾಜಕನ ಭವನದೊಳಗೆ ಹೋದನು.

18:16b.JOH.018.016 ಪೇತ್ರನು ಬಾಗಲಿನ ಬಳಿಯಲ್ಲಿ ಹೊರಗೆ ನಿಂತಿದ್ದನು; ಹೀಗಿರಲಾಗಿ ಮಹಾಯಾಜಕನಿಗೆ ಪರಿಚಯವಿದ್ದ ಆ ಮತ್ತೊಬ್ಬ ಶಿಷ್ಯನು ಹೊರಗೆ ಹೋಗಿ ಬಾಗಲು ಕಾಯುವವಳ ಸಂಗಡ ಮಾತನಾಡಿ ಪೇತ್ರನನ್ನು ಒಳಗೆ ಕರೆದುಕೊಂಡು ಬಂದನು.

18:17b.JOH.018.017 ಆಗ ಬಾಗಲು ಕಾಯುವವಳಾದ ಆ ಹುಡುಗಿಯು ಪೇತ್ರ ನಿಗೆ--ನೀನು ಸಹ ಈ ಮನುಷ್ಯನ ಶಿಷ್ಯರಲ್ಲಿ ಒಬ್ಬನಲ್ಲವೋ ಎಂದು ಕೇಳಲು ಅವನು--ನಾನಲ್ಲ ಅಂದನು.

18:18b.JOH.018.018 ಆಗ ಚಳಿಯಾಗಿದ್ದದರಿಂದ ಆಳುಗಳೂ ಅಧಿಕಾರಿಗಳೂ ಇದ್ದಲುಗಳಿಂದ ಬೆಂಕಿಮಾಡಿ ಚಳಿ ಕಾಯಿಸಿಕೊಳ್ಳುತ್ತಿದ್ದರು; ಪೇತ್ರನೂ ಅವರೊಂದಿಗೆ ನಿಂತು ಕಾಯಿಸಿಕೊಳ್ಳುತ್ತಿದ್ದನು.

18:19b.JOH.018.019 ತರುವಾಯ ಮಹಾಯಾಜಕನು ಆತನ ಶಿಷ್ಯರ ವಿಷಯವಾಗಿಯೂ ಆತನ ಬೋಧನೆಯ ವಿಷಯವಾಗಿಯೂ ಯೇಸುವನ್ನು ಕೇಳಿದನು.

18:20b.JOH.018.020 ಯೇಸು ಪ್ರತ್ಯುತ್ತರವಾಗಿ ಅವನಿಗೆ--ನಾನು ಬಹಿರಂಗವಾಗಿ ಲೋಕದ ಮುಂದೆ ಮಾತನಾಡಿದ್ದೇನೆ; ಯೆಹೂದ್ಯರು ಯಾವಾಗಲೂ ಕೂಡುವಂಥ ಸಭಾಮಂದಿರದಲ್ಲಿಯೂ ದೇವಾಲಯದಲ್ಲಿಯೂ ನಾನು ಉಪದೇಶಿಸಿದ್ದೆನು; ಗುಪ್ತವಾಗಿ ಯಾವದನ್ನೂ ನಾನು ಹೇಳಲಿಲ್ಲ.

18:21b.JOH.018.021 ನೀನು ನನ್ನನ್ನು ಯಾಕೆ ವಿಚಾರಿಸುತ್ತೀ? ನಾನು ಅವರಿಗೆ ಏನು ಹೇಳಿದ್ದೇನೆಂದು ಕೇಳಿದವರನ್ನು ವಿಚಾರಿಸು ಇಗೋ, ನಾನು ಹೇಳಿದ್ದು ಅವರಿಗೆ ತಿಳಿ ದದೆ ಅಂದನು.

18:22b.JOH.018.022 ಆತನು ಹೀಗೆ ಮಾತನಾಡಿದಾಗ ಹತ್ತಿರ ನಿಂತಿದ್ದ ಅಧಿಕಾರಿಗಳಲ್ಲಿ ಒಬ್ಬನು ತನ್ನ ಅಂಗೈ ಯಿಂದ ಯೇಸುವನ್ನು ಹೊಡೆದು--ನೀನು ಮಹಾ ಯಾಜಕನಿಗೆ ಹೀಗೆ ಉತ್ತರ ಕೊಡುತ್ತೀಯೋ ಅಂದನು.

18:23b.JOH.018.023 ಯೇಸು ಅವನಿಗೆ--ನಾನು ಕೆಟ್ಟದ್ದನ್ನು ಮಾಡಿದ್ದರೆ ಕೆಟ್ಟದ್ದರ ವಿಷಯವಾಗಿ ಸಾಕ್ಷಿಕೊಡು; ಒಳ್ಳೇದನ್ನು ಮಾತನಾಡಿದ್ದರೆ ನೀನು ನನ್ನನ್ನು ಯಾಕೆ ಹೊಡೆಯುತ್ತೀ ಅಂದನು.

18:24b.JOH.018.024 ಅನ್ನನು ಆತನನ್ನು ಕಟ್ಟಿಸಿ ಮಹಾ ಯಾಜಕನಾದ ಕಾಯಫನ ಬಳಿಗೆ ಕಳುಹಿಸಿದನು.

18:25b.JOH.018.025 ತರುವಾಯ ಸೀಮೋನ ಪೇತ್ರನು ಚಳಿಕಾಯಿಸಿ ಕೊಳ್ಳುತ್ತಾ ನಿಂತಿದ್ದನು; ಆದದರಿಂದ ಅವರು ಅವ ನಿಗೆ--ನೀನು ಸಹ ಆತನ ಶಿಷ್ಯರಲ್ಲಿ ಒಬ್ಬನಲ್ಲವೇ ಎಂದು ಅವನನ್ನು ಕೇಳಿದರು. ಅದಕ್ಕೆ ಅವನು ಅದನ್ನು ಅಲ್ಲಗಳೆದು--ನಾನಲ್ಲ ಅಂದನು.

18:26b.JOH.018.026 ಮಹಾಯಾಜ ಕನ ಆಳುಗಳಲ್ಲಿ ಪೇತ್ರನು ಕಿವಿ ಕತ್ತರಿಸಿದವನ ಬಂಧು ವಾಗಿದ್ದ ಒಬ್ಬನು--ನಾನು ನಿನ್ನನ್ನು ತೋಟದಲ್ಲಿ ಆತನ ಸಂಗಡ ನೋಡಲಿಲ್ಲವೋ ಅಂದನು.

18:27b.JOH.018.027 ಪೇತ್ರನು ತಿರಿಗಿ ಅಲ್ಲಗಳೆದನು; ಆಗ ಕೂಡಲೆ ಹುಂಜ ಕೂಗಿತು.

18:28b.JOH.018.028 ಆಮೇಲೆ ಅವರು ಯೇಸುವನ್ನು ಕಾಯಫನ ಬಳಿಯಿಂದ ನ್ಯಾಯಾಲಯಕ್ಕೆ ಸಾಗಿಸಿಕೊಂಡು ಹೋದರು. ಆಗ ಮುಂಜಾನೆಯಾಗಿತ್ತು. ತಾವು ಮೈಲಿಗೆಯಾಗಿ ಪಸ್ಕದ ಊಟ ಮಾಡುವದಕ್ಕೆ ಅಡ್ಡಿಯಾದೀತೆಂದು ಅವರು ನ್ಯಾಯಾಲಯದ ಒಳಗೆ ಹೋಗಲಿಲ್ಲ.

18:29b.JOH.018.029 ಆಗ ಪಿಲಾತನು ಹೊರಗೆ ಅವರ ಬಳಿಗೆ ಹೋಗಿ ನೀವು ಈ ಮನುಷ್ಯನ ಮೇಲೆ ಏನು ದೂರು ತರುತ್ತೀರಿ ಎಂದು ಕೇಳಿದ್ದಕ್ಕೆ

18:30b.JOH.018.030 ಅವರು ಪ್ರತ್ಯುತ್ತರವಾಗಿ ಅವನಿಗೆ--ಇವನು ದುಷ್ಕರ್ಮಿಯಲ್ಲ ದಿದ್ದರೆ ನಾವು ಇವನನ್ನು ನಿನಗೆ ಒಪ್ಪಿಸಿಕೊಡುತ್ತಿರಲಿಲ ಎಂದು ಹೇಳಿದರು.

18:31b.JOH.018.031 ಆಗ ಪಿಲಾತನು ಅವರಿಗೆ--ನೀವೇ ಆತನನ್ನು ತಕ್ಕೊಂಡು ನಿಮ್ಮ ನ್ಯಾಯಪ್ರಮಾಣದ ಪ್ರಕಾರ ಆತನಿಗೆ ನ್ಯಾಯತೀರಿಸಿರಿ ಅಂದನು. ಅದಕ್ಕೆ ಯೆಹೂದ್ಯರು ಅವನಿಗೆ--ನಾವು ಯಾವ ಮನುಷ್ಯ ನನ್ನೂ ಕೊಲ್ಲಿಸುವದಕ್ಕೆ ನಮಗೆ ನ್ಯಾಯವಲ್ಲ ಎಂದು ಹೇಳಿದರು.

18:32b.JOH.018.032 ಹೀಗೆ ಯೇಸು ತಾನು ಎಂಥಾ ಸಾವು ಸಾಯುವನೆಂದು ಸೂಚಿಸಿ ಹೇಳಿದ ಮಾತು ಈಡೇರಿತು.

18:33b.JOH.018.033 ತರುವಾಯ ಪಿಲಾತನು ತಿರಿಗಿ ನ್ಯಾಯಾಲಯ ದೊಳಗೆ ಪ್ರವೇಶಿಸಿ ಯೇಸುವನ್ನು ಕರೆದು ಆತ ನಿಗೆ--ನೀನು ಯೆಹೂದ್ಯರ ಅರಸನೋ ಎಂದು ಕೇಳಿದನು.

18:34b.JOH.018.034 ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವನಿಗೆ--ನಿನ್ನಷ್ಟಕ್ಕೆ ನೀನೇ ಇದನ್ನು ಹೇಳುತ್ತೀಯೋ? ಇಲ್ಲವೆ ಬೇರೆಯವರು ನನ್ನ ವಿಷಯದಲ್ಲಿ ನಿನಗೆ ಹೇಳಿ ದ್ದಾರೋ? ಅಂದನು.

18:35b.JOH.018.035 ಪಿಲಾತನು ಪ್ರತ್ಯುತ್ತರ ವಾಗಿ--ನಾನೇನು ಯೆಹೂದ್ಯನೋ? ನಿನ್ನ ಸ್ವಂತ ಜನಾಂಗವೂ ಪ್ರಧಾನಯಾಜಕರೂ ನಿನ್ನನ್ನು ನನಗೆ ಒಪ್ಪಿಸಿದ್ದಾರೆ; ನೀನು ಏನು ಮಾಡಿದ್ದೀ ಎಂದು ಕೇಳಿ ದನು.

18:36b.JOH.018.036 ಯೇಸು ಪ್ರತ್ಯುತ್ತರವಾಗಿ--ನನ್ನ ರಾಜ್ಯವು ಈ ಲೋಕದ್ದಲ್ಲ, ನನ್ನ ರಾಜ್ಯವು ಈ ಲೋಕದ್ದಾಗಿದ್ದರೆ ನಾನು ಯೆಹೂದ್ಯರಿಗೆ ಒಪ್ಪಿಸಲ್ಪಡದ ಹಾಗೆ ನನ್ನ ಸೇವಕರು ಕಾದಾಡುತ್ತಿದ್ದರು; ಆದರೆ ಈಗ ನನ್ನ ರಾಜ್ಯವು ಇಲ್ಲಿಯದಲ್ಲ ಅಂದನು.

18:37b.JOH.018.037 ಆದದರಿಂದ ಪಿಲಾತನು ಆತನಿಗೆ--ಹಾಗಾದರೆ ನೀನು ಅರಸನೋ ಅನ್ನಲು ಯೇಸು ಪ್ರತ್ಯುತ್ತರವಾಗಿ--ನಾನು ಅರಸ ನಾಗಿದ್ದೇನೆಂದು ನೀನೇ ಹೇಳುತ್ತೀ. ನಾನು ಸತ್ಯಕ್ಕೆ ಸಾಕ್ಷಿಕೊಡುವದಕ್ಕೋಸ್ಕರ ಹುಟ್ಟಿ ಅದಕ್ಕೋಸ್ಕರವೇ ಲೋಕಕ್ಕೆ ಬಂದೆನು; ಸತ್ಯಕ್ಕೆ ಸಂಬಂಧಿಸಿದ ಪ್ರತಿಯೊ ಬ್ಬನು ನನ್ನ ಸ್ವರವನು

18:38b.JOH.018.038 ಪಿಲಾ ತನು ಆತನಿಗೆ--ಸತ್ಯ ಅಂದರೇನು? ಅಂದನು. ಅವನು ಇದನ್ನು ಕೇಳಿದ ಮೇಲೆ ತಿರಿಗಿ ಯೆಹೂದ್ಯರ ಬಳಿಗೆ ಹೊರಗೆ ಬಂದು ಅವರಿಗೆ--ನಾನು ಆತನಲ್ಲಿ ಯಾವ ಅಪರಾಧವನ್ನೂ ಕಾಣಲಿಲ್ಲ.

18:39b.JOH.018.039 ಆದರೆ ಪಸ್ಕ ದಲ್ಲಿ ನಾನು ನಿಮಗೆ ಒಬ್ಬನನ್ನು ಬಿಟ್ಟುಕೊಡುವ ಪದ್ಧತಿ ಉಂಟಷ್ಟೆ; ಆದಕಾರಣ ನಾನು ಯೆಹೂದ್ಯರ ಅರಸನನ್ನು ಬಿಟ್ಟುಕೊಡುವದು ನಿಮಗೆ ಇಷ್ಟವೋ ಎಂದು ಕೇಳಿ ದನು.ಅದಕ್ಕೆ ಅವರೆಲ್ಲರೂ ತಿರಿಗಿ--ಈ ಮನುಷ್ಯ ನನ್ನಲ್ಲ; ಆದರೆ ಬರಬ್ಬನನ್ನು ಬಿಟ್ಟು ಕೊಡು ಎಂದು ಕೂಗಿಕೊಂಡರು. ಈ ಬರಬ್ಬನು ಕಳ್ಳನಾಗಿದ್ದನು.

18:40b.JOH.018.040 ಅದಕ್ಕೆ ಅವರೆಲ್ಲರೂ ತಿರಿಗಿ--ಈ ಮನುಷ್ಯ ನನ್ನಲ್ಲ; ಆದರೆ ಬರಬ್ಬನನ್ನು ಬಿಟ್ಟು ಕೊಡು ಎಂದು ಕೂಗಿಕೊಂಡರು. ಈ ಬರಬ್ಬನು ಕಳ್ಳನಾಗಿದ್ದನು.

19

19:1b.JOH.019.001 ಆಗ ಪಿಲಾತನು ಯೇಸುವನ್ನು ತೆಗೆದುಕೊಂಡು ಆತನನ್ನು ಕೊರಡೆ ಯಿಂದ ಹೊಡಿಸಿದನು.

19:2b.JOH.019.002 ಸೈನಿಕರು ಮುಳ್ಳಿನ ಕಿರೀಟವನ್ನು ಹೆಣೆದು ಆತನ ತಲೆಯ ಮೇಲೆ ಇಟ್ಟು ಊದಾ ಬಣ್ಣದ ನಿಲುವಂಗಿಯನ್ನು ತೊಡಿಸಿ--

19:3b.JOH.019.003 ಯೆಹೂದ್ಯರ ಅರಸನೇ, ವಂದನೆ! ಎಂದು ಹೇಳಿ ತಮ್ಮ ಕೈಗಳಿಂದ ಆತನನ್ನು ಹೊಡೆದರು.

19:4b.JOH.019.004 ಆದದರಿಂದ ಪಿಲಾತನು ತಿರಿಗಿ ಹೊರಕ್ಕೆ ಹೋಗಿ ಅವರಿಗೆ--ಇಗೋ, ನಾನು ಆತನಲ್ಲಿ ಯಾವ ಅಪರಾಧವನ್ನೂ ಕಾಣಲಿಲ್ಲವೆಂದು ನೀವು ತಿಳಿದುಕೊಳ್ಳುವ ಹಾಗೆ ಆತನನ್ನು ನಿಮ್ಮ ಮುಂದೆ ತರುತ್ತೇನೆ ಅಂದನು.

19:5b.JOH.019.005 ಆಗ ಯೇಸು ಮುಳ್ಳಿನ ಕಿರೀಟವನ್ನು ಮತ್ತು ಊದಾಬಣ್ಣದ ನಿಲುವಂಗಿಯನ್ನು ಧರಿಸಿಕೊಂಡವನಾಗಿ ಹೊರಗೆ ಬರಲು ಪಿಲಾತನು ಅವರಿಗೆ--ಇಗೋ, ಈ ಮನುಷ್ಯನು! ಅಂದನು.

19:6b.JOH.019.006 ಪ್ರಧಾನಯಾಜಕರೂ ಅಧಿಕಾರಿಗಳೂ ಆತನನ್ನು ನೋಡಿದಾಗ--ಅವನನ್ನು ಶಿಲುಬೆಗೆ ಹಾಕಿಸು, ಅವ ನನ್ನು ಶಿಲುಬೆಗೆ ಹಾಕಿಸು ಎಂದು ಕೂಗಿದರು. ಅದಕ್ಕೆ ಪಿಲಾತನು ಅವರಿಗೆ--ನೀವೇ ಆತನನ್ನು ತಕ್ಕೊಂಡು ಹೋಗಿ ಶಿಲುಬೆಗೆ ಹಾಕಿರಿ; ಯಾಕಂದರೆ ನಾನು ಆತನಲ್ಲಿ ಯಾವ ಅಪರಾಧವನ್ನೂ ಕಾಣಲಿಲ್ಲ ಅಂದನು.

19:7b.JOH.019.007 ಯೆಹೂದ್ಯರು ಪ್ರತ್ಯುತ್ತರವಾಗಿ ಅವ ನಿಗೆ--ನಮ್ಮಲ್ಲಿ ಒಂದು ನ್ಯಾಯಪ್ರಮಾಣವಿದೆ ಮತ್ತು ನಮ್ಮ ಆ ನ್ಯಾಯಪ್ರಮಾಣದ ಪ್ರಕಾರ ಅವನು ಸಾಯಲೇಬೇಕು; ಯಾಕಂದರೆ ಅವನು ತನ್ನನ್ನು ದೇವರಮಗನೆಂದು ಮಾಡಿಕೊಂಡಿದ್ದಾನೆ ಅಂದರು.

19:8b.JOH.019.008 ಪಿಲಾತನು ಈ ಮಾತನ್ನು ಕೇಳಿದಾಗ ಇನ್ನೂ ಬಹಳವಾಗಿ ಭಯಪಟ್ಟನು.

19:9b.JOH.019.009 ತಿರಿಗಿ ನ್ಯಾಯಾಲಯ ದೊಳಗೆ ಹೋಗಿ ಯೇಸುವಿಗೆ--ನೀನು ಎಲ್ಲಿಂದ ಬಂದವನು ಎಂದು ಆತನನ್ನು ಕೇಳಿದನು. ಆದರೆ ಯೇಸು ಅವನಿಗೆ ಉತ್ತರಕೊಡಲಿಲ್ಲ.

19:10b.JOH.019.010 ಆಗ ಪಿಲಾತನು ಆತನಿಗೆ--ನೀನು ನನ್ನ ಸಂಗಡ ಮಾತ ನಾಡುವದಿಲ್ಲವೋ? ನಾನು ನಿನ್ನನ್ನು ಶಿಲುಬೆಗೆ ಹಾಕಿಸುವದಕ್ಕೂ ನಿನ್ನನ್ನು ಬಿಡಿಸುವದಕ್ಕೂ ನನಗೆ ಅಧಿಕಾರವು ಉಂಟೆಂದು ನಿನಗೆ ತಿಳಿಯುವದಿಲ್ಲವೋ ಎಂದು ಕೇಳಿದನು.

19:11b.JOH.019.011 ಅದಕ್ಕೆ ಯೇಸು--ಮೇಲಿನಿಂದ ನಿನಗೆ ಕೊಡಲ್ಪಡದಿದ್ದರೆ ನನ್ನ ಮೇಲೆ ನಿನಗೆ ಯಾವ ಅಧಿಕಾರವೂ ಇರುತ್ತಿರಲಿಲ್ಲ. ಆದಕಾರಣ ನನ್ನನ್ನು ನಿನಗೆ ಒಪ್ಪಿಸಿದವನಿಗೆ ಹೆಚ್ಚಾದ ಪಾಪ ಉಂಟು ಎಂದು ಉತ್ತರ ಕೊಟ್ಟನು.

19:12b.JOH.019.012 ಅಂದಿನಿಂದ ಪಿಲಾತನು ಆತನನ್ನು ಬಿಡಿಸಲು ಪ್ರಯತ್ನಪಟ್ಟನು. ಆದರೆ ಯೆಹೂದ್ಯರು--ನೀನು ಈ ಮನುಷ್ಯನನ್ನು ಹೋಗಗೊಡಿಸಿದರೆ ಕೈಸರನಿಗೆ ಸ್ನೇಹಿತನಲ್ಲ; ತನ್ನನ್ನು ಅರಸನನ್ನಾಗಿ ಮಾಡಿಕೊಳ್ಳು ವವನು ಕೈಸರನಿಗೆ ವಿರೋಧವಾಗಿ ಮಾತನಾಡುತ್ತಾನೆ ಎಂದು ಕೂಗಿ ಹೇಳಿದರು.

19:13b.JOH.019.013 ಆದದರಿಂದ ಪಿಲಾತನು ಆ ಮಾತನ್ನು ಕೇಳಿ ಯೇಸುವನ್ನು ಹೊರಗೆ ಕರ ಕೊಂಡು ಬಂದು ಇಬ್ರಿಯ ಮಾತಿನಲ್ಲಿ ಗಬ್ಬಥಾ ಎನಿಸಿಕೊಳ್ಳುವ ಕಲ್ಲು ಹಾಸಿದ ಕಟ್ಟೆ ಎಂದು ಕರೆಯಲ್ಪಟ್ಟ ಸ್ಥಳದಲ್ಲಿ ನ್ಯಾಯಾಸನದ ಮೇಲೆ ಕೂತುಕೊಂಡನು.

19:14b.JOH.019.014 ಅದು ಪಸ್ಕಕ್ಕೆ ಸಿದ್ಧಮಾಡುವ ದಿನದಲ್ಲಿ ಸುಮಾರು ಆರನೇ ತಾಸಾಗಿತ್ತು; ಅವನು ಯೆಹೂದ್ಯರಿಗೆ--ಇಗೋ, ನಿಮ್ಮ ಅರಸನು ಅಂದನು.

19:15b.JOH.019.015 ಆದರೆ ಅವರು--ತೆಗೆದುಹಾಕು, ತೆಗೆದುಹಾಕು, ಅವನನ್ನು ಶಿಲುಬೆಗೆ ಹಾಕು ಅಂದರು. ಅದಕ್ಕೆ ಪಿಲಾತನು ಅವರಿಗೆ--ನಿಮ್ಮ ಅರಸನನ್ನು ಶಿಲುಬೆಗೆ ಹಾಕಲೋ ಅಂದಾಗ ಪ್ರಧಾನಯಾಜಕರು--ಕೈಸರನೇ ಹೊರತು ನಮಗೆ ಬೇರೆ ಅರಸನಿಲ್ಲ ಎಂದು ಉತ್ತರ ಕೊಟ್ಟರು.

19:16b.JOH.019.016 ಆಗ ಅವನು ಯೇಸುವನ್ನು ಶಿಲುಬೆಗೆ ಹಾಕಿಸುವದಕ್ಕೆ ಅವರಿಗೆ ಒಪ್ಪಿಸಲಾಗಿ ಅವರು ಆತನನ್ನು ಸಾಗಿಸಿಕೊಂಡು ಹೋದರು.

19:17b.JOH.019.017 ಆತನು ತನ್ನ ಶಿಲುಬೆಯನ್ನು ಹೊತ್ತುಕೊಂಡು ಕಪಾಲವೆಂದು ಕರೆಯಲ್ಪಟ್ಟ ಸ್ಥಳಕ್ಕೆ ಹೋದನು. ಅದು ಇಬ್ರಿಯ ಭಾಷೆಯಲ್ಲಿ ಗೊಲ್ಗೊಥಾ (ಬುರುಡೆಗಳ ಸ್ಥಳ) ಎಂದು ಕರೆಯಲ್ಪಡುತ್ತದೆ.

19:18b.JOH.019.018 ಅಲ್ಲಿ ಇಬ್ಬರು ಅಂದರೆ ಆ ಕಡೆಗೊಬ್ಬನನ್ನೂ ಈ ಕಡೆಗೊಬ್ಬನನ್ನು ಮಧ್ಯೆ ಯೇಸುವನ್ನೂ ಇರಿಸಿ ಆತನೊಂದಿಗೆ ಶಿಲುಬೆಗೆ ಹಾಕಿದರು.

19:19b.JOH.019.019 ಇದಲ್ಲದೆ ಪಿಲಾತನು ಒಂದು ಶಿರೋನಾಮವನ್ನು ಬರೆಯಿಸಿ ಅದನ್ನು ಶಿಲುಬೆಯ ಮೇಲೆ ಇರಿಸಿದನು. ಆ ಬರಹವು ಏನಂದರೆ--ಯೆಹೂದ್ಯರ ಅರಸನಾದ ನಜರೇತಿನ ಯೇಸು ಎಂಬದೇ.

19:20b.JOH.019.020 ಈ ಶಿರೋನಾಮ ವನ್ನು ಯೆಹೂದ್ಯರಲ್ಲಿ ಅನೇಕರು ಓದಿದರು. ಯೇಸು ಶಿಲುಬೆಗೆ ಹಾಕಲ್ಪಟ್ಟ ಆ ಸ್ಥಳವು ಆ ಪಟ್ಟಣಕ್ಕೆ ಸವಿಾಪವಾಗಿತ್ತು. ಇದು ಇಬ್ರಿಯ ಗ್ರೀಕ್‌ ಮತ್ತು ಲ್ಯಾಟಿನ್‌ ಭಾಷೆಗಳಲ್ಲಿ ಬರೆಯಲ್ಪಟ್ಟಿತ್ತು.

19:21b.JOH.019.021 ಹೀಗಿರಲಾಗಿ ಯೆಹೂದ್ಯರ ಪ್ರಧಾನಯಾಜಕರು ಪಿಲಾತನಿಗೆ-- ಯೆಹೂದ್ಯರ ಅರಸನೆಂದು ಬರೆಯಬೇಡ; ಆದರೆ--ನಾನೇ ಯೆಹೂದ್ಯರ ಅರಸನಾಗಿದ್ದೇನೆ ಎಂದು ಅವನು ಹೇಳಿದನು ಎಂದು ಬರೆ ಅಂದರು.

19:22b.JOH.019.022 ಪಿಲಾತನು ಪ್ರತ್ಯುತ್ತರವಾಗಿ--ನಾನು ಬರೆದದ್ದು ಬರೆದಾಯಿತು ಅಂದನು.

19:23b.JOH.019.023 ಸೈನಿಕರು ಯೇಸುವನ್ನು ಶಿಲುಬೆಗೆ ಹಾಕಿದ ಮೇಲೆ ಆತನ ವಸ್ತ್ರಗಳನ್ನು ತೆಗೆದು ಪ್ರತಿಯೊಬ್ಬ ಸೈನಿಕ ನಿಗೆ ಒಂದೊಂದು ಭಾಗದಂತೆ ನಾಲ್ಕು ಭಾಗಗಳನ್ನಾಗಿ ಮಾಡಿಕೊಂಡರು. ಆತನ ಮೇಲಂಗಿಯನ್ನು ಸಹ ತಕ್ಕೊಂಡರು; ಆದರೆ ಆ ಅಂಗಿಯು ಹೊಲಿಗೆ ಇಲ್ಲದೆ ಮೇಲಿನಿಂದ ಉದ್ದಕ್ಕೂ ನೇಯ್ದದ್ದಾಗಿತ್ತು.

19:24b.JOH.019.024 ಆದದ ರಿಂದ ಅವರು--ನಾವು ಅದನ್ನು ಹರಿಯುವದು ಬೇಡ; ಆದರೆ ಅದು ಯಾರಿಗಾಗುವದೋ ಎಂದು ಅದಕ್ಕೋಸ್ಕರ ಚೀಟು ಹಾಕಿಕೊಳ್ಳೋಣ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು; ಹೀಗೆ--ನನ್ನ ಬಟ್ಟೆಯನ್ನು ಅವರು ತಮ್ಮೊಳಗೆ ಪಾಲುಮಾಡಿ ಕೊಂಡರು; ನನ್ನ ಮೇಲಂಗಿಗೋಸ್ಕರ ಚೀಟು ಹಾಕಿ ದರ

19:25b.JOH.019.025 ಆಗ ಯೇಸುವಿನ ಶಿಲುಬೆಯ ಬಳಿಯಲ್ಲಿ ಆತನ ತಾಯಿಯೂ ಆತನ ತಾಯಿಯ ಸಹೋದರಿಯೂ ಕ್ಲೋಫನ ಹೆಂಡತಿಯಾದ ಮರಿಯಳೂ ಮಗ್ದಲದ ಮರಿಯಳೂ ನಿಂತಿದ್ದರು.

19:26b.JOH.019.026 ತನ್ನ ತಾಯಿಯು ಮತ್ತು ತಾನು ಪ್ರೀತಿಸಿದ ಶಿಷ್ಯನು ಹತ್ತಿರದಲ್ಲಿ ನಿಂತಿರುವದನ್ನು ಯೇಸು ನೋಡಿ ತನ್ನ ತಾಯಿಗೆ--ಸ್ತ್ರೀಯೇ, ಇಗೋ, ನಿನ್ನ ಮಗನು ಅಂದನು.

19:27b.JOH.019.027 ಆಮೇಲೆ ಆತನು ಆ ಶಿಷ್ಯನಿಗೆ--ಇಗೋ, ನಿನ್ನ ತಾಯಿಯು ಅಂದನು. ಆ ಗಳಿಗೆಯಿಂದ ಆ ಶಿಷ್ಯನು ಆಕೆಯನ್ನು ತನ್ನ ಸ್ವಂತ ಮನೆಯಲ್ಲಿ ಸೇರಿಸಿಕೊಂಡನು.

19:28b.JOH.019.028 ಇದಾದ ಮೇಲೆ ಯೇಸು ಆಗ ಎಲ್ಲವೂ ಪೂರೈಸಲ್ಪಟ್ಟಿತೆಂದು ತಿಳಿದು ಬರಹವು ನೆರವೇರು ವಂತೆ--ನನಗೆ ನೀರಡಿಕೆಯಾಗಿದೆ ಅಂದನು.

19:29b.JOH.019.029 ಆಗ ಅಲ್ಲಿ ಹುಳಿರಸ ತುಂಬಿದ ಪಾತ್ರೆಯಿತ್ತು; ಅವರು ಸ್ಪಂಜನ್ನು ಹುಳಿರಸದಿಂದ ತುಂಬಿಸಿ ಹಿಸ್ಸೋಪಿಗೆ ಸಿಕ್ಕಿಸಿ ಆತನ ಬಾಯಿಗೆ ಇಟ್ಟರು.

19:30b.JOH.019.030 ಯೇಸು ಆ ಹುಳಿರಸವನ್ನು ತಕ್ಕೊಂಡ ಮೇಲೆ--ತೀರಿತು ಎಂದು ಹೇಳಿ ತನ್ನ ತಲೆಯನ್ನು ಬಾಗಿಸಿ ಆತ್ಮವನ್ನು ಒಪ್ಪಿಸಿಕೊಟ್ಟನು.

19:31b.JOH.019.031 ಅದು ಸಿದ್ಧತೆಯ ದಿನವಾದದ್ದರಿಂದ ಸಬ್ಬತ್‌ ದಿನದಲ್ಲಿ ದೇಹಗಳು ಶಿಲುಬೆಯ ಮೇಲೆ ಇರಬಾರ ದೆಂದು ಅವರ ಕಾಲುಗಳನ್ನು ಮುರಿದು ಅವರನ್ನು ತೆಗೆದುಬಿಡಬೇಕೆಂದು ಯೆಹೂದ್ಯರು ಪಿಲಾತನನ್ನು ಬೇಡಿಕೊಂಡರು. (ಯಾಕಂದರೆ ಆ ಸಬ್ಬತ್‌ದಿನವು ವಿಶೇಷವಾದ ದಿನವಾಗಿತ್ತು).

19:32b.JOH.019.032 ಆಗ ಸೈನಿಕರು ಬಂದು ಆತನ ಜೊತೆಯಲ್ಲಿ ಶಿಲುಬೆಗೆ ಹಾಕಲ್ಪಟ್ಟಿದ್ದ ಮೊದಲನೆಯವನ ಕಾಲುಗಳನ್ನೂ ಮತ್ತೊಬ್ಬನ ಕಾಲುಗಳನ್ನೂ ಮುರಿದರು.

19:33b.JOH.019.033 ಆದರೆ ಅವರು ಯೇಸುವಿನ ಬಳಿಗೆ ಬಂದಾಗ ಆತನು ಆಗಲೇ ಸತ್ತಿರುವದನ್ನು ಕಂಡು ಆತನ ಕಾಲುಗಳನ್ನು ಮುರಿ ಯಲಿಲ್ಲ.

19:34b.JOH.019.034 ಆದರೆ ಸೈನಿಕರಲ್ಲಿ ಒಬ್ಬನು ಈಟಿಯಿಂದ ಆತನ ಪಕ್ಕೆಯನ್ನು ತಿವಿದನು; ಕೂಡಲೆ ರಕ್ತವೂ ನೀರೂ ಹೊರಗೆ ಬಂತು.

19:35b.JOH.019.035 ಅದನ್ನು ನೋಡಿದವನೇ ಸಾಕ್ಷಿ ಕೊಟ್ಟಿದ್ದಾನೆ. ಅವನ ಸಾಕ್ಷಿಯು ಸತ್ಯವೇ; ನೀವು ನಂಬುವಂತೆ ಅವನು ಹೇಳುವದು ಸತ್ಯವೆಂದು ಅವನು ಬಲ್ಲನು.

19:36b.JOH.019.036 ಯಾಕಂದರೆ--ಆತನ ಒಂದು ಎಲುಬಾದರೂ ಮುರಿಯಲ್ಪಡಬಾರದು ಎಂಬ ಬರಹವು ನೆರವೇರುವಂತೆ ಇವುಗಳು ಸಂಭವಿಸಿದವು.

19:37b.JOH.019.037 ತಿರಿಗಿ ಮತ್ತೊಂದು ಬರಹವು--ಅವರು ತಾವು ಇರಿದವನನ್ನು ನೋಡುವರು ಎಂದು ಹೇಳುತ್ತದೆ.

19:38b.JOH.019.038 ತರುವಾಯ ಯೆಹೂದ್ಯರ ಭಯದ ನಿಮಿತ್ತ ದಿಂದ ಗುಪ್ತವಾಗಿ ಯೇಸುವಿನ ಶಿಷ್ಯನಾಗಿದ್ದ ಅರಿಮಥಾ ಯದ ಯೋಸೇಫನು ಯೇಸುವಿನ ದೇಹವನ್ನು ತಾನು ತೆಗೆದುಕೊಂಡು ಹೋಗುವಂತೆ ಪಿಲಾತನನ್ನು ಬೇಡಿ ಕೊಂಡನು. ಆಗ ಪಿಲಾತನು ಅಪ್ಪಣೆಕೊಡಲು ಅವನು ಬಂದು ಆತನ ದೇಹವನ್ನು ತೆಗೆದುಕೊಂಡು

19:39b.JOH.019.039 ಇದಲ್ಲದೆ ಮೊದಲು ಒಂದು ರಾತ್ರಿ ಯಲ್ಲಿ ಯೇಸುವಿನ ಬಳಿಗೆ ಬಂದಿದ್ದ ನಿಕೊದೇಮನು ಸಹ ಬೆರಸಿದ ರಕ್ತಬೋಳ ಅಗರುಗಳನ್ನು ನೂರು ಸೇರು ತೂಕದಷ್ಟು ತಕ್ಕೊಂಡು ಅಲ್ಲಿಗೆ ಬಂದನು.

19:40b.JOH.019.040 ಆಗ ಅವರು ಯೇಸುವಿನ ದೇಹವನ್ನು ತಕ್ಕೊಂಡು ಯೆಹೂದ್ಯರಲ್ಲಿ ಹೂಣಿಡುವ ಪದ್ಧತಿಯ ಪ್ರಕಾರ ಅದನ್ನು ಸುಗಂಧದ್ರವ್ಯಗಳೊಂದಿಗೆ ನಾರು ಬಟ್ಟೆಗಳಲ್ಲಿ ಸುತ್ತಿದರು.

19:41b.JOH.019.041 ಆತನು ಶಿಲುಬೆಗೆ ಹಾಕಲ್ಪಟ್ಟ ಸ್ಥಳದಲ್ಲಿ ಒಂದು ತೋಟವಿತ್ತು; ಆ ತೋಟದಲ್ಲಿ ಯಾರನ್ನೂ ಇಡದೆ ಇದ್ದ ಒಂದು ಸಮಾಧಿಯು ಇತ್ತು.ಆ ದಿನವು ಯೆಹೂದ್ಯರ ಸಿದ್ಧತೆಯ ದಿನವಾದದ್ದರಿಂದ ಅವರು ಯೇಸುವನ್ನು ಸಮಾಧಿಯಲ್ಲಿ ಇಟ್ಟರು. ಯಾಕಂದರೆ ಆ ಸಮಾಧಿಯು ಸವಿಾಪದಲ್ಲಿತ್ತು.

19:42b.JOH.019.042 ಆ ದಿನವು ಯೆಹೂದ್ಯರ ಸಿದ್ಧತೆಯ ದಿನವಾದದ್ದರಿಂದ ಅವರು ಯೇಸುವನ್ನು ಸಮಾಧಿಯಲ್ಲಿ ಇಟ್ಟರು. ಯಾಕಂದರೆ ಆ ಸಮಾಧಿಯು ಸವಿಾಪದಲ್ಲಿತ್ತು.

20

20:1b.JOH.020.001 ವಾರದ ಮೊದಲನೆಯ ದಿನದಲ್ಲಿ ಮಗ್ದಲದ ಮರಿಯಳು ಬೆಳಿಗ್ಗೆ ಇನ್ನೂ ಕತ್ತಲಿರುವಾಗಲೇ ಸಮಾಧಿಯ ಬಳಿಗೆ ಬಂದು ಸಮಾಧಿಯಿಂದ ಕಲ್ಲು ತೆಗೆದುಹಾಕಲ್ಪಟ್ಟಿರುವದನ್ನು ಕಂಡಳು.

20:2b.JOH.020.002 ಆಗ ಆಕೆಯು ಸೀಮೋನ ಪೇತ್ರನ ಬಳಿಗೂ ಯೇಸು ಪ್ರೀತಿಸಿದ ಆ ಬೇರೆ ಶಿಷ್ಯನ ಬಳಿಗೂ ಓಡಿಬಂದು ಅವರಿಗೆ--ಕರ್ತನನ್ನು ಅವರು ಸಮಾಧಿ ಯೊಳಗಿಂದ ತೆಗೆದುಕೊಂಡು ಹೋಗಿದ್ದಾರೆ; ಅವರು ಆತನನ್ನು ಎಲ್ಲಿ ಇಟ್ಟಿದ್ದಾರೋ ನಮಗೆ ಗೊತ್ತಿಲ್ಲ ಅಂದಳು.

20:3b.JOH.020.003 ಆದದರಿಂದ ಪೇತ್ರನೂ ಮತ್ತೊಬ್ಬ ಶಿಷ್ಯನೂ ಹೊರಟು ಸಮಾಧಿಗೆ ಬಂದರು.

20:4b.JOH.020.004 ಹೀಗೆ ಅವರಿಬ್ಬರೂ ಜೊತೆಯಾಗಿ ಓಡಿದರು; ಆ ಬೇರೆ ಶಿಷ್ಯನು ಪೇತ್ರನಿಗಿಂತ ಮುಂದೆ ಓಡಿ ಮೊದಲು ಸಮಾಧಿಗೆ ಬಂದನು.

20:5b.JOH.020.005 ಅವನು ಬೊಗ್ಗಿಕೊಂಡು ಒಳಗೆ ನೋಡಿದಾಗ ನಾರುಬಟ್ಟೆಗಳು ಬಿದ್ದಿರುವದನ್ನು ಕಂಡನು. ಆದಾಗ್ಯೂ ಅವನು ಒಳಗೆ ಹೋಗಲಿಲ್ಲ.

20:6b.JOH.020.006 ಆಮೇಲೆ ಸೀಮೋನ ಪೇತ್ರನು ಅವನ ಹಿಂದೆ ಬಂದು ಸಮಾಧಿಯೊಳಕ್ಕೆ ಹೋಗಿ ನಾರುಬಟ್ಟೆಗಳು ಬಿದ್ದಿರುವದನ್ನೂ

20:7b.JOH.020.007 ಆತನ ತಲೆಯ ಮೇಲಿದ್ದ ಕೈವಸ್ತ್ರವು ನಾರುಬಟ್ಟೆಗಳೊಂದಿಗೆ ಇರದೆ ಸುತ್ತಿ ಒಂದು ಕಡೆಯಲ್ಲಿ ಬೇರೆ ಇರುವದನ್ನೂ ಕಂಡನು.

20:8b.JOH.020.008 ಆಗ ಮೊದಲು ಸಮಾಧಿಗೆ ಬಂದ ಆ ಬೇರೆ ಶಿಷ್ಯನು ಸಹ ಒಳಗೆ ಹೋಗಿ ನೋಡಿ ನಂಬಿದನು.

20:9b.JOH.020.009 ಯಾಕಂದರೆ ಆತನು ಸತ್ತವರೊಳಗಿಂದ ತಿರಿಗಿ ಎದ್ದೇಳುವದು ಅಗತ್ಯವೆಂಬ ಬರಹವು ಅವರಿಗೆ ಇನ್ನೂ ತಿಳಿದಿರಲಿಲ್ಲ.

20:10b.JOH.020.010 ತರು ವಾಯ ಆ ಶಿಷ್ಯರು ತಮ್ಮ ಸ್ವಂತ ಮನೆಗೆ ಹೊರಟು ಹೋದರು.

20:11b.JOH.020.011 ಆದರೆ ಮರಿಯಳು ಹೊರಗೆ ಸಮಾಧಿಯ ಬಳಿಯಲ್ಲಿ ಅಳುತ್ತಾ ನಿಂತಿದ್ದಳು; ಆಕೆಯು ಅಳುತ್ತಾ ಸಮಾಧಿಯೊಳಗೆ ಬೊಗ್ಗಿ ನೋಡಿದಾಗ

20:12b.JOH.020.012 ಯೇಸು ವಿನ ದೇಹವನ್ನು ಇಟ್ಟಿದ್ದ ಸ್ಥಳದಲ್ಲಿ ಬಿಳೀವಸ್ತ್ರಗಳನ್ನು ಧರಿಸಿದ್ದ ಇಬ್ಬರು ದೂತರು, ಒಬ್ಬನು ತಲೆಯ ಕಡೆಗೂ ಮತ್ತೊಬ್ಬನು ಪಾದಗಳ ಕಡೆಗೂ, ಕೂತಿರುವದನ್ನು ಕಂಡಳು.

20:13b.JOH.020.013 ಅವರು ಆಕೆಗೆ--ಸ್ತ್ರೀಯೇ, ನೀನು ಯಾಕೆ ಅಳುತ್ತೀ ಎಂದು ಕೇಳಲು ಆಕೆಯು ಅವರಿಗೆ--ನನ್ನ ಕರ್ತನನ್ನು ಅವರು ತೆಗೆದುಕೊಂಡು ಹೋಗಿದ್ದಾರೆ; ಆತನನ್ನು ಅವರು ಎಲ್ಲೀ ಇಟ್ಟಿದ್ದಾರೋ ನನಗೆ ಗೊತ್ತಿಲ್ಲ ಅಂದಳು.

20:14b.JOH.020.014 ಆಕೆಯು ಹೀಗೆ ಹೇಳಿದ ಮೇಲೆ ಹಿಂದಕ್ಕೆ ತಿರುಗಿ ಯೇಸು ನಿಂತಿರುವದನ್ನು ಕಂಡಳು; ಆದರೆ ಆತನು ಯೇಸು ಎಂದು ಆಕೆಗೆ ತಿಳಿಯಲಿಲ್ಲ.

20:15b.JOH.020.015 ಯೇಸು ಆಕೆಗೆ--ಸ್ತ್ರೀಯೇ, ನೀನು ಯಾಕೆ ಅಳುತ್ತೀ? ಯಾರನ್ನು ಹುಡುಕುತ್ತೀ ಅನ್ನಲು ಆಕೆಯು ಆತನು ತೋಟಗಾರನೆಂದು ನೆನಸಿ ಆತನಿಗೆ--ಅಯ್ಯಾ, ನೀನು ಆತನನ್ನು ಇಲ್ಲಿಂದ ತೆಗೆದುಕೊಂಡು ಹೋಗಿದ್ದರೆ ಆತನನ್ನು ಎಲ್ಲಿ ಇಟ್ಟಿದ್ದೀ ಎಂದು ನನಗೆ ಹೇಳು; ನಾನು ಆತನನ್ನು ತೆಗೆದುಕೊಂಡು ಹೋಗುತ್ತೇ

20:16b.JOH.020.016 ಯೇಸು ಆಕೆಗೆ--ಮರಿಯಳೇ ಅನ್ನಲು ಆಕೆಯು ತಿರುಗಿಕೊಂಡು ಆತನಿಗೆ--ರಬ್ಬೂನಿ ಅಂದಳು,ಅಂದರೆ ಬೋಧಕನೇ ಎಂಬದು.

20:17b.JOH.020.017 ಯೇಸು ಆಕೆಗೆ--ನನ್ನನ್ನು ಮುಟ್ಟಬೇಡ; ಯಾಕಂದರೆ ನಾನು ಇನ್ನೂ ನನ್ನ ತಂದೆಯ ಬಳಿಗೆ ಏರಿಹೋಗಲಿಲ್ಲ; ಆದರೆ ನೀನು ನನ್ನ ಸಹೋದರರ ಬಳಿಗೆ ಹೋಗಿ ಅವ ರಿಗೆ--ನನ್ನ ತಂದೆಯೂ ನಿಮ್ಮ ತಂದೆಯೂ ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನ ಬಳಿಗೆ ನಾನು ಏರಿಹೋಗುತ್ತೇನೆ ಎಂದು ಹೇಳು

20:18b.JOH.020.018 ಆಗ ಮಗ್ದಲದ ಮರಿಯಳು ಬಂದು ತಾನು ಕರ್ತನನ್ನು ನೋಡಿದಳೆಂದೂ ಆತನು ಈ ಸಂಗತಿಗಳನ್ನು ತನಗೆ ಹೇಳಿದನೆಂದೂ ಶಿಷ್ಯರಿಗೆ ಹೇಳಿದಳು.

20:19b.JOH.020.019 ಅದೇ ವಾರದ ಮೊದಲನೆಯ ದಿನದ ಸಾಯಂಕಾಲದಲ್ಲಿ ಯೆಹೂದ್ಯರ ಭಯದಿಂದ ಶಿಷ್ಯರು ಕೂಡಿ ಬಂದಿದ್ದ ಮನೆಯ ಬಾಗಲುಗಳು ಮುಚ್ಚಿದ್ದವು. ಆಗ ಯೇಸು ಬಂದು ಅವರ ಮಧ್ಯೆ ನಿಂತು-- ನಿಮಗೆ ಸಮಾಧಾನವಾಗಲಿ ಎಂದು ಅವರಿಗೆ ಹೇಳಿ ದನು.

20:20b.JOH.020.020 ಆತನು ಹೀಗೆ ಹೇಳಿದ ಮೇಲೆ ತನ್ನ ಕೈಗಳನ್ನೂ ಪಕ್ಕೆಯನ್ನೂ ಅವರಿಗೆ ತೋರಿಸಿದನು; ಆಗ ಶಿಷ್ಯರು ಕರ್ತನನ್ನು ನೋಡಿ ಸಂತೋಷಪಟ್ಟರು.

20:21b.JOH.020.021 ಯೇಸು ತಿರಿಗಿ ಅವರಿಗೆ--ನಿಮಗೆ ಸಮಾಧಾನ ವಾಗಲಿ; ನನ್ನ ತಂದೆಯು ನನ್ನನ್ನು ಕಳುಹಿಸಿದ ಮೇರೆಗೆ ನಾನೂ ನಿಮ್ಮನ್ನು ಕಳುಹಿಸುತ್ತೇನೆ ಅಂದನು.

20:22b.JOH.020.022 ಆತನು ಇದನ್ನು ಹೇಳಿ ಅವರ ಮೇಲೆ ಊದಿ ಅವರಿಗೆ--ನೀವು ಪರಿಶುದ್ಧಾತ್ಮನನ್ನು ಹೊಂದಿಕೊಳ್ಳಿರಿ;

20:23b.JOH.020.023 ನೀವು ಯಾರ ಪಾಪಗಳನ್ನು ಕ್ಷಮಿಸುತ್ತೀರೋ ಅವು ಅವರಿಗೆ ಕ್ಷಮಿಸಲ್ಪಡುವವು; ಯಾರ ಪಾಪಗಳನ್ನು ನೀವು ಉಳಿ ಸುತ್ತೀರೋ ಅವು ಅವರಿಗೆ ಉಳಿಯುತ್ತವೆ ಎಂದು ಹೇಳಿದನು.

20:24b.JOH.020.024 ಆದರೆ ಯೇಸು ಬಂದಾಗ ಹನ್ನೆರಡು ಮಂದಿ ಯಲ್ಲಿ ಒಬ್ಬನಾದ ದಿದುಮನೆಂದು ಕರೆಯಲ್ಪಟ್ಟ ತೋಮನು ಅವರ ಸಂಗಡ ಇರಲಿಲ್ಲ.

20:25b.JOH.020.025 ಆದದರಿಂದ ಬೇರೆ ಶಿಷ್ಯರು ಅವನಿಗೆ--ನಾವು ಕರ್ತನನ್ನು ನೋಡಿ ದ್ದೇವೆ ಎಂದು ಹೇಳಿದರು. ಆದರೆ ಅವನು ಅವ ರಿಗೆ--ನಾನು ಆತನ ಕೈಗಳಲ್ಲಿ ಮೊಳೆಗಳ ಗುರುತನ್ನು ನೋಡಿ ಆ ಮೊಳೆಗಳ ಗುರುತಿನಲ್ಲಿ ನನ್ನ ಬೆರಳನ್ನು ಇಟ್ಟು ಆತನ ಪಕ್ಕೆಯಲ್ಲಿ ನನ್ನ ಕೈಯನ್ನು ಹಾಕದ ಹೊರತು ನಾನು ನ

20:26b.JOH.020.026 ತಿರಿಗಿ ಎಂಟು ದಿವಸಗಳಾದ ಮೇಲೆ ಆತನ ಶಿಷ್ಯರು ಒಳಗಿದ್ದಾಗ ತೋಮನೂ ಅವರ ಸಂಗಡ ಇದ್ದನು. ಆಗ ಬಾಗಲುಗಳು ಮುಚ್ಚಿರಲಾಗಿ ಯೇಸು ಬಂದು ಮಧ್ಯದಲ್ಲಿ ನಿಂತು--ನಿಮಗೆ ಸಮಾಧಾನ ವಾಗಲಿ ಅಂದನು.

20:27b.JOH.020.027 ಆಮೇಲೆ ಆತನು ತೋಮನಿಗೆ--ನಿನ್ನ ಬೆರಳನ್ನು ಈ ಕಡೆ ಚಾಚಿ ನನ್ನ ಕೈಗಳನ್ನು ನೋಡು; ನಿನ್ನ ಕೈಯನ್ನು ಈ ಕಡೆ ಚಾಚಿ ನನ್ನ ಪಕ್ಕೆಯಲ್ಲಿ ಹಾಕು; ನಂಬಿಕೆಯಿಲ್ಲದವನಾಗಿರದೆ ನಂಬುವವ ನಾಗಿರು ಅಂದನು.

20:28b.JOH.020.028 ತೋಮನು ಪ್ರತ್ಯುತ್ತರವಾಗಿ ಆತನಿಗೆ--ನನ್ನ ಕರ್ತನೇ, ನನ್ನ ದೇವರೇ ಅಂದನು.

20:29b.JOH.020.029 ಯೇಸು ಅವನಿಗೆ--ತೋಮನೇ, ನೀನು ನನ್ನನ್ನು ನೋಡಿದ್ದರಿಂದ ನಂಬಿದ್ದೀ; ನೋಡದೆ ನಂಬಿದವರು ಧನ್ಯರು ಅಂದನು.

20:30b.JOH.020.030 ಯೇಸು ಇನ್ನು ಬೇರೆ ಎಷ್ಟೋ ಸೂಚಕ ಕಾರ್ಯಗಳನ್ನು ತನ್ನ ಶಿಷ್ಯರ ಮುಂದೆ ಮಾಡಿದ್ದು ನಿಜವೇ. ಆದರೂ ಅವುಗಳನ್ನು ಈ ಪುಸ್ತಕದಲ್ಲಿ ಬರೆದಿರುವದಿಲ್ಲ.ಆದರೆ ಯೇಸುವೇ ದೇವಕುಮಾರ ನಾದ ಕ್ರಿಸ್ತನೆಂದು ನೀವು ನಂಬುವಂತೆಯೂ ನಂಬಿ ಆತನ ಹೆಸರಿನ ಮೂಲಕ ಜೀವವನ್ನು ಪಡೆದುಕೊಳ್ಳುವಂತೆಯೂ ಇವುಗಳು ಬರೆಯಲ್ಪಟ್ಟಿವೆ.

20:31b.JOH.020.031 ಆದರೆ ಯೇಸುವೇ ದೇವಕುಮಾರ ನಾದ ಕ್ರಿಸ್ತನೆಂದು ನೀವು ನಂಬುವಂತೆಯೂ ನಂಬಿ ಆತನ ಹೆಸರಿನ ಮೂಲಕ ಜೀವವನ್ನು ಪಡೆದುಕೊಳ್ಳುವಂತೆಯೂ ಇವುಗಳು ಬರೆಯಲ್ಪಟ್ಟಿವೆ.

21

21:1b.JOH.021.001 ಇವುಗಳಾದ ಮೇಲೆ ಯೇಸು ತಿಬೇರಿಯ ಸಮುದ್ರದ ಬಳಿಯಲ್ಲಿ ಶಿಷ್ಯರಿಗೆ ತನ್ನನ್ನು ತಿರಿಗಿ ತೋರಿಸಿಕೊಂಡನು. ಆತನು ತನ್ನನ್ನು ತೋರಿಸಿ ಕೊಂಡ ರೀತಿ ಹೇಗಂದರೆ--

21:2b.JOH.021.002 ಸೀಮೋನ ಪೇತ್ರನೂ ದಿದುಮನೆಂಬ ತೋಮನೂ ಗಲಿಲಾಯದ ಕಾನಾ ಊರಿನ ನತಾನಯೇಲನೂ ಜೆಬೆದಾಯನ ಮಕ್ಕಳೂ ಆತನ ಶಿಷ್ಯರಲ್ಲಿ ಇನ್ನಿಬ್ಬರೂ ಒಟ್ಟಾಗಿ ಕೂಡಿದ್ದರು.

21:3b.JOH.021.003 ಆಗ ಸೀಮೋನ ಪೇತ್ರನು ಅವರಿಗೆ--ನಾನು ವಿಾನು ಹಿಡಿಯುವದಕ್ಕೆ ಹೋಗುತ್ತೇನೆ ಅನ್ನಲು ಅವರು ಅವನಿಗೆ--ನಾವು ಸಹ ನಿನ್ನ ಸಂಗಡ ಬರುತ್ತೇವೆ ಅಂದರು. ಅವರು ಹೊರಟುಹೋಗಿ ಕೂಡಲೆ ದೋಣಿಯನ್ನು ಹತ್ತಿದರು. ಆದರೆ ಆ ರಾತ್ರಿಯಲ್ಲಿ ಏನೂ ಹಿಡಿಯಲಿಲ್ಲ.

21:4b.JOH.021.004 ಬೆಳಗಾದಾಗ ಯೇಸು ದಡದಲ್ಲಿ ನಿಂತಿದ್ದನು. ಆದರೆ ಆತನು ಯೇಸು ಎಂದು ಶಿಷ್ಯರು ತಿಳಿಯಲಿಲ್ಲ.

21:5b.JOH.021.005 ಆಗ ಯೇಸು ಅವರಿಗೆ--ಮಕ್ಕಳಿರಾ, ನಿಮಗೆ ಊಟಕ್ಕೆ ಏನಾದರೂ ಇದೆಯೋ ಅನ್ನಲು ಅವರು ಆತನಿಗೆ--ಇಲ್ಲವೆಂದು ಉತ್ತರ ಕೊಟ್ಟರು.

21:6b.JOH.021.006 ಆತನು ಅವರಿಗೆ--ದೋಣಿಯ ಬಲಗಡೆಯಲ್ಲಿ ಬಲೆಯನ್ನು ಬೀಸಿರಿ; ಆಗ ಸಿಕ್ಕುವದು ಅಂದನು. ಅವರು ಬೀಸಿದಾಗ ವಿಾನುಗಳ ರಾಶಿಯ ದೆಸೆಯಿಂದ ಅದನ್ನು ಎಳೆಯಲಾರದೆ ಇದ್ದರು.

21:7b.JOH.021.007 ಆದದರಿಂದ ಯೇಸು ಪ್ರೀತಿಸಿದ ಆ ಶಿಷ್ಯನು ಪೇತ್ರನಿಗೆ--ಆತನು ಕರ್ತನು ಅಂದನು. ಆತನು ಕರ್ತನೆಂದು ಸೀಮೋನ ಪೇತ್ರನು ಕೇಳಿ ತನ್ನ ಬೆಸ್ತರ ಅಂಗಿಯನ್ನು ಸುತ್ತಿಕೊಂಡು ಸಮುದ್ರದೊಳಗೆ ದುಮುಕಿ ದನು (ಯಾಕಂದರೆ ಅವನು ಬೆತ್ತಲೆಯಾಗಿದ್ದನು).

21:8b.JOH.021.008 ಉಳಿದ ಶಿಷ್ಯರು ವಿಾನುಗಳಿದ್ದ ಬಲೆಯನ್ನು ಎಳೆಯುತ್ತಾ ಒಂದು ಚಿಕ್ಕ ದೋಣಿಯಲ್ಲಿ ಬಂದರು; (ಯಾಕಂದರೆ ಅವರು ದಡದಿಂದ ದೂರವಿರಲಿಲ್ಲ; ಆದರೆ ಅದು ಇನ್ನೂರು ಮೊಳ ದಷ್ಟಿತ್ತು).

21:9b.JOH.021.009 ಅವರು ದಡಕ್ಕೆ ಬಂದ ಕೂಡಲೆ ಕೆಂಡಗಳನ್ನೂ ಅವುಗಳ ಮೇಲೆ ಇಟ್ಟಿದ್ದ ವಿಾನುಗಳನ್ನೂ ರೊಟ್ಟಿಯನ್ನೂ ಕಂಡರು.

21:10b.JOH.021.010 ಯೇಸು ಅವರಿಗೆ--ನೀವು ಈಗ ಹಿಡಿದ ವಿಾನುಗಳಲ್ಲಿ ಕೆಲ ವನ್ನು ತನ್ನಿರಿ ಅಂದನು.

21:11b.JOH.021.011 ಸೀಮೋನ ಪೇತ್ರನು ಹೋಗಿ ನೂರೈವತ್ತು ಮೂರು ದೊಡ್ಡ ವಿಾನುಗಳಿಂದ ತುಂಬಿದ ಬಲೆಯನ್ನು ದಡಕ್ಕೆ ಎಳೆದನು. ಅಷ್ಟು ವಿಾನು ಗಳಿದ್ದರೂ ಬಲೆಯು ಹರಿದಿರಲಿಲ್ಲ.

21:12b.JOH.021.012 ಯೇಸು ಅವ ರಿಗೆ--ಬಂದು ಊಟಮಾಡಿರಿ ಅಂದನು; ಆತನು ಕರ್ತನೆಂದು ತಿಳಿದಿದ್ದರಿಂದ--ನೀನು ಯಾರು ಎಂದು ಆತನನ್ನು ಕೇಳಲು ಶಿಷ್ಯರಲ್ಲಿ ಯಾರಿಗೂ ಧೈರ್ಯ ವಿರಲಿಲ್ಲ.

21:13b.JOH.021.013 ಆಗ ಯೇಸು ಬಂದು ರೊಟ್ಟಿಯನ್ನು ತೆಗೆದುಕೊಂಡು ಕೊಟ್ಟನು; ಹಾಗೆಯೇ ವಿಾನನ್ನೂ ಕೊಟ್ಟನು.

21:14b.JOH.021.014 ಯೇಸು ಸತ್ತವರೊಳಗಿಂದ ಎದ್ದ ಮೇಲೆ ತನ್ನ ಶಿಷ್ಯರಿಗೆ ತನ್ನನ್ನು ತೋರಿಸಿಕೊಂಡದ್ದು ಇದು ಮೂರನೆಯ ಸಾರಿ.

21:15b.JOH.021.015 ಅವರು ಊಟಮಾಡಿದ ಮೇಲೆ ಯೇಸು ಸೀಮೋನ ಪೇತ್ರನಿಗೆ--ಯೋನನ ಮಗನಾದ ಸೀಮೋನನೇ, ನೀನು ಇವುಗಳಿಗಿಂತ ನನ್ನನ್ನು ಹೆಚ್ಚಾಗಿ ಪ್ರೀತಿಸುತ್ತೀಯೋ ಎಂದು ಕೇಳಲು ಅವನು ಆತ ನಿಗೆ--ಹೌದು, ಕರ್ತನೇ, ನಾನು ನಿನ್ನನ್ನು ಪ್ರೀತಿಸುತ್ತೇ ನೆಂಬದನ್ನು ನೀನೇ ಬಲ್ಲೆ ಅಂದನು. ಅದಕ್ಕೆ ಆತನು ಅವನಿಗೆ

21:16b.JOH.021.016 ಆತನು ತಿರಿಗಿ ಎರಡನೆಯ ಸಾರಿ ಅವನಿಗೆ--ಯೋನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯೋ ಎಂದು ಕೇಳಲು ಅವನು ಆತನಿಗೆ--ಹೌದು, ಕರ್ತನೇ, ನಾನು ನಿನ್ನನ್ನು ಪ್ರೀತಿಸುತ್ತೇನೆಂಬದನ್ನು ನೀನೇ ಬಲ್ಲೆ ಅಂದನು. ಅದಕ್ಕೆ ಆತನು ಅವನಿಗೆ--ನನ್ನ ಕುರಿಗಳನ್ನು ಮೇಯಿಸು ಎಂದು

21:17b.JOH.021.017 ಆತನು ಮೂರನೆಯ ಸಾರಿ ಅವನಿಗೆ--ಯೋನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯೋ ಎಂದು ಕೇಳಿದನು. ಆತನು ಮೂರನೆಯ ಸಾರಿ--ನೀನು ನನ್ನನ್ನು ಪ್ರೀತಿಸುತ್ತೀಯೋ ಎಂದು ತನ್ನನ್ನು ಕೇಳಿದ್ದಕ್ಕೆ ಪೇತ್ರನು ದುಃಖಪಟ್ಟು--ಕರ್ತನೇ, ನಿನಗೆ ಎಲ್ಲವುಗಳು ತಿಳಿದವೆ; ನಾನು ನಿನ

21:18b.JOH.021.018 ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ--ನೀನು ಯೌವನಸ್ಥನಾಗಿದ್ದಾಗ ನೀನೇ ನಿನ್ನ ನಡುಕಟ್ಟಿಕೊಂಡು ಇಷ್ಟಬಂದ ಕಡೆಗೆ ತಿರುಗಾ ಡುತ್ತಿದ್ದಿ; ಆದರೆ ನೀನು ಮುದುಕನಾದಾಗ ನಿನ್ನ ಕೈಗಳನ್ನು ಚಾಚುವಿ, ಆಗ ಮತ್ತೊಬ್ಬನು ನಿನ್ನ ನಡುವನ್ನು ಕಟ್ಟಿ ನಿನಗೆ ಇಷ್ಟವಿಲ್ಲದ ಕಡೆಗೆ ನಿನ್ನನ್ನು ತೆಗೆದುಕೊಂ

21:19b.JOH.021.019 ಅವನು ಎಂಥ ಮರಣ ದಿಂದ ದೇವರನ್ನು ಮಹಿಮೆಪಡಿಸಬೇಕಾಗಿದೆ ಎಂದು ಸೂಚಿಸಿ ಆತನು ಇದನ್ನು ಹೇಳಿದನು. ಆತನು ಇದನ್ನು ಹೇಳಿದ ಮೇಲೆ ಅವನಿಗೆ--ನನ್ನನ್ನು ಹಿಂಬಾಲಿಸು ಅಂದನು.

21:20b.JOH.021.020 ಊಟದಲ್ಲಿ ಆತನ ಎದೆಗೆ ಒರಗಿಕೊಂಡು-- ಕರ್ತನೇ, ನಿನ್ನನ್ನು ಹಿಡುಕೊಡುವವನು ಯಾರು ಎಂದು ಕೇಳಿದಂಥ ಮತ್ತು ಯೇಸು ಪ್ರೀತಿಸಿದಂಥ ಶಿಷ್ಯನು ಹಿಂದೆ ಬರುವದನ್ನು ಪೇತ್ರನು ಹಿಂತಿರುಗಿ ನೋಡಿ

21:21b.JOH.021.021 ಯೇಸುವಿಗೆ--ಕರ್ತನೇ, ಈ ಮನುಷ್ಯನ ವಿಷಯವೇನು ಅಂದನು.

21:22b.JOH.021.022 22ಯೇಸು ಅವನಿಗೆ--ನಾನು ಬರುವ ತನಕ ಅವನು ಇರಬೇಕೆಂದು ನನಗೆ ಮನಸ್ಸಿದ್ದರೆ ಅದು ನಿನಗೇನು? ನೀನು ನನ್ನನ್ನು ಹಿಂಬಾ ಲಿಸು ಅಂದನು.

21:23b.JOH.021.023 ಆಗ ಆ ಶಿಷ್ಯನು ಸಾಯುವದಿ ಲ್ಲವೆಂಬ ಮಾತು ಸಹೋದರರಲ್ಲಿ ಹರಡಿತು. ಆದರೂ--ಅವನು ಸಾಯುವದಿಲ್ಲವೆಂದು ಯೇಸು ಅವನಿಗೆ ಹೇಳಲಿಲ್ಲ; ಆದರೆ--ನಾನು ಬರುವ ತನಕ ಅವನು ಇರುವದು ನನಗೆ ಮನಸ್ಸಿದ್ದರೆ ಅದು ನಿನಗೇನು ಎಂತಲೇ ಹೇಳಿದನು.

21:24b.JOH.021.024 ಇವುಗಳ ವಿಷಯವಾಗಿ ಸಾಕ್ಷಿ ಹೇಳಿ ಇವುಗಳನ್ನು ಬರೆದ ಶಿಷ್ಯನು ಇವನೇ; ಇವನ ಸಾಕ್ಷಿಯು ಸತ್ಯವೆಂದು ನಾವು ಬಲ್ಲೆವು.ಇದಲ್ಲದೆ ಯೇಸು ಮಾಡಿದವುಗಳು ಬಹಳ ಉಂಟು; ಅವುಗಳನ್ನು ಒಂದೊಂದಾಗಿ ಬರೆಯುವ ದಾದರೆ ಬರೆಯಬೇಕಾದ ಪುಸ್ತಕಗಳನ್ನು ಲೋಕವೇ ಹಿಡಿಸಲಾರದೆ ಹೋದೀತೆಂದು ನಾನು ನೆನಸುತ್ತೇನೆ. ಆಮೆನ್‌.

21:25b.JOH.021.025 ಇದಲ್ಲದೆ ಯೇಸು ಮಾಡಿದವುಗಳು ಬಹಳ ಉಂಟು; ಅವುಗಳನ್ನು ಒಂದೊಂದಾಗಿ ಬರೆಯುವ ದಾದರೆ ಬರೆಯಬೇಕಾದ ಪುಸ್ತಕಗಳನ್ನು ಲೋಕವೇ ಹಿಡಿಸಲಾರದೆ ಹೋದೀತೆಂದು ನಾನು ನೆನಸುತ್ತೇನೆ. ಆಮೆನ್‌.


Holder of rights
Multilingual Bible Corpus

Citation Suggestion for this Object
TextGrid Repository (2025). Kannada Collection. John (Kannada). John (Kannada). Multilingual Parallel Bible Corpus. Multilingual Bible Corpus. https://hdl.handle.net/21.11113/0000-0016-A1EF-5